Tag: ಚಿಕ್ಕಮಕ್ಕಳು

  • ಚಿಕ್ಕಮಕ್ಕಳಿಗೆ ಆನ್‍ಲೈನ್ ಕ್ಲಾಸ್ ಮಾಡಲು ನಾನು ಬಿಡಲ್ಲ: ಸುರೇಶ್ ಕುಮಾರ್

    ಚಿಕ್ಕಮಕ್ಕಳಿಗೆ ಆನ್‍ಲೈನ್ ಕ್ಲಾಸ್ ಮಾಡಲು ನಾನು ಬಿಡಲ್ಲ: ಸುರೇಶ್ ಕುಮಾರ್

    – ಚಿಕ್ಕ ಮಕ್ಕಳ ಆಟ ಆಡಿ ಬೆಳೆಯಬೇಕು

    ಬಳ್ಳಾರಿ: ಯಾವುದೇ ಕಾರಣಕ್ಕೂ ಚಿಕ್ಕಮಕ್ಕಳಿಗೆ ಆನ್‍ಲೈನ್ ಕ್ಲಾಸ್ ಮಾಡಲು ನಾ ಬಿಡುವುದಿಲ್ಲ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.

    ಬಳ್ಳಾರಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಂದು ಎಸ್‍ಎಸ್‍ಎಲ್‍ಸಿ ಪೂರ್ವ ಸಿದ್ಧತೆ ಸಭೆ ನಡೆಸಿ ಬಳಿಕ ಮಾತನಾಡಿದ ಅವರು, ಆನ್‍ಲೈನ್ ಕ್ಲಾಸ್ ನಡೆಸಲು ಸರ್ಕಾರ ಯಾವುದೇ ತೀರ್ಮಾನಕ್ಕೆ ಬಂದಿಲ್ಲ. ಈ ಬಗ್ಗೆ ಸೋಮವಾರ ಅಂತಿಮ ತೀರ್ಮಾನ ಮಾಡಲಾಗುವುದು. ಆದರೆ ಚಿಕ್ಕ ಮಕ್ಕಳಿಗೆ ಯಾವುದೇ ಕಾರಣಕ್ಕೂ ಆನ್‍ಲೈನ್ ಕ್ಲಾಸ್ ನಡೆಸಲ್ಲ ಎಂದಿದ್ದಾರೆ.

    ಜುಲೈ ನಾಲ್ಕಕ್ಕೆ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಮುಗಿಯಲಿದ್ದು, ಜುಲೈ ಕೊನೆಯ ವಾರದಲ್ಲಿ ಎಸ್‍ಎಸ್‍ಎಲ್‍ಸಿ ಫಲಿತಾಂಶ ಕೊಡಲು ವ್ಯವಸ್ಥೆ ಮಾಡಲಾಗುವುದು. ವಲಸೆ ಕಾರ್ಮಿಕರ ಮಕ್ಕಳಿಗೆ ಹತ್ತಿರದ ಸೆಂಟರ್ ನಲ್ಲಿ ಪರೀಕ್ಷೆ ಬರೆಯಲು ಅವಕಾಶ ಮಾಡಲಾಗಿದೆ. ಒಂದು ವೇಳೆ ಮಕ್ಕಳು ಫೇಲ್ ಆದರೆ ಪ್ರತಿ ವರ್ಷದಂತೆ ಈ ವರ್ಷವೂ ಪೂರಕ ಪರೀಕ್ಷೆ ನಡೆಸಲಾಗುವುದು ಎಂದು ಸುರೇಶ್ ಕುಮಾರ್ ಅವರು ತಿಳಿಸಿದ್ದಾರೆ.

    ಶಾಲೆ ಸದ್ಯಕ್ಕೆ ಆರಂಭ ಮಾಡಲು ಕೇಂದ್ರ ಸರ್ಕಾರದಿಂದ ಯಾವುದೇ ಆದೇಶ ಬಂದಿಲ್ಲ. ಹೀಗಾಗಿ ಶಾಲೆ ಆರಂಭ ಸದ್ಯಕ್ಕೆ ಇಲ್ಲ. ಆನ್‍ಲೈನ್ ಕ್ಲಾಸ್ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದೆ. ಹೀಗಾಗಿ ಆನ್‍ಲೈನ್ ಕ್ಲಾಸ್ ಮಾಡಲು ಮೊದಲ ಎಸ್‍ಡಿಎಮ್‍ಸಿ ಸದಸ್ಯರು, ಪಾಲಕರ ಸಭೆ ನಡೆಸಿ ಅವರ ಅಭಿಪ್ರಾಯ ಪಡೆದು ಶಾಲೆ ಆರಂಭಿಸುವ ಬಗ್ಗೆ ಚಿಂತನೆ ನಡೆಸಲಾಗುವುದು ಎಂದರು.

    ಮಕ್ಕಳ ಮೇಲೆ ದುಷ್ಟ ಪರಿಮಾಣ ಆಗುತ್ತೆ ಎಂಬುದು ಎಲ್ಲರ ಅಭಿಪ್ರಾಯ ಇದೆ. ಎಲ್‍ಕೆಜಿ ಕ್ಲಾಸ್‍ಗಳನ್ನು ಆರಂಭ ಮಾಡಲು ಮಕ್ಕಳ ಮತ್ತು ಪೋಷಕರ ವಿರೋಧ ಇದೆ. ಹಾಗೆಯೇ ಈ ಚಿಂತನೆ ಶಿಕ್ಷಣ ಇಲಾಖೆಯಲ್ಲೂ ಇದೆ. ಹೀಗಾಗಿ ಲೋಯರ್ ಕ್ಲಾಸ್‍ನಲ್ಲಿ ಆನ್‍ಲೈನ್ ಶಿಕ್ಷಣ ನೀಡಲು ನಾವೂ ಒಪ್ಪಲ್ಲ. ಆದರೆ ಯಾರಿಗೆ ಆನ್‍ಲೈನ್ ಕ್ಲಾಸ್ ಕೊಡಬಹುದು ಎಂಬದರ ಬಗ್ಗೆ ಚರ್ಚೆ ನಡೆಸಿ ಸೋಮವಾರ ಆನ್‍ಲೈನ್ ಕುರಿತಾದ ಶಿಕ್ಷಣದ ಬಗ್ಗೆ ಆದೇಶ ಮಾಡಲಾಗುವುದು ಎಂದು ಸ್ಪಷ್ಟ ಪಡಿಸಿದರು.