Tag: ಚಿಕನ್ ಲಿವರ್ ಫ್ರೈ

  • ಸಿಂಪಲ್, ಟೇಸ್ಟಿ ‘ಚಿಕನ್ ಲಿವರ್ ಫ್ರೈ’ ಮಾಡಿ

    ಸಿಂಪಲ್, ಟೇಸ್ಟಿ ‘ಚಿಕನ್ ಲಿವರ್ ಫ್ರೈ’ ಮಾಡಿ

    ಭಾನುವಾರ ಬಂತು ಎಂದರೆ ನಾನ್‍ವೆಜ್ ಪ್ರಿಯರಿಗೆ ಹಬ್ಬ. ಈ ಹಬ್ಬವನ್ನು ಮತ್ತಷ್ಟು ವಿಶೇಷವಾಗಿಸಲು ಇಂದು ನಿಮ್ಮ ಮನೆಯಲ್ಲಿ ‘ಚಿಕನ್ ಲಿವರ್ ಫ್ರೈ’ ಮಾಡಿ. ಈ ರೆಸಿಪಿ ರುಚಿಕರವಾಗಿರುವುದರ ಜೊತೆ ಸಿಂಪಲ್ ಆಗಿ ಇರುತ್ತೆ. ಮನೆಯವರಿಗೆ ಚಿಕನ್ ಫ್ರೈ, ಸಾರು ಮಾಡುವ ಬದಲು ಈ ರೆಸಿಪಿಯನ್ನು ಮಾಡಲು ಬಲು ಸುಲಭ.  ಮನೆಯಲ್ಲಿಯೇ ಟ್ರೈ ಮಾಡಿ ಈ ರೆಸಿಪಿ.

    ಬೇಕಾಗಿರುವ ಪದಾರ್ಥಗಳು
    * ಕೋಳಿ ಲಿವರ್ – 300 ಗ್ರಾಂ
    * ಕೊತ್ತಂಬರಿ ಪುಡಿ – 1/2 ಟೀಚಮಚ
    * ಕಟ್ ಮಾಡಿದ ಈರುಳ್ಳಿ – 1 ಕಪ್
    * ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್ – 1/2 ಟೀಚಮಚ
    * ಟೊಮೆಟೊ – ಅರ್ಧ ಕಪ್
    * ಎಣ್ಣೆ – 2 ಟೇಬಲ್ಸ್ಪೂನ್
    * ಟೊಮೆಟೊ ಕೆಚಪ್ – 1 ಚಮಚ
    * ಜೀರಿಗೆ ಪುಡಿ – 1/2 ಟೀಚಮಚ
    * ಗರಂ ಮಸಾಲಾ ಪುಡಿ – 1/2 ಟೀಚಮಚ
    * ಹಸಿರು ಮೆಣಸಿನಕಾಯಿ – 4
    * ಕೊತ್ತಂಬರಿ ಸೊಪ್ಪು – 1 ಕಪ್
    * ಸೋಯಾ ಸಾಸ್ – 2 ಟೀಸ್ಪೂನ್

    How to Cook Chicken Livers and Gizzards - Licious Blog

    ಮಾಡುವ ವಿಧಾನ:
    * ಮೊದಲು ಕೋಳಿ ಲಿವರ್ ಸರಿಯಾಗಿ ತೊಳೆದು, ಸುಮಾರು 3 ಭಾಗಗಳಾಗಿ ಕಟ್ ಮಾಡಿ.
    * ಮಧ್ಯಮ ಉರಿಯಲ್ಲಿ ಬಾಣಲೆಗೆ ಎಣ್ಣೆ ಹಾಕಿ ಬಿಸಿ ಮಾಡಿ. ಇದಕ್ಕೆ, ಕಟ್ ಮಾಡಿದ ಈರುಳ್ಳಿ, ಹಸಿರು ಮೆಣಸಿನಕಾಯಿ ಹಾಕಿ ಒಂದು ನಿಮಿಷ ಫ್ರೈ ಮಾಡಿ. ನಂತರ ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್, ಟೊಮೇಟೊ ಹಾಕಿ ಸ್ವಲ್ಪ ಕಂದು ಬಣ್ಣ ಬರುವವರೆಗೆ ಹುರಿಯಿರಿ.
    * ಈ ಮಿಶ್ರಣಕ್ಕೆ ಕಟ್ ಮಾಡಿದ ಲಿವರ್ ಸೇರಿಸಿ ಅದಕ್ಕೆ ಜೀರಿಗೆ, ಕೊತ್ತಂಬರಿ, ಗರಂ ಮಸಾಲಾ ಮತ್ತು ಉಪ್ಪು ಸೇರಿಸಿ ಫ್ರೈ ಮಾಡಿ.
    * ಲಿವರ್‌ನಿಂದ ಎಣ್ಣೆ ಹೊರಬರುವವರೆಗೆ ಬೆರೆಸಿ. 10 ನಿಮಿಷಗಳ ಕಾಲ ಫ್ರೈ ಮಾಡಿ. ಇದಕ್ಕೆ ಸೋಯಾ ಸಾಸ್, ಕೆಚಪ್ ಮತ್ತು ಕಟ್ ಮಾಡಿದ ಕೊತ್ತಂಬರಿ ಸೇರಿಸಿ 10 ನಿಮಿಷಗಳ ಕಾಲ ಫ್ರೈ ಮಾಡಿ. ಕೊನೆಗೆ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ.

  • ಸಂಡೇ ಸ್ಪೆಷಲ್: ಚಿಕನ್ ಲಿವರ್ ಫ್ರೈ ಮಾಡುವ ವಿಧಾನ

    ಸಂಡೇ ಸ್ಪೆಷಲ್: ಚಿಕನ್ ಲಿವರ್ ಫ್ರೈ ಮಾಡುವ ವಿಧಾನ

    ಭಾನುವಾರ ಬಂದರೆ ಸಾಕು ಮಕ್ಕಳು ಸೇರಿದಂತೆ ಮನೆಯವರು ರುಚಿ ರುಚಿಯಾಗಿ ನಾನ್ ವೆಜ್ ತಿನ್ನಬೇಕು ಎಂದು ಆಸೆ ಪಡುತ್ತಾರೆ. ಆದರೆ ಪ್ರತಿ ಭಾನುವಾರ ಚಿಕನ್ ಕಬಾಬ್, ಬಿರಿಯಾನಿ ತಿಂದು ಬೇಸರವಾಗಿರುತ್ತದೆ. ಹಾಗಾಗಿ ನಿಮಗಾಗಿ ಸಿಂಪಲ್ ಆಗಿ ಚಿಕನ್ ಲಿವರ್ ಫ್ರೈ ಮಾಡುವ ವಿಧಾನ ಇಲ್ಲಿದೆ.

    ಬೇಕಾಗುವ ಸಾಮಾಗ್ರಿಗಳು
    1. ಚಿಕನ್ ಲಿವರ್ – 1/4 ಕೆಜಿ
    2. ಈರುಳ್ಳಿ – 1 ದಪ್ಪದು
    3. ಎಣ್ಣೆ – ಕೊತ್ತಂಬರಿ
    4. ಬ್ಲಾಕ್ ಪೆಪ್ಪರ್ ಪುಡಿ – ಒಂದೂವರೆ ಚಮಚ
    5. ಅರಿಶಿಣ ಪುಡಿ – ಚಿಟಿಕೆ
    6. ಖಾರದ ಪುಡಿ – 1 ಚಮಚ
    7. ನಿಂಬೆ ರಸ – 1 ಹಣ್ಣಿನ ರಸ
    8. ಶುಂಠಿ – ಬೆಳ್ಳುಳ್ಳಿ ಪೇಸ್ಟ್
    9. ಉಪ್ಪು – ರುಚಿಗೆ ತಕ್ಕಷ್ಟು

    ಮಾಡುವ ವಿಧಾನ
    * ನಾನ್ ಸ್ಟಿಕ್ ಪ್ಯಾನ್‍ಗೆ ಎಣ್ಣೆ ಹಾಕಿ. ಬಿಸಿಯಾದ ಮೇಲೆ ಅದಕ್ಕೆ ಉದ್ದುದ್ದಕ್ಕೆ ಕತ್ತರಿಸಿದ ಈರುಳ್ಳಿಯನ್ನು ಹಾಕಿ ಗೋಲ್ಡನ್ ಬ್ರೌನ್ ಬರುವ ತನಕ ಫ್ರೈ ಮಾಡಿ.
    * ಅದಕ್ಕೆ ಶುಂಠಿ – ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಹಸಿ ವಾಸನೆ ಹೋಗುವ ತನಕ ಕೈಯಾಡಿಸಿ.
    * ತೊಳೆದ ಚಿಕನ್ ಲಿವರ್ ಸೇರಿಸಿ. ಬಣ್ಣ ಬದಲಾಗುವರೆಗೆ ಫ್ರೈ ಮಾಡಿ.
    * ಲಿವರ್ ಬಣ್ಣ ಚೇಂಜ್ ಆದ ಮೇಲೆ ಅದಕ್ಕೆ ಅರಿಶಿಣ ಪುಡಿ, ಉಪ್ಪು, ಖಾರದ ಪುಡಿ, ಬ್ಲಾಕ್ ಪೆಪ್ಪರ್ ಪುಡಿ ಸೇರಿಸಿ ಮಿಕ್ಸ್ ಮಾಡಿ.
    * 3-4 ನಿಮಿಷ ಕಡಿಮೆ ಉರಿಯಲ್ಲಿ ಲಿಡ್ ಮುಚ್ಚಿ ಬೇಯಲು ಬಿಡಿ.
    * ಮಿಶ್ರಣದೊಂದಿಗೆ ಲಿವರ್ ಬೆಂದ ಬಳಿಕ. ಅದಕ್ಕೆ ಕೊತ್ತಂಬರಿ ಸೊಪ್ಪು. ನಿಂಬೆ ಹಣ್ಣಿನ ರಸ ಸೇರಿಸಿ ಕೆಳಗಿಳಿಸಿದರೆ ರುಚಿರುಚಿಯಾದ ಚಿಕನ್ ಲಿವರ್ ಫ್ರೈ ಸವಿಯಲು ಸಿದ್ಧ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews