Tag: ಚಿತ್ರದುರ್ಗಾ

  • ಮುರುಘಾ ಶ್ರೀಗಳಿಗೆ ಸೋಮವಾರ ಜೈಲಾ? ಬೇಲಾ?

    ಮುರುಘಾ ಶ್ರೀಗಳಿಗೆ ಸೋಮವಾರ ಜೈಲಾ? ಬೇಲಾ?

    ಚಿತ್ರದುರ್ಗಾ: ಮುರುಘಾ ಶ್ರೀಗಳಿಗೆ ನಾಳೆ ಜೈಲಾ? ಬೇಲಾ? ಅಥವಾ ಆಸ್ಪತ್ರೆ ಭಾಗ್ಯನಾ? ಎನ್ನೋದು ಕುತೂಹಲ ಕೆರಳಿಸಿದೆ.

    ಪೊಲೀಸ್ ಕಸ್ಟಡಿ ನಾಳೆ ಬೆಳಗ್ಗೆ 11 ಗಂಟೆಗೆ ಅಂತ್ಯವಾಗಲಿದ್ದು, ಪೊಲೀಸರು ಸ್ಥಳ ಮಹಜರು, ಶ್ರೀಗಳ ಪುರುಷತ್ವ ವರದಿಯನ್ನು ನಾಳೆ ಕೋರ್ಟ್‍ಗೆ ಹಾಜರುಪಡಿಸಲಿದ್ದಾರೆ. ಮತ್ತೊಂದೆಡೆ ಬೇಲ್‍ಗಾಗಿ ಶ್ರೀಗಳ ಪರ ವಕೀಲರು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಅನಾರೋಗ್ಯ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಕರೆದೊಯ್ಯಲು ಅವಕಾಶ ಕೊಡಬೇಕು. ಹಾಗಾಗಿ, ಮಧ್ಯಂತರ ಜಾಮೀನು ನೀಡಬೇಕೆಂದು ಶ್ರೀಗಳ ಪರ ವಕೀಲರು ಮನವಿ ಸಲ್ಲಿಸುವ ಸಾಧ್ಯತೆ ಹೆಚ್ಚಿದೆ. ಈ ಸಂಬಂಧ ಡಿವೈಎಸ್‍ಪಿ ಕಚೇರಿಗೆ ಬೆಳಗ್ಗೆ ಭೇಟಿ ನೀಡಿದ್ದ ವಕೀಲ ಉಮೇಶ್, ಶ್ರೀಗಳ ಆರೋಗ್ಯ ವಿಚಾರಿಸಿ ಬೇಲ್ ಸಂಬಂಧ ಚರ್ಚಿಸಿದ್ದಾರೆ. ಇದನ್ನೂ ಓದಿ: ಅನಾಥ ಸೇವಾಶ್ರಮದ ಅಧ್ಯಕ್ಷ ಸ್ಥಾನದಿಂದ ಮುರುಘಾ ಶ್ರೀ ವಜಾ

    ಇಂದು ಬೆಳಗ್ಗೆ ಡಿವೈಎಸ್‍ಪಿ ಕಚೇರಿಗೇ ವೈದ್ಯರನ್ನು ಕರೆಸಿಕೊಂಡು ಶ್ರೀಗಳ ಆರೋಗ್ಯ ತಪಾಸಣೆ ಮಾಡಿಸಿದ್ರು. ಈ ಮಧ್ಯೆ, ಪೊಲೀಸರು ಆರೋಪಿಗಳ ಪರನಾ? ಅನ್ನೋ ಚರ್ಚೆ ಎದ್ದಿದೆ. ಕಣ್ಮುಂದೆ ಇದ್ದಾಗ ವಶಕ್ಕೆ ಪಡೆಯದ ಪೊಲೀಸರು ಇದೀಗ ಬಸವಾದಿತ್ಯ, ಪರಮಶಿವಯ್ಯ, ಗಂಗಾಧರಯ್ಯಗಾಗಿ ಹುಡುಕಾಟದ ನಾಟಕವಾಡುತ್ತಿದ್ದಾರೆ. ಮೂವರ ಫೋನ್ ಸದ್ಯಕ್ಕೆ ಸ್ವಿಚ್ ಆಫ್ ಆಗಿದೆ. ನಾಪತ್ತೆ ಆದ್ರೂ ಆರೋಪಿಗಳು ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ. ಇದನ್ನೂ ಓದಿ: ಮುರುಘಾ ಶ್ರೀ ಮೆಡಿಕಲ್ ಟೆಸ್ಟ್ ಮುಕ್ತಾಯ – ಪುರುಷತ್ವ ಪರೀಕ್ಷೆಯಲ್ಲಿ ಶ್ರೀಗಳು ಫಿಟ್

    Live Tv
    [brid partner=56869869 player=32851 video=960834 autoplay=true]

  • ಮಠದಲ್ಲೇ ಮುರುಘಾಶ್ರೀ ಬಂಧನ

    ಮಠದಲ್ಲೇ ಮುರುಘಾಶ್ರೀ ಬಂಧನ

    ಚಿತ್ರದುರ್ಗಾ: ಮುರುಘಾ ಶರಣರ ಮೇಲಿನ ಪೋಕ್ಸೋ ಪ್ರಕರಣದ ತನಿಖೆ ಆರು ದಿನಗಳ ನಂತರ ಚುರುಕು ಪಡೆದಿದೆ. ಇದೀಗ ಮಠದಲ್ಲೇ ಶ್ರೀಗಳ ಬಂಧನವಾಗಿದೆ.

    ತನಿಖಾ ತಂಡದ ಕಾರ್ಯವೈಖರಿ ಬಗ್ಗೆ ರಾಷ್ಟ್ರಮಟ್ಟದಲ್ಲಿ ಚರ್ಚೆ ಆಗುತ್ತಿರುವ ಹೊತ್ತಲ್ಲೇ ಪೊಲೀಸರು ಶ್ರೀಗಳನ್ನು ಬಂಧಿಸಿದ್ದಾರೆ. ಪ್ರಕರಣದ ಪ್ರಮುಖ ಆರೋಪಿಗಳ ಪೈಕಿ ಒಬ್ಬರಾಗಿರುವ ಎ2 ಹಾಸ್ಟೆಲ್ ವಾರ್ಡನ್ ರಶ್ಮಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ವಾರ್ಡನ್ ರಶ್ಮಿ ಮೇಲೆ ಪೊಲೀಸರು ಕೈಗೊಳ್ಳುವ ಕ್ರಮದ ಮೇಲೆ ಶ್ರೀಗಳ ಮೇಲೆ ಯಾವ ರೀತಿಯ ಕ್ರಮ ಆಗಬಹುದು ಎಂಬುದು ನಿರ್ಧಾರವಾಗುವ ಸಂಭವ ಇತ್ತು. ಆ ಬಳಿಕ ರಶ್ಮಿಯವರನ್ನು ಪೊಲೀಸರು ಬಂಧಿಸಿದ್ದರು. ಇದೀಗ ಸ್ವಾಮೀಜಿಯನ್ನು ಕೂಡ ಪೊಲೀಸರು ಬಂಧಿಸಿದ್ದಾರೆ. ವೈದ್ಯಕೀಯ ಪರೀಕ್ಷೆಯ ಬಳಿಕ ಶ್ರೀಗಳನ್ನು ಪೊಲೀಸರು ಕೋರ್ಟ್‌ ಮುಂದೆ ಹಾಜರು ಪಡಿಸಲಿದ್ದಾರೆ. ಮಠದಿಂದ ಹೊರಬರುತ್ತಿದ್ದಂತೆ ಶ್ರೀಗಳು ಕಾವಿ ಕಳಚಿ ಬಿಳಿ ವಸ್ತ್ರದಲ್ಲಿ ಹೊರಬಂದಿದ್ದಾರೆ.

    ಶ್ರೀಗಳಿಗೆ ಈ ಹಿಂದೆ ಕೊರೊನಾ ಬಂದಿತ್ತು. ವೈದ್ಯಕೀಯ ಪರೀಕ್ಷೆಗೆ ಬಂದಿದ್ದೆ. ಬಿಪಿ ಸಮಸ್ಯೆ ಇತ್ತು ಪರೀಕ್ಷೆ ನಡೆಸಿ ಬಳಿಕ ಪೊಲೀಸರು ಶ್ರೀಗಳನ್ನು ಬಂಧಿಸಿದ್ದಾರೆ ಎಂದು ವೈದ್ಯಕೀಯ ಪರೀಕ್ಷೆ ನಡೆಸಿದ ಡಾಕ್ಟರ್ ಪಾಲಕ್ಷಯ್ಯ ತಿಳಿಸಿದ್ದಾರೆ.

    ಮಠದ ವಾರ್ಡನ್ ರಶ್ಮಿ ದಾಖಲಿಸಿದ್ದ ಅತ್ಯಾಚಾರ ಯತ್ನ ಪ್ರಕರಣದಲ್ಲಿ ಮಠದ ಆಡಳಿತಾಧಿಕಾರಿ ಬಸವರಾಜನ್ ಹಾಗೂ ಪತ್ನಿ ಸೌಭಾಗ್ಯ ಬಸವರಾಜನ್‍ಗೆ ಜಾಮೀನು ಸಿಕ್ಕಿದೆ. ಇದೇ ಹೊತ್ತಲ್ಲಿ ಮಠದ ಆಡಳಿತ ವಿಭಾಗದಲ್ಲಿ ಮಹತ್ವದ ಬೆಳವಣಿಗೆಗಳು ನಡೆದಿವೆ. ಮಠದ ಆಡಳಿತಾಧಿಕಾರಿ ಹುದ್ದೆಯಿಂದ ಮತ್ತೆ ಎಸ್‍ಕೆ ಬಸವರಾಜನ್‍ರನ್ನು ಕೈಬಿಡಲಾಗಿದೆ. ಮಠದ ಆಡಳಿತಾಧಿಕಾರಿಯಾಗಿ ಹೈಕೋರ್ಟ್‍ನ ನಿವೃತ್ತ ನ್ಯಾಯಮೂರ್ತಿ ವಸ್ತ್ರದ್‍ಮಠ ಅವರನ್ನು ನೇಮಿಸಲು ಇಂದು ನಡೆದ ಸಭೆಯಲ್ಲಿ ಶ್ರೀಗಳು ನಿರ್ಣಯ ತೆಗೆದುಕೊಂಡಿದ್ದಾರೆ. ಅಲ್ಲದೇ, ಶ್ರೀಗಳ ಆಪ್ತ ಕಾರ್ಯದರ್ಶಿಯನ್ನಾಗಿ ಅನಿತ್ ಕುಮಾರ್ ಎಂಬುವರನ್ನು ನೇಮಕ ಮಾಡಿ ಸಭೆ ನಿರ್ಧಾರ ತೆಗೆದುಕೊಂಡಿದೆ. ಜಾಮೀನು ಬಳಿಕ ಮಾತನಾಡಿದ ಎಸ್‍ಕೆ ಬಸವರಾಜನ್ ತಮ್ಮ ವಿರುದ್ಧದ ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದಾರೆ. ತಮ್ಮ ವಿರುದ್ಧವೇ ಷಡ್ಯಂತ್ರ್ಯ ನಡೆದಿದೆ ಎಂದು ಆರೋಪಿಸಿದ್ದಾರೆ. ಸಂತ್ರಸ್ತ ಮಕ್ಕಳ ರಕ್ಷಣೆಗೆ ನಾವು ನಿಂತಿದ್ದೇವೆ ಎಂಬ ಮಾತನ್ನು ಸ್ಪಷ್ಟವಾಗಿ ತಿಳಿಸಿದ್ದಾರೆ. ಸೌಭಾಗ್ಯ ಬಸವರಾಜನ್ ಸಹ ತಮ್ಮ ಮೇಲಿನ ಆರೋಪವನ್ನು ತಳ್ಳಿ ಹಾಕಿದ್ದು, ಮಠದಿಂದ ಇಬ್ಬರು ಮಕ್ಕಳನ್ನು ಬಲವಂತವಾಗಿ ಹೊರಗೆ ಹಾಕಲಾಗಿದ್ದು, ಅವರ ರಕ್ಷಣೆಗೆ ನಿಂತಿದ್ದು ತಪ್ಪಾ ಎಂದು ಪ್ರಶ್ನಿಸಿದ್ದರು.

    Live Tv
    [brid partner=56869869 player=32851 video=960834 autoplay=true]

  • ಎಂಎಲ್‍ಸಿ ರಘು ಆಚಾರ್ ಗೆ ಆವಾಜ್ ಹಾಕಿದ ತರಳುಬಾಳು ಗುರುಪೀಠದ ಭಕ್ತ

    ಎಂಎಲ್‍ಸಿ ರಘು ಆಚಾರ್ ಗೆ ಆವಾಜ್ ಹಾಕಿದ ತರಳುಬಾಳು ಗುರುಪೀಠದ ಭಕ್ತ

    ಚಿತ್ರದುರ್ಗ: ತರಳುಬಾಳು ಗುರುಪೀಠದ ಸಾಣೇಹಳ್ಳಿ ಶಾಖಾ ಮಠದ ಶ್ರೀಗಳ ವಿರುದ್ಧ ಎಂಎಲ್‍ಸಿ ರಘು ಆಚಾರ್ ಹೇಳಿಕೆ ನೀಡಿದ್ದರು. ಇದರಿಂದ ಆಕ್ರೋಶಗೊಂಡ ಮಠದ ಭಕ್ತ ರಘು ಆಚಾರ್ ಅವರಿಗೆ ಕರೆ ಮಾಡಿ ಆವಾಜ್ ಹಾಕಿದ್ದಾರೆ.

    `ನಾ ರಾಜಕೀಯ ಬಿಡ್ತೀನಿ ಶ್ರೀಗಳೇ ನೀವು ಮಠ ಬಿಟ್ಟು ಹೊರ ಬನ್ನಿ’ ಎಂದು ಎಂಎಲ್‍ಸಿ ರಘು ಆಚಾರ್ ಶ್ರೀಗಳ ಬಗ್ಗೆ ಹಗರುವಾಗಿ ಮಾತನಾಡಿದ್ದರು. ಇದರಿಂದ ಆಕ್ರೋಶಗೊಂಡ ತರಳುಬಾಳು ಮಠದ ಭಕ್ತ ಲೋಕೇಶ್ ಎಂಬವರು ರಘು ಆಚಾರ್ ಅವರಿಗೆ ಕರೆ ಮಾಡಿ ಆವಾಜ್ ಹಾಕಿದ್ದಾರೆ.

    ಒಬ್ಬರ ಬಗ್ಗೆ ಮಾತನಾಡುವಾಗ ಹುಷಾರ್ ಆಗಿ ಮಾತಾಡು, ಸಾಣೇಹಳ್ಳಿಗೆ ಎಷ್ಟು ಜನ ಕರ್ಕೊಂಡು ಬರ್ತಿಯಾ ಬಾ. ಧಮ್ ಇದ್ರೆ ಹೊಸದುರ್ಗ ಗಡಿಯೊಳಗೆ ಕಾಲಿಡು ನೋಡ್ತಿವಿ. ಪಂಡಿತಾರಾಧ್ಯ ಸ್ವಾಮಿಜಿ ಬಗ್ಗೆ ಹೇಗೆ ನೀವು ಹಗುರವಾಗಿ ಮಾತಾನಾಡಿದ್ರಿ? ಸ್ವಾಮಿಗಳ ಬಳಿ ಕ್ಷಮೆಯಾಚಿಸಬೇಕು. ಮೂಲಭೂತವಾದಿ ಪದದ ಅರ್ಥ ಗೊತ್ತಿಲ್ಲ ಅಂದ್ಮೇಲೆ ಹೇಗೆ ಸ್ವಾಮಿಜೀಗಳ ಬಗ್ಗೆ ಮಾತಾನಾಡಿದ್ರಿ. ಕೋಟ್ಯಾಂತರ ಜನ ಭಕ್ತರು ಸೇರಿ ಅವರನ್ನ ಸ್ವಾಮಿಜಿಗಳನ್ನಾಗಿ ಮಾಡಿದ್ದಾರೆ. ನೀವು ಮಠದ ಭಕ್ತರಲ್ಲವೇ, ಈ ಹಿಂದೆ ಎಷ್ಟು ಸಾರಿ ಮಠಕ್ಕೆ ಭೇಟಿ ನೀಡಿದ್ದಿರಾ ಎಂದು ರಘು ಆಚಾರ್‍ಗೆ ಭಕ್ತರು ಪ್ರಶ್ನಿಸಿದ್ದಾರೆ.

    ಅಷ್ಟೆ ಅಲ್ಲದೆ ನೀವು 11 ತಾಲೂಕುಗಳಿಗೆ ವಿಧಾನ ಪರಿಷತ್ ಸದಸ್ಯರಾಗಿದ್ದೀರಿ. ಹೊಸದುರ್ಗ ಗಡಿ ಎಂಟ್ರಿ ಆಗ್ತೀರಾ ಇಲ್ಲಾ ನಾವೇ ನೀವಿದ್ದಲ್ಲಿ ಬರುತೀವಿ. ಮೈಸೂರು, ಬೆಂಗಳೂರು ಎಲ್ಲಿಗೆ ಬರಬೇಕು ನೀವೇ ಹೇಳಿ, ಅಲ್ಲಿಗೆ ಬರುತ್ತೇವೆ ಅಂತ ತರಳುಬಾಳು ಮಠದ ಭಕ್ತರು ಆವಾಜ್ ಹಾಕಿದ್ದಾರೆ. ರಘು ಆಚಾರ್ ಅವರು ತಮ್ಮ ತಪ್ಪಿಗೆ ಮಾಧ್ಯಮ ಮೂಲಕ ಕ್ಷಮೆ ಕೇಳಬೇಕು, ಇಲ್ಲ ಅಂದರೆ ಪರಿಣಾಮ ಸರಿ ಇರಲ್ಲ ಎಂದ ಭಕ್ತರು ಹೇಳಿದ್ದಾರೆ.

    ಇದಕ್ಕೆ ಪ್ರತಿಕ್ರಿಯಿಸಿದ ರಘು ಆಚಾರ್, ನಾನು ಯಾವುದೇ ತಪ್ಪು ಮಾಡಿಲ್ಲ ನನ್ನ ಬಗ್ಗೆ ಮಾತಾಡುವಾಗ ಯೋಚಿಸಿ ಮಾತಾನಾಡಿ ಎಂದು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅನೈತಿಕ ಸಂಬಂಧದ ಶಂಕೆ- ಸಹ ಕಾರ್ಮಿಕರಿಂದಲೇ ವ್ಯಕ್ತಿಯ ಭೀಕರ ಹತ್ಯೆ

    ಅನೈತಿಕ ಸಂಬಂಧದ ಶಂಕೆ- ಸಹ ಕಾರ್ಮಿಕರಿಂದಲೇ ವ್ಯಕ್ತಿಯ ಭೀಕರ ಹತ್ಯೆ

    ಚಿತ್ರದುರ್ಗ: ಅನೈತಿಕ ಸಂಬಂಧ ಶಂಕೆ ಹಿನ್ನೆಲೆಯಲ್ಲಿ ವ್ಯಕ್ತಿಯನ್ನು ಸಹ ಕಾರ್ಮಿಕರೇ ಕೊಲೆಗೈದಿರುವ ಘಟನೆ ಚಳ್ಳಕೆರೆ ಪಟ್ಟಣದ ನೂತನ ನಗರಸಭೆಯ ಬಳಿ ನಡೆದಿದೆ.

    ಮೇಸ್ತ್ರಿ ಚನ್ನಕೃಷ್ಣ (38) ಮೃತ ದುರ್ದೈವಿ. ನಾಗರಾಜ್ ಹಾಗೂ ಚಂದ್ರು ಕೊಲೆಗೈದ ಆರೋಪಿಗಳು. ಚನ್ನಕೃಷ್ಣ ಮೂಲತಃ ಆಂಧ್ರದ ನೆಲ್ಲೂರು ಜಿಲ್ಲೆಯ ದುರ್ಗಂಪಲ್ಲಿ ಗ್ರಾಮದ ನಿವಾಸಿಯಾಗಿದ್ದಾರೆ.

    ಚಳ್ಳಕೆರೆಯಲ್ಲಿ ನಗರಸಭೆ ಕಟ್ಟಡ ನಿರ್ಮಾಣದಲ್ಲಿ ಮೇಸ್ತ್ರಿಯಾಗಿ ಕೆಲಸ ಮಾಡಲು ಚನ್ನಕೃಷ್ಣ ಚಳ್ಳಕೆರೆಗೆ ಬಂದಿದ್ದರು. ಹೀಗಾಗಿ ಚನ್ನಕೃಷ್ಣ, ನಾಗರಾಜ್ ಹಾಗೂ ಚಂದ್ರು ನಗರಸಭೆ ಕಟ್ಟಡ ನಿರ್ಮಿಸಲು ಒಟ್ಟಿಗೆ ಕೆಲಸ ಮಾಡುತ್ತಿದ್ದರು. ಈ ವೇಳೆ ತನ್ನ ಪತ್ನಿ ಜೊತೆ ಮೇಸ್ತ್ರಿ ಅಕ್ರಮ ಸಂಬಂಧ ಹೊಂದಿದ್ದಾನೆ ಎಂದು ನಾಗರಾಜ್ ಶಂಕಿಸಿದ್ದಾನೆ. ಬಳಿಕ ತನ್ನ ಸ್ನೇಹಿತ ಚಂದ್ರು ಜೊತೆ ಸೇರಿ ನಾಗರಾಜ್, ಮೇಸ್ತ್ರಿಯನ್ನು ಕೊಲೆ ಮಾಡಲು ನಿರ್ಧರಿಸಿದ್ದಾನೆ.

    ರಾತ್ರಿ ಚನ್ನಕೃಷ್ಣ ಮಲಗಿದ್ದ ವೇಳೆ ದೊಣ್ಣೆಯಿಂದ ಆತನ ತಲೆಗೆ ಹೊಡೆದು ಇಬ್ಬರು ಕೊಲೆ ಮಾಡಿದ್ದಾರೆ. ಘಟನಾ ಸ್ಥಳಕ್ಕೆ ಚಳ್ಳಕೆರೆ ಸಿಪಿಐ ತಿಮ್ಮಣ್ಣ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

    ಆರೋಪಿಗಳ ವಿರುದ್ಧ ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈಗಾಗಲೆ ಆರೋಪಿ ನಾಗರಾಜ್ ಅನ್ನು ಪೊಲೀಸರು ಬಂಧಿಸಿದ್ದು, ಇನ್ನೋರ್ವ ಆರೋಪಿಗಾಗಿ ಹುಡುಕಾಟ ಮುಂದುವರಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews