Tag: ಚಿಕನ್ ಸುಕ್ಕ

  • ಮಂಗಳೂರು ಸ್ಟೈಲ್‌ನಲ್ಲಿ ಚಿಕನ್ ಸುಕ್ಕ ಮಾಡಿ – ನಾಲಿಗೆ ಚಪ್ಪರಿಸಿ ಸವಿಯಿರಿ

    ಮಂಗಳೂರು ಸ್ಟೈಲ್‌ನಲ್ಲಿ ಚಿಕನ್ ಸುಕ್ಕ ಮಾಡಿ – ನಾಲಿಗೆ ಚಪ್ಪರಿಸಿ ಸವಿಯಿರಿ

    ಚಿಕನ್ ಸುಕ್ಕ (Chicken Sukka) ಎಂದರೆ ನಾನ್ ವೆಜ್ ಪ್ರಿಯರ ಬಾಯಲ್ಲಿ ನೀರು ಬರದೇ ಇರಲಾರದು. ನಾವಿಂದು ಮಂಗಳೂರು ಶೈಲಿಯಲ್ಲಿ ಚಿಕನ್ ಸುಕ್ಕ ಮಾಡುವುದು ಹೇಗೆಂದು ಹೇಳಿಕೊಡುತ್ತೇವೆ. ತುಂಬಾ ಸಿಂಪಲ್ ವಿಧಾನದಲ್ಲಿ ಈ ಚಿಕನ್ ಸುಕ್ಕ ಮಾಡಬಹುದಾಗಿರುವುದರಿಂದ ನೀವೂ ಇದನ್ನು ಮಾಡಿ ನೋಡಿ.

    ಬೇಕಾಗುವ ಪದಾರ್ಥಗಳು:
    ತುಪ್ಪ – 3 ಟೀಸ್ಪೂನ್
    ಒಣ ಕೆಂಪು ಮೆಣಸು – 20
    ಕೊತ್ತಂಬರಿ – 5 ಟೀಸ್ಪೂನ್
    ಅರಿಶಿನ – 1 ಟೀಸ್ಪೂನ್
    ಹುಣಿಸೆ ಹಣ್ಣು – ಸ್ವಲ್ಪ
    ಹೆಚ್ಚಿದ ಈರುಳ್ಳಿ – 1
    ಮೆಂತ್ಯ – ಕಾಲು ಟೀಸ್ಪೂನ್
    ಜೀರಿಗೆ – ಅರ್ಧ ಟೀಸ್ಪೂನ್
    ಲವಂಗ – 2
    ಏಲಕ್ಕಿ – 1
    ಬೆಳ್ಳುಳ್ಳಿ – 10
    ಕರಿಬೇವಿನ ಸೊಪ್ಪು – ಕೆಲವು
    ತೆಂಗಿನ ತುರಿ – ಅರ್ಧ ಕಪ್
    ಹೆಚ್ಚಿದ ಈರುಳ್ಳಿ – 1
    ಹೆಚ್ಚಿದ ಟೊಮೆಟೊ – 1
    ಚಿಕನ್ ತುಂಡುಗಳು – 1 ಕೆಜಿ
    ಉಪ್ಪು – ರುಚಿಗೆ ತಕ್ಕಷ್ಟು ಇದನ್ನೂ ಓದಿ: ಮೀನು ಖಾದ್ಯ ಪ್ರಿಯರಿಗಾಗಿ ರುಚಿಯಾದ ತಂದೂರಿ ಫಿಶ್ ರೆಸಿಪಿ

    ಮಾಡುವ ವಿಧಾನ:
    * ಮೊದಲಿಗೆ ಒಂದು ಪ್ಯಾನ್ ತೆಗೆದುಕೊಂಡು, ಅದಕ್ಕೆ 1 ಟೀಸ್ಪೂನ್ ತುಪ್ಪ ಹಾಕಿ ಬಿಸಿಯಾದ ಬಳಿಕ ಕೆಂಪು ಮೆಣಸಿನಕಾಯಿ ಹಾಗೂ ಕೊತ್ತಂಬರಿ ಹಾಕಿ ಹುರಿದುಕೊಳ್ಳಿ.
    * ಹುರಿದ ಪದಾರ್ಥಗಳು ತಣ್ಣಗಾದ ಬಳಿಕ ಅದನ್ನು ಮಿಕ್ಸರ್ ಜಾರ್‌ಗೆ ಹಾಕಿ, ಅರಿಶಿನ ಮತ್ತು ಹುಣಸೆ ಹಣ್ಣನ್ನು ಸೇರಿಸಿ ರುಬ್ಬಿಕೊಳ್ಳಿ.
    * ಈಗ ಒಂದು ಪ್ಯಾನ್‌ನಲ್ಲಿ 1 ಟೀಸ್ಪೂನ್ ತುಪ್ಪ ಬಿಸಿ ಮಾಡಿ, ಅದಕ್ಕೆ ಈರುಳ್ಳಿ ಹಾಕಿ ಸ್ವಲ್ಪ ಬಣ್ಣ ಬದಲಾಗುವವರೆಗೆ ಹುರಿದುಕೊಳ್ಳಿ.
    * ಈಗ ಮೆಂತ್ಯ, ಜೀರಿಗೆ, ಲವಂಗ ಹಾಗೂ ಏಲಕ್ಕಿ ಸೇರಿಸಿ ಸ್ವಲ್ಪ ಹುರಿಯಿರಿ.
    * ಬಳಿಕ ಬೆಳ್ಳುಳ್ಳಿ ಹಾಗೂ ಕರಿಬೇವಿನ ಸೊಪ್ಪು ಸೇರಿಸಿ ಫ್ರೈ ಮಾಡಿ. ಬಳಿಕ ಉರಿ ಆಫ್ ಮಾಡಿ ಆರಲು ಬಿಡಿ.
    * ಈಗ ಹುರಿದು ತಣ್ಣಗಾಗಿಸಿದ ಪದಾರ್ಥಗಳನ್ನು ಮಿಕ್ಸರ್ ಜಾರ್‌ಗೆ ಹಾಕಿ ರುಬ್ಬಿಕೊಳ್ಳಿ.
    * ಈಗ ಪ್ಯಾನ್‌ನಲ್ಲಿ ತೆಂಗಿನ ತುರಿ ಹಾಕಿಕೊಂಡು ಸ್ವಲ್ಪ ಹುರಿದುಕೊಳ್ಳಿ. ಬಳಿಕ ಪಕ್ಕಕ್ಕಿಡಿ.
    * ಒಂದು ಕಡಾಯಿ ತೆಗೆದುಕೊಂಡು, ಅದಕ್ಕೆ 1 ಟೀಸ್ಪೂನ್ ತುಪ್ಪ ಹಾಕಿ, ಈರುಳ್ಳಿ ಹಾಗೂ ಟೊಮೆಟೊವನ್ನು ಹುರಿದುಕೊಳ್ಳಿ. ಬಳಿಕ ಸ್ವಲ್ಪ ಕರಿಬೇವಿನ ಸೊಪ್ಪು ಸೇರಿಸಿ ಸ್ವಲ್ಪ ಕೈಯಾಡಿಸಿ.

    * ಈಗ ಅದಕ್ಕೆ ಚಿಕನ್ ತುಂಡುಗಳನ್ನು ಹಾಕಿ ಕೈಯಾಡಿಸುತ್ತಾ ಬೇಯಿಸಿಕೊಳ್ಳಿ.
    * ಈಗ ರುಬ್ಬಿದ ಕೆಂಪುಮೆಣಸು ಹಾಗೂ ಕೊತ್ತಂಬರಿಯ ಮಿಶ್ರಣವನ್ನು ಸೇರಿಸಿ, ಚಿಕನ್ ಬೇಯಲು ಬೇಕಾಗುವಷ್ಟು ನೀರು ಸೇರಿಸಿ, ಉಪ್ಪು ಹಾಕಿ ಮಿಶ್ರಣ ಮಾಡಿ.
    * ಈಗ ಕಡಾಯಿಗೆ ಮುಚ್ಚಳ ಹಾಕಿ ಬೇಯಿಸಿಕೊಳ್ಳಿ.
    * ಚಿಕನ್ ಮುಕ್ಕಾಲು ಭಾಗದಷ್ಟು ಬೆಂದ ಬಳಿಕ ರುಬ್ಬಿಟ್ಟುಕೊಂಡಿದ್ದ ಮಸಾಲೆ ಪದಾರ್ಥಗಳನ್ನು ಸೇರಿಸಿ ಮಿಶ್ರಣ ಮಾಡಿ, ಚೆನ್ನಾಗಿ ಬೇಯಿಸಿ.
    * ಈಗ ಹುರಿದಿಟ್ಟುಕೊಂಡಿದ್ದ ತೆಂಗಿನ ತುರಿಯನ್ನು ಸೇರಿಸಿ, ಮಿಶ್ರಣ ಮಾಡಿ ಕಡಿಮೆ ಉರಿಯಲ್ಲಿ 5 ನಿಮಿಷ ಬೇಯಿಸಿ.
    * ನೀರಿನಂಶವೆಲ್ಲಾ ಆವಿಯಾದ ಬಳಿಕ ಉರಿಯನ್ನು ಆಫ್ ಮಾಡಿ.
    * ಇದೀಗ ಚಿಕನ್ ಸುಕ್ಕ ತಯಾರಾಗಿದ್ದು, ಸವಿಯಲು ಸಿದ್ಧವಾಗಿದೆ. ನೀರುದೋಸೆ, ಅಕ್ಕಿ ರೊಟ್ಟಿಯೊಂದಿಗೆ ಇದು ಸೂಪರ್ ಎನಿಸುತ್ತದೆ. ಇದನ್ನೂ ಓದಿ: ನಾಲಿಗೆಯ ರುಚಿ ಹೆಚ್ಚಿಸುವ ಚಿಕನ್ ಹಾಟ್ ಆ್ಯಂಡ್ ಸೋರ್ ಸೂಪ್ ರೆಸಿಪಿ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k