Tag: ಚಿಕ್ಕಾಬಳ್ಳಾಪುರ

  • ವಿಚ್ಛೇದನಕ್ಕೆ ಬಂದ ಜೋಡಿಗಳನ್ನು ಒಂದು ಮಾಡಿದ ನ್ಯಾಯಾಧೀಶರು

    ವಿಚ್ಛೇದನಕ್ಕೆ ಬಂದ ಜೋಡಿಗಳನ್ನು ಒಂದು ಮಾಡಿದ ನ್ಯಾಯಾಧೀಶರು

    -ಒಂದೇ ದಿನ 3 ಜೋಡಿಗಳನ್ನ ಒಂದು ಮಾಡಿದ ನ್ಯಾಯಾಧೀಶರು
    -ನ್ಯಾಯಾಲಯದಲ್ಲೇ ಹಾರ ಬದಲಾಯಿಸಿ ಮತ್ತೆ ಒಂದಾದ ಜೋಡಿಗಳು

    ಚಿಕ್ಕಬಳ್ಳಾಪುರ: ನೂರಾರು ಮಂದಿ ಎದುರು ಶಾಸ್ತ್ರೋಕ್ತವಾಗಿ ಮದುವೆಯಾಗಿ ಸತಿ ಪತಿಗಳಾಗಿ ಸಹ ಜೀವನ ನಡೆಸುತ್ತಿರುತ್ತಾರೆ. ಆದರೆ ಅವರ ಜೀವನದಲ್ಲಾದ ಕೆಲ ಘಟನೆಗಳಿಂದ ನಾನೊಂದು ತೀರ, ನೀನೊಂದು ತೀರ ಅಂತ ಬೇರೆ, ಬೇರೆಯಾಗಿ ಎಷ್ಟೋ ಮಂದಿ ನ್ಯಾಯಾಲಯದ ಮೊರೆ ಹೋಗುತ್ತಾರೆ. ಆದರೆ ನ್ಯಾಯಾಧೀಶರು ವಿಚ್ಛೇದನ ನೀಡದೇ ಬುದ್ಧಿ ಮಾತುಗಳನ್ನು ಹೇಳಿ ಮತ್ತೆ ಸತಿ ಪತಿಗಳಿಬ್ಬರು ಸಹಬಾಳ್ವೆಯ ಜೀವನ ನಡೆಸುವಂತೆ ದೂರಾವಾಗಿದ್ದ ಜೋಡಿಗಳನ್ನು ಒಂದು ಮಾಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲಾ ನ್ಯಾಯಾಲಯದಲ್ಲಿ ನಡೆದಿದೆ.

    ಬೆಂಗಳೂರು ಮೂಲದ ಎಂಬಿಎ ಪದವೀಧರೆ ಉಷಾ.ಜಿ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ ದೇವರಕೊಂಡಹಳ್ಳಿ ಗ್ರಾಮದ ನಿವಾಸಿ ಬಿ.ಕಾಂ ಪದವೀಧರ ಮುನಿರಾಜು ಜೋಡಿ, ಎರಡು ವರ್ಷಗಳ ಹಿಂದೆ ಸಾವಿರಾರು ಜನರ ಮುಂದೆ ಅದ್ದೂರಿ ಮಂಟಪದಲ್ಲಿ ಸಪ್ತಪದಿ ತುಳಿದಿದ್ದರು. ಆದರೆ ಇಬ್ಬರ ಮಧ್ಯೆ ಉಂಟಾದ ವೈಮನಸ್ಸು, ಇಗೋ, ಇವರ ಬದುಕಿನಲ್ಲಿ ನೆಮ್ಮದಿಯನ್ನು ಹಾಳು ಮಾಡಿತ್ತು. ಸುಖ ಸಂಸಾರ ಮಾಡುತ್ತಿದ್ದ ಇವರು ಪರಸ್ಪರ ನೀನಾ ನಾನಾ ಅಂತ ಇಗೋದಿಂದ ಒಬ್ಬರಿಗೊಬ್ಬರು ದೂರವಾಗಿದ್ದರು. ಉಷಾ ಗಂಡ ಬೇಡವೇ ಬೇಡ ಒಬ್ಬಂಟಿ ಜೀವನ ಸಾಗಿಸುತ್ತೇನೆ. ನಾನೇನು ಕಡಿಮೆ ಇಲ್ಲ. ನಾನು ಎಂಬಿಎ ಪದವಿಧರೆ ಅಂತ ಬೀಗಿ ಗಂಡನಿಂದ ದೂರವಿದ್ದಳು. ಆದರೆ ಮುನಿರಾಜು, ಪತ್ನಿಯ ಜೊತೆ ಸೇರಲು ಚಿಕ್ಕಬಳ್ಳಾಪುರ ನ್ಯಾಯಾಲಯದ ಮೊರೆ ಹೋಗಿದ್ದರು. ಈ ಬಗ್ಗೆ ಇಂದು ನಡೆದ ಲೋಕ ಅದಾಲತ್‍ನಲ್ಲಿ ನ್ಯಾಯಾಧೀಶರಾದ ವಿವೇಕಾನಂದ ಪಂಡಿತ್ ಹಾಗೂ ನ್ಯಾಯಧೀಶ ಲಕ್ಷ್ಮಿಕಾಂತ್ ಮಿಷ್ಕಿನ್, ಜೋಡಿಗೆ ಬುದ್ದಿ ಹೇಳಿ ಮತ್ತೆ ಒಂದುಗೂಡಿಸಿದ್ದಾರೆ.

    ಇನ್ನೂ ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲೂಕಿನ ದೇವಗಾನಹಳ್ಳಿ ನಿವಾಸಿ ರಮೇಶ ಹಾಗೂ ಚಿಕ್ಕಬಳ್ಳಾಪುರ ತಾಲೂಕಿನ ಅರಸನಹಳ್ಳಿ ನಿವಾಸಿ ದೀಪಾ, ಮದುವೆಯಾಗಿ ಬರೋಬ್ಬರಿ 18 ವರ್ಷಗಳು ಆಗಿವೆ. ಈ ದಂಪತಿಗೆ ಇಬ್ಬರು ಮುದ್ದಾದ ಮಕ್ಕಳಿದ್ದಾರೆ. ಆದರೆ ಒಬ್ಬರಿಗೊಬ್ಬರು ಅರ್ಥ ಮಾಡಿಕೊಳ್ಳದ ಕಾರಣ, ಪತ್ನಿ ಡೈವೊರ್ಸ್‍ಗೆ ನ್ಯಾಯಲಯದ ಮೊರೆ ಹೋಗಿದ್ದಳು. ಈ ಜೋಡಿಗೂ ನ್ಯಾಯಾಧೀಶರುಗಳು ಬುದ್ದಿ ಹೇಳಿ, ಸಹಬಾಳ್ವೆಗೆ ಸೂಚಿಸಿದರು. ಇದರಿಂದ ಮತ್ತೆ ಜೋಡಿ ಸಹಜೀವನಕ್ಕೆ ಒಪ್ಪಿಕೊಂಡರು. ಇದನ್ನೂ ಓದಿ: ತಮಿಳುನಾಡು ಸಚಿವರ ಕಾರಿಗೆ ಚಪ್ಪಲಿ ಎಸೆತ – 5 ಬಿಜೆಪಿ ಕಾರ್ಯಕರ್ತರ ಬಂಧನ

    ಮತ್ತೊಂದೆಡೆ ಜಿಲ್ಲೆಯ ಗುಡಿಬಂಡೆಯ ಆಶಾ ಹಾಗೂ ವಿನೋದ್ ಕುಮಾರ್ ದಂಪತಿ, ಇನ್ನೂ ಇಬ್ಬರು ಒಬ್ಬರಿಗೊಬ್ಬರು ಸುಖ ಸಂಸಾರ ಸಾಗಿಸಲು ಸಾಧ್ಯವೇ ಇಲ್ಲ ಅಂತ ಡೈವೋರ್ಸ್ ಪಡೆಯಲು ನ್ಯಾಯಾಲಯದ ಮೊರೆ ಹೋಗಿದ್ದರು. ಆದರೆ ನ್ಯಾಯಾಧೀಶೆ ಶ್ರೀಮತಿ ಅರುಣಾಕುಮಾರಿ, ಇಬ್ಬರ ಮನವೊಲಿಸಿ ನ್ಯಾಯಾಲಯದಲ್ಲಿಯೇ, ಇಬ್ಬರನ್ನು ಮತ್ತೆ ಒಂದು ಮಾಡಿದರು. ಒಟ್ಟಿನಲ್ಲಿ ಸುಖ ಜೀವನದ ಕನಸ್ಸು ಕಂಡು, ಸಾವಿರಾರು ಜನರ ಸಮ್ಮುಖದಲ್ಲೆ ಸಪ್ತಪದಿ ತುಳಿದು ಕೊನೆಗೆ ಸಂಸಾರದ ಸಹವಾಸವೇ ಬೇಡ ಎಂದುಕೊಂಡಿದ್ದ ಮೂರು ಜೋಡಿಗಳು, ಈಗ ಚಿಕ್ಕಬಳ್ಳಾಪುರ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರುಗಳ ಪ್ರಯತ್ನದಿಂದ ಒಬ್ಬರಿಗೊಬ್ಬರು ಮತ್ತೆ ಒಂದಾಗಿ ಇತರರಿಗೂ ಮಾದರಿಯಾಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಚಿಕ್ಕಬಳ್ಳಾಪುರದಲ್ಲಿ ಸೋಂಕಿತರ ಸಂಪರ್ಕದಲ್ಲಿದ್ದ 50 ಮಂದಿಗಿಲ್ಲ ಕೊರೊನಾ

    ಚಿಕ್ಕಬಳ್ಳಾಪುರದಲ್ಲಿ ಸೋಂಕಿತರ ಸಂಪರ್ಕದಲ್ಲಿದ್ದ 50 ಮಂದಿಗಿಲ್ಲ ಕೊರೊನಾ

    ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಕೊರೊನಾ ಸೋಂಕು ತಗುಲಿರುವ ಶಂಕೆಯ ಮೇರೆಗೆ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದ 50 ಮಂದಿಯ ವರದಿಯೂ ಕೊರೊನಾ ನೆಗೆಟಿವ್ ಬಂದಿದೆ ಎಂದು ಜಿಲ್ಲಾಧಿಕಾರಿ ಆರ್. ಲತಾ ಅವರು ತಿಳಿಸಿದ್ದಾರೆ.

    ಜಿಲ್ಲೆಯ ಗೌರಿಬಿದನೂರಿನಲ್ಲಿ 10 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಅವರಲ್ಲಿ ಒರ್ವ 70 ವರ್ಷದ ವೃದ್ಧೆ ಮೃತಪಟ್ಟಿದ್ದರು. ಹೀಗಾಗಿ 10 ಮಂದಿ ಸೊಂಕಿತರಿಂದ ಪ್ರಥಮ ಸಂಪರ್ಕಕ್ಕೆ ಗುರಿಯಾಗಿದ್ದ ಅವರ ಕುಟುಂಬದ ಸದಸ್ಯರಲ್ಲಿ 38 ಮಂದಿಯನ್ನ ಹೈ ರಿಸ್ಕ್ ಕ್ವಾರಂಟೈನ್ ಎಂದು ಗುರುತಿಸಿ ಪರೀಕ್ಷಗೆ ಒಳಪಡಿಸಲಾಗಿತ್ತು. ತದನಂತರ ಈ 28 ಮಂದಿ ಜೊತೆ ಸಂಪರ್ಕಕ್ಕೆ ಒಳಗಾಗಿದ್ದ 12 ಮಂದಿಯನ್ನ ಸಹ ಹಾಸ್ಪಿಟಲ್ ಕ್ವಾರಂಟೈನ್ ಮಾಡಲಾಗಿತ್ತು.

    ಪ್ರಥಮ ಸಂಪರ್ಕಿತರ 38 ಮಂದಿಯ ರಕ್ತ ಮಾದರಿ ಹಾಗೂ ಗಂಟಲು ದ್ರವ ಪರೀಕ್ಷಗೆ ಕಳುಹಿಸಲಾಗಿತ್ತು. ಇಂದು ಈ 38 ಮಂದಿಯ ಕೊರೊನಾ ಪರೀಕ್ಷಾ ವರದಿ ಜಿಲ್ಲಾಢಳಿತದ ಕೈ ಸೇರಿದ್ದು, ಎಲ್ಲರ ವರದಿಯೂ ನೆಗಟಿವ್ ಬಂದಿದೆ. 38 ಮಂದಿಯ ವರದಿ ನೆಗಟಿವ್ ಬಂದಿರೋದ್ರಿಂದ ಅವರ ಸಂಪರ್ಕಕ್ಕೆ ಒಳಗಾಗಿರೋ 12 ಮಂದಿ ಸಹ ಸೇಫ್ ಆಗಿದ್ದಾರೆ. ಹೀಗಾಗಿ ಸದ್ಯ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 10ರಲ್ಲೇ ಇದೆ. ಅದು ಎರಡು ಕುಟುಂಬಗಳ ಸದಸ್ಯರಲ್ಲೇ ಇದ್ದು ಸಮುದಾಯದ ಹಂತಕ್ಕೆ ಹರಡಿಲ್ಲ ಅನ್ನೋದು ಸ್ಪಷ್ಟವಾಗಿದೆ.

    ಈಗಾಗಲೇ ವಿದೇಶಗಳಿಂದ ಆಗಮಿಸಿದ್ದ 200 ಮಂದಿಯ ಪೈಕಿ ಬಹುತೇಕರ 14 ದಿನಗಳ ಕ್ವಾರಂಟೈನ್ ಅವಧಿ ಸಹ ಪೂರ್ಣಗೊಂಡಿದೆ. ಹೀಗಾಗಿ ಜಿಲ್ಲೆ ರೆಡ್‍ಝೋನ್‍ನಲ್ಲಿದ್ದರೂ ಕೊರೊನಾ ಸೋಂಕಿತ ಹೊಸ ಪ್ರಕರಣಗಳು ಪತ್ತೆಯಾಗಿಲ್ಲ. ಕೊರೊನಾ ವೈರಸ್ ಹರುಡವಿಕೆಯನ್ನ ತಡೆಯುವಲ್ಲಿ ಜಿಲ್ಲಾಢಳಿತ ಯಶಸ್ವಿಯಾಗಿದ್ದು, ಜಿಲ್ಲೆಯ ಜನತೆ ಆತಂಕಕ್ಕೆ ಒಳಗಾಗದಂತೆ ಡಿಸಿ ಆರ್. ಲತಾ ಮನವಿ ಮಾಡಿಕೊಂಡಿದ್ದಾರೆ. ಹಾಗೆಯೇ ಹೊಸ ಪ್ರಕರಣಗಳು ಪತ್ತೆಯಾಗಿಲ್ಲ ಅಂತ ಜನ ದಯವಿಟ್ಟು ಬೀದಿಗೆ ಬರಬೇಡಿ ಇನ್ನೂ ಲಾಕ್‍ಡೌನ್ ಅವಧಿ ಪೂರ್ಣಗೊಳ್ಳುವವರೆಗೂ ಮನೆಯಲ್ಲಿದ್ದು ಸಹಕರಿಸಿ ಎಂದು ಡಿಸಿ ಕೇಳಿಕೊಂಡಿದ್ದಾರೆ.

  • ಇಂಗ್ಲೆಂಡಿನ ವೆಸ್ಟ್ ಸ್ವಿಂಡನ್ ಕೌನ್ಸಿಲ್ ಚುನಾವಣೆಯಲ್ಲಿ ಕನ್ನಡಿಗನಿಗೆ ಗೆಲುವು

    ಇಂಗ್ಲೆಂಡಿನ ವೆಸ್ಟ್ ಸ್ವಿಂಡನ್ ಕೌನ್ಸಿಲ್ ಚುನಾವಣೆಯಲ್ಲಿ ಕನ್ನಡಿಗನಿಗೆ ಗೆಲುವು

    ಬೆಂಗಳೂರು: ಇಂಗ್ಲೆಂಡ್‍ನ ವೆಸ್ಟ್ ಸ್ವಿಂಡನ್ ಕೌನ್ಸಿಲ್‍ಗೆ ನಡೆದ ಚುನಾವಣೆಯಲ್ಲಿ ಕನ್ನಡಿಗ ಸುರೇಶ್ ಗಟ್ಟಪುರ್ ಜಯಸಾಧಿಸಿದ್ದಾರೆ.

    ವೆಸ್ಟ್‍ಲೀ ವಾರ್ಡ್‍ನಿಂದ ಕನ್ಸರ್ವೇಟಿವ್ ಪಕ್ಷದಿಂದ ಸುರೇಶ್ ಕಣಕ್ಕಿಳಿದಿದ್ರು. ನೀರಜ್ ಪಾಟೀಲ್ ನಂತರ ಕೌನ್ಸಿಲ್ ಚುನಾವಣೆಯಲ್ಲಿ ಗೆದ್ದ ಎರಡನೇ ಕನ್ನಡಿಗರಾಗಿದ್ದಾರೆ.

    ಸುರೇಶ್ ಮೂಲತಃ ಚಿಕ್ಕಬಳ್ಳಾಪುರ ಜಿಲ್ಲೆಯ ಕೊಂಡೇನಹಳ್ಳಿ ಗ್ರಾಮದವರಾಗಿದ್ದು, ಸುಮಾರು 13 ವರ್ಷಗಳಿಂದ ಇಂಗ್ಲೆಂಡ್‍ನಲ್ಲಿ ನೆಲೆಸಿದ್ದಾರೆ. ಪ್ರಸ್ತುತ ಸಾಫ್ಟ್ ವೇರ್ ಕಂಪನಿಯ ಡೈರೆಕ್ಟರ್ ಆಗಿ ಸುರೇಶ್ ಕಾರ್ಯನಿರ್ವಹಿಸುತ್ತಿದ್ದಾರೆ.