ಯಾದಗಿರಿ: ಜಿಲ್ಲೆಯ ಏಡ್ಸ್ ರೋಗಿಗಳಿಗೆ ಕಳೆದ ಒಂದು ತಿಂಗಳಿಂದ ಜಿಲ್ಲಾಸ್ಪತ್ರೆಯಲ್ಲಿ ಸರಿಯಾದ ಚಿಕಿತ್ಸೆ ನೀಡಿದ ಕಾರಣ 300 ಕ್ಕೂ ಅಧಿಕ ಹೆಚ್‍ಐವಿ ಸೋಂಕಿತರು ಪರದಾಡುವಂತಾಗಿದೆ.
ಜಿಲ್ಲೆಯ ಏಡ್ಸ್ ರೋಗಿಗಳ ಸಮಸ್ಯೆಗೆ ವೈದ್ಯರು ಸರಿಯಾಗಿ ಸ್ಪಂದಿಸದ ಕಾರಣ ಬೇರೆ, ಬೇರೆ ತಾಲೂಕಿನಿಂದ ನಿತ್ಯ ಬಂದು ವಾಪಸು ಹೋಗುತ್ತಿದ್ದಾರೆ ಹೆಚ್‍ಐವಿ ಸೋಂಕಿತರು. ಸೋಂಕಿತರಿಗೆ ಬ್ಲಡ್ ಟೆಸ್ಟ್ ಮಾಡುತ್ತಿಲ್ಲ. ಬ್ಲಡ್ ಟೆಸ್ಟ್ ಮಾಡದೇ ಮಾತ್ರೆಗಳನ್ನು ನುಂಗುವಂತಿಲ್ಲ. ಇದನ್ನೂ ಓದಿ: ಸೊಸೆ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಬಲವಂತವಾಗಿ ಕೋಳಿ ರಕ್ತ ಕುಡಿಸಿದ ಮಾವ!
ಹೀಗಿದ್ದರೂ ಜಿಲ್ಲಾಸ್ಪತ್ರೆಯ ವೈದ್ಯ ಅಧಿಕಾರಿ ಸಂಜೀವ್ ರಾಯಚೂರಕರ್ ರೋಗಿಗಳಿಗೆ ಹಾರಿಕೆಯ ಉತ್ತರ ನೀಡುತ್ತಿದ್ದಾರೆ. ನಿತ್ಯ ಆಸ್ಪತ್ರೆಗೆ ಬಂದು ಹೋಗುತ್ತಿರುವುದಕ್ಕೆ ಸೋಂಕಿತರು ಮುಜುಗರ ಅನುಭವಿಸುವಂತಾಗಿದೆ. ಇನ್ನೂ ಇದು ಹೀಗೆ ಮುಂದುವರಿದರೆ ಸೋಂಕಿತರಿಗೆ ಪ್ರಾಣಾಪಾಯವಾಗುವ ಸಾಧ್ಯತೆಯಿದೆ. ಇದನ್ನೂ ಓದಿ: ದೆಹಲಿ ಜನ್ರಿಗೆ ಗುಡ್ ನ್ಯೂಸ್ – ಅ.1ರಿಂದ ಕಾರ್ಯನಿರ್ವಹಿಸಲಿರುವ ಹೊಂಜು ಗೋಪುರ
ಮಾನ್ವಿ ಪಟ್ಟಣದ ಉಮ್ಮೇ ಕುಲ್ಸುಮ್(5) ಮೃತ ಬಾಲಕಿ. ಚಿಕಿತ್ಸೆ ಫಲಕಾರಿಯಾಗದೇ ಮಗು ಹೈದರಾಬಾದ್‍ನ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದೆ. ಮಾನ್ವಿ ಪಟ್ಟಣದ ನಿವಾಸಿ ಸೈಯದ್‍ರವರ ಮಗಳು ಉಮ್ಮೇ ಕುಲ್ಸುಮ್‍ಗೆ ಮಾನ್ವಿ, ರಾಯಚೂರು ಹಾಗೂ ಹೈದರಾಬಾದ್‍ನಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗಲಿಲ್ಲ. ಉಮ್ಮೇ ಕುಲ್ಸುಮ್ ಡೆಂಗ್ಯೂ ಜ್ವರಕ್ಕೆ ಬಲಿಯಾಗಿದೆ.
ಜಿಲ್ಲೆಯಲ್ಲಿ ಈವರೆಗೆ ಮೂರು ಮಕ್ಕಳು ಡೆಂಗ್ಯೂವಿನಿಂದ ಸಾವನ್ನಪ್ಪಿದ್ದಾರೆ. ಮಾನ್ವಿ ಪಟ್ಟಣದಲ್ಲಿ ಡೆಂಗ್ಯೂ ಜ್ವರದಿಂದ ಹೆಚ್ಚು ಮಕ್ಕಳು ಬಾಧಿತರಾಗಿದ್ದಾರೆ. ಪಟ್ಟಣದ ತಾಲೂಕಾಸ್ಪತ್ರೆ ಹಾಗೂ ರಾಯಚೂರು ನಗರದ ಆಸ್ಪತ್ರೆಗಳಲ್ಲಿ ಬೆಡ್ ಸಮಸ್ಯೆ ಎದುರಾಗಿದೆ. ಮಕ್ಕಳನ್ನು ಆಸ್ಪತ್ರೆಗೆ ಕರೆದುಕೊಂಡು ಬರುವ ಪೋಷಕರು ಪರದಾಡುವಂತಾಗಿದೆ. ಇದನ್ನೂ ಓದಿ: 40 ಕೆಜಿ ತೂಕ ಇಳಿಸಿಕೊಂಡ ಬಾಲಿವುಡ್‍ನ ನೃತ್ಯ ನಿರ್ದೇಶಕ ರೆಮೋ ಡಿಸೋಜಾ ಪತ್ನಿ
ರಾಯಚೂರು: ಜಿಲ್ಲೆಯಲ್ಲಿ ಡೆಂಗ್ಯೂ ಪ್ರಕರಣಗಳು ದಿನೇ, ದಿನೇ ಹೆಚ್ಚಾಗುತ್ತಿದ್ದು, ಸಿಂಧನೂರು ನಗರದ ಮಹಿಬೂಬಿಯಾ ಕಾಲೋನಿಯಲ್ಲಿ 6 ವರ್ಷದ ಮಗು ಡೆಂಗ್ಯೂಗೆ ಬಲಿಯಾಗಿದ್ದಾಳೆ.
ಅಂಗನವಾಡಿ ಕಾರ್ಯಕರ್ತೆ ಅನಿತಾರವರ ಮಗಳು ಸೋನು(6) ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ. ಈ ಮೂಲಕ ಜಿಲ್ಲೆಯಲ್ಲಿ ಡೆಂಗ್ಯೂವಿನಿಂದ ಇಬ್ಬರು ಮಕ್ಕಳು ಅಸುನೀಗಿದ್ದಾರೆ. ಒಂದು ವಾರದಿಂದ ಸಿಂಧನೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸೋನುಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿಯ ವಿಮ್ಸ್‍ಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾಳೆ. ಇದನ್ನೂ ಓದಿ: ನೈಸ್ ರಸ್ತೆಯಲ್ಲಿ ಕಾರು ಪಲ್ಟಿ – ಪಾರ್ಟಿಯಿಂದ ಬರುವಾಗ ಅಪಘಾತ?
ಕಳೆದ ವಾರವಷ್ಟೇ ಮಾನ್ವಿಯಲ್ಲಿ 5 ವರ್ಷದ ಬಾಲಕ ಡೆಂಗ್ಯೂಗೆ ಬಲಿಯಾಗಿದ್ದ. ಡೆಂಗ್ಯೂಗೆ ಜಿಲ್ಲೆಯಲ್ಲಿ ಇದುವರೆಗೂ 5 ಮಕ್ಕಳು ಬಲಿಯಾಗಿದ್ದಾರೆ ಅಂತ ಶಂಕಿಸಲಾಗಿದೆ. ಆದರೆ ಎರಡು ಪ್ರಕರಣಗಳು ಮಾತ್ರ ಧೃಡಪಟ್ಟಿವೆ. ಇಡೀ ಜಿಲ್ಲೆಯಲ್ಲಿ ವೈರಲ್ ಫೀವರ್ ಹೆಚ್ಚಾಗಿದ್ದು, ಡೆಂಗ್ಯೂ ಪ್ರಕರಣಗಳೂ ಸಹ ವಿಪರೀತವಾಗಿವೆ. ಇದನ್ನೂ ಓದಿ: ರಾಜ್ಯದಲ್ಲೂ ಗುಜರಾತ್ ಮಾದರಿ ಸಂಪುಟ ರಚನೆಯಾದರೆ ಒಳ್ಳೆಯದು: ವಿಜಯೇಂದ್ರ
ರಿಮ್ಸ್ ಆಸ್ಪತ್ರೆಯೊಂದರಲ್ಲೇ 30ಕ್ಕೂ ಅಧಿಕ ಮಕ್ಕಳಲ್ಲಿ ಡೆಂಗ್ಯೂ ಪತ್ತೆಯಾಗಿದೆ. ಜಿಲ್ಲೆಯಾದ್ಯಂತ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ 1,500ಕ್ಕೂ ಅಧಿಕ ಮಕ್ಕಳು ದಾಖಲಾಗಿದ್ದಾರೆ. ವೈರಲ್ ಫೀವರ್ ಹಾಗೂ ಡೆಂಗ್ಯೂ ಪ್ರಕರಣಗಳಿಂದ ಮಕ್ಕಳ ಪೋಷಕರಲ್ಲಿ ಆತಂಕ ಹೆಚ್ಚಾಗಿದೆ.
ದಾವಣಗೆರೆ: ಬಂದೂಕು ಕ್ಲೀನ್ ಮಾಡುವಾಗ ಮಿಸ್ ಫೈರಿಂಗ್ ಆಗಿ ಪೊಲೀಸ್ ಪೇದೆಯ ಕುತ್ತಿಗೆ ಸೀಳಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ.
ಮೃತ ಡಿಎಆರ್ ಪೊಲೀಸ್ ಪೇದೆಯನ್ನು ಚೇತನ್.ಆರ್(28) ಎಂದು ಗುರುತಿಸಲಾಗಿದೆ. ಈ ಘಟನೆ ದಾವಣಗೆರೆ ಡಿಎಆರ್ ಶಸ್ತ್ರಾಸ್ತ್ರಗಾರದಲ್ಲಿ ಸೋಮವಾರ ಬೆಳಗ್ಗೆ ನಡೆದಿದ್ದು, ತಕ್ಷಣ ಖಾಸಗಿ ಅವರನ್ನು ಆಸ್ಪತ್ರೆಗೆ ಚಿಕಿತ್ಸೆಗಾಗಿ ರವಾನಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
2012 ಬ್ಯಾಚ್ ನಲ್ಲಿ ಆಯ್ಕೆಯಾಗಿದ್ದ ಚೇತನ್, ಹುಣಸಘಟ್ಟೆ ಫೈರಿಂಗ್ ಸೆಂಟರ್ ನಿಂದ ಬಂದಂತಹ ಬಂದೂಕು, ರೈಫಲ್ ಗಳನ್ನು ಸೋಮವಾರ ಬೆಳಗ್ಗೆ ಕ್ಲೀನ್ ಮಾಡುತ್ತಿದ್ದರು, ಇದೇ ಸಂದರ್ಭದಲ್ಲಿ ಅಲ್ಲಿಗೆ ಬಂದ ಸ್ನೇಹಿತರನ್ನು ಚೇತನ್ ಮಾತನಾಡಿಸಿಕೊಂಡು ನಿಂತಿದ್ದರು. ಈ ವೇಳೆ ಬಂದೂಕು ಕ್ಲೀನ್ ಮಾಡುತ್ತಿರುವಾಗ ಮಿಸ್ ಫೈರಿಂಗ್ ಆಗಿದ್ದು, ಎದುರಿಗೆ ಇದ್ದ ಚೇತನ್ ಗಂಟಲು ಭಾಗದಿಂದ ತಲೆಗೆ ಬುಲೆಟ್ ಬಿದ್ದಿದೆ. ಕೂಡಲೇ ಖಾಸಗಿ ಆಸ್ಪತ್ರೆಗೆ ಸಾಗಿಸುವುದರೊಳಗೆ ಪ್ರಾಣಪಕ್ಷಿ ಹಾರಿ ಹೋಗಿದೆ. ಇದನ್ನೂ ಓದಿ:ಆ. 31ರೊಳಗೆ ನಿಮ್ಮ ಸೇನೆ ಇಲ್ಲಿಂದ ಕಾಲ್ಕಿತ್ತಬೇಕು- ಅಮೆರಿಕಾಗೆ ತಾಲಿಬಾನಿಗಳ ಬೆದರಿಕೆ
ಸದ್ಯ ಮೃತ ಪೊಲೀಸ್ ಪೇದೆಯನ್ನು ದಾವಣಗೆರೆ ಜಿಲ್ಲೆಯ ಚೆನ್ನಗಿರಿ ತಾಲೂಕಿನ ಮಲಹಾಳ್ ಗ್ರಾಮದ ನಿವಾಸಿ ಎಂದು ತಿಳಿದು ಬಂದಿದ್ದು, ಚೇತನ್ ಕಳೆದ ಐದು ವರ್ಷಗಳ ಹಿಂದೆ ಪ್ರೀತಿಸಿ ಮನೆಯವರ ವಿರೋಧದ ನಡುವೆಯೇ ಮದುವೆಯಾಗಿದ್ದರು. ಅವರಿಗೆ ಎರಡು ವರ್ಷದ ಮಗು ಇದ್ದು, ಇದೀಗ ಚೇತನ್ ಹೆಂಡತಿ ಮತ್ತೆ 9 ತಿಂಗಳ ಗರ್ಭಿಣಿಯಾಗಿದ್ದಾರೆ. ಹೆಣ್ಣು ಮಗು ಆಗಬೇಕು ಎಂದು ಪುಟ್ಟ ಮಗುವಿಗಾಗಿ ಕಾತುರದಿಂದ ಕಾಯುತ್ತಿದ್ದರು. ಆದರೆ ಇಂದು ನಡೆದ ಆ ದುರ್ಘಟನೆಯಿಂದ ಆತನ ಕನಸಿನ ಗೋಪುರವೇ ಕಳಚಿ ಬಿದ್ದಿದೆ. ಅಲ್ಲದೇ ಶಸ್ತ್ರಾಸ್ತ್ರ ಮೀಸಲು ಪಡೆಯಲ್ಲಿ ಚೇತನ್ ಎಲ್ಲಾ ಸಿಬ್ಬಂದಿಗೂ ಅಚ್ಚುಮೆಚ್ಚಾಗಿದ್ದರು. ಆಸ್ಪತ್ರೆಗೆ ಪೂರ್ವ ವಲಯ ಐಜಿಸಿ ರವಿ.ಎಸ್ ಹಾಗೂ ಎಸ್.ಪಿ. ರಿಷ್ಯಂತ್ ಸೇರಿದಂತೆ ಹಲವು ಅಧಿಕಾರಿಗಳು ಹಾಗೂ ಸಿಬ್ಬಂದಿ ಭೇಟಿ ನೀಡಿದ್ದರು. ಇದನ್ನೂ ಓದಿ:ರಾಜ್ಯದಲ್ಲಿ ಇಂದಿನಿಂದ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನ – ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಚಾಲನೆ
ಉಡುಪಿ: ಭಾರತದ ಔಷಧ ಅಫ್ಘಾನಿಸ್ತಾನಕ್ಕೆ ಸದಾ ರವಾನೆಯಾಗುತ್ತದೆ. ಗಂಭೀರ ಆರೋಗ್ಯ ಪರಿಸ್ಥಿತಿಗಳು ಉಂಟಾದ ಸಂದರ್ಭದಲ್ಲಿ ಅಫ್ಘಾನಿಸ್ತಾನದಿಂದ ಡೆಲ್ಲಿಗೆ ಬಂದು ಚಿಕಿತ್ಸೆ ಪಡೆಯುತ್ತಾರೆ ಎಂಬ ಸತ್ಯಾಂಶವನ್ನು ಅಘ್ಘಾನಿಸ್ತಾನದಿಂದ ತಾಯ್ನಾಡಿಗೆ ಮರಳಿರುವ ಮಲ್ಪೆಯ ಜಾನ್ ಎಂಬವರು ಬಿಚ್ಚಿಟ್ಟಿದ್ದಾರೆ.
ಅಫ್ಘಾನಿಸ್ತಾನ ತಾಲಿಬಾನ್ ಕೈವಶವಾಗುವ ದಿನವೇ ಮಲ್ಪೆಯ ಜಾನ್ ಭಾರತಕ್ಕೆ ವಾಪಸ್ಸಾಗಿದ್ದಾರೆ. ಫ್ಯೂಯೆಲ್ ಸೂಪರ್ ವೈಸರಾಗಿ ಜಾನ್ ಅವರು ವೃತ್ತಿ ನಿರ್ವಹಿಸುತ್ತಿದ್ದರು. ಅಲ್ಲಿಂದ ತಾಯ್ನಾಡಿಗೆ ಮರಳಿದ ಬಳಿಕ ಅಲ್ಲಿನ ಸ್ಥಿತಿಯನ್ನು ಟಿವಿಯಲ್ಲಿ ನೋಡಿ ದೇವರೇ ನನ್ನನ್ನು ಕರೆಸಿಕೊಂಡರು ಎಂದು ಜಾನ್ ಖುಷಿ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಕಾಬೂಲ್ ವಿಮಾನ ನಿಲ್ದಾಣಕ್ಕೆ 5 ಸಾವಿರ ಅಮೆರಿಕ ಸೈನಿಕರ ನಿಯೋಜನೆ
ಅಘ್ಘಾನಿಸ್ತಾನ ಪರಿಸ್ಥಿತಿ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಜಾನ್, ಕಳೆದ 10 ದಿನಗಳಿಂದ ತಾಲಿಬಾನಿಗಳು ನಮ್ಮ ಎಲ್ಲಾ ಕಂಪನಿಗಳನ್ನು ವಶಪಡಿಸಿಕೊಂಡು ಬರುತ್ತಿದ್ದರು. ಕಾಬೂಲ್ ಬ್ರಾಂಚ್ ಮಾತ್ರ ನಮ್ಮ ಕೈಯಲ್ಲಿ ಉಳಿದಿತ್ತು. ನಮಗೆ ಮೆಸೇಜ್ ಮೂಲಕ ಬಾಸ್ ಮಾಹಿತಿಯನ್ನು ಕೊಟ್ಟಿದ್ದರು. ಕೂಡಲೇ ದೇಶಕ್ಕೆ ವಾಪಸಾಗಲು ಸಿದ್ಧರಾಗಿ ಎಂದು ಹೇಳಿದರು.
ಟಿಕೆಟ್ ಮಾಡಿ ಕಳುಹಿಸಿದರು. ವಿಮಾನದಲ್ಲಿ ಕುಳಿತು ಅರ್ಧ ಗಂಟೆಯ ಒಳಗೆ ಅಫ್ಘಾನಿಸ್ತಾನ ಚಿತ್ರಣವೇ ಬದಲಾಗಿದೆ. ತಾಲಿಬಾನ್‍ಗಳು ದೇಶ ವಶಪಡಿಸಿದ್ದಾರೆ ಎಂಬ ಮಾಹಿತಿ ನನಗೆ ಗೊತ್ತಾಯಿತು. ಸಂಕಟ ಸಮಯದಲ್ಲಿ ದೇವರೇ ನನ್ನನ್ನು ಅಲ್ಲಿಂದ ಕರೆದುಕೊಂಡು ಬಂದಿದ್ದಾರೆ ಎಂದು ಅನಿಸುತ್ತದೆ. ದೇವರ ಕೃಪೆಯಿಂದ ನಾನು ವಾಪಸ್ ಬಂದಿದ್ದೇನೆ. ಮನುಷ್ಯ ಮಾತ್ರರಿಂದ ಈ ಕೆಲಸ ಆಗಲು ಸಾಧ್ಯವಿಲ್ಲ. ಅಫ್ಘಾನ್ ಜನಕ್ಕೆ ಆ ದಿನದ ಯೋಚನೆ ಮಾತ್ರ. ಭವಿಷ್ಯದ ಬಗ್ಗೆ ನಾಳಿನ ಬಗ್ಗೆ ಯಾರೂ ಯೋಚನೆ ಮಾಡುವುದಿಲ್ಲ. ಇಂದಿನ ದಿನ ಬದುಕಿದರೆ, ಈ ದಿನ ಚೆನ್ನಾಗಿ ಹೋದರೆ ಆಯ್ತು ಎಂದು ಜೀವನ ಮಾಡುತ್ತಾರೆ. ನಾಳಿನ ಬಗ್ಗೆ ಆಲೋಚನೆಗಳೇ ಅಲ್ಲಿನ ಜನಕ್ಕೆ ಇರುವುದಿಲ್ಲ ಎಂದು ಅಲ್ಲಿನ ಮಾಹಿತಿ ನೀಡಿದರು. ಇದನ್ನೂ ಓದಿ: ತಾಲಿಬಾನಿಗಳನ್ನ RSS, ಬಜರಂಗದಳಕ್ಕೆ ಹೋಲಿಸಿದ ಕವಿ ಮುನ್ವರ್ ರಾಣಾ
ಅಫ್ಘನ್ನರಿಗೆ ಭಾರತದಲ್ಲೇ ಚಿಕಿತ್ಸೆ:
ಕಾಬೂಲ್ ಪಟ್ಟಣದಲ್ಲಿ ವಾರಕ್ಕೆ ಎರಡು-ಮೂರು ಬಾರಿ ಬಾಂಬ್ ಸ್ಫೋಟಗಳು ಆಗುತ್ತಿರುತ್ತವೆ. ಅಫ್ಘಾನಿಸ್ತಾನದಲ್ಲಿ ಭಾರತೀಯರಿಗೆ ಬಹಳ ಗೌರವ ಇದೆ. ಅಫ್ಘಾನಿಸ್ತಾನ ದೇಶಕ್ಕೆ ಭಾರತ ದೇಶದಿಂದ ಬಹಳ ಸಹಾಯಗಳು ಆಗಿದೆ. ಆ ಕೃತಜ್ಞತಾಭಾವ ಅವರಲ್ಲಿದೆ. ಭಾರತದ ಔಷಧ ಅಫ್ಘಾನಿಸ್ತಾನಕ್ಕೆ ಸದಾ ರವಾನೆಯಾಗುತ್ತದೆ. ಗಂಭೀರ ಆರೋಗ್ಯ ಪರಿಸ್ಥಿತಿಗಳು ಉಂಟಾದ ಸಂದರ್ಭದಲ್ಲಿ ಅಫ್ಘಾನಿಸ್ತಾನದಿಂದ ಡೆಲ್ಲಿಗೆ ಬಂದು ಚಿಕಿತ್ಸೆ ಪಡೆಯುತ್ತಾರೆ. ದೆಹಲಿಯ ಲಜಪತ್ ನಗರದಲ್ಲಿ ಅಪಘಾನಿಸ್ತಾನದವರೇ ಹೆಚ್ಚು ವಾಸಿಸುತ್ತಿದ್ದಾರೆ. ಅಲ್ಲಿ ಆಸ್ಪತ್ರೆಯಿಲ್ಲ, ಸರಿಯಾದ ಚಿಕಿತ್ಸೆಗಳು ಸಿಗುವುದಿಲ್ಲ. ಅಮೆರಿಕ ಅಲ್ಲಿ 20 ವರ್ಷದ ಕಾಂಟ್ರ್ಯಾಕ್ಟರ್ ಇಟ್ಟುಕೊಂಡಿತ್ತು. ವಾಪಸ್ ಯಾಕೆ ಹೋದರು ಎಂಬ ಬಗ್ಗೆ ನಮಗೆ ಮಾಹಿತಿಯಿಲ್ಲ ಎಂದು ಅಲ್ಲಿನ ಸ್ಥಿತಿಯನ್ನು ವಿವರಿಸಿದರು.
ಅಫ್ಘಾನಿಸ್ತಾನದಲ್ಲಿ ಮಿಲಿಟರಿಗೆ, ಸ್ಪೆಷಲ್ ಕೋರ್ಸ್‍ಗಳಿಗೆ 20 ವರ್ಷಗಳ ಕಾಲ ಅಮೆರಿಕ ಟ್ರೈನಿಂಗ್ ಕೊಟ್ಟಿತ್ತು. ಎಲ್ಲಾ ವ್ಯರ್ಥ ಆಗಿದೆ. ಅಮೆರಿಕ 20 ವರ್ಷಗಳಿಂದ ಅಘ್ಘಾನಿಸ್ತಾನಕ್ಕೆ ಮಾಡಿದ ಎಲ್ಲಾ ಸವಲತ್ತುಗಳನ್ನು ತಾಲಿಬಾನ್ ಉಗ್ರರು ವಶಪಡಿಸಿಕೊಂಡಿದ್ದಾರೆ. ಇನ್ನೂ ಒಂದೆರಡು ತಿಂಗಳಿನಲ್ಲಿ ಎಲ್ಲಾ ಸಮಸ್ಯೆಗಳು ಬಗೆಹರಿಯುತ್ತದೆ ಎಂದು ನನ್ನ ಕಂಪನಿ ಮಾಲೀಕರು ಹೇಳಿದ್ದಾರೆ. ನನ್ನನ್ನು ಮತ್ತೆ ಕೆಲಸಕ್ಕೆ ಬರುವಂತೆ ಹೇಳಿದ್ದಾರೆ. ಆದರೆ ಹೋಗುವ ಬಗ್ಗೆ ಅಥವಾ ಇಲ್ಲೇ ಇರುವ ಬಗ್ಗೆ ಇನ್ನೂ ನಿರ್ಧಾರ ಮಾಡಿಲ್ಲ ಎಂದು ಅಭಿಪ್ರಾಯ ಹಂಚಿಕೊಂಡರು. ಇದನ್ನೂ ಓದಿ: ಪ್ರಾಣಿಗಳನ್ನು ತುಂಬಿಕೊಂಡಂತೆ 800 ಜನ ಒಂದೇ ವಿಮಾನದಲ್ಲಿ ಭಾರತಕ್ಕೆ ಬಂದಿಲ್ಲ
ಭುವನೇಶ್ವರ: 75ನೇ ಸ್ವಾತಂತ್ರ್ಯ ದಿನಾಚರಣೆಯಂದು ಒಡಿಶಾದ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಭಾನುವಾರ ಬಿಜು ಸ್ವಾಸ್ಥ್ಯ ಕಲ್ಯಾಣ ಯೋಜನೆಯಡಿ ರಾಜ್ಯದ 3.5 ಕೋಟಿ ಜನರಿಗೆ ಸ್ಮಾರ್ಟ್ ಹೆಲ್ತ್ ಕಾರ್ಡ್ ನೀಡುವುದಾಗಿ ಘೋಷಿಸಿದ್ದಾರೆ.
ಈ ಯೋಜನೆಯು ಆರೋಗ್ಯ ಸೇವಾ ವಿತರಣಾ ವ್ಯವಸ್ಥೆಯನ್ನು ಪರಿವರ್ತಿಸುತ್ತದೆ ಮತ್ತು ದೇಶದ ಆರೋಗ್ಯ ಕ್ಷೇತ್ರದಲ್ಲಿ ಇತಿಹಾಸ ಸೃಷ್ಟಿಸುವುದರ ಜೊತೆಗೆ ಹೊಸ ಯುಗಕ್ಕೆ ನಾಂದಿ ಹಾಡಲಿದೆ ಎಂದಿದ್ದಾರೆ. ಇಡೀ ಒಡಿಶಾದ ಎಲ್ಲಾ ಜನರು ನನ್ನ ಕುಟುಂಬ. ಜನರು ಜಮೀನನ್ನು, ಆಭರಣಗಳನ್ನು ಮಾರುವುದರ ಜೊತೆಗೆ ಚಿಕಿತ್ಸಾ ವೆಚ್ಚವನ್ನು ಭರಿಸಲು ಮಕ್ಕಳನ್ನು ಶಾಲೆಗೆ ಕಳುಹಿಸುವುದನ್ನು ನಿಲ್ಲಿಸಿರುವ ವಿಚಾರ ನನಗೆ ನೋವುಂಟು ಮಾಡಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:ಅಫ್ಘಾನಿಸ್ತಾನ ತೊರೆದ ಅಧ್ಯಕ್ಷ ಅಶ್ರಫ್ ಘನಿ, ಉಪಾಧ್ಯಕ್ಷ ಸಾಲೇಹ
ನಂತರ ಜನರನ್ನು ಕಷ್ಟದಿಂದ ಪಾರು ಮಾಡಲು ನಾನು ನಿರ್ಧರಿಸಿದೆ. ಹೀಗಾಗಿ ಜನರು ಲಭ್ಯವಾಗುತ್ತಿರುವ ಉತ್ತಮ ಆರೋಗ್ಯ ಸೌಲಭ್ಯವನ್ನು ಉಚಿತವಾಗಿ ಪಡೆಯಬಹುದು. ಬಿಜು ಸ್ವಾಸ್ಥ್ಯ ಯೋಜನೆಯಡಿ ನಿರ್ದಿಷ್ಟ ಮೊತ್ತಕ್ಕೆ ಡೆಬಿಟ್ ಕಾರ್ಡ್‍ಗಳಾಗಿ ಕಾರ್ಯನಿರ್ವಹಿಸುವ ಸ್ಮಾರ್ಟ್ ಹೆಲ್ತ್ ಕಾರ್ಡ್‍ಗಳನ್ನು ನೀಡಲಾಗುವುದು ಎಂದು ಹೇಳಿದ್ದಾರೆ. ಇದನ್ನೂ ಓದಿ:ಮುನಿಸು ಶಮನವಾದರೂ ಜಮೀರ್ ಆಹ್ವಾನ ಒಪ್ಪದ ಸಿದ್ದರಾಮಯ್ಯ
ಮಂಗಳೂರು: ಮಂಗಳೂರಿನ ಯೆನೆಪೋಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೇಂದ್ರದ ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಆಸ್ಕರ್ ಫೆರ್ನಾಂಡಿಸ್ ಅವರನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.
ಆಸ್ಪತ್ರೆಗೆ ಭೇಟಿ ನೀಡಿದ ವೀರೇಂದ್ರ ಹೆಗ್ಗಡೆ ಅವರು ಆಸ್ಕರ್ ಫೆರ್ನಾಂಡಿಸ್ ಅವರಿಗೆ ಧರ್ಮಸ್ಥಳ ಮಂಜುನಾಥ ದೇವರ ಪ್ರಸಾದವನ್ನು ನೀಡಿ ಶೀಘ್ರ ಚೇತರಿಕೆಗೆ ಪ್ರಾರ್ಥಿಸಿದರು. ಬಳಿಕ ಕುಟುಂಬ ವರ್ಗದವರು ಮತ್ತು ವೈದ್ಯರೊಂದಿಗೆ ಅವರ ಆರೋಗ್ಯದ ಬಗ್ಗೆ ಮಾಹಿತಿ ಪಡೆದುಕೊಂಡರು. ಇದನ್ನೂ ಓದಿ: ಆಸ್ಕರ್ ಫೆರ್ನಾಂಡಿಸ್ ಆರೋಗ್ಯ ವಿಚಾರಿಸಿದ ಸಿದ್ದರಾಮಯ್ಯ, ಡಿಕೆಶಿ
ಈ ಸಂದರ್ಭದಲ್ಲಿ ಮಾತನಾಡಿದ ವೀರೇಂದ್ರ ಹೆಗ್ಗಡೆ ಅವರು, ಆಸ್ಕರ್ ಫೆರ್ನಾಂಡಿಸ್ ರವರು ಇಂದಿರಾಗಾಂಧಿ, ರಾಜೀವ್ ಗಾಂಧಿಯವರಿಗೆ ಆಪ್ತರಾಗಿದ್ದರು. ರಾಜ್ಯಕ್ಕೆ ಬಹಳಷ್ಟು ಸೇವೆ ಮಾಡಿದ್ದಾರೆ. ಅವರಿಗೆ ಧರ್ಮಸ್ಥಳ ಮಂಜುನಾಥ ದೇವರ ಪ್ರಸಾದ ಹಾಕಿ, ಶುಭಹಾರೈಸಿ ಬಂದಿದ್ದೇನೆ. ವೈದ್ಯರ ವರದಿ ಪ್ರಕಾರ, ಅವರ ಮೆದುಳು ಇನ್ನೂ ಚುರುಕಾಗಿದೆ. ಪಕ್ಷಾತೀತವಾಗಿ ಕರ್ನಾಟಕ ಹಾಗೂ ತುಳುನಾಡಿನ ಜನತೆ ಅವರ ಆರೋಗ್ಯಕ್ಕಾಗಿ ಪ್ರಾರ್ಥನೆ ಮಾಡುತ್ತಿದ್ದೇವೆ ಅವರು ಶೀಘ್ರ ಗುಣಮುಖರಾಗಲಿ ಎಂದು ವೀರೇಂದ್ರ ಹೆಗ್ಗಡೆ ಹಾರೈಸಿದರು. ಇದನ್ನೂ ಓದಿ: ಕೇಂದ್ರದ ಮಾಜಿ ಸಚಿವ ಆಸ್ಕರ್ ಫರ್ನಾಂಡಿಸ್ ಆಸ್ಪತ್ರೆಗೆ ದಾಖಲು
ಚಿಕ್ಕಬಳ್ಳಾಪುರ: ಮಾಸ್ಕ್ ಹಾಕಿ ಕುತ್ಕೋ ಎಂದು ಹೇಳಿದ ಕೆಎಸ್‌ಆರ್‌ಟಿಸಿ ಬಸ್ ನಿರ್ವಾಹಕನ ಮೇಲೆ ಇಬ್ಬರು ಪುಂಡ ಯುವಕರು ಹಲ್ಲೆ ನಡೆಸಿ ಆತನ ಹಲ್ಲು ಮುರಿದಿರುವ ಘಟನೆ ಚಿಕ್ಕಬಳ್ಳಾಪುರ ನಗರದಲ್ಲಿ ನಡೆದಿದೆ.
ಮುಳುಬಾಗಿಲು ಡಿಪೋಗೆ ಸೇರಿದ ಕೆ ಎ07ಎಫ್ 1608 ಬಸ್ ಕೋಲಾರದಿಂದ ಚಿಕ್ಕಬಳ್ಳಾಪುರಕ್ಕೆ ಬರುವಾಗ ಚಿಕ್ಕಬಳ್ಳಾಪುರ ನಗರ ಹೊರವಲಯದ ಚದಲಪುರ ಬಳಿ ಇಬ್ಬರು ಯುವಕರು ಬಸ್ ಹತ್ತಿದ್ದಾರೆ. ಇಬ್ಬರು ಯುವಕರಲ್ಲಿ ಒರ್ವ ಬಸ್‍ನ ಡೋರ್ ಬಳಿಯೇ ನಿಂತು ಗುಟ್ಕಾ ಜಗಿಯುತ್ತಿದ್ದನು. ಕಿಟಕಿಯಿಂದ ಹೊರಗೆ ಎಂಜಲು ಉಗಿಯುತ್ತಿದ್ದ. ಇದನ್ನ ಕಂಡ ನಿರ್ವಾಹಕ ಮುನಿಕೃಷ್ಣಪ್ಪ ಎಂಬಾತ ಡೋರ್ ಬಳಿ ನಿಲ್ಲಬಾರದು ಸೀಟು ಖಾಲಿ ಇದೆ ಕುತ್ಕೊಳ್ಳಿ, ಕೊರೊನಾ ಸಾಂಕ್ರಾಮಿಕ ರೋಗದ ಸಮಯದಲ್ಲಿ ಈ ರೀತಿ ಉಗಿಯಬಾರದು ಎಂದು ಹೇಳಿದ್ದಾರೆ. ಇದನ್ನೂ ಓದಿ: SSLC ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳಿಗೆ ಉಚಿತ ಮಾಸ್ಕ್ ವಿತರಣೆ
ಈ ವೇಳೆ ಯುವಕರಿಬ್ಬರು ನಿರ್ವಾಹಕನ ಜೊತೆ ಗಲಾಟೆ ಮಾಡಿಕೊಂಡಿದ್ದಾರೆ. ಈ ವೇಳೆ ಟಿಫನ್ ಬಾಕ್ಸ್ ಮೂಲಕ ನಿರ್ವಾಹಕನ ಮುನಿಕೃಷ್ಣಪ್ಪ ಮುಖ ಮೂತಿಗೆ ಜೋರಾಗಿ ಹೊಡೆದಿದ್ದಾರೆ. ಪರಿಣಾಮ ಮುನಿಕೃಷ್ಣಪ್ಪನ ಹಲ್ಲು ಮುರಿದಿದೆ. ಬಸ್ ನಿಲ್ದಾಣಕ್ಕೆ ಬಂದ ಸಂದರ್ಭದಲ್ಲಿ ಇಬ್ಬರು ಯುವಕರನ್ನ ಹಿಡಿದ ಸಾರ್ವಜನಿಕರು ಹಾಗೂ ಕೆಎಸ್‌ಆರ್‌ಟಿಸಿ ಇತರೆ ಸಿಬ್ಬಂದಿ ಇಬ್ಬರು ಯುವಕರನ್ನ ಪೊಲೀಸರಿಗೆ ಒಪ್ಪಿಸಿಲು ಮುಂದಾಗಿದ್ದಾರೆ. ಇದನ್ನೂ ಓದಿ: ಗುಜರಾತಿನ ಡೊಲೆರೋ ಸಿಟಿ ಮಾಡಲ್ ಕರ್ನಾಟಕಕ್ಕೆ ಬೇಡ – ಶೆಟ್ಟರ್ ವಿರುದ್ಧ ಹೆಚ್‍ಡಿಕೆ ಕಿಡಿ
ಒರ್ವ ಯುವಕ ತಪ್ಪಿಸಿಕೊಂಡು ಪರಾರಿಯಾಗಿದ್ದು, ಮತ್ತೋರ್ವ ಯುವಕ ಚೀರಂಜೀವಿ ಎಂಬಾತನನ್ನ ಚಿಕ್ಕಬಳ್ಳಾಪುರ ನಗರ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಸಂಬಂಧ ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಗಾಯಾಳು ಮುನಿಕೃಷ್ಣನನ್ನ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಉಡುಪಿ: ಮಹಾಮಾರಿ ಕೊರೊನಾದ ಎರಡನೇ ಅಲೆ ಅಬ್ಬರ ಕಡಿಮೆಯಾಗಿದ್ದು ಶೀಘ್ರ ಮೂರನೇ ಅಲೆ ಅಪ್ಪಳಿಸುವ ಸಾಧ್ಯತೆ ಇದೆ ಎಂದು ತಜ್ಞರು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾಡಳಿತ ಆಧುನಿಕ ವೈದ್ಯಕೀಯ ಸಲಕರಣೆಗಳನ್ನು ಖರೀದಿ ಮಾಡಲು ಮುಂದಾಗಿದೆ.
ಈಗಾಗಲೇ ಖರೀದಿಸಿರುವ ವೆಂಟಿಲೇಟರ್ ಗಳನ್ನು ಮಕ್ಕಳಿಗೆ ಬಳಕೆ ಮಾಡಲು ಸಾಧ್ಯವಿಲ್ಲ. ಹೀಗಾಗಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ 25 ಪೀಡಿಯಾಟ್ರಿಕ್ ಐಸಿಯು ಖರೀದಿಸಲು ಉಡುಪಿ ಜಿಲ್ಲಾಡಳಿತ ಮುಂದಾಗಿದೆ. ಕುಂದಾಪುರ ಮತ್ತು ಕಾರ್ಕಳ ಸರ್ಕಾರಿ ಆಸ್ಪತ್ರೆಗೆ ಮುಂದಿನ ಒಂದೂವರೆ ತಿಂಗಳಿನಲ್ಲಿ ಇಪ್ಪತ್ತು ವೆಂಟಿಲೇಟರ್ ಆಗಮಿಸಲಿದೆ. ಮೊದಲ ಹಂತದಲ್ಲಿ ಜಿಲ್ಲೆಗೆ 45 ಪೀಡಿಯಾಟ್ರಿಕ್ ವೆಂಟಿಲೇಟರ್ ಖರೀದಿಸಲಾಗುವುದು.
ಕೊರೊನಾ ನೋಡೆಲ್ ಅಧಿಕಾರಿ ಡಾ. ಪ್ರಶಾಂತ್ ಭಟ್ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಉಡುಪಿ ಜಿಲ್ಲೆಯಾದ್ಯಂತ ಸಾಕಷ್ಟು ಐಸಿಯು ಬೆಡ್ ಗಳು ಇವೆ. ಹಿರಿಯರಿಗೆ, ವಯಸ್ಕರಿಗೆ ಬೇಕಾದ ಎಲ್ಲಾ ವೈದ್ಯಕೀಯ ಸಲಕರಣೆಗಳು ಜಿಲ್ಲೆಯಲ್ಲಿ ಖರೀದಿಸಲಾಗಿದೆ. ನಮ್ಮ ಜಿಲ್ಲೆಯಲ್ಲಿ ಸಾಕಷ್ಟು ಖಾಸಗಿ ಆಸ್ಪತ್ರೆಗಳು ಇರುವುದರಿಂದ ಚಿಕಿತ್ಸೆಗೆ ಒಂದನೇ ಮತ್ತು ಎರಡನೇ ಅಲೆಯಲ್ಲಿ ಸಮಸ್ಯೆಯಾಗಿಲ್ಲ. ಆದರೆ ಮೂರನೆಯ ಅಲೆಯ ಸಂದರ್ಭ ಜಿಲ್ಲೆಗೆ ಕೆಲವು ಸವಾಲುಗಳು ಇವೆ.
ಜಿಲ್ಲೆಯಲ್ಲಿ ಪೀಡಿಯಾಟ್ರಿಕ್ ವೆಂಟಿಲೇಟರ್ ಬಹಳ ಕಡಿಮೆ ಇದೆ. ಆಕ್ಸಿಜನ್ ಮಾಸ್ಕ್ ಗಳನ್ನು ಖರೀದಿ ಮಾಡಬೇಕಾಗಿದೆ. ಮಕ್ಕಳಿಗೆ ಸಂಬಂಧಪಟ್ಟಂತಹ ತಜ್ಞ ವೈದ್ಯರ ನೇಮಕ ಮಾಡಬೇಕಾಗುತ್ತದೆ. ಐಸಿಯು ಮಾನಿಟರ್ ಗಳ ಖರೀದಿ ಆಗಬೇಕಾಗಿದೆ. ಉಡುಪಿ ಜಿಲ್ಲೆಯ ಎನ್ ಜಿಒ, ಕಂಪನಿಗಳು ಮತ್ತು ಸಿಎಸ್‍ಆರ್ ಫಂಡ್ ಗಳಿಂದ ಎಲ್ಲಾ ವೈದ್ಯಕೀಯ ಸಲಕರಣೆಗಳನ್ನು ಖರೀದಿ ಮಾಡಲು ಜಿಲ್ಲಾಡಳಿತ ಮುಂದಾಗಿದೆ. ಇದನ್ನೂ ಓದಿ:ರಾಜ್ಯದಲ್ಲಿಯ ಲಸಿಕೆ ಕೊರತೆಯನ್ನು ಒಪ್ಪಿಕೊಂಡ ಸಚಿವ ಸುಧಾಕರ್
ಮುಂದಿನ ಒಂದೂವರೆ ಎರಡು ತಿಂಗಳಲ್ಲಿ ಜಿಲ್ಲಾಸ್ಪತ್ರೆಗೆ ಕುಂದಾಪುರ ಮತ್ತು ಕಾರ್ಕಳದ ತಾಲೂಕು ಆಸ್ಪತ್ರೆಗಳಲ್ಲಿ ಎಲ್ಲಾ ಸಲಕರಣೆಗಳನ್ನು ಅಳವಡಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು. ಈಗಾಗಲೇ ಮೂರನೇ ಅಲೆಯನ್ನು ಎದುರಿಸುವ ಉದ್ದೇಶದಿಂದ ಜಿಲ್ಲೆಯಲ್ಲಿ ನಾಲ್ಕು ಬಾರಿ ತಜ್ಞರು, ಅಧಿಕಾರಿಗಳ ಸಭೆ ನಡೆಸಲಾಗಿದೆ. ಇದನ್ನೂ ಓದಿ:ಉಡುಪಿಯಲ್ಲಿ 19,500 ಕಾಲೇಜು ವಿದ್ಯಾರ್ಥಿಗಳಿಗೆ ವ್ಯಾಕ್ಸಿನೇಶನ್
ಬಳ್ಳಾರಿ: ಸಾಮಾನ್ಯವಾಗಿ ಹಾವು ಕಂಡರೆ ಮಾರುದ್ದ ಓಡಿ ಹೋಗುವ ಜನರ ಮಧ್ಯೆ, ತನಗೆ ಕಚ್ಚಿದ ಹಾವನ್ನು ಹಿಡಿದುಕೊಂಡು ಯುವನೋರ್ವ ಆಸ್ಪತ್ರೆಗೆ ಬಂದಿರುವ ಘಟನೆ ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲೂಕಿನ ಉಪ್ಪಾರಳ್ಳಿಯಲ್ಲಿ ನಡೆದಿದೆ.
ಇಂದು ಮುಂಜಾನೆ ಮನೆಯಲ್ಲಿ ಮಲಗಿದ್ದ ಸಂದರ್ಭದಲ್ಲಿ ಗ್ರಾಮದ ಯುವಕ ಕಾಡಪ್ಪನ ಕಾಲಿಗೆ ಹಾವು ಕಚ್ಚಿದೆ. ಹಾವು ಕಚ್ಚಿದ ತಕ್ಷಣ ಎಚ್ಚರಗೊಂಡ ಕಾಡಪ್ಪ ಪಕ್ಕದಲ್ಲಿ ಇದ್ದ ಹಾವನ್ನು ನೋಡಿದ್ದಾನೆ. ಕೂಡಲೇ ಆ ಹಾವನ್ನು ತನ್ನ ಕೈಯಲ್ಲಿ ಹಿಡಿದುಕೊಂಡು ಗ್ರಾಮದ ಮಧ್ಯದಲ್ಲಿಯೇ ನಡೆದುಕೊಂಡು ಆಸ್ಪತ್ರೆಗೆ ಬಂದಿದ್ದಾನೆ. ಇದನ್ನೂ ಓದಿ : ದಾರಿ ತಪ್ಪಿ ಬಳ್ಳಾರಿ ನಗರಕ್ಕೆ ಕರಡಿ ಎಂಟ್ರಿ
ಕಾಡಪ್ಪ ಹಾವು ಹಿಡಿದುಕೊಂಡು ಆಸ್ಪತ್ರೆಯ ಮುಂದೆ ಚಿಕಿತ್ಸೆಗಾಗಿ ಕಾದು ಕುಳಿತಿದ್ದು, ಆಸ್ಪತ್ರೆ ಆಗಮಿಸಿದ ವೈದ್ಯರು ಕಾಡಪ್ಪ ಕೈಯಲ್ಲಿ ಇದ್ದ ಹಾವುನ್ನು ಕಂಡ ಹೌಹಾರಿದ್ದಾರೆ. ಆಸ್ಪತ್ರೆಯ ಮುಂದೆ ಹಾವು ಹಿಡಿದುಕೊಂಡು ಕುಳಿತ ಕಾಡಪ್ಪನನ್ನು ನೋಡಲು ಜನ ಮುಗಿಬಿದಿದ್ದರು. ಬಳಿಕ ಆಸ್ಪತ್ರೆಯ ವೈದ್ಯರು ಕಾಡಪ್ಪನ ಕೈಯಲ್ಲಿ ಇದ್ದ ಹಾವನ್ನು ಬಿಡಿಸಿ ಚಿಕಿತ್ಸೆ ನೀಡಿದ್ದಾರೆ.