Tag: ಚಿಕನ್65

  • ಖಾರವಾದ ಚಿಕನ್ 65 ಮಾಡಿ ನಾಲಿಗೆ ರುಚಿ ಹೆಚ್ಚಿಸಿ

    ಖಾರವಾದ ಚಿಕನ್ 65 ಮಾಡಿ ನಾಲಿಗೆ ರುಚಿ ಹೆಚ್ಚಿಸಿ

    ಮಾಂಸಹಾರಿಗಳಿಗೆ ವಾರಕ್ಕೊಮ್ಮೆಯಾದರೂ ನಾಲಿಗೆ ಮಾಂಸದ ಆಹಾರವನ್ನು ತಿನ್ನಲು ಬಯಸುತ್ತದೆ. ಆದರೆ ಹೋಟೆಲ್‍ಗಳಿಗೆ ಹೋಗಿ ತಿಂದರೆ ಕೆಲಮೊಮ್ಮೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಖಾರದ ಚಿಕನ್  65 ತಿನ್ನಬೇಕೆಂದು ಅನಿಸುತ್ತಿದೆಯೇ? ಹಾಗಾದರೆ ಹೋಟೆಲ್‍ಗೆ ಹೋಗುವ ಶ್ರಮವೇಕೆ? ಮನೆಯಲ್ಲಿ ಇರುವ ಸಾಮಾಗ್ರಿಗಳನ್ನು ಬಳಸಿ ಚಿಕನ್ 65ಯನ್ನು ಸರಳ ವಿಧಾನದ ಜೊತೆಗೆ ಮಾಡಬಹುದು. ಹಾಗಿದ್ದರೆ ಚಿಕನ್ 65 ಮಾಡಿ ಮಾಡುವುದು ಹೇಗೆ ಎಂದು ತಿಳಿದುಕೊಳ್ಳೋಣ. ಇದನ್ನೂ ಓದಿ: ಸ್ಪೆಷಲ್ ಪೈನಾಪಲ್ ಪಾಯಸ ಮಾಡಿ ಹಬ್ಬವನ್ನು ಸಂಭ್ರಮಿಸಿ


    ಬೇಕಾಗುವ ಸಾಮಗ್ರಿಗಳು:
    * ಚಿಕನ್- ಅರ್ಧ ಕೆಜಿ (ಬೋನ್ ಲೆಸ್ ಬೆಸ್ಟ್)
    * ಜೋಳದ ಹಿಟ್ಟು-2 ಚಮಚ
    * ಮೈದಾ -2 ಚಮಚ ಖಾರದ ಪುಡಿ
    * ಮೊಟ್ಟೆ- 1
    * ಮೊಸರು- 1ಕಪ್
    * ಶುಂಠಿ-ಬೆಳ್ಳುಳ್ಳಿ ಪೇಸ್ಟ್- 2 ಟೀ ಸ್ಪೂನ್
    * ರುಚಿಗೆ ತಕ್ಕ ಉಪ್ಪು
    * ಅಡುಗೆ ಎಣ್ಣೆ- 1ಕಪ್
    * ಹಸಿ ಮೆಣಸಿನಕಾಯಿ-3
    * ಗರಂ ಮಸಾಲ- ಸ್ವಲ್ಪ
    * ನಿಂಬೆ ರಸ- ಅರ್ಧ ಕಪ್
    * ಈರುಳ್ಳಿ -4
    * ಬೆಳ್ಳುಳ್ಳಿ- 1
    * ಕೊತ್ತಂಬರಿ ಸೊಪ್ಪು- ಸ್ವಲ್ಪ

    ಮಾಡುವ ವಿಧಾನ:
    * ಚಿಕನ್ ಚೆನ್ನಾಗಿ ತೊಳೆದು ತೆಗೆದಿಟ್ಟುಕೊಳ್ಳಿ
    * ಜೋಳದ ಹಿಟ್ಟು, ಮೈದಾ, ಮೊಟ್ಟೆ, ಮೊಸರು, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ರುಚಿಗೆ ತಕ್ಕ ಉಪ್ಪನ್ನು ಒಂದು ಬಟ್ಟಲಿಗೆ ಹಾಕಿ ಸ್ವಲ್ಪ ನೀರು ಹಾಕಿ ಗಟ್ಟಿಯಾಗಿ ಕಲೆಸಿಕೊಳ್ಳಬೇಕು.

    * ನಂತರ ಈ ಮಿಶ್ರಣಕ್ಕೆ ಚಿಕನ್ ಹಾಕಿ ಮಿಕ್ಸ್ ಮಾಡಿ 2 ಗಂಟೆ ಕಾಲ ಇಡಿ.
    * ಈಗ ಬಾಣಲೆಯಲ್ಲಿ ಎಣ್ಣೆ ಹಾಕಿ ಕಾಯಿಸಿ, ಈಗ ಕುದಿಯುತ್ತಿರುವ ಎಣ್ಣೆಗೆ ಚಿಕನ್ ಪೀಸ್ ಹಾಕಿ ಚೆನ್ನಾಗಿ ಫ್ರೈ ಮಾಡಿ ತೆಗೆದಿಟ್ಟುಕೊಳ್ಳಿ.

    * ಈಗ ಮತ್ತೊಂದು ಪಾತ್ರೆಯನ್ನು ತೆಗೆದುಕೊಂಡು ಅದರಲ್ಲಿ ಅಡುಗೆ ಎಣ್ಣೆ, ಹಸಿ ಮೆಣಸಿನಕಾಯಿ, ಈರುಳ್ಳಿ, ಬೆಳ್ಳುಳ್ಳಿ, ಉಪ್ಪು ಹಾಕಿ, ಈರುಳ್ಳಿ ಸ್ವಲ್ಪ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ.


    * ಈಗ ಗರಂ ಮಸಾಲ, ನಿಂಬೆ ರಸ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ,
    * ನಂತರ ಫ್ರೈ ಮಾಡಿದ ಚಿಕನ್ ಪೀಸ್ ಹಾಕಿ ಮಿಕ್ಸ್ ಮಾಡಿ ಕೊನೆಯಲ್ಲಿ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಚಿಕನ್ 65 ಸವಿಯಲು ಸಿದ್ಧವಾಗುತ್ತದೆ. ಇದನ್ನೂ ಓದಿ: ಮನೆಮಂದಿಗೆ ಇಷ್ಟವಾಗುವ ಫಿಶ್ ಫ್ರೈ ಮಾಡುವ ಸುಲಭ ವಿಧಾನ