Tag: ಚಿಕ್ಕೋಡಿ 3 ಕರು

  • ಒಂದೇ ಬಾರಿಗೆ 3 ಕರುಗಳಿಗೆ ಜನ್ಮ ನೀಡಿ ಅಚ್ಚರಿ ಮೂಡಿಸಿದ ಜವಾರಿ ಹಸು!

    ಒಂದೇ ಬಾರಿಗೆ 3 ಕರುಗಳಿಗೆ ಜನ್ಮ ನೀಡಿ ಅಚ್ಚರಿ ಮೂಡಿಸಿದ ಜವಾರಿ ಹಸು!

    ಚಿಕ್ಕೋಡಿ: ಸಾಮಾನ್ಯವಾಗಿ ಹಸುಗಳು ಒಂದು ಅಥವಾ ಎರಡು ಕರುಗಳಿಗೆ ಜನ್ಮ ನೀಡಿರುವುದನ್ನು ಕೇಳಿದ್ದೇವೆ, ನೋಡಿದ್ದೇವೆ. ಆದರೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನಲ್ಲಿ ಒಂದು ಜವಾರಿ ಹಸು ಮೂರು ಕರುಗಳಿಗೆ ಜನ್ಮ ನೀಡಿ ಅಚ್ಚರಿ ಮೂಡಿಸಿದೆ.

    ಅಥಣಿ ತಾಲೂಕಿನ ಖಿಳೇಗಾಂವ್ ಗ್ರಾಮದ ಕುಮಾರ್ ಸದಾಶಿವ ತಗಲಿ ಎಂಬ ರೈತರಿಗೆ ಸೇರಿದ ಹಸು ಆರೋಗ್ಯಕರ ಮೂರು ಕರುಗಳಿಗೆ ಜನ್ಮ ನೀಡಿದೆ. ಒಂದು ಹೆಣ್ಣು ಹಾಗೂ ಎರಡು ಹೋರಿ ಕರುಗಳಿಗೆ ಜನ್ಮ ನೀಡಿರುವುದು ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಇದನ್ನೂ ಓದಿ: ಅಪ್ಪುಗೆ ಅವಮಾನ ಮಾಡೋ ಉದ್ದೇಶ ಯಾವ ಕನ್ನಡಿಗರಿಗೂ ಇರಲ್ಲ: ರಚಿತಾ ರಾಮ್

    ಜವಾರಿ ಆಕಳು ಮೂರು ಕರುಗಳಿಗೆ ಜನ್ಮ ನೀಡಿದ್ದು ಅಪರೂಪವಾಗಿದೆ. ನಮ್ಮ ಸುತ್ತಮುತ್ತಲಿನ ಗ್ರಾಮದಲ್ಲಿ ಈ ರೀತಿ ನೋಡಿಯೂ ಇಲ್ಲ, ಕೇಳಿಯೂ ಇಲ್ಲ. ಆದರೆ ಜರ್ಸಿ ಹಸುಗಳು ಎರಡು ಕರುಗಳಿಗೆ ಜನ್ಮ ನೀಡಿರುವುದನ್ನು ಕೇಳಿದ್ದೇವೆ. ನಮ್ಮ ಜವಾರಿ ಆಕಳು ಮೂರು ಕರುಗಳನ್ನು ಹಾಕಿರುವುದು ತುಂಬಾ ಅಚ್ಚರಿಯೊಂದಿಗೆ ಸಂತೋಷ ತಂದಿದೆ ಎಂದು ರೈತ ಕುಮಾರ ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ತಾಂತ್ರಿಕ ಕಾರಣದಿಂದ ಎಡವಟ್ಟು ಆಗಿದೆ: ಅಕುಲ್ ಬಾಲಾಜಿ