Tag: ಚಾಲೆಂಜ್

  • ದಿಗಂತ್, ಪ್ರಜ್ವಲ್ ಗೆ ಗೋಲ್ಡನ್ ಸ್ಟಾರ್ ಗಣೇಶ್ ಓಪನ್ ಚಾಲೆಂಜ್!

    ದಿಗಂತ್, ಪ್ರಜ್ವಲ್ ಗೆ ಗೋಲ್ಡನ್ ಸ್ಟಾರ್ ಗಣೇಶ್ ಓಪನ್ ಚಾಲೆಂಜ್!

    ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್ ತಮ್ಮ ಮುಂದಿನ ‘ಚಮಕ್’ ಚಿತ್ರಕ್ಕೆ ಸಾಕಷ್ಟು ವರ್ಕೌಟ್ ನಡೆಸುತ್ತಿದ್ದಾರೆ. ಈ ಚಿತ್ರಕ್ಕಾಗಿ ಗಣೇಶ್ ಮುವಾಯ್ ಥಾಯ್ ಕಲಿಯುತ್ತಿದ್ದು, ಪ್ರಜ್ವಲ್ ದೇವರಾಜ್ ಹಾಗೂ ದಿಗಂತ್ ಗೆ ಕಾಲಿನ ಕಿಕ್ ಮೂಲಕ ಕೈಯಲ್ಲಿರುವ ಕಲ್ಲಂಗಡಿಯನ್ನು ಹೊಡೆಯಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಚಾಲೆಂಜ್ ಮಾಡಿದ್ದಾರೆ.

    ಪ್ರಜ್ವಲ್, ದಿಗಂತ್ ಹಾಗೂ ಗಣೇಶ್ ಚಿತ್ರರಂಗದಲ್ಲಿ ಒಳ್ಳೆಯ ಸ್ನೇಹಿತರು. ನಟ ಗಣೇಶ್ ತಮ್ಮ ಟ್ವಿಟ್ಟರ್ ಹಾಗೂ ಫೇಸ್ ಬುಕ್ ನಲ್ಲಿ ಬಹಿರಂಗವಾಗಿ ತಮ್ಮ ಗೆಳೆಯರಿಗೆ ಸವಾಲೆಸೆದಿದ್ದಾರೆ. ಗಣೇಶ್ ಈಗ ಮುವಾಯ್ ಥಾಯ್ ಕಲಿಯುತ್ತಿದ್ದು, ಸತತ ಮೂರು ತಿಂಗಳಿಂದ ತರಬೇತಿ ಪಡೆದಿದ್ದಾರೆ. ಮುವಾಯ್ ಥಾಯ್ ನ ಭಾರತೀಯ ರಾಯಭಾರಿ ಕೂಡ ಆಗಿದ್ದಾರೆ.

    ಕಾಲಿನಲ್ಲಿ ಕಿಕ್ ಮಾಡುವ ಮೂಲಕ ಕೈಯಲ್ಲಿರುವ ಕಲ್ಲಂಗಡಿಯನ್ನು ಪ್ರಜ್ವಲ್ ಹಾಗೂ ದಿಗಂತ್ ಹೊಡೆಯಬೇಕು ಎಂದು ಗಣೇಶ್ ಟ್ವಿಟರ್ ನಲ್ಲಿ ಚಾಲೆಂಜ್ ಹಾಕಿದ್ದಾರೆ. ಅಭಿಮಾನಿಗಳು ಕೂಡ ಈ ಚಾಲೆಂಜ್ ಸ್ವೀಕರಿಸಬಹುದು ಎಂದು ಹೇಳಿದ್ದಾರೆ.

    ಗಣೇಶ್ ಹಾಕಿದ ಚಾಲೆಂಜ್ ನನ್ನು ಪ್ರಜ್ವಲ್ ದೇವರಾಜ್ ಹಾಗೂ ದೂದ್ ಪೇಡ ದಿಗಂತ್ ಸ್ವೀಕರಿಸುತ್ತಾರಾ ಎಂದು ನೋಡಬೇಕಾಗಿದೆ. ಮುಗಳುನಗೆ ಸಿನಿಮಾದ ಯಶಸ್ಸಿನ ನಂತರ ಗಣೇಶ್ ಚಮಕ್ ಸಿನಿಮಾದಲ್ಲಿ ನಟಿಸುತ್ತಿದ್ದು, ಚಿತ್ರದ ನಾಯಕಿಯಾಗಿ ಕಿರಿಕ್ ಪಾರ್ಟಿ ಖ್ಯಾತಿಯ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದಾರೆ.

     

  • ಚಾಲೆಂಜ್ ಹಾಕಿ 5 ಕ್ವಾಟರ್ ಮದ್ಯ ಕುಡಿದ ವ್ಯಕ್ತಿ ಸಾವು!

    ಚಾಲೆಂಜ್ ಹಾಕಿ 5 ಕ್ವಾಟರ್ ಮದ್ಯ ಕುಡಿದ ವ್ಯಕ್ತಿ ಸಾವು!

    ಚಿಕ್ಕಬಳ್ಳಾಪುರ: ಸ್ನೇಹಿತರೊಂದಿಗೆ ಕುಡಿತದ ಪಾರ್ಟಿ ವೇಳೆ ಚಾಲೆಂಜ್ ಕಟ್ಟಿ 5 ಕ್ವಾಟರ್ ಮದ್ಯ ಸೇವಿಸಿ ವ್ಯಕ್ತಿ ಮೃತಪಟ್ಟ ಘಟನೆ ಚಿಕ್ಕಬಳ್ಳಾಪುರ ತಾಲೂಕು ದೊಡ್ಡತಮ್ಮನಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಬುಶೆಟ್ಟಿಹಳ್ಳಿ ಗ್ರಾಮದ ನಿವಾಸಿ ಪುರಷೋತ್ತಮ್ (45) ಮೃತ ವ್ಯಕ್ತಿ. ಶನಿವಾರ ರಾತ್ರಿ ಗುಂಡಿನ ಪಾರ್ಟಿ ವೇಳೆ ನಾನು ಐದು ಕ್ವಾಟರ್ ಕುಡಿದ್ರೂ ಏನೂ ಆಗಲ್ಲ ಅಂತ ನವೀನ್ ಎಂಬಾತನ ವಿರುದ್ಧ ಪುರಷೋತ್ತಮ್ ಚಾಲೆಂಜ್ ಕಟ್ಟಿದ್ದಾರೆ. ಚಾಲೆಂಜ್ ಗಾಗಿ ಮದ್ಯ ಕುಡಿದ ಪುರಷೋತ್ತಮ್ ಅತಿಯಾದ ಅಮಲಿನಿಂದ ಕುಸಿದು ಬಿದ್ದಿದ್ದಾರೆ.

    ಕೂಡಲೇ ಸ್ನೇಹಿತರು ಪುರಷೋತ್ತಮನನ್ನು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರಗೆ ಕರೆತಂದಿದ್ದಾರೆ. ಆದರೆ ದುರಾದೃಷ್ಟಶಾತ್ ಪುರಷೋತ್ತಮ್ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

    ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

     

  • ಸಿಂಪಲ್ ಟ್ರಿಕ್ ಬಳಸಿ ಒಂದೇ ಸಲಕ್ಕೆ 7 ಬಾಟಲಿಗಳಿಂದ ಬಿಯರ್ ಕುಡಿದು ಮುಗಿಸ್ದ!

    ಸಿಂಪಲ್ ಟ್ರಿಕ್ ಬಳಸಿ ಒಂದೇ ಸಲಕ್ಕೆ 7 ಬಾಟಲಿಗಳಿಂದ ಬಿಯರ್ ಕುಡಿದು ಮುಗಿಸ್ದ!

    ವೆಲ್ಲಿಂಗ್ಟನ್: ಒಂದೇ ಸಲಕ್ಕೆ ಬಾಟಲಿಯನ್ನ ಎತ್ತಿ ಬಿಯರ್ ಅಥವಾ ಕೂಲ್ ಡ್ರಿಂಕ್ಸ್ ಕುಡಿದು ಮುಗಿಸೋ ಚಾಲೆಂಜ್‍ಗಳ ಬಗ್ಗೆ ಕೇಳಿರ್ತೀರ, ನೋಡಿರ್ತೀರ. ಆದ್ರೆ ಇಲ್ಲೊಬ್ಬ ಹತ್ತೇ ಹತ್ತು ಸೆಕೆಂಡ್‍ಗಳಲ್ಲಿ 7 ಬಿಯರ್ ಬಾಟಲಿಗಳಿಂದ ಒಂದೇ ಸಲಕ್ಕೆ ಬಿಯರ್ ಕುಡಿದು ಮುಗಿಸಿದ್ದಾನೆ. 7 ಬಾಟಲಿಗಳನ್ನ ಒಂದೇ ಸಲಕ್ಕೆ ಬಾಯಿಗೆ ಇಡೋದು ಹೇಗೆ ಅಂದ್ರಾ? ಅದಕ್ಕಾಗಿ ಆತ ಒಂದು ಸಿಂಪಲ್ ಟ್ರಿಕ್ ಬಳಸಿದ್ದಾನೆ.

     

    ನ್ಯೂಜಿಲ್ಯಾಂಡ್‍ನಲ್ಲಿ ವ್ಯಕ್ತಿಯೊಬ್ಬ ತನ್ನ ಸ್ನೇಹಿತರ ಮುಂದೆ ಇಂತಹದ್ದೊಂದು ಸವಾಲು ಪೂರೈಸಿದ್ದಾನೆ. ಮೊದಲಿಗೆ 7 ಬಾಟಲಿಗಳನ್ನ ಹತ್ತಿರ ಜೋಡಿಸಿದ್ದಾನೆ. ದೊಡ್ಡ ನೀರಿನ ಬಾಟಲಿಯ ಕೆಳಭಾಗವನ್ನ ಕಟ್ ಮಾಡಿ ಬಾಟಲಿಗಳ ಮೇಲೆ ಇಟ್ಟಿದ್ದಾನೆ. ನೀರಿನ ಬಾಟಲಿ ಬಿಯರ್ ಬಾಟಲಿಗಳನ್ನ ಒಂದುಗೂಡಿಸಿ ಹಿಡಿದುಕೊಂಡಿದ್ದು ಅದರ ತುದಿಭಾಗದಿಂದ ಆತ ಒಂದೇ ಸಲಕ್ಕೆ ಬಿಯರ್ ಕುಡಿದು ಮುಗಿಸಿದ್ದಾನೆ.

    ಇದನ್ನ ಆತನ ಸ್ನೇಹಿತರು ವಿಡಿಯೋ ಮಾಡಿದ್ದಾರೆ. ಬಿಯರ್ ಕುಡಿಯುತ್ತಿರುವ ವ್ಯಕ್ತಿಯನ್ನ ಬೈದು ಛೇಡಿಸಿದ್ದಾರೆ. ಆಸ್ಟ್ರೇಲಿಯಾದ ಫೇಸ್‍ಬುಕ್ ಪೇಜ್ ದಿ ಬೆಲ್ ಟವರ್ ಟೈಮ್ಸ್‍ನಲ್ಲಿ ಈ ವಿಡಿಯೋವನ್ನ ಹಂಚಿಕೊಳ್ಳಲಾಗಿದ್ದು, ಈಗಾಗಲೇ 3 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಣೆಯಾಗಿದೆ.

    https://www.facebook.com/TheBellTowerTimes/videos/820857981454105/