Tag: ಚಿಕನ್ ನೂಡಲ್ ಸೂಪ್

  • 15 ನಿಮಿಷದಲ್ಲಿ ಮಾಡೋ ಚಿಕನ್ ನೂಡಲ್ ಸೂಪ್ ರೆಸಿಪಿ

    15 ನಿಮಿಷದಲ್ಲಿ ಮಾಡೋ ಚಿಕನ್ ನೂಡಲ್ ಸೂಪ್ ರೆಸಿಪಿ

    ಧ್ಯಾಹ್ನದ ಊಟ ಹಾಗೂ ರಾತ್ರಿಯ ಊಟದ ನಡುವೆ ತುಂಬಾ ಸಮಯದ ಅಂತರವಿರುತ್ತದೆ. ಸಂಜೆ ಒಂದಿಷ್ಟು ಸ್ನ್ಯಾಕ್ಸ್ ಹೊಟ್ಟೆಗೆ ಹೋದರೂ ಕೊಂಚ ಹಸಿವು ಖಂಡಿತಾ ಆಗುತ್ತದೆ. ಈ ಸಣ್ಣ ಹಸಿವನ್ನು ತಣಿಸಲು ನಾವಿಂದು ಫಟಾಫಟ್ ಅಂತ ಮಾಡಬಹುದಾದ ಸಿಂಪಲ್ ಚಿಕನ್ ನೂಡಲ್ ಸೂಪ್ ರೆಸಿಪಿಯನ್ನು ನಿಮಗೆ ಹೇಳಿಕೊಡಲಿದ್ದೇವೆ. ಹಾಗಿದ್ರೆ ಹಸಿವು ಎನಿಸಿದಾಗ ಚಿಕನ್ ನೂಡಲ್ ಸೂಪ್ ಅನ್ನು ನೀವು ಕೂಡಾ ಟ್ರೈ ಮಾಡಿ.

    ಬೇಕಾಗುವ ಪದಾರ್ಥಗಳು:
    ಚಿಕನ್ ಸ್ಟಾಕ್ – 3 ಕಪ್
    ನೂಡಲ್ಸ್ – 400 ಗ್ರಾಂ
    ಮೂಳೆಗಳಿಲ್ಲದ ಬೇಯಿಸಿದ ಚಿಕನ್ – 250 ಗ್ರಾಂ
    ಸಿಪ್ಪೆ ಸುಲಿದು ಅರ್ಧಕ್ಕೆ ಹೆಚ್ಚಿಕೊಂಡ ಈರುಳ್ಳಿ – 1
    ಸೆಲರಿ – 2 ಕಾಂಡಗಳು
    ಉಪ್ಪು – ರುಚಿಗೆ ತಕ್ಕಷ್ಟು
    ಕರಿಮೆಣಸಿನಪುಡಿ -ಸ್ವಾದಕ್ಕನುಸಾರ ಇದನ್ನೂ ಓದಿ: ಸ್ನ್ಯಾಕ್ಸ್‌ಗೆ ಬೆಸ್ಟ್ ಗ್ರೀನ್ ಟೊಮೆಟೋ ಫ್ರೈಸ್

    ಮಾಡುವ ವಿಧಾನ:
    * ಮೊದಲಿಗೆ ಒಂದು ಪಾತ್ರೆಯಲ್ಲಿ ಚಿಕನ್ ಸ್ಟಾಕ್ ಹಾಕಿ, ಅದಕ್ಕೆ ಈರುಳ್ಳಿ ಮತ್ತು ಸೆಲರಿ ಸೇರಿಸಿ ಹೆಚ್ಚಿನ ಉರಿಯಲ್ಲಿ ಕುದಿಸಿ.
    * ಚಿಕನ್ ಅನ್ನು ಚೂರುಗಳಾಗಿ ಕತ್ತರಿಸಿ, ಚಿಕನ್ ಸ್ಟಾಕ್ ಕುದಿ ಬಂದ ಬಳಿಕ ಅದಕ್ಕೆ ಸೇರಿಸಿ.
    * ಬಳಿಕ ನೂಡಲ್ಸ್ ಅನ್ನು ಸೇರಿಸಿ 8 ನಿಮಿಷ ಬೇಯಿಸಿಕೊಳ್ಳಿ.
    * ಈಗ ಒಂದು ಸ್ಪೂನ್ ಸಹಾಯದಿಂದ ಈರುಳ್ಳಿ ಹಾಗೂ ಸೆಲರಿಯನ್ನು ತೆಗೆದು ಹಾಕಿ.
    * ಉಪ್ಪು ಹಾಗೂ ಮೆಣಸಿನಪುಡಿಯನ್ನು ಸೇರಿಸಿ, ಮಿಶ್ರಣ ಮಾಡಿ 1-2 ನಿಮಿಷ ಕಡಿಮೆ ಉರಿಯಲ್ಲಿ ಬೇಯಿಸಿ.
    * ಇದೀಗ ಚಿಕನ್ ನೂಡಲ್ ಸೂಪ್ ತಯಾರಾಗಿದ್ದು, ಬೌಲ್‌ಗಳಲ್ಲಿ ಬಡಿಸಿ, ಬಿಸಿಬಿಸಿಯಾಗಿ ಸವಿಯಿರಿ. ಇದನ್ನೂ ಓದಿ: ಟೇಸ್ಟಿ ಆಲೂ ಪಾಲಕ್ ಕಟ್ಲೆಟ್ ಟ್ರೈ ಮಾಡಿ ನೋಡಿ..!

  • ಫಟಾಫಟ್ ಅಂತ ಮಾಡಬಹುದಾದ ಚಿಕನ್ ನೂಡಲ್ ಸೂಪ್ ರೆಸಿಪಿ

    ಫಟಾಫಟ್ ಅಂತ ಮಾಡಬಹುದಾದ ಚಿಕನ್ ನೂಡಲ್ ಸೂಪ್ ರೆಸಿಪಿ

    ಸೂಪ್ ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು. ಅದರಲ್ಲೂ ಚಿಕನ್ ಸೂಪ್ ಎಂದರೆ ಎಂತಹವರ ಬಾಯಲ್ಲೂ ನೀರೂರುತ್ತದೆ. ಇಂದು ನಾವು ನೂಡಲ್ಸ್ ಕಾಂಬಿನೇಶನ್‌ನೊಂದಿಗೆ ಚಿಕನ್ ಸೂಪ್ ಹೇಗೆ ಮಾಡುವುದು ಎಂದು ಹೇಳಿಕೊಡುತ್ತೇವೆ. ರುಚಿಕರವಾದ ಚಿಕನ್ ನೂಡಲ್ ಸೂಪ್ (Chicken Noodle Soup) ಅನ್ನು ಒಮ್ಮೆ ನೀವು ಕೂಡಾ ಟ್ರೈ ಮಾಡಿ.

    ಬೇಕಾಗುವ ಪದಾರ್ಥಗಳು:
    ಚಿಕನ್ ಅಥವಾ ತರಕಾರಿ ಸ್ಟಾಕ್ – 900 ಎಂಎಲ್
    ಚಿಕನ್ ಬ್ರೆಸ್ಟ್ – 200 ಗ್ರಾಂ
    ಸಣ್ಣಗೆ ಹೆಚ್ಚಿದ ಶುಂಠಿ – 1 ಟೀಸ್ಪೂನ್
    ಸಣ್ಣಗೆ ಹೆಚ್ಚಿದ ಬೆಳ್ಳುಳ್ಳಿ – 1
    ಅಕ್ಕಿ ಅಥವಾ ಗೋಧಿ ನೂಡಲ್ಸ್ – 50 ಗ್ರಾಂ
    ಸ್ವೀಟ್ ಕಾರ್ನ್ – 2 ಟೀಸ್ಪೂನ್
    ಸಣ್ಣಗೆ ಕತ್ತರಿಸಿದ ಮಶ್ರೂಮ್ – 2-3
    ಸ್ಪ್ರಿಂಗ್ ಆನಿಯನ್ – 2
    ಸೋಯಾ ಸಾಸ್ – 2 ಟೀಸ್ಪೂನ್
    ಸಣ್ಣಗೆ ಹೆಚ್ಚಿದ ಪುದೀನ – 2 ಟೀಸ್ಪೂನ್ ಇದನ್ನೂ ಓದಿ: ಸಖತ್ ಟೇಸ್ಟಿ ಆಗಿರುತ್ತೆ ಚಿಕನ್ ಸ್ಟೀಮ್ಡ್ ಮೊಮೊಸ್ – ಒಮ್ಮೆ ಮಾಡಿ ನೋಡಿ

    ಮಾಡುವ ವಿಧಾನ:
    * ಮೊದಲಿಗೆ ಬಾಣಲೆಯಲ್ಲಿ ಚಿಕನ್ ಅಥವಾ ತರಕಾರಿ ಸ್ಟಾಕ್ ಅನ್ನು ಹಾಕಿ, ಕುದಿಸಿ.
    * ಚಿಕನ್ ಬ್ರೆಸ್ಟ್ ಅನ್ನು ಬಾಣಲೆಗೆ ಹಾಕಿ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ.
    * ಶುಂಠಿ ಹಾಗೂ ಬೆಳ್ಳುಳ್ಳಿಯನ್ನು ಸೇರಿಸಿ, ಚಿಕನ್ ಚೆನ್ನಾಗಿ ಬೇಯುವವರೆಗೆ 20 ನಿಮಿಷಗಳ ಕಾಲ ಕುದಿಸಿ.
    * ಈಗ ಬೆಂದ ಚಿಕನ್ ಬ್ರೆಸ್ಟ್ ಅನ್ನು ತೆಗೆದು, ಸಣ್ಣಗೆ ಹಾಗೂ ಉದ್ದಕ್ಕೆ ಚೂರುಗಳನ್ನಾಗಿ ಮಾಡಿ.

    * ಈಗ ಚೂರು ಮಾಡಿದ ಚಿಕನ್, ನೂಡಲ್ಸ್, ಸ್ವೀಟ್ ಕಾರ್ನ್, ಮಶ್ರೂಮ್, ಸ್ಪ್ರಿಂಗ್ ಆನಿಯನ್ ಹಾಗೂ ಸೋಯಾ ಸಾಸ್ ಅನ್ನು ಸ್ಟಾಕ್‌ಗೆ ಹಾಕಿ 3-4 ನಿಮಿಷಗಳ ವರೆಗೆ ಕುದಿಸಿ.
    * ಇದೀಗ ಚಿಕನ್ ನೂಡಲ್ ಸೂಪ್ ತಯಾರಾಗಿದ್ದು, ಪುದೀನ ಎಲೆಗಳನ್ನು ಹಾಕಿ, ಬೌಲ್‌ಗಳಿಗೆ ಸರ್ವ್ ಮಾಡಿ. ಇದನ್ನೂ ಓದಿ: ಮಸಾಲೆಯುಕ್ತ ಕುಶ್ಕಾ ರೈಸ್ ಮಾಡುವ ಸರಳ ವಿಧಾನ

    Live Tv
    [brid partner=56869869 player=32851 video=960834 autoplay=true]