Tag: ಚಿಕ್ಕನ್

  • ಚಾಮರಾಜನಗರ ಕುಕ್ಕುಟೊದ್ಯಮದ ಉತ್ಪನ್ನ ಮಾರಾಟ, ಸಾಗಾಣಿಕೆ ನಿಷೇಧ ತೆರವು

    ಚಾಮರಾಜನಗರ ಕುಕ್ಕುಟೊದ್ಯಮದ ಉತ್ಪನ್ನ ಮಾರಾಟ, ಸಾಗಾಣಿಕೆ ನಿಷೇಧ ತೆರವು

    ಚಾಮರಾಜನಗರ: ಜಿಲ್ಲೆಯಾದ್ಯಂತ ಕುಕ್ಕುಟ ಮತ್ತು ಕುಕ್ಕುಟ ಉತ್ಪನ್ನಗಳ ಮಾರಾಟ ಮತ್ತು ಸಾಗಾಣಿಕೆಯನ್ನು ನಿರ್ಬಂಧಿಸಿ ಹೊರಡಿಸಲಾಗಿದ್ದ ಆದೇಶವನ್ನು ತೆರವುಗೊಳಿಸಲಾಗಿದ್ದು, ಕೆಲ ಷರತ್ತಿಗೆ ಒಳಪಟ್ಟು ತಕ್ಷಣದಿಂದಲೇ ಜಾರಿಗೆ ಬರುವಂತೆ ನಿಷೇಧ ತೆರವುಗೊಳಿಸಿ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಆದೇಶ ಹೊರಡಿಸಿದ್ದಾರೆ.

    ಚಾಮರಾಜನಗರ ಜಿಲ್ಲೆ ವ್ಯಾಪ್ತಿಯಲ್ಲಿ ಈ ವರೆಗೆ ಅಸ್ವಾಭಾವಿಕವಾಗಿ ಅಥವಾ ಕೋಳಿ ಶೀತ ಜ್ವರದಿಂದ ಪಕ್ಷಿಗಳಾಗಲಿ, ಕೋಳಿಗಳಾಗಲಿ ಮರಣ ಹೊಂದಿರುವುದು ಕಂಡುಬಂದಿಲ್ಲ ಹಾಗೂ ಮೈಸೂರು ನಗರವು ಚಾಮರಾಜನಗರದಿಂದ 70 ಕಿ.ಮೀ ದೂರದಲ್ಲಿದ್ದು, ಹಕ್ಕಿಜ್ವರ ಬಾರದಂತೆ ಕ್ರಮ ವಹಿಸಲಾಗಿದೆ. ಹೀಗಾಗಿ ಚಾಮರಾಜನಗರ ಜಿಲ್ಲಾದ್ಯಂತ ಹೊರಡಿಸಿರುವ ಕುಕ್ಕುಟ ಮತ್ತು ಕುಕ್ಕುಟ ಉತ್ಪನ್ನಗಳ ಮಾರಾಟ ಮತ್ತು ಸಾಗಾಣಿಕೆ ನಿಷೇಧದ ಆದೇಶವನ್ನು ಹಲವು ಷರತ್ತಿಗೊಳಪಟ್ಟು ತಕ್ಷಣದಿಂದ ಜಾರಿಗೆ ಬರುವಂತೆ ತೆರವುಗೊಳಿಸಲಾಗಿದೆ ಎಂದು ಆದೇಶದಲ್ಲಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ.

    ಕೋಳಿ ಮಾಂಸ ಮಾರಾಟ ಮಾಡುವ ಕೆಂದ್ರಗಳಲ್ಲಿ ಸ್ವಚ್ಛತೆ ಕಾಪಾಡಬೇಕು. ಗಾಜಿನ ಪೆಟ್ಟಿಗೆಯನ್ನು ಅಳವಡಿಸಿಕೊಂಡು ಕೋಳಿಮಾಂಸ ಮಾರಾಟ ಮಾಡಬೇಕು. ರೋಗ ತಗುಲಿದ ಕೋಳಿ, ಇತರೆ ಪಕ್ಷಿಗಳ ಮಾಂಸವನ್ನು ಮಾರಾಟ ಮಾಡಬಾರದು. ಕೋಳಿ ತ್ಯಾಜ್ಯವನ್ನು ಆಯಾ ದಿನವೇ ವಿಲೇವಾರಿ ಮಾಡಬೇಕು ಎಂದು ಡಿಸಿ ಷರತ್ತು ವಿಧಿಸಿದ್ದಾರೆ.

  • ಹೊಸತೊಡಕು ಆಚರಿಸಲು ಖುಷಿಯಲ್ಲಿದ್ದ ಜನರಿಗೆ ಶಾಕ್

    ಹೊಸತೊಡಕು ಆಚರಿಸಲು ಖುಷಿಯಲ್ಲಿದ್ದ ಜನರಿಗೆ ಶಾಕ್

    ಬೆಂಗಳೂರು/ಮಂಡ್ಯ: ಶನಿವಾರ, ಒಬ್ಬಟ್ಟು ತಿಂದು ಭರ್ಜರಿಯಾಗಿಯೇ ಯುಗಾದಿ ಹಬ್ಬ ಆಚರಿಸಿದ್ದ ಸಿಲಿಕಾನ್ ಸಿಟಿ ಜನರು ಇಂದು ಹೊಸತೊಡಕು ಆಚರಿಸಲು ಸಜ್ಜಾಗಿದ್ದಾರೆ. ಆದರೆ ಹಬ್ಬದ ಖುಷಿಯಲ್ಲಿದ್ದ ಜನರಿಗೆ ನಾನ್ ವೆಜ್ ಖಾದ್ಯಗಳ ಬೆಲೆ ಏರಿಕೆಯ ಕಹಿ ಅನುಭವವಾಗುತ್ತಿದೆ.

    ಇಂದು ಮಾರ್ಕೆಟ್ ಹೋಗಿ ಚಿಕನ್, ಮಟನ್ ರೇಟ್ ಕೇಳಿದರೆ ಜನರು ಶಾಕ್ ಆಗುತ್ತಾರೆ. ಏಕೆಂದರೆ ಚಿಕನ್ ಒಂದು ಕೆಜಿಗೆ 250 ರೂ. ಆಗಿದೆ. ಅಲ್ಲದೆ ಮಟನ್ ಒಂದು ಕೆಜಿಗೆ 550 ಆಗಿದೆ.

    ಹೀಗಾಗಿ ಮಟನ್ ಬಿರಿಯಾನಿ, ಚಿಕನ್ ಬಿರಿಯಾನಿ, ಚಿಲ್ಲಿ ಚಿಕನ್, ಪೆಪ್ಪರ್ ಚಿಕನ್, ಫಿಶ್ ಕರಿ, ಫಿಶ್ ಫ್ರೈ, ತಲೆ ಕಾಲ್ ಮಾಂಸ, ಕಾಲ್ ಸೂಪ್ ಹೇಗಪ್ಪಾ ಮಾಡುವುದು ಎಂದು ನಾನ್ ವೆಜ್ ಪ್ರಿಯರು ಯೋಚನೆ ಮಾಡತ್ತಿದ್ದರೆ, ಇತ್ತ ವ್ಯಾಪಾರಿಗಳು ಫುಲ್ ಖುಷಿಯಾಗಿದ್ದಾರೆ. ಇದನ್ನೂ ಓದಿ: ಯುಗಾದಿ ನೆಪದಲ್ಲಿ ಮತದಾರರಿಗೆ ಭರ್ಜರಿ ಗಿಫ್ಟ್-‘ಹೊಸತೊಡಕು’ ರೂಪದಲ್ಲಿ ಮಟನ್-ಚಿಕನ್ ಭಾಗ್ಯ!

    ಮಂಡ್ಯದಲ್ಲೂ ಇಂದು ಮಟನ್‍ಗೆ ಭಾರೀ ಬೇಡಿಕೆಯಾಗಿದೆ. ಯುಗಾದಿ ಹಬ್ಬದ ಮಾಂಸದಡುಗೆಗೆ ಮಂಡ್ಯದಲ್ಲಿ ಭರ್ಜರಿ ಬೇಡಿಕೆಯಿದೆ. ಇಷ್ಟು ದಿನ ಲೋಕಸಭಾ ಚುನಾವಣಾ ಕಾವಿನಿಂದ ರಂಗೇರಿದ್ದ ಮಂಡ್ಯ, ಶನಿವಾರ ಯುಗಾದಿ ಹಬ್ಬ ಮುಗಿಸಿ ಇಂದು ವರ್ಷ ತೊಡಕಿನ ಖುಷಿಯಲ್ಲಿ ಇದ್ದಾರೆ.

    ಹಬ್ಬಕ್ಕೆ ಮಾಂಸದಡುಗೆ ಮಾಡಲು ಮಂಡ್ಯದ ಎಲ್ಲ ಮಾಂಸದಂಗಡಿಗಳ ಮುಂದೆ ಜನರು ಕ್ಯೂ ನಿಂತಿದ್ದಾರೆ. ಜನರು ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನೂರಾರು ಜನ ನಿಂತು ಮಟನ್ ಖರೀದಿಸುತ್ತಿದ್ದಾರೆ. ಸದ್ಯ ಜನರು ಚುನಾವಣೆಯ ಯೋಚನೆ ಬಿಟ್ಟು ಮಾಂಸದಡುಗೆ ತಯಾರಿಯಲ್ಲಿ ಬ್ಯುಸಿ ಆಗಿದ್ದಾರೆ.