Tag: ಚಿಕಿತ್ಸೆ

  • ಸೋಂಕಿತ ಮಾವನನ್ನು ಹೆಗಲ ಮೇಲೆ ಹೊತ್ತು ಆಸ್ಪತ್ರೆಗೆ ಸಾಗಿದ ಸೊಸೆ

    ಸೋಂಕಿತ ಮಾವನನ್ನು ಹೆಗಲ ಮೇಲೆ ಹೊತ್ತು ಆಸ್ಪತ್ರೆಗೆ ಸಾಗಿದ ಸೊಸೆ

    ಭುವನೇಶ್ವರ: ಕೊರೊನಾ ಸೋಂಕಿತ ಮಾವನನ್ನು ಸೊಸೆ ಹೆಗಲ ಮೇಲೆ ಹೋತ್ತು ಆಸ್ಪತ್ರೆಗೆ ಸಾಗಿಸಿರುವ ಘಟನೆ ಭವನೇಶ್ವರದಲ್ಲಿ ನಡೆದದಿದೆ.

    ಅತ್ತೆ ಮಾವ ಅಂದರೆ ಮೂಗು ಮುರಿಯುವಂತಹ ಈ ಕಾಲದಲ್ಲಿ ಮಹಿಳೆ ಕೊರೊನಾ ಚಿಕಿತ್ಸೆಗಾಗಿ ತನ್ನ ಮಾವನನ್ನು ಹೊತ್ತು ಸಾಗುವ ಮೂಲಕವಾಗಿ ಮಾನವೀಯತೆ ಜೊತೆಗೆ ಸಂಬಂಧದ ಮೌಲ್ಯವನ್ನು ಸಾರಿದ್ದಾಳೆ. ಇದನ್ನೂ ಓದಿ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಾಲಿವುಡ್ ನಟಿ ಯಾಮಿ ಗೌತಮ್

    ತುಳೇಶ್ವರ್ ದಾಸ್(75) ಕೊರೊನಾ ಸೋಂಕಿನಿಂದ ಬಳಲುತ್ತಿದ್ದರು. ಈತನ ಮಗ ಸೂರಜ್ ಕೆಲಸದ ನಿಮಿತ್ತ ಬೇರೆ ಊರಿನಲ್ಲಿ ವಾಸವಾಗಿದ್ದಾನೆ. ಹೀಗಾಗಿ ಮನೆಯ ಪೂರ್ತಿ ಜವಾಬ್ದಾರಿ ಸೊಸೆ ನಿಹಾರಿಕಾ ಮೇಲೆ ಇತ್ತು. ಆರೋಗ್ಯ ಸ್ಥಿತಿ ಬಿಗಡಾಯಿಸುತ್ತಿದ್ದಂತೆ ಏನು ಮಾಡುವುದು ಗೊಂದಲಕ್ಕೀಡಾದ ನಿಹಾರಿಕ ಮಾವನನ್ನು ಹೊತ್ತುಕೊಂಡು ಕೋವಿಡ್ ಸೆಂಟರ್​ಗೆ ತೆರೆಳಿದ್ದಾಳೆ. ಇದನ್ನೂ ಓದಿ: ಗೋವುಗಳನ್ನು ಸಾವಿನ ಬಾಯಿಗೆ ದೂಡಿರುವುದು ಎಂಥ ‘ಗೋ’ರಕ್ಷಣೆ? – ಕುಮಾರಸ್ವಾಮಿ

    ಮಾವನನ್ನು ಆಸ್ಪತ್ರೆಗೆ ದಾಳಲಿಸಿದ ಸೊಸೆ ನಿಹಾರಿಕಳನ್ನು ಮನೆಯಲ್ಲಿಯೇ ಪ್ರತ್ಯೇಕವಾಗಿ ಇರಲು ವೈದ್ಯರು ಸೂಚನೆ ನೀಡಿದ್ದಾರೆ. ಮಾವನೊಬ್ಬನನ್ನೇ ಕೊರೊನಾ ಕೇಂದ್ರಕ್ಕೆ ಕಳುಹಿಸಲು ನಿಹಾರಿಕಾ ನಿರಾಕರಿಸಿದ್ದಾಳೆ. ಇದಕ್ಕೆ ಸ್ಪಂದಿಸಿದ ಆಸ್ಪತ್ರೆ ಸಿಬ್ಬಂದಿ ಅಂಬ್ಯುಲೆನ್ಸ್‌ನಲ್ಲಿ ಇಬ್ಬರನ್ನು ಕೋವಿಡ್ ಆಸ್ಪತ್ರೆಗೆ ಕಳುಹಿಸಿದ್ದಾರೆ. ತನ್ನ ಪ್ರಾಣ ಲೆಕ್ಕಿಸದೇ ಕೊರೊನಾ ಸೋಂಕಿತ ಮಾವನನ್ನು ಹೊತ್ತು ಆಸ್ಪತ್ರೆಗೆ ಧಾವಿಸಿದ ನಿಹಾರಿ ನಡೆಗೆ ಸಾರ್ವಜನಿಕ ವಲಯದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.

  • ಹಾಲು ಉತ್ಪಾದಕರ ಸಹಕಾರ ಸಂಘಗಳ ಸದಸ್ಯರು, ಸಿಬ್ಬಂದಿಗೆ ಬಮುಲ್ ನಿಂದ 8 ಕೋಟಿ ರೂ. ನೆರವು

    ಹಾಲು ಉತ್ಪಾದಕರ ಸಹಕಾರ ಸಂಘಗಳ ಸದಸ್ಯರು, ಸಿಬ್ಬಂದಿಗೆ ಬಮುಲ್ ನಿಂದ 8 ಕೋಟಿ ರೂ. ನೆರವು

    -ಯಶವಂತಪುರ ಕ್ಷೇತ್ರದಲ್ಲಿ ಎಸ್.ಟಿ.ಸೋಮಶೇಖರ್ ಚಾಲನೆ

    ಬೆಂಗಳೂರು: ಬಮುಲ್ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಣೆ ಮಾಡುತ್ತಿರುವ ಹಾಲು ಉತ್ಪಾದಕ ಸಹಕಾರ ಸಂಘಗಳ ಸದಸ್ಯರ ಹಾಗೂ ಸಿಬ್ಬಂದಿಯ ನೆರವಿಗೆ ಧಾವಿಸಿರುವ ಬಮುಲ್ ಸಂಸ್ಥೆಯು, ಕೋವಿಡ್ ಸಂಕಷ್ಟದ ಕಾಲದಲ್ಲಿ ನೆರವನ್ನು ನೀಡಿದೆ. ಸುಮಾರು 8 ಕೋಟಿ ರೂ. ಅಧಿಕ ಮೊತ್ತವನ್ನು ಇದಕ್ಕಾಗಿ ವಿನಿಯೋಗಿಸಿದ್ದು, ತಾವರೆಕೆರೆ ಹಾಲು ಉತ್ಪಾದಕರ ಸಹಕಾರ ಸಂಘದ ಕಚೇರಿಯಲ್ಲಿ ಯಶವಂತಪುರ ಕ್ಷೇತ್ರದ ಶಾಸಕರು ಹಾಗೂ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಚಾಲನೆ ನೀಡಿದರು.

    ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸೋಮಶೇಖರ್ ಅವರು, ಬಮುಲ್ ವತಿಯಿಂದ ಉತ್ತಮ ಕಾರ್ಯವನ್ನು ಮಾಡಲಾಗುತ್ತಿದೆ. ಕೊರೊನಾ ಸಂಕಷ್ಟ ಕಾಲದಲ್ಲಿ ಹಾಲು ಉತ್ಪಾದಕ ಸಹಕಾರ ಸಂಘಗಳ ಸದಸ್ಯರ ಹಾಗೂ ಸಿಬ್ಬಂದಿಗೆ ನೆರವಿನ ಅಗತ್ಯವಿದೆ ಎಂದು ಮನಗಂಡಿರುವುದು ಉತ್ತಮ ನಡೆಯಾಗಿದೆ. ಒಟ್ಟಾರೆಯಾಗಿ ಬಮುಲ್ ವ್ಯಾಪ್ತಿಯ ಕಚೇರಿಗಳ ಸಿಬ್ಬಂದಿಗೆ 50 ಲಕ್ಷ ರೂಪಾಯಿ ವೆಚ್ಚದಲ್ಲಿ ಅಕ್ಕಿ, 4.50 ಕೋಟಿ ರೂಪಾಯಿ ವೆಚ್ಚದಲ್ಲಿ ತುಪ್ಪ, ಹಾಲು ವಿತರಕರಿಗೆ 3.6 ಕೋಟಿ ರೂಪಾಯಿ ವೆಚ್ಚದಲ್ಲಿ ಹೆಚ್ಚುವರಿ ಹಾಲು ಹಾಗೂ ಉಚಿತ ಮೆಡಿಕ್ಲೈಮ್ (ವೈದ್ಯಕೀಯ ವಿಮೆ) ಸೌಲಭ್ಯವನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು. ಇದನ್ನೂ ಓದಿ: ಶಿಲ್ಪಾನಾಗ್ ರಾಜೀನಾಮೆ ಯಾವುದೇ ಕಾರಣಕ್ಕೂ ಸ್ವೀಕಾರ ಮಾಡಲ್ಲ: ಎಸ್.ಟಿ ಸೋಮಶೇಖರ್

    ಬಮುಲ್ ವ್ಯಾಪ್ತಿಯಲ್ಲಿನ ಎಲ್ಲ ಹಾಲು ಉತ್ಪಾದಕ ಸಹಕಾರ ಸಂಘಗಳ ಸದಸ್ಯರ ಹಾಗೂ ಸಿಬ್ಬಂದಿಗೆ ಈ ಸೌಲಭ್ಯ ದೊರೆಯಲಿದೆ. ಇದರಿಂದ ಕೋವಿಡ್ ಸಂಕಷ್ಟ ಕಾಲದಲ್ಲಿ ಇವರ ನೆರವಿಗೆ ದಾವಿಸಲಾಗಿದ್ದು, ಯಾವುದೇ ರೀತಿಯ ತೊಂದರೆಯಾಗಬಾರದು ಎಂಬ ಉದ್ದೇಶ ಇದಾಗಿದೆ. ಇದೇ ಮಾದರಿಯಲ್ಲಿ ಉಳಿದ ಹಾಲು ಉತ್ಪಾದಕ ಸಂಘಗಳೂ ತಮ್ಮ ಸೇವೆಯನ್ನು ಮಾಡಲಿ ಎಂದು ಸಚಿವರು ತಿಳಿಸಿದರು.

    ವೈದ್ಯರ ನಡಿಗೆ ಜನರ ಕಡೆಗೆ
    ವೈದ್ಯರ ನಡಿಗೆ ಜನರ ಕಡೆಗೆ ಎಂಬ ಕಾರ್ಯಕ್ರಮವನ್ನು ಮಾಡಿ, ವೈದ್ಯರು ಪ್ರತಿ ಹಳ್ಳಿಗಳಿಗೂ ಭೇಟಿ ನೀಡಿ ತಿಳಿವಳಿಕೆ ಮೂಡಿಸುತ್ತಿದ್ದಾರೆ. ಅಲ್ಲದೆ, ಸೂಕ್ತ ಚಿಕಿತ್ಸೆಯನ್ನು ನೀಡುವ ಕೆಲಸವನ್ನು ಮಾಡುತ್ತಿದ್ದಾರೆ. ಇದಲ್ಲದೆ, ಚೆನ್ನೇನಹಳ್ಳಿಯಲ್ಲಿ ಕೋವಿಡ್ ಕೇರ್ ಸೆಂಟರ್ ತೆರೆಯಲಾಗಿದ್ದು, ಅಲ್ಲಿ ಈಗಾಗಲೇ ನೂರಾರು ಮಂದಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ. ಹೀಗಾಗಿ ಸೋಂಕು ತಗುಲಿದರೆ ಯಾರೂ ಆತಂಕಗೊಳ್ಳುವುದು ಬೇಡ, ಮನೆಯಲ್ಲಿ ಇರುವುದೂ ಬೇಡ. ಕೋವಿಡ್ ಕೇರ್ ಸೆಂಟರ್‍ಗೆ ಧಾವಿಸಿ 8-10 ದಿನವಿದ್ದರೆ ಸಾಕು ಸೂಕ್ತ ಚಿಕಿತ್ಸೆ ದೊರೆಯುವುದಲ್ಲದೆ, ಊಟೋಪಚಾರವೂ ಲಭಿಸಲಿದೆ ಎಂದು ಸಚಿವರಾದ ತಿಳಿಸಿದರು.

    ನಿರ್ಲಕ್ಷ್ಯ ಬೇಡ, ಎಲ್ಲರೂ ಚಿಕಿತ್ಸೆ ಪಡೆಯಿರಿ
    ಮೊದಲನೇ ಅಲೆ ಇಷ್ಟು ತೊಂದರೆ ಕೊಟ್ಟಿರಲಿಲ್ಲ. ಆದರೆ, ಎರಡನೇ ಅಲೆ ಸಾಕಷ್ಟು ಸಮಸ್ಯೆಗಳನ್ನು ತಂದೊಡ್ಡಿದೆ. ಯಾರಿಗೂ ಎರಡನೇ ಅಲೆಯ ತೀವ್ರತೆ ಗೊತ್ತಿರಲಿಲ್ಲ. ನನ್ನ ಜೊತೆಗೆ 20 ವರ್ಷಗಳಿಂದ ಇದ್ದವರು ಸಹ ಕೊರೊನಾ ತೀವ್ರತೆ ಬಲಿಯಾಗಿದ್ದಾರೆ. ಹೀಗಾಗಿ ಜ್ವರ, ನೆಗಡಿಯನ್ನು ನಿರ್ಲಕ್ಷ್ಯ ಮಾಡಬೇಡಿ. ಕೂಡಲೇ ಚಿಕಿತ್ಸೆ ಪಡೆಯಿರಿ, ಮನೆಯಲ್ಲೇ ಸ್ವ ಔಷಧಿ ಮಾಡಿಕೊಂಡವರಿಗೆ ಸಮಸ್ಯೆಯಾಗಿ ಮೃತಪಟ್ಟವರ ಪ್ರಮಾಣ ಹೆಚ್ಚಿದೆ. ಹಾಗಾಗಿ ಎಲ್ಲರೂ ಚಿಕಿತ್ಸೆ ಪಡೆಯಿರಿ. ನನ್ನ ಯಶವಂತಪುರ ಕ್ಷೇತ್ರದಲ್ಲಿ ಏಳೂವರೆ ಸಾವಿರ ಜನರಿಗೆ ಕೋವಿಡ್ ಸೋಂಕು ಬಂದಿದ್ದು, ಈಗಾಗಲೇ ಆರೂವರೆ ಸಾವಿರ ಮಂದಿ ಗುಣಮುಖರಾಗಿದ್ದಾರೆ ಎಂದು ಸಚಿವರು ತಿಳಿಸಿದರು.

    ಎಲ್ಲ ಗ್ರಾಮ, ವಾರ್ಡ್ ಗಳಲ್ಲೂ ವ್ಯಾಕ್ಸಿನೇಶನ್‍ಗೆ ಅನುಕೂಲವನ್ನು ಮಾಡಿಕೊಡಲಾಗುತ್ತಿದ್ದು, ಗ್ರಾಮ ಪಂಚಾಯಿತಿ ಸದಸ್ಯರು ಸಹ ನಿಂತುಕೊಂಡು ಇದರ ಉಸ್ತುವಾರಿಯನ್ನು ನೋಡಿಕೊಳ್ಳಬೇಕು. ತೊಂದರೆಯಲ್ಲಿರುವವರಿಗೆ ಪಡಿತರ ಕಿಟ್ ಅನ್ನು ಕೊಡುವ ಕೆಲಸವನ್ನು ಮಾಡಲಾಗುತ್ತಿದೆ. ಲಾಕ್‍ಡೌನ್ ಸಂದರ್ಭದಲ್ಲಿ ಯಾರಿಗೆ ತೊಂದರೆಯಾಗಿದೆಯೋ ಅವರ ಸಹಾಯಕ್ಕೆ ಧಾವಿಸುವ ಕೆಲಸಕ್ಕೆ ಆಗುತ್ತಿದೆ. ಇಸ್ಕಾನ್ ದೇವಸ್ಥಾನದಿಂದ ಬೇಕಿದ್ದ ಕಡೆ ಸುಮಾರು 2 ಸಾವಿರ ಮಂದಿಗೆ ಭೋಜನ ವ್ಯವಸ್ಥೆಯನ್ನು ಮಾಡುತ್ತಿದೆ ಮಾಹಿತಿ ನೀಡಿದರು.

    ಕೆಎಂಎಫ್ ಎಂಡಿ ಸತೀಶ್ ಸೇರಿದಂತೆ ತಾವರೆಕೆರೆ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರು, ಸದಸ್ಯರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

  • ಮನ ಬಂದಂತೆ ಕೊರೊನಾ ಚಿಕಿತ್ಸೆ ನೀಡುವಂತಿಲ್ಲ- ಮಾಧುಸ್ವಾಮಿ

    ಮನ ಬಂದಂತೆ ಕೊರೊನಾ ಚಿಕಿತ್ಸೆ ನೀಡುವಂತಿಲ್ಲ- ಮಾಧುಸ್ವಾಮಿ

    ತುಮಕೂರು: ಮನ ಬಂದಂತೆ ಕೊರೊನಾ ಚಿಕಿತ್ಸೆ ನೀಡುವಂತಿಲ್ಲ ಎಂದು ಖಾಸಗಿ ಕ್ಲಿನಿಕ್, ಮೆಡಿಕಲ್ ಶಾಪ್‍ಗಳಿಗೆ ಉಸ್ತುವಾರಿ ಸಚಿವ ಮಾಧುಸ್ವಾಮಿ ಖಡಕ್ ಎಚ್ವರಿಕೆಯನ್ನು ನೀಡಿದ್ದಾರೆ.

    ಚಿಕ್ಕನಾಯಕನಹಳ್ಳಿ ಪಟ್ಟಣದ ತೀನಂಶ್ರೀ ಸಭಾಭವನದಲ್ಲಿ ಕೋವಿಡ್ ನಿಯಂತ್ರಣಕ್ಕಾಗಿ ಸಭೆ ಸೇರಿದ್ದರು. ಈ ವೇಳೆ ತಾಲೂಕಿನ ಎಲ್ಲಾ ಖಾಸಗಿ ಆಸ್ಪತ್ರೆಯ ವೈದ್ಯರು ಹಾಗೂ ಲ್ಯಾಬ್ ಟೆಕ್ನಿಷಿಯನ್ ಮತ್ತು ಔಷಧಿ ವ್ಯಾಪಾರಿಗಳ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದ ಅವರು, ಖಾಸಗಿ ಕ್ಲಿನಿಕ್‍ಗಳಲ್ಲಿ ನಿಯಮಗಳನ್ನು ಗಾಳಿಗೆ ತೂರಿ ಚಿಕಿತ್ಸೆ ನೀಡುವುದು ಹಾಗೂ ಔಷಧಿ ವ್ಯಾಪಾರಿಗಳು ವೈದ್ಯರ ಸಲಹಾ ಚೀಟಿಗಳಿಲ್ಲದೆ ಔಷಧಿಗಳನ್ನು ನೀಡುವುದು ಮಾಡಿದರೆ ಅಂತಹವರನ್ನು ನಾನು ಸಹಿಸುವುದಿಲ್ಲ ಅಂತಹ ಯಾವುದೇ ಕ್ಲಿನಿಕ್, ಔಷಧಿ ಅಂಗಡಿಗಳನ್ನು ಮುಲಾಜಿಲ್ಲದೆ ಬೀಗ ಹಾಕಿಸುವೆ ಎಂದು ವಾರ್ನಿಂಗ್‍ ಕೊಟ್ಟಿದ್ದಾರೆ

    ಸಾರ್ವಜನಿಕ ಕ್ಲಿನಿಕ್‍ಗಳು ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲಿ ಹೋದರೆ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ. ಯಾವುದೇ ಖಾಸಗಿ ಆಸ್ಪತ್ರೆಗಳು ಚಿಕಿತ್ಸೆ ಕೊಡಬಾರದು ಎಂದು ಹೇಳಿಲ್ಲ. ಕೊರೊನಾ ಲಕ್ಷಣಗಳು ಇರುವಂತಹವರಿಗೆ ತಕ್ಷಣ ದೊರೆಯುವ ರ್‍ಯಾಪಿಡ್ ಆಂಟಿಜೆನ್ ಟೆಸ್ಟ್ ಒಳಪಡಿಸಿ ಕೊರೊನಾ ಚಿಕಿತ್ಸೆ ನೀಡಬೇಕು. ಬೇಕಾಬಿಟ್ಟಿ ಚಿಕಿತ್ಸೆ ನೀಡಿ ಸಾವಿಗೆ ಕಾರಣರಾಗಬಾರದು ಎಂದು ತಾಕೀತು ಮಾಡಿದರು. ಇದನ್ನೂ ಓದಿ: ಸಚಿವ ಮಾಧುಸ್ವಾಮಿ ಸ್ವಕ್ಷೇತ್ರದ ಕೋವಿಡ್ ಕೇರ್ ಸೆಂಟರ್ ನಲ್ಲಿ ಅವ್ಯವಸ್ಥೆ

    ಖಾಸಗಿ ಆಸ್ಪತ್ರೆಗಳಲ್ಲಿ ಯಾವುದೇ ಸಾಮಾಜಿಕ ಅಂತರವಿರುವುದಿಲ್ಲ. ಎಲ್ಲರನ್ನು ಒಂದೇ ಕಡೆ ಕೂರಿಸುವುದು ಹಾಗೂ ಒಂದೇಕಡೆ ಮಲಗಿಸುವುದು ಇದರಿಂದ ರೋಗ ಉಲ್ಬಣವಾಗುತ್ತಿದೆ. ಶಿರಾದಲ್ಲಿ ವೈದ್ಯರುಗಳು ಹಣಗಳಿಸುವುದಕ್ಕಾಗಿ ಆರ್‌ಟಿಪಿಸಿಆರ್ ನೆಗೆಟಿವ್ ಬಂದಿದ್ದರೂ ಅಂತಹ ರೋಗಿಗಳಿಗೆ ಸಿಟಿ ಸ್ಕ್ಯಾನ್ ಮಾಡಿಸುತ್ತಿದ್ದಾರೆ. ಇಂತಹ ಬೆಳವಣಿಗೆ ನಿಲ್ಲಬೇಕು ಎಂದು ವಾರ್ನಿಂಗ್‍ ಮಾಡಿದ್ದಾರೆ.

    ರೋಗಿಗಳು ಖಾಸಗಿಯಾಗಿ ಚಿಕಿತ್ಸೆ ಪಡೆದುಕೊಂಡಿರುವ ಅವರು ವೆಂಟಿಲೇಟರ್‍ಗೆ ಹೋಗಿದ್ದಾರೆ. ರ್‍ಯಾಪಿಡ್ ಆಂಟಿಜೆನ್ ಟೆಸ್ಟ್ ಕೇವಲ ಹತ್ತು ನಿಮಿಷದಲ್ಲಿ ಫಲಿತಾಂಶ ತಿಳಿಯುತ್ತದೆ ಅಂತ ವ್ಯಕ್ತಿಗಳಿಗೆ ನೆಗೆಟಿವ್ ಬಂದರೆ ಅಂತಹವರನ್ನು ಆರ್‌ಟಿಪಿಸಿಗೆ ಒಳಪಡಿಸಿ ಎಂದಿದ್ದಾರೆ.

    ಜನತೆ ಕೂಡ ಮೂರ್ಖರಾಗಿದ್ದಾರೆ. ಸರ್ಕಾರಿ ಆಸ್ಪತ್ರೆಗೆ ಹೋದರೆ ಕೊರೊನಾ ಟೆಸ್ಟ್ ಮಾಡುತ್ತಾರೆ ಎಂದು ಬರೋದಿಲ್ಲ. ಆಸ್ಪತ್ರೆಗೂ ಹೋಗೋದಿಲ್ಲ ಅಂತಹವರು ಮೆಡಿಕಲ್ ಸ್ಟೋರ್‍ಗಳಿಗೆ ಹೋಗಿ ಔಷಧಿ ಪಡೆಯುತ್ತಾರೆ. ಇದರಿಂದ ರೋಗ ಉಲ್ಬಣವಾಗಿ ಆಕ್ಸಿಜನ್ ಕೊರತೆ ಉಂಟಾದಾಗ ಸರ್ಕಾರಿ ಆಸ್ಪತ್ರೆಗೆ ಬರುತ್ತಾರೆ ಇದರಿಂದ ಉಳಿಸಲು ಕಷ್ಟವಾಗುತ್ತದೆ. ಇಂತಹ ಬೆಳವಣಿಗೆಯನ್ನು ನಾನು ಸಹಿಸುವುದಿಲ್ಲ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇನೆ ಎಂದಿದ್ದಾರೆ.

  • ಪತ್ನಿಯ ತಿಥಿ ದಿನವೇ ಪತಿ ಸಾವು -ಇಬ್ಬರು ಮಕ್ಕಳು ಅನಾಥ

    ಪತ್ನಿಯ ತಿಥಿ ದಿನವೇ ಪತಿ ಸಾವು -ಇಬ್ಬರು ಮಕ್ಕಳು ಅನಾಥ

    ಮೈಸೂರು: ಕೋವಿಡ್‍ನಿಂದ ಮೃತಪಟ್ಟ ಪತ್ನಿಯ ತಿಥಿ ದಿನವೇ ಪತಿಯೂ ಕೋವಿಡ್‍ನಿಂದಾಗಿ ಸಾವನ್ನಪ್ಪಿದ್ದು, ಇವರ ಇಬ್ಬರು ಮಕ್ಕಳು ಅನಾಥರಾಗಿರುವ ಮನಕಲಕುವ ಘಟನೆ  ಮೈಸೂರಿನಲ್ಲಿ ನಡೆದಿದೆ. ಇದನ್ನೂ ಓದಿ:  ಪತ್ನಿಗೆ ಕೊರೊನಾ- ಪ್ರಾಣ ಬಿಟ್ಟ ಪತಿರಾಯ

    ಕೆ. ಸುಷ್ಮ(37) ಹಾಗೂ ಡಿ.ಪ್ರಸನ್ನ(44) ಮೃತರಾಗಿದ್ದಾರೆ. ಮೈಸೂರಿನ ಗಂಗೋತ್ರಿ ಲೇಔಟ್‍ನ ನಿವಾಸಿಗಳಾದ ಇವರು ಕೊರೊನಾದಿಂದ ಮೃತಪಟ್ಟಿದ್ದಾರೆ. ಹಾಸನ ಸರ್ಕಾರಿ ಪದವಿ ಕಾಲೇಜಿನ ಅತಿಥಿ ಉಪನ್ಯಾಸಕಿ ಕೆ. ಸುಷ್ಮ ಕಾರ್ಯ ನಿರ್ವಹಿಸುತ್ತಿದ್ದರು. ಇವರ ಪತಿ ಡಿ.ಪ್ರಸನ್ನ ಮೈಸೂರು ವಿಶ್ವವಿದ್ಯಾನಿಲಯದ ತೋಟಗಾರಿಕೆ ವಿಭಾಗದಲ್ಲಿ ತಾತ್ಕಾಲಿಕ ವಾಹನ ಚಾಲಕ ರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇದನ್ನೂ ಓದಿ:
    ಕೊರೊನಾ ಸೋಂಕಿಗೆ ಒಂದು ವರ್ಷದ ಕಂದಮ್ಮ ಬಲಿ

    ತಿಂಗಳ ಹಿಂದೆ ಪತಿಗೆ ಕೊರೊನಾ ಸೋಂಕು ತಗುಲಿತ್ತು. ಬಳಿಕ ಪತ್ನಿಯಲ್ಲಿಯೂ ಸೋಂಕು ಕಾಣಿಸಿಕೊಂಡಿತ್ತು. ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಮಧ್ಯೆ ಶಾಲೆಗೆ ರಜೆ ಇದ್ದ ಕಾರಣ ಮಕ್ಕಳನ್ನು ತಾತ ಹುಣಸೂರು ತಾಲ್ಲೂಕಿನಲ್ಲಿನ ಮನೆಯಲ್ಲಿ ಇದ್ದರು. 11 ದಿನದ ಹಿಂದೆ ಸುಷ್ಮ ಮೃತಪಟ್ಟಿದ್ದರು. ಶುಕ್ರವಾರ ಸುಷ್ಮಾ ಅವರ ಹನ್ನೊಂದನೇ ದಿನದ ಕಾರ್ಯವನ್ನು ಮಾಡಲು ಮೈಸೂರಿಗೆ ಮಕ್ಕಳು ಆಗಮಿಸಿದ್ದರು. ಇತ್ತ ತಿಥಿ ಕಾರ್ಯ ನಡೆಯಬೇಕಾದರೆ ತಂದೆ ಪ್ರಸನ್ನ ಕೋವಿಡ್‍ನಿಂದ ಸಾವನ್ನಪ್ಪಿದ್ದಾರೆ. ತಂದೆ-ತಾಯಿ ಇಬ್ಬರನ್ನೂ ಕಳೆದುಕೊಂಡ 14,12 ವರ್ಷದ ಇಬ್ಬರು ಹೆಣ್ಣು ಮಕ್ಕಳ ಭವಿಷ್ಯಕ್ಕೆ ಕಾರ್ಮೋಡ ಆವರಿಸಿದೆ. ಇದನ್ನೂ ಓದಿ:  ಕೊರೊನಾದಿಂದ ದೂರವಿರಲು ಹಾವು ತಿಂದ

  • ಕೊರೊನಾ ಸೋಂಕಿಗೆ ಒಂದು ವರ್ಷದ ಕಂದಮ್ಮ ಬಲಿ

    ಕೊರೊನಾ ಸೋಂಕಿಗೆ ಒಂದು ವರ್ಷದ ಕಂದಮ್ಮ ಬಲಿ

    ಶಿವಮೊಗ್ಗ: ಕೊರೊನಾ ಸೋಂಕಿಗೆ ಒಂದು ವರ್ಷದ ಕಂದಮ್ಮ ಬಲಿಯಾದ ಮನಕಲಕುವ ಘಟನೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ನಡೆದಿದೆ.

    ಮೃತಪಟ್ಟ ಮಗುವನ್ನು ಉದಮ (1) ಎಂದು ಗುರುತಿಸಲಾಗಿದೆ. ಶಿವಮೊಗ್ಗದ ಗಾಂಧಿ ಬಜಾರಿನ ಮಡಿವಾಳರ್ ಕೇರಿ ನಿವಾಸಿಯಾಗಿರುವ ಉದಯ – ಚೈತ್ರಾ ದಂಪತಿಯ ಮಗು ಕೊರೊನಾ ಸೋಂಕಿಗೆ ಬಲಿಯಾಗಿದೆ. ಇದನ್ನೂ ಓದಿ : ವಿವಾಹವಾದ ನಾಲ್ಕೇ ದಿನಕ್ಕೆ ಕೊರೊನಾಗೆ ಬಲಿಯಾದ ನವ ವಿವಾಹಿತೆ

    ಮಗುವಿಗೆ ಬಿಳಿ ರಕ್ತಕಣ ಕಡಿಮೆಯಾಗಿದೆ ಎಂದು ಹೆತ್ತವರು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ನಂತರ ಮಗುಗೆ ಆಕ್ಸಿಜನ್ ಸಮಸ್ಯೆ ಎದುರಾಗಿದೆ. ನಂತರ ಮಗುವನ್ನು ಚಿಕಿತ್ಸೆಗೆಂದು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದನ್ನೂ ಓದಿ : ಮದುವೆಯಾದ ನಾಲ್ಕೇ ದಿನಕ್ಕೆ ನವವಿವಾಹಿತೆ ಕೊರೊನಾಗೆ ಬಲಿ..!

    ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ ನಂತರ ಮಗುವನ್ನು ಕೋವಿಡ್ ಟೆಸ್ಟ್‍ಗೆ ಒಳಪಡಿಸಿದ್ದಾರೆ. ನಂತರ ಮಗುಗೆ ಕೋವಿಡ್ ಸೋಂಕಿರುವುದು ದೃಢಪಟ್ಟಿದೆ. ಚಿಕಿತ್ಸೆ ಪಡೆಯುತ್ತಿದ್ದ ಮಗು ನಿನ್ನೆ ರಾತ್ರಿ ಉಸಿರಾಟದ ಸಮಸ್ಯೆಯಿಂದ ಮೃತಪಟ್ಟಿದೆ. ಮಗು ಮೃತಪಟ್ಟ ನಂತರ ಹೆತ್ತವರು ಹಾಗೂ ಕುಟುಂಬಸ್ಥರ ರೋಧನೆ ಮುಗಿಲು ಮುಟ್ಟಿದೆ. ಇದನ್ನೂ ಓದಿ:  ಸೋಂಕು ಬಗ್ಗೆ ಜಾಗೃತಿ ಮೂಡಿಸುತ್ತಿದ್ದ ವ್ಯಕ್ತಿಯೇ ಕೊರೊನಾಗೆ ಬಲಿ

  • ರಾಯಚೂರಿನಲ್ಲಿ ಬ್ಲ್ಯಾಕ್ ಫಂಗಸ್ ಪ್ರಕರಣ ಹೆಚ್ಚಳ – ನಾಲ್ಕು ಜನ ಸೋಂಕಿತರು ಸಾವು

    ರಾಯಚೂರಿನಲ್ಲಿ ಬ್ಲ್ಯಾಕ್ ಫಂಗಸ್ ಪ್ರಕರಣ ಹೆಚ್ಚಳ – ನಾಲ್ಕು ಜನ ಸೋಂಕಿತರು ಸಾವು

    ರಾಯಚೂರು: ಜಿಲ್ಲೆಯಲ್ಲಿ ಬ್ಲ್ಯಾಕ್ ಫಂಗಸ್ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಒಟ್ಟು 31 ಪ್ರಕರಣಗಳು ಈಗಾಗಲೇ ದಾಖಲಾಗಿದ್ದು, ಇದುವರೆಗೆ ನಾಲ್ಕು ಜನ ಸೋಂಕಿತರು ಬ್ಲ್ಯಾಕ್ ಫಂಗಸ್‍ಗೆ ಬಲಿಯಾಗಿದ್ದಾರೆ.

    ಜಿಲ್ಲೆಯಲ್ಲಿ ದಾಖಲಾಗಿರುವ ಬ್ಲ್ಯಾಕ್ ಫಂಗಸ್ ಪ್ರಕರಣಗಳ ಪೈಕಿ, ಖಾಸಗಿ ಆಸ್ಪತ್ರೆಗಳಲ್ಲಿ ಪತ್ತೆಯಾದ ಪ್ರಕರಣಗಳು ಹಾಗೂ ಸಾವಿನ ಲೆಕ್ಕವನ್ನು ಜಿಲ್ಲಾಡಳಿತ ಪ್ರಕಟಿಸಿಲ್ಲ. ಸದ್ಯ 23 ಜನ ಸೋಂಕಿತರು ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ. ಇದನ್ನೂ ಓದಿ, ರಾಯಚೂರಿನ ಗ್ರಾಮೀಣ ಭಾಗದಲ್ಲಿ ಹೆಚ್ಚುತ್ತಿರುವ ಕೊರೊನಾ- ಆರೈಕೆ ಕೇಂದ್ರಕ್ಕೆ ಬರಲೊಪ್ಪದ ಜನ

    ರಿಮ್ಸ್ ಆಸ್ಪತ್ರೆಯಿಂದ ಚಿಕಿತ್ಸೆಗಾಗಿ ಬೇರೆಡೆಗೆ 4 ಜನ ಸೋಂಕಿತರು ಹೋಗಿದ್ದಾರೆ. ಬ್ಲ್ಯಾಕ್ ಫಂಗಸ್ ಚಿಕಿತ್ಸೆಗಾಗಿ ರಿಮ್ಸ್ ಆಸ್ಪತ್ರೆಯಲ್ಲಿ ವಿಶೇಷ ವಾರ್ಡ್‍ನ್ನು ಈಗಾಗಲೇ ಆರಂಭ ಮಾಡಲಾಗಿದೆ. 28 ಹಾಸಿಗೆಯ ವಾರ್ಡ್ ನಲ್ಲಿ ಚಿಕಿತ್ಸೆ ಆರಂಭಿಸಲಾಗಿದೆ. 11 ಜನ ನುರಿತ ಇ.ಎನ್.ಟಿ ವೈದ್ಯರ ತಂಡ ಬ್ಲ್ಯಾಕ್ ಫಂಗಸ್ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದೆ. ಇದುವರೆಗೆ ಇಬ್ಬರೂ ಬ್ಲ್ಯಾಕ್ ಫಂಗಸ್ ಸೋಂಕಿತರಿಗೆ ವೈದ್ಯರು ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಖಾಸಗಿ ಆಸ್ಪತ್ರೆಗಳಲ್ಲೂ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ.

  • ಕೊರೊನಾ ಸೋಂಕಿಗೆ ಬಳ್ಳಾರಿಯ ವೈದ್ಯ ಬಲಿ

    ಕೊರೊನಾ ಸೋಂಕಿಗೆ ಬಳ್ಳಾರಿಯ ವೈದ್ಯ ಬಲಿ

    ಬಳ್ಳಾರಿ: ಕೊರೊನಾ ಮಹಾ ಮಾರಿ ಸೋಂಕು ಜಿಲ್ಲೆಯಲ್ಲಿ ವ್ಯಾಪಕವಾಗಿ ಹರಡಿದ್ದು, ಸೋಂಕಿಗೆ ವೈದ್ಯ ಬಲಿಯಾಗಿದ್ದಾರೆ. ಕರೋನಾ ಸೋಂಕಿಗೆ ಬಳ್ಳಾರಿಯ ವಿಮ್ಸ್ ಆಸ್ಪತ್ರೆಯ ವೈದ್ಯರೊಬ್ಬರು ಸಾವಿಗೀಡಾಗಿದ್ದಾರೆ.

    ವಿಜಯ ಶಂಕರ್ (52) ಮೃತರಾಗಿದ್ದಾರೆ. ಕಳೆದ ಹಲವಾರು ವರ್ಷಗಳಿಂದ ವಿಮ್ಸ್ ಆಸ್ಪತ್ರೆಯಲ್ಲಿ ಚರ್ಮರೋಗ ತಜ್ಞರಾಗಿ ಸೇವೆ ಸಲ್ಲಿಸುತ್ತಿದ್ದರು. ಕಳೆದ ಒಂದು ವಾರದಿಂದ ಕೊರೊನಾ ಸೋಂಕಿನಿಂದ ಬಳಲುತ್ತಿದ್ದ ವೈದ್ಯರು ಇಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸೋಂಕಿಗೆ ಬಲಿಯಾಗಿದ್ದಾರೆ.

    ಫ್ರೆಂಟ್ ಲೈನ್ ವಾರಿಯಾರ ಆದ ಹಿನ್ನೆಲೆಯಲ್ಲಿ ಕಳೆದ ಒಂದು ತಿಂಗಳ ಹಿಂದೆ ಎರಡೂ ಡೋಜ್ ವ್ಯಾಕ್ಸಿನ್ ಸಹ ಪಡೆದಿದ್ದರು. ಆದರೆ ಕಳೆದ ನಾಲ್ಕು ವರ್ಷಗಳ ಹಿಂದೆ ಕಿಡ್ನಿ ಕಸಿ ಮಾಡಿಸಿಕೊಂಡಿದ್ದು, ವೈದ್ಯರು ಇಂದು ಬೆಳಗಿನ ಜಾವ ಚಿಕಿತ್ಸೆ ಫಲಕಾರಿಯಾಗದ ಸಾವಿಗೀಡಾಗಿದ್ದಾರೆ.

  • ಸಾವಿನಲ್ಲೂ ಒಂದಾದ ದಂಪತಿ

    ಸಾವಿನಲ್ಲೂ ಒಂದಾದ ದಂಪತಿ

    ಬಳ್ಳಾರಿ: ಪತಿ ಸಾವನ್ನಪಿದ್ದಾರೆ ಎಂಬ ವಿಷಯ ತಿಳಿಯುತ್ತಿದ್ದಂತೆ ಮಹಿಳೆ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಗುಡೇಕೋಟೆ ಗ್ರಾಪಂ ವ್ಯಾಪ್ತಿಯಾ ಅಪ್ಪೇನಹಳ್ಳಿಯಲ್ಲಿ ನಡೆದಿದೆ.

    ಪರಮೇಶ್ವರ, ಅಂಗಡಿ ವಾಮದೇವಮ್ಮ(60) ಮೃತರಾಗಿದ್ದಾರೆ. ಕಳೆದ ಹಲವಾರು ವರ್ಷಗಳಿಂದ ಗುತ್ತಿಗೆದಾರರಾಗಿ ಕೆಲಸ ಮಾಡುತ್ತಿದ್ದ ಪರಮೇಶ್ವರ ಕೊರೊನಾ ಸೋಂಕಿನಿಂದ ಮೃತರಾಗಿದ್ದಾರೆ. ಪತಿ ಸಾವಿನ ಸುದ್ದಿ ತಿಳಿದ ಪತ್ನಿ ಅಂಗಡಿ ವಾಮದೇವಮ್ಮ ಹೃದಯಾಘಾತದಿಂದ ಸಾವಿಗೀಡಾಗಿದ್ದಾರೆ.

    ಕಳೆದ ಒಂದು ವಾರದ ಹಿಂದ ಪರಮೇಶ್ವರಗೆ ಕೊರೊನಾ ಸೋಂಕು ತಗುಲಿರುವುದು ದೃಢವಾಗಿತ್ತು, ಇದಾದ ಬಳಿಕ ಅವರನ್ನು ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದ ಹಿನ್ನೆಲೆಯಲ್ಲಿ ಪರಮೇಶ್ವರ ನಿನ್ನೆ ಸಂಜೆ ಮೃತಪಟ್ಟಿದ್ದಾರೆ.

    ವಾಮದೆವಮ್ಮ ಪತಿ ಅಂತ್ಯ ಕ್ರಿಯೆಯಲ್ಲಿ ಪಾಲ್ಗೊಂಡಿದ್ದು, ಆಗ ಅವರ ಆರೋಗ್ಯ ಸ್ಥಿತಿ ಸಹಜವಾಗಿತ್ತು. ಆದರೆ ಸಾಯಂಕಾಲ ಅಂತ್ಯಕ್ರಿಯೆ ಮಾಡಿ ಮನೆಗೆ ಬಂದು ಒಂದು ಗಂಟೆಯಲ್ಲಿ ದಿಡೀರ್ ಹೃದಯಾಘಾತಕ್ಕೊಳಗಾಗಿ ಮೃತಪಟ್ಟಿದ್ದಾರೆ. ಪತಿಯ ಅಗಲಿಕೆ ನೋವು ತಾಳದೇ ಕೆಲವೇ ತಾಸುಗಳ ಅಂತರದಲ್ಲಿ ನಿಧನರಾಗಿದ್ದಾರೆ. ಈ ಮೂಲಕ ಒಟ್ಟಿಗೆ ಬಾಳಿ ಬದುಕಿದ ಜೋಡಿ, ಮರಳಿಬಾರದೂರಿಗೆ ಪಯಣ ಬಳಸಿದ್ದಾರೆ.

  • ಡೆಡ್ಲಿ ಕೊರೊನಾವನ್ನು ಗೆದ್ದ ಶತಾಯುಷಿ ಅಜ್ಜ- ಪಟಾಕಿ ಸಿಡಿಸಿ ಸಂಭ್ರಮಿಸಿದ ಕುಟುಂಬಸ್ಥರು

    ಡೆಡ್ಲಿ ಕೊರೊನಾವನ್ನು ಗೆದ್ದ ಶತಾಯುಷಿ ಅಜ್ಜ- ಪಟಾಕಿ ಸಿಡಿಸಿ ಸಂಭ್ರಮಿಸಿದ ಕುಟುಂಬಸ್ಥರು

    ಬೀದರ್ : ಕೊರೊನಾ ಮಹಾಮಾರಿಗೆ ಕಳೆದ 10 ದಿನಗಳಿಂದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶತಾಯುಷಿ ಅಜ್ಜ ಕೊರೊನಾವನ್ನು ಗೆದ್ದು ರಾಜ್ಯದ ಗಮನ ಸೆಳೆದಿದ್ದಾರೆ.

    ಬೀದರ್ ಜಿಲ್ಲೆಯ ಭಾಲ್ಕಿ ಪಟ್ಟಣದ 101 ವರ್ಷದ ಶಿವಲಿಂಗಪ್ಪ ಮಲಶೆಟ್ಟೆಪ್ಪ ಕೊರೊನಾ ದಿಂದ ಗುಣಮುಖರಾಗಿದ್ದಾರೆ. ಕೊರೊನಾ ಸೋಂಕಿನಿಂದ ವೃದ್ಧ ವಾಸಿಯಾಗಿರುವ ಹಿನ್ನೆಲೆ ಕುಟುಂಬಸ್ಥರು ಪಟಾಕಿ ಸಿಡಿಸಿ ಸಂಭ್ರಮಾಚರಣೆಯನ್ನು ಮಾಡಿದ್ದಾರೆ.

    ಮೇ 15ರಂದು ಕೋವಿಡ್ ಸೋಂಕಿತರಾಗಿ ಭಾಲ್ಕಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದ,ಶತಾಯುಷಿ ಅಜ್ಜ 10 ದಿನಗಳ ಚಿಕಿತ್ಸೆ ಬಳಿಕ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಭಾಲ್ಕಿ ತಾಲೂಕು ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಶತಾಯುಷಿ ಅಜ್ಜನಿಗೆ ಆಸ್ಪತ್ರೆಯಿಂದ ಬೀಳ್ಕೊಟ್ಟಿದ್ದಾರೆ.

    ಶತಾಯುಷಿ ಅಜ್ಜ ಕೊರೊನಾ ಗೆದ್ದು ನಿವಾಸಕ್ಕೆ ಬರುತ್ತಿದ್ದಂತೆ ಕುಟುಂಬಸ್ಥರು ಪಟಾಕಿ ಸಿಡಿಸಿ ಬರಮಾಡಿಕೊಂಡು ಸಂಭ್ರಮಾಚರಣೆ ಮಾಡಿದ್ದಾರೆ. ಕೋವಿಡ್ ಪಾಸಿಟಿವ್ ಎಂದಾ ಕ್ಷಣವೇ ಕೆಲವರು ಭಯಭೀತರಾಗುತ್ತಾರೆ ಆದರೆ ಇಳಿವಯಸ್ಸಿನಲ್ಲೂ ಶಿವಲಿಂಗಪ್ಪ ತಮಗೆ ಕೊರೊನಾ ಬಂದಿದೆ ಎಂದು ಗೊತ್ತಾದರೂ ಧೈರ್ಯದಿಂದ ಎದುರಿಸಿ ಕೊರೊನಾವನ್ನೆ ಗೆದ್ದಿದ್ದಾರೆ.

    101 ವರ್ಷದ ನಮ್ಮ ತಂದೆಗೆ ಕೊರೋನಾ ಪಾಸಿಟಿವ್ ಧೃಡವಾಗಿತ್ತು,ಕಳೆದ 10 ದಿನಗಳಿಂದ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ತಂದೆಯವರು ಕೊರೊನಾ ದಿಂದ ಗುಣಮುಖರಾದ ಕಾರಣ ಇಂದು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು ಎಂದು ವೃದ್ಧರ ಮಗ ವೈಜನಾಥ್ ಬೋರೆ ಹರ್ಷ ವ್ಯಕ್ತಪಡಿಸಿದ್ದಾರೆ.

  • ಕೊರೊನಾ ಗೆದ್ದ 105 ವರ್ಷದ ಅಜ್ಜಿ

    ಕೊರೊನಾ ಗೆದ್ದ 105 ವರ್ಷದ ಅಜ್ಜಿ

    ಬೆಂಗಳೂರು: ಶೇಷಾದ್ರಿಪುರಂನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 105 ವರ್ಷದ ವೃದ್ಧೆಯೊಬ್ಬರು ಕೊರೊನಾದಿಂದ ವಾಸಿಯಾಗಿದ್ದಾರೆ.

    105 ವರ್ಷದ ಲಕ್ಷ್ಮಮ್ಮ ಅಜ್ಜಿಗೆ ಕೊರೊನಾ ಸೋಂಕು ದೃಢವಾಗಿತ್ತು. ಹೀಗಾಗಿ ಶೇಷಾದ್ರಿಪುರಂನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕಳೆದ 12 ದಿನದಿಂದ ಚಿಕಿತ್ಸೆ ಪಡೆಯುತ್ತಾ ಇದ್ದ ಅಜ್ಜಿ ಇದೀಗ ಕೊರೊನದಿಂದ ವಾಸಿಯಾಗಿದ್ದರೆ.

    ದೇಶಾದ್ಯಂತ ಅಬ್ಬರಿಸಿದ್ದ ಮಾರಕ ಕೊರೊನಾ ಸೋಂಕಿನ ಪ್ರಮಾಣ ಕೊಂಚ ತಗ್ಗಿದ್ದು, ಕಳೆದ 24 ಗಂಟೆಗಳ ಅವಧಿಯಲ್ಲಿ 2.22ಲಕ್ಷಕ್ಕೂ ಅಧಿಕ ಹೊಸ ಕೋವಿಡ್-19 ಸೋಂಕು ಪ್ರಕರಣಗಳು ವರದಿಯಾಗಿದ್ದು, 4,454 ಸೋಂಕಿತರು ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.