Tag: ಚಿಂಚೊಳ್ಳಿ

  • ಯಮ ಕರೆದ್ರೂ ಕೋಲಿ ಸಮಾಜವನ್ನು ಎಸ್‍ಟಿಗೆ ಸೇರಿಸಿ ಹೋಗ್ತೀನಿ: ಚಿಂಚನಸೂರ್

    ಯಮ ಕರೆದ್ರೂ ಕೋಲಿ ಸಮಾಜವನ್ನು ಎಸ್‍ಟಿಗೆ ಸೇರಿಸಿ ಹೋಗ್ತೀನಿ: ಚಿಂಚನಸೂರ್

    ಕಲಬುರಗಿ: ಯಮ ಬಂದು ಹಗ್ಗ ಹಾಕಿ ಜಗ್ಗಿದರೂ ನಾನು ಹೋಗಲ್ಲ, ಕೋಲಿ ಸಮಾಜವನ್ನು ಎಸ್‍ಟಿ ವರ್ಗಕ್ಕೆ ಸೇರಿಸಿ ಮತ್ತೆ ಬರುತ್ತೇನೆ ಎನ್ನುತ್ತೇನೆ ಎಂದು ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಹೇಳಿದ್ದಾರೆ.

    ಚಿಂಚೋಳಿ ಪಟ್ಟಣದಲ್ಲಿ ಬಿಜೆಪಿ ಆಯೋಜನೆಯ ಕೋಲಿ ಸಮಾಜದ ಸಮಾವೇಶದಲ್ಲಿ ಬಾಬುರಾವ್ ಚಿಂಚನಸೂರ್ ಭಾಗಿಯಾಗಿದ್ದರು. ಈ ವೇಳೆ ನಾನು ಸುಮ್ಮನೆ ಸಾಯುವುದಿಲ್ಲ. ಯಮ ಕರೆದರೂ ನಾನು ಕೋಲಿ ಸಮಾಜವನ್ನು ಎಸ್‍ಟಿ ವರ್ಗಕ್ಕೆ ಸೇರಿಸಿಯೇ ಹೋಗುತ್ತೇನೆ ಎಂದರು. ಕೋಲಿ ಸಮಾಜವನ್ನು ಎಸ್‍ಟಿ ಮಾಡಿದರೆ ತಮ್ಮ ಸಮಾನಾಂತರ ಆಗುತ್ತಾರೆ ಎಂದು ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಕೋಲಿ ಸಮಾಜದ ತಲೆ ಮೇಲೆ ಕಾಲಿಟ್ಟರು. ಹಾಗೆಯೇ ಇವನು ದಿನ ದಿನಾ ಸ್ಟ್ರಾಂಗ್ ಆಗುತ್ತಾನೆ. ನಾನು ಪ್ರತಿದಿನ ಶೈನ್ ಆಗುತ್ತೇನೆ ಎಂದು ನನ್ನ ಮಂತ್ರಿ ಪದವಿಯಿಂದ ತೆಗೆದರು ಎಂದು ಆರೋಪಿಸಿದರು.

    ಕಲಬುರಗಿಯಲ್ಲಿ ಸಮಾವೇಶಕ್ಕೆ ಪ್ರಧಾನಿಯವರು ಬಂದಿದ್ದಾಗ ನಾನು ಅವರ ಕಾಲಿಗೆ ಬಿದ್ದಾಗ ‘ಕೋಲಿ ಸಮಾಜ್ ಕೋ ಮಹಾನ್ ನಾಯಕ್ ಮಿಲಾ’ ನನ್ನ ಕಿವಿಯಲ್ಲಿ ಹೇಳಿದ್ದರು ಎಂದು ತಿಳಿಸಿದರು. ಅಷ್ಟೇ ಅಲ್ಲದೆ ಕೋಲಿ ಸಮಾಜದವರು ಸ್ವಾಭಿಮಾನಿಗಳು, ಮಾರಾಟವಾಗುವವರಲ್ಲ. ನನಗಂತೂ ಮಕ್ಕಳಿಲ್ಲ, ಅವಿನಾಶ್ ಜಾಧವ್‍ನನ್ನು ನನ್ನ ದತ್ತು ಪುತ್ರ ಎಂದು ತಿಳಿದು ಗೆಲ್ಲಿಸಿ ಎಂದು ಮತದಾರರಲ್ಲಿ ಮನವಿ ಮಾಡಿಕೊಂಡರು.

  • ಸಚಿವ ಪ್ರಿಯಾಂಕ್ ಖರ್ಗೆಗೆ ಉಮೇಶ್ ಜಾಧವ್ ಸವಾಲು

    ಸಚಿವ ಪ್ರಿಯಾಂಕ್ ಖರ್ಗೆಗೆ ಉಮೇಶ್ ಜಾಧವ್ ಸವಾಲು

    ಕಲಬುರಗಿ: ತಾಕತ್ತಿದ್ದರೆ ಮುಂಬರುವ ಚಿಂಚೋಳಿ ಬೈ ಎಲೆಕ್ಷನ್‍ಗೆ ಪ್ರಿಯಾಂಕ್ ನಿಲ್ಲಲಿ. ನಮ್ಮ ಅಭ್ಯರ್ಥಿಯನ್ನು ಸೋಲಿಸಲಿ. ಒಂದು ಕೈ ನೋಡಿಯೇ ಬಿಡೋಣ ಎಂದು ಇತ್ತೀಚೆಗಷ್ಟೇ ಬಿಜೆಪಿ ಸೇರಿದ್ದ ಶಾಸಕ ಉಮೇಶ್ ಜಾಧವ್ ಅವರು ಸಚಿವ ಪ್ರಿಯಾಂಕ್ ಖರ್ಗೆಗೆ ಸವಾಲು ಹಾಕಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಮುಂಬರುವ ಬೈ ಎಲೆಕ್ಷನ್‍ನಲ್ಲಿ ಚಿಂಚೊಳ್ಳಿ ಕ್ಷೇತ್ರದಿಂದ ಪ್ರಿಯಾಂಕ್ ನಿಂತು ಗೆಲ್ಲಲಿ ಎಂದು ಬಹಿರಂಗವಾಗಿ ಸವಾಲ್ ಹಾಕಿದ್ದಾರೆ. ದತ್ತು ಪುತ್ರನಾಗಿ ಚಿಂಚೋಳಿಗೆ ಬರಲು ಸಿದ್ಧವೆಂಬ ಸಚಿವ ಪ್ರೀಯಾಂಕ್ ಖರ್ಗೆ ಹೇಳಿಕೆ ವಿಚಾರ ಪ್ರತಿಕ್ರಿಯಿಸಿ, ದತ್ತು ಪುತ್ರನಾಗಿ ಬರುವ ಬದಲು ರಾಜನಾಗಿ ಬರಲಿ. ಮುಂಬರುವ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಯನ್ನು ಸೋಲಿಸಲಿ, ಒಂದು ಕೈ ನೋಡಿಯೇ ಬಿಡೋಣ ಎಂದಿದ್ದಾರೆ.

    ಹಾಗೆಯೇ ಪದೇ ಪದೇ ಆಪರೇಷನ್ ಕಮಲದ ಕುರಿತು ಪ್ರಿಯಾಂಕ್ ಅವರು ಮಾತನಾಡುವುದು ಸರಿಯಲ್ಲ. ನಾನು 50 ಲಕ್ಷ ಹಣ ಪಡೆದಿದ್ದೇನೆ ಎಂದು ಪ್ರಿಯಾಂಕ್ ಅವರ ಮಕ್ಕಳ ಮೇಲೆ ಆಣೆ ಮಾಡಿ ಹೇಳಲಿ. ನಾನು ತಪ್ಪು ಮಾಡಿಲ್ಲ. ಸಿಬಿಐ ಸೇರಿದಂತೆ ಯಾವುದೇ ಉನ್ನತ ತನಿಖೆಗೂ ನಾನು ಸಿದ್ಧ. ಸುಮ್ಮನೆ ಸುಳ್ಳು ಆರೋಪ ಮಾಡೋದು ಪ್ರಿಯಾಂಕ್ ಅವರಿಗೆ ಶೋಭೆತರಲ್ಲ. ಸುಳ್ಳು ಹೇಳಿ ಸಣ್ಣತನ ಮಾಡಬಾರದು ಎಂದು ಆಕ್ರೋಶ ಹೊರಹಾಕಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv