Tag: ಚಿಕನ್ ಬಿರಿಯಾನಿ

  • ಕೋಲಾರ| ಮಳೆ, ಚಳಿಯನ್ನೂ ಲೆಕ್ಕಿಸದೇ ಚಿಕನ್ ಬಿರಿಯಾನಿಗಾಗಿ ಮುಗಿಬಿದ್ದ ಜನ

    ಕೋಲಾರ| ಮಳೆ, ಚಳಿಯನ್ನೂ ಲೆಕ್ಕಿಸದೇ ಚಿಕನ್ ಬಿರಿಯಾನಿಗಾಗಿ ಮುಗಿಬಿದ್ದ ಜನ

    ಕೋಲಾರ: ರಾಜ್ಯಾದ್ಯಂತ ಜಡಿ ಮಳೆ (Rain) ಸುರಿದು ಚಳಿಯ ವಾತಾವಣರಣ ನಿರ್ಮಾಣವಾಗಿದ್ದರೂ ಮಳೆಯನ್ನು ಲೆಕ್ಕಿಸದೇ ಬಿಸಿಬಿಸಿ ಚಿಕನ್ ಬಿರಿಯಾನಿಗಾಗಿ (Chicken Biryani) ಜನ ಮುಗಿಬಿದ್ದ ಘಟನೆ ಕೋಲಾರ (Kolar) ಜಿಲ್ಲೆ ಮಾಲೂರು (Malur) ಪಟ್ಟಣದಲ್ಲಿ ನಡೆದಿದೆ.

    ಮಾಲೂರು ಪಕ್ಷೇತರ ಪರಾಜಿತ ಅಭ್ಯರ್ಥಿ ಹೂಡಿ ವಿಜಯ್ ಕುಮಾರ್ ಹುಟ್ಟುಹಬ್ಬದ ಹಿನ್ನೆಲೆ 500 ಕೆಜಿ ಚಿಕನ್ ಬಿರಿಯಾನಿ ವ್ಯವಸ್ಥೆ ಮಾಡಲಾಗಿತ್ತು. ಸುಮಾರು 4,000 ಜನರಿಗೆ ಚಿಕನ್ ಬಿರಿಯಾನಿ ವ್ಯವಸ್ಥೆ ಮಾಡಲಾಗಿತ್ತು. ಈ ಹಿನ್ನೆಲೆ ಊರಿನ ಜನರು ನಾಮುಂದು ತಾಮುಂದು ಎಂದು ಚಿಕನ್ ಬಿರಿಯಾನಿಗಾಗಿ ಪೈಪೋಟಿ ನಡೆಸಿದ್ದಾರೆ. ಇದನ್ನೂ ಓದಿ: ಜಾರ್ಖಂಡ್‌ನಲ್ಲಿ ಎರಡು ಹಂತದಲ್ಲಿ ಚುನಾವಣೆ – ನ.23 ರಂದು ಮತ ಎಣಿಕೆ

    ಬಿರಿಯಾನಿ ಪಾತ್ರೆಯ ಸುತ್ತಲೂ ಪ್ಲೇಟ್ ಹಿಡಿದು ನಿಂತು ಜನರು ಬಿರಿಯಾನಿಗಾಗಿ ಪೈಪೋಟಿ ನಡೆಸಿದ್ದಾರೆ. ಈ ವೇಳೆ ಜನರನ್ನು ನಿಯಂತ್ರಿಸಲು ಮುಖಂಡರು ಹರಸಾಹಸವೇ ಪಡಬೇಕಾಯಿತು. ಇದನ್ನೂ ಓದಿ: ನಾನು ರಾಜಕಾರಣ ಮಾತಾಡಲ್ಲ.. ಮೋದಿಗಾಗಿ ಮಾತ್ರ ಮಾತನಾಡ್ತೀನಿ: ಚಕ್ರವರ್ತಿ ಸೂಲಿಬೆಲೆ

  • ದುರ್ಗಾ ಪೂಜೆ – ಜೈಲಲ್ಲಿರೋ ಕೈದಿಗಳಿಗೆ ಮಟನ್‌ ಬಿರಿಯಾನಿ, ಚಿಕನ್‌ ಕರಿ ಊಟ

    ದುರ್ಗಾ ಪೂಜೆ – ಜೈಲಲ್ಲಿರೋ ಕೈದಿಗಳಿಗೆ ಮಟನ್‌ ಬಿರಿಯಾನಿ, ಚಿಕನ್‌ ಕರಿ ಊಟ

    ಕೋಲ್ಕತ್ತಾ: ದುರ್ಗಾ ಪೂಜೆ ಹಬ್ಬದಿಂದ ಹೊರಗುಳಿಯಂತೆ ನೋಡಿಕೊಳ್ಳಲು ಕೈದಿಗಳಿಗೆ ಆ ದಿನದಂದು ಮಟನ್‌ ಬಿರಿಯಾನಿ, ಚಿಕನ್‌ ಕರಿ ನೀಡಲು ಪಶ್ಚಿಮ ಬಂಗಾಳ ಕ್ರಮವಹಿಸಿದೆ.

    ಕೈದಿಗಳಿಗೆ ನೀಡುವ ಆಹಾರದ ಮೆನುವಿನಲ್ಲಿ ಬದಲಾವಣೆ ತರಲಾಗಿದೆ. ಮಟನ್‌ ಬಿರಿಯಾನಿ, ಬಸಂತಿ ಪಲಾವ್‌, ಚಿಕನ್‌ ಕರಿ ನೀಡಲಾಗುವುದು ಎಂದು ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ.

    ಕೈದಿಗಳು ಮತ್ತು ವಿಚಾರಣಾಧೀನ ಕೈದಿಗಳಿಗೆ ಮಧ್ಯಾಹ್ನ ಹಾಗೂ ರಾತ್ರಿಯ ಊಟಕ್ಕೆ ಬದಲಾಗಿರುವ ಮೆನುವು ಷಷ್ಠಿ (ಅ.9) ರಿಂದ ದಶಮಿ (ಅ.12) ವರೆಗೆ ದುರ್ಗಾ ಪೂಜೆಯ ಪ್ರಾರಂಭ ಮತ್ತು ಅಂತ್ಯದ ವರೆಗೂ ಈ ವಿಶೇಷ ಭೋಜನಾ ಇರಲಿದೆ.

    ಪ್ರತಿ ಹಬ್ಬದ ಸಮಯದಲ್ಲಿ ಉತ್ತಮ ಆಹಾರಕ್ಕಾಗಿ ಕೈದಿಗಳು ವಿನಂತಿ ಮಾಡಿಕೊಳ್ಳುತ್ತಿದ್ದರು. ನಾವು ಈ ವರ್ಷ ಹೊಸ ಮೆನುವನ್ನು ತಂದಿದ್ದೇವೆ. ಇದು ಅವರ ಮುಖದಲ್ಲಿ ನಗು ತಂದಿದೆ ಎಂಬ ಭರವಸೆ ಇದೆ. ನಾವು ವೈಯಕ್ತಿಕವಾಗಿ ಅವರನ್ನು ಸುಧಾರಿಸಲು ಇದು ಅತ್ಯಂತ ಸಕಾರಾತ್ಮಕ ಕ್ರಮ ಎಂದು ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ.

    ಅಡುಗೆ ಕೆಲಸ ಮಾಡುವ ಕೈದಿಗಳೇ ದುರ್ಗಾ ಪೂಜೆಯ ಸಂದರ್ಭದಲ್ಲಿ ಖಾದ್ಯಗಳನ್ನು ತಯಾರಿಸಲಿದ್ದಾರೆ. ಮೆನುವಿನಲ್ಲಿ ಮಚರ್ ಮಾತಾ ದಿಯೆ ಪುಯಿ ಶಕ್, ಮಾಚರ್ ಮಾತಾ ದಿಯೆ ದಾಲ್, ಲುಚಿ- ಚೋಲರ್ ದಾಲ್, ಪಯೇಶ್ (ಬಂಗಾಳಿ ಗಂಜಿ), ಚಿಕನ್ ಕರಿ, ಆಲು ಪೊಟೋಲ್ ಚಿಂಗ್ರಿ, ‘ರೈತಾ’ (ಮಿಶ್ರಿತ ಮೊಸರು) ಮತ್ತು ‘ಬಸಂತಿ ಪಲಾವ್ ಜೊತೆ ಮಟನ್ ಬಿರಿಯಾನಿ ಇದೆ.

    ಕೈದಿಗಳ ಧಾರ್ಮಿಕ ಭಾವನೆ ಗೌರವಿಸಲು ಎಲ್ಲರಿಗೂ ಮಾಂಸಾಹಾರ ನೀಡಲಾಗುವುದಿಲ್ಲ. ಕೈದಿಗಳು ತಮಗೆ ಬೇಕಾದ ಖಾದ್ಯಗಳನ್ನು ಆಯ್ಕೆ ಮಾಡಿಕೊಳ್ಳಬಹುದು.

  • ಶೋಷಿತರ ಸಮಾವೇಶದಲ್ಲಿ ಕ್ಷಿಂಟಾಲ್‌ಗಟ್ಟಲೇ ಚಿಕನ್ ಬಿರಿಯಾನಿ ನೆಲದ ಪಾಲು

    ಶೋಷಿತರ ಸಮಾವೇಶದಲ್ಲಿ ಕ್ಷಿಂಟಾಲ್‌ಗಟ್ಟಲೇ ಚಿಕನ್ ಬಿರಿಯಾನಿ ನೆಲದ ಪಾಲು

    ಚಿತ್ರದುರ್ಗ: ಕ್ವಿಂಟಾಲ್‌ಗಟ್ಟಲೇ ಚಿಕನ್ ಬಿರಿಯಾನಿ (Chicken Biriyani) ನೆಲದ ಪಾಲಾಗಿರುವ ಘಟನೆ ಚಿತ್ರದುರ್ಗದಲ್ಲಿ (Chitradurga)  ನಡೆದ ಶೋಷಿತರ ಸಮಾವೇಶದಲ್ಲಿ ಬೆಳಕಿಗೆ ಬಂದಿದೆ.

    ಶೋಷಿತ ಸಮುದಾಯಗಳ ಜಾಗೃತಿ ಸಮಾವೇಶಕ್ಕೆ (Exploited Communities Awareness Conference) ಬರುವ ಜನರಿಗೆ ವಿತರಿಸಲೆಂದು ಸಿದ್ಧಪಡಿಸಿದ್ದ ಬಿರಿಯಾನಿ ನೆಲದಪಾಲಾಗಿದೆ. ಸಮಾವೇಶಕ್ಕೆ ನಿರೀಕ್ಷೆಯಷ್ಟು ಜನರು ಬಾರದ ಹಿನ್ನೆಲೆಯಲ್ಲಿ ಉಳಿದ ಚಿಕನ್ ಬಿರಿಯಾನಿ ಹಾಗೂ ಪಲಾವ್ ಸಂಪೂರ್ಣವಾಗಿ ನೆಲದ ಪಾಲಾಗಿದೆ. ಇದನ್ನೂ ಓದಿ: ಗಣರಾಜ್ಯೋತ್ಸವ ನೃತ್ಯದಲ್ಲಿ ಕಮಲದ ಹೂವನ್ನು ಎದ್ದು ಕಾಣುವಂತೆ ತೋರಿಸಿದ್ದರು – ಶಿವಲಿಂಗೇಗೌಡ

    ಸುಮಾರು ಐದು ಲಕ್ಷ ಜನರು ಸೇರುವ ನಿರೀಕ್ಷೆಯಿಂದ ಮೂರುವರೆ ಲಕ್ಷಕ್ಕೂ ಅಧಿಕ ಜನರಿಗೆಂದು ಬಿರಿಯಾನಿ ತಯಾರಿಸಲಾಗಿತ್ತು. ಆದರೆ ನಿರೀಕ್ಷಿತ ಪ್ರಮಾಣದಲ್ಲಿ ಜನರು ಆಗಮಿಸದ ಹಿನ್ನಲೆ ತಯಾರಿಸಲು ತಂದಿದ್ದ ಕೆಲವು ಆಹಾರ ಸಾಮಗ್ರಿಗಳನ್ನು ಆಯೋಜಕರು ಅಲ್ಲಿಯೇ ಬಿಟ್ಟುಹೋಗಿದ್ದಾರೆ. ಉಳಿದ ಅನ್ನ, ಚಿಕನ್ ಎಲ್ಲವನ್ನು ನೆಲಕ್ಕೆ ಹಾಕಿದ್ದಾರೆ. ಈ ದೃಶ್ಯಾವಳಿಗಳು ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆಗಿದೆ. ಇದನ್ನೂ ಓದಿ: ವಿಜಯಪುರದಲ್ಲಿ ಎರಡು ಬಾರಿ ಭೂಕಂಪನ – ಆತಂಕದಲ್ಲಿ ಜನರು

    ಶೋಷಿತ ಸಮುದಾಯಗಳ ಜಾಗೃತಿ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ.ಶಿವಕುಮಾರ್ ಭಾಗಿಯಾಗಿದ್ದರು. ಹಸಿವಿನಿಂದ ಜನ ಇರಬಾರದು ಅಂತ ಹೇಳಿ ಬಿರಿಯಾನಿಯನ್ನು ತಯಾರಿಸಲಾಗಿತ್ತು. ಈ ಸಂದರ್ಭದಲ್ಲಿ ಅನ್ನವನ್ನು ನೆಲದ ಪಾಲು ಮಾಡಿರುವ ಆಯೋಜಕರ ವಿರುದ್ಧ ಜನಸಾಮನ್ಯರು ಕಿಡಿಕಾರಿದ್ದಾರೆ. ಉಳಿದ ಆಹಾರವನ್ನು ಅನಾಥಶ್ರಮ ಅಥವಾ ನಿರಾಶ್ರಿತರ ಕೇಂದ್ರಕ್ಕೆ ನೀಡದೇ ನೆಲದಪಾಲು ಮಾಡಿದ್ದು ವಿಪರ್ಯಾಸ ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ಹನುಮಧ್ವಜ ಸಂಘರ್ಷ; ರಾಜ್ಯಾದ್ಯಂತ ಹೋರಾಟದ ಕಿಚ್ಚು – ಮಂಡ್ಯದಲ್ಲಿಂದು ಹೆಚ್‌ಡಿಕೆ, ರೆಡ್ಡಿ ಪಾದಯಾತ್ರೆ

  • ಚಿಕನ್ ಬಿರಿಯಾನಿ ಕೊಡಲಿಲ್ಲವೆಂದು ರೆಸ್ಟೋರೆಂಟ್‌ಗೆ ಬೆಂಕಿ ಹಚ್ಚಿದ ಭೂಪ

    ಚಿಕನ್ ಬಿರಿಯಾನಿ ಕೊಡಲಿಲ್ಲವೆಂದು ರೆಸ್ಟೋರೆಂಟ್‌ಗೆ ಬೆಂಕಿ ಹಚ್ಚಿದ ಭೂಪ

    ವಾಷಿಂಗ್ಟನ್: ತನಗೆ ಚಿಕನ್ ಬಿರಿಯಾನಿ (Chicken) ಕೊಡಲಿಲ್ಲವೆಂದು ನ್ಯೂಯಾರ್ಕ್‌ನಲ್ಲಿರುವ ಬಾಂಗ್ಲಾದೇಶಿ ರೆಸ್ಟೋರೆಂಟ್‌ಗೆ (Restorent) ಪೆಟ್ರೋಲ್ (Petrol) ಸುರಿದು ಬೆಂಕಿ ಹಚ್ಚಿರುವ ಘಟನೆ ನ್ಯೂಯಾರ್ಕ್ (NewYork) ನಗರದಲ್ಲಿ ನಡೆದಿದೆ.

    ಇಲ್ಲಿನ ಜಾಕ್ಸನ್ ಹೈಟ್ಸ್‌ನಲ್ಲಿರುವ ಇಟ್ಟಾಡಿ ಗಾರ್ಡನ್ ರೆಸ್ಟೋರೆಂಟ್‌ಗೆ ಬೆಂಕಿ ಹಚ್ಚಿದ ಘಟನೆಗೆ ಸಂಬಂಧಿಸಿದಂತೆ 49 ವರ್ಷದ ಚೋಫೆಲ್ ನಾರ್ಬು ನನ್ನು ನ್ಯೂಯಾರ್ಕ್ ಪೊಲೀಸರು (NewYork Police) ಬಂಧಿಸಿದ್ದಾರೆ. ಆರೋಪಿ ವಿರುದ್ಧ ಕ್ರಿಮಿನಲ್ (Criminal Case) ಆರೋಪ ಹೊರಿಸಲಾಗಿದೆ. ಇದನ್ನೂ ಓದಿ: ಕೇರಳ ಶೈಲಿಯ ರುಚಿಕರ ಸಿಗಡಿ ರೋಸ್ಟ್ ಮಾಡಿ ನೋಡಿ

     

    View this post on Instagram

     

    A post shared by FDNY (@fdny)

    ಬಂಧನದ ಬಳಿಕ ಆರೋಪಿ, ನಾನು ತುಂಬಾ ಕುಡಿದಿದ್ದೆ ಕುಡಿದಿದ್ದರಿಂದ ನನಗೆ ಹುಚ್ಚು ಹಿಡಿದಂತಾಗಿತ್ತು. ಹಾಗಾಗಿ ಚಿಕನ್ ಬಿರಿಯಾನಿ ಖರೀದಿಸಲು ಹೋದೆ. ಆದರೆ ನನಗೆ ಬಿರಿಯಾನಿ ಕೊಡಲಿಲ್ಲ. ಆದ್ದರಿಂದ ಗ್ಯಾಸ್ ಕ್ಯಾನ್ ಖರೀದಿಸಿ, ರೆಸ್ಟೋರೆಂಟ್ ಸುಡಲು ಮುಂದಾದೆ ಎಂದು ಹೇಳಿಕೊಂಡಿರುವುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಇದನ್ನೂ ಓದಿ: ಅಮೆರಿಕಾದಲ್ಲಿ ಕಾಂತಾರ ನೋಡಿ ಭಾವುಕರಾದ ನಟ ಜಗ್ಗೇಶ್

    ಘಟನೆ ಸಿಸಿಟಿವಿ (CCTV) ಕ್ಯಾಮೆರಾದಲ್ಲಿ ಸರೆಯಾಗಿದೆ. ಅಲ್ಲದೇ ರೆಸ್ಟೋರೆಂಟ್‌ಗೆ ಬೆಂಕಿ ಹಚ್ಚುವ ವೇಳೆ ಆರೋಪಿಗೂ ಬೆಂಕಿ ತಗುಲಿದೆ. ಈ ದೃಶ್ಯ ಜಾಲತಾಣದಲ್ಲಿ ವೈರಲ್ ಆಗಿದೆ.

    Live Tv
    [brid partner=56869869 player=32851 video=960834 autoplay=true]

  • ಬಿರಿಯಾನಿಗಾಗಿ ನೂಕುನುಗ್ಗಲು- ಜೆಡಿಎಸ್ ಕಾರ್ಯಕರ್ತರನ್ನ ನಿಭಾಯಿಸಲು ಪೊಲೀಸರಿಂದ ಹರಸಾಹಸ

    ಬಿರಿಯಾನಿಗಾಗಿ ನೂಕುನುಗ್ಗಲು- ಜೆಡಿಎಸ್ ಕಾರ್ಯಕರ್ತರನ್ನ ನಿಭಾಯಿಸಲು ಪೊಲೀಸರಿಂದ ಹರಸಾಹಸ

    ಕೋಲಾರ: ಜೆಡಿಎಸ್(JDS) ಅಲ್ಪಸಂಖ್ಯಾತರ ಸಮಾವೇಶದಲ್ಲಿ ಚಿಕನ್ ಬಿರಿಯಾನಿಗಾಗಿ(Chicken Biryani) ನೂಕುನುಗ್ಗಲು ಉಂಟಾಗಿದ್ದು, ಕಾರ್ಯಕರ್ತರನ್ನು ನಿಭಾಯಿಸಲು ಪೊಲೀಸರು(Police) ಹರಸಾಹಸಪಟ್ಟರು.

    ಸಮಾವೇಶದಲ್ಲಿ ಭಾಗವಹಿಸುವ ಜನರಿಗೆ ಕೋಲಾರದಲ್ಲಿ ಭರ್ಜರಿ ಬಿರಿಯಾನಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಕೋಲಾರ ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಹಮ್ಮಿಕೊಂಡಿದ್ದ ಸಮಾವೇಶದಲ್ಲಿ ಸುಮಾರು 2,500 ಕೆ.ಜಿ ಚಿಕನ್ ಬಿರಿಯಾನಿ ಸಿದ್ಧತೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಕೋಲಾರದ ಜೆಡಿಎಸ್ ಅಲ್ಪಸಂಖ್ಯಾತರ ಸಮಾವೇಶದಲ್ಲಿ ಬಿರಿಯಾನಿಗಾಗಿ ಜನ ತಾ ಮುಂದು ತಾ ಮುಂದು ಎಂದು ಮುಗಿಬಿದ್ದಿದ್ದಾರೆ. ಆದರೆ ಕಾರ್ಯಕರ್ತರನ್ನು ನಿಭಾಯಿಸಲು ಪೊಲೀಸರ ಹರಸಾಹಸ ಪಟ್ಟಿದ್ದಾರೆ.

    ಸಾವಿರಾರು ಮಂದಿ ಅಲ್ಪಸಂಖ್ಯಾತರು ಭಾಗವಹಿಸಿದ್ದ ಸಮಾವೇಶದಲ್ಲಿ ಬಿರಿಯಾನಿ ಗಲಾಟೆ ನಡೆದಿದೆ. ಬಿರಿಯಾನಿ ಖಾಲಿಯಾಗುತಿದ್ದಂತೆ ಕಾರ್ಯಕರ್ತರ ರೋಷಾವೇಶ ವ್ಯಕ್ತಪಡಿಸಿದ್ದು, ಮತ್ತೊಂದು ಬಿರಿಯಾನಿ ಪಾತ್ರ ತರುವಷ್ಟರಲ್ಲಿಯೆ ಕಾರ್ಯಕರ್ತರು ಗಲಾಟೆಗಳಿದಿದ್ದಾರೆ. ಇದನ್ನೂ ಓದಿ: ಮೋದಿ ಹುಟ್ಟುಹಬ್ಬ – ಬೆಂಗಳೂರಿನಲ್ಲಿ ವಿಶಿಷ್ಟ ಸರ್ಕಾರಿ ಆಸ್ಪತ್ರೆ ಲೋಕಾರ್ಪಣೆ

    ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ರಾಜ್ಯಾಧ್ಯಕ್ಷ ಇಬ್ರಾಹಿಂ ಸೇರಿದಂತೆ ಅನೇಕ ಗಣ್ಯರು ಭಾಗಿಯಾಗಿದ್ದು, ಸುಮಾರು 10 ರಿಂದ 15 ಸಾವಿರ ಮಂದಿ ಭಾಗವಹಿಸಿದ್ದರು. ಇದನ್ನೂ ಓದಿ: ಸಂಘ ಪರಿವಾರದಿಂದಾಗಿ ಕರ್ನಾಟಕದಲ್ಲಿ ಪ್ರಗತಿಪರ ಚಳುವಳಿಗೆ ಹಿನ್ನಡೆ: ಕೇರಳ ಸಿಎಂ

    Live Tv
    [brid partner=56869869 player=32851 video=960834 autoplay=true]

  • ಕೊರೊನಾ ವಾರಿಯರ್ಸ್‍ಗೆ ಚಿಕನ್ ಬಿರಿಯಾನಿ ವಿತರಿಸಿದ ಚಿಕ್ಕಬಳ್ಳಾಪುರ ನಗರಸಭಾ ಸದಸ್ಯ

    ಕೊರೊನಾ ವಾರಿಯರ್ಸ್‍ಗೆ ಚಿಕನ್ ಬಿರಿಯಾನಿ ವಿತರಿಸಿದ ಚಿಕ್ಕಬಳ್ಳಾಪುರ ನಗರಸಭಾ ಸದಸ್ಯ

    ಚಿಕ್ಕಬಳ್ಳಾಪುರ: ನಗರದಲ್ಲಿ ಕೊರೊನಾ ಸಂಕಷ್ಟದ ಸಮಯದಲ್ಲಿ ವಾರಿಯರ್ಸ್ ಆಗಿ ಸೇವೆ ಮಾಡುತ್ತಿರುವವರಿಗೆ ಚಿಕ್ಕಬಳ್ಳಾಪುರ ನಗರಸಭಾ ಸದಸ್ಯ ಗಜೇಂದ್ರ ದಂಪತಿಗಳು ಇಂದು ಬಿರಿಯಾನಿ ಮಾಡಿ ವಿತರಿಸಿದ್ದಾರೆ.

    ಚಿಕ್ಕಬಳ್ಳಾಪುರದ ನಾಲ್ಕನೇ ವಾರ್ಡ್ ಸದಸ್ಯರಾಗಿರುವ ಗಜೇಂದ್ರರವರು ಕಳೆದೆರೆಡು ದಿನಗಳಿಂದ ಪೊಲೀಸರು, ಹೋಂ ಗಾಡ್ರ್ಸ್, ನಗರಸಭೆ ಹಾಗೂ ಆಸ್ಪತ್ರೆಯಲ್ಲಿ ಕೊರೊನಾ ವಾರಿಯರ್ಸ್ ಆಗಿ ಸೇವೆ ಸಲ್ಲಿಸುತ್ತಿರುವವರಿಗೆ ಉಚಿತವಾಗಿ ಊಟ, ತಿಂಡಿ ಕೊಡುವ ಕೆಲಸ ಮಾಡುತ್ತಿದ್ದಾರೆ.

    ಇಂದು ವಿಶೇಷವಾಗಿ ಚಿಕನ್ ಬಿರಿಯಾನಿ ವಿತರಿಸಿ ಸಂಕಷ್ಟದ ದಿನಗಳಲ್ಲಿ ಸಮಾಜಕ್ಕಾಗಿ ಸೇವೆ ಸಲ್ಲಿಸುವ ವಾರಿಯರ್ಸ್‍ಗೆ ಜನ ಕೈಲಾದ ಸಹಾಯ ಮಾಡಬೇಕು. ಜೊತೆಗೆ ಕೊರೊನಾ ನಿಯಂತ್ರಣಕ್ಕೆ ಜನ ಸಹಕರಿಸಬೇಕೆಂದು ಮನವಿ ಮಾಡಿದರು. ಪ್ರತಿ ದಿನ ತಮ್ಮ ಮನೆ ಬಳಿಯೇ ಅಡುಗೆ ತಯಾರಿ ಮಾಡಿ ಪ್ಯಾಕ್ ಮಾಡಿ ನಗರದಲ್ಲಿ ಸಂಚಾರ ಮಾಡಿ ಆಸ್ಪತ್ರೆ, ಆಯಕಟ್ಟಿನ ಸ್ಥಳಗಳಲ್ಲಿ ಪೊಲೀಸರು ಕರ್ತವ್ಯ ನಿರ್ವಹಿಸುತ್ತಿದ್ದವರಿಗೆ ಊಟ ವಿತರಣೆ ಮಾಡುತ್ತಿದ್ದಾರೆ.

  • ರಂಜಾನ್ ಸ್ಪೆಷಲ್ – ಚಿಕನ್ ಬಿರಿಯಾನಿ ಮಾಡೋ ವಿಧಾನ

    ರಂಜಾನ್ ಸ್ಪೆಷಲ್ – ಚಿಕನ್ ಬಿರಿಯಾನಿ ಮಾಡೋ ವಿಧಾನ

    ಸೋಮವಾರ ರಂಜಾನ್ ಹಬ್ಬ ಇದೆ. ಸಾಮಾನ್ಯವಾಗಿ ಮುಸ್ಲಿಂ ಬಾಂಧವರ ಮನೆಯಲ್ಲಿ ಬಿರಿಯಾನಿ ಮಾಡೋದು ಫಿಕ್ಸ್. ಕೆಲವರು ಹಬ್ಬಕ್ಕಾಗಿ ಸ್ಪೆಷಲ್ ಬಿರಿಯಾನಿಯ ಮೊರೆ ಹೋಗುತ್ತಾರೆ. ನಿಮಗಾಗಿ ರುಚಿಯಾದ ಚಿಕನ್ ಬಿರಿಯಾನಿ ಮಾಡುವ ವಿಧಾನ ಇಲ್ಲಿದೆ…

    ಬೇಕಾಗುವ ಸಾಮಗ್ರಿಗಳು
    1. ಅಕ್ಕಿ – 1/2 ಕೆ.ಜಿ
    2. ಚಿಕನ್ – 1/2 ಕೆ.ಜಿ
    3. ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 2 ಚಮಚ
    4. ಎಣ್ಣೆ – 5 ಚಮಚ
    5. ಚಕ್ಕೆ – 3-4
    6. ಲವಂಗ- 10
    7. ಏಲಕ್ಕಿ – 5
    8. ಮರಾಠಿ ಮೊಗ್ಗು – 4
    9. ತುಪ್ಪ- 2 ಚಮಚ
    10. ಗರಂ ಮಸಾಲ – 2 ಚಮಚ

    11. ಖಾರದ ಪುಡಿ – 1 ಚಮಚ
    12. ಅರಿಶಿಣ – 1/2 ಚಮಚ
    13. ದನಿಯಾ ಪುಡಿ – 1 ಚಮಚ
    14. ಈರುಳ್ಳಿ – 2
    15. ಮೊಸರು – ಅರ್ಧ ಕಪ್
    16. ಟೊಮೆಟೊ – 4
    17. ಕೊತ್ತಂಬರಿ ಸೊಪ್ಪು, ಪುದಿನ – ಸ್ವಲ್ಪ
    18. ಉಪ್ಪು – ರುಚಿಗೆ ತಕ್ಕಷ್ಟು
    19. ಹಸಿರು ಮೆಣಸಿನ ಕಾಯಿ – 8

    ಮಾಡುವ ವಿಧಾನ
    * ಮೊದಲಿಗೆ ಸ್ಟೌವ್ ಮೇಲೆ ಕುಕ್ಕರ್ ಇಟ್ಟು ಎಣ್ಣೆ ಮತ್ತು ತುಪ್ಪ ಹಾಕಿ. ಬಿಸಿಯಾಗುತ್ತಿದ್ದಂತೆ ಚಕ್ಕೆ, ಲವಂಗ, ಏಲಕ್ಕಿ, ಮರಾಠಿ ಮೊಗ್ಗು ಹಾಕಿ ಚೆನ್ನಾಗಿ ಫ್ರೈ ಮಾಡಿ.
    * ನಂತರ ಈರುಳ್ಳಿ, ಹಸಿರು ಮೆಣಸಿಕಾಯಿ ಹಾಕಿ ಫ್ರೈ ಮಾಡಿ
    * ಈಗ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ, ಹಸಿ ವಾಸನೆ ಹೋಗುವರೆಗೂ ಫ್ರೈ ಮಾಡಿ
    * ಬಳಿಕ ಖಾದರ ಪುಡಿ, ಅರಿಶಿಣ, ಟೊಮೆಟೊ ಹಾಕಿ ಚೆನ್ನಾಗಿ ಮೇಯಿಸಿ.
    * ಈಗ ತೊಳೆದ ಚಿಕನ್, ಮೊಸರು, ಕೊತ್ತಂಬರಿ, ಪುದಿನ ಸೊಪ್ಪು ಹಾಕಿ ಎಲ್ಲವನ್ನೂ ಮಿಕ್ಸ್ ಮಾಡಿ.
    * ದನಿಯಾ ಪುಡಿ, ಗರಂ ಮಸಲಾ ಹಾಕಿ ಪ್ಲೇಟ್ ಮುಚ್ಚಿ 15 ನಿಮಿಷ ಚೆನ್ನಾಗಿ ಬೇಯಿಸಿ. (ಕಡಿಮೆ ಉರಿಯಲ್ಲಿ ಬೇಯಿಸಿ)
    * ಈಗ ನಾಲ್ಕು ಲೋಟ ನೀರು ಹಾಕಿ ಚೆನ್ನಾಗಿ ಕುದಿಸಿ, ನೀರು ಕುದಿಯುತ್ತಿದ್ದಂತೆ ಅಕ್ಕಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕುಕ್ಕರ್ ಮುಚ್ಚಿ.
    * ನಂತರ ಕುಕ್ಕರ್ 2 ವಿಶಲ್ ಬಂದರೆ ಚಿಕನ್ ಬಿರಿಯಾನಿ ಸವಿಯಲು ರೆಡಿ

  • ಹೈದರಾಬಾದ್ ಚಿಕನ್ ಬಿರಿಯಾನಿ ತಯಾರಿಸುವುದು ಹೇಗೆ?

    ಹೈದರಾಬಾದ್ ಚಿಕನ್ ಬಿರಿಯಾನಿ ತಯಾರಿಸುವುದು ಹೇಗೆ?

    ನೀವು ಹಲವಾರು ವೆರೈಟಿಯ ಚಿಕನ್ ಬಿರಿಯಾನಿಗಳನ್ನು ಸವಿದಿರುತ್ತೀರಿ. ಅದರಲ್ಲೂ ಹೈದರಾಬಾದ್ ಚಿಕನ್ ಬಿರಿಯಾನಿ ಎಂದರೆ ಬಾಯಲ್ಲಿ ನೀರೂರುತ್ತದೆ. ಅದನ್ನು ಸವಿಯಲು ಹೋಟೇಲ್‍ಗೇ ಹೋಗಬೇಕು ಅಂತೇನೂ ಇಲ್ಲ. ನಿಮ್ಮ ಮನೆಯಲ್ಲೇ ಈ ಬಿರಿಯಾನಿಯನ್ನು ತಯಾರಿಸಬಹುದು.

    ಬೇಕಾಗುವ ಸಾಮಗ್ರಿಗಳು:
    1. ಚಿಕನ್ – 1/2 ಕೆ.ಜಿ
    2. ಬಾಸುಮತಿ ಅಕ್ಕಿ – ಕಾಲು ಕೆ.ಜಿ
    3. ಅಕ್ಕಿ – ಕಾಲು ಕೆ.ಜಿ
    4. ಈರುಳ್ಳಿ – 3
    5. ಟೊಮಾಟೋ – 3
    6. ಪುದೀನಾ – ಅರ್ಧ ಕಟ್ಟು
    7. ಕೊತ್ತಂಬರಿಸೊಪ್ಪು – ಅರ್ಧ ಕಟ್ಟು
    8. ಹಸಿಮೆಣಸಿನಕಾಯಿ – 6
    9. ಶುಂಠಿ ಬೆಳ್ಳುಳ್ಳಿ ಪೇಸ್ಟ್ – ಅರ್ಧ ಕಪ್
    10. ಕಸ್ತೂರಿ ಮೇತಿ – 2 ಚಮಚ
    11. ಹಾಲು – 1 ಕಪ್
    12. ಚಕ್ಕೆ ಲವಂಗ – 5-6
    13. ಪಲಾವ್ ಎಲೆ – 3
    14. ಜೀರಿಗೆ – 3 ಚಮಚ
    15. ಏಲಕ್ಕಿ – 3
    16. ಉಪ್ಪು – ರುಚಿಗೆ ತಕ್ಕಷ್ಟು
    17. ಅರಿಶಿಣ – ಅರ್ಧ ಚಮಚ
    18. ತುಪ್ಪ – 5 ಚಮಚ
    19. ಗೋಡಂಬಿ – 50 ಗ್ರಾಂ

    ಮಾಡುವ ವಿಧಾನ:
    1. ಬಾಸುಮತಿ ಅಕ್ಕಿ ಮತ್ತು ಮಾಮೂಲಿ ಅಕ್ಕಿ ಎರಡನ್ನೂ ಸಮಪ್ರಮಾಣದಲ್ಲಿ ತೆಗೆದುಕೊಂಡು ಚೆನ್ನಾಗಿ ತೊಳೆದಿಟ್ಟುಕೊಳ್ಳಿ. ಒಂದು ಕುಕ್ಕರ್‍ನಲ್ಲಿ ಸ್ವಲ್ಪ ತುಪ್ಪ ಬಿಸಿ ಮಾಡಿ, ಅದಕ್ಕೆ ಪಲಾವ್ ಎಲೆ, ಜೀರಿಗೆ, ಏಲಕ್ಕಿ, ಚಕ್ಕೆ ಲವಂಗ ಮತ್ತು ಕಸ್ತೂರಿ ಮೇತಿ ಹಾಕಿ ಕಡಿಮೆ ಉರಿಯಲ್ಲಿ ಘಮ ಬರುವ ತನಕ ಬಾಡಿಸಿ. ನಂತರ ಇದಕ್ಕೆ ತೊಳೆದ ಅಕ್ಕಿಯನ್ನು ಹಾಕಿ ಬೇಯಲು ಬೇಕಾಗುವಷ್ಟು ನೀರು, ಸ್ವಲ್ಪ ಉಪ್ಪು ಮತ್ತು ಒಂದು ಕಪ್ ಹಾಲನ್ನು ಹಾಕಿ ಮುಚ್ಚಳವನ್ನು ಮುಚ್ಚಿ ಒಂದು ವಿಷಲ್ ಕೂಗಿಸಿ. (ಅಕ್ಕಿ ಮುಕ್ಕಾಲು ಭಾಗ ಬೆಂದಿದ್ದರೆ ಸಾಕು)

    2. ಮತ್ತೊಂದು ಪ್ಯಾನ್(ಕಡಾಯಿ)ನಲ್ಲಿ ಎಣ್ಣೆ ಬಿಸಿ ಮಾಡಿ ಉದ್ದಕ್ಕೆ ಹೆಚ್ಚಿದ ಈರುಳ್ಳಿ ಹಾಕಿ ಕಂದು ಬಣ್ಣ ಬರುವ ತನಕ ಕರಿದು ತೆಗೆಯಿರಿ, ಅದೇ ಎಣ್ಣೆಯಲ್ಲಿ ಗೊಡಂಬಿ ಚೂರುಗಳನ್ನು ಕರಿದು ತೆಗೆದಿಡಿ. ಈಗ ಪ್ಯಾನ್‍ಗೆ ಸ್ವಲ್ಪ ಈರುಳ್ಳಿ, ಹಸಿಮೆಣಸಿನಕಾಯಿ, ಅರಿಶಿಣ ಮತ್ತು ಚಿಕನ್ ಹಾಕಿ ಚೆನ್ನಾಗಿ ಬಾಡಿಸಿ, ನಂತರ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಗರಂ ಮಸಾಲಾ, ಖಾರದ ಪುಡಿ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮಿಕ್ಸ್ ಮಾಡಿ. ಚಿಕನ್ ಅರ್ಧ ಬೆಂದ ನಂತರ ರುಬ್ಬಿದ ಟೊಮಾಟೋ, ಪುದೀನಾ, ಕೊತ್ತಂಬರಿಸೊಪ್ಪಿನ ಪೇಸ್ಟ್ ಸೇರಿಸಿ ಬೇಕಿದ್ದರೆ ಸ್ವಲ್ಪ ನೀರು ಸೇರಿಸಿ ಚೆನ್ನಾಗಿ ತಿರುವಿ, ಗ್ರೇವಿ ಗಟ್ಟಿಯಾಗುವ ತನಕ 10-15 ನಿಮಿಷ ಬೇಯಿಸಿ.

    3. ಒಂದು ದೊಡ್ಡ ಪಾತ್ರೆಯಲ್ಲಿ ತುಪ್ಪ ಬಿಸಿ ಮಾಡಿ ಮೊದಲಿಗೆ ಬೇಯಿಸಿದ್ದ ಅನ್ನ ಹಾಕಿ, ಅದರ ಮೇಲೆ ಚಿಕನ್ ಗ್ರೇವಿಯನ್ನು ಹರಡಿ, ನಂತರ ಕರಿದ ಈರುಳ್ಳಿ ಮತ್ತು ಗೊಡಂಬಿಯನ್ನು ಉದುರಿಸಿ. ಈ ರೀತಿ 3-4 ಲೇಯರ್‍ಗಳು ಒಂದರ ಮೇಲೊಂದು ಹರಡಿ, ಗಾಳಿಯಾಡದಂತೆ ಫಾಯಿಲ್ ಪೇಪರ್(ಅಲುಮಿನಿಯಮ್ ಫಾಯಿಲ್ ಪೇಪರ್) ಅಥವಾ ಒಂದು ತಟ್ಟೆಯಿಂದ ಮುಚ್ಚಿ ಸ್ಟವ್ ಆಫ್ ಮಾಡಿ ಹಬೆಯಲ್ಲೇ ಬೇಯಲು ಬಿಡಿ. 10 ನಿಮಿಷಗಳ ನಂತರ ಮುಚ್ಚಳವನ್ನು ತೆಗೆದು ಸೌತೇಕಾಯಿಯ ರಾಯ್ತಾದೊಂದಿಗೆ ಸವಿಯಲು ಕೊಡಿ.

    ಗಮನಿಸಿ: ಅರಿಶಿಣದ ಬದಲಿಗೆ ಹಾಲಿನಲ್ಲಿ ನೆನೆಸಿದ ಕೇಸರಿಯನ್ನು ಹಾಕಿದರೆ ಇನ್ನೂ ರುಚಿ ಹೆಚ್ಚು.