ಕಲಬುರಗಿ: ಪ್ರಿಯಾಂಕ್ ಖರ್ಗೆ(Priynak Khgarge) ಪ್ರತಿನಿಧಿಸುವ ಚಿತ್ತಾಪುರದಲ್ಲಿ (Chittapur) ಸರ್ಕಾರ ಇಂದು ನಡೆಯಬೇಕಿದ್ದ ಆರ್‌ಎಸ್‌ಎಸ್ (RSS) ಪಥ ಸಂಚನಲನಕ್ಕೆ ಅನುಮತಿ ನೀಡಲು ನಿರಾಕರಿಸಿದೆ.
ಪಥಸಂಚಲನಕ್ಕೆ ಅನುಮತಿ ನೀಡಿದರೆ ಕಾನೂನು ಸುವ್ಯವಸ್ಥೆ ಹಾಳಾಗುವ ಸಾಧ್ಯತೆ ಎಂಬ ಕಾರಣ ನೀಡಿ ಆರ್‌ಎಸ್‌ಎಸ್ ಪಥ ಸಂಚಲನಕ್ಕೆ ತಾಲೂಕು ತಹಶೀಲ್ದಾರ್ ನಾಗಯ್ಯ ಅನುಮತಿ ನೀಡಲು ನಿರಾಕರಿಸಿದ್ದಾರೆ.
ಆರ್‌ಎಸ್‌ಎಸ್ ಪಥಸಂಚಲನದ ವಿರುದ್ಧವಾಗಿ ಭೀಮ್ ಆರ್ಮಿ ಸಂಘಟನೆ ಹಾಗೂ ಭಾರತೀಯ ದಲಿತ ಪ್ಯಾಂಥರ(ರಿ) ಸಂಘದ ಸದಸ್ಯರು ಅದೇ ಮಾರ್ಗವಾಗಿ ಪಥಸಂಚಲನ ಮಾಡಲು ಅನುಮತಿ ಕೋರಿದ್ದಾರೆ.
ಭಾನುವಾರ ಎಲ್ಲಾ ಸಂಘಟನೆಗಳು ಒಂದೇ ಮಾರ್ಗದಲ್ಲಿ ಪಥಸಂಚಲನ ನಡೆಸಿದರೆ ಗೊಂದಲ ಉಂಟಾಗಿ ಕಾನೂನು ಸುವ್ಯವಸ್ಥೆ ಹಾಳಾಗುವ ಸಾಧ್ಯತೆ ಇದೆ. ಹೀಗಾಗಿ ಯಾವುದೇ ಸಂಘಟನೆಗಳಿಗೆ ಪಥಸಂಚಲನ ಮಾಡಲು ಅನುಮತಿ ನೀಡುವುದಿಲ್ಲ.
ಕಲಬುರಗಿ: ರಾಷ್ಟ್ರೀಯ ಸ್ವಯಂ ಸೇವಕ ಸಂಘ (RSS) ಮತ್ತು ಐಟಿ ಬಿಟಿ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಫೈಟ್ ಜೋರಾಗಿದೆ. ಪ್ರಿಯಾಂಕ್ ಖರ್ಗೆ ಅವರ ಸ್ವಕ್ಷೇತ್ರ ಚಿತ್ತಾಪುರದಲ್ಲಿ (Chittapur) ಇಲ್ಲಿಯವರೆಗೆ ಪಥಸಂಚಲನಕ್ಕೆ ಅನುಮತಿ ಸಿಕ್ಕಿಲ್ಲ.
100ನೇ ವರ್ಷದ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಪಥಸಂಚಲನಕ್ಕೆ ಅನುಮತಿ ನೀಡುವಂತೆ ಆರ್‌ಎಸ್‌ಎಸ್ ತಾಲೂಕು ಆಡಳಿತವನ್ನು ಕೇಳಿತ್ತು. ಅನುಮತಿ ಕೇಳಿದ ನಂತರ ತಾಲೂಕು ತಹಶೀಲ್ದಾರ ನಾಗಯ್ಯ 12 ಪ್ರಶ್ನೆಗಳನ್ನು ಕೇಳಿದ್ದರು. ಈ ಪ್ರಶ್ನೆಗೆ ಆರ್‌ಎಸ್‌ಎಸ್ ಉತ್ತರ ನೀಡಿದ್ದರೂ ಮಧ್ಯರಾತ್ರಿ 11 ಗಂಟೆಯವರೆಗೂ ಅನುಮತಿ ಸಿಕ್ಕಿಲ್ಲ. ಯಾವ ಕಾರಣಕ್ಕೆ ಅನುಮತಿ ನೀಡಿಲ್ಲ ಎನ್ನುವುದರ ಬಗ್ಗೆ ಇಲ್ಲಿಯವರೆಗೆ ಅಧಿಕಾರಿಗಳು ಯಾವುದೇ ವಿವರ ನೀಡಿಲ್ಲ ಇದನ್ನೂ ಓದಿ: RSS ಪಥ ಸಂಚಲನ – ಚಿತ್ತಾಪುರದಲ್ಲಿ ಹಾಕಿದ್ದ ಬ್ಯಾನರ್, ಬಂಟಿಂಗ್ ತೆರವು
ಚಿತ್ತಾಪುರ ತಹಶೀಲ್ದಾರ್ ಕೇಳಿರುವ 12 ಪ್ರಶ್ನೆಗಳು ಏನು?
1.ಪಥ ಸಂಚಲನಲ್ಲಿ ಎಷ್ಟು ಜನ ಭಾಗವಹಿಸುತ್ತಿರಿ? ಆ ವಿವರ ನೀಡಿ?
2.ಪಥ ಸಂಚಲನದಲ್ಲಿ ಚಿತ್ತಾಪೂರ ತಾಲೂಕು ಹೊರತು ಪಡಿಸಿ ಬೇರೆ ತಾಲೂಕಾ ಅಥವಾ ಬೇರೆ ಜಿಲ್ಲೆಯ ಎಷ್ಟು ಜನರು ಭಾಗವಹಿಸುತ್ತಾರೆ?
3.ಬಜಾಜ ಕಲ್ಯಾಣ ಮಂಟಪ ಆವರಣದ ಮಾಲೀಕರ ಅನುಮತಿ ಪತ್ರ ಸಲ್ಲಿಸಿಲ್ಲ ಯಾಕೆ?
4. ಶಾಂತಿ ಮತ್ತು ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟಾಗದಂತೆ ಮುಂಜಾಗೃತಾ ಕ್ರಮ ವಹಿಸುವ ಒಪ್ಪಿಗೆ ಪತ್ರ ಸಲ್ಲಿಸಿಲ್ಲ ಯಾಕೆ?
5. ಲಾಠಿ ಅಥವಾ ಆಯುಧಗಳ ಕುರಿತು ಮಾಹಿತಿ ನೀಡಿಲ್ಲ ಯಾಕೆ?
6. ತಮ್ಮ ಸಂಘದ ನೋಂದಣಿ ಪ್ರಮಾಣ ಪತ್ರದ ದೃಢೀಕರಣ ಪ್ರತಿ ಸಲ್ಲಿಸಿಲ್ಲ ಯಾಕೆ?
7. ಸದರಿ ಕಾರ್ಯಕ್ರಮದಲ್ಲಿ ಯಾರು ಮುಖ್ಯ ಭಾಷಣಕಾರರು ಭಾಗವಹಿಸುವದರ ಬಗ್ಗೆ ಅವರ ಪೂರ್ಣ ಮಾಹಿತಿ ಸಲ್ಲಿಸಿಲ್ಲ ಯಾಕೆ?
8. ಪಥ ಸಂಚಲನದ ಕಾರ್ಯಕ್ರಮ ಕುರಿತು ತುರ್ತು ಸಂವಹನ ಕೈಗೊಳ್ಳಲು ಜವಾಬ್ದಾರಿಯುತ 10 ಜನ ಸ್ಥಳೀಯ ಮುಖಂಡರ ಮಾಹಿತಿ ನೀಡಿಲ್ಲ ಯಾಕೆ?
9. ಈ ಕಾರ್ಯಕ್ರಮವು ಸ್ಥಳಿಯ ಚಿತ್ತಾಪೂರ ಘಟಕದಿಂದ ಕೈಗೊಳ್ಳುತ್ತಿದ್ದಿರೋ ಅಥವಾ ಮತ್ಯಾವ ಘಟಕದಿಂದ ಕೈಗೊಳ್ಳುತ್ತಿರುವ ಬಗ್ಗೆ ಸ್ಪಷ್ಟಿಕರಣ ನೀಡಿ
10. ಈ ಕಾರ್ಯಕ್ರಮವು ಮಧ್ಯಾಹ್ನ 3 ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ದು ಆದರೆ ಮುಕ್ತಾಯದ ಸಮಯದ ಬಗ್ಗೆ ಮಾಹಿತಿ ನೀಡಿಲ್ಲ ಯಾಕೆ?
11. ಪಥ ಸಂಚಲನಾ ಕಾರ್ಯಕ್ರಮದ ಮೂಲ ಉದ್ದೇಶದ ಏನು? ವಿವರ ನೀಡಿ.
12. ಉಲ್ಲೇಖದ ತಮ್ಮ ಮನವಿ ಪತ್ರದಲ್ಲಿ ಅಕ್ಟೋಬರ್ 17ರಂದು ವಿನಂತಿ ಪತ್ರ ನೀಡಿರುತ್ತೇವೆ ಎಂದು ತಿಳಿಸಿದ್ದೀರಿ. ಆದರೆ ತಾವು ನಮ್ಮ ಕಛೇರಿಗೆ ಯಾವುದೇ ಮನವಿ ಪತ್ರ ಸಲ್ಲಿಸಿಲ್ಲ.
ಕಲಬುರಗಿ: ಒಂದೆಡೆ ಬುದ್ದ, ಬಸವ ಅಂಬೇಡ್ಕರ್ ತತ್ವದ ಬಗ್ಗೆ ಮಾತಾಡುವ ಕಾಂಗ್ರೆಸ್ (Congress) ಮುಖಂಡ ಮಲ್ಲಿಕಾರ್ಜುನ ಖರ್ಗೆ (Mallikarjun Kharge), ಬೇಡ ಜಂಗಮರಿಗೆ ಸಿಗಬೇಕಾದ ನ್ಯಾಯಯುತ ಎಸ್ಸಿ ಪ್ರಮಾಣ ಪತ್ರಕ್ಕೆ ಅಡ್ಡಗಾಲು ಹಾಕುತ್ತಿದ್ದಾರೆ ಎಂದು ಬಿಜೆಪಿ (BJP) ಚಿತ್ತಾಪೂರ (Chittapur) ಟಿಕೆಟ್ ಆಕಾಂಕ್ಷಿ ಮಣಿಕಂಠ ರಾಠೋಡ (Manikanta Rathod) ಆರೋಪಿಸಿದ್ದಾರೆ.
ಕಲಬುರಗಿಯಲ್ಲಿ (Kalaburagi) ಸುದ್ದಿಗೋಷ್ಠಿ ನಡೆಸಿದ ಅವರು, 1995ರಲ್ಲಿ ಅಂದಿನ ಮುಖ್ಯಮಂತ್ರಿ ದೇವೇಗೌಡರಿಗೆ, ಮಲ್ಲಿಕಾರ್ಜುನ ಖರ್ಗೆ ಬೇಡ ಜಂಗಮ ಸಮುದಾಯಕ್ಕೆ ಎಸ್ಸಿ ಜಾತಿ ಪ್ರಮಾಣ ಪತ್ರ ನೀಡದಂತೆ ಪತ್ರ ಬರೆದಿದ್ದರು ಎಂದು ಈ ಹಿಂದೆ ಬರೆದಿದ್ದ ಪತ್ರವನ್ನು ಬಿಡುಗಡೆ ಮಾಡಿದರು. ಇದನ್ನೂ ಓದಿ: ಅನೈತಿಕ ಸಂಬಂಧ ಶಂಕೆ, ಪತಿಯಿಂದ ಪತ್ನಿ ಕೊಲೆ: ಆರೋಪಿ ಬಂಧನ
ಬೇಡ ಜಂಗಮ ಮನೆ ಮನೆಗೆ ಬಿಕ್ಷೆ ಬೇಡಿ ಬದುಕುತ್ತಿರುವ ಸಮುದಾಯ. ಇಂತಹ ಸಮುದಾಯಕ್ಕೆ ಸಿಗಬೇಕಾದ ಹಕ್ಕು ನೀಡುವಲ್ಲಿ ಮಲ್ಲಿಕಾರ್ಜುನ ಖರ್ಗೆ ಅಡ್ಡಗಾಲು ಹಾಕುತ್ತಿದ್ದಾರೆ. ಅವರಿಗೆ ಸಾಮಾಜಿಕ ನ್ಯಾಯದ ಮೇಲೆ ನಂಬಿಕೆ ಮತ್ತು ವಿಶ್ವಾಸ ಇಲ್ಲ ಎಂದರು.
ಆರ್ಥಿಕವಾಗಿ ಹಿಂದುಳಿದ ಬೇಡ ಜಂಗಮರಿಗೆ ಸರ್ಕಾರ ಎಸ್ಸಿ ಜಾತಿ ಪ್ರಮಾಣ ಪತ್ರ ನೀಡಬೇಕು. ಅಭಿವೃದ್ಧಿ ಹೊಂದಿದವರೇ ಇನ್ನೆಷ್ಟು ಅಭಿವೃದ್ಧಿ ಹೊಂದಬೇಕು. ಹಿಂದುಳಿದವರಿಗೂ ಅವಕಾಶ ಬಿಟ್ಟುಕೊಡಬೇಕಲ್ಲವೇ ಎಂದು ಪ್ರಶ್ನಿಸಿದರು.
ನಾನು ಮೀಸಲಾತಿ ಬಿಟ್ಟುಕೊಡಲು ಸಿದ್ದನಿದ್ದೇನೆ. ಮಲ್ಲಿಕಾರ್ಜುನ ಖರ್ಗೆ ಮೀಸಲಾತಿ ಬಿಟ್ಟುಕೊಡಲು ಸಿದ್ದರಿದ್ದಾರಾ ಎಂದು ರಾಠೋಡ್ ಸವಾಲು ಹಾಕಿದರು. ನಾನು ಶಾಸಕನಾದರೆ ಬೇಡ ಜಂಗಮರ ಪರ ಹೋರಾಟ ನಡೆಸುತ್ತೇನೆ ಎಂದು ಈ ಸಂದರ್ಭದಲ್ಲಿ ಆಶ್ವಾಸನೆ ನೀಡಿದರು. ಇದನ್ನೂ ಓದಿ: ಹಾಸನದ ಜೆಡಿಎಸ್ ಟಿಕೆಟ್ ಗೊಂದಲಕ್ಕೆ ತೆರೆ ಎಳೆಯಲು ಹೆಚ್‌ಡಿಕೆ ಮಾಸ್ಟರ್ ಪ್ಲಾನ್
LIVE TV
[brid partner=56869869 player=32851 video=960834 autoplay=true]
ಕಲಬುರಗಿ: ನಿಂತ ರೈಲಿನ ಕೆಳಗಿನಿಂದ ಹಳಿ ದಾಟಲು ಹೋಗಿ ರೈಲಿನ ಅಡಿ ಸಿಲುಕಿದ್ದ ಅಜ್ಜಿಯೊಬ್ಬಳು ರೈಲಿನ ಎಲ್ಲಾ ಬೋಗಿಗಳು ಹೋಗುವವರೆಗೆ ತಲೆ ಬಗ್ಗಿಸಿ ಕುಳಿತು ಬದುಕುಳಿದ ಅಪರೂಪದ ಘಟನೆ ಜಿಲ್ಲೆಯ ಚಿತ್ತಾಪೂರ ರೈಲ್ವೇ ಸ್ಟೇಷನ್‍ನಲ್ಲಿ ನಡೆದಿದೆ.
ಚಿತ್ತಾಪೂರ ರೈಲ್ವೇ ಸ್ಟೇಷನ್ ಪಕ್ಕದ ತಾಂಡಾ ನಿವಾಸಿ 70 ವರ್ಷದ ಮಾನಿಬಾಯಿ ರೈಲು ಬೋಗಿಗಳ ಕೆಳಗೆ ಸಿಲುಕಿದ್ದ ಅಜ್ಜಿ. ಈ ದೃಶ್ಯವನ್ನು ಸ್ಥಳದಲ್ಲಿದ್ದ ಕೆಲವರು ತಮ್ಮ ಮೊಬೈಲ್‍ನಲ್ಲಿ ಸರೆ ಹಿಡಿದು, ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ವಾಟ್ಸಪ್, ಫೇಸ್‍ಬುಕ್ ಸೇರಿದಂತೆ ಅನೇಕ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಚಿತ್ತಾಪೂರ ರೈಲ್ವೇ ಸ್ಟೇಷನ್‍ನಿಂದ ಪಕ್ಕದ ತಾಂಡಾಗೆ ಹೋಗಲು ಓವರ್ ಬ್ರಿಡ್ಜ್ ಇಲ್ಲ. ಹೀಗಾಗಿ ಅಜ್ಜಿ ಮಾನಿಬಾಯಿ ಹೇಗೂ ರೈಲು ನಿಂತಿದೆ, ಕೆಳಗಡೆಯಿಂದಲೇ ಹಳಿ ದಾಟಿದರಾಯಿತೆಂದು ರೈಲಿನ ಕೆಳಗಡೆ ಹೋಗಿದ್ದಾಳೆ. ಇನ್ನೇನೂ ಹಳಿ ದಾಟಬೇಕು ಎನ್ನುವಷ್ಟರಲ್ಲಿ ರೈಲು ಹೊರಡು ಹಾರ್ನ್ ಕೇಳಿಸಿದೆ. ಅಬ್ಬಾ! ಜೀವ ಹೋಗಿಯೆಂದು ಅಜ್ಜಿ ಕಣ್ಣು ಮುಚ್ಚಿ ಹಳಿಯ ಮಧ್ಯದಲ್ಲಿ ತಲೆ ತಗ್ಗೆಸಿ ನೆಲಕ್ಕೊರಗಿದ್ದಾಳೆ.
ಅಕ್ಕಪಕ್ಕದವರು ವಿಪರೀತವಾಗಿ ಕೂಗಿಕೊಂಡಿದ್ದಾರೆ. ಆದರೂ ಮಾನಿಬಾಯಿ ರೈಲು ಹೋಗುವವರೆಗೂ ಗಟ್ಟಿಯಾಗಿ ಕುಳಿತು ಸುರಕ್ಷಿತವಾಗಿ ಹೊರಬಂದಿದ್ದಾಳೆ. ಅಜ್ಜಿಯ ಗಟ್ಟಿತನ ನೆರೆದಿದ್ದವರಿಗೆ ಅಚ್ಚರಿ ಮೂಡಿಸಿದೆ. ಗಣೇಶ ಚತುರ್ದಶಿ ದಿನವೇ ಅಜ್ಜಿ ಪವಾಡ ಸದೃಶ ರೀತಿಯಲ್ಲಿ ಬದುಕುಳಿದಿರುವುದರಿಂದ ವಿಜ್ಞೆಶ್ವರನೇ ಈ ಅಜ್ಜಿಯನ್ನು ಕಾಪಾಡಿದ್ದಾನೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ.