Tag: ಚಿಕಾಗೋ

  • ಒಂದೇ ಕುಟುಂಬದ ದಂಪತಿ, ಇಬ್ಬರು ಮಕ್ಕಳು, 3 ನಾಯಿಗಳಿಗೆ ಗುಂಡಿಕ್ಕಿ ಹತ್ಯೆ

    ಒಂದೇ ಕುಟುಂಬದ ದಂಪತಿ, ಇಬ್ಬರು ಮಕ್ಕಳು, 3 ನಾಯಿಗಳಿಗೆ ಗುಂಡಿಕ್ಕಿ ಹತ್ಯೆ

    ವಾಷಿಂಗ್ಟನ್‌: ಚಿಕಾಗೋ (Chicago) ಉಪನಗರದ ಮನೆಯೊಂದರಲ್ಲಿ ದಂಪತಿ, ಅವರ ಇಬ್ಬರು ಪುಟ್ಟ ಮಕ್ಕಳು ಹಾಗೂ ಮನೆಯ ಮೂರು ಶ್ವಾನಗಳನ್ನು ಗುಂಡಿಕ್ಕಿ ಕೊಂದಿರುವ ಘಟನೆ ನಡೆದಿದೆ.

    ಮೃತರು ಆಲ್ಬರ್ಟೊ ರೊಲೊನ್, ಜೊರೈಡಾ ಬಾರ್ಟೊಲೊಮಿ ದಂಪತಿ ಮತ್ತು ಅವರ ಮಕ್ಕಳಾದ ಅಡ್ರಿಯಲ್ (10), ಡಿಯಾಗೋ (7), ಅವರ ಮೂರು ನಾಯಿಗಳನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ನ್ಯೂಯಾರ್ಕ್‌ ಟೈಮ್ಸ್‌ ವರದಿ ಮಾಡಿದೆ. ಈ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

    ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬುದು ಇನ್ನೂ ತಿಳಿದುಬಂದಿಲ್ಲ. ಪ್ರಕರಣ ಸಂಬಂಧ ಈವರೆಗೂ ಯಾರ ಬಂಧನವೂ ಆಗಿಲ್ಲ. ಎರಡೂ ಕೋನಗಳನ್ನೂ ನಾವು ತನಿಖೆ ನಡೆಸುತ್ತಿದ್ದೇವೆ ಎಂದು ರೋಮಿವಿಲ್ಲೆ ಪೊಲೀಸ್ ಉಪ ಮುಖ್ಯಸ್ಥ ಕ್ರಿಸ್ ಬರ್ನ್ ತಿಳಿಸಿದ್ದಾರೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಸಾಕ್ಷ್ಯಗಳು ಲಭ್ಯವಾಗಿವೆ. ಅವುಗಳನ್ನು ಆಧರಿಸಿ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ. ಈ ಪ್ರಕರಣದಲ್ಲಿ ಸಂಪೂರ್ಣ ತನಿಖೆಯ ಅಗತ್ಯವಿದೆ ಎಂದು ಮಾಹಿತಿ ನೀಡಿದ್ದಾರೆ.

    ಘಟನೆಯಲ್ಲಿ ಮೃತಪಟ್ಟಿರುವ ಮಕ್ಕಳು ರಾಬರ್ಟ್ ಸಿ. ಹಿಲ್ ಎಲಿಮೆಂಟರಿ, ವ್ಯಾಲಿ ವ್ಯೂ ಸ್ಕೂಲ್ ಶಾಲೆಯಲ್ಲಿ ಓದುತ್ತಿದ್ದರು ಎಂಬುದು ತಿಳಿದು ಬಂದಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಚಿಕಾಗೋ ಪರೇಡ್‌ ವೇಳೆ ಶೂಟೌಟ್‌, ದಿಕ್ಕಾಪಾಲಾಗಿ ಓಡಿದ ಜನ –  6 ಬಲಿ, 24 ಮಂದಿಗೆ ಗಾಯ

    ಚಿಕಾಗೋ ಪರೇಡ್‌ ವೇಳೆ ಶೂಟೌಟ್‌, ದಿಕ್ಕಾಪಾಲಾಗಿ ಓಡಿದ ಜನ – 6 ಬಲಿ, 24 ಮಂದಿಗೆ ಗಾಯ

    ವಾಷಿಂಗ್ಟನ್: ಅಮೆರಿಕದ ಚಿಕಾಗೊ ಉಪನಗರದಲ್ಲಿ ಸೋಮವಾರ ನಡೆದ ಸ್ವಾತಂತ್ರ್ಯ ದಿನಾಚರಣೆಯ ಪರೇಡ್ ವೇಳೆ ದುಷ್ಕರ್ಮಿಯೊಬ್ಬ ಏಕಾಏಕಿ ಗುಂಡಿನ ದಾಳಿ ನಡೆಸಿದ್ದು, ಆರು ಜನರು ಸಾವನ್ನಪ್ಪಿದ್ದಾರೆ ಮತ್ತು 24 ಮಂದಿ ಗಾಯಗೊಂಡಿದ್ದಾರೆ.

    ಸಮೀಪದ ಚಿಲ್ಲರೆ ಅಂಗಡಿ ಮೇಲೆ ಮೇಲೆ ನಿಂತಿದ್ದ ವ್ಯಕ್ತಿ ಪರೇಡ್ ಪ್ರಾರಂಭವಾಗುತ್ತಿದ್ದಂತೆಯೇ ಗುಂಡು ಹಾರಿಸಲು ಆರಂಭಿಸಿದನು. ಆರೋಪಿಯನ್ನು ರಾಬರ್ಟ್ ಕ್ರಿಮೊ (22) ಎಂದು ಗುರುತಿಸಲಾಗಿದ್ದು, ಇದೀಗ ಪೊಲೀಸರು ಆತನನ್ನು ಬಂಧಿಸಲಾಗಿದೆ ಎಂದು ಹೈಲ್ಯಾಂಡ್ ಪಾರ್ಕ್ ಪೊಲೀಸ್ ಮುಖ್ಯಸ್ಥ ಲೌ ಜೋಗ್ಮೆನ್ ಹೇಳಿದ್ದಾರೆ. ಇದನ್ನೂ ಓದಿ: ಆದಾಯ ಮೀರಿ ಆಸ್ತಿ ಗಳಿಕೆ – ಶಾಸಕ ಜಮೀರ್‌ ಮನೆ ಮೇಲೆ ಎಸಿಬಿ ದಾಳಿ

    ಚಿಕಾಗೊ ನಗರದ ಹೈಲೆಂಡ್ ಪಾರ್ಕ್ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಜನರು ಫುಟ್‍ಪಾತ್ ಮೇಲೆ ಕುಳಿತುಕೊಂಡು ಪರೇಡ್ ನೋಡುತ್ತಿದ್ದ ವೇಳೆ ಗುಂಡಿನ ಶಬ್ಧ ಕೇಳಿಸಿದ್ದು, ನೆಲದ ಮೇಲೆ ಮಲಗಿ, ಸುತ್ತಮುತ್ತ ಕೂಗಾಡುತ್ತ ಜನರು ಎತ್ತೆಂದರತ್ತ ಓಡಿ ಹೋಗುತ್ತಿರುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ಇದನ್ನೂ ಓದಿ: ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಿಗೆ ಇಂದು ರಜೆ ಘೋಷಣೆ

    ಇದೀಗ ಗಾಯಗೊಂಡ 24 ಮಂದಿಯನ್ನು ಹೈಲ್ಯಾಂಡ್ ಪಾರ್ಕ್ ಆಸ್ಪತ್ರೆಗೆ ದಾಖಲಿಸಲಾಗಿದೆ ಮತ್ತು ಆರು ಮಂದಿ ಸಾವನ್ನಪ್ಪಿದ್ದಾರೆ ಎಂದು ನಗರದ ಪೊಲೀಸ್ ಕಮಾಂಡರ್ ಕ್ರಿಸ್ ಓ’ನೀಲ್ ತಿಳಿಸಿದ್ದಾರೆ. ಈ ಘಟನೆಯಿಂದಾಗಿ ಜುಲೈ 4ರಂದು ಆಯೋಜಿಸಲಾಗಿದ್ದ ವಿಶೇಷ ಉತ್ಸವಗಳನ್ನು ರದ್ದುಗೊಳಿಸಲಾಗಿದೆ. ಅಲ್ಲದೇ ಜನರು ಅನಗತ್ಯವಾಗಿ ಈ ಸ್ಥಳಕ್ಕೆ ಭೇಟಿ ನೀಡಬಾರದು ಎಂದು ಪೊಲೀಸರು ಮನವಿ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • 20 ವರ್ಷಗಳ ಸುಂದರ ನೆನಪಿಗಾಗಿ 1,45,428 ರೂ. ಟಿಪ್ಸ್ ಕೊಟ್ಟ ದಂಪತಿ!

    20 ವರ್ಷಗಳ ಸುಂದರ ನೆನಪಿಗಾಗಿ 1,45,428 ರೂ. ಟಿಪ್ಸ್ ಕೊಟ್ಟ ದಂಪತಿ!

    – ಸೋಶಿಯಲ್ ಮೀಡಿಯಾದಲ್ಲಿ ಬಿಲ್ ವೈರಲ್

    ಚಿಕಾಗೋ: ಹಳೆಯ ನೆನಪನ್ನು ಮೆಲುಕು ಹಾಕಿದ ದಂಪತಿ ಈ ದಿನದ ನೆನಪು ಉಳಿಯಬೇಕು ಎಂದು ಹೋಟೆಲ್ ಸಿಬ್ಬಂದಿಗೆ 1,45,428 ರೂಪಾಯಿ ಟಿಪ್ಸ್ ನೀಡುವ ಮೂಲಕವಾಗಿ ಧನ್ಯವಾದ ಹೇಳಿದ್ದಾರೆ.

    ದಂಪತಿ ಟಿಪ್ಸ್ ನೀಡಿರುವ ರಶೀದಿಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ದಂಪತಿ ಟಿಪ್ಸ್ ನೀಡಿರುವ ಹಿಂದೆ ಒಂದು ಪ್ರೇಮ ಕಥೆ ಇದೆ ಎಂಬುದು ತಿಳಿದು ಬಂದಿದೆ.

    20 ವರ್ಷಗಳ ಹಿಂದೆ ಇದೇ ರೆಸ್ಟೋರೆಂಟ್‍ನಲ್ಲಿ ಇವರಿಬ್ಬರು ಭೇಟಿಯಾಗಿದ್ದರು. ಬಳಿಕ ಇವರಿಬ್ಬರು ದಾಂಪತ್ಯಕ್ಕೆ ಜೀವನಕ್ಕೆ ಕಾಲಿಟ್ಟಿದ್ದರು. ಹೀಗೆ ತಮ್ಮ ಹೊಸ ಜೀವನ ಶುರುವಾಗಲು 20 ವರ್ಷಗಳ ಹಿಂದೆ ಕಾರಣವಾಗಿದ್ದ ಇದೇ ರೆಸ್ಟೋರೆಂಟ್‍ಗೆ ಬಂದ ದಂಪತಿ, ಸಿಬ್ಬಂದಿಗೆ ಈ ಕೊಡುಗೆ ಕೊಟ್ಟಿದ್ದಾರೆ. ತಮ್ಮಿಬ್ಬರ ಭೇಟಿಯ 20 ವರ್ಷಗಳ ಖುಷಿಯನ್ನು ಸ್ಮರಣೀಯವನ್ನಾಗಿಸಲು ಈ ಟಿಪ್ಸ್ ಕೊಟ್ಟಿದ್ದಾರೆ. 20 ವರ್ಷಗಳ ಹಿಂದೆ ಫೆಬ್ರವರಿ 12ರಂದು ಇವರು ಇದೇ ರೆಸ್ಟೋರೆಂಟಿಗೆ ಜೊತೆಯಾಗಿ ಬಂದಿದ್ದರು.

    WOW! WOW! WOW! WOW!????????????

    This guest had his first date with his now wife 20 years ago at Club Lucky on February 12. He…

    Posted by Club Lucky on Sunday, 14 February 2021

     

    ಚಿಕಾಗೋ ಮೂಲದ ಕ್ಲಬ್ ಲಕ್ಕಿ ಎಂಬ ರೆಸ್ಟೋರೆಂಟ್‍ಗೆ ಬಂದ ದಂಪತಿ ಇಲ್ಲಿನ ಸಿಬ್ಬಂದಿಗಾಗಿ 2000 ಯುಎಸ್ ಡಾಲರ್ ಎಂದರೆ ಭಾರತದ 1,45,428 ರೂಪಾಯಿಯನ್ನು ನೀಡಿದ್ದಾರೆ. ಈ ಬಿಲ್ ಅನ್ನು ರೆಸ್ಟೋರೆಂಟ್ ತನ್ನ ಅಧಿಕೃತ ಫೇಸ್‍ಬುಕ್ ಖಾತೆಯಲ್ಲಿ ಹಂಚಿಕೊಂಡಿದೆ. 20 ವರ್ಷಗಳ ಸುಂದರವಾದ ನೆನಪಿಗೆ ಹಾಗೂ ಉತ್ತಮ ಆಹಾರ ಮತ್ತು ಸಾಟಿ ಇಲ್ಲದ ಸೇವೆಗೆ ಧನ್ಯವಾದ ಎಂದು ಬಿಲ್‍ನಲ್ಲಿ ಬರೆದುಕೊಂಡಿದ್ದಾರೆ. ಈ ಬಿಲ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

  • ಅಮೆರಿಕದಲ್ಲಿ ಲೈಂಗಿಕ ದೌರ್ಜನ್ಯವೆಸಗಿ ಕತ್ತು ಹಿಸುಕಿ ಆಂಧ್ರ ವಿದ್ಯಾರ್ಥಿನಿಯ ಕೊಲೆ

    ಅಮೆರಿಕದಲ್ಲಿ ಲೈಂಗಿಕ ದೌರ್ಜನ್ಯವೆಸಗಿ ಕತ್ತು ಹಿಸುಕಿ ಆಂಧ್ರ ವಿದ್ಯಾರ್ಥಿನಿಯ ಕೊಲೆ

    – ಕಾರಿನಲ್ಲಿ ವಿದ್ಯಾರ್ಥಿನಿಯ ಶವ ಪತ್ತೆ

    ವಾಷಿಂಗ್ಟನ್: ಚಿಕಾಗೋದಲ್ಲಿ 19 ವರ್ಷದ ಭಾರತೀಯ-ಅಮೆರಿಕನ್ ವಿದ್ಯಾರ್ಥಿನಿಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಕತ್ತು ಹಿಸುಕಿ ಕೊಲೆ ಮಾಡಲಾಗಿದೆ. ಈ ಕ್ರೂರ ಹತ್ಯೆಯು ಅಮೆರಿಕದಲ್ಲಿಯ ಅನಿವಾಸಿ ಭಾರತೀಯ ಸಮುದಾಯವನ್ನು ಬೆಚ್ಚಿಬೀಳಿಸಿದೆ.

    ಹೈದರಾಬಾದ್ ಮೂಲದ ರೂತ್ ಜಾರ್ಜ್ ಕೊಲೆಯಾದ ವಿದ್ಯಾರ್ಥಿನಿ. ರೂತ್ ಜಾರ್ಜ್ ಚಿಕಾಗೋದ ಇಲಿನಾಯ್ಸ್ ವಿಶ್ವವಿದ್ಯಾಲಯದಲ್ಲಿ ವೈದ್ಯಕೀಯ ವಿದ್ಯಾರ್ಥಿನಿ ಆಗಿದ್ದಳು. ಕಾಲೇಜ್ ಕ್ಯಾಂಪಸ್‍ನ ಗ್ಯಾರೇಜ್‍ನಲ್ಲಿ ನಿಲ್ಲಿಸಿದ್ದ ಕಾರಿನಲ್ಲಿ ಶನಿವಾರ ವಿದ್ಯಾರ್ಥಿನಿಯ ಶವ ಪತ್ತೆಯಾಗಿದೆ. ಈ ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

    ಚಿಕಾಗೊ ಮೆಟ್ರೋ ನಿಲ್ದಾಣದಲ್ಲಿ 26 ವರ್ಷದ ಆರೋಪಿ ಡೊನಾಲ್ಡ್ ಥರ್ಮನ್‍ನನ್ನು ಭಾನುವಾರ ಪೊಲೀಸರು ಬಂಧಿಸಿದ್ದಾರೆ. ಆದರೆ ಆರೋಪಿಯು ವಿಶ್ವವಿದ್ಯಾಲಯದ ವಿದ್ಯಾರ್ಥಿಯಲ್ಲ ಎಂದು ತಿಳಿದು ಬಂದಿದೆ. ಬಂಧಿತ ಡೊನಾಲ್ಡ್ ಥರ್ಮನ್ ವಿರುದ್ಧ ಲೈಂಗಿಕ ದೌರ್ಜನ್ಯ ಹಾಗೂ ಕೊಲೆ ಕೃತ್ಯದ ಅಡಿ ಪ್ರಕರಣ ದಾಖಲಾಗಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

    ಶುಕ್ರವಾರ ಸಂಜೆಯಿಂದ ಮಗಳು ಕಾಣಿಸುತ್ತಿಲ್ಲ ಎಂದು ಜಾರ್ಜ್ ಪೋಷಕರು, ವಿಶ್ವವಿದ್ಯಾಲಯದ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದ ಪೊಲೀಸರು ವಿದ್ಯಾರ್ಥಿನಿಯ ಮೊಬೈಲ್‍ಗೆ ಕರೆ ಮಾಡಿದ್ದರು. ಬಳಿಕ ಮೊಬೈಲ್ ಟ್ರ್ಯಾಕ್ ಮಾಡಿದಾಗ ಕಾಲೇಜ್ ಕ್ಯಾಂಪಸ್‍ನ ಗ್ಯಾರೇಜ್‍ನಲ್ಲಿ ಸಿಗ್ನಲ್ ತೋರಿಸಿತ್ತು. ಈ ಆಧಾರದ ಮೇಲೆ ಪರಿಶೀಲನೆ ನಡೆಸಿದಾಗ ಕಾರಿನ ಹಿಂಭಾಗದ ಸೀಟ್‍ನಲ್ಲಿ ವಿದ್ಯಾರ್ಥಿಯ ಮೃತದೇಹ ಪತ್ತೆಯಾಗಿತ್ತು. ಬಳಿಕ ಮೃತದೇಹವನ್ನು ಪೊಲೀಸರು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದರು.

    ಆರೋಪಿಯು ವಿದ್ಯಾರ್ಥಿನಿ ರೂತ್ ಜಾರ್ಜ್ ಹಿಂದೆ ನಡೆದುಕೊಂಡು ಹೋಗುತ್ತಿದ್ದ ದೃಶ್ಯವು ವಿಶ್ವವಿದ್ಯಾಲಯದ ಕ್ಯಾಮೆರಗಳಲ್ಲಿ ಸೆರೆಯಾಗಿತ್ತು. ಈ ವಿಡಿಯೋ ತುಣುಕನ್ನು ಪಡೆದುಕೊಂಡ ಪೊಲೀಸರು ಆರೋಪಿಗೆ ಬಲೆ ಬಿಸಿದ್ದರು. ಅಷ್ಟೇ ಅಲ್ಲದೆ ವಿದ್ಯಾರ್ಥಿನಿಯನ್ನು ಕತ್ತು ಹಿಸುಕಿ ಕೊಲೆಗೈಯಲಾಗಿದೆ ಎಂದು ಮರಣೋತ್ತರ ಪರೀಕ್ಷೆಯಲ್ಲಿ ತಿಳಿದು ಬಂದಿತ್ತು.

    ಪೊಲೀಸರು ಆರೋಪಿ ಥರ್ಮನ್‍ನನ್ನು ಮೆಟ್ರೋ ರೈಲು ನಿಲ್ದಾಣದ ಬಳಿ ಭಾನುವಾರ ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದರು. ಈ ವೇಳೆ ಆರೋಪಿ ತಪ್ಪನ್ನು ಒಪ್ಪಿಕೊಂಡಿದ್ದಾನೆ ಎಂದು ವರದಿಯಾಗಿದೆ.

  • 21ನೇ ಶತಮಾನ ಭಾರತ, ಚೀನಾಗೆ ಸೇರಿದ್ದು: ಪ್ರಧಾನಿ ಮೋದಿ

    21ನೇ ಶತಮಾನ ಭಾರತ, ಚೀನಾಗೆ ಸೇರಿದ್ದು: ಪ್ರಧಾನಿ ಮೋದಿ

    ನವದೆಹಲಿ: 21ನೇ ಶತಮಾನ ಏಷ್ಯಾಗೆ ಸೇರಿದ್ದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

    ಸ್ವಾಮಿ ವಿವೇಕಾನಂದ ಅವರ ಚಿಕಾಗೋ ಭಾಷಣಕ್ಕೆ 125 ವರ್ಷ ಹಾಗೂ ದೀನ್ ದಯಾಳ್ ಉಪಾಧ್ಯಾಯ ಅವರ 100 ವರ್ಷದ ಆಚರಣೆಯ ಹಿನ್ನೆಲೆಯಲ್ಲಿ ದೆಹಲಿಯ ವಿಜ್ಞಾನ ಭವನದಲ್ಲಿ ಮೋದಿ ಭಾಷಣ ಮಾಡಿದರು.

    ಒಂದೇ ಏಷ್ಯಾ ಎಂದು ವಿವೇಕಾನಂದರು ಪ್ರಥಮ ಬಾರಿಗೆ ಹೇಳಿದ್ದರು. ಆದರೆ ಈಗ ಏಷ್ಯಾ ಎಷ್ಟು ಎತ್ತರಕ್ಕೆ ಬೆಳೆಯುತ್ತಿದೆ ಎನ್ನುವುದು ಪ್ರಪಂಚಕ್ಕೆ ತಿಳಿಯುತ್ತಿದೆ. ಅದು ಭಾರತವೇ ಆಗಿರಲಿ ಅಥವಾ ಚೀನಾವೇ ಆಗಿರಲಿ ಎಂದರು.

    9/11 ದಿನ ಇಂದು ಬಹಳ ಪ್ರಸಿದ್ಧವಾಗಿದೆ. ಆದರೆ ಹೆಚ್ಚು ಪ್ರಚಾರದಕ್ಕೆ ಬಂದಿದ್ದು 2001ರ 9/11 ಘಟನೆಯಿಂದ. ಆದರೆ 1983 9/11ರಂದು ಸ್ವಾಮಿ ವಿವೇಕಾನಂದರ ಮಾಡಿರುವ ಭಾಷಣವನ್ನು ನಾವು ಈಗಲೂ ನೆನಪಿನಲ್ಲಿಟ್ಟುಕೊಂಡಿದ್ದೇವೆ. ಅಮೆರಿಕನ್ನರು 1983ರ 9/11ನ್ನು ಮರೆತ ಕಾರಣ 2001ರ 9/11 ಘಟನೆ ನಡೆಯಿತು ಎಂದು ಹೇಳಿದರು.

    ಕಾಲೇಜುಗಳಲ್ಲಿ ರೋಸ್ ದಿನ ಆಚರಣೆಗೆ ಕೆಲವರು ವಿರೋಧ ವ್ಯಕ್ತಪಡಿಸುತ್ತಾರೆ. ಆದರೆ ನಾನು ವಿರೋಧಿಸುವುದಿಲ್ಲ. ಆದರೆ ರೋಸ್ ದಿನ ಬದಲು ಆ ರಾಜ್ಯದ ಸಂಪ್ರದಾಯದಂತೆ ಕೇರಳ ದಿನ, ಸಿಕ್ ದಿನ, ಪಂಜಾಬ್ ದಿನ ಅಂತ ಆಚರಿಸಿ ಎಂದು ಪ್ರಧಾನಿ ಸಲಹೆ ನೀಡಿದರು.

    ನಂತರ ಸ್ವಚ್ಛತೆ ಬಗ್ಗೆ ಮಾತನಾಡಿದ ಮೋದಿ, ಮೊದಲು ಶೌಚಾಲಯ ನಿರ್ಮಿಸಿ ನಂತರ ದೇವಾಲಯವನ್ನು ನಿರ್ಮಿಸಬೇಕು. ನಾನು ನನ್ನ ಆರೋಗ್ಯವನ್ನು ಸ್ವಚ್ಛತ ಕಾರ್ಮಿಕರಿಗೆ ಅರ್ಪಿಸುತ್ತೇನೆ ಹೊರತು ದುಬಾರಿ ಡಾಕ್ಟರ್ ಗಳಿಗೆ ಅಲ್ಲ ಎಂದರು.

    ಸೋಲು ಇಲ್ಲದೇ ಗೆಲುವಿಲ್ಲ. ಆದರೆ ನಾವು ಸೋಲಿನಿಂದ ಭಯಪಡಬಾರದು. ಸ್ವಾಮಿ ವಿವೇಕಾನಂದರ ಪ್ರಕಾರ ಜ್ಞಾನ ಮತ್ತು ಕೌಶಲ್ಯಗಳೆರಡಕ್ಕೂ ಸಮವಾಗಿ ಮಹತ್ವವಿದೆ. ಜನರು ಯಾವಾಗಲೂ ಮಹಿಳೆಯರೇ ಮತ್ತು ಮಹನಿಯರೇ ಎಂದು ಸಂಬೋಧಿಸಿ ಭಾಷಣ ಮಾಡುತ್ತಾರೆ. ಆದರೆ ವಿವೇಕಾನಂದರು ಸಹೋದರ, ಸಹೋದರಿ ಎಂದು ಹೇಳಿ ತಮ್ಮ ಭಾಷಣವನ್ನು ಆರಂಭಿಸಿದ್ದರು. ಮಹಿಳೆಯರನ್ನೂ ಗೌರವಿಸೋರಿಗೆ ನನ್ನ ವಂದನೆಗಳು ಎಂದು ಹೇಳಿದರು.

     

  • 10 ತಿಂಗಳ ಮಗುವಿನ ಬೆನ್ನಿಗೆ ಅಂಟಿಕೊಂಡಿದ್ದ ಅವಳಿ ಮಗುವಿನ ಅಂಗಾಂಗ ಬೇರ್ಪಡಿಸಿದ ವೈದ್ಯರು

    10 ತಿಂಗಳ ಮಗುವಿನ ಬೆನ್ನಿಗೆ ಅಂಟಿಕೊಂಡಿದ್ದ ಅವಳಿ ಮಗುವಿನ ಅಂಗಾಂಗ ಬೇರ್ಪಡಿಸಿದ ವೈದ್ಯರು

    ಚಿಕಾಗೋ: 10 ತಿಂಗಳ ಹೆಣ್ಣು ಮಗುವಿನ ಬೆನ್ನಿಗೆ ಅಂಟಿಕೊಂಡಿದ್ದ ಅವಳಿ ಮಗುವಿನ ಅಂಗಾಂಗಗಳನ್ನ ಬೇರ್ಪಡಿಸಿ ತೆಗೆಯುವಲ್ಲಿ ಚಿಕಾಗೋ ವೈದ್ಯರು ಯಶಸ್ವಿಯಾಗಿದ್ದಾರೆ.

    ಪುಟ್ಟ ಮಗು ಡೊಮಿನಿಕ್ಯೂ ಹುಟ್ಟಿದಾಗಿನಿಂದಲೂ ಸಂಪೂರ್ಣವಾಗಿ ಬೆಳವಣಿಯಾಗದ ಕಾರಣ ಅವಳಿ ಮಗುವಿನ ಕಾಲುಗಳನ್ನ ಬೆನ್ನಿನಲ್ಲಿ ಹೊತ್ತುಕೊಂಡಿತ್ತು.

    ಈ ರೀತಿ ಒಂದು ಮಗುವಿನ ದೇಹದಲ್ಲಿ ಕೂಡಿಕೊಂಡ ಅವಳಿ ಮಗುವನ್ನು ವೈದ್ಯರು ಪ್ಯರಾಸಿಟಿಕ್ ಟ್ವಿನ್(ಪರಾವಲಂಬಿ ಅವಳಿ ಮಗು) ಎಂದು ಕರೆದಿದ್ದು, ಈ ರೀತಿಯ ಪ್ರಕರಣಗಳು ತುಂಬಾ ವಿರಳ ಎಂದಿದ್ದಾರೆ. ಅದರಲ್ಲೂ ಬೆನ್ನು ಮೂಳೆಯಲ್ಲಿ ಕೂಡಿಕೊಂಡ ಅವಳಿ ಮಕ್ಕಳ ಪ್ರಕರಣ ಅತ್ಯಂತ ವಿರಳ. ಇಂತಹ ಪ್ರಕರಣಗಳು ವರದಿಯಾಗಿರುವುದು 30ಕ್ಕಿಂತ ಕಡಿಮೆ ಎಂದಿದ್ದಾರೆ.

    10 ತಿಂಗಳ ಮಗು ಡೊಮಿನಿಕ್ಯೂವನ್ನು ಶಸ್ತ್ರಚಿಕಿತ್ಸೆಗಾಗಿ ಫೆಬ್ರವರಿಯಲ್ಲಿ ವೆಸ್ಟ್ ಆಫ್ರಿಕಾದ ಐವರಿ ಕೋಸ್ಟ್‍ನಿಂದ 5 ಸಾವಿರ ಮೈಲಿ ದೂರದ ಚಿಕಾಗೋದ ಅಡ್ವೋಕೇಟ್ ಚಿಲ್ಡ್ರೆನ್ಸ್ ಹಾಸ್ಪಿಟಲ್‍ಗೆ ಕರೆತರಲಾಗಿತ್ತು. ಡೊಮಿನಿಕ್ಯೂ ಪೋಷಕರು ಮಗುವಿನ ಶಸ್ತ್ರಚಿಕಿತ್ಸೆಗಾಗಿ ಚಿಕಾಗೋದಲ್ಲಿ ಉಳಿದುಕೊಳ್ಳಲು ಸ್ವಾಬ್ ಎಂಬವರು ಸಹಾಯ ಮಾಡಿದ್ರು.

    ಡೊಮಿನಿಕ್ಯೂ ದೇಹಕ್ಕೆ ಅಂಟಿಕೊಂಡ ಅವಳಿ ಮಗುವಿನ ಅಂಗಾಗವನ್ನು ತೆಗೆಯಲು ಶಸ್ತ್ರಚಿಕಿತ್ಸೆ ಅಗತ್ಯ. ಇಲ್ಲವಾದ್ರೆ ಅವಳಿ ಮಗುವಿನ ಕಾಲುಗಳಿಗೆ ಶಕ್ತಿ ನೀಡಲು ಅದರ ಹೃದಯ ಹಾಗೂ ಶ್ವಾಸಕೋಶಗಳಿಗೆ ಕಷ್ಟವಾಗಿ ಡೊಮಿನಿಕ್ಯೂ ಹೆಚ್ಚು ದಿನ ಬದುಕಲಾರದು ಅಂತ ವೈದ್ಯರು ಹೇಳಿದ್ದರು. ವೈದ್ಯರು ಡೊಮಿನಿಕ್ಯೂಗೆ ಹಲವು ರೀತಿಯ ವೈದ್ಯಕೀಯ ಪರೀಕ್ಷೆಗಳನ್ನ ಮಾಡಿದ್ರು. ಅವಳಿ ಮಗುವಿನ ಸೊಂಟದ ಭಾಗ, ಮೂತ್ರಕೋಶ, ಕಾಲುಗಳು ಹಾಗೂ ಬೆನ್ನುಮೂಳೆ ಡೊಮಿನಿಕ್ಯೂ ದೇಹಕ್ಕೆ ಅಂಟಿಕೊಂಡಿತ್ತು. ಇದನ್ನು ಬೇರ್ಪಡಿಸುವುದು ವೈದ್ಯರಿಗೆ ದೊಡ್ಡ ಸವಾಲಾಗಿತ್ತು. ಹೀಗಾಗಿ ಡೊಮಿನಿಕ್ಯೂನ 3ಡಿ ಮಾಡೆಲ್ ತಯಾರಿಸಿ ಹೇಗೆ ಶಸ್ತ್ರಚಿಕಿತ್ಸೆ ಮಾಡಬಹುದು ಎಂಬುದನ್ನ ವೈದ್ಯರು ಪ್ರಯೋಗ ಮಾಡಿದ್ದರು.

    ಅವಳಿ ಮಗುವಿನ ಕಾಲುಗಳು ಚೆನ್ನಾಗಿಯೇ ಕಾರ್ಯ ನಿರ್ವಹಿಸುತ್ತಿದ್ದು, ಅದರ ನರ ಡೊಮಿನಿಕ್ಯೂ ಬೆನ್ನು ಮೂಳೆಯೊಂದಿಗೆ ಜೋಡಣೆಯಾಗಿತ್ತು. ಹೀಗಾಗಿ ಬೆನ್ನು ಮೂಳೆಯ ಮೇಲೆ ಒತ್ತಡ ಉಂಟಾದ್ರೆ ಡೊಮಿನಿಕ್ಯೂ ಪಾಶ್ರ್ವವಾಯುವಿಗೆ ತುತ್ತಾಗುವ ಸಂಭವವಿತ್ತು. ಹೀಗಾಗಿ ವೈದ್ಯರು ಅತ್ಯಂತ ಎಚ್ಚರಿಕೆಯಿಂದ 6 ಗಂಟೆಗಳ ಕಾಲ ಮಗುವಿನ ಶಸ್ತ್ರಚಿಕಿತ್ಸೆ ಮಾಡಿದ್ರು. ಸೊಂಟದ ಭಾಗ, ನರ ಹಾಗೂ ರಕ್ತನಾಳಗಳನ್ನ ಕಡಿತಗೊಳಿಸಿ ನಂತರ ಡೊಮಿನಿಕ್ಯೂ ದೇಹಕ್ಕೆ ಅಂಟಿಕೊಂಡಿದ್ದ ಅವಳಿ ಮಗುವಿನ ಅಂಗಾಂಗಗಳನ್ನು ಹೊರತೆಗೆದರು.

    ಈಗ ಡೊಮಿನಿಕ್ಯೂ ಕತ್ತಿನ ಭಾಗದಲ್ಲಿ ಊದಿಕೊಂಡಿರೋದು ಬಿಟ್ಟರೆ ಸಾಮಾನ್ಯ ಮಗುವಿನಂತೆಯೇ ಕಾಣುತ್ತಿದೆ. ಆದರೆ ದೇಹದೊಳಗೆ ಇನ್ನೂ ಕೆಲವು ನ್ಯೂನತೆಗಳಿವೆ. ಶೀಘ್ರದಲ್ಲೇ ಮಗು ಗುಣಮುಖವಾಗಿ ಸಾಮಾನ್ಯ ಮಕ್ಕಳಂತೆ ಬದುಕಬೇಕೆಂದು ಬಯಸುತ್ತೇವೆ ಅಂತ ವೈದ್ಯರು ಹೇಳಿದ್ದಾರೆ.