Tag: ಚಿತ್ರಮಂದಿರಗಳು

  • ಅಪ್ಪು ಹುಟ್ಟು ಹಬ್ಬಕ್ಕೆ ನೇತ್ರದಾನದ ವಾಗ್ದಾನ

    ಅಪ್ಪು ಹುಟ್ಟು ಹಬ್ಬಕ್ಕೆ ನೇತ್ರದಾನದ ವಾಗ್ದಾನ

    ಚಿಕ್ಕಬಳ್ಳಾಪುರ: ನಟ ಪುನೀತ್ ರಾಜ್ ಕುಮಾರ್ ಅಭಿನಯದ ಜೇಮ್ಸ್ ಚಿತ್ರ ಬಿಡುಗಡೆಗೆ ಕ್ಷಣಗಣನೆ ಶುರುವಾಗಿದೆ. ನಾಳೆ ಪುನೀತ್ ರಾಜ್ ಕುಮಾರ್ ಅವರ ಹುಟ್ಟು ಹಬ್ಬವೂ ಇರುವುದರಿಂದ ಅಪ್ಪು ಅಗಲಿಕೆಯ ನೋವಿನ ನಡುವೆಯೂ ಅಭಿಮಾನಿಗಳಿಗೆ ಡಬಲ್ ಖುಷಿ ತಂದಿದೆ. ಹಾಗಾಗಿ ರಾಜ್ಯಾದ್ಯಂತ ನೆಚ್ಚಿನ ನಟನ ಹುಟ್ಟು ಹಬ್ಬವನ್ನು ನಾನಾ ರೀತಿಯಲ್ಲಿ ಆಚರಿಸಲು ಅಭಿಮಾನಿಗಳು ಸಿದ್ಧರಾಗಿದ್ದಾರೆ. ಜೇಮ್ಸ್ ಸಿನಿಮಾ ನೋಡುವುದರ ಜತೆಗೆ ಸಮಾಜಮುಖಿ ಕೆಲಸಗಳಿಗೂ ನಾಳೆ ಪುನೀತ್ ಅಭಿಮಾನಿಗಳು ಮುಂದಾಗುತ್ತಿದ್ದಾರೆ. ಇದನ್ನೂ ಓದಿ: ಫ್ಯಾನ್ಸ್ ಒತ್ತಾಯದ ಮೇರೆಗೆ ವಿಷ್ಣುದಾದ ಇತಿಹಾಸ ಬರೆದ ಮೂವೀ ರೀ-ರಿಲೀಸ್ 

    ಈ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರ ನಗರದ ವಾಣಿ ಹಾಗೂ ಬಾಲಾಜಿ ಚಿತ್ರಮಂದಿರಗಳಲ್ಲಿ ಅಭಿಮಾನಿಗಳು ಸಿನಿಮಾ ವೀಕ್ಷಿಸುವುದರ ಜತೆ ಜತೆಗೆ ಅನ್ನದಾನ ಹಾಗೂ ನೇತ್ರದಾನ ನೋಂದಣಿಗೆ ಅವಕಾಶ ಕಲ್ಪಿಸಿದ್ದಾರೆ. ಪುನೀತ್ ಅವರ ನಿಧನಾ ನಂತರ ದಾಖಲೆಯ ರೀತಿಯಲ್ಲಿ ಅಭಿಮಾನಿಗಳು ನೇತ್ರದಾನ ಮಾಡಿದ್ದಾರೆ. ಹೀಗಾಗಿ ಅವರ ಹುಟ್ಟು ಹಬ್ಬದ ಸಂದರ್ಭದಲ್ಲಿ ಇಂತಹ ಪುಣ್ಯದ ಕೆಲಸಕ್ಕೆ ಅಪ್ಪು ಅಭಿಮಾನಿಗಳಾಗಿ ನಾವೂ ಕೈ ಜೋಡಿಸುತ್ತಿದ್ದೇವೆ ಎಂದಿದ್ದಾರೆ ಚಿಕ್ಕ ಬಳ್ಳಾಪುರದ ಪುನೀತ್ ಅಭಿಮಾನಿಗಳು. ಇದನ್ನೂ ಓದಿ: ಭದ್ರತಾ ಲೋಪ – ದೆಹಲಿ ಕ್ಯಾಪಿಟಲ್ಸ್ ತಂಡದ ಬಸ್ ಮೇಲೆ ದಾಳಿ

    ಜೇಮ್ಸ್ ಚಿತ್ರ ಬಿಡುಗಡೆ ಆಗುತ್ತಿರುವ ನಗರದ ವಾಣಿ ಹಾಗೂ ಬಾಲಾಜಿ ಚಿತ್ರಮಂದಿರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುತ್ತಾರೆ. ಆ ಕಾರಣದಿಂದಾಗಿಯೇ ಥಿಯೇಟರ್ ಆವರಣದಲ್ಲಿಯೇ ವ್ಯವಸ್ಥೆ ಮಾಡಿದ್ದಾರಂತೆ ಅಪ್ಪು ಅಭಿಮಾನಿಗಳು. ಈಗಾಗಲೇ ಬೃಹತ್ ಗಾತ್ರದ ಪುನೀತ್ ಕಟೌಟ್ ಹಾಗೂ ಬ್ಯಾನರ್‍ಗಳು ಚಿತ್ರಮಂದಿರದ ಮುಂದೆ ರಾರಾಜಿಸುತ್ತಿವೆ. ನಾಳೆಯ ದಿನ ಅಪ್ಪು ಹಬ್ಬ ಎಂದೇ ಆಚರಿಸುತ್ತಿದ್ದೇವೆ ಅಂತಾರೆ ಅಲ್ಲಿನ ಅಭಿಮಾನಿಗಳು. ಹುಟ್ಟು ಹಬ್ಬವನ್ನು ಆಚರಿಸುತ್ತಲೇ ಜೇಮ್ಸ್‍ವನ್ನು ನಾಳೆ ಬರಮಾಡಿಕೊಳ್ಳಲಿದ್ದಾರೆ.

  • ಥಿಯೇಟರ್‌ನಲ್ಲಿ ಫುಲ್ ಹೌಸ್ – ಶೀಘ್ರವೇ ಸರ್ಕಾರದ ನಿರ್ಧಾರ ಪ್ರಕಟ

    ಥಿಯೇಟರ್‌ನಲ್ಲಿ ಫುಲ್ ಹೌಸ್ – ಶೀಘ್ರವೇ ಸರ್ಕಾರದ ನಿರ್ಧಾರ ಪ್ರಕಟ

    ಬೆಂಗಳೂರು: ಚಿತ್ರಮಂದಿರಗಳಲ್ಲಿ ಪೂರ್ಣ ಪ್ರಮಾಣದ ಸೀಟು ಭರ್ತಿಗೆ ಅವಕಾಶ ಮಾಡಿಕೊಡುವ ಬಗ್ಗೆ ಎರಡು, ಮೂರು ದಿನದಲ್ಲಿ ಸರ್ಕಾರ ತೀರ್ಮಾನ ಕೈಗೊಳ್ಳಲಿದೆ ಎಂದು ಆರೋಗ್ಯ ಸಚಿವ ಸುಧಾಕರ್ ಹೇಳಿದ್ದಾರೆ.

    ಇಂದು ಚಲನಚಿತ್ರ ನಿರ್ಮಾಪಕರಾದ ಜಯಣ್ಣ, ಸೂರಪ್ಪ ಬಾಬು ಹಾಗೂ ಶ್ರೀಕಾಂತ್ ಅವರು ಪೂರ್ಣ ಪ್ರಮಾಣದ ಸೀಟು ಭರ್ತಿಗೆ ಅನುಮತಿ ಕೋರುವ ಸಂಬಂಧ ವಿಧಾನಸೌಧದ ಕೊಠಡಿ 339ರಲ್ಲಿ ಸುಧಾಕರ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು. ಇದನ್ನೂ ಓದಿ: ರಾಜ್ಯದಲ್ಲಿ ಮತಾಂತರ ನಿಷೇಧ ಕಾಯಿದೆ ಜಾರಿಗೆ ಚಿಂತನೆ ಮಾಡಲಾಗುತ್ತಿದೆ: ಅರಗ ಜ್ಞಾನೇಂದ್ರ

    ಭೇಟಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಅನೇಕ ಚಟುವಟಿಕೆಗೆ ರಿಯಾಯಿತಿ ನೀಡಿದ್ದೇವೆ. ಸಿನಿಮಾಗೆ ಶೇ.50 ರಷ್ಟು ರಿಯಾಯಿತಿ ನೀಡಿದ್ದೇವೆ. ಈಗ ಶೇ.100 ರಷ್ಟು ಬೇಡಿಕೆ ಇಟ್ಟಿದ್ದಾರೆ. ಇವರಿಗೆ ಹೇಗೆ ಸಹಕಾರ ಕೊಡಬೇಕು ಎಂಬುದರ ಬಗ್ಗೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸುತ್ತದೆ. ಈ ಕುರಿತು 2, 3 ದಿನದಲ್ಲಿ ತಾಂತ್ರಿಕ ಸಲಹೆ ಸಮಿತಿ ಜೊತೆ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇವೆ ಎಂದಿದ್ದಾರೆ. ಇದನ್ನೂ ಓದಿ:  ಯುವತಿಯಿಂದ ಕಾರು ಚಾಲನೆ- ಆಟೋ ಸಂಪೂರ್ಣ ನಜ್ಜುಗುಜ್ಜು

    ನಿರ್ಮಾಪಕ ಸೂರಪ್ಪ ಬಾಬು ಈ ಕುರಿತು ಮಾತನಾಡಿದ್ದು, ಆದಷ್ಟು ಬೇಗ ಈ ವಿಚಾರಕ್ಕೆ ಅನುಮತಿ ಸಿಗುವ ಸಾಧ್ಯತೆ ಇದೆ. ಇದರ ಜೊತೆಗೆ ಇತರೆ ಕೊರೊನಾ ನಿಯಮ ಸಡಿಲಿಕೆ ಬಗ್ಗೆಯು ಸರ್ಕಾರ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.

     

  • ಕೇರಳದಲ್ಲಿ ಮಾ.31ರವರೆಗೆ ಸಿನಿಮಾ ಪ್ರದರ್ಶನ ರದ್ದು – 7ನೇ ತರಗತಿಯವರೆಗೆ ರಜೆ ಘೋಷಣೆ

    ಕೇರಳದಲ್ಲಿ ಮಾ.31ರವರೆಗೆ ಸಿನಿಮಾ ಪ್ರದರ್ಶನ ರದ್ದು – 7ನೇ ತರಗತಿಯವರೆಗೆ ರಜೆ ಘೋಷಣೆ

    ತಿರುವನಂತಪುರಂ: ದೇಶಾದ್ಯಂತ ಕೊರೊನಾ ತಾಂಡವ ಜೋರಾಗುತ್ತಿದ್ದು, ಕೇರಳದಲ್ಲಿ ಒಟ್ಟು 12 ಪ್ರಕರಣಗಳು ಪತ್ತೆಯಾಗಿವೆ. ಈ ಹಿನ್ನೆಲೆ ಕೇರಳ ಸರ್ಕಾರ ಕಟ್ಟೆಚ್ಚರ ವಹಿಸಿದ್ದು, ಸಿಬಿಎಸ್‍ಇ ಹಾಗೂ ಐಸಿಎಸ್‍ಇ ಸೇರಿದಂತೆ 7ನೇ ತರಗತಿವರೆಗೆ ಎಲ್ಲ ಶಾಲೆಗಳಿಗೆ ರಜೆ ಘೋಷಿಸಿದೆ. ಮಾತ್ರವಲ್ಲದೆ ಮಾರ್ಚ್ 31ರ ವರೆಗೆ ಚಿತ್ರಮಂದಿರಗಳನ್ನು ಬಂದ್ ಮಾಡಲು ಚಿತ್ರ ಸಂಘಟನೆಗಳು ನಿರ್ಧಾರ ತೆಗೆದುಕೊಂಡಿವೆ.

    ಕೇರಳದಲ್ಲಿ ಸ್ವಲ್ಪ ವೇಗವಾಗಿಯೇ ಕೊರೊನಾ ಹರಡುತ್ತಿದ್ದು, ಮೊದಲು ವೈರಸ್ ಕಾಣಿಸಿಕೊಂಡಿದ್ದ ಮೂವರು ಗುಣಮುಖರಾಗಿ ಡಿಸ್ಚಾರ್ಜ್ ಆದ ಬಳಿಕ ಇದೀಗ ಮತ್ತೆ 12 ಹೊಸ ಪ್ರಕರಣಗಳು ಪತ್ತೆಯಾಗಿವೆ. ಹೀಗಾಗಿ ಕೇರಳ ತಲೆಕೆಡಿಸಿಕೊಂಡಿದ್ದು, ಸಿಬಿಎಸ್‍ಇ ಹಾಗೂ ಐಸಿಎಸ್‍ಇ ಸೇರಿದಂತೆ 7ನೇ ತರಗತಿಯವರೆಗೆ ಎಲ್ಲ ಶಾಲೆಗಳನ್ನು ಬಂದ್ ಮಾಡಲು ಸರ್ಕಾರ ಆದೇಶಿಸಿದೆ.

    ಇಂದು ಹೊಸ ಆರು ಪ್ರಕರಣಗಳು ಕಾಣಿಸಿಕೊಳ್ಳುತ್ತಿದ್ದಂತೆ ಸಭೆ ನಡೆಸಿದ ಸಿಎಂ ಪಿಣರಾಯಿ ವಿಜಯನ್, ಏಳನೇ ತರಗತಿವರೆಗಿನ ಶಾಲೆಗಳಿಗೆ ಮಾರ್ಚ್ 31ರ ವರೆಗೆ ರಜೆ ನೀಡಿದ್ದಾರೆ. ಅಲ್ಲದೇ ಖಾಸಗಿಯಾಗಿ ನಡೆಸುವ ಟ್ಯೂಷನ್, ರಾಜಾ ದಿನದ ವಿಶೇಷ ತರಗತಿ, ಮದರಸಾಗಳನ್ನು ತಾತ್ಕಾಲಿಕವಾಗಿ ಬಂದ್ ಮಾಡಲು ಸೂಚನೆ ನೀಡಿದ್ದಾರೆ.

    8,9 ಮತ್ತು 10ನೇ ತರಗತಿಗಳಿಗೆ ನಿಗದಿಯಂತೆ ಪರೀಕ್ಷೆಗಳು ನಡೆಯಲಿದ್ದು, ಜನರು ಸಾರ್ವಜನಿಕವಾಗಿ ಗುಂಪು ಸೇರದಂತೆ ಮನವಿ ಮಾಡಿದ್ದಾರೆ. ಮದುವೆ ಮುಂತಾದ ಸಮಾರಂಭಗಳಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುವಂತೆ ಕೇರಳ ಸರ್ಕಾರ ಸೂಚನೆ ನೀಡಿದೆ. ಇತ್ತೀಚೆಗಷ್ಟೇ ಮೂರು ವರ್ಷದ ಬಾಲಕಿಗೆ ಕೊರೊನಾ ಸೋಂಕು ತಗುಲಿರುವುದು ಖಚಿತವಾಗಿತ್ತು. ಹೀಗಾಗಿ ಕೇರಳ ಸರ್ಕಾರ ಎಚ್ಚೆತ್ತುಕೊಂಡು ಶಾಲೆಗಳಿಗೆ ರಜೆ ಘೋಷಿಸಿದೆ.

    ಸಿನಿಮಾ ಪ್ರದರ್ಶನ ರದ್ದು
    ವೈರಸ್ ಹರಡುವಿಕೆ ಹೆಚ್ಚಾಗುತ್ತಿದ್ದಂತೆ ಮಲೆಯಾಳಂ ಸಿನಿಮಾ ಒಕ್ಕೂಟಗಳು ಕೊಚ್ಚಿಯಲ್ಲಿ ಸಭೆ ನಡೆಸಿವೆ. ಸಭೆಯ ಬಳಿಕ ಮಾರ್ಚ್ 31ವರೆಗೂ ರಾಜ್ಯಾದ್ಯಂತ ಸಿನಿಮಾ ಪ್ರದರ್ಶನ ರದ್ದು ಮಾಡಲಾಗಿದೆ. ಥಿಯೇಟರ್ ಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಜನರು ಸೇರ್ಪಡೆ ಹಿನ್ನಡೆ ವೈರಸ್ ಹರಡುವ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ. ಈ ಹಿನ್ನಲೆ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಕ್ಕೂಟದ ಸದಸ್ಯರು ಹೇಳಿದ್ದಾರೆ.