Tag: ಚಿತಾ ಭಸ್ಮ

  • ರತನ್ ಟಾಟಾ ಚಿತಾ ಭಸ್ಮವನ್ನು ಅರಬ್ಬಿ ಸಮುದ್ರದಲ್ಲಿ ವಿಸರ್ಜಿಸಲು ನಿರ್ಧಾರ

    ರತನ್ ಟಾಟಾ ಚಿತಾ ಭಸ್ಮವನ್ನು ಅರಬ್ಬಿ ಸಮುದ್ರದಲ್ಲಿ ವಿಸರ್ಜಿಸಲು ನಿರ್ಧಾರ

    ಮುಂಬೈ: ಖ್ಯಾತ ಕೈಗಾರಿಕೋದ್ಯಮಿ ರತನ್ ಟಾಟಾ (Ratan Tata) ಅವರ ಚಿತಾ ಭಸ್ಮವನ್ನು (Ashes) ಅರಬ್ಬಿ ಸಮುದ್ರದಲ್ಲಿ (Arabian Sea) ವಿಸರ್ಜಿಸಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

    ಅನಾರೋಗ್ಯದಿಂದ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ (Breach Candy Hospital) ದಾಖಲಾಗಿದ್ದ ಟಾಟಾ ಸಮೂಹದ ಮುಖ್ಯಸ್ಥ ರತನ್ ಟಾಟಾ (86) ಅ.9 ರಂದು ಕೊನೆಯುಸಿರೆಳೆದರು. ಅ.10 ರಂದು ಅಂತಿಮ ವಿಧಿವಿಧಾನಗಳನ್ನು ಮುಂಬೈನ (Mumbai) ಚಿತಾಗಾರದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಗಿತ್ತು. ಇದನ್ನೂ ಓದಿ: ಸ್ಯಾಂಡಲ್‌ವುಡ್‌ ನಟಿ ಅಮೂಲ್ಯ ಸಹೋದರ ದೀಪಕ್‌ ಅರಸ್‌ ನಿಧನ

    ಇದೀಗ ಅವರ ಆಸೆಯಂತೆ ಅವರ ಚಿತಾ ಭಸ್ಮವನ್ನು ಅರಬ್ಬಿ ಸಮುದ್ರದಲ್ಲಿ ವಿಸರ್ಜಿಸುವುದಾಗಿ ಟಾಟಾ ಕುಟುಂಬ ನಿರ್ಧಾರ ಕೈಗೊಂಡಿದೆ. ಮುಂಬೈನ ಗೇಟ್ ವೇ ಆಫ್ ಇಂಡಿಯಾದಿಂದ (Gate Way Of India) ಹಡಗಿನಲ್ಲಿ ಮೆರವಣಿಗೆಯ ಮೂಲಕ ಚಿತಾ ಭಸ್ಮವನ್ನು ವಿಸರ್ಜಿಸಲಾಗುವುದು. ಈ ಸಂದರ್ಭದಲ್ಲಿ ಅವರ ಕುಟುಂಬ, ಅವರ ಸ್ನೇಹಿತರು ಸೇರಿದಂತೆ ಇನ್ನಿತರರು ಭಾಗಿಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ರತನ್ ಟಾಟಾ ಮುಂಬೈ ನಗರದೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿದ್ದರು. ಜೊತೆಗೆ ತಮ್ಮ ಜೀವನದ ಬಹುಪಾಲು ದಿನಗಳನ್ನು ಅವರು ಅಲ್ಲಿಯೇ ಕಳೆದಿದ್ದು, ಟಾಟಾ ಗ್ರೂಪ್ಸ್ (Tata Groups) ಎಂಬ ವ್ಯವಹಾರ ಸಾಮ್ರಾಜ್ಯಕ್ಕೆ ಮುಂಬೈನಲ್ಲಿ ಅಡಿಪಾಯ ಹಾಕಿದ್ದರು. ಅರಬ್ಬಿ ಸಮುದ್ರದ ನೀರು ಪ್ರಶಾಂತವಾದ ನೀರು. ಒಬ್ಬ ವ್ಯಕ್ತಿಗೆ ಅಂತಿಮ ವಿಶ್ರಾಂತಿಯನ್ನು ನೀಡುತ್ತದೆ ಎಂಬ ಅಭಿಪ್ರಾಯದೊಂದಿಗೆ ಈ ನಿರ್ಧಾರ ಕೈಗೊಳ್ಳಲಾಗಿದೆ.ಇದನ್ನೂ ಓದಿ: ಭಾರತದಲ್ಲಿರುವ ಶೇಖ್ ಹಸೀನಾ ವಿರುದ್ಧ ಅರೆಸ್ಟ್‌ ವಾರೆಂಟ್‌ ಜಾರಿ

  • ಇಂದು ಸಿದ್ದೇಶ್ವರ ಶ್ರೀಗಳ ಚಿತಾಭಸ್ಮ ವಿಸರ್ಜನೆ- ಭಕ್ತರಿಗೆ ಕೊಡಲ್ಲ ಪೂಜ್ಯರ ಚಿತಾಭಸ್ಮ

    ಇಂದು ಸಿದ್ದೇಶ್ವರ ಶ್ರೀಗಳ ಚಿತಾಭಸ್ಮ ವಿಸರ್ಜನೆ- ಭಕ್ತರಿಗೆ ಕೊಡಲ್ಲ ಪೂಜ್ಯರ ಚಿತಾಭಸ್ಮ

    ವಿಜಯಪುರ: ಸರಳತೆಯ ಸ್ವರೂಪ ಶ್ರೀ ಸಿದ್ದೇಶ್ವರ ಶ್ರೀ (Siddeshwara Sri) ಗಳ ಚಿತೆಯ ದರ್ಶನಕ್ಕೆ ಭಕ್ತ ಸಾಗರ ಹರಿದು ಬರುತ್ತಿದೆ. ಭಕ್ತರಿಗೆ ಚಿತೆಯ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಶ್ರೀಗಳ ಮುಂದಿನ ಕಾರ್ಯಕ್ರಮಗಳ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ.

    ವಿಜಯಪುರ (Vijayapura) ದ ಜ್ಞಾನ ಯೋಗಾಶ್ರಮದ ನಡೆದಾಡುವ ದೇವರು ಸಿದ್ದೇಶ್ವರ ಶ್ರೀಗಳ ಅಂತ್ಯಸಂಸ್ಕಾರದ ಸ್ಥಳದ ದರ್ಶನಕ್ಕೆ ಭಕ್ತರು ಸಾಲು ಗಟ್ಟಿ ಆಗಮಿಸುತ್ತಿದ್ದಾರೆ. ಇತ್ತ ಶ್ರೀಗಳ ಚಿತಾಭಸ್ಮವನ್ನು ವಿಸರ್ಜಿಸುವ ಬಗ್ಗೆ ಇತರೆ ಶ್ರೀಗಳು ಚರ್ಚೆ ನಡೆಸುತ್ತಿದ್ದಾರೆ. ಗುರುವಾರ ಮೂರನೇ ದಿನದ ಕಾರ್ಯಕ್ರಮ ನಡೆಯಲಿದೆ. ಚಿತೆಗೆ ಹಾಲು, ನೀರು ಹಾಕಿ ಮಂತ್ರಗಳೊಂದಿಗೆ ಪೂಜೆ ಸಲ್ಲಿಸಿ ಮುಂದಿನ ಕಾರ್ಯಕ್ರಮ ಮಾಡಲಾಗುತ್ತೆ ಎಂದು ಜ್ಞಾನಯೋಗಾಶ್ರಮದ ಅಧ್ಯಕ್ಷ ಬಸವಲಿಂಗ ಸ್ವಾಮೀಜಿ ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಪಂಚಭೂತಗಳಲ್ಲಿ ಸರಳತೆಯ ಶತಮಾನದ ಸಂತ ಸಿದ್ದೇಶ್ವರ ಶ್ರೀ ಲೀನ

    ಮೂರನೇ ದಿನವಾದ ಇಂದು (ಗುರುವಾರ) ಮುಂದಿನ ವಿಧಿ-ವಿಧಾನ ಕಾರ್ಯಕ್ರಮಗಳು ನಡೆಯಲಿವೆ. ಚಿತೆಯನ್ನ ಯಾವ ನದಿಯಲ್ಲಿ ಬಿಡುವುದು, ಯಾವಾಗ ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಚರ್ಚಿಸಿ ನಿರ್ಧರಿಸಲಾಗುವುದು. ಅಲ್ಲದೆ ಶ್ರೀಗಳ ಚಿತೆಯ ಭಸ್ಮವನ್ನ ಭಕ್ತರಿಗೆ ನೀಡುತ್ತೇವೆ ಅಂತಾ ಕನ್ನೇರಿ ಮಠದ ಕಾಡಸಿದ್ದೇಶ್ವರ ಶ್ರೀಗಳು ಹೇಳಿದ್ದರು. ಆದ್ರೆ ಯಾರಿಗೂ ಚಿತಾ ಭಸ್ಮವನ್ನ ಕೊಡಲ್ಲ. ವಿಭೂತಿಯನ್ನ ಭಕ್ತರು ತಂದು ಚಿತೆಯ ಹತ್ತಿರ ಇಟ್ಟು ಅದನ್ನೇ ಅವರು ಮನೆಗಳಲ್ಲಿ ಪೂಜಿಸಬೇಕು ಅಂತಾ ಬಸವಲಿಂಗ ಸ್ವಾಮೀಜಿ ತಿಳಿಸಿದ್ದಾರೆ.

    ಒಟ್ಟಾರೆ ಶ್ರೀಗಳ ಚಿತೆಯ ಸ್ಥಳದ ದರ್ಶನಕ್ಕೆ ಭಕ್ತ ಸಾಗರ ಹರಿದು ಬರ್ತಿದ್ದು, ಶ್ರೀಗಳ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಗ್ತಿದೆ. ಇದನ್ನೂ ಓದಿ: ಸಿದ್ದೇಶ್ವರ ಶ್ರೀಗಳ ಅಂತಿಮ ದರ್ಶನಕ್ಕೆ ವೃದ್ಧೆಯನ್ನು ಹೆಗಲ ಮೇಲೆ ಹೊತ್ತು ತಂದ ವ್ಯಕ್ತಿ!

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k