Tag: ಚಾವಾ ಸಿನಿಮಾ

  • ವಿಕ್ಕಿ ಕೌಶಲ್ ಜೊತೆಗಿನ ‘ಚಾವಾ’ ಚಿತ್ರಕ್ಕಾಗಿ ಮರಾಠಿ ಕಲಿತ ರಶ್ಮಿಕಾ ಮಂದಣ್ಣ

    ವಿಕ್ಕಿ ಕೌಶಲ್ ಜೊತೆಗಿನ ‘ಚಾವಾ’ ಚಿತ್ರಕ್ಕಾಗಿ ಮರಾಠಿ ಕಲಿತ ರಶ್ಮಿಕಾ ಮಂದಣ್ಣ

    ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ (Rashmika Mandanna) ‘ಚಾವಾ’ (Chhava) ಸಿನಿಮಾ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ವಿಕ್ಕಿ ಕೌಶಲ್ ಜೊತೆಗಿನ ಈ ಚಿತ್ರಕ್ಕಾಗಿ ನಟಿ ಮರಾಠಿ ಭಾಷೆಯನ್ನು ಕಲಿತಿದ್ದಾರೆ ಎಂಬ ಸುದ್ದಿ ಈಗ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ. ಇದನ್ನೂ ಓದಿ:‘ಆರ್ಟಿಕಲ್ 370’ ಚಿತ್ರದ ನಟಿಯ ಪುತ್ರಿ ಮಿಹಿಕಾ ನಿಧನ

    ಛತ್ರಪತಿ ಸಂಭಾಜಿ ಅವರ ಜೀವನ ಕಥೆ ಆಧರಿಸಿ ಸಿನಿಮಾ ಬರುತ್ತಿದೆ. ಈ ಚಿತ್ರದ ಪ್ರಮುಖ ಪಾತ್ರದಲ್ಲಿ ವಿಕ್ಕಿ ಕೌಶಲ್ ಮತ್ತು ರಶ್ಮಿಕಾ ನಟಿಸುತ್ತಿದ್ದಾರೆ. ಈ ಸಿನಿಮಾದ ಹಲವು ಸಂಭಾಷಣೆಗಳು ಮರಾಠಿ ಭಾಷೆಯಲ್ಲಿ ಇರಲಿದ್ದು, ಅದಕ್ಕಾಗಿ 4 ವಾರಗಳ ಕಾಲ ನಟಿ ಮರಾಠಿ ಕಲಿಯಲು ವಿಶೇಷ ತರಬೇತಿ ಕೂಡ ಪಡೆದಿದ್ದಾರೆ. ವಿಕ್ಕಿ ಕೌಶಲ್ (Vicky Kaushal) ಕೂಡ ಮರಾಠಿ ಭಾಷೆ ಕಲಿಕೆಯಲ್ಲಿ ನಿರತರಾಗಿದ್ದಾರೆ.

    ‘ಚಾವಾ’ ಸಿನಿಮಾದಲ್ಲಿನ ತನ್ನ ಪಾತ್ರಕ್ಕೆ ರಶ್ಮಿಕಾ ಅವರೇ ಧ್ವನಿ ನೀಡಲಿದ್ದಾರೆ. ಇನ್ನೂ ಮೊದಲ ಬಾರಿಗೆ ವಿಕ್ಕಿ ಕೌಶಲ್ ಜೊತೆ ರಶ್ಮಿಕಾ ನಟಿಸುತ್ತಿರುವ ಕಾರಣ ಈ ಚಿತ್ರದ ಮೇಲೆ ಫ್ಯಾನ್ಸ್‌ಗೆ ಬೆಟ್ಟದಷ್ಟು ನಿರೀಕ್ಷೆಯಿದೆ. ಇದನ್ನೂ ಓದಿ:ಗೋವಾದಲ್ಲಿ ಕೊಡೆ ಹಿಡಿದು ನಿಂತ ‘ಬಿಗ್ ಬಾಸ್’ ಖ್ಯಾತಿಯ ಸೋನು

    ಇನ್ನೂ ‘ಚಾವಾ’ ಸಿನಿಮಾವು ಡಿಸೆಂಬರ್ 6ರಂದು ‘ಪುಷ್ಪ 2’ ಮುಂದೆ ರಿಲೀಸ್ ಆಗಲಿದೆ. ಒಂದೇ ದಿನ ರಶ್ಮಿಕಾ ನಟನೆಯ ಎರಡು ಬಿಗ್ ಬಜೆಟ್ ಸಿನಿಮಾಗಳು ರಿಲೀಸ್ ಆಗುತ್ತಿವೆ.

  • ಕೈಗೆ ಪೆಟ್ಟು ಮಾಡಿಕೊಂಡಿದ್ದ ವಿಕ್ಕಿ ಕೌಶಲ್ ಆರೋಗ್ಯ ಹೇಗಿದೆ?

    ಕೈಗೆ ಪೆಟ್ಟು ಮಾಡಿಕೊಂಡಿದ್ದ ವಿಕ್ಕಿ ಕೌಶಲ್ ಆರೋಗ್ಯ ಹೇಗಿದೆ?

    ಬಾಲಿವುಡ್ ನಟ ವಿಕ್ಕಿ ಕೌಶಲ್‌ಗೆ (Vicky Kaushal) ಕೆಲವು ದಿನಗಳ ಹಿಂದೆ ಶೂಟಿಂಗ್ ಮಾಡುವಾಗ ಕೈಗೆ ಪೆಟ್ಟಾಗಿತ್ತು. ವಿಕ್ಕಿ ಆರೋಗ್ಯದಲ್ಲಿ ಏರುಪೇರಾಗಿದ್ದಕ್ಕೆ ಫ್ಯಾನ್ಸ್‌ ಆತಂಕದಲ್ಲಿದ್ದರು. ಇದೀಗ ಅವರ ಆರೋಗ್ಯದ ಬಗ್ಗೆ ಮಾಹಿತಿ ಸಿಕ್ಕಿದೆ. ಈಗ ವಿಕ್ಕಿ ಕೌಶಲ್ ಗುಣಮುಖರಾಗಿದ್ದಾರೆ. ಮತ್ತೆ ‘ಚಾವಾ’ (Chhaava) ಸಿನಿಮಾ ಶೂಟಿಂಗ್‌ಗೆ ಬರಲು ಸಿದ್ಧತೆ ನಡೆಸುತ್ತಿದ್ದಾರೆ.

    ವಿಕ್ಕಿ ಕೌಶಲ್, ರಶ್ಮಿಕಾ ಮಂದಣ್ಣ ನಟನೆಯ ‘ಚಾವಾ’ ಸಿನಿಮಾ ಐತಿಹಾಸಿಕ ಚಿತ್ರವಾಗಿದ್ದು, ರಿಸ್ಕಿ ಸ್ಟಂಟ್ ಮಾಡುವಾಗ ಎಡಗೈಗೆ ಬಲವಾಗಿ ಪೆಟ್ಟು ಬಿದ್ದಿತ್ತು. ಚಿತ್ರೀಕರಣ ಸ್ಥಗಿತಗೊಳಿಸಿ ವಿಕ್ಕಿರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಘಟನೆ ಫೆಬ್ರವರಿ ಮೊದಲ ವಾರದಲ್ಲಿ ನಡೆದಿತ್ತು. ಇದೀಗ ಸೂಕ್ತ ಚಿಕಿತ್ಸೆ ಪಡೆದು ವಿಕ್ಕಿ ಕೌಶಲ್ ಚೇತರಿಸಿಕೊಂಡಿದ್ದಾರೆ. ಮಾರ್ಚ್ 9ರಿಂದ ಮತ್ತೆ ‘ಚಾವಾ’ ಶೂಟಿಂಗ್ ಶುರುವಾಗಲಿದ್ದು, ವಿಕ್ಕಿ ಚಿತ್ರೀಕರಣಕ್ಕೆ ಭಾಗಿಯಾಗಲಿದ್ದಾರೆ.

    ಛತ್ರಪತಿ ಶಿವಾಜಿ ಮಹಾರಾಜ ಕಥೆ ಆಧರಿಸಿ ಈ ಸಿನಿಮಾ ಮಾಡಲಾಗುತ್ತಿದೆ. ರಶ್ಮಿಕಾ ಮಂದಣ್ಣ (Rashmika Mandanna) ಯೇಸುಬಾಯಿ ಭೋನ್ಸಾಲೆ ಪಾತ್ರದಲ್ಲಿ ನಟಿಸುತ್ತಿದ್ದಾರೆ. ‘ಅನಿಮಲ್’ ಸಕ್ಸಸ್ ನಂತರ ಚಾವಾಗೆ ಸಾಥ್ ನೀಡಿರೋ ರಶ್ಮಿಕಾಗೆ ಈ ಚಿತ್ರದ ಬಗ್ಗೆ ಹೆಚ್ಚಿನ ನಿರೀಕ್ಷೆಯಿದೆ. ಇದನ್ನೂ ಓದಿ:ಖ್ಯಾತ ಗಾಯಕ ಬಂಟಿ ಮೇಲೆ ಗುಂಡಿನ ದಾಳಿ

    ಮೊದಲ ಬಾರಿಗೆ ವಿಕ್ಕಿ ಕೌಶಲ್ ಮತ್ತು ರಶ್ಮಿಕಾ ಮಂದಣ್ಣ ಜೊತೆಯಾಗಿ ನಟಿಸುತ್ತಿದ್ದಾರೆ. ಹಾಗಾಗಿ ಸಿನಿಮಾ ಅಭಿಮಾನಿಗಳಿಗೆ ಹೆಚ್ಚಿನ ನಿರೀಕ್ಷೆಯಿದೆ. ಕೆರಿಯರ್‌ನಲ್ಲಿ ಮೊದಲ ಬಾರಿಗೆ ಐತಿಹಾಸಿಕ ಪಾತ್ರವೊಂದರಲ್ಲಿ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದಾರೆ. ವಿಕ್ಕಿ, ರಶ್ಮಿಕಾ ಜೋಡಿ ಕ್ಲಿಕ್ ಆಗುತ್ತಾ ಕಾಯಬೇಕಿದೆ.