Tag: ಚಿತ್ರಕಲಾವಿದ

  • ಹಿರಿಯ ಚಿತ್ರಕಲಾವಿದ ಬಿ.ಕೆ.ಎಸ್ ವರ್ಮಾ ನಿಧನ

    ಹಿರಿಯ ಚಿತ್ರಕಲಾವಿದ ಬಿ.ಕೆ.ಎಸ್ ವರ್ಮಾ ನಿಧನ

    ರ್ನಾಟಕದ ಪ್ರಸಿದ್ಧ ಹಿರಿಯ ಚಿತ್ರಕಲಾವಿದ ಬಿ.ಕೆ.ಎಸ್ ವರ್ಮಾ ನಿಧನರಾಗಿದ್ದಾರೆ. ಆರೋಗ್ಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದ ಅವರು ಕಳೆದ ಮೂರು ತಿಂಗಳಿಂದ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಗ್ಗೆ 8.20ಕ್ಕೆ ಹೆಬ್ಬಾಳ ಮಣಿಪಾಲ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

    76ರ ವಯಸ್ಸಿನ ವರ್ಮಾ ಪರಿಸರ, ಸಾಮಾಜಿಕ ಸಮಸ್ಯೆಗಳ ಬಗ್ಗೆ ಚಿತ್ರ ಬರೆಯುವ ಮೂಲಕ ಎಲ್ಲರ ಗಮನಸೆಳೆದಿದ್ದರು. ಭುವನೇಶ್ವರಿ, ವೃಕ್ಷದಲ್ಲಿ ಡಾ.ರಾಜ್ ಕುಮಾರ್ ಸೇರಿದಂತೆ ಹಲವು ಚಿತ್ರಗಳು ಇವರಿಗೆ ಹೆಚ್ಚೆಚ್ಚು ಜನಪ್ರಿಯತೆಯನ್ನು ತಂದುಕೊಟ್ಟಿದ್ದವು. ಅನೇಕ ಶಿಬಿರಗಳನ್ನು ಆಯೋಜನೆ ಮಾಡುವ ಮೂಲಕ ಅವರು ಚಿತ್ರ ಕಲಾವಿದರನ್ನು ತಯಾರಿ ಮಾಡಿದ್ದರು. ಇದನ್ನೂ ಓದಿ: ಪೊಲೀಸ್‌ ಲಾಠಿ ಏಟಿನಿಂದ ತಪ್ಪಿಸಿಕೊಳ್ಳಲು ರ‍್ಯಾಪರ್‌ನನ್ನು ತಳ್ಳಿ ಬೀಳಿಸಿದ ಫ್ಯಾನ್‌

    ಬಿಕೆಸ್ ವರ್ಮಾ ಕಲೆಯನ್ನು ಅರಸಿಕೊಂಡು ಅನೇಕ ಪ್ರಶಸ್ತಿ, ಪುರಸ್ಕಾರಗಳು ಬಂದಿವೆ. ಅವರ ಸಾಧನೆಗೆ ಲಲಿತಾ ಅಕಾಡೆಮಿ ಪ್ರಶಸ್ತಿ,  ರಾಜ್ಯೋತ್ಸವ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ರಾಜೀವ್ ಗಾಂಧಿ ಪ್ರಶಸ್ತಿ ಲಭಿಸಿದ್ದವು. ಬೆಂಗಳೂರು ವಿವಿ ಯಿಂದ 2011ರಲ್ಲಿ ಅವರಿಗೆ ಗೌರವ ಡಾಕ್ಟರೇಟ್ ನೀಡಲಾಗಿದೆ. 6ನೇ ವಯಸ್ಸಿಗೆ ಹವ್ಯಾಸವಾಗಿ ರೇಖಾಚಿತ್ರ ಪ್ರಾರಂಭಿಸಿದ್ದ ಅವರು, ನಿರಂತರವಾಗಿ ಆರೇಳು ದಶಕಗಳ ಕಾಲ ಚಿತ್ರಕಲೆಯಲ್ಲೇ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ತಂದೆ ಕೃಷ್ಣಮಾಚಾರ್ಯರು ಸಂಗೀತಗಾರರಾಗಿದ್ದರು, ತಾಯಿ ಜಯಲಕ್ಷ್ಮೀ ಚಿತ್ರಕಲಾವಿದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕಲ್ಯಾಣ ಕಲಾಶಿಬಿರದ ಮೂಲಕ ಯುವತಿಯ ಕೈ ಹಿಡಿದ ಚಿತ್ರಕಲಾವಿದ!

    ಕಲ್ಯಾಣ ಕಲಾಶಿಬಿರದ ಮೂಲಕ ಯುವತಿಯ ಕೈ ಹಿಡಿದ ಚಿತ್ರಕಲಾವಿದ!

    ರಾಯಚೂರು: ಮಂತ್ರಪಠಣ, ವಾಲಗಗಳ ಅಬ್ಬರವಿಲ್ಲದೇ ರಾಯಚೂರಿನಲ್ಲೊಂದು ಸಿಂಪಲ್ ಮದ್ವೆ ನಡೀತು. ಜಹಿರಬಾದ್‍ನ ಚಿತ್ರಕಲಾವಿದ ಮಲ್ಲಿಕಾರ್ಜುನ್ ಕಲ್ಯಾಣ ಕಲಾಶಿಬಿರ ನಡೆಸೋ ಮೂಲಕ ಅನಕ್ಷರಸ್ಥ ಯುವತಿ ಮಹಾಲಕ್ಷ್ಮಿಯೊಂದಿಗೆ ಸಪ್ತಪದಿ ತುಳಿದ್ರು.

    ನಗರದ ಕನ್ನಡ ಭವನದಲ್ಲಿ ನಡೆದ ಕಲಾಶಿಬಿರದಲ್ಲಿ ಕ್ಯಾನ್‍ವಾಸ್ ಮೇಲೆ ಶಿವಲಿಂಗ ಬಿಡಿಸಿ ಅದಕ್ಕೆ ಹಳದಿ ,ಕೆಂಪು ಬಣ್ಣ ಹಚ್ಚುವ ಮೂಲಕ ಹಾರಬದಲಿಸಿಕೊಂಡು ಸರಳ ಹಾಗೂ ವಿಶೇಷವಾಗಿ ಮದ್ವೆಯಾದ್ರು.

     

    ರಾಜ್ಯದ ವಿವಿಧೆಡೆಯಿಂದ ಬಂದ 20 ಕಲಾವಿದರು ಬಿಡಿಸಿದ ಕಲಾಕೃತಿಗಳನ್ನೇ ಪ್ರದರ್ಶನಕ್ಕಿಡಲಾಗಿತ್ತು. ಎರಡು ದಿನಗಳ ಕಾಲ ನಡೆದ ಕಲ್ಯಾಣ ಕಲಾ ಶಿಬಿರದಲ್ಲಿ ಒಟ್ಟು 150 ಜನ ಕಲಾವಿದರು ಭಾಗವಹಿಸಿ ವಧುವರರಿಗೆ ಹಾರೈಸಿದರು. ದುಬಾರಿ ಮದುವೆಗಳಿಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಮುಂದಾಗಿರುವ ಹೊತ್ತಿನಲ್ಲಿ ಸರಳ ವಿವಾಹ ನಡೆದಿರೋದು ವಿಶೇಷ.