Tag: ಚಿಕ್ಕಮಾದು

  • ದಿ. ಶಾಸಕ ಚಿಕ್ಕಮಾದು ಶ್ರದ್ಧಾಂಜಲಿಗೆ ಮಾಡಿದ್ದ ಊಟ ಕೊಳೆತು ವ್ಯರ್ಥ – ಮೈಸೂರಲ್ಲಿ 3 ದಿನದಿಂದ ದುರ್ವಾಸನೆ

    ದಿ. ಶಾಸಕ ಚಿಕ್ಕಮಾದು ಶ್ರದ್ಧಾಂಜಲಿಗೆ ಮಾಡಿದ್ದ ಊಟ ಕೊಳೆತು ವ್ಯರ್ಥ – ಮೈಸೂರಲ್ಲಿ 3 ದಿನದಿಂದ ದುರ್ವಾಸನೆ

    ಮೈಸೂರು: ದಿವಂಗತ ಶಾಸಕ ಚಿಕ್ಕಮಾದು ಶ್ರದ್ಧಾಂಜಲಿ ಆಚರಣೆಯಲ್ಲಿ ಆಯೋಜಕರು ಎಡವಟ್ಟು ಮಾಡಿದ್ದಾರೆ. ನಾಯಕನ ನೆನಪಿಗೆ ಭರ್ಜರಿ ಊಟ ತಯಾರಿಸಿದ್ದ ಆಯೋಜಕರು ಉಳಿದ ಅನ್ನವನ್ನ ಯಾರಿಗೂ ನೀಡದೆ ಗಬ್ಬೆದ್ದು ನಾರುವಂತೆ ಮಾಡಿದ್ದಾರೆ.

    ಮೈಸೂರಿನ ಹೆಚ್.ಡಿ.ಕೋಟೆಯಲ್ಲಿ ನ.28 ರಂದು ಶ್ರದ್ಧಾಂಜಲಿ ಸಭೆ ನಡೆದಿತ್ತು. ಇದಕ್ಕಾಗಿ 25 ಸಾವಿರ ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಆದ್ರೆ ನಿರೀಕ್ಷೆಯಂತೆ ಅಭಿಮಾನಿಗಳು ಬಾರದ ಹಿನ್ನೆಲೆಯಲ್ಲಿ ಮಾಡಿದ ಅಡುಗೆಯೆಲ್ಲ ಹಾಗೆ ಉಳಿದಿತ್ತು. ಉಳಿದ ಊಟವನ್ನ ಆಯೋಜಕರು ಸಮುದಾಯ ಭವನವದಲ್ಲೆ ಬಿಟ್ಟು ಹೋಗಿದ್ದು, ಇದೀಗ ಸಮುದಾಯ ಭವನವೆಲ್ಲ ಹಳಸಿದ ಆಹಾರದಿಂದ ದುರ್ವಾಸನೆ ಬೀರುತ್ತಿದೆ.

    ಎರಡು ಮೂರು ದಿನದಿಂದ ಊಟವೆಲ್ಲ ಕೊಳೆತು ದುರ್ವಾಸನೆ ಬರುತ್ತಿದ್ದು, ಸಮುದಾಯ ಭವನದ ಸುತ್ತ ಜನ ಮೂಗುಮುಚ್ಚಿ ಓಡಾಡುವ ಸ್ಥಿತಿ ನಿರ್ಮಾಣವಾಗಿದೆ. ಸ್ಥಳೀಯ ಮುಖಂಡರು ಈವರೆಗೂ ಆಹಾರ ತೆರವುಗೊಳಿಸಿಲ್ಲ.

  • ಹೆಚ್‍ಡಿ ಕೋಟೆಯ ಜೆಡಿಎಸ್ ಶಾಸಕ ಚಿಕ್ಕಮಾದು ಇನ್ನಿಲ್ಲ

    ಹೆಚ್‍ಡಿ ಕೋಟೆಯ ಜೆಡಿಎಸ್ ಶಾಸಕ ಚಿಕ್ಕಮಾದು ಇನ್ನಿಲ್ಲ

    -ಅಭಿಮಾನಿಗಳು, ಕಾರ್ಯಕರ್ತರ ಕಂಬನಿ

    ಮೈಸೂರು: ಜಿಲ್ಲೆಯ ಹೆಚ್‍ಡಿ ಕೋಟೆ ಕ್ಷೇತ್ರದ ಜೆಡಿಎಸ್ ಶಾಸಕ ಚಿಕ್ಕಮಾದು ಇನ್ನಿಲ್ಲ. ಕಳೆದ ಹಲವು ದಿನಗಳಿಂದ ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಶಾಸಕ ಚಿಕ್ಕಮಾದು ಅವರು ಇಂದು ನಸುಕಿನ ಜಾವ 2 ಗಂಟೆಗೆ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ.

    ಕಳೆದ ಮೂರು ದಿನಗಳಿಂದ ಮೈಸೂರಿನ ಅರವಿಂದ ಆಸ್ಪತ್ರೆಯಲ್ಲಿ ಶಾಸಕ ಚಿಕ್ಕಮಾದು ಅವರು ಚಿಕಿತ್ಸೆ ಪಡೆಯುತ್ತಿದ್ದರು. ಇದೀಗ ಶಾಸಕ ಚಿಕ್ಕಮಾದು ಅವರ ಪಾರ್ಥೀವ ಶರೀರವನ್ನು ಅರವಿಂದ ಆಸ್ಪತ್ರೆಯಿಂದ ಮೈಸೂರಿನ ವಿಜಯನಗರದಲ್ಲಿರುವ ಅವರ ನಿವಾಸಕ್ಕೆ ಕೊಂಡೊಯ್ಯಲಾಗಿದೆ. ಮಾಜಿ ಸಂಸದ ವಿಶ್ವನಾಥ್, ಶಾಸಕರಾದ ಜಿ.ಟಿ.ದೇವೆಗೌಡ, ಸಾ.ರಾ.ಮಹೇಶ್ ಸೇರಿದಂತೆ ಹಲವು ಪ್ರಮುಖರು ಚಿಕ್ಕಮಾದು ಅವರ ಅಂತಿಮ ದರ್ಶನ ಪಡೆದರು. ಶಾಸಕ ಚಿಕ್ಕಮಾದು ಇಬ್ಬರು ಪತ್ನಿಯರು ಹಾಗೂ ನಾಲ್ವರು ಮಕ್ಕಳನ್ನು ಅಗಲಿದ್ದಾರೆ.

    ಕೆ.ಆರ್.ನಗರ ತಾಲೂಕಿನ ಹೊಸೂರು ಕಲ್ಲಹಳ್ಳಿಯಲ್ಲಿ ಜನಿಸಿದ್ದ ಚಿಕ್ಕಮಾದು ಅವರು, ಹುಣಸೂರು ತಾಲೂಕಿನ ಹೊಸ ರಾಮೇನಹಳ್ಳಿಯಲ್ಲಿ ಹಲವು ವರ್ಷ ವಾಸವಿದ್ದರು. ನಂತರ ಮೈಸೂರಿಗೆ ಶಿಫ್ಟ್ ಆಗಿದ್ದರು. 1978 ರಲ್ಲಿ ಕಾಂಗ್ರೆಸ್ ಮೂಲಕ ರಾಜಕೀಯಕ್ಕೆ ಧುಮುಕಿ, 1991ರಲ್ಲಿ ಹುಣಸೂರು ಕ್ಷೇತ್ರದಿಂದ ಚುನಾಯಿತರಾಗಿದ್ದರು. ನಂತರದ ದಿನಗಳಲ್ಲಿ ಜೆಡಿಎಸ್ ಸೇರಿದ ಚಿಕ್ಕಮಾದು ಅವರು 2007ರಲ್ಲಿ ವಿಧಾನಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ರು. 2013ರಲ್ಲಿ ಹೆಚ್ ಡಿ ಕೋಟೆ ಕ್ಷೇತ್ರದಲ್ಲಿ ಗೆದ್ದು ವಿಧಾನಸಭೆ ಪ್ರವೇಶಿಸಿದ್ದರು.