Tag: ಚಿಂತಾಮಣಿ

  • ನಗರಸಭಾ ಸದಸ್ಯನ ಹತ್ಯೆಗೆ ಯತ್ನ – ಮೂವರು ವಶಕ್ಕೆ

    ನಗರಸಭಾ ಸದಸ್ಯನ ಹತ್ಯೆಗೆ ಯತ್ನ – ಮೂವರು ವಶಕ್ಕೆ

    ಚಿಕ್ಕಬಳ್ಳಾಪುರ: ಚಿಂತಾಮಣಿಯ (Chintamani) ನಗರಸಭಾ ಸದಸ್ಯನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದ ಮೂವರು ಆರೋಪಿಗಳನ್ನು ಪೊಲೀಸರು (Police) ವಶಕ್ಕೆ ಪಡೆದಿದ್ದಾರೆ.

    ಪೊಲೀಸರು ವಶಕ್ಕೆ ಪಡೆದ ಆರೋಪಿಗಳನ್ನು ಜಾನ್, ದಿನೇಶ್ ಹಾಗೂ ಅರುಣ್ ಎಂದು ಗುರುತಿಸಲಾಗಿದೆ. ಅ.13 ರಂದು ಆರೋಪಿಗಳು ಆಗ್ರಹಾರ ಮುರುಳಿ ಎಂಬವರ ಮೇಲೆ ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ ನಡೆಸಿ ಹತ್ಯೆಗೆ ಯತ್ನಿಸಿದ್ದರು. ಬಳಿಕ ತೀವ್ರ ಗಾಯಗೊಂಡಿದ್ದ ನಗರಸಭಾ ಸದಸ್ಯನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸದ್ಯ ಪ್ರಾಣಾಪಾಯದಿಂದ ಪಾರಾಗಿರುವ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದನ್ನೂ ಓದಿ: ತರಬೇತಿ ವಿಮಾನ ಪತನ – ಇಬ್ಬರೂ ಪೈಲಟ್ ಗಂಭೀರ

    ಇದೇ ವಿಚಾರವಾಗಿ ಚಿಂತಾಮಣಿ ನಗರ ಬಂದ್ ಸಹ ಮಾಡಲಾಗಿತ್ತು. ಈಗ ಪೊಲೀಸರು ಮೂವರನ್ನ ವಶಕ್ಕೆ ಪಡೆದಿದ್ದು ವಿಚಾರಣೆ ನಡೆಸುತ್ತಿದ್ದಾರೆ. ವಿಚಾರಣೆ ಬಳಿಕವಷ್ಟೇ ಹತ್ಯೆ ಯತ್ನಕ್ಕೆ ಕಾರಣ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಬೊಮ್ಮಾಯಿಗೆ ಕರೆ ಮಾಡಿ ಆರೋಗ್ಯ ವಿಚಾರಿಸಿದ ಮೋದಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮದ್ಯವ್ಯಸನ ಮುಕ್ತ ಕೇಂದ್ರಕ್ಕೆ ಸೇರಿದ ಯುವಕ 5 ದಿನಕ್ಕೆ ಸಾವು

    ಮದ್ಯವ್ಯಸನ ಮುಕ್ತ ಕೇಂದ್ರಕ್ಕೆ ಸೇರಿದ ಯುವಕ 5 ದಿನಕ್ಕೆ ಸಾವು

    ಚಿಕ್ಕಬಳ್ಳಾಪುರ: ಮದ್ಯವ್ಯಸನ ಮುಕ್ತ ಕೇಂದ್ರಕ್ಕೆ ಸೇರಿದ ಯುವಕನೋರ್ವ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ (Chikkaballapur) ಜಿಲ್ಲೆಯ ಚಿಂತಾಮಣಿಯಲ್ಲಿ (Chintamani) ನಡೆದಿದೆ.

    ಚಿಂತಾಮಣಿ ತಾಲೂಕಿನ ಬುಡಗವಾರಹಳ್ಳಿ ಬಳಿಯ ಮದ್ಯವ್ಯಸನ ಮುಕ್ತ ಹಾಗೂ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರದಲ್ಲಿ ಈ ಘಟನೆ ನಡೆದಿದೆ. ಶ್ರೀನಿವಾಸಪುರದ ಮಂಜುನಾಥ್ (21) ಮೃತ ಯುವಕ.

    ಗಾಂಜಾ ವ್ಯಸನಿಯಾಗಿದ್ದ ಮಂಜುನಾಥ್‌ನನ್ನು ಮದ್ಯವ್ಯಸನ ಕೇಂದ್ರಕ್ಕೆ ಸೇರಿಸಿ ಕೇವಲ 5 ದಿನಗಳಾಗಿತ್ತು. ಆದರೆ ಯುವಕನ ಹಠಾತ್ ಸಾವಿನ ಹಿಂದೆ ಹಲವು ಅನುಮಾನಗಳು ಮೂಡಿವೆ. ಇದನ್ನೂ ಓದಿ: ಕದ್ದು ತಂದಿದ್ದ ಜೆಸಿಬಿ ಬಳಸಿ ATM ಕಳ್ಳತನಕ್ಕೆ ಯತ್ನ

    ಯುವಕನ ಮೃತದೇಹದ ಮೇಲೆ ಹಲ್ಲೆ ಮಾಡಿರುವ ಗುರುತುಗಳು ಇವೆ ಎನ್ನಲಾಗಿದ್ದು, ಇದು ಕೊಲೆ ಎಂದು ಮೃತನ ಪೋಷಕರು ಹಾಗೂ ಸಂಬಂಧಿಕರು ಆಕ್ರೋಶ ಹೊರಹಾಕಿದ್ದಾರೆ. ಈ ಸಂಬಂಧ ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದನ್ನೂ ಓದಿ: ಕೌಟುಂಬಿಕ ಕಲಹ ಸರಿ ಮಾಡ್ತೀನಿ ಅಂತ ಬಂದ ಜ್ಯೋತಿಷಿ – ಚಿನ್ನ, ಹಣ ದೋಚಿ ಬೀರುವಿನಲ್ಲಿ ನಿಂಬೆಹಣ್ಣು ಇಟ್ಟು ಹೋದ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪತ್ನಿಯ ಜೊತೆ ಅಕ್ರಮ ಸಂಬಂಧ – ಪ್ರಿಯಕರನ ಕತ್ತು ಸೀಳಿ ರಕ್ತ ಕುಡಿದ ಗಂಡ

    ಪತ್ನಿಯ ಜೊತೆ ಅಕ್ರಮ ಸಂಬಂಧ – ಪ್ರಿಯಕರನ ಕತ್ತು ಸೀಳಿ ರಕ್ತ ಕುಡಿದ ಗಂಡ

    ಚಿಕ್ಕಬಳ್ಳಾಪುರ: ತನ್ನ ಪತ್ನಿಯ ಜೊತೆ ಅಕ್ರಮ ಸಂಬಂಧ (Illicit Relationship) ಹಿನ್ನೆಲೆ ಪ್ರಿಯಕರನ ಕತ್ತು ಸೀಳಿ ಆಕೆಯ ಪತಿ ರಕ್ತ ಕುಡಿದಿರುವ ಘಟನೆ ಚಿಕ್ಕಬಳ್ಳಾಪುರ (Chikkaballapura) ಜಿಲ್ಲೆಯ ಚಿಂತಾಮಣಿ (Chintamani) ತಾಲೂಕಿನ ಸಿದ್ದೇಪಲ್ಲಿ ಕ್ರಾಸ್ ಬಳಿ ನಡೆದಿದೆ.

    ಚಿಂತಾಮಣಿ ತಾಲೂಕಿನ ಬಟ್ಲಪಲ್ಲಿ ನಿವಾಸಿ ವಿಜಯ್ ತನ್ನ ಪತ್ನಿಯ ಪ್ರಿಯಕರನಾದ ಬಾಗೇಪಲ್ಲಿ ತಾಲೂಕು ಮಂಡಂಪಲ್ಲಿ ನಿವಾಸಿ ಮಾರೇಶ್ ಎಂಬಾತನ ಕತ್ತು ಸೀಳಿ ರಕ್ತ ಹೀರಿದ್ದಾನೆ. ಅಸಲಿಗೆ ವಿಜಯ್ ಹಾಗೂ ಮಾರೇಶ್ ಇಬ್ಬರು ಚಿಂತಾಮಣಿ ನಗರದಲ್ಲಿ ವಾಸವಾಗಿದ್ದು, ಇಬ್ಬರೂ ಸಹ ಟಾಟಾ ಏಸ್ (Tata Ace) ವಾಹನದಲ್ಲಿ ಬಟ್ಟೆ ವ್ಯಾಪಾರ ಮಾಡಿಕೊಳ್ಳುವ ಕೆಲಸ ಮಾಡುತ್ತಿದ್ದರು. ಆದರೆ ತನ್ನ ಹೆಂಡತಿ ಮಾಲಾ ಜೊತೆ ಮಾರೇಶ್ ಅನೈತಿಕ ಸಂಬಂಧ ಹೊಂದಿದ್ದಾನೆ ಎಂದು ಅನುಮಾನಗೊಂಡ ವಿಜಯ್, ಮಾರೇಶ್‌ನನ್ನು ಕೊಲೆ ಮಾಡುವ ಉದ್ದೇಶದಿಂದ ಟಾಟಾ ಏಸ್ ಗಾಡಿ ತೆಗೆದುಕೊಂಡು ಬಾ ಬಾಡಿಗೆ ಇದೆ, ಹೋಗಿ ಬರೋಣ ಎಂದು ಕರೆದುಕೊಂಡು ಹೋಗಿ ಸಿದ್ದೇಪಲ್ಲಿ ಕ್ರಾಸ್ ಬಳಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಕೃತ್ಯ ನಡೆಸಿದ್ದಾನೆ. ಇದನ್ನೂ ಓದಿ: ಮಗಳಿಗೆ ವಿಚ್ಛೇದನ ಕೊಡಲು ಪ್ರೋತ್ಸಾಹಿಸಿದ ಅತ್ತೆಯನ್ನೇ ಹತ್ಯೆಗೈದ ಅಳಿಯ

    ವಿಜಯ್ ಚಾಕುವಿನಿಂದ ಮಾರೇಶ್ ಕತ್ತು ಸೀಳಿದ್ದು, ರಕ್ತ ಹೊರಚಿಮ್ಮಿದಾಗ ಅದನ್ನು ಕುಡಿದು ತನ್ನ ಕೋಪ ಪ್ರತಾಪ ತೀರಿಸಿಕೊಂಡಿದ್ದಾನೆ. ಈ ಘಟನೆ ಜೂನ್ 19ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ವಿಜಯ್ ಜೊತೆ ಇದ್ದ ಸ್ನೇಹಿತ ಈ ಕತ್ತು ಸೀಳಿ ರಕ್ತ ಕುಡಿಯುವ ವಿಡಿಯೋವನ್ನು ತನ್ನ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾನೆ. ಇದನ್ನೂ ಓದಿ: ಬೆಳೆಗೆರೆ ಲಕ್ಷ್ಮಿರಂಗನಾಥಸ್ವಾಮಿ ದೇಗುಲಕ್ಕೆ ಕನ್ನ – ಬೀಗ ಮುರಿದು ದೇವರ ಆಭರಣ ಕದ್ದ ಖದೀಮರು

    ಘಟನೆ ನಡೆದ ದಿನ ವಿಷಯ ತಿಳಿದ ವಿಜಯ್ ಸಹೋದರ ಹಲ್ಲೆಗೊಳಗಾದ ಮಾರೇಶ್‌ನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದು, ರಾಜಿ ಪಂಚಾಯಿತಿ ಮಾಡಿಕೊಳ್ಳಲು ಮುಂದಾಗಿದ್ದರು. ಆದರೆ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ (Social Media) ವೈರಲ್ ಆದ ನಂತರ ಪೊಲೀಸರ ಗಮನಕ್ಕೂ ಬಂದಿದ್ದು, ವಿಚಾರಣೆ ನಡೆಸಿದಾಗ ಆರೋಪಿಗಳ ಗುರುತು ಪತ್ತೆಯಾಗಿದೆ. ತದನಂದರ ಮಾರೇಶ್ ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ದೂರಿನನ್ವಯ ವಿಜಯ್‌ನನ್ನು ಪೊಲೀಸರು ಬಂಧಿಸಿದ್ದಾರೆ.

    ಪ್ರಕರಣದ ಮತ್ತೋರ್ವ ಆರೋಪಿಯಾದ ಜಾನ್ ಎಂಬಾತನನ್ನೂ ಕೆಂಚಾರ್ಲಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಈತ ಈ ದುಷ್ಕೃತ್ಯ ಮಾಡಲು ವಿಜಯ್‌ಗೆ ಸಹಕಾರ ನೀಡಿದ್ದಲ್ಲದೇ ಆತ ಕತ್ತು ಸೀಳಿ ರಕ್ತ ಕುಡಿಯುತ್ತಿರುವ ವಿಡಿಯೋವನ್ನು ತನ್ನ ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದ. ಇದನ್ನೂ ಓದಿ: ಸ್ನೇಹಿತರ ಜೊತೆ ಪಾರ್ಟಿ ವೇಳೆ ಗಲಾಟೆ – ಬೆಂಗಳೂರಲ್ಲಿ ಯುವಕನ ಬರ್ಬರ ಹತ್ಯೆ

  • ಚಿಂತಾಮಣಿಯಲ್ಲಿ ಭೂಕಂಪನದ ಅನುಭವ- ಭಯಭೀತರಾದ ಜನ

    ಚಿಂತಾಮಣಿಯಲ್ಲಿ ಭೂಕಂಪನದ ಅನುಭವ- ಭಯಭೀತರಾದ ಜನ

    ಚಿಕ್ಕಬಳ್ಳಾಪುರ: ಜಿಲ್ಲೆಯ ಚಿಂತಾಮಣಿ ತಾಲೂಕಿನ ಮಿಟ್ಟಹಳ್ಳಿ ಸೇರಿ ಹತ್ತು ಹಲವು ಗ್ರಾಮಗಳಲ್ಲಿ ಕಳೆದ ರಾತ್ರಿ ಭೂಕಂಪನದ ಅನುಭವ ಆಗಿದ್ದು, ಜನ ಭಯಭೀತರಾಗಿದ್ದಾರೆ.

    ಕಳೆದ ರಾತ್ರಿ 08 ಗಂಟೆ 50 ನಿಮಿಷ ಸುಮಾರಿಗೆ ಭೂಮಿ ಕಂಪಿಸಿದೆ. ಜೋರು ಶಬ್ದ ಕೇಳಿಬಂದಿದ್ದು ಎರಡು ಬಾರಿ ಭೂಕಂಪನದ ಅನುಭವ ಆಗಿದೆ. ಮನೆಗಳಲ್ಲಿದ್ದ ಪಾತ್ರೆ, ವಸ್ತುಗಳು ಕೆಳಗೆ ಬಿದ್ದಿವೆ. ಇದರಿಂದ ಜನ ಆತಂಕಕ್ಕೊಳಗಾಗಿ ಮನೆಯಿಂದ ಹೊರ ಬಂದಿದ್ದಾರೆ. ರಾತ್ರಿ ಮನೆಯೊಳಗೆ ಮಲಗೋಕು ಜನ ಹೆದರುವಂತಾಗಿ ಬೀದಿಯಲ್ಲೇ ಕಾಲ ಕಳೆದಿದ್ದಾರೆ.

    ಯಾವ ಗ್ರಾಮಗಳಲ್ಲಿ ಅನುಭವ:
    ಮಿಟ್ಟಹಳ್ಳಿ, ನಂದನವನ, ಅಪ್ಪಸಾನಹಳ್ಳಿ, ಆಗ್ರಹಾರಹಳ್ಳಿ, ಗೋನೇನಹಳ್ಳಿ, ವೆಂಕಟರೆಡ್ಡಿಪಾಳ್ಯ, ಕೊಮ್ಮೇಪಲ್ಲಿ ಗ್ರಾಮಗಳಲ್ಲಿ ಭೂಕಂಪನದ ಅನುಭವವಾಗಿದೆ. ಇದನ್ನೂ ಓದಿ: ಕೇರಳ ಪೊಲೀಸರಿಂದ ಶೃಂಗೇರಿ ಮೂಲದ ನಕ್ಸಲರ ಬಂಧನ

    ಅಧಿಕಾರಿಗಳ ಭೇಟಿ:
    ಈ ವಿಷಯ ತಿಳಿದು ಗ್ರಾಮಗಳಿಗೆ ಕೆಂಚಾರ್ಲಹಳ್ಳಿ ಪೊಲೀಸರು ಹಾಗೂ ಚಿಂತಾಮಣಿ ತಹಶೀಲ್ದಾರ್ ಹನುಮಂತರಾಯಪ್ಪ ಹಾಗೂ ಗಣಿ ಹಾಗೂ ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಅಲ್ಲದೆ ಜನರಿಗೆ ಧೈರ್ಯ ತುಂಬಿ ಅತಂಕ ದೂರ ಸರಿಸುವ ಕೆಲಸ ಮಾಡಿದ್ರು. ಭೂಕಂಪನದ ಭಯದಿಂದ ಮನೆಯಿಂದ ಹೊರಗೆ ಇದ್ದ ಜನ ಮನೆಯೊಳಗೆ ಮಲಗೋಕೆ ಹೆದರುತ್ತಿದ್ರು. ಅಧಿಕಾರಿಗಳ ಅಭಯದಿಂದ ಮುಂಜಾನೆ ನಿದ್ದೆಗೆ ಜಾರಿದ್ದಾರೆ.

    ಮತ್ತೆ ಭೂಮಿ ಕಂಪಿಸಿದ ಅನುಭವ:
    ಅಧಿಕಾರಿಗಳ ಅಭಯದಿಂದ ಮುಂಜಾನೆ ಮಲಗಿದ್ದವರಿಗೆ ಮತ್ತೆ ಭೂಮಿ ಕಂಪಿಸಿದ ಅನುಭವ ಆಗಿ ನಿದ್ದೆಯಿಂದ ಎದ್ದು ಕೂತಿದ್ದಾರೆ. ಈಗಲೂ ಗ್ರಾಮದ ಜನರಲ್ಲಿ ಭೀತಿ ಮುಂದುವರೆದಿದ್ದು..11 ಗಂಟೆಗೆ ಭೂ ಕಂಪನದ ನಿಖರ ವರದಿ ಬರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸದ್ಯ ಕೆಲ ಮನೆಗಳು ಬಿರುಕು ಸಹ ಬಿಟ್ಟಿವೆ. ಜನರ ಆತಂಕ ಮುಂದುವರಿದಿದೆ.

  • ಆಟವಾಡ್ತಿದ್ದಾಗ ಕಾರು ಹರಿದು ಬಾಲಕ ದಾರುಣ ಸಾವು

    ಆಟವಾಡ್ತಿದ್ದಾಗ ಕಾರು ಹರಿದು ಬಾಲಕ ದಾರುಣ ಸಾವು

    ಚಿಕ್ಕಬಳ್ಳಾಪುರ: ಮನೆಯ ಮುಂದೆ ಆಟವಾಡುತ್ತಿದ್ದ ಮಗುವಿನ ಮೇಲೆ ಕಾರು ಹರಿದು, ದಾರುಣವಾಗಿ ಸಾವನ್ನಪ್ಪಿರುವ ಮನಕಲುಕುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರದ ಟ್ಯಾಂಕ್ ಬಂಡ್ ರಸ್ತೆಯಲ್ಲಿ ನಡೆದಿದೆ.

    ವೆಂಕಟೇಶ್ವರಲು-ಮೊನಿಷಾ ದಂಪತಿಯ ಗಿತಿಕ್(4) ಮೃತ ದುರ್ದೈವಿ ಮಗು. ಮಗುವಿನ ಮೇಲೆ ಕಾರು ಹರಿದ ದೃಶ್ಯ ಪಕ್ಕದ ಮನೆಯವರ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

    ಗಿತಿಕ್ ಹಾಗೂ ಅಣ್ಣ ಸೋಹನ್ ಇಬ್ಬರೂ ಮನೆಯ ಮುಂದೆ ಇದ್ದ ಫೀಲ್ಡ್ ನಲ್ಲಿ ಆಟ ಆಡಲು ಹೋಗಿದ್ದು ವಾಪಾಸ್ ಬರುವಾಗ ಅಣ್ಣ ಸೈಕಲ್ ತುಳಿಯುತ್ತಿದ್ದರೆ, ತಮ್ಮ ಗಿತಿಕ್ ತಿರುವಿನಲ್ಲಿನ ನಡುರಸ್ತೆಯಲ್ಲಿ ಕೂತು ಏನೋ ಮಾಡ್ತಿದ್ದ. ಇದನ್ನೂ ಓದಿ: ವಿಕೃತಕಾಮಿ ಉಮೇಶ್ ರೆಡ್ಡಿಗೆ ಗಲ್ಲು ಶಿಕ್ಷೆ ಪ್ರಕಟಿಸಿದ ಹೈಕೋರ್ಟ್

    ಇದೇ ವೇಳೆ ಮನೆಗಳ ಕಡೆಯಿಂದ ಪ್ರಮುಖ ರಸ್ತೆಯತ್ತ ಫೋರ್ಡೋ ಕಾರು ಬಂದಿದೆ. ರಸ್ತೆಯಲ್ಲಿ ತಿರುವು ಇದ್ದುದರಿಂದ ಮಗು ಇರೋದನ್ನ ಗಮನಿಸಿದ ಕಾರು ಚಾಲಕ, ಏಕಾಏಕಿ ಮಗು ಮೇಲೆ ಕಾರು ಹರಿಸಿದ್ದಾರೆ. ನಂತರ ಕಾರು ಯಾಕೆ ಮುಂದೆ ಹೋಗ್ತಿಲ್ಲ ಅಂತ ಚಾಲಕ ಕೂಡಲೇ ಕೆಳಗಿಳಿದು ನೋಡಿದಾಗ ಚಕ್ರದಡಿ ಮಗು ಸಿಲುಕಿರುವುದು ಬೆಳಕಿಗೆ ಬಂದಿದೆ.

    ತಕ್ಷಣ ಸ್ಥಳೀಯರೆಲ್ಲರೂ ಸೇರಿ ಮಗುವನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆಸ್ಪತ್ರೆಗೆ ಹೋಗಿ ಪ್ರಾಥಮಿಕ ಚಿಕಿತ್ಸೆ ನೀಡುವಷ್ಟರಲ್ಲಿ ಮಗು ಮೃತಪಟ್ಟಿದೆ. ಮಗುವಿನ ತಲೆ, ಮೂಗು, ಕೈ, ಕಾಲು ಹಾಗೂ ಎದೆ ಭಾಗದಲ್ಲಿ ಗಾಯಗಳಾಗಿ ರಕ್ತಸ್ರಾವವಾಗಿದೆ. ಮಗು ಮೃತಪಟ್ಟ ವಿಷಯ ತಿಳಿದ ಕಾರು ಚಾಲಕ ಕಾರು ಸಮೇತ ಎಸ್ಕೇಪ್ ಆಗಿದ್ದಾನೆ. ಇದನ್ನೂ ಓದಿ: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರ – ಶಿವನ ಭಕ್ತನಾಗಿದ್ದ ಗಾಂಜಾ ಆರೋಪಿ

    ಇತ್ತ ವಿಷಯ ತಿಳಿದು ಆಸ್ಪತ್ರೆಗೆ ಆಗಮಿಸಿದ ಚಿಂತಾಮಣಿ ನಗರ ಠಾಣೆ ಸಿಪಿಯ ರಂಗರಾಮಯ್ಯ, ಮೃತದೇಹವನ್ನ ಸರ್ಕಾರಿ ಆಸ್ಪತ್ರೆಯ ಶವಗಾರಕ್ಕೆ ರವಾನಿಸಿ ಮರಣೋತ್ತರ ಪರೀಕ್ಷೆಗೆ ನಡೆಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ. ಕಾರಿನ ನಂಬರ್ ಆಧರಿಸಿ ಕಾರು ಆಂಧ್ರ ಮೂಲದ ಮದನಪಲ್ಲಿಯವರದ್ದು ಅಂತ ತಿಳಿದು ಬಂದಿದ್ದು, ಕಾರಿನ ಚಾಲಕನಿಗಾಗಿ ಹುಡುಕಾಟ ನಡೆಸಿದ್ದಾರೆ. ಇತ್ತ ಮಗು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ.

    ಈ ಸಂಬಂಧ ಚಿಂತಾಮಣಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಸುಳ್ಯದಲ್ಲಿ ಯುವತಿಯ ಅತ್ಯಾಚಾರಕ್ಕೆ ಯತ್ನ- ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ ಸ್ಥಳೀಯರು

  • ಪತ್ನಿ ಜೊತೆಗಿನ ಅನೈತಿಕ ಸಂಬಂಧ ಪ್ರಶ್ನೆ ಮಾಡಿದ್ದಕ್ಕೆ ಹತ್ಯೆ- ಆರೋಪಿ ಅರೆಸ್ಟ್

    ಪತ್ನಿ ಜೊತೆಗಿನ ಅನೈತಿಕ ಸಂಬಂಧ ಪ್ರಶ್ನೆ ಮಾಡಿದ್ದಕ್ಕೆ ಹತ್ಯೆ- ಆರೋಪಿ ಅರೆಸ್ಟ್

    ಚಿಕ್ಕಬಳ್ಳಾಪುರ: ಜಿಲ್ಲೆಯ ಚಿಂತಾಮಣಿ ನಗರದ ಆಜಾದ್ ಚೌಕ್‍ನಲ್ಲಿ ತಡರಾತ್ರಿ ನಡೆದ ಕೊಲೆ ಪ್ರಕರಣ ಸಂಬಂಧಪಟ್ಟಂತೆ ಆರೋಪಿ ನವೀದ್ ಎಂಬವನನ್ನು ಚಿಂತಾಮಣಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಚಿಂತಾಮಣಿ ನಗರದ ಆಗ್ರಹಾರ ನಿವಾಸಿ 35 ವರ್ಷದ ಸೈಯದ್ ಮುಸ್ತಾಕ್ ಎಂಬವರನ್ನ ಸೆ.13 ರ ರಾತ್ರಿ 8.30 ಗಂಟೆ ಸುಮಾರಿಗೆ ಕೊಲೆ ಮಾಡಲಾಗಿತ್ತು. ಜನವಸತಿ ಪ್ರದೇಶದಲ್ಲೇ ಚಾಕುವಿನಿಂದ ಎದೆ ಹಾಗೂ ಹೊಟ್ಟೆಗೆ ಇರಿದು ಯುವಕನೋರ್ವ ಕೊಲೆ ಮಾಡಿ ಪರಾರಿಯಾಗಿದ್ದ. ಆದರೆ ಆತ ಯಾರೆಂಬುದು ಸ್ಥಳೀಯರಿಗೆ ಗೊತ್ತಾಗಿರಲಿಲ್ಲ. ನವೀದ್ ಇರಬಹುದು ಅನ್ನೋ ಅನುಮಾನಗಳು ಇತ್ತು. ಇದನ್ನೂ ಓದಿ: ಮೊಬೈಲ್ ಟವರ್ ನಿರ್ಮಾಣಕ್ಕೆ ಸ್ಥಳೀಯರ ವಿರೋಧ – ನಿವೃತ್ತ ಪೊಲೀಸಪ್ಪ ಹೈಡ್ರಾಮಾ

    ಪೊಲೀಸರು ನವೀದ್ ಎಂಬ ಆಟೋ ಚಾಲಕನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ವಿಚಾರಣೆಯಲ್ಲಿ ನವೀದ್ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.  ಇದನ್ನೂ ಓದಿ:ಹಾಸ್ಯನಟ ರಾಜು ತಾಳಿಕೋಟೆ ವಿರುದ್ಧ ಹಲ್ಲೆ ಆರೋಪ

    ಕೊಲೆಗೆ ಕಾರಣ ಏನು..?

    ಮೃತ ಮುಸ್ತಾಕ್ ಪತ್ನಿ ಜೊತೆ ನವೀದ್ ಅನೈತಿಕ ಸಂಬಂಧ ಹೊಂದಿದ್ದ ಎನ್ನಲಾಗಿದ್ದು, ಈ ಬಗ್ಗೆ ಸ್ಥಳೀಯರು ಮುಸ್ತಾಕ್ ಗೆ ಕುಹಕ ಮಾಡುತ್ತಿದ್ದರಂತೆ. ಇದರಿಂದ ಕೆರಳಿದ ಮುಸ್ತಾಕ್, ನವೀದ್ ಗೆ ಕರೆ ಮಾಡಿ ಮಾತಾಡಬೇಕು ಬಾ ಅಂತ ಕರೆಸಿಕೊಂಡಿದ್ದ ಎಂದು ತಿಳಿದುಬಂದಿದೆ. ಈ ವೇಳೆ ಮಾತಿಗೆ ಮಾತು ಬೆಳೆದು ಮೊದಲೇ ಚಾಕು ತಂದಿದ್ದ ನವೀದ್, ಮುಸ್ತಾಕ್ ಗೆ ಇರಿದು ಕೊಲೆ ಮಾಡಿದ್ದಾನೆ.

  • ‘ಚಿಂತಾಮಣಿ ಅಪಘಾತ – 8 ಮಂದಿಯ ಸಾವಿಗೆ ರಮೇಶ್‍ಕುಮಾರ್ ನೇರ ಹೊಣೆ’

    ‘ಚಿಂತಾಮಣಿ ಅಪಘಾತ – 8 ಮಂದಿಯ ಸಾವಿಗೆ ರಮೇಶ್‍ಕುಮಾರ್ ನೇರ ಹೊಣೆ’

    – ಸಾಮಾಜಿಕ ಜಾಲತಾಣದಲ್ಲಿ ಪೊಲೀಸರ ಆಕ್ರೋಶ
    – ರಮೇಶ್ ಕುಮಾರ್ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು

    ಬೆಂಗಳೂರು: “ಚಿಂತಾಮಣಿ ತಾಲೂಕಿನಲ್ಲಿ ನಡೆದ ಅಪಘಾತಕ್ಕೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ನೇರ ಹೊಣೆ” ಎಂದು ಸಾಮಾಜಿಕ ಜಾಲತಾಣದಲ್ಲಿ ಪೊಲೀಸರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಮರಿನಾಯಕನಹಳ್ಳಿ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ರಮೇಶ್ ಕುಮಾರ್ ಅವರನ್ನು ಟೀಕಿಸಿ ಬರೆದ ಪೋಸ್ಟ್ ಈಗ ಫೇಸ್‍ಬುಕ್, ವಾಟ್ಸಪ್‍ನಲ್ಲಿ ವೈರಲ್ ಆಗಿದೆ.

    ಪೋಸ್ಟ್ ನಲ್ಲಿ ಏನಿದೆ?
    ಭಾನುವಾರ ಚಿಂತಾಮಣಿ ತಾಲ್ಲೂಕು ಮರಿನಾಯಕನಹಳ್ಳಿ ಗ್ರಾಮದ ಬಳಿ ನಡೆದಂತಹ 8 ಜನರ ಮರಣದ ಘೋರ ಅಪಘಾತ ಪ್ರಕರಣಕ್ಕೆ ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ರಮೇಶ್ ಕುಮಾರ್ ರವರೆ ನೇರಹೊಣೆಗಾರರಾಗಿರುತ್ತಾರೆ.

    ಒಂದು ತಿಂಗಳ ಹಿಂದೆ ಈ ಅಪಘಾತ ನಡೆದಂತಹ ಸ್ಥಳದಿಂದ ಕೆಲವೇ ಕೆಲವು ಕಿಲೋಮೀಟರ್ ಗಳ ಅಂತರದಲ್ಲಿ ವಾಹನ ತಪಾಸಣೆ ಮಾಡುತ್ತಿದ್ದಂತಹ ಚಿಂತಾಮಣಿ ಪೊಲೀಸರ ಕರ್ತವ್ಯವನ್ನು ರಮೇಶ್ ಕುಮಾರ್ ರವರು ತಡೆಯದೆ ಇದ್ದಿದ್ದರೆ, ಪೊಲೀಸರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸದೆ ಇದ್ದಿದ್ದರೆ, ಪೊಲೀಸರ ಮಕ್ಕಳ ಬಗ್ಗೆ ಕೀಳು ಮಟ್ಟದಲ್ಲಿ ಮಾತನಾಡಿ ಅವರ ಮನೋಸ್ಥೈರ್ಯವನ್ನು ಕುಗ್ಗುವಂತೆ ಮಾಡದೆ ಇದ್ದಿದ್ದರೆ ಮರಿನಾಯಕನಹಳ್ಳಿ ಗ್ರಾಮದ ಬಳಿ ಈ ಒಂದು ಅಪಘಾತ ಸಂಭವಿಸುತ್ತಿರಲಿಲ್ಲ.

    ರಮೇಶ್ ಕುಮಾರ್ ರವರು ಪೊಲೀಸರ ಬಗ್ಗೆ ಕೆಟ್ಟದಾಗಿ ಮಾತನಾಡಿದ ನಂತರ ಅದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಪೊಲೀಸರನ್ನು ಕೆಟ್ಟ ರೀತಿಯಲ್ಲಿ ಬಿಂಭಿಸಿದ್ದರಿಂದ ಇನ್ನು ಮುಂದೆ ಪೊಲೀಸರು ರಸ್ತೆಗಳಲ್ಲಿ ದಂಡ ವಿಧಿಸುವುದಿಲ್ಲ ಎಂಬ ಕೆಟ್ಟ ಸಂದೇಶ ಸಾರ್ವಜನಿಕ ವಲಯದಲ್ಲಿ ರವಾನೆಯಾಗಿ ಮೇಲಿನ ಅಪಘಾತ ಪ್ರಕರಣದ ವಾಹನಗಳ ಚಾಲಕರು ಸಾಮರ್ಥ್ಯಕ್ಕಿಂತ ಹೆಚ್ಚಿನ ಜನರನ್ನು ತುಂಬಿಕೊಂಡು, ಅಜಾಗರೂಕತೆಯಿಂದ ಚಾಲನೆ ಮಾಡಿ, ಅಪಘಾತವನ್ನುಂಟು ಮಾಡಿ 8 ಜನ ಅಮಾಯಕ ಮರಣಕ್ಕೆ ಕಾರಣರಾಗಿರುತ್ತಾರೆ.

    ಒಂದು ವೇಳೆ ರಮೇಶ್ ಕುಮಾರ್ ರವರು ಪೊಲೀಸರ ಕರ್ತವ್ಯವನ್ನು ಆ ದಿನ ತಡೆಯದೆ ಇದ್ದಿದ್ದರೆ, ಪೊಲೀಸರು ದಂಡವನ್ನು ಹಾಕುತ್ತಾರೆಂಬ ಭಯದಲ್ಲಿ ವಾಹನಗಳ ಚಾಲಕರು ಸಾಮರ್ಥ್ಯಕ್ಕಿಂತ ಹೆಚ್ಚಿನ ಜನರನ್ನು ವಾಹನಕ್ಕೆ ತುಂಬುತ್ತಿರಲ್ಲಿಲ್ಲ. ಅತಿವೇಗವಾಗಿ, ಅಜಾಗರೂಕತೆಯಿಂದ ವಾಹನಗಳು ಚಾಲನೆ ಮಾಡುತ್ತಿರಲಿಲ್ಲ. ವೈಟ್ ಬೋರ್ಡ್ ವಾಹನದಲ್ಲಿ ಪ್ರಯಾಣಿಕರು ಸಾಗಿಸಿದರೆ ಪೊಲೀಸರು ಕೇಳುತ್ತಾರೆಂದು ಅಷ್ಟು ಜನ ಪ್ರಯಾಣಿಕರನ್ನು ಸಹ ಕರೆದುಕೊಂಡು ಹೋಗುತ್ತಿರಲಿಲ್ಲ. ಆಗ ಈ ಒಂದು ಅಪಘಾತ ಸಂಭವಿಸುತ್ತಲೂ ಇರಲಿಲ್ಲ. 8 ಜನ ಅಮಾಯಕ ಪ್ರಜೆಗಳು ಸಾಯುತ್ತಿರಲಿಲ್ಲ. ಆದ್ದರಿಂದ ಈ ಒಂದು ಅಪಘಾತದ 8 ಜನರ ಸಾವಿಗೆ ರಮೇಶ್ ಕುಮಾರ್ ರವರೆ ನೇರ ಹೊಣೆಗಾರರಾಗಿರುತ್ತಾರೆ. ಇದನ್ನೂ ಓದಿ: ಇನ್ನೂ ಸಮಯ ಇದೆ, ಅರ್ಜೆಂಟ್ ಏನೂ ಇಲ್ಲ: ಹೆಚ್‍ಡಿಕೆ 

    ಸಾರ್ವಜನಿಕರಿಗೆ ಕೆಟ್ಟ ಸಂದೇಶವನ್ನು ರವಾನೆ ಮಾಡಿ ಮೇಲ್ಕಂಡ ಅಪಘಾತಕ್ಕೆ ನೇರ ಹೊಣೆಗಾರರಾಗಿರುವ ಹಾಗೂ ಪೊಲೀಸರ ಬಗ್ಗೆ ಕೆಟ್ಟದಾಗಿ ಮಾತನಾಡಿ, ಅವರ ಮನೋಸ್ಥೈರ್ಯ ಕಳೆದುಕೊಳ್ಳುವಂತೆ ಮಾಡಿರುವ ರಮೇಶ್ ಕುಮಾರ್ ರವರು ಈ ಕೂಡಲೇ ಸಾಮಾಜಿಕ ಮಾಧ್ಯಮಗಳ ಮೂಲಕ ಪೊಲೀಸರಿಗೆ ಬಹಿರಂಗ ಕ್ಷಮೆ ಕೇಳಬೇಕು. ಇಲ್ಲವಾದಲ್ಲಿ ಮರಣ ಹೊಂದಿರುವ 8 ಜನರ ಆತ್ಮ ಹಾಗೂ ಅವರ ಕುಟುಂಬಗಳ ಶಾಪ ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ. ಇದನ್ನೂ ಓದಿ: ಮುಂಬೈ ಅತ್ಯಾಚಾರ ಪ್ರಕರಣ- ಚಿಕಿತ್ಸೆ ಫಲಿಸದೆ ಮೃತಪಟ್ಟ ಸಂತ್ರಸ್ತೆ

    ಪೆÇಲೀಸರು ಅವರ ಸ್ವಾರ್ಥಕ್ಕೆ ಅಥವಾ ಅವರ ಸಂಪಾದನೆಗೆ ದಂಡವನ್ನು ವಿಧಿಸುವುದಿಲ್ಲ. ಸಮಾಜದಲ್ಲಿ ಇಂತಹ ಅಪಘಾತ ಪ್ರಕರಣಗಳು ನಡೆಯಭಾರದೆಂಬ ಉದ್ದೇಶದಿಂದ ದಂಡವನ್ನು ಹಾಕುತ್ತಾರೆ.ವಾಹನ ಸವಾರರು ಅವರ ವಾಹನದ ಎಲ್ಲಾ ದಾಖಲೆಗಳನ್ನು ಸರಿಯಾದ ರೀತಿಯಲ್ಲಿ ಇಟ್ಟುಕೊಂಡಿದ್ದರೆ ಪೊಲೀಸರಿಗೆ ಏಕೆ ಹೆದರಬೇಕು? ಪೊಲೀಸರ ಜೊತೆ ಏಕೆ ವಾದ ವಿವಾದ ಆಗುತ್ತೆ? ಏಕೆ ದಂಡವನ್ನು ಕಟ್ಟ ಬೇಕಾಗತ್ತೆ? ದಯವಿಟ್ಟು ಸಾರ್ವಜನಿಕರು ಇದನ್ನು ಅರ್ಥ ಮಾಡಿಕೊಳ್ಳಬೇಕು.

  • ಚಿಂತಾಮಣಿಯಲ್ಲಿ ವಿದ್ಯಾರ್ಥಿಗಳ ಸಾವಿನ ಸವಾರಿ -ಬಸ್ ಟಾಪ್ ಮೇಲೆ ಕುಳಿತು ಪ್ರಯಾಣ

    ಚಿಂತಾಮಣಿಯಲ್ಲಿ ವಿದ್ಯಾರ್ಥಿಗಳ ಸಾವಿನ ಸವಾರಿ -ಬಸ್ ಟಾಪ್ ಮೇಲೆ ಕುಳಿತು ಪ್ರಯಾಣ

    -ಅಪಘಾತದ ನಂತರವೂ ಎಚ್ಚೆತ್ತುಕೊಳ್ಳದ ಆರ್‌ಟಿಓ, ಪೊಲೀಸರು

    ಚಿಕ್ಕಬಳ್ಳಾಪುರ: ನಿನ್ನೆಯಷ್ಟೇ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಮರಿನಾಯಕನಹಳ್ಳಿ ಬಳಿ ಲಾರಿ ಹಾಗೂ ಜೀಪ್ ನಡುವೆ ಮುಖಾಮುಖಿ ಡಿಕ್ಕಿಯಾಗಿ 8 ಜನ ಸಾವನ್ನಪ್ಪಿದ್ದು, ಮತ್ತೆ 8 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯಲ್ಲಿ ಆರ್‌ಟಿಓ ಹಾಗೂ ಪೊಲೀಸರು ಮಾತ್ರ ಎಚ್ಚೆತ್ತುಕೊಂಡಿಲ್ಲ.

    Students Bus

     ಗ್ರಾಮೀಣ ಭಾಗದಿಂದ ಚಿಂತಾಮಣಿ ನಗರಕ್ಕೆ ಶಾಲಾ ಕಾಲೇಜಿಗೆ ಬರುವ ವಿದ್ಯಾರ್ಥಿಗಳು ಖಾಸಗಿ ಬಸ್‍ಗಳ ಟಾಪ್ ಮೇಲೆ ಪ್ರಯಾಣ ಮಾಡುತ್ತಿದ್ದಾರೆ. ಬಸ್‍ಗಳ ಟಾಪ್ ಮೇಲೆ ಸಾವಿನ ಸವಾರಿ ಮಾಡುತ್ತಿದ್ದರೂ ಆರ್‌ಟಿಓ ಅಧಿಕಾರಿಗಳು ಮಾತ್ರ ಕಂಡು ಕಾಣದಂತೆ ಸುಮ್ಮನಾಗಿದ್ದಾರೆ. ಇದನ್ನೂ ಓದಿ: ಸುಪ್ರೀಂ ಆದೇಶ ಹಿಂದೂಗಳಿಗೆ ಮಾತ್ರವೇ – ಮೈಸೂರು ಡಿಸಿಗೆ ಯತ್ನಾಳ್ ಪ್ರಶ್ನೆ

    ಖಾಸಗಿ ಬಸ್ ಗಳ ಟಾಪ್ ಸೇರಿದಂತೆ ಮಿತಿ ಮೀರಿದ ಪ್ರಯಾಣಿಕರನ್ನು ಕಿಕ್ಕಿರಿದು ತುಂಬಿಕೊಂಡು ಖಾಸಗಿ ಬಸ್‍ಗಳು ಬೇಕಾಬಿಟ್ಟಿ ಸಂಚಾರ ಮಾಡುತ್ತಿದ್ದರೂ, ಹೇಳುವವರು ಕೇಳುವವರು ಯಾರು ಇಲ್ಲದಂತಾಗಿದೆ. ಬಸ್‍ನ ಬಾಗಿಲಿನಲ್ಲಿಯೇ ನಿಂತು ವಿದ್ಯಾರ್ಥಿಗಳು ಪ್ರಯಾಣ ಮಾಡುತ್ತಾ ಸಾವಿನ ಜೊತೆ ಸೆಣಸಾಡುವಂತಿದೆ. ಪ್ರತಿ ನಿತ್ಯ ಖಾಸಗಿ ಬಸ್ ಗಳಲ್ಲಿ ಇದೇ ಪರಿಸ್ಥಿತಿ ಇದ್ದರೂ ಇಲ್ಲಿನ ಅಧಿಕಾರಿಗಳು ಮಾತ್ರ ಕಣ್ಣಿಲ್ಲದಂತವರಾಗಿದ್ದಾರೆ. 60-70 ಜನ ತುಂಬುವ ಖಾಸಗಿ ಬಸ್‍ನಲ್ಲಿ 120ಕ್ಕೂ ಹೆಚ್ಚು ಮಂದಿ ಪ್ರಯಾಣ ಮಾಡುತ್ತಿದ್ದಾರೆ. ಅದರಲ್ಲೂ ಬೆಳಿಗ್ಗೆ ಹಾಗೂ ಸಂಜೆ ಶಾಲಾ-ಕಾಲೇಜುಗಳಿಗೆ ಬರುವಾಗ ಹಾಗೂ ಮನೆಗೆ ಹೋಗುವಾಗ ಬಸ್‍ಗಳು ವಿದ್ಯಾರ್ಥಿಗಳಿಂದ ಕಿಕ್ಕಿರಿದು ತುಂಬಿರುತ್ತವೆ. ಒಬ್ಬರ ಮೇಲೆ ಒಬ್ಬರು ಬಿದ್ದು ಪ್ರಯಾಣ ಮಾಡುತ್ತಿದ್ದಾರೆ. ಬಸ್‍ಗಳ ಟಾಪ್ ಮೇಲೆಯೇ 30-40 ಮಂದಿ ಪ್ರಯಾಣ ಮಾಡುತ್ತಾರೆ. ಇದನ್ನೂ ಓದಿ: ಯಾದಗರಿಯಲ್ಲಿ ಮಹಿಳೆಯನ್ನು ನಗ್ನಗೊಳಿಸಿ ಥಳಿಸಿದ ನಾಲ್ವರು ಅರೆಸ್ಟ್

    Students Bus

    ಬಟ್ಲಹಳ್ಳಿ, ಚೇಳೂರು ಮುರುಗಮಲ್ಲ ಕಡೆಯ ಗ್ರಾಮೀಣ ಭಾಗಗಳಿಂದ ಶಾಲಾ ಕಾಲೇಜುಗಳ ಸಮಯದಲ್ಲಿ ಹೆಚ್ಚಿನ ಸರ್ಕಾರಿ ಬಸ್ ಸೌಲಭ್ಯ ಇಲ್ಲ. ಎರಡು ಮೂರು ಬಸ್‍ಗಳು ಮಾತ್ರ ಸಂಚಾರ ಮಾಡುತ್ತವೆ. ಹೀಗಾಗಿ ಈ ಸಮಯದಲ್ಲಿ ಖಾಸಗಿ ಬಸ್‍ಗಳು ಹೆಚ್ಚಾಗಿ ಸಂಚಾರ ಮಾಡುತ್ತವೆ. ಹಾಗಾಗಿ ಖಾಸಗಿ ಬಸ್‍ಗಳನ್ನೇ ಜನ ಹಾಗೂ ವಿದ್ಯಾರ್ಥಿಗಳು ಅವಲಂಬಿಸಿದ್ದಾರೆ. ಆದರೆ ಖಾಸಗಿ ಬಸ್‍ಗಳ ಅತಿ ವೇಗ ಚಾಲನೆ ನೋಡಿದರೆ ಮಕ್ಕಳನ್ನು ಶಾಲಾ ಕಾಲೇಜುಗಳಿಗೆ ಕಳಿಸುವುದಕ್ಕೂ ಭಯವಾಗುತ್ತದೆ ಎಂದು ಪೋಷಕರು ಬೇಸರ ವ್ಯಕ್ತಪಡಿಸಿದ್ದಾರೆ.

  • ಶೌಚಾಲಯದಲ್ಲಿ ನವಜಾತ ಶಿಶು ಶವ – ಹೆತ್ತ ಅಮ್ಮನಿಂದಲೇ ಮರ್ಡರ್

    ಶೌಚಾಲಯದಲ್ಲಿ ನವಜಾತ ಶಿಶು ಶವ – ಹೆತ್ತ ಅಮ್ಮನಿಂದಲೇ ಮರ್ಡರ್

    – ಮಗುವನ್ನು ಕಂದು ಪತಿ ಜೊತೆ ಎಸ್ಕೇಪ್

    ಚಿಕ್ಕಬಳ್ಳಾಪುರ : ಜುಲೈ 03 ರಂದು ಜಿಲ್ಲೆಯ ಚಿಂತಾಮಣಿ ತಾಲೂಕು ಸರ್ಕಾರಿ ಆಸ್ಪತ್ರೆಯ ಶೌಚಾಲಯದಲ್ಲಿ ನವಜಾತ ಶಿಶು ಕೊಲೆ ಪ್ರಕರಣ ಸಂಬಂಧ ಚಿಂತಾಮಣಿ ನಗರ ಠಾಣೆ ಪೊಲೀಸರು ಪೋಷಕರನ್ನ ಬಂಧಿಸಿದ್ದಾರೆ.

    ಚೇಳೂರು ತಾಲೂಕು ಚಾಕವೇಲು ಗ್ರಾಮದ ಮಮತಾ ಹಾಗೂ ವೇಣುಗೋಪಾಲರೆಡ್ಡಿ ಬಂಧಿತರು. ಹೆತ್ತ ಮಗುವನ್ನ ಕೊಲೆ ಮಾಡಿರೋದಾಗಿ ತಾಯಿ ಮಮತಾ ತಪ್ಪೊಪ್ಪಿಕೊಂಡಿದ್ದಾಳೆ. ಆಸಲಿಗೆ ಮಮತಾ ತಾನು ಗರ್ಭಿಣಿ ಆಗಿರುವ ವಿಚಾರವನ್ನೇ ಮನೆಯಲ್ಲಿ ತಿಳಿಸಿರಲಿಲ್ಲ. ಗಂಡನಿಗೂ ಸಹ ಇತ್ತೀಚೆಗೆ ತಿಳಿಸಿದ್ದಳು. ಜುಲೈ 03 ರಂದು ಶನಿವಾರ ಚಿಂತಾಮಣಿಗೆ ಅಕ್ಕನ ಮನೆಗೆ ಅಂತ ಖಾಸಗಿ ಬಸ್ ನಲ್ಲಿ ಗಂಡ ಹೆಂಡತಿ ಇಬ್ಬರು ಬರುವಾಗ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಚಿಂತಾಮಣಿ ತಾಲೂಕು ಸರ್ಕಾರಿ ಆಸ್ಪತ್ರೆಗೆ ಗಂಡ-ಹೆಂಡತಿ ಇಬ್ಬರು ಬಂದಿದ್ದಾರೆ.

    ಈ ಸಮಯದಲ್ಲಿ ಶೌಚಾಲಯಕ್ಕೆ ಅಂತ ಹೋದ ಮಮತಾಳಿಗೆ ಅಲ್ಲೇ ಹೆರಿಗೆಯಾಗಿದೆ. ಆದರೆ ಆಕೆಗೆ ಆದೇನಾಯ್ತೋ? ಏನೋ? ಕೊಲೆ ಮಾಡಿದ್ದಳು. ಹೊರಗೆ ಬಂದು ಗಂಡನಿಗೆ ವಿಷಯ ತಿಳಿಸಿ ಅಲ್ಲಿಂದ ಇಬ್ಬರು ಎಸ್ಕೇಪ್ ಆಗಿದ್ದರು. ಸಿಸಿಟಿವಿ ದೃಶ್ಯಾವಳಿ ಆಧರಿಸಿ ತನಿಖೆ ನಡೆಸಿದ ಪೊಲೀಸರು ಕೊಲೆಗಾತಿ ತಾಯಿ ಮಮತಾ ಸಹಕಾರ ನೀಡಿದ ಗಂಡ ವೇಣುಗೋಪಾಲರೆಡ್ಡಿಯನ್ನ ಬಂಧಿಸಿದ್ದಾರೆ. ಇದನ್ನೂ ಓದಿ: ಚಲಿಸುತ್ತಿದ್ದ ಕಾರಿನ ಮೇಲೆ ಕಾಡಾನೆ ದಾಳಿ – ಕೂದಲೆಳೆ ಅಂತರದಲ್ಲಿ ಮಹಿಳೆ ಬಚಾವ್!

    ತನಿಖೆ ಮುಂದುವರೆದಿದ್ದು ತಾಯಿ ಮಮತಾಳ ಬಳಿ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದೇವೆ ಅಂತ ಎಸ್‍ಪಿ ಮಿಥುನ್ ಕುಮಾರ್ ತಿಳಿಸಿದ್ದಾರೆ. ಈ ದಂಪತಿಗೆ ಈಗಾಗಲೇ 6 ವರ್ಷದ ಗಂಡು ಮಗು ಸಹ ಇದೆ. ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡು ಇದ್ದ ಗಂಡ ಹೆಂಡತಿ ಕೊರೊನಾ ಲಾಕ್‍ಡೌನ್ ನಂತರ ಸ್ವಗ್ರಾಮ ಚಾಕುವೇಲುಗೆ ಆಗಮಿಸಿ ಇಲ್ಲೇ ಇದ್ರು. ಇದನ್ನೂ ಓದಿ: ಈ ದ್ವೇಷ ಹಿಂದುತ್ವದ ಕೊಡುಗೆ: ಭಾಗವತ್ ಹೇಳಿಕೆಗೆ ಓವೈಸಿ ಕಿಡಿ

  • ಸರ್ಕಾರಿ ಆಸ್ಪತ್ರೆಯಲ್ಲಿ ನವಜಾತು ಶಿಶು ಕೊಲೆ – ಶೌಚಾಲಯದಲ್ಲಿ ಶವ ಪತ್ತೆ

    ಸರ್ಕಾರಿ ಆಸ್ಪತ್ರೆಯಲ್ಲಿ ನವಜಾತು ಶಿಶು ಕೊಲೆ – ಶೌಚಾಲಯದಲ್ಲಿ ಶವ ಪತ್ತೆ

    ಚಿಕ್ಕಬಳ್ಳಾಪುರ: ಜಿಲ್ಲೆಯ ಚಿಂತಾಮಣಿ ತಾಲೂಕು ಆಸ್ಪತ್ರೆಯ ಶೌಚಾಲಯದಲ್ಲಿ ನವಜಾತ ಶಿಶು ಕೊಲೆ ಮಾಡಿರುವ ಅಮಾನವೀಯ ಘಟನೆ ನಡೆದಿದೆ.

    ಆಸ್ಪತ್ರೆಯಲ್ಲಿರುವ ಶೌಚಾಲಯದ ಕಿಟಕಿಗೆ ಮಗು ತೂರಿಸಿ ಕುತ್ತಿಗೆಗೆ ದಾರದಿಂದ ನೇಣು ಬಿಗಿದು ಕೊಲೆ ಮಾಡಲಾಗಿದೆ. ಇನ್ನೂ ಕೊಲೆಯಾದ ಮಗು ಹೆಣ್ಣಾಗಿದ್ದು, ಹೆಣ್ಣು ಮಗು ಅಂತಲೇ ಕೊಲೆ ಮಾಡಿದರಾ ಅನ್ನೋ ಅನುಮಾನ ದಟ್ಟವಾಗಿದೆ. ಅಂದಹಾಗೆ ಇಂದು ಬೆಳಗ್ಗೆ 8 ಗಂಟೆ 45 ನಿಮಿಷ ಸುಮಾರಿಗೆ ಆಸ್ಪತ್ರೆಗೆ ಬಂದ ಇಬ್ಬರು ಅಪರಿಚಿತ ಮಹಿಳೆಯರು ಹಾಗೂ ಓರ್ವ ಪುರುಷ ಶೌಚಾಲಯದೊಳಗೆ ಪ್ರವೇಶ ಮಾಡಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಬೆಳಗ್ಗೆ ಗ್ರೂಪ್ ಡಿ ವೆಂಕಟೇಶಪ್ಪ ಎಂಬಾತ ಶೌಚಾಲಯ ಸ್ವಚ್ಛಗೊಳಿಸಲು ಬಾಗಿಲು ಬಡಿದರೂ ಒಳಗಿದ್ದವರು ಬಾಗಿಲು ತೆಗೆದಿಲ್ಲ. ತದನಂತರ 20 ನಿಮಿಷಗಳ ಬಳಿಕ ವೆಂಕಟೇಶಪ್ಪ ಶೌಚಾಲಯದೊಳಗೆ ಹೋಗಿ ನೋಡಿದಾಗ ನವಜಾತ ಶಿಶು ಕೊಲೆಯಾಗಿರುವ ವಿಚಾರ ಬೆಳಕಿಗೆ ಬಂದಿದೆ. ಕೃತ್ಯ ನಡೆಸಿದವರಿಗಾಗಿ ಹುಡುಕಾಟ ನಡೆಸಿದರೂ ಪತ್ತೆಯಾಗಿಲ್ಲ. ಸದ್ಯ ಈ ಸಂಬಂಧ ಚಿಂತಾಮಣಿ ತಾಲೂಕು ಆಸ್ಪತ್ರೆ ಸಹಾಯಕ ನಿವಾಸಿ ವೈದ್ಯಾಧಿಕಾರಿ ಸಂತೋಷ್ ಹಾಗೂ ತಾಲೂಕು ಆರೋಗ್ಯಾಧಿಕಾರಿ ದೂರಿನ ಮೇರೆಗೆ ಚಿಂತಾಮಣಿ ನಗರ ಪೊಲೀಸ್ ಠಾಣಾ ಸಿಪಿಐ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಆಸ್ಪತ್ರೆಯ ಸಿಸಿಟಿವಿಯಲ್ಲಿ ಇಬ್ಬರು ಅಪರಿಚಿತ ಮಹಿಳೆಯರು ಹಾಗೂ ಓರ್ವ ಪುರುಷ ಶೌಚಾಲಯದ ಬಳಿ ಹೋಗಿ ಬಂದಿರುವುದು ಕಂಡು ಬಂದಿದೆ. ಅವರ ಮೇಲೆ ಪೊಲೀಸರಿಗೆ ಅನುಮಾನ ಮೂಡಿದೆ. ಅನುಮಾನಿತರಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಚಿಂತಾಮಣಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮತ್ತೊಂದೆಡ ಆಸ್ಪತ್ರೆ ವೈದ್ಯರು ಮಾಹಿತಿ ಪ್ರಕಾರ ಕಳೆದ 24 ಗಂಟೆಗಳಲ್ಲಿ ತಾಯಿ ಹಾಗೂ ಮಕ್ಕಳ ಆಸ್ಪತ್ರೆಯಲ್ಲಿ 6 ಮಂದಿ ಜನನವಾಗಿದ್ದು, ಅವರೆಲ್ಲರೂ ಸಹ ಆಸ್ಪತ್ರೆಯಲ್ಲೇ ಇದ್ದಾರೆ. ಹೀಗಾಗಿ ಈ ನವಜಾತು ಶಿಶು ಆಸ್ಪತ್ರೆಯಲ್ಲಿ ಜನಿಸಿರುವುದು ಅಲ್ಲ. ಬೇರೆ ಎಲ್ಲೋ ಜನನವಾಗಿರುವ ಮಗುವನ್ನು ತಂದು ಆಸ್ಪತ್ರೆಯಲ್ಲಿ ಈ ರೀತಿ ಮಾಡಿದ್ದಾರೆ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ. ಪೊಲೀಸರ ತನಿಖೆಯಿಂದ ಕೊಲೆಯ ಸತ್ಯ ಬಯಲಾಗಬೇಕಿದೆ. ಇದನ್ನೂ ಓದಿ : ಕೌಟುಂಬಿಕ ಕಲಹ ಶಂಕೆ – 3 ವರ್ಷದ ಮಗುವಿನೊಂದಿಗೆ ತಾಯಿ ಆತ್ಮಹತ್ಯೆ