Tag: ಚಿಕಿತ್ಸೆ

  • ಕಾರು ಮರಕ್ಕಿ ಡಿಕ್ಕಿಯಾಗಿ ಚಾಲಕ ಸಾವು- ಸ್ವಾಮೀಜಿಗೆ ಗಾಯ

    ಕಾರು ಮರಕ್ಕಿ ಡಿಕ್ಕಿಯಾಗಿ ಚಾಲಕ ಸಾವು- ಸ್ವಾಮೀಜಿಗೆ ಗಾಯ

    ಗದಗ: ಮರಕ್ಕೆ ಕಾರು ಡಿಕ್ಕಿಯಾಗಿ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದು, ನರೇಗಲ್ ಹಿರೇಮಠದ ಮಲ್ಲಿಕಾರ್ಜುನ ಶ್ರೀಗಳು ಗಾಯಗೊಂಡಿರುವ ಘಟನೆ ಜಿಲ್ಲೆಯ ನರಗುಂದ ಹೊರವಲಯದಲ್ಲಿ ನಡೆದಿದೆ.

    ಶ್ರೀಗಳು ಸವದತ್ತಿ ತಾಲೂಕಿನ ಹುಲಿ ಗ್ರಾಮದ ಕಾರ್ಯಕ್ರಮವೊಂದಕ್ಕೆ ಹೋಗುತ್ತಿದ್ದ ವೇಳೆ ಮಾರ್ಗ ಮಧ್ಯೆ ದುರ್ಘಟನೆ ನಡೆದಿದೆ. ಗಜೇಂದ್ರಗಡ ತಾಲೂಕಿನ ನರೇಗಲ್ ಪಟ್ಟಣದ ಹಿರೇಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಶ್ರೀಗಳಿಗೆ ಸಂಬಂಧಿಸಿದ ಕಾರು ಇದಾಗಿದೆ.

    ವೇಗವಾಗಿ ಚಲಿಸುತ್ತಿದ್ದ ವೇಳೆ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಮರಕ್ಕೆ ಡಿಕ್ಕಿಯಾಗಿದೆ. ಈ ವೇಳೆ 39 ವರ್ಷದ ವೀರೇಶ್ ಕುರುಡಗಿ ಕಾರು ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಈ ವೀರೇಶ್ ಕಳೆದ 14 ವರ್ಷಗಳಿಂದ ಮಲ್ಲಿಕಾರ್ಜುನ ಶಿವಾಚಾರ್ಯ ಶ್ರೀಗಳಿಗೆ ಕಾರ್ ಚಾಲಕನಾಗಿ ಕೆಲಸ ಮಾಡುತ್ತಿದ್ದ.

    ಈ ಘಟನೆಯಲ್ಲಿ ಸ್ವಾಮೀಜಿಗೆ ಗಾಯವಾಗಿದ್ದು, ನರಗುಂದ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿಯ ಕೆಎಸ್‌ ಆಸ್ಪತ್ರೆಗೆ ರವಾನಿಸಾಗಿದೆ. ನರಗುಂದ ಆಸ್ಪತ್ರೆಗೆ ಸವದತ್ತಿ ಶಾಸಕ ಆನಂದ ಮಾಮನಿ ಆಗಮಿಸಿ, ಶ್ರೀಗಳ ಆರೋಗ್ಯ ವಿಚಾರಿಸಿದರು. ನಂತರ ಹೆಚ್ಚಿನ ಚಿಕಿತ್ಸೆಗೆ ಅವರೇ ಖುದ್ದಾಗಿ ಬೆಳಗಾವಿಗೆ ಕರೆದುಕೊಂಡು ಹೋದರು. ಇದನ್ನೂ ಓದಿ: ಯುಪಿ ಸಿಎಂ ಕಚೇರಿಯ ಟ್ವಿಟ್ಟರ್ ಖಾತೆ ಹ್ಯಾಕ್

    ಮೃತನ ಆತ್ಮಕ್ಕೆ ಶಾಂತಿ ಸಿಗಲಿ, ಸ್ವಾಮೀಜಿಗಳು ಬೇಗ ಗುಣಮುಖರಾಗಿ ಬರಲೆಂದು ಅನೇಕ ಭಕ್ತರು ಪ್ರಾರ್ಥಿಸುತ್ತಿದ್ದಾರೆ. ಈ ಘಟನೆ ಸಂಬಂಧ ನರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

  • ಕೈಗಾಡಿಯಲ್ಲಿ ಮಲಗಿಸಿ ಪತ್ನಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋದ ವೃದ್ಧ

    ಕೈಗಾಡಿಯಲ್ಲಿ ಮಲಗಿಸಿ ಪತ್ನಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋದ ವೃದ್ಧ

    ಲಕ್ನೋ: ವಯಸ್ಸಾದ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಗಾಡಿಯಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಿರುವುದು ಉತ್ತರ ಪ್ರದೇಶದ ಬಲ್ಲಿಯಾದಲ್ಲಿ ಬೆಳಕಿಗೆ ಬಂದಿದೆ.

    ವೀಡಿಯೊದಲ್ಲಿ ಏನಿದೆ?: ಚಿಲ್ಖರ್ ಬ್ಲಾಕ್‍ನ ಗ್ರಾಮದ ನಿವಾಸಿ ಸಕುಲ್ ಪ್ರಜಾಪತಿ ಅವರು, ಅನಾರೋಗ್ಯದಿಂದ ಬಳಲುತ್ತಿರುವ ತನ್ನ ಪತ್ನಿ ಜೋಗ್ನಿ (55) ಅವರನ್ನು ಗಾಡಿಯಲ್ಲಿ ಮಲಗಿಸಿಕೊಂಡು ತನ್ನ ಕೈಗಳಿಂದ ಎಳೆಯುತ್ತಾ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿರುವುದು ಕಂಡುಬಂದಿದೆ. ಇದನ್ನೂ ಓದಿ: ಬ್ಲಾಕ್ ಹಾಟ್ ಗೌನ್ ನಲ್ಲಿ ರಿಚಾ ಚಡ್ಡಾ : ಪಡ್ಡೆಗಳ ರಾಣಿಜೇನಿನ ಹಾಟ್ ಫೋಟೋ ಶೂಟ್

    ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ, ಉಪಮುಖ್ಯಮಂತ್ರಿ ಬ್ರಜೇಶ್ ಪಾಠಕ್ ಅವರು ಈ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಸಲ್ಮಾನ್ ಖಾನ್‌ಗೆ ಮತ್ತೆ ಕೋರ್ಟ್ ಸಂಕಷ್ಟ: ಫೋನ್ ಕಿತ್ತುಕೊಂಡ ಪ್ರಕರಣಕ್ಕೆ ಸಲ್ಲು ಕಟಕಟೆಯಲ್ಲಿ

    ಮಾರ್ಚ್ 28 ರಂದು, ಪ್ರಜಾಪತಿ ತನ್ನ ಹೆಂಡತಿಯನ್ನು ತನ್ನ ಮನೆಯಿಂದ ಮೂರು ಕಿಲೋಮೀಟರ್ ದೂರದಲ್ಲಿರುವ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದರು. ಅಲ್ಲಿನ ವೈದ್ಯರು ಕೆಲವು ಔಷಧಿಗಳನ್ನು ನೀಡಿ ಪತ್ನಿಯನ್ನು ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

    ಚಿಕಿತ್ಸೆ ಫಲಕಾರಿಯಾಗದೆ ಜೋಗ್ನಿ ಆಸ್ಪತ್ರೆಯಲ್ಲಿ ರಾತ್ರಿ 11 ಗಂಟೆ ಸುಮಾರಿಗೆ ಸಾವನ್ನಪ್ಪಿದ್ದಾರೆ. ಶವವನ್ನು ಮನೆಗೆ ಕೊಂಡೊಯ್ಯಲು ಅಂಬುಲೆನ್ಸ್ ನೀಡಲು ಆಸ್ಪತ್ರೆ ನಿರಾಕರಿಸಿತು, ರಾತ್ರಿ ಸೇವೆ ಲಭ್ಯವಿಲ್ಲ ಎಂದು ಹೇಳಿದರು. ನಂತರ 1,100 ರೂ.ಗೆ ಖಾಸಗಿ ಅಂಬುಲೆನ್ಸ್ ಬಾಡಿಗೆಗೆ ಪಡೆದರು ಎಂದು ಪೊಲೀಸರು ತಿಳಿಸಿದ್ದಾರೆ.

    ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ವಯಸ್ಸಾದ ರೋಗಿಯನ್ನು ಆಸ್ಪತ್ರೆಗೆ ಸಾಗಿಸುತ್ತಿರುವ ಫೋಟೋವನ್ನು ಟ್ಯಾಗ್ ಮಾಡಿ, ಟ್ವೀಟ್‍ನಲ್ಲಿ ರಾಜ್ಯದ ಬಿಜೆಪಿ ಸರ್ಕಾರವು ಖರ್ಚು ಮಾಡುತ್ತಿಲ್ಲ. ಯುಪಿಯಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಸಾಧನೆಗಳ ಸುಳ್ಳು ಜಾಹೀರಾತುಗಳಿಗೆ ಖರ್ಚು ಮಾಡಲಾಗುತ್ತಿರುವ ಸ್ವಲ್ಪ ಭಾಗವನ್ನು ವೈದ್ಯಕೀಯ ಸೇವೆಗಳಿಗೆ ವಿನಿಯೋಗಿಸಬೇಕು. ಸ್ಟ್ರೆಚರ್ ಮತ್ತು ಆಂಬ್ಯುಲೆನ್ಸ್‌ಗಳ ಕೊರತೆಯಿಂದ ಜನರು ಸಾಯುತ್ತಿದ್ದಾರೆ ಎಂದು ಯಾದವ್ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

  • ಮಧ್ಯರಾತ್ರಿ ಓಡಿ ಮನೆ ಸೇರೋ ಯುವಕನಿಗೆ 2.5 ಲಕ್ಷದ ಚೆಕ್ ನೀಡಿದ ಶಾಪರ್ಸ್ ಸ್ಟಾಪ್

    ಮಧ್ಯರಾತ್ರಿ ಓಡಿ ಮನೆ ಸೇರೋ ಯುವಕನಿಗೆ 2.5 ಲಕ್ಷದ ಚೆಕ್ ನೀಡಿದ ಶಾಪರ್ಸ್ ಸ್ಟಾಪ್

    ನೊಯ್ಡಾ: ಸೇನೆ ಸೇರುವ ಉದ್ದೇಶದಿಂದ ಕೆಲಸ ಮುಗಿಸಿ ಪ್ರತಿದಿನ ರಾತ್ರಿ ಓಡಿ ಮನೆ ಸೇರುತ್ತಿದ್ದ ಯುವಕನಿಗೆ ಇದೀಗ ಶಾಪರ್ಸ್ ಸ್ಟಾಪ್ 2.5 ಲಕ್ಷದ ಚೆಕ್ ನೀಡಿದೆ.

    ಹೌದು. ಪ್ರದೀಪ್ ಮೆಹ್ರಾ ತಾಯಿ ಟಿಬಿ ಕಾಯಿಲೆಯಿಂದ ಬಳಲುತ್ತಿದ್ದು, ದೆಹಲಿಯ ಆಸ್ಪತ್ರೆಯೊಂದರಲ್ಲಿ ಕಳೆದ 2 ವರ್ಷಗಳಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ವಿಚಾರ ತಿಳಿದ ಶಾಪರ್ಸ್ ಸ್ಟಾಪ್, ಪ್ರದೀಪ್‍ಗೆ 2.5 ಲಕ್ಷ ರೂ ಚೆಕ್ ನೀಡಿದೆ. ಈ ಮೂಲಕ ಪ್ರದೀಪ್ ಕನಸು ನನಸು ಮಾಡಲು ಹಾಗೂ ತಾಯಿಗೆ ಚಿಕಿತ್ಸೆ ನೀಡಲು ಸಹಾಯವಾದಂತಾಗಿದೆ.

    ಚಲನಚಿತ್ರ ನಿರ್ಮಾಪಕ ವಿನೋದ್ ಕಪ್ರಿ, ಪ್ರದೀಪ್ ರಾತ್ರಿ ಓಡುತ್ತಿರುವ ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದರು. ಈ ವೀಡಿಯೋ ಸಾಕಷ್ಟು ವೈರಲ್ ಆಗಿತ್ತು. ಅಲ್ಲದೆ ಪ್ರದೀಪ್ ಗೆ ಸಹಾಯದ ಮಹಾಪೂರವೇ ಹರಿದಬಂತು. ಇದೀಗ ವಿನೋದ್ ಅವರು ಪ್ರದೀಪ್‍ಗೆ ಚೆಕ್ ನೀಡಿರುವ ಫೋಟೋಗಳನ್ನು ಕೂಡ ತಮ್ಮ ಟ್ವಿಟ್ಟರ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅಲ್ಲದೆ ಮಧ್ಯರಾತ್ರಿಯ ಓಟಗಾರ ಪ್ರದೀಪ್ ಮೆಹ್ರಾ, ನಿಮ್ಮೆಲ್ಲರ ಪ್ರೀತಿ ಹಾಗೂ ಸಹಕಾರ ಕಂಡು ತುಂಬಾ ಖುಷಿಯಾಗಿದ್ದಾರೆ. ಅಲ್ಲದೆ ತಾಯಿಯ ಚಿಕಿತ್ಸೆ ಹಾಗೂ ಕನಸು ನನಸು ಮಾಡುವ ಸಲುವಾಗಿ ನಿನ್ನೆ ಅವರಿಗೆ ಶಾಪರ್ಸ್ ಸ್ಟಾಪ್ ಕಡೆಯಿಂದ 2.5 ಲಕ್ಷದ ಚೆಕ್ ನೀಡಲಾಗಿದೆ. ದೇವರು ಒಳ್ಳೆದು ಮಾಡಲಿ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಮೃತಪಟ್ಟ ಮುದ್ದಿನ ಶ್ವಾನದ ಸವಿನೆನಪಿಗಾಗಿ ದೇಗುಲ ನಿರ್ಮಾಣ

    ಪ್ರದೀಪ್ ವೀಡಿಯೋ ವೈರಲ್: ರಾತ್ರಿ ವೇಳೆ ಓಡಿಕೊಂಡು ಹೋಗುತ್ತಿದ್ದ ಪ್ರದೀಪ್ ಮೆಹ್ರಾನನ್ನು ನೋಡಿದ ಚಿತ್ರನಿರ್ಮಾಪಕ ವಿನೋದ್ ಕಪ್ರಿ ವೀಡಿಯೋವನ್ನು ಮಾಡಿದ್ದರು. ಈ ವೇಳೆ ಕಪ್ರಿಯವರು ಯುವಕನ ಬಳಿ, ಮನೆಗೆ ಬಿಡುವುದಾಗಿ ಹೇಳಿದ್ದರು. ಅದಕ್ಕೆ ಇಲ್ಲ ನನ್ನ ಅಭ್ಯಾಸ ತಪ್ಪಿ ಹೋಗುತ್ತದೆ. ನಾನು ಫಿಟ್ ಆಗಿರಲು ಓಡುವುದು ನನಗೆ ಅವಶ್ಯಕ ಎಂದು ಹೇಳಿದ್ದರು. ಇದನ್ನೂ ಓದಿ: ಸೇನೆಗೆ ತಯಾರಿ – ಕೆಲಸ ಮುಗಿಸಿ ಪ್ರತಿದಿನ 10 ಕಿಮೀ ಓಡಿಕೊಂಡೇ ಮನೆಗೆ ಹೋಗ್ತಾನೆ!

    ಅಲ್ಲದೆ ಓಡುತ್ತಲೇ ಕಪ್ರಿ ಅವರ ಪ್ರಶ್ನೆಗಳಿಗೆ ಉತ್ತರಿಸಿದ್ದ ಪ್ರದೀಪ್, ಸದ್ಯ ನಾನು ನನ್ನ ಅಣ್ಣನೊಂದಿಗೆ ಇದ್ದೇನೆ. ತಾಯಿಗೆ ಹುಷಾರಿಲ್ಲ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದಿದ್ದರು. ಊಟ ಆಗಿದೆಯಾ ಎಂದು ಕೇಳಿದ್ದಕ್ಕೆ, ಇಲ್ಲ ಈಗ ನಾನು ಮನೆಗೆ ಹೋಗಿ ಅಡುಗೆ ಮಾಡಬೇಕು. ಆಗ ಕಪ್ರಿಯವರು, ಬಾ ನನ್ನೊಂದಿಗೆ ಊಟ ಮಾಡು ಎಂದಿದ್ದಕ್ಕೆ ಇಲ್ಲ ನಾನು ಹಾಗೆ ಮಾಡಿದರೆ ಮನೆಯಲ್ಲಿರುವ ನನ್ನ ಅಣ್ಣ ಹಸಿದುಕೊಂಡೇ ಇರಬೇಕಾಗುತ್ತದೆ ಎಂದು ಹೇಳಿದ್ದರು. ಯಾಕೆ ಅವರು ಅಡುಗೆ ಮಾಡುವುದಿಲ್ಲವಾ ಎಂದು ಕಪ್ರಿ ಮರು ಪ್ರಶ್ನೆ ಹಾಕಿದಾಗ, ಇಲ್ಲ ಅವರಿಗೆ ಈಗ ರಾತ್ರಿ ಡ್ಯೂಟಿ ಇದೆ. ನಾನು ಹೋಗಿ ಅಡುಗೆ ಮಾಡಬೇಕು ಎಂದು ಹೇಳಿದ್ದರು.

    ಈ ವೀಡಿಯೋವನ್ನು ಕಪ್ರಿಯವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಿಂದ ಶೇರ್ ಮಾಡಿಕೊಂಡಿದ್ದರು. ಈ ವೀಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಅಲ್ಲದೆ ಉತ್ತರಾಖಂಡದ ಅಲ್ಮೋರಾದ ಯುವಕ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಿದ್ದರು. ಸೇನೆಯ ಅಧಿಕಾರಿಗಳು, ರಾಜಕಾರಣಿಗಳು ಮತ್ತು ಬಾಲಿವುಡ್ ಸೆಲೆಬ್ರಿಟಿಗಳು ಪ್ರದೀಪ್ ಅವರನ್ನು ‘ಶುದ್ಧ ಚಿನ್ನ’ ಎಂದು ಶ್ಲಾಘಿಸಿದ್ದರು.

  • ಧರ್ಮ ಸಂಘರ್ಷದ ನಡುವೆ ಸಾಮರಸ್ಯದ ಬದುಕು- ಹಿಂದೂ ಸ್ನೇಹಿತನ ಕಷ್ಟಕ್ಕೆ ನೆರವಾದ ಮುಸ್ಲಿಂ ಗೆಳೆಯ

    ಧರ್ಮ ಸಂಘರ್ಷದ ನಡುವೆ ಸಾಮರಸ್ಯದ ಬದುಕು- ಹಿಂದೂ ಸ್ನೇಹಿತನ ಕಷ್ಟಕ್ಕೆ ನೆರವಾದ ಮುಸ್ಲಿಂ ಗೆಳೆಯ

    ಬಳ್ಳಾರಿ: ರಾಜ್ಯಾದ್ಯಂತ ಹಿಂದೂ-ಮುಸ್ಲಿಂ ವಿವಾದ ತಾರಕಕ್ಕೆ ಏರುತ್ತಿದೆ. ಒಂದು ಕಡೆ ಹಿಜಬ್ ಗಲಾಟೆ ಮತ್ತೊಂದ್ಕಡೆ ಮುಸ್ಲಿಂ ವ್ಯಾಪಾರ ಬಹಿಷ್ಕಾರ. ಹೀಗೆ ಹಿಂದೂ-ಮುಸ್ಲಿಂ ನಡುವೆ ಒಂದು ದೊಡ್ಡ ಕಂದಕವೇ ಏರ್ಪಟ್ಟಿದೆ. ಆದರೆ ಈ ಮಧ್ಯೆ ಹಿಂದೂ- ಮುಸ್ಲಿಂ ನಾವೆಲ್ಲಾ ಒಂದೇ, ಹಿಂದೂ-ಮುಸ್ಲಿಂ ಎನ್ನುವುದಕ್ಕಿಂತ ಮೊದಲು ನಾವು ಮಾನವರು ಎನ್ನುವ ಸಂದೇಶವನ್ನು ಈ ಸ್ನೇಹಿತರು ಸೇರಿದ್ದಾರೆ.

    ಕರಾವಳಿಯಲ್ಲಿ ಆರಂಭವಾದ ಹಿಜಬ್ ವಿವಾದ ಇಡೀ ರಾಜ್ಯಾದ್ಯಂತ ಕಾಡ್ಗಿಚ್ಚಿನಂತೆ ಹಬ್ಬಿದೆ. ಸರ್ವ ಜನಾಂಗದ ಶಾಂತಿ ತೋಟ ಎಂದು ಕರೆಸಿಕೊಳ್ತಿದ್ದ ಕರ್ನಾಟಕದಲ್ಲೀಗ ಧರ್ಮ ಸಂಘರ್ಷ ಎಲ್ಲೆ ಮೀರುತ್ತಿದೆ. ಹೀಗಿರುವಾಗ ಬಳ್ಳಾರಿಯ ಇಬ್ಬರು ಸ್ನೇಹಿತರು ನಮಗೆ ಧರ್ಮದ ಹಂಗಿಲ್ಲ.. ನಾವಿಬ್ಬರೂ ಒಂದೇ ಎಂಬ ಸಾಮರಸ್ಯದ ಮಂತ್ರ ಪಠಿಸಿದ್ದಾರೆ. ಇದನ್ನೂ ಓದಿ: ಇಂದಿನಿಂದ SSLC ಪರೀಕ್ಷೆ – ಸಮವಸ್ತ್ರ ಧರಿಸಿದ್ರೆ ಮಾತ್ರ ಪ್ರವೇಶಕ್ಕೆ ಅನುಮತಿ

    ಹೌದು. ಮೂಲತಃ ಬಳ್ಳಾರಿ ಕೌಲ್ ಬಜಾರ್ ನಿವಾಸಿಯಾಗಿರುವ ಗೋಪಾಲ ಚಿಕ್ಕ ವಯಸ್ಸಿನಲ್ಲೇ ತಂದೆ-ತಾಯಿಯನ್ನು ಕಳೆದುಕೊಂಡ ಅನಾಥ. ಕಳೆದ ಕೆಲ ವರ್ಷಗಳಿಂದ ವಿಚಿತ್ರವಾದ ಕಾಯಿಲೆಯಿಂದ ಬಳಲುತ್ತಿರುವ ಗೋಪಾಲನಿಗೆ ಬಾಲ್ಯದ ಗೆಳೆಯ ಮಹಮ್ಮದ್ ನೆರವಾಗಿದ್ದಾರೆ. ಗೋಪಾಲನ ಕಷ್ಟಕ್ಕೆ ಮರುಗಿರುವ ಮಹಮ್ಮದ್, ಕಳೆದ 2 ವರ್ಷಗಳಿಂದ ಸ್ನೇಹಿತನ ಬೇಕು-ಬೇಡಗಳನ್ನು ನೋಡಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲೇ ಮೊದಲ ಬಾರಿಗೆ ಡಾ.ಪುನೀತ್ ರಾಜ್ ಕುಮಾರ್ ಪುತ್ಥಳಿ ಅನಾವರಣ

    ಕಳೆದೆರಡು ವರ್ಷಗಳಿಂದ ಗೋಪಾಲ ವಿಚಿತ್ರ ಕಾಯಿಲೆಗೆ ತುತ್ತಾಗಿದ್ದಾರೆ. ದಿನ ಕಳೆದಂತೆ ಗೋಪಾಲರ ಎಡಗಾಲು ದಪ್ಪವಾಗುತ್ತಿದ್ದು ನಡೆದಾಡಲು ಸಹ ಕಷ್ಟವಾಗ್ತಿದೆ. ಅನೇಕ ವೈದ್ಯರ ಬಳಿ ಚಿಕಿತ್ಸೆಗಾಗಿ ಅಲೆದಿದ್ದು, ಲಕ್ಷಾಂತರ ರೂಪಾಯಿ ಖರ್ಚಾಗ್ತಿದೆ. ಅನಾಥನಾಗಿರುವ ಗೋಪಾಲನಿಗೆ ಸೂಕ್ತ ಚಿಕಿತ್ಸೆ ನೀಡಲು ಸಹಾಯ ಮಾಡಿ ಅಂತ ಮಹಮ್ಮದ್ ಮನವಿ ಮಾಡಿಕೊಂಡಿದ್ದಾರೆ.

    ರಾಜ್ಯದಲ್ಲಿ ಹಿಂದೂ- ಮುಸ್ಲಿಂ ಸಮುದಾಯದ ನಡುವೆ ದೊಡ್ಡ ಒಡಕು ನಿರ್ಮಾಣವಾಗುತ್ತಿರುವ ಈ ಸಮಯದಲ್ಲಿ ತಮ್ಮ ಧರ್ಮಕ್ಕಿಂತ ಸ್ನೇಹವೇ ದೊಡ್ಡದು ಎಂಬುದನ್ನು ತೋರಿಸಿಕೊಟ್ಟಿರುವ ಈ ಇಬ್ಬರು ಸ್ನೇಹಿತರಿಗೆ ಸೆಲ್ಯೂಟ್ ಹೊಡೆಯೋಣ.. ಜೊತೆಗೆ ಗೋಪಾಲ್ ಚಿಕಿತ್ಸೆಗಾಗಿ ನೆರವಾಗೋಣ.

  • ಪಾವಗಡ ಬಸ್ ದುರಂತ – ಚಿಕಿತ್ಸೆ ಫಲಕಾರಿಯಾಗದೇ ವಿದ್ಯಾರ್ಥಿ ಸಾವು

    ಪಾವಗಡ ಬಸ್ ದುರಂತ – ಚಿಕಿತ್ಸೆ ಫಲಕಾರಿಯಾಗದೇ ವಿದ್ಯಾರ್ಥಿ ಸಾವು

    ತುಮಕೂರು: ಪಳವಳ್ಳಿ ಕಟ್ಟೆಯ ಬಳಿ ಖಾಸಗಿ ಬಸ್ ಉರುಳಿ ಗಂಭೀರ ಗಾಯಗೊಂಡು ವಿಕ್ಟೋರಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬುಡ್ಡಾರೆಡ್ಡಿ ಗ್ರಾಮದ ಮಹೇಂದ್ರ (21) ಇಂದು ಬೆಳಿಗ್ಗೆ ಚಿಕಿತ್ಸೆ ಫಲಕಾರಿಯಾಗದೇ ಸಾವನಪ್ಪಿದ್ದಾನೆ.

    ಬಸ್ ಅಪಘಾತದಲ್ಲಿ ಸ್ಥಳದಲ್ಲಿಯೇ 4 ಸಾವನ್ನಪ್ಪಿ, ಇಬ್ಬರು ಚಿಕಿತ್ಸೆಗೆ ತೆರಳುತ್ತಿದ್ದ ವೇಳೆ ಸಾವನ್ನಪ್ಪಿದರು. ಮಹೇಂದ್ರ ಸಾವಿನ ಮೂಲಕ ಮೃತರ ಸಾವಿನ ಸಂಖ್ಯೆ 7 ಕ್ಕೆ ಏರಿಕೆಯಾಗಿದೆ.

    ಮಹೇಂದ್ರ ಬೆನ್ನುಮೂಳೆ ಮುರಿದು, ತಲೆಗೆ ಗಂಭೀರವಾಗಿ ಪೆಟ್ಟಾಗಿ ಅರೆಪ್ರಜ್ಞಾವಸ್ಥೆಯಲ್ಲಿದ್ದರು. ಚಿಕಿತ್ಸೆಗೆ ಹಣವಿಲ್ಲದೆ ಪೋಷಕರು ಪರದಾಡಿದ್ದರು. ಈ ವೇಳೆ ಶಾಸಕರು ಸೇರಿದಂತೆ ಸಂಘಸಂಸ್ಥೆಗಳ ಮುಖಂಡರು ಹಣವನ್ನ ಒದಗಿಸಿದ್ದರು. ಜೊತೆಗೆ ಯುವಕನ ಸಂಪೂರ್ಣ ಚಿಕಿತ್ಸೆಯ ವೆಚ್ಚ ಸರ್ಕಾರವೇ ಭರಿಸಬೇಕೆಂದು ಶಾಸಕ ವೆಂಕಟರಮಣಪ್ಪ ಸದನದ ಬಾವಿಗಿಳಿದು ಪ್ರತಿಭಟನೆ ಕೂಡ ನಡೆಸಿದ್ದರು. ವಿಧಿ ಆಟವೇ ಬೇರೆಯಾಗಿ ಮಹೇಂದ್ರ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ವೈ.ಎನ್. ಹೊಸಕೋಟೆಯಿಂದ ಪಾವಗಡಕ್ಕೆ ಬರುತ್ತಿದ್ದ ಬಸ್ ಪಲ್ಟಿ:8 ಮಂದಿ ಸಾವು

    ಕುಟುಂಬವು ಇರುವ ಒಬ್ಬ ಮಗನ ಜೀವಕ್ಕಾಗಿ ಹಲವರ ಮುಂದೆ ಚಿಕಿತ್ಸೆಯ ಹಣಕ್ಕಾಗಿ ಕೈಚಾಚಿದ್ದರು. ತಾಲೂಕಿನಾದ್ಯಂತ ಹಾಗೂ ಸ್ವಗ್ರಾಮ ಬುಡ್ಡಾರೆಡ್ಡಿ ಹಳ್ಳಿ ಗ್ರಾಮದಲ್ಲಿ ಚಂದಾ ಸಂಗ್ರಹಿಸಿ ಚಿಕಿತ್ಸೆಗೆ ಹಣ ಕಳಿಸಲಾಗಿತ್ತು. ಇದನ್ನೂ ಓದಿ:  ಮೊದಲೇ ಟಾರ್ಗೆಟ್ ರೀಚ್, ರಫ್ತಿನಲ್ಲಿ ಸಾಧನೆ – ಇದು ಆತ್ಮನಿರ್ಭರ್ ಭಾರತದ ಮೈಲುಗಲ್ಲು ಎಂದ ಮೋದಿ

  • ಇಲಿ ಪಾಷಾಣ ಸೇವಿಸಿ ಮೂರು ವರ್ಷದ ಬಾಲಕ ಸಾವು

    ಇಲಿ ಪಾಷಾಣ ಸೇವಿಸಿ ಮೂರು ವರ್ಷದ ಬಾಲಕ ಸಾವು

    ತಿರುವನಂತಪುರಂ: ಇಲಿ ಪಾಷಾಣ ಸೇವನೆ ಮಾಡಿ ಮೂರು ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ಕೇರಳದ ಮಲಪ್ಪುರಂನಲ್ಲಿ ನಡೆದಿದೆ.

    ನಡೆದಿದ್ದೇನು?: ಮಕ್ಕಳು ಆಟವಾಡುವಾಡುತ್ತಿದ್ದರು. ಈ ವೇಳೆ ಅಲ್ಲಿ ಎಸೆದಿದ್ದ ಇಲಿ ಪಾಷಾಣದ ಟ್ಯೂಬ್ ಸಿಕ್ಕಿದೆ. ಆಗ ಬಾಲಕ ಅದನ್ನು ಸೇವಿಸಿ ಅಸ್ವಸ್ಥನಾಗಿದ್ದಾನೆ ಬಾಲಕನ ಇಲಿ ಪಾಷಾಣ ಸೇವಿಸಿರುವ ವಿಚಾರ ತಿಳಿದ ಪೋಷಕರು ಮಗುವನ್ನು ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.  ಇದನ್ನೂ ಓದಿ: ಟೂತ್‌ ಪೇಸ್ಟ್ ಎಂದು ಇಲಿ ಪಾಷಾಣದಲ್ಲಿ ಹಲ್ಲುಜ್ಜಿ ಪ್ರಾಣ ಬಿಟ್ಟಳು

    ಬಾಲಕನಿಗೆ ಹೆಚ್ಚಿನ ತಜ್ಞ ಚಿಕಿತ್ಸೆ ಅಗತ್ಯವಿದ್ದ ಕಾರಣ ಕೊಟ್ಟಾಯಂನಿಂದ ಕೋಝಿಕ್ಕೋಡ್‍ನ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಮೂರು ದಿನಗಳ ಕಾಲ ಬಾಲಕನಿಗೆ ಚಿಕಿತ್ಸೆ ನೀಡಲಾಯಿತು.  ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಇಂದು ಬೆಳಗ್ಗೆ ಮೃತಪಟ್ಟಿದ್ದಾನೆ. ಇದನ್ನೂ ಓದಿ : ದಿ ಕಾಶ್ಮೀರ್ ಫೈಲ್ಸ್ : ಬಾಲಿವುಡ್ ಮೇಲೆ ಕಿಡಿಕಾರಿದ ಕಂಗನಾ ರಣಾವತ್

  • ರಾಮಯ್ಯ ಆಸ್ಪತ್ರೆಯಲ್ಲಿ ತ್ರಿಡಿ ಪ್ರಿಂಟಿಂಗ್ ಕೃತಕ ಕೈಕಾಲು ಜೋಡಣಾ ಘಟಕ ಉದ್ಘಾಟನೆ

    ರಾಮಯ್ಯ ಆಸ್ಪತ್ರೆಯಲ್ಲಿ ತ್ರಿಡಿ ಪ್ರಿಂಟಿಂಗ್ ಕೃತಕ ಕೈಕಾಲು ಜೋಡಣಾ ಘಟಕ ಉದ್ಘಾಟನೆ

    ಬೆಂಗಳೂರು: ಸಿಲಿಕಾನ್ ಸಿಟಿಯ ಎಂ.ಎಸ್ ರಾಮಯ್ಯ ಆಸ್ಪತ್ರೆಯ ಆವರಣದಲ್ಲಿರುವ ಎಂ.ಎಸ್.ರಾಮಯ್ಯ ರೋಟರಿ ಕೃತಕ ಕೈಕಾಲು ಜೋಡಣಾ ಕೇಂದ್ರದಲ್ಲಿ  ತ್ರಿಡಿ ಪ್ರಿಂಟಿಂಗ್ ಕೃತಕ ಕೈ, ಕಾಲು ಜೋಡಣಾ ಘಟಕವನ್ನು ಉದ್ಘಾಟಿಸಲಾಯಿತು.

    ಈ ಕೃತಕ ಕೈ, ಕಾಲು ಜೋಡಣಾ ಘಟಕವನ್ನು ರೋಟರಿ ಡಿಸ್ಟ್ರಿಕ್ಟ್ ಗವರ್ನರ್, 3190 ರೋ. ಫಜಲ್ ಮಹಮ್ಮದ್ ಉದ್ಟಾಟಿಸಿದರು. ಈ ಒಂದು ತಂತ್ರಜ್ಞಾನದಿಂದ ಅತೀ ಕಡಿಮೆ ಅವಧಿಯಲ್ಲಿ ಹಾಗೂ ಕಡಿಮೆ ವೆಚ್ಚದಲ್ಲಿ ಕೈ ಕಾಲಿನ ತದ್ರೂಪದಂತೆ ಕೃತಕ ಅಂಗವನ್ನು ಜೋಡಿಸಬಹುದಾಗಿದೆ. ಇದನ್ನೂ ಓದಿ: ಉಕ್ರೇನ್ ಮೇಲೆ ರಷ್ಯಾ ವ್ಯಾಕ್ಯೂಮ್ ಬಾಂಬ್ ಪ್ರಯೋಗ ಆರೋಪ – ಏನಿದರ ವಿಶೇಷ?

    ಇದರಿಂದ ರೋಗಿಗಳು ಸಾಕಷ್ಟು ಸಮಯ ಕಾಯುವುದು ತಪ್ಪುವುದಲ್ಲದೇ ಶೀಘ್ರವೇ ಚಿಕಿತ್ಸೆ ಪಡೆಯಲು ಸಹಾಯವಾಗುತ್ತದೆ. ಕೈ, ಕಾಲು ಮಾತ್ರವಲ್ಲದೇ ದೇಹದ ಯಾವುದೇ ಅಂಗವನ್ನು ಕಡಿಮೆ ಅವಧಿಯಲ್ಲಿ ತಯಾರು ಮಾಡಬಹುದು. ಇದನ್ನೂ ಓದಿ: ರಷ್ಯಾದಿಂದ ತೈಲ ಆಮದಿಗೆ ಮಾತ್ರ ಅಮೆರಿಕ ನಿರ್ಬಂಧ – ಯುರೇನಿಯಂಗೆ ಇಲ್ಲ ನಿಷೇಧ

    ಈ ಸಂದರ್ಭದಲ್ಲಿ ಗೋಕುಲ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ. ಎಂ.ಆರ್.ಜಯರಾಂ, ಡಾ. ಸವಿತಾ ರವೀಂದ್ರ, ಡಾ. ಗುರುದೇವ್ ಮುಂತಾದವರು ಉಪಸ್ಥಿತರಿದ್ದರು.

  • ಪ್ರಸವ ವೇದನೆಯಿಂದ ನರಳುತ್ತಿದ್ದ ಹಸುವಿಗೆ ಚಿಕಿತ್ಸೆ ಕೊಡಿಸಿದ KSRTC ನೌಕರ

    ಪ್ರಸವ ವೇದನೆಯಿಂದ ನರಳುತ್ತಿದ್ದ ಹಸುವಿಗೆ ಚಿಕಿತ್ಸೆ ಕೊಡಿಸಿದ KSRTC ನೌಕರ

    ವಿಜಯಪುರ: ಪ್ರಸವ ವೇದನೆಯಿಂದ ನರಳುತ್ತಿದ್ದ ಹಸುವಿಗೆ ಚಿಕಿತ್ಸೆ ಕೊಡಿಸಿದ KSRTC ನೌಕರ ಆಕಳನ್ನ ರಕ್ಷಿಸಿದ್ದಾರೆ. ವಿಜಯಪುರ ಕೆ.ಎಸ್.ಆರ್ ಟಿಸಿ ಸಿಬ್ಬಂದಿ ಈ ಕೆಲಸಕ್ಕೆ ಶ್ಲಾಘನೆ ವ್ಯಕ್ತವಾಗುತ್ತಿದೆ.

    ಪ್ರಸವ ವೇದನೆಯಿಂದ ಬಳಲುತ್ತಿರುವ ಆಕಳನ್ನ ಕಂಡು ಕೆ.ಎಸ್.ಆರ್.ಟಿ.ಸಿ ಬಸ್ ಸಿಬ್ಬಂದಿ ಹೈರಾಣಾಗಿದ್ದರು. ತಕ್ಷಣವೇ ಪಶು ವೈದ್ಯಾಧಿಕಾರಿಗಳಿಗೆ ಕರೆ ಮಾಡಿದ ಬಸ್ ಸಿಬ್ಬಂದಿ ಕರೆಸಿ ಚಿಕಿತ್ಸೆ ಕೊಡಿಸಿದ್ದಾರೆ. ಇದನ್ನೂ ಓದಿ: ಎರಡೂ ಡೋಸ್‌ ಲಸಿಕೆ ಪಡೆದ ಪ್ರಯಾಣಿಕರಿಗೆ ಕೋವಿಡ್‌ ಪರೀಕ್ಷೆ ಕಡ್ಡಾಯವಲ್ಲ: ಬ್ರಿಟನ್‌ ಪ್ರಧಾನಿ

    ಬಸ್ ನಿಲ್ದಾಣಕ್ಕೆ ಪಶು ವೈದ್ಯಾಧಿಕಾರಿ ಡಾ.ಶರಣಗೌಡ ಸ್ಥಳಕ್ಕೆ ಧಾವಿಸಿ ಹಸುವನ್ನ ರಕ್ಷಿಸಿದರು. ಇವರಿಬ್ಬರ ಸಹಾಯದಿಂದ ಮುದ್ದಾದ ಕರುವಿಗೆ ಹಸು ಜನ್ಮ ನೀಡಿದೆ. ಗುಮ್ಮಟನಗರಿಯ ಕೆ.ಎಸ್.ಆರ್.ಟಿ. ಸಿ. ಸಿಬ್ಬಂದಿ  ಮಾನವೀಯತೆಯ ಕಾರ್ಯ ನೋಡಿ ಸ್ಥಳೀಯ ಶಬ್ಬಾಷ್ ಅಂತಿದ್ದಾರೆ.

  • ಮೆಕ್ಕೆಜೋಳದ ಲಾರಿ ಪಲ್ಟಿ- ಮೂವರು ಕಾರ್ಮಿಕರು ಸಾವು, ನಾಲ್ವರಿಗೆ ಗಾಯ

    ಮೆಕ್ಕೆಜೋಳದ ಲಾರಿ ಪಲ್ಟಿ- ಮೂವರು ಕಾರ್ಮಿಕರು ಸಾವು, ನಾಲ್ವರಿಗೆ ಗಾಯ

    ಹಾವೇರಿ: ಮೆಕ್ಕೆಜೋಳ ತುಂಬಿದ್ದ ಲಾರಿ ಪಲ್ಟಿಯಾಗಿ ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ನಾಲ್ವರು ಗಾಯಗೊಂಡ ಘಟನೆ ಹಾವೇರಿ ತಾಲೂಕಿನ ಕೊರಡೂರು ಗ್ರಾಮದ ಬಳಿ ನಡೆದಿದೆ.

    (33)ಮಂಜುನಾಥ, (35)ಮಂಜುನಾಥ, (37)ಆನಂದ ಮೃತರಾಗಿದ್ದಾರೆ. ಮೃತರ ಹಾವೇರಿ ತಾಲೂಕಿನ ಇಚ್ಚಂಗಿ ಗ್ರಾಮದವರು ಎಂದು ಗುರುತಿಸಲಾಗಿದೆ. ಮೆಕ್ಕೆಜೋಳದ ಚೀಲವನ್ನ ಹಂದಿಗನೂರ ಗ್ರಾಮದಿಂದ ಲೋಡ್ ಮಾಡಿಕೊಂಡು ಹೊಸರಿತ್ತಿ ಗ್ರಾಮದ ಕಡೆಗೆ ಬರುತ್ತಿದ್ದ ವೇಳೆ ಲಾರಿ ಪಲ್ಟಿಯಾಗಿ ಈ ದುರ್ಘಟನೆ ಸಂಭವಿಸಿದೆ. ಇದನ್ನೂ ಓದಿ: ಡ್ರಮ್ ಬಾರಿಸಿದ ಎಂಪಿ ಸಿಎಂ- ಕುಣಿದು ಕುಪ್ಪಳಿಸಿದ ಮಹಿಳೆಯರು

    ಲಾರಿ ಕೆಳಗೆ ಸಿಲುಕಿಕೊಂಡು ಮೂವರ ಮೃತದೇಹಗಳನ್ನ ಸ್ಥಳೀಯರು ಹಾಗೂ ಪೊಲೀಸರು ಹೊರ ತೆಗೆಯುವ ಕಾರ್ಯ ಮಾಡಿದ್ದಾರೆ. ನಾಲ್ವರು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತದೆ. ಸ್ಥಳಕ್ಕೆ ಗುತ್ತಲ ಪಿಎಸ್‍ಐ ಜಗದೀಶ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗುತ್ತಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಇದನ್ನೂ ಓದಿ: 2047ರ ಮೊದಲು ನವ ಭಾರತವನ್ನು ನಿರ್ಮಿಸುವ ಗುರಿ ಹೊಂದಿದ್ದೇವೆ: ಮೋದಿ

  • ಬೋಟ್ ಮಗುಚಿ 8 ಮಂದಿ ಮೀನುಗಾರರು ನಾಪತ್ತೆ

    ಬೋಟ್ ಮಗುಚಿ 8 ಮಂದಿ ಮೀನುಗಾರರು ನಾಪತ್ತೆ

    ಇಸ್ಲಾಮಾಬಾದ್: ಅರಬ್ಬಿ ಸಮುದ್ರದಲ್ಲಿ ಎರಡು ಮೀನುಗಾರಿಕಾ ಬೋಟ್‍ಗಳು ಮಗುಚಿ, 8 ಮಂದಿ ನಾಪತ್ತೆಯಾಗಿದ್ದಾರೆ.

    ಮೀನುಗಾರರನ್ನು ಹೊತ್ತೊಯ್ಯುತ್ತಿದ್ದ ದೋಣಿಗಳು ದೇಶದ ದಕ್ಷಿಣ ಸಿಂಧ್ ಪ್ರಾಂತ್ಯದ ಥಟ್ಟಾ ಕರಾವಳಿ ಪ್ರದೇಶದ ಅರಬ್ಬಿ ಸಮುದ್ರದಲ್ಲಿ ಮುಳುಗಿವೆ. 8 ಮಂದಿ ನಾಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಬಿಜೆಪಿಗೆ ಮತ್ತೊಂದು ಶಾಕ್‌ – ಗೋವಾ ಮಾಜಿ ಸಿಎಂ ಪರ್ಸೇಕರ್‌ ರಾಜೀನಾಮೆ

    ಇಬ್ರಾಹಿಂ ಹೈದರಿ ಪ್ರದೇಶದಿಂದ ಹೊರಟಿದ್ದ ಅಲ್-ಸಿದ್ದಿಕ್ ಮತ್ತು ಅಲ್-ಬಹ್ರಿಯಾ ಹೆಸರಿನ ಎರಡು ಮೀನುಗಾರಿಕಾ ದೋಣಿಗಳು ಮಗುಚಿವೆ. ರಕ್ಷಣಾ ಪಡೆಗಳು ಸುಮಾರು 25 ಮೀನುಗಾರರನ್ನು ರಕ್ಷಿಸಿದ್ದು, ಎಂಟು ಮಂದಿ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಮೃತ ವ್ಯಕ್ತಿಯ ದೇಹದ ಪಕ್ಕ ಸಿಕ್ತು 124 ಹಾವುಗಳು!

    ಥಟ್ಟಾ ಜಿಲ್ಲಾಧಿಕಾರಿ ನೇತೃತ್ವದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ಗಾಯಗೊಂಡವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಅರಬ್ಬಿ ಸಮುದ್ರದಲ್ಲಿನ ಅತಿಯಾದ ಗಾಳಿಯೇ ಅವಘಡಕ್ಕೆ ಕಾರಣ ಎನ್ನಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‌ನಲ್ಲೇ ದ್ವಂದ್ವ – ನೈಟ್ ಕರ್ಫ್ಯೂ ಬಗ್ಗೆ ಡಿಕೆಶಿ, ಸಿದ್ದು ಭಿನ್ನ ಅಭಿಪ್ರಾಯ