Tag: ಚಿಕಿತ್ಸೆ

  • ಸಮಂತಾಗೆ ಗಂಭೀರ ಆರೋಗ್ಯ ಸಮಸ್ಯೆಯಾ? ಆತಂಕಗೊಂಡ ಫ್ಯಾನ್ಸ್

    ಸಮಂತಾಗೆ ಗಂಭೀರ ಆರೋಗ್ಯ ಸಮಸ್ಯೆಯಾ? ಆತಂಕಗೊಂಡ ಫ್ಯಾನ್ಸ್

    ಕ್ಷಿಣದ ಖ್ಯಾತ ನಟಿ ಸಮಂತಾ (Samantha) ಹಲವು ದಿನಗಳಿಂದ ಎಲ್ಲಿಯೂ ಕಾಣಿಸಿಕೊಳ್ಳುತ್ತಿಲ್ಲ. ಅವರ ನಟನೆಯ ಶಾಕುಂತಲಾ ಮತ್ತು ಯಶೋಧಾ (Yashodha) ಸಿನಿಮಾಗಳ ಹಲವು ಕಾರ್ಯಕ್ರಮಗಳು ಜರುಗಿದ್ದರೂ, ಅವರು ಒಂದಕ್ಕೂ ಪ್ರತಿಕ್ರಿಯಿಸಿಲ್ಲ. ಅಲ್ಲದೇ ಹಲವು ದಿನಗಳಿಂದ ಯಾವುದೇ ಶೂಟಿಂಗ್ ನಲ್ಲೂ ಅವರು ಪಾಲ್ಗೊಳ್ಳದೇ ಇರುವ ಕಾರಣಕ್ಕಾಗಿ ಅಭಿಮಾನಿಗಳು ಆತಂಕಗೊಂಡಿದ್ದಾರೆ. ಸಮಂತಾ ಈಗ ಎಲ್ಲಿದ್ದಾರೆ ಎಂದು ಹುಡುಕುತ್ತಿದ್ದಾರೆ.

    ತಮಿಳು ಮಾಧ್ಯಮಗಳು ವರದಿ ಮಾಡಿದಂತೆ ಸಮಂತಾ ಅವರು ಗಂಭೀರ (Serious) ಆರೋಗ್ಯ (Health) ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಅತೀ ಶೀಘ್ರದಲ್ಲೇ ಅವರು ವಿದೇಶಕ್ಕೂ ಹಾರಿ, ಅಲ್ಲಿ ಚಿಕಿತ್ಸೆ ಪಡೆಯಲಿದ್ದಾರೆ ಎಂದು ವರದಿ ಮಾಡಿವೆ. ವಿದೇಶಕ್ಕೆ ಹೋಗಿ ಚಿಕಿತ್ಸೆ ಪಡೆಯುವಂತಹ ಸಮಸ್ಯೆ ಏನಾಗಿದೆ ಎನ್ನುವ ಕುರಿತು ಸರಿಯಾದ ಮಾಹಿತಿ ಹಂಚಿಕೊಳ್ಳದೇ ಇದ್ದರೂ, ಅವರು ಚರ್ಮ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ:ಕಾಸ್ಟಿಂಗ್ ಕೌಚ್ ಬಗ್ಗೆ ಕರಾಳ ಅನುಭವ ಬಿಚ್ಚಿಟ್ಟ ನಟಿ ಶಮಾ ಸಿಕಂದರ್

    ಕೆಲ ಮಾಧ್ಯಮಗಳು ಚರ್ಮ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ವರದಿ ಮಾಡಿದರೆ, ಕೆಲವರು ಬೇರೆ ಸಮಸ್ಯೆಗಳ ಕುರಿತು  ಬರೆದಿದ್ದಾರೆ. ಹಾಗಾಗಿ ಸಮಂತಾಗೆ ಇಂಥದ್ದೆ ಸಮಸ್ಯೆ ಇದೆ ಎಂದು ಗೊತ್ತಾಗಿಲ್ಲ. ಅವರು ಕೂಡ ಈ ಕುರಿತು ಎಲ್ಲಿಯೂ ಹೇಳಿಕೊಂಡಿಲ್ಲ. ಸಮಂತಾ ಆಪ್ತರ ಪ್ರಕಾರ, ನಟಿಗೆ ಆರೋಗ್ಯ ಸಮಸ್ಯೆ ಎದುರಾಗಿದ್ದು ನಿಜ. ಚಿಕಿತ್ಸೆಗಾಗಿ (Treatment) ವಿದೇಶಕ್ಕೂ (Abroad) ಹೋಗುತ್ತಾರೆ ಎನ್ನುವುದೂ ಅಷ್ಟೇ ಸತ್ಯ. ಹೀಗಾಗಿ ಸಹಜವಾಗಿಯೇ ಅಭಿಮಾನಿಗಳಿಗೆ ಆತಂಕ ಶುರುವಾಗಿದೆ.

    ಸಮಂತಾ ನಟನೆಯ ಯಶೋಧಾ ಮತ್ತು ಶಾಂಕುತಲಾ (Shakuntala) ಸಿನಿಮಾಗಳು ಬಹುತೇಕ ಶೂಟಿಂಗ್ ಮುಗಿಸಿಕೊಂಡು ಬಿಡುಗಡೆಗೆ ಸಿದ್ಧವಾಗಿದೆ. ಮೊನ್ನೆಯಷ್ಟೇ ಎರಡು ಸಿನಿಮಾಗಳ ಲುಕ್ ರಿಲೀಸ್ ಆಗಿದೆ. ಟ್ರೈಲರ್ ಕೂಡ ಬಿಡುಗಡೆ ಮಾಡಿದ್ದಾರೆ. ಈ ಎರಡೂ ಚಿತ್ರಗಳು ಸಮಂತಾ ವೃತ್ತಿ ಬದುಕಿಗೆ ಬಹುದೊಡ್ಡ ಬ್ರೇಕ್ ನೀಡಲಿವೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಮುರುಘಾ ಶ್ರೀಗಳಿಗೆ ಎದೆ ನೋವು – ಆಸ್ಪತ್ರೆಗೆ ದಾಖಲು

    ಮುರುಘಾ ಶ್ರೀಗಳಿಗೆ ಎದೆ ನೋವು – ಆಸ್ಪತ್ರೆಗೆ ದಾಖಲು

    ಚಿತ್ರದುರ್ಗ: ಲೈಂಗಿಕ ದೌರ್ಜನ್ಯ ಆರೋಪಕ್ಕೆ ಸಂಬಂಧಿಸಿದಂತೆ ಪೋಕ್ಸೋ ಪ್ರಕರಣದಡಿ ಬಧನಕ್ಕೊಳಗಾಗಿರುವ ಮುರುಘಾ ಶ್ರೀಗಳಿಗೆ ಎದೆ ನೋವು ಕಾಣಿಸಿಕೊಂಡಿದೆ. ಈ ಹಿನ್ನೆಲೆ ಅವರಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

    ಮುರುಘಾ ಶ್ರೀಗಳಿಗೆ ಬಿಪಿ ಹಾಗೂ ಸ್ಯಾಚುರೇಷನ್ ವ್ಯತ್ಯಾಸವಾಗಿರುವುದಾಗಿ ವರದಿಯಾಗಿದ್ದು, ವೈದ್ಯರು ಮೇಲಿಂದ ಮೇಲೆ ಇಸಿಜಿ ಹಾಗೂ ಎಕೋ ಪರೀಕ್ಷೆ ನಡೆಸುತ್ತಿದ್ದಾರೆ. ಅವರಿಗೆ ಎದೆ ನೋವು ಕಂಡುಬಂದಿರುವ ಹಿನ್ನೆಲೆ ಜಿಲ್ಲಾಆಸ್ಪತ್ರೆಯತ್ತ ಜನರ ದಂಡು ಹರಿದಿದೆ. ತಂಡೋಪತಂಡವಾಗಿ ಹರಿದು ಬರುತ್ತಿರುವ ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಡುತ್ತಿದ್ದಾರೆ. ಆಸ್ಪತ್ರೆಯೆಡೆಗೆ ಭಕ್ತಾದಿಗಳ ದಂಡು ಹರಿದು ಬರುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ. ಇದನ್ನೂ ಓದಿ: ಮುರುಘಾ ಶರಣರ ಬಂಧನ- ಬಿಕೋ ಎನ್ನುತ್ತಿದೆ ಮಠದ ಆವರಣ

    ವೈದ್ಯರು ಈ ಮೊದಲೇ ಮುರುಘಾ ಶ್ರೀಗಳಿಗೆ ಎದೆನೋವು ಬಂದರೆ ತಕ್ಷಣ ಆಸ್ಪತ್ರೆಗೆ ದಾಖಲಿಸಲು ಸೂಚನೆ ನೀಡಿದ್ದರು. ಇಂದು ಎದೆ ನೋವು ಕಾಣಿಸಿಕೊಂಡ ಹಿನ್ನೆಲೆ ಪೊಲೀಸರು ಮುರುಘಾ ಶ್ರೀ ಅವರನ್ನು ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಇದನ್ನೂ ಓದಿ: ಪೋಕ್ಸೊ ಪ್ರಕರಣ – ಮುರುಘಾ ಶ್ರೀಗೆ 14 ದಿನ ನ್ಯಾಯಾಂಗ ಬಂಧನ

    ಶ್ರೀಗಳಿಗೆ ಎಮ್‌ಆರ್‌ಐ ಸ್ಕ್ಯಾನ್ ಪರೀಕ್ಷೆ ಪೂರ್ಣಗೊಂಡಿದ್ದು, ಇದೀಗ ವೈದ್ಯರ ತಂಡ  ಅವರನ್ನು ವ್ಹೀಲ್ ಚೇರ್ ನಲ್ಲಿ ಸಿಟಿ ಸ್ಕ್ಯಾನ್ ಗೆ ಕರೆದೊಯದದಿರುವುದಾಗಿ ವರದಿಯಾಗಿದೆ. ಮುರುಘಾ ಶ್ರೀ ಗಳಿಗೆ ಉಸಿರಾಟದ ತೊಂದರೆಯೂ ಕಂಡುಬಂದಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸುವ ಸಾಧ್ಯತೆಗಳಿವೆ.

    Live Tv
    [brid partner=56869869 player=32851 video=960834 autoplay=true]

  • ಟೊಮೆಟೋ ಜ್ವರ ಎಂದರೇನು? ರೋಗಲಕ್ಷಣ ಹಾಗೂ ಚಿಕಿತ್ಸೆ ಹೇಗೆ?

    ಟೊಮೆಟೋ ಜ್ವರ ಎಂದರೇನು? ರೋಗಲಕ್ಷಣ ಹಾಗೂ ಚಿಕಿತ್ಸೆ ಹೇಗೆ?

    ನವದೆಹಲಿ: ಕೇರಳದಲ್ಲಿ ಮೇ 6 ರಂದು ಟೊಮೆಟೋ ಜ್ವರ ಪತ್ತೆಯಾಗಿದೆ. ಭಾರತದಲ್ಲಿಯೇ ಮೊದಲ ಬಾರಿಗೆ ಈ ಜ್ವರ ಕಂಡು ಬಂದಿದ್ದು, ದೇಶದಲ್ಲಿ ಈಗ ಟೊಮೆಟೋ ವೈರಸ್ ತನ್ನ ಆರ್ಭಟ ಶುರುಮಾಡಿದೆ. ಇಲ್ಲಿಯವರೆಗೂ 82 ಪ್ರಕರಣಗಳು ದಾಖಲಾಗಿವೆ. ಇದೀಗ ದೇಶದಲ್ಲಿ ವೈದ್ಯರು ಟೊಮೆಟೋ ವೈರಸ್ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ.

    ಅಧ್ಯಯನಗಳ ಪ್ರಕಾರ ಒಂದರಿಂದ ಐದು ವರ್ಷ ವಯಸ್ಸಿನ ಮಕ್ಕಳಲ್ಲಿ ಮತ್ತು ರೋಗನಿರೋಧಕ ಶಕ್ತಿ ಕಡಿಮೆ ಇರುವ ವಯಸ್ಕರಲ್ಲಿ ಟೊಮೆಟೋ ಜ್ವರ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಇದು ಕೈ, ಕಾಲು ಮತ್ತು ಬಾಯಿ ಮೂಲಕ ಹರಡುವ ಕಾಯಿಲೆಯಾಗಿದೆ.

    TOMATO

    ಮೊದಲ ಬಾರಿಗೆ ಟೊಮೆಟೋ ಜ್ವರ 2022ರ ಮೇ 6ರಂದು ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ಪತ್ತೆಯಾಯಿತು. ಟೊಮೆಟೋ ಜ್ವರ ಕೋವಿಡ್ ರೀತಿಯೇ ರೋಗಲಕ್ಷಣಗಳನ್ನು ಹೊಂದಿದೆ. ಆದರೆ ಕೋವಿಡ್-19ಗೂ ಟೊಮೆಟೋ ಜ್ವರಕ್ಕೂ ಯಾವುದೇ ಸಂಬಂಧವಿಲ್ಲ. ಟೊಮೆಟೊ ಜ್ವರವು ಮಕ್ಕಳಲ್ಲಿ ಚಿಕೂನ್‍ಗುನ್ಯಾ ಅಥವಾ ಡೆಂಗ್ಯೂ ಜ್ವರದಷ್ಟೇ ಪರಿಣಾಮ ಬೀರುತ್ತದೆ ಎಂದು ಅಧ್ಯಯನಗಳ ಮೂಲಕ ತಿಳಿದು ಬಂದಿದೆ.

    Tomato

    ದೇಹದ ಹಲವು ಭಾಗಗಳಲ್ಲಿ ಉಂಟಾಗುವ ಗುಳ್ಳೆಗಳು ಕೆಂಪು ಬಣ್ಣದ ದುಂಡಗಿನ ಆಕಾರದಲ್ಲಿ ಇರುವುತ್ತದೆ. ಇದನ್ನು ಟೊಮೆಟೋ ಜ್ವರ ಎಂಬ ಹೆಸರಿನಲ್ಲಿ ಕರೆಯಲಾಗುತ್ತಿದೆ. ಕಾಲಕ್ರಮೇಣ ದೇಹದ ಮೇಲಿನ ಗುಳ್ಳೆಗಳು ಟೊಮೆಟೋ ಗಾತ್ರದಷ್ಟು ದೊಡ್ಡದಾಗುತ್ತದೆ.

    ಲಕ್ಷಣಗಳೇನು?
    ಟೊಮೆಟೊ ಜ್ವರ ಹೊಂದಿರುವ ಮಕ್ಕಳಲ್ಲಿ ಕಂಡುಬರುವ ಪ್ರಾಥಮಿಕ ರೋಗಲಕ್ಷಣಗಳು ಚಿಕುನ್‍ಗುನ್ಯಾದಂತೆಯೇ ಇರುತ್ತವೆ. ಇದರಲ್ಲಿ ಜ್ವರ ಹೆಚ್ಚಿರುತ್ತದೆ. ಕೀಲುಗಳಲ್ಲಿ ತೀವ್ರವಾದ ನೋವು ಬರುತ್ತದೆ. ಮೈ-ಕೈ ನೋವು, ಜ್ವರ ಮತ್ತು ಆಯಾಸದಂತಹ ಕೆಲವು ರೋಗಲಕ್ಷಣಗಳು ಕೋವಿಡ್-19 ವೈರಸ್‍ನಂತೆಯೇ ಇರುತ್ತವೆ. ಇತರ ರೋಗಲಕ್ಷಣಗಳೆಂದರೆ ಕೀಲು ಊತ, ವಾಕರಿಕೆ, ಅತಿಸಾರ, ನಿರ್ಜಲೀಕರಣ, ಕೀಲು ನೋವು ಮತ್ತು ಅಧಿಕ ಜ್ವರ. ಕೆಲವು ವೇಳೆ ರೋಗಿಗಳ ಚರ್ಮದ ಮೇಲೆ ಗುಳ್ಳೆಗಳ ಬೆಳವಣಿಗೆ ಸಹ ಕಂಡು ಬರುತ್ತದೆ.

    ಚಿಕಿತ್ಸೆ
    ಟೊಮೆಟೊ ಜ್ವರದ ಚಿಕಿತ್ಸೆಯು ಚಿಕೂನ್‍ಗುನ್ಯಾ, ಡೆಂಗ್ಯೂ ಮತ್ತು ಕೈ, ಕಾಲು ಮತ್ತು ಬಾಯಿ ಕಾಯಿಲೆಯ ಚಿಕಿತ್ಸೆಯಂತೆಯೇ ಇರುತ್ತದೆ. ಕಿರಿಕಿರಿ ಮತ್ತು ಗುಳ್ಳೆಗಳ ಪರಿಹಾರಕ್ಕಾಗಿ ಶುಚಿತ್ವ ಮತ್ತು ನೈರ್ಮಲ್ಯತೆಯನ್ನು ಕಾಪಾಡಿಕೊಳ್ಳಬೇಕು. ಸೋಂಕಿತ ಮಕ್ಕಳಿಗೆ ಹೆಚ್ಚು ಕುದಿಸಿ ಆರಿಸಿದ ನೀರನ್ನು ಕುಡಿಸುವ ಮೂಲಕ ನೀರಿನಂಶವನ್ನು ಕಾಪಾಡಿಕೊಳ್ಳಬೇಕು. ನಿಮ್ಮ ಮಗುವಿನಲ್ಲಿ ರೋಗದ ಲಕ್ಷಣಗಳು ಕಂಡು ಬರುತ್ತಿದ್ದಂತೆ ವೈದ್ಯರನ್ನು ಸಂಪರ್ಕಿಸಬೇಕು. ಗುಳ್ಳೆಗಳು ತುರಿಸುವುದು ಅಥವಾ ಒಡೆದುಕೊಳ್ಳದಂತೆ ನೋಡಿಕೊಳ್ಳಬೇಕು. ಬಿಸಿ ನೀರಿನಲ್ಲಿಯೇ ಸ್ನಾನ ಮಾಡುವುದು, ಜ್ವರದ ದೀರ್ಘಕಾಲೀನ ಪರಿಣಾಮಗಳನ್ನು ತಪ್ಪಿಸಲು ಸರಿಯಾಗಿ ವಿಶ್ರಾಂತಿ ತೆಗೆದುಕೊಳ್ಳಬೇಕಾಗುತ್ತದೆ.

    Live Tv
    [brid partner=56869869 player=32851 video=960834 autoplay=true]

  • ಬ್ಯಾಂಡೇಜ್ ಬದಲಿಗೆ ಕಾಂಡೋಮ್ ಪ್ಯಾಕೆಟ್ ಬಳಸಿ ಮಹಿಳೆ ತಲೆಗೆ ಡ್ರೆಸ್ಸಿಂಗ್ – ಬೆಚ್ಚಿಬಿದ್ದ ವೈದ್ಯರು

    ಬ್ಯಾಂಡೇಜ್ ಬದಲಿಗೆ ಕಾಂಡೋಮ್ ಪ್ಯಾಕೆಟ್ ಬಳಸಿ ಮಹಿಳೆ ತಲೆಗೆ ಡ್ರೆಸ್ಸಿಂಗ್ – ಬೆಚ್ಚಿಬಿದ್ದ ವೈದ್ಯರು

    ಭೋಪಾಲ್: ಮಧ್ಯಪ್ರದೇಶದ ಪೋರ್ಸಾ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಬಳಿಕ ಕಾಂಡೋಮ್ ಪ್ಯಾಕೆಟ್ ಬಳಸಿ ಮಹಿಳೆಯ ತಲೆ ಗಾಯಕ್ಕೆ ಡ್ರೆಸ್ಸಿಂಗ್ ಮಾಡಲಾಗಿದೆ. ಗಾಯದ ತೀವ್ರತೆಯಿಂದ ಆಕೆಯನ್ನು ಮೊರೆನಾದ ಜಿಲ್ಲಾಸ್ಪತ್ರೆಗೆ ದಾಖಲಿಸಿದಾಗ ಈ ಅಚ್ಚರಿ ಘಟನೆ ಬೆಳಕಿಗೆ ಬಂದಿದೆ.

    ಮೊರೆನಾ ಜಿಲ್ಲಾಸ್ಪತ್ರೆ ವೈದ್ಯರು ಮಹಿಳೆಯ ತಲೆಯ ಭಾಗದ ಗಾಯಕ್ಕೆ ಡ್ರೆಸ್ಸಿಂಗ್ ಬದಲಾಯಿಸಲು ಮುಂದಾದಾಗ ಮಹಿಳೆಯ ತಲೆಯಲ್ಲಿ ಬ್ಯಾಂಡೇಜ್‌ಗೆ ಬದಲಾಗಿ ಕಾಂಡೋಮ್ ಪ್ಯಾಕೆಟ್ ಬಳಸಿರುವುದನ್ನು ಕಂಡು ಶಾಕ್ ಆಗಿದ್ದಾರೆ.

    ಚಿಕಿತ್ಸೆ ಪಡೆದ ಮಹಿಳೆಯನ್ನು ಧರ್ಮಗಢ ಮೂಲದ ರೇಷ್ಮಾ ಬಾಯಿ ಎಂದು ಗುರುತಿಸಲಾಗಿದೆ. ಈಕೆ ಇತ್ತೀಚೆಗೆ ತಲೆಯ ಗಾಯದ ಚಿಕಿತ್ಸೆಗಾಗಿ ಪೋರ್ಸಾ ಸಮುದಾಯ ಆರೋಗ್ಯ ಕೇಂದ್ರಕ್ಕೆ ಹೋದಾಗ ರಕ್ತಸ್ರಾವ ನಿಲ್ಲಿಸಲು ಕಾಂಡೋಮ್ ಬಳಸಲಾಗಿದೆ. ಇದಾದ ಕೆಲ ದಿನಗಳಲ್ಲೇ ಮಹಿಳೆಗೆ ಗಾಯದ ತೀವ್ರತೆ ಹೆಚ್ಚಾಗಿದೆ. ಆಕೆಯನ್ನು ಮೊರೆನಾದಲ್ಲಿನ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದಾಗ ಈ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.

    ಅಂದು ಚಿಕಿತ್ಸೆ ನೀಡುವ ಸಂದರ್ಭದಲ್ಲಿ ಡಾ.ಧರ್ಮೇಂದ್ರ ರಜಪೂತ್ ತುರ್ತು ಕರ್ತವ್ಯದಲ್ಲಿದ್ದರು. ವಾರ್ಡ್ ಬಾಯ್ ಆಗಿ ಅನಂತರಾಮ್ ಇದ್ದರು. ಈ ವೇಳೆ ವೈದ್ಯರು ವಾರ್ಡ್ ಬಾಯ್‌ಗೆ ಹತ್ತಿ ಪ್ಯಾಡ್‌ನ ಮೇಲೆ ಕೆಲವು ಕಾರ್ಡ್ ಬೋರ್ಡ್‌ಗಳನ್ನು ಇರಿಸುವಂತೆ ಸೂಚಿಸಿದರು. ಆದರೆ ವಾರ್ಡ್ಬಾಯ್ ಕಾಂಡೋಮ್ ಪ್ಯಾಕೆಟ್ ಅನ್ನು ಬಳಸಿದ್ದಾನೆ ಎಂದು ವರದಿಯಾಗಿದೆ.

    ಸದ್ಯ ಪೋರ್ಸಾ ಸಮುದಾಯ ಆರೋಗ್ಯ ಕೇಂದ್ರದ ಡ್ರೆಸ್ಸರ್‌ನನ್ನು ರಾಜ್ಯ ಆರೋಗ್ಯ ಇಲಾಖೆ ಅಮಾನತುಗೊಳಿಸಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ವಿಮಾನದಲ್ಲಿದ್ದ ಪ್ರಯಾಣಿಕನ ಜೀವ ಉಳಿಸಿದ ತೆಲಂಗಾಣ ರಾಜ್ಯಪಾಲೆ

    ವಿಮಾನದಲ್ಲಿದ್ದ ಪ್ರಯಾಣಿಕನ ಜೀವ ಉಳಿಸಿದ ತೆಲಂಗಾಣ ರಾಜ್ಯಪಾಲೆ

    ಹೈದರಾಬಾದ್: ತೆಲಂಗಾಣ ರಾಜ್ಯಪಾಲೆ ತಮಿಳಿಸೈ ಸೌಂದರರಾಜನ್ ಅವರು ಶನಿವಾರ ಮುಂಜಾನೆ ದೆಹಲಿ-ಹೈದರಾಬಾದ್ ವಿಮಾನದಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ಪ್ರಯಾಣಿಕನಿಗೆ ಗೋಲ್ಡನ್ ಅವರ್ ಚಿಕಿತ್ಸೆ ನೀಡಿದರು.

    ರಾಜಕೀಯ ಪ್ರವೇಶಿಸುವ ಮೊದಲು ವೈದ್ಯರಾಗಿದ್ದ ಸೌಂದರರಾಜನ್, ಪ್ರಯಾಣಿಕನಿಗೆ ತಕ್ಷಣದ ವೈದ್ಯಕೀಯ ಚಿಕಿತ್ಸೆಯನ್ನು ಕೊಟ್ಟು ಸಹಾಯಕ ಔಷಧಿಗಳನ್ನು ನೀಡಿದರು. ಇದರಿಂದ ಸಹ-ಪ್ರಯಾಣಿಕರು ಸಂತೋಷ ವ್ಯಕ್ತಪಡಿಸಿದ್ದು, ಧನ್ಯವಾದವನ್ನು ಹೇಳಿದ್ದಾರೆ. ಈ ಕುರಿತು ರವಿ ಚಂದರ್ ನಾಯ್ಕ ಮುದವತ್ ಅವರು ಟ್ವೀಟ್ ಮಾಡಿದ್ದಾರೆ. ಈ ಪೋಸ್ಟ್ ನೋಡಿದ ನೆಟ್ಟಿಗರು ಸಂತೋಷ ವ್ಯಕ್ತಪಡಿಸಿದರು. ಇದನ್ನೂ ಓದಿ: ಒಳ್ಳೆಯದಾಗಬೇಕೆಂದ್ರೆ ಜನ 2023ರಲ್ಲಿ ಸಿದ್ದರಾಮಯ್ಯ ಸಿಎಂ ಆಗಬೇಕು ಎಂದು ಬಯಸುತ್ತಿದ್ದಾರೆ: ಜಮೀರ್ 

    https://twitter.com/iammrcn/status/1550614073124933633?ref_src=twsrc%5Etfw

    ನಡೆದಿದ್ದೇನು?
    ಸೌಂದರರಾಜನ್ ಅವರು ವಾರಣಾಸಿಯಿಂದ ನವದೆಹಲಿ ಮೂಲಕ ಹೈದರಾಬಾದ್‍ಗೆ ಹಿಂದಿರುಗುತ್ತಿದ್ದಾಗ ವಿಮಾನ ಸಿಬ್ಬಂದಿ ನೀಡಿದ ಪ್ರಕಟಣೆಗೆ ಪ್ರತಿಕ್ರಿಯಿಸಿದರು. ಸಹ-ಪ್ರಯಾಣಿಕನಿಗೆ ಚಿಕಿತ್ಸೆ ನೀಡಲು ಮುಂದಾಗಿದ್ದಾರೆ. ಸೌಂದರರಾಜನ್ ಅವರು ಚಿಕಿತ್ಸೆ ನೀಡುವಲ್ಲಿ ಯಶಸ್ವಿಯಾಗಿದ್ದು, ವಿಮಾನ ನಿಲ್ದಾಣಕ್ಕೆ ಬಂದ ನಂತರ ಚಿಕಿತ್ಸೆ ಪಡೆದ ಪ್ರಯಾಣಿಕರನ್ನು ಗಾಲಿಕುರ್ಚಿಯಲ್ಲಿ ವಿಮಾನ ನಿಲ್ದಾಣದ ವೈದ್ಯಕೀಯ ಬೂತ್‍ಗೆ ಕರೆದೊಯ್ಯಲಾಯಿತು.

    ಸೌಂದರರಾಜನ್ ಅವರು ಇತ್ತೀಚೆಗೆ ಭದ್ರಾದ್ರಿ-ಕೊತಗುಡೆಂ ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದರು. ಎಡೆಬಿಡದ ಮಳೆ ಮತ್ತು ಕೆಸರಿನಲ್ಲಿಯೇ ನಡೆದು ಪ್ರದೇಶದ ಸುತ್ತಲೂ ನಡೆದರು. ನಂತರ ಅವರು ಅಶ್ವಪುರಂ ಮಂಡಲದ ಆಶ್ರಯ ಶಿಬಿರಗಳಿಗೆ ಭೇಟಿ ನೀಡಿದ್ದು, ಪ್ರವಾಹ ಪೀಡಿತ ಜನರೊಂದಿಗೆ ಸಂವಾದ ನಡೆಸಿದ್ದರು. ಇದನ್ನೂ ಓದಿ: ಯಡಿಯೂರಪ್ಪ ತ್ಯಾಗ ಮಾಡಿಲ್ಲ, ಅವರನ್ನ ಪಕ್ಷದಿಂದ ದಬ್ಬಿದ್ರು: ಸಿಎಂ ಇಬ್ರಾಹಿಂ

    ಮೊದಲು ಅಶ್ವಪುರಂ ಮಂಡಲದ ವೇಮುಲಪಲ್ಲಿ ಗ್ರಾಮಕ್ಕೆ ಭೇಟಿ ನೀಡಿದ ಅವರು ನಂತರ, ಪಾಮುಲಪಲ್ಲಿಯ ಎಸ್‍ಕೆಟಿ ಫಂಕ್ಷನ್ ಹಾಲ್ ಮತ್ತು ಚಿಂತಿರಿಯಾಲ ಕಾಲೋನಿಯ ತರಿಂಗಿಣಿ ಫಂಕ್ಷನ್ ಹಾಲ್‍ನಲ್ಲಿ ಸ್ಥಾಪಿಸಲಾದ ಆಶ್ರಯ ಶಿಬಿರಗಳಿಗೆ ಭೇಟಿ ನೀಡಿದರು. ಸೌಂದರರಾಜನ್ ಅವರು ಹಾನಿಗೊಳಗಾದ ಮನೆಗಳು ಮತ್ತು ಜಲಾವೃತಗೊಂಡ ಭತ್ತದ ಗದ್ದೆಗಳಿಗೆ ಭೇಟಿ ನೀಡಿದ್ದರು.

    Live Tv
    [brid partner=56869869 player=32851 video=960834 autoplay=true]

  • ಮಂಕಿಪಾಕ್ಸ್ ಭೀತಿ – ವಿಮಾನ ನಿಲ್ದಾಣಗಳಲ್ಲಿ ಹೈ ಅಲರ್ಟ್ ಘೋಷಣೆ

    ಮಂಕಿಪಾಕ್ಸ್ ಭೀತಿ – ವಿಮಾನ ನಿಲ್ದಾಣಗಳಲ್ಲಿ ಹೈ ಅಲರ್ಟ್ ಘೋಷಣೆ

    ನವದೆಹಲಿ: ದೇಶದಲ್ಲೂ ಆತಂಕ ಸೃಷ್ಟಿಸಿರುವ ಮಂಕಿಪಾಕ್ಸ್ ಸೋಂಕಿನ ಭೀತಿಯಿಂದಾಗಿ ಕೇಂದ್ರ ಆರೋಗ್ಯ ಸಚಿವಾಲಯ ಎಲ್ಲ ವಿಮಾನ ನಿಲ್ದಾಣಗಳಲ್ಲೂ ಹೈ ಅಲರ್ಟ್ ಘೋಷಿಸಿದೆ. ವಿದೇಶಗಳಿಂದ ಬರುವವರನ್ನು ಕಡ್ಡಾಯವಾಗಿ ತಪಾಸಣೆಗೆ ಒಳಪಡಿಸುವಂತೆ ಸೂಚಿಸಿದೆ.

    ಈ ಕುರಿತು ಆರೋಗ್ಯ ಸಚಿವಾಲಯ ತುರ್ತು ಅದೇಶ ಹೊರಡಿಸಿದ್ದು, ಕೇಂದ್ರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮಾರ್ಗಸೂಚಿಗಳಂತೆ ಪ್ರತಿಯೊಬ್ಬರನ್ನೂ ಕಡ್ಡಾಯವಾಗಿ ತಪಾಸಣೆ ಮಾಡಬೇಕು. ಇದರಿಂದ ಮಂಕಿಪಾಕ್ಸ್ ಹರಡುವುದನ್ನು ತಡೆಗಟ್ಟಬಹುದು ಎಂದು ಹೇಳಿದೆ. ಇದನ್ನೂ ಓದಿ: ಕಾಂಗ್ರೆಸ್‍ನಲ್ಲಿ ಜೋರಾಯ್ತು ಕುರ್ಚಿ ಕದನ – ಸಿಎಂ ಪಟ್ಟಕ್ಕಾಗಿ ಸಮುದಾಯದ ಬೆಂಬಲ ಕೋರಿದ ಡಿಕೆ

    ದುಬೈನಿಂದ ಬಂದಿದ್ದ ಕೇರಳದ ಕಣ್ಣೂರಿನ ವ್ಯಕ್ತಿಯೊಬ್ಬರಿಗೆ ನಿನ್ನೆಯಷ್ಟೇ `ಮಂಕಿಪಾಕ್ಸ್’ ತಗುಲಿರುವುದು ಪತ್ತೆಯಾಗಿತ್ತು. ಇದು ದೇಶದಲ್ಲಿ ಪತ್ತೆಯಾದ 2ನೇ ಪ್ರಕರಣವಾಗಿತ್ತು. ಇದಕ್ಕೂ ಮುನ್ನ ಕೇರಳದ ಕೊಲ್ಲಂ ಜಿಲ್ಲೆಯ ವ್ಯಕ್ತಿಯೊಬ್ಬರಲ್ಲಿ ಮಂಕಿಪಾಕ್ಸ್ ದೃಢಪಟ್ಟಿತ್ತು.

    31 ವರ್ಷದ ವ್ಯಕ್ತಿಯೊಬ್ಬರು ಜುಲೈ 13ರಂದು ದುಬೈಯಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದರು. ಅವರಲ್ಲಿ ಮಂಕಿಪಾಕ್ಸ್‌ನ ಲಕ್ಷಣಗಳು ಕಂಡುಬಂದಿದ್ದವು. ಹೀಗಾಗಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರಿಂದ ಸಂಗ್ರಹಿಸಲಾಗಿದ್ದ ಮಾದರಿಯನ್ನು ಪುಣೆಯ ರಾಷ್ಟ್ರೀಯ ವೈರಾಣು ಸಂಸ್ಥೆಗೆ ರವಾನಿಸಲಾಗಿತ್ತು. ವ್ಯಕ್ತಿಗೆ ರೋಗ ತಗುಲಿರುವುದು ಪರೀಕ್ಷೆಯಿಂದ ದೃಢಪಟ್ಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಧಿಕಾರಿಯೊಬ್ಬರು ಹೇಳಿದ್ದಾರೆ. ಇದನ್ನೂ ಓದಿ: ಸುಮ್ಮನೆ ವಾಹನ ತಡೆ ಹಿಡಿಯುತ್ತಿದ್ದ ಟ್ರಾಫಿಕ್ ಪೊಲೀಸ್ ಅಮಾನತು

    ಈ ಬೆನ್ನಲ್ಲೇ ರಾಜ್ಯದ ಆರೋಗ್ಯ ಇಲಾಖೆಯೊಂದಿಗೆ ಕೇಂದ್ರದ ವಿಶೇಷ ತಂಡವು ಪರಿಸ್ಥಿತಿ ಅವಲೋಕಿಸಿತ್ತು. ಬಳಿಕ ಮಂಕಿಪಾಕ್ಸ್ ನಿಯಂತ್ರಣಕ್ಕೆ ಅಗತ್ಯ ಕ್ರಮಗಳನ್ನೂ ಕೈಗೊಳ್ಳಲಾಗಿದೆ. ಪ್ರಕರಣ ಪತ್ತೆಯಾದಲ್ಲಿ, ಅದನ್ನು ತಡೆಯಲು ರಾಜ್ಯಗಳಿಗೆ ಎಲ್ಲ ರೀತಿಯ ಸಹಕಾರಗಳನ್ನು ನೀಡಲಾಗುತ್ತದೆ. ಮಂಕಿಪಾಕ್ಸ್ ಅಷ್ಟೇನೂ ಗಂಭೀರವಾದ ಕಾಯಿಲೆಯಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಹೀಗಾಗಿ ಯಾರೂ ಆತಂಕಕ್ಕೆ ಒಳಗಾಗಬಾರದು ಧೈರ್ಯ ಹೇಳಿದೆ.

    Live Tv
    [brid partner=56869869 player=32851 video=960834 autoplay=true]

  • ಇಂಡಸ್ಟ್ರಿಯಲ್ಲಿ ನಟಿಯರು ಎದುರಿಸುವ ಸವಾಲು ಬಿಚ್ಚಿಟ್ಟ ರಮ್ಯಾ

    ಇಂಡಸ್ಟ್ರಿಯಲ್ಲಿ ನಟಿಯರು ಎದುರಿಸುವ ಸವಾಲು ಬಿಚ್ಚಿಟ್ಟ ರಮ್ಯಾ

    ಇಂಡಸ್ಟ್ರಿಯಲ್ಲಿ ನಟಿಯರಿಗೆ ಅವಾಸ್ತವಿಕ ಸೌಂದರ್ಯದ ವಿಚಾರವಾಗಿ ತೀವ್ರ ಒತ್ತಡ ಹಾಕಲಾಗುತ್ತಿದೆ ಎಂದು ಮೋಹಕ ತಾರೆ ರಮ್ಯಾ ನಟಿಯರು ಎದುರಿಸುವ ಸವಾಲನ್ನು ಬಿಚ್ಚಿಡುವ ಮೂಲಕ ಸ್ಫೋಟಕ ಮಾಹಿತಿಯನ್ನು ಹೊರ ಹಾಕಿದ್ದಾರೆ.

    ಯುವನಟಿ ಚೇತನಾ ರಾಜ್ ನಿಧನಕ್ಕೆ ಸಂತಾಪ ಸೂಚಿಸಿದ ರಮ್ಯಾ, ಪ್ಲಾಸ್ಟಿಕ್ ಸರ್ಜರಿಯಿಂದ ಯುವ ನಟಿ ನಿಧನರಾಗಿರುವ ಸುದ್ದಿ ತಿಳಿಯಿತು. ನನ್ನ ಕಾಲಿನ ಟ್ಯೂಮರ್ ತೆಗೆಸಿದ ಬಳಿಕ ನಾನು ದಪ್ಪಗಾದೆ. ನಾನು ಈಗ ವೇಟ್ ಲಾಸ್ ಜರ್ನಿಯಲ್ಲಿದ್ದೆ. ಆದರೆ ನನಗೆ ಜೀವ ಕಳೆದುಕೊಂಡ ಈ ನಟಿ ಬಗ್ಗೆ ಸಹಾನುಭೂತಿಯಿದೆ ಎಂದರು. ಇದನ್ನೂ ಓದಿ: ನಟಿ ಚೇತನಾ ರಾಜ್ ಸಾವು : ತೆಳ್ಳಗಾಗಿಸುವ ಚಿಕಿತ್ಸೆ ಪ್ರಾಣಕ್ಕೆ ಅಪಾಯ

    ಇಂಡಸ್ಟ್ರಿಯಲ್ಲಿ ಮಾನದಂಡ ನಿಗದಿಪಡಿಸಿರುವುದು ಪುರುಷರು. ಮಹಿಳೆಯರು ನೀವು ನೀವಾಗಿರಲು ಬೇರೆ ದಾರಿಯನ್ನು ಅರಿತಿರಬೇಕು. ಜಗತ್ತು ನೀವು ಹೇಗಿರಬೇಕು ಎಂದು ನಿರ್ಧರಿಸಲು ಬಿಡಬೇಡಿ ಎಂದು ತಿಳಿ ಹೇಳಿದರು. ಇದನ್ನೂ ಓದಿ: ಫ್ಯಾಟ್ ಸರ್ಜರಿಗೆ 1 ಲಕ್ಷ 60 ಸಾವಿರ ಕೊಟ್ಟಿದ್ದರಂತೆ ಚೇತನಾ ರಾಜ್ : ಕುಟುಂಬ ಆರೋಪ

    ಪುರುಷನಾದನು ಸಂಪೂರ್ಣವಾಗಿ ತಲೆಕೂದಲು ಕಳೆದುಕೊಂಡು ಟೋಪಿ ಹಾಕಿಕೊಳ್ಳಬಹುದು. ಮುಖದಲ್ಲಿನ ಒಂದೊಂದು ಗಲ್ಲವೂ 5 ಕೆಜಿ ಇರಬಹುದು. 65 ವರ್ಷವಾದರೂ ಆತ ಹೀರೋ ಆಗುತ್ತಾನೆ. ಆದರೆ ಇದೇ ಮಹಿಳೆಗೆ ಅನ್ವಯವಾಗಿ ಆಕೆ ತೂಕ ಹೆಚ್ಚಿಸಿಕೊಂಡರೆ ಆಂಟಿ, ಬುಡ್ಡಿ, ಅಜ್ಜಿ ಎಂದು ಕರೆಯಲಾಗುತ್ತದೆ ಎಂದು ರಮ್ಯಾ ಸಾಮಾಜಿಕ ಮಾಧ್ಯಮದಲ್ಲಿ ವಾಗ್ದಾಳಿ ನಡೆಸಿದ್ದಾರೆ.

    ಈ ಇಂಡಸ್ಟ್ರಿ ನಟಿಯರ ಪಾತ್ರದ ವಿಚಾರವಾಗಿ ಇನ್ನೂ ಸುಧಾರಣೆ ಆಗಬೇಕು. ಇಂಡಸ್ಟ್ರಿ ಬದಲಾಗಬೇಕು. ಈ ವಿಷಯದ ಕುರಿತು ಮಹಿಳೆ ಒಗ್ಗಟ್ಟಿನಿಂದ ಹೋರಾಡಬೇಕು ಎಂದು ರಮ್ಯಾ ಆಗ್ರಹಿಸಿದರು.

  • ನಟಿ ಚೇತನಾ ರಾಜ್ ಸಾವು : ತೆಳ್ಳಗಾಗಿಸುವ ಚಿಕಿತ್ಸೆ ಪ್ರಾಣಕ್ಕೆ ಅಪಾಯ

    ನಟಿ ಚೇತನಾ ರಾಜ್ ಸಾವು : ತೆಳ್ಳಗಾಗಿಸುವ ಚಿಕಿತ್ಸೆ ಪ್ರಾಣಕ್ಕೆ ಅಪಾಯ

    ತ್ತೀಚಿನ ದಿನಗಳಲ್ಲಿ ಬಹುತೇಕರು ಸೌಂದರ್ಯದ ಹಿಂದೆ ಬಿದ್ದು ನಾನಾ ರೀತಿಯ ಅಪಾಯಗಳನ್ನು ತಂದುಕೊಳ್ಳುತ್ತಿದ್ದಾರೆ. ಅದರಲ್ಲೂ ತೆಳ್ಳಗಾಗುವ ನಿಟ್ಟಿನಲ್ಲಿ ಸಾಕಷ್ಟು ಕಲಾವಿದೆಯರು ನಾನಾ ರೀತಿಯ ಮಾರ್ಗಗಳನ್ನು ಕಂಡುಕೊಂಡಿದ್ದಾರೆ. ವೈಜ್ಞಾನಿಕವಾಗಿ ಅವುಗಳು ಸರಿಯಾದ ಕ್ರಮವಲ್ಲ ಎಂದು ಗೊತ್ತಿದ್ದರೂ, ತಾವು ನೋಡುಗರ ಮುಂದೆ  ಸುಂದರವಾಗಿ ಕಾಣಬೇಕು ಎನ್ನುವ ದೃಷ್ಟಿಯಿಂದ ಶಾರ್ಟ್ ಕಟ್ ವಿಧಾನವನ್ನು ಅನುಸರಿಸುತ್ತಿದ್ದಾರೆ. ಹೀಗಾಗಿ ಜೀವಕ್ಕೆ ಅಪಾಯ ಆಗುವಂತ ಚಿಕಿತ್ಸೆಗೂ ಅನೇಕರು ಮುಂದಾಗುತ್ತಾರೆ. ಇಂತಹ ಮಾರ್ಗ ಅನುಸರಿಸಿದ ಕಿರುತೆರೆ ನಟಿ ಚೇತನಾ ರಾಜ್ ಪ್ರಾಣ ಬಿಟ್ಟಿದ್ದಾರೆ.

    ಯೋಗ, ವ್ಯಾಯಾಮ, ಆಹಾರ ಕ್ರಮಗಳ ಮೂಲಕ ತೂಕ ಇಳಿಸಿಕೊಳ್ಳಲು ತುಂಬಾ ಸಮಯ ಬೇಕಾಗುವುದರಿಂದ ಚಿಕಿತ್ಸೆ ಮೂಲಕ ತೂಕ ಇಳಿಸಿಕೊಳ್ಳಲು ಮುಂದಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಲಿಪೊಸಕ್ಷನ್ ಸೇರಿದಂತೆ ಅನೇಕ ಚಿಕಿತ್ಸೆ ವಿಧಾನಗಳ ಮೂಲಕ ವೇಟ್ ಲಾಸ್ ಮಾಡಿಸಿಕೊಳ್ಳುವವರ ಸಂಖ್ಯೆಯೂ ಹೆಚ್ಚಾಗಿದೆ ಎನ್ನುತ್ತಿದೆ ವೈದ್ಯ ಅಂಕಿ ಅಂಶ. ಇದನ್ನೂ ಓದಿ:  ಫ್ಯಾಟ್‌ ಸರ್ಜರಿ ಎಫೆಕ್ಟ್‌ – ಕಿರುತೆರೆ ನಟಿ ಚೇತನಾ ರಾಜ್‌ ಸಾವು

    ವ್ಯಾಯಾಮ ಮತ್ತು ಆಹಾರ ಕ್ರಮದಿಂದ ದೇಹದ ಬೊಜ್ಜನ್ನು ಕರಗಿಸಬಹುದಾಗಿದ್ದರೂ, ಅದು ಸುಲಭವಾಗಿ ಕರಗುವುದಿಲ್ಲ ಎಂಬ ಕಾರಣಕ್ಕಾಗಿ ಲಿಪೋಸಕ್ಷನ್ ರೀತಿಯ ಚಿಕಿತ್ಸೆಗಳು ಇಂದು ಜನಪ್ರಿಯವಾಗಿವೆ. ಇಂತಹ ಚಿಕಿತ್ಸೆ ಪಡೆಯುವ ಮುನ್ನ ಹಲವು ಮುನ್ನೆಚ್ಚರಿಕೆ ಕ್ರಮಗಳನ್ನು ತಗೆದುಕೊಳ್ಳಲೇಬೇಕು ಎನ್ನುತ್ತಾರೆ ವೈದ್ಯರು.

    ಲಿಪೊಸಕ್ಷನ್ ಚಿಕಿತ್ಸೆ ಪಡೆಯುತ್ತಿದ್ದಂತೆಯೇ ನಾವು ಅಂದುಕೊಂಡಷ್ಟು ತೂಕ ಇಳಿಯುತ್ತದೆ ಎನ್ನುವುದು ತಪ್ಪು. ವ್ಯಕ್ತಿಯಿಂದ ವ್ಯಕ್ತಿಗೆ ಕೊಬ್ಬು ಕಡಿಮೆ ಆಗುತ್ತದೆ ಎನ್ನುವುದನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು. ಯಾವ ವ್ಯಕ್ತಿಗೆ ಎಷ್ಟು ತೂಕ ಕಡಿಮೆ ಮಾಡಿಕೊಳ್ಳಬೇಕು ಎನ್ನುವುದನ್ನು ವೈದ್ಯರು ನಿರ್ಧರಿಸುತ್ತಾರೆ. ತೂಕ ಇಳಿಸಿಕೊಳ್ಳುವಾಗಿ ಇಂತಿಷ್ಟೇ ತೂಕ ಕಡಿಮೆ ಮಾಡಬೇಕು ಎಂದು ವೈದ್ಯರನ್ನು ಪೋರ್ಸ್ ಮಾಡಬೇಡಿ. ಇದನ್ನೂ ಓದಿ: ರಾಖಿ ಸಾವಂತ್ ಹೊಸ ಬಾಯ್‌ಫ್ರೆಂಡ್‌ ಮೈಸೂರಿನವನು : ಗೆಳೆಯ ಕೊಟ್ಟ ದುಬಾರಿ ಉಡುಗೊರೆ

    ಈ ರೀತಿಯ ಚಿಕಿತ್ಸೆಯಿಂದ ಮ್ಯಾಕ್ಸಿಮಮ್, ಐದಾರು ಕೇಜಿ ತೂಕ ಕಡಿಮೆ ಮಾಡಿಸಿಕೊಳ್ಳಬಹುದು. ಇದಕ್ಕಿಂತ ಜಾಸ್ತಿ ತೂಕ ಕಡಿಮೆ ಮಾಡಿಸಿಕೊಳ್ಳಲು ಮುಂದಾದರೆ, ಅಪಾಯ ಕಟ್ಟಿಟ್ಟ ಬುತ್ತಿ. ಈ ಸಮಯದಲ್ಲಿ ಸಾವೂ ಸಂಭವಿಸಬಹುದು ಎನ್ನುತ್ತಾರೆ ವೈದ್ಯರು. ಚಿಕಿತ್ಸೆ ಸಮಯದಲ್ಲಿ ಅಥವಾ ಚಿಕಿತ್ಸೆಯ ನಂತರವೂ ಆರೋಗ್ಯದಲ್ಲಿ ಏರುಪೇರಾಗಬಹುದು. ಹಾಗಾಗಿ ಯಶಸ್ಸಿ ಚಿಕಿತ್ಸೆ ನಂತರ ನಿರಂತರವಾಗಿ ವ್ಯಾಯಾಮ ಮತ್ತು ಆಹಾರದ ಕ್ರಮವನ್ನು ಪಾಲಿಸಲೇಬೇಕು. ಮತ್ತು ನುರಿತ ವೈದ್ಯರಿಂದಲೇ ಇಂತಹ ಚಿಕಿತ್ಸೆಯನ್ನು ಪಡೆಯಬೇಕು.

    ಇಂತಹ ಚಿಕಿತ್ಸೆಗೆ ಒಳಗಾಗುವ ಮುನ್ನ ಮಾನಸಿಕವಾಗಿ ವ್ಯಕ್ತಿಯು ಸದೃಢವಾಗಿರಬೇಕು ಮತ್ತು ಚಿಕಿತ್ಸೆಯ ಮುನ್ನ ವೈದ್ಯರು ಹೇಳಿದ ಸಲಹೆಗಳನ್ನು ಚಾಚೂ ತಪ್ಪದೇ ಪಾಲಿಸಿರಬೇಕು. ಚಿಕಿತ್ಸೆಗೆ ಭಾಗಿಯಾಗುವಾಗ ಒಬ್ಬರೇ ಹೋಗಬೇಡಿ, ನಿಮ್ಮ ಕುಟುಂಬದವರಿಗೂ ಮಾಹಿತಿ ತಿಳಿಸಿ. ಮತ್ತು ಮತ್ತೊಬ್ಬ ವೈದ್ಯರ ಸಲಹೆಯನ್ನೂ ಪಡೆಯಬೇಕು.

  • ಆ್ಯಸಿಡ್‌ ದಾಳಿಗೆ ಒಳಗಾದ ಯುವತಿ ಚಿಕಿತ್ಸೆಗೆ 1 ಲಕ್ಷ ರೂ. ಚೆಕ್ ಕೊಟ್ಟ BBMP

    ಆ್ಯಸಿಡ್‌ ದಾಳಿಗೆ ಒಳಗಾದ ಯುವತಿ ಚಿಕಿತ್ಸೆಗೆ 1 ಲಕ್ಷ ರೂ. ಚೆಕ್ ಕೊಟ್ಟ BBMP

    ಬೆಂಗಳೂರು: ಕಾಮಾಕ್ಷಿಪಾಳ್ಯ ಠಾಣೆ ವ್ಯಾಪ್ತಿಯಲ್ಲಿ ಯುವತಿ ಕೆಲಸಕ್ಕೆ ಹೋಗಿದ್ದ ಸಂದರ್ಭದಲ್ಲಿ ಕಿಡಿಗೇಡಿ ಯುವಕ ಆ್ಯಸಿಡ್‌ ದಾಳಿ ಮಾಡಿದ್ದಾನೆ. ಈ ಹಿನ್ನೆಲೆ ಆ್ಯಸಿಡ್‌ ದಾಳಿಗೆ ಒಳಗಾದ ಸಂತ್ರಸ್ತೆ ಯುವತಿಯ ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಸಂತ್ರಸ್ತೆ ಯುವತಿಯ ವೈದ್ಯಕೀಯ ವೆಚ್ಚಕ್ಕೆ ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘದ ವತಿಯಿಂದ 1 ಲಕ್ಷ ರೂ. ಸಹಾಯಹಸ್ತದ ಚೆಕ್ ಅನ್ನು ವಿಶೇಷ ಆಯುಕ್ತರಾದ ರಂಗಪ್ಪ ಮತ್ತು ಬಿಬಿಎಂಪಿ ನೌಕರರ ಭವನದ ಅಧ್ಯಕ್ಷರಾದ ಅಮೃತ್ ರಾಜ್ ಕುಟುಂಬಸ್ಥರಿಗೆ ಕೊಟ್ಟರು. ಈ ವೇಳೆ ಆಡಳಿತಾಧಿಕಾರಿಗಳ ಆಪ್ತ ಕಾರ್ಯದರ್ಶಿ ನಾರಾಯಣ್‍ಸ್ವಾಮಿ, ಕಂದಾಯ ಅಧಿಕಾರಿ ಉಮಾ ಹಾಗೂ ಸಂಘದ ಪದಾಧಿಕಾರಿಗಳಾದ ಎಸ್.ಜಿ.ಸುರೇಶ್, ಸಾಯಿಶಂಕರ್, ಕೆ.ಜಿ.ರವಿ, ಕೆ.ಮಂಜೇಗೌಡರು, ನರಸಿಂಹ ಅವರು ಪಾಲ್ಗೊಂಡಿದ್ದರು. ಇದನ್ನೂ ಓದಿ: ಅವನನ್ನ ಪ್ಲೀಸ್ ಬಿಡಬೇಡಿ, ಅವನಿಗೆ ಶಿಕ್ಷೆಯಾಗಲೇ ಬೇಕು: ಪೊಲೀಸರನ್ನು ಬೇಡಿಕೊಂಡ ಆಸಿಡ್ ಸಂತ್ರಸ್ತೆ

    ವಿಶೇಷ ಆಯುಕ್ತರಾದ ರಂಗಪ್ಪ ಅವರು ಈ ವೇಳೆ ಮಾತನಾಡಿದ್ದು, ಜನರ ಮೂಲಭೂತ ಸೌಲಭ್ಯ ಒದಗಿಸುವ ಜನಸ್ನೇಹಿ ಸಂಸ್ಥೆ ಬಿಬಿಎಂಪಿಯಾಗಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘವು ನೌಕರರ ಹಿತಾರಕ್ಷಣೆ ಜೊತೆಯಲ್ಲಿ ಜನರ ಸಂಕಷ್ಟಗಳಿಗೆ ನೆರವು ನೀಡುವ ಸಾಮಾಜಿಕ ಸೇವಾ ಸಂಘಟನೆಯಾಗಿ ರೂಪುಗೊಂಡಿದೆ. ಆ್ಯಸಿಡ್‌ ದಾಳಿಗೆ ಒಳಗಾದ ಯುವತಿಯ ವೈದ್ಯಕೀಯ ಚಿಕಿತ್ಸೆಗೆ 1 ಲಕ್ಷ ರೂ. ನೀಡಲಾಗಿದೆ. ಸಂತ್ರತ್ತೆ ಯುವತಿ ಬೇಗನೆ ಗುಣಮುಖರಾಗಲಿ ಎಂಬ ಪ್ರಾರ್ಥಿಸುತ್ತೇನೆ ಎಂದು ಹೇಳಿದರು.

    ಇದೇ ಸಂದರ್ಭದಲ್ಲಿ ಅಧ್ಯಕ್ಷರಾದ ಅಮೃತ್ ರಾಜ್ ಅವರು ಮಾತನಾಡಿದ್ದು, ಬೆಂಗಳೂರು ನಗರ ನಾಗರಿಕರ ದಿನನಿತ್ಯ ಬಿಬಿಎಂಪಿ ಜೊತೆಯಲ್ಲಿ ಒಡನಾಟವಿರುತ್ತದೆ. ನಮ್ಮ ಸಂಘವು ಜನರ ನೋವು, ಸಂಕಷ್ಟಗಳಿಗೆ ಸದಾ ತನ್ನ ಸಹಾಯ ಹಸ್ತ ನೀಡುತ್ತಾ ಬಂದಿದೆ. ಕೊರೊನಾ ಲಾಕ್‍ಡೌನ್ ಸಂದರ್ಭದಲ್ಲಿ ದಿನಸಿ ಕಿಟ್ ಮತ್ತು ಮಾಸ್ಕ್, ಸ್ಯಾನಿಟೈಸರ್ ವಿತರಣೆ. ಕೊಡಗು, ಉತ್ತರಕರ್ನಾಟಕ ಪ್ರವಾಹದಿಂದ ನೊಂದ ಸಂಕಷ್ಟದಲ್ಲಿರುವ ಜನರಿಗೆ ಸಹಾಯಹಸ್ತ ನೀಡಿದೆ ಎಂದು ತಿಳಿಸಿದರು. ಇದನ್ನೂ ಓದಿ:  ನಿಮಗೆ ಹಿಂದಿ ಬರದಿದ್ದರೆ ಈ ದೇಶ ಬಿಟ್ಟು ಹೋಗಿ: ಸಂಜಯ್ ನಿಶಾದ್ 

    ಧರ್ಮಸ್ಥಳದಲ್ಲಿ ನೀರಿನ ಅಭಾವ ಇದ್ದಾಗ 1 ಲಕ್ಷ ಲೀಟರ್ ನೀರು ನೀಡಲಾಯಿತು. ಬೆಂಗಳೂರಿನಲ್ಲಿ ಅಪಘಾತದಿಂದ ಮೃತ್ತಪಟ್ಟ ವ್ಯಕ್ತಿ ಕುಟುಂಬದವರಿಗೆ 1 ಲಕ್ಷ ರೂ. ಮತ್ತು ಹಲವಾರು ಕುಟುಂಬಗಳಿಗೆ ಆಸ್ಪತ್ರೆ ವೆಚ್ಚ, ಔಷಧಿ ಸಂಘದ ವತಿಯಿಂದ ಭರಿಸಲಾಗಿದೆ. ಆ್ಯಸಿಡ್‌ ದಾಳಿಗೆ ಒಳಗಾದ ಸಂತ್ರತ್ತೆ ಯುವತಿಗೆ ಹೆಚ್ಚಿನ ವೈದ್ಯಕೀಯ ಚಿಕಿತ್ಸೆ ಮತ್ತು ಕುಟುಂಬದ ನಿರ್ವಹಣೆ 1 ಲಕ್ಷ ರೂಪಾಯಿಯನ್ನು ಸಂಘದ ವತಿಯಿಂದ ಸಹಾಯಹಸ್ತ ಮಾಡಲಾಗಿದೆ. ಇನ್ನು ಹೆಚ್ಚಿನ ಸಹಕಾರ ಬೇಕಾದಲ್ಲಿ ನೀಡುತ್ತೇವೆ ಎಂದು ಭರವಸೆ ಕೊಟ್ಟರು.

  • ಡೋಂಗಿ ಬಾಬಾನ ಮೋಹದ ಬಲೆಗೆ ಬಿದ್ದ ವಿವಾಹಿತೆ – ಯಜಮಾನ ಬಲಿ

    ಡೋಂಗಿ ಬಾಬಾನ ಮೋಹದ ಬಲೆಗೆ ಬಿದ್ದ ವಿವಾಹಿತೆ – ಯಜಮಾನ ಬಲಿ

    ಚಾಮರಾಜನಗರ: ಆ ದಂಪತಿ ಚಿಕಿತ್ಸೆಗೆಂದು ಒಬ್ಬ ಬಾಬಾನ ಬಳಿಗೆ ತೆರಳಿದ್ದರು. ಚಿಕಿತ್ಸೆ ನೀಡಿ ಗುಣಪಡಿಸಿದ ಬಾಬಾನ ವಕ್ರದೃಷ್ಟಿ ಸುಂದರ ಸಂಸಾರದ ಮೇಲೆ ಬಿದ್ದಿತ್ತು. ಇದರಿಂದ ಸುಂದರವಾಗಿದ್ದ ಆ ಸಂಸಾರದಲ್ಲಿ ಬಿರುಗಾಳಿ ಬೀಸಿ ಮನೆಯ ಯಜಮಾನನೇ ಬಲಿಯಾಗಿದ್ದಾನೆ.

    ಮಹಮ್ಮದ್ ಅಫ್ಘನ್ ಮತ್ತು ತನ್ಜೀಯಾ ಕೌಸರ್ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆಯ ಅಮೀರ್‌ಜಾನ್ ರೋಡ್‌ನ ನಿವಾಸಿಗಳು. ತನ್ಜೀಯಾ ಕೌಸರ್‌ಗೆ ಕಳೆದ ಕೆಲವು ತಿಂಗಳ ಹಿಂದೆ ಥೈರಾಯ್ಡ್ ಸಮಸ್ಯೆ ಕಾಣಿಸಿಕೊಂಡಿತ್ತು. ಈ ವೇಳೆ ಮೈಸೂರಿನ ರಾಜೀವನಗರದ ಬಾಬಾ ಖುರ್ರಂ ಪಾಷಾನ ಬಳಿಗೆ ತೆರಳಿದ್ದರು. ಇದನ್ನೂ ಓದಿ: 6 ವರ್ಷದ ಮಗುವಿನೊಂದಿಗೆ ವೇಳಾಪಟ್ಟಿ ಒಪ್ಪಂದ ಮಾಡಿಕೊಂಡ ಅಪ್ಪ

    ನಾನು ದೇವರ ಪ್ರತಿರೂಪ ಎಂದು ಹೇಳಿಕೊಂಡ ಬಾಬಾ ಥೈರಾಯ್ಡ್ ಸಮಸ್ಯೆ ಬಗೆಹರಿಸಿದ್ದ. ಬಳಿಕ ತನ್ಜೀಯಾ ಜೊತೆ ಆತನ ಒಡನಾಟ ಜಾಸ್ತಿಯಾಗಿತ್ತು. ಇದರಿಂದ ದಂಪತಿಯ ಸಂಸಾರದಲ್ಲಿ ಬಿರುಗಾಳಿ ಬೀಸಿತ್ತು. ಸಾಕಷ್ಟು ಬಾರಿ ಜಗಳವೂ ನಡೆದಿತ್ತು. ಇದೆಲ್ಲದರಿಂದ ಮನನೊಂದಿದ್ದ ಅಫ್ಘನ್ ಗುರುವಾರ ರಾತ್ರಿ ತನ್ನ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಆತ ಬಾಬಾನಲ್ಲ. ಡೋಂಗಿ ಬಾಬಾನಿಂದ ಸಂಸಾರ ಹಾಳಾಗಿದೆ. ಬಾಬಾ ಖುರ್ರಂ ಪಾಷಾ ತನ್ಜೀಯಾಗೆ ಸಂಪೂರ್ಣ ಮೈಂಡ್ ವಾಷ್ ಮಾಡಿದ್ದ ಎಂಬುದು ಅಫ್ಗನ್ ಸಂಬಂಧಿಕರ ಆರೋಪ. ಬಾಬಾನ ಮಾತು ಕೇಳಿಕೊಂಡು ತನ್ಜೀಯಾ ತನ್ನ ತವರು ಮನೆ ಮೈಸೂರಿಗೆ ಹೋಗಿ ಸೇರಿಕೊಂಡಿದ್ದಳು. ಅಫ್ಘನ್ ಕರೆದರೂ ಆಕೆ ಗಂಡನ ಮನೆಗೆ ಬಂದಿರಲಿಲ್ಲ. ಇದನ್ನೂ ಓದಿ: ಮದುವೆ ಗಂಡು ಬರೋದು ತಡವಾಗಿದ್ದಕ್ಕೆ ಅದೇ ಮಂಟಪದಲ್ಲಿ ಇನ್ನೊಬ್ಬನನ್ನು ವರಿಸಿದ ವಧು

    ಇದೆಲ್ಲದರಿಂದ ಸಾಕಷ್ಟು ಮನನೊಂದಿದ್ದ ಅಫ್ಘನ್ ಡೆತ್‌ನೋಟ್ ಬರೆದಿಟ್ಟು, ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಡೆತ್‌ನೋಟ್‌ನಲ್ಲಿ ನನ್ನ ಸಾವಿಗೆ ಖುರ್ರಂ ಪಾಷಾ, ಅಬ್ದುಲ್ ರೆಹಮಾನ್, ಮಹಮದ್ ಅಜೀಂ, ಆಯೂಬ್ ಷರೀಪ್ ಕಾರಣ ಎಂದು ಬರೆದಿದ್ದಾರೆ. ಪ್ರಕರಣ ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.