Tag: ಚಾಲೆಂಜ್

  • ನಾನು ನಿನ್ನೇ ಲವ್ ಮಾಡ್ತೀನಿ ಏನ್ ಬೇಕಾದ್ರೂ ಮಾಡ್ಕೋ: ಸೋನು ಪಾಟೀಲ್ ಓಪನ್ ಚಾಲೆಂಜ್

    ನಾನು ನಿನ್ನೇ ಲವ್ ಮಾಡ್ತೀನಿ ಏನ್ ಬೇಕಾದ್ರೂ ಮಾಡ್ಕೋ: ಸೋನು ಪಾಟೀಲ್ ಓಪನ್ ಚಾಲೆಂಜ್

    ಬೆಂಗಳೂರು: ಬಿಗ್‍ಬಾಸ್-6 ಎರಡನೇ ವಾರದಲ್ಲಿ ಸೋನು ಪಾಟೀಲ್ ತನ್ನ ಸಹ ಸ್ಪರ್ಧಿ ಗಾಯಕ ನವೀನ್ ಸಜ್ಜು ಅವರಿಗೆ ಎಲ್ಲರ ಸಮ್ಮುಖದಲ್ಲಿ ಐ ಲವ್ ಯೂ ಎಂದು ಹೇಳಿದ್ದರು. ಈ ಬಗ್ಗೆ ನವೀನ್ ಮಾತನಾಡುವಾಗ ಸೋನು ನಾನು ನಿನ್ನೇ ಲವ್ ಮಾಡ್ತೀನಿ ಏನ್ ಬೇಕಾದ್ರೂ ಮಾಡ್ಕೋ ಎಂದು ಸೋನು ಓಪನ್ ಚಾಲೆಂಜ್ ಮಾಡಿದ್ದಾರೆ.

    ಈ ಹಿಂದೆ ನವೀನ್ ತಮ್ಮ ಜರ್ಕಿನ್ ಕೊಟ್ಟಿದ್ದಕ್ಕೆ ಸೋನು ನೀನು ನನಗೆ ಒಳ್ಳೆಯ ಸ್ನೇಹಿತನಾಗಿದ್ದೀಯಾ. ಹಾಗಾಗಿ ನಿನಗೆ ಐ ಲವ್ ಯೂ ಅಂತಾ ಬಿಗ್‍ಬಾಸ್ ಚಟುವಟಿಕೆಯಲ್ಲಿ ಹೇಳಿದ್ದರು. ಈ ಬಳಿಕ ಮನೆಯಲ್ಲಿದ್ದವರು ನವೀನ್ ಹಾಗೂ ಸೋನು ಬಗ್ಗೆ ಮಾತನಾಡಲು ಶುರು ಮಾಡಿದರು. ಮನೆಯ ಸದಸ್ಯರು ಈ ರೀತಿ ಮಾತನಾಡುತ್ತಿರುವುದು ನವೀನ್ ಅವರಿಗೆ ಇಷ್ಟವಾಗಲಿಲ್ಲ. ಅವರು ಸೋನುಗೆ ನನ್ನ ಜೊತೆ ಈ ರೀತಿ ಮಾತನಾಡೋದನ್ನು ನಿಲ್ಲಿಸು ಅಂತ ಮನವಿ ಮಾಡಿಕೊಂಡಿದ್ದರು.

    ನವೀನ್ ಎಲ್ಲರ ಬಳಿ ಚೆನ್ನಾಗಿಯೇ ಮಾತನಾಡುತ್ತೀಯಾ. ನನ್ನ ಬಳಿ ಯಾಕೆ ಮಾತನಾಡಲ್ಲ ಎಂದು ಹೇಳಿ ಸಹ ಸ್ಪರ್ಧಿ ಸ್ನೇಹ ಬಳಿ ತೆರಳಿ ಅಳಲು ಶುರು ಮಾಡಿದರು. ಸೋನು ಅಳುವ ರೀತಿ ಮಾಡಿ ನಮ್ಮನ್ನ ಫೂಲ್ ಮಾಡ್ತಿದ್ದಾಳೆಂದು ಸಹ ಸ್ಪರ್ಧಿಗಳು ಹೇಳತೊಡಗಿದರು. ಕೂಡಲೇ ಇತರರ ಮಾತುಗಳಿಂದ ಕೋಪಗೊಂಡ ಸೋನು ಪಾಟೀಲ್, ನೀನು ನನಗೆ ಸ್ನೇಹಿತನಾಗಿ ಇಷ್ಟ. ಲವ್ ಮಾಡಿದ್ರೆ ನಾನು ನಿನ್ನೇ ಲವ್ ಮಾಡ್ತೀನಿ. ಅದು ಏನ್ ಮಾಡಿಕೊಳ್ಳತ್ತೀಯೋ ಮಾಡಿಕೋ ಎಂದು ಸವಾಲು ಹಾಕಿ ಬೇರೆ ಕಡೆ ನಡೆದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪ್ರಿಯಕರ ಮಾಡಿದ ಚಾಲೆಂಜ್‍ಗೆ ವಿಷ ಕುಡಿದ ಪ್ರೇಯಸಿ..!

    ಪ್ರಿಯಕರ ಮಾಡಿದ ಚಾಲೆಂಜ್‍ಗೆ ವಿಷ ಕುಡಿದ ಪ್ರೇಯಸಿ..!

    ಬೆಂಗಳೂರು: ಪ್ರಿಯಕರ ಮಾಡಿದ ಚಾಲೆಂಜ್‍ಗೆ ಪ್ರೇಯಸಿಯೊಬ್ಬಳು ವಿಷ ಕುಡಿದು ಮೃತಪಟ್ಟಿರುವ ಘಟನೆ ಬೆಂಗಳೂರು ಹೊರವಲಯ ಅವಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಕಿತ್ತಿಗನೂರು ಗ್ರಾಮದಲ್ಲಿ ನಡೆದಿದೆ.

    ಹರೀಶ್(20) ಚಾಲೆಂಜ್ ಮಾಡಿದ ಪ್ರಿಯಕರನಾಗಿದ್ದು, ದಿವ್ಯ (19) ಸಾವನ್ನಪ್ಪಿದ್ದ ಪ್ರೇಯಸಿ. ಕಳೆದ ಮಂಗಳವಾರ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ಪ್ರಿಯಕರ ಹರೀಶ್ ಮತ್ತು ದಿವ್ಯ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಒಂದು ದಿನ ಇಬ್ಬರು ಭೇಟಿಯಾಗಿದ್ದು, ಈ ವೇಳೆ ನನ್ನ ಮೇಲೆ ನಿನಗೆ ನಿಜವಾದ ಪ್ರೀತಿ ಇದ್ದರೆ ವಿಷ ಕುಡಿ ಎಂದು  ಹರೀಶ್ ಚಾಲೆಂಜ್ ಮಾಡಿದ್ದಾನೆ. ದಿವ್ಯ ಪ್ರಿಯಕರನ ಮಾತನ್ನು ನಂಬಿ ವಿಷ ಕುಡಿದ್ದಾಳೆ. ಬಳಿಕ ಮನೆಗೆ ತೆರಳಿದ್ದಾಳೆ.

    ಮನೆಗೆ ಹೋದ ಬಳಿಕ ದಿವ್ಯ ವಾಂತಿ ಮಾಡಲು ಶುರು ಮಾಡಿದ್ದಾಳೆ. ತಕ್ಷಣ ಆಕೆಯನ್ನು ಪೋಷಕರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಒಂದು ದಿನದ ಬಳಿಕ ಚಿಕಿತ್ಸೆ ಫಲಕಾರಿಯಾಗದೇ ದಿವ್ಯ ಮೃತಪಟ್ಟಿದ್ದಾಳೆ.

    ಸದ್ಯಕ್ಕೆ ಪ್ರಿಯಕರ ಹರೀಶ್ ವಿರುದ್ಧ ಅವಲಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ದಿವ್ಯ ಸಾವನ್ನಪ್ಪಿದ ವಿಷಯ ತಿಳಿದು ಇತ್ತ ಆರೋಪಿ ಹರೀಶ್ ಪರಾರಿಯಾಗಿದ್ದಾನೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪೈಲ್ವಾನ್ ಚಾಲೆಂಜ್ ಆಯ್ತು, ಫಿಟ್‍ನೆಸ್ ಚಾಲೆಂಜ್ ಆಯ್ತು ಈಗ ಮುದ್ದೆ ತಿನ್ನೋ ಚಾಲೆಂಜ್!

    ಪೈಲ್ವಾನ್ ಚಾಲೆಂಜ್ ಆಯ್ತು, ಫಿಟ್‍ನೆಸ್ ಚಾಲೆಂಜ್ ಆಯ್ತು ಈಗ ಮುದ್ದೆ ತಿನ್ನೋ ಚಾಲೆಂಜ್!

    ಬೆಂಗಳೂರು: ಸಿಎಂ ಕುಮಾರಸ್ವಾಮಿ ಹಾಗೂ ಆಹಾರ ಸಚಿವ ಜಮೀರ್ ಅವರಿಗೆ ಮುದ್ದೆ ತಿನ್ನುವ ಚಾಲೆಂಜ್ ಅನ್ನು ಬೆಂಗಳೂರಿನ ಕುರುಬರಹಳ್ಳಿ ಜನ ಹಾಕಿದ್ದಾರೆ.

    ಪಡಿತರ ಚೀಟಿಯಲ್ಲಿ ವಿತರಿಸುವ ರಾಗಿಯಲ್ಲಿ ಬರೀ ಟೊಳ್ಳು ರಾಗಿ, ಕಲ್ಲು, ಮಣ್ಣು ತುಂಬಿದ್ದು, ಮನುಷ್ಯರು ತಿನ್ನಲು ಸಾಧ್ಯವಾಗದ ರೀತಿಯಲ್ಲಿ ಈ ಕಳಪೆ ಗುಣಮಟ್ಟದ ರಾಗಿಯನ್ನು ವಿತರಣೆ ಮಾಡಲಾಗಿದೆ. ಇದರಿಂದ ಸಿಟ್ಟಿಗೆದ್ದ ಜನ ಈ ಕಳಪೆ ರಾಗಿಯನ್ನು ಸಿಎಂ ಕುಮಾರಸ್ವಾಮಿ ಹಾಗೂ ಜಮೀರ್ ಅವರ ವಿಳಾಸಕ್ಕೆ ಕಳುಹಿಸಿ ನೀವು ಮುದ್ದೆ ಮಾಡ್ಕೊಂಡು ತಿನ್ನಿ, ನೀವು ತಿಂದ ಮೇಲೆ ನಾವು ತಿನ್ನುತ್ತೆವೆ ಎಂದು ಚಾಲೆಂಜ್ ಮಾಡಿದ್ದಾರೆ.

    ಈ ಕುರಿತು ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿ ಪರಮೇಶ್ ಎಂಬವರು ಪಡಿತರ ವ್ಯವಸ್ಥೆಯಲ್ಲಿ ಹೆಚ್ಚಿನ ಗೋಲ್ ಮಾಲ್ ನಡೆಯುತ್ತಿದ್ದು, ಕಳಪೆ ಆಹಾರ ವಿತರಣೆ ಮಾಡುತ್ತಿದ್ದಾರೆ. ಅದ್ದರಿಂದ ಮುಖ್ಯಮಂತ್ರಿಗಳು ಹಾಗೂ ಆಹಾರ ಸಚಿವರು ಸಹ ಈ ಕುರಿತು ಗಮನ ಹರಿಸಬೇಕಿದೆ. ನ್ಯಾಯ ಬೆಲೆ ಅಂಗಡಿಯಲ್ಲಿ ಈ ಕುರಿತು ಪ್ರಶ್ನೆ ಮಾಡಿದರೆ ಅಗತ್ಯವಿದ್ದರೆ ತೆಗೆದುಕೊಂಡು ಹೋಗಿ ಇಲ್ಲವಾದರೆ ಬಿಡಿ ಎಂದು ಬೇಜಾವಾಬ್ದಾರಿ ಉತ್ತರ ನೀಡುತ್ತಾರೆ. ಅದ್ದರಿಂದ ಈ ಆಹಾರವನ್ನು ಸಿಎಂ ಕುಮಾರಸ್ವಾಮಿ ಹಾಗೂ ಸಚಿವ ಜಮೀರ್ ಅವರಿಗೆ ಕಳುಹಿಸಿ ಕೊಡುತ್ತಿದ್ದೇವೆ. ಅವರು ಈ ರಾಗಿಯಿಂದ ಮುದ್ದೆ ಮಾಡಿ ತಿಂದು ತೋರಿಸಲಿ, ಬಳಿಕ ನಾವು ಸೇವಿಸುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

  • ಸಿನಿಮಾರಂಗದವರಿಗೆ ಕಿಚ್ಚನಿಂದ ಹೊಸ ಸವಾಲ್

    ಸಿನಿಮಾರಂಗದವರಿಗೆ ಕಿಚ್ಚನಿಂದ ಹೊಸ ಸವಾಲ್

    ಬೆಂಗಳೂರು: ಇತ್ತೀಚೆಗೆ ನಟ ಸುದೀಪ್ ಫಿಟ್ ನೆಸ್ ಚಾಲೆಂಜ್ ಸ್ವೀಕರಿಸಿದ್ದು, ವಿಡಿಯೋ ಅಪ್ಲೋಡ್ ಮಾಡಿದ್ದರು. ಈಗ ಸುದೀಪ್ ಅವರೇ ಹೊಸದೊಂದು ಚಾಲೆಂಜ್ ಹಾಕಿದ್ದಾರೆ.

    ಕಿಚ್ಚ ಸುದೀಪ್ ಭಾರತ ತಂಡದ ಕ್ರಿಕೆಟರ್ ವಿನಯ್ ಕುಮಾರ್ ಅವರ ಚಾಲೆಂಜ್ ಸ್ವೀಕರಿಸಿದ್ದರು. ವಿನಯ್ ಕುಮಾರ್ ಚಾಲೆಂಜ್ ಸ್ವೀಕರಿಸಿದ ನಂತರ ಕಿಚ್ಚ ಬಾಲಿವುಡ್ ನಟ ರಿತೇಶ್ ದೇಶಮುಖ್, ಸೋಹೆಲ್ ಖಾನ್, ತಮ್ಮ ಪತ್ನಿ ಪ್ರಿಯಾ ಸುದೀಪ್, ಯಶ್ ಹಾಗೂ ಶಿವರಾಜ್‍ಕುಮಾರ್ ಅವರಿಗೆ ಫಿಟ್ನೆಸ್ ಚಾಲೆಂಜ್ ನೀಡಿದ್ದರು. ಈಗ ಸುದೀಪ್ ಕನ್ನಡ ಚಿತ್ರರಂಗದವರಿಗೆ ಹೊಸ ಸವಾಲು ಹಾಕಿದ್ದಾರೆ.

    ಸುದೀಪ್ `ಬ್ರಿಂಗ್ ಔಟ್ ದಿ ಪೈಲ್ವಾನ್ ಇನ್ ಯು’ ಎನ್ನುವ ಸವಾಲು ಹಾಕಿದ್ದಾರೆ. `ಬ್ರಿಂಗ್ ಔಟ್ ದಿ ಪೈಲ್ವಾನ್ ಇನ್ ಯು’ ಚಾಲೆಂಜ್ ಎಂದರೆ ಇಂದಿನ ತಮ್ಮ ಫೋಟೋವೊಂದನ್ನು ಟ್ವಿಟ್ಟರ್ ನಲ್ಲಿ ಅಪ್ಲೋಡ್ ಮಾಡಬೇಕು. ನಂತರ ಪ್ರತಿದಿನ ವರ್ಕ್ ಔಟ್ ಮಾಡಿ ಒಂದು ತಿಂಗಳ ನಂತರ ಅವರು ಮತ್ತೆ ತಮ್ಮ ಫೋಟೋವನ್ನು ಅಪ್ಲೋಡ್ ಮಾಡಬೇಕು. ಆಗ ಎರಡು ಫೋಟೋಗಳ ಮೂಲಕ ಅದರಲ್ಲಿ ಏನೆಲ್ಲಾ ಬದಲಾವಣೆಯಾಗಿರುತ್ತದೆ ಎಂಬುದನ್ನು ತೋರಿಸಬೇಕು.

    ಸುದೀಪ್ ಈ ಸವಾಲನ್ನು ಬರೆದು ನಿರ್ದೇಶಕ ಪವನ್ ಒಡೆಯರ್, ನಿರ್ಮಾಪಕ ಕಾರ್ತಿಕ್, ಅನೂಪ್ ಭಂಡಾರಿ ಮತ್ತು ನಟ ರಾಜೀವ್ ಅವರಿಗೆ ಟ್ವೀಟ್ ಮಾಡಿದ್ದಾರೆ. ಸುದೀಪ್ ಹಾಕಿದ್ದ ಸವಾಲನ್ನು ಪವನ್ ಒಡೆಯರ್ ಸ್ವೀಕರಿಸಿ ಮರು ಟ್ವೀಟ್ ಮಾಡಿದ್ದಾರೆ. “ಸುದೀಪ್ ಸರ್ ನಾನು ನಿಮ್ಮ ಸವಾಲನ್ನು ಸ್ವೀಕರಿಸುತ್ತಿದ್ದೇನೆ. ಈಗ ನನ್ನ ಇಂದಿನ ಫೋಟೋ ಅಪ್ಲೋಡ್ ಮಾಡಿದ್ದೇನೆ. ನಂತರ ಒಂದು ತಿಂಗಳಾದ ಮೇಲೆ ಬದಲಾವಣೆಯ ಜೊತೆ ಫೋಟೋ ಹಾಕುತ್ತೇನೆ” ಎಂದು ಬರೆದು ರೀ ಟ್ವೀಟ್ ಮಾಡಿದ್ದಾರೆ.

    ಸುದೀಪ್ ಹಾಕಿದ್ದ ಸವಾಲನ್ನು `ಹೆಬ್ಬುಲಿ’ ಮತ್ತು `ಪೈಲ್ವಾನ್’ ಸಿನಿಮಾ ನಿರ್ದೇಶಕರಾದ ಕೃಷ್ಣ ಕೂಡ ಸ್ವೀಕರಿಸಿದ್ದಾರೆ. ಜೊತೆಗೆ ನಿರ್ಮಾಪಕ ಕಾರ್ತಿಕ್ ಕೂಡ ಚಾಲೆಂಜ್ ಸ್ವೀಕರಿಸಿದ್ದಾರೆ. ಕೃಷ್ಣ ಅವರು ಸವಾಲನ್ನು ಸ್ವೀಕರಿಸಿದ ನಂತರ ಸುದೀಪ್ ತಮ್ಮ ಶೂಟಿಂಗ್ ಮುಗಿಯುವಷ್ಟರಲ್ಲಿ ಐದು ಕೆಜಿ ತೂಕ ಕಡಿಮೆ ಮಾಡಿಕೊಳ್ಳಲು ತಿಳಿಸಿದ್ದಾರೆ.

     

  • ಯಶ್ ಫಿಟ್ನೆಸ್ ವಿಡಿಯೋದಿಂದ ಸ್ಫೂರ್ತಿಗೊಂಡ ವಿದೇಶಿ ಮಹಿಳೆ- ವಿಡಿಯೋ ನೋಡಿ

    ಯಶ್ ಫಿಟ್ನೆಸ್ ವಿಡಿಯೋದಿಂದ ಸ್ಫೂರ್ತಿಗೊಂಡ ವಿದೇಶಿ ಮಹಿಳೆ- ವಿಡಿಯೋ ನೋಡಿ

    ಬೆಂಗಳೂರು: ದೇಶಾದ್ಯಂತ ನಟ-ನಟಿಯರು, ದೇಶದ ಗಣ್ಯರು ಫಿಟ್ನೆಸ್ ಚಾಲೆಂಜ್‍ನ ಅಭಿಯಾನದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಈಗ ಈ ಫಿಟ್ನೆಸ್ ಚಾಲೆಂಜ್ ಸ್ಯಾಂಡಲ್‍ವುಡ್‍ನಲ್ಲೂ ಸದ್ದು ಮಾಡುತ್ತಿದ್ದು, ರಾಕಿಂಗ್ ಸ್ಟಾರ್ ಯಶ್ ಅವರ ಫಿಟ್ನೆಸ್ ವಿಡಿಯೋದಿಂದ ವಿದೇಶಿ ಮಹಿಳೆಯೊಬ್ಬರು ಸ್ಫೂರ್ತಿಗೊಂಡಿದ್ದಾರೆ.

    ಇತ್ತೀಚೆಗೆ ರಾಕಿಂಗ್ ಸ್ಟಾರ್ ಯಶ್ ಸುದೀಪ್ ಚಾಲೆಂಜ್ ಸ್ವೀಕರಿಸಿ ಅದರಲ್ಲಿ ಒಂದು ಟ್ವಿಸ್ಟ್ ನೀಡಿದ್ದರು. ಫಿಟ್ನೆಸ್ ಚಾಲೆಂಜ್ ಸ್ವೀಕರಿಸಿದ ಯಶ್ ಫಿಟ್ನೆಸ್ ವಿಡಿಯೋವೊಂದನ್ನು ತಮ್ಮ ಫೇಸ್‍ಬುಕ್‍ನಲ್ಲಿ ಹಂಚಿಕೊಂಡಿದ್ದರು. ವಿಡಿಯೋದಲ್ಲಿ ಯಶ್ ತಾವು ವರ್ಕೌಟ್ ಮಾಡುವ ಬದಲು ತಮ್ಮ ಬಾಲ್ಯ ಸ್ನೇಹಿತನನ್ನು ವರ್ಕೌಟ್ ಮಾಡಿಸಿ ಅವರ ವಿಡಿಯೋವನ್ನು ಫೇಸ್‍ಬುಕ್‍ನಲ್ಲಿ ಹಂಚಿಕೊಳ್ಳುವುದರ ಮೂಲಕ ಸುದೀಪ್ ಫಿಟ್ನೆಸ್ ಚಾಲೆಂಜ್‍ಗೆ ಟ್ವಿಸ್ಟ್ ನೀಡಿದ್ದರು.

    ಆಗ ಜೀವನದಲ್ಲೇ ನನ್ನ ಸ್ನೇಹಿತ ಫಿಟ್ ಆಗಿರಲು ಸಾಧ್ಯವಿಲ್ಲ ಎಂದು ಕಾಣುವ ನನ್ನ ಸ್ನೇಹಿತನೊಬ್ಬ ಇದ್ದಾನೆ. ಆತನ ಹೆಸರು ಚೇತನ್ ಅಲಿಯಾಸ್ ಚಕ್ಕಲಿ ಈತ ನನ್ನ ಬಾಲ್ಯ ಸ್ನೇಹಿತ. ಅವನಿಂದ ನಾನು ಈ ಚಾಲೆಂಜ್ ಮಾಡಿಸುತ್ತೇನೆ ಎಂದು ಹೇಳಿ ತಮ್ಮ ಸ್ನೇಹಿತನಿಂದ ಫಿಟ್ನೆಸ್ ಚಾಲೆಂಜ್ ಮಾಡಿಸಿದ್ದರು. ಈಗ ಯಶ್ ಅವರ ಈ ಫಿಟ್ನೆಸ್‍ಯಿಂದ ಸ್ಫೂರ್ತಿಗೊಂಡ ವಿದೇಶಿ ಮಹಿಳೆಯೊಬ್ಬರು ತಮ್ಮ ಸ್ನೇಹಿತೆಯನ್ನು ವರ್ಕೌಟ್ ಮಾಡಿಸಿ ಆ ವಿಡಿಯೋವನ್ನು ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

    “ಹಾಯ್, ನನ್ನ ಹೆಸರು ಲೀಯಾ ಎಂ ಸೆನ್ಟ್ರಾಚಿಯೋ, ನಾನು ಇಲ್ಲಿ ಜಿಮ್‍ನಲ್ಲಿದ್ದೇನೆ ಹಾಗೂ ನಾನು ‘ಹಮ್ ಫಿಟ್ ತೋ ಇಂಡಿಯಾ ಫಿಟ್’ ಚಾಲೆಂಜ್‍ನಲ್ಲಿ ಭಾಗಿಯಾಗುತ್ತಿದ್ದೇನೆ. ಈ ಅಭಿಯಾನ ಸದ್ಯ ವಿಶ್ವಾದ್ಯಂತ ಸದ್ದು ಮಾಡುತ್ತಿದೆ. ಅಮೆರಿಕಾ ಜನತೆ ಇಂತಹ ಚಾಲೆಂಜ್ ತುಂಬಾ ಸೀರಿಯಸ್ ಆಗಿ ತೆಗೆದುಕೊಳ್ಳುತ್ತಾರೆ. ನಾನು ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಯಾಗಿದ್ದು, ಅವರು ತಮ್ಮ ಫಿಟ್ನೆಸ್ ಚಾಲೆಂಜ್ ವಿಡಿಯೋದಲ್ಲಿ ಮಾಡಿದ್ದನ್ನು ನಾನು ನನ್ನ ಸ್ನೇಹಿತೆಯ ಹತ್ತಿರ ಅದೇ ರೀತಿ ಮಾಡಿಸುತ್ತೇನೆ” ಎಂದು ಹೇಳಿ ತನ್ನ ಸ್ನೇಹಿತೆ ಹತ್ತಿರ ವ್ಯಾಯಾಮ ಮಾಡಿಸಿದ್ದಾರೆ.

    ಈ ವಿಡಿಯೋವನ್ನು ಯಶ್ ಪೋಸ್ಟ್ ಮಾಡಿ “ಇಂಡಿಯಾ ಫಿಟ್ ಆಗಿ ಇರೋಣ ಹಾಗೂ ನಮ್ಮ ಜೊತೆಯಲ್ಲಿ ಇರುವವರನ್ನು ಫಿಟ್ ಆಗಿ ಇರಿಸೋಣ” ಎಂದು ಯಶ್ ಈ ವಿಡಿಯೋ ಮೂಲಕ ತಿಳಿಸಿದ್ದರು.



  • ಶೂಟಿಂಗ್ ಸೆಟ್‍ನಲ್ಲಿಯೇ ಪುಶ್ ಅಪ್ ವಿಡಿಯೋ ಮಾಡಿದ ಪುನೀತ್- ವಿಡಿಯೋ ನೋಡಿ

    ಶೂಟಿಂಗ್ ಸೆಟ್‍ನಲ್ಲಿಯೇ ಪುಶ್ ಅಪ್ ವಿಡಿಯೋ ಮಾಡಿದ ಪುನೀತ್- ವಿಡಿಯೋ ನೋಡಿ

    ಬೆಂಗಳೂರು: ದೇಶಾದ್ಯಂತ ಫಿಟ್ನಿಸ್ ಚಾಲೆಂಜ್ ಸದ್ದು ಜೋರಾಗಿಯೇ ಇದೆ. ಕನ್ನಡ ನಟರು ಕೂಡ ಫಿಟ್ನಿಸ್ ಚಾಲೆಂಜ್‍ನಿಂದ ಹೊರತಾಗಿಲ್ಲ. ಈಗಾಗಲೇ ನಟ ಸುದೀಪ್, ಯಶ್ ಫಿಟ್ನಿಸ್ ಬಗ್ಗೆ ಅಭಿಮಾನಿಗಳಲ್ಲಿ ಚಾಲೆಂಜ್ ಹಾಕಿ ಆಸಕ್ತಿ ಹುಟ್ಟಿಸಿದ್ದಾರೆ.

    ಇದೀಗ ಕನ್ನಡದ ಮತ್ತೊರ್ವ ನಟ ಪುನೀತ್ ರಾಜ್‍ಕುಮಾರ್ ಅವರಿಗೆ ಬಿಜೆಪಿ ಶಾಸಕ ಡಾ. ಅಶ್ವಥ್ ನಾರಾಯಣ್ ಹಾಗೂ ಹೇಮಂತ್ ಮುದ್ದಪ್ಪ ಫಿಟ್ನೆಸ್ ಚಾಲೆಂಜ್ ನೀಡಿದ್ದರು. ಇಬ್ಬರ ಚಾಲೆಂಜ್ ಸ್ವೀಕರಿಸಿದ ಪುನೀತ್ ತನ್ನ ನಟಸಾರ್ವಭೌಮ ಚಿತ್ರದ ತಂಡದ ಜೊತೆ ಫಿಟ್ನೆಸ್ ಚಾಲೆಂಜ್ ಪೂರ್ಣಗೊಳಿಸಿದ್ದಾರೆ. ಅಲ್ಲದೇ ತಮ್ಮ ತಂಡದ ಜೊತೆ ಮಾಡಿದ ಫಿಟ್ನೆಸ್ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

    ಪುನೀತ್ ರಾಜ್‍ಕುಮಾರ್ ಚಿತ್ರದ ಶೂಟಿಂಗ್ ಸೆಟ್‍ನಿಂದಲ್ಲೇ ತಮ್ಮ ಚಿತ್ರತಂಡದ ಜೊತೆ ಪುಶ್ ಅಪ್ ಮಾಡಿ ಅದನ್ನು ವಿಡಿಯೋ ಮಾಡಿದ್ದಾರೆ. ಅಲ್ಲದೇ ನಾವು ಆರೋಗ್ಯವಾಗಿರುವುದು ತುಂಬಾನೇ ಮುಖ್ಯ ಎಂದು ಹೇಳಿ ಈ ಚಾಲೆಂಜ್ ಪೂರ್ಣಗೊಳಿಸಿದ್ದಾರೆ.

     

    ಈ ಫಿಟ್ನೆಸ್ ಚಾಲೆಂಜ್ ಪೂರ್ಣಗೊಳಿಸಿದ ಮೇಲೆ ಪುನೀತ್ ಸ್ಯಾಂಡಲ್‍ವುಡ್ ನಟರಾದ ರಕ್ಷಿತ್ ಶೆಟ್ಟಿ, ಧೃವ ಸರ್ಜಾ, ಶ್ರೀಮುರಳಿ ಹಾಗೂ ನಿರೂಪಕರಾದ ದಾನೀಶ್ ಸೇಠ್ ಅವರಿಗೆ ಫಿಟ್ನೆಸ್ ಚಾಲೆಂಜ್ ನೀಡಿದ್ದಾರೆ.

    ಈಗಾಗಲೇ ಸ್ಯಾಂಡಲ್‍ವುಡ್‍ನಲ್ಲಿ ನಟ ಕಿಚ್ಚ ಸುದೀಪ್, ರಾಕಿಂಗ್ ಸ್ಟಾರ್ ಯಶ್, ಪವನ್ ಕುಮಾರ್, ಸಂಯುಕ್ತ ಹೊರನಾಡು ಮುಂತಾದ ಕಲಾವಿದರು ಈ ಫಿಟ್ನೆಸ್ ಚಾಲೆಂಜ್ ಮಾಡಿದ್ದಾರೆ.

  • ಹೆಬ್ಬುಲಿಯ ಫಿಟ್ನೆಸ್ ಚಾಲೆಂಜ್‍ಗೆ ಟ್ವಿಸ್ಟ್ ಮೂಲಕ ಉತ್ತರಿಸಿದ ರಾಜಾಹುಲಿ- ವಿಡಿಯೋ ನೋಡಿ

    ಹೆಬ್ಬುಲಿಯ ಫಿಟ್ನೆಸ್ ಚಾಲೆಂಜ್‍ಗೆ ಟ್ವಿಸ್ಟ್ ಮೂಲಕ ಉತ್ತರಿಸಿದ ರಾಜಾಹುಲಿ- ವಿಡಿಯೋ ನೋಡಿ

    ಬೆಂಗಳೂರು: ಇತ್ತೀಚೆಗೆ ಕಿಚ್ಚ ಸುದೀಪ್ ಭಾರತ ತಂಡದ ಕ್ರಿಕೆಟರ್ ವಿನಯ್ ಕುಮಾರ್ ಅವರ ಚಾಲೆಂಜ್ ಸ್ವೀಕರಿಸಿದ್ದರು. ವಿನಯ್ ಕುಮಾರ್ ಚಾಲೆಂಜ್ ಸ್ವೀಕರಿಸಿದ ನಂತರ ಕಿಚ್ಚ ಬಾಲಿವುಡ್ ನಟ ರಿತೇಶ್ ದೇಶಮುಖ್, ಸೋಹೆಲ್ ಖಾನ್, ತಮ್ಮ ಪತ್ನಿ ಪ್ರಿಯಾ ಸುದೀಪ್, ಯಶ್ ಹಾಗೂ ಶಿವರಾಜ್‍ಕುಮಾರ್ ಅವರಿಗೆ ಫಿಟ್ನೆಸ್ ಚಾಲೆಂಜ್ ನೀಡಿದ್ದರು.

    ರಾಕಿಂಗ್ ಸ್ಟಾರ್ ಯಶ್ ಸುದೀಪ್ ಚಾಲೆಂಜ್ ಸ್ವೀಕರಿಸಿ ಅದರಲ್ಲಿ ಒಂದು ಟ್ವಿಸ್ಟ್ ನೀಡಿದ್ದಾರೆ. ಫಿಟ್ನೆಸ್ ಚಾಲೆಂಜ್ ಸ್ವೀಕರಿಸಿದ ಯಶ್ ಫಿಟ್ನೆಸ್ ವಿಡಿಯೋವೊಂದನ್ನು ತಮ್ಮ ಫೇಸ್‍ಬುಕ್‍ನಲ್ಲಿ ಹಂಚಿಕೊಂಡಿದ್ದಾರೆ.

    ಯಶ್ ತಾವು ವರ್ಕೌಟ್ ಮಾಡುವ ಬದಲು ತಮ್ಮ ಬಾಲ್ಯ ಸ್ನೇಹಿತನನ್ನು ವರ್ಕೌಟ್ ಮಾಡಿಸಿ ಅವರ ವಿಡಿಯೋವನ್ನು ಫೇಸ್‍ಬುಕ್‍ನಲ್ಲಿ ಹಂಚಿಕೊಳ್ಳುವುದರ ಮೂಲಕ ಸುದೀಪ್ ಫಿಟ್ನೆಸ್ ಚಾಲೆಂಜ್‍ಗೆ ಟ್ವಿಸ್ಟ್ ನೀಡಿದ್ದಾರೆ. ಇದನ್ನೂ ಓದಿ: ಭಾರತ ತಂಡದ ಕ್ರಿಕೆಟ್ ಆಟಗಾರನ ಚಾಲೆಂಜ್ ಸ್ವೀಕರಿಸಿದ ಕಿಚ್ಚ ಸುದೀಪ್!

    https://twitter.com/NimmaYash/status/1003581840563638272

    ಯಶ್ ವಿಡಿಯೋವನ್ನು ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿ ಅದಕ್ಕೆ, “ಹಾಯ್ ಸುದೀಪ್ ನೀವು ನನಗೆ ಒಂದು ಚಾಲೆಂಜ್ ಕೊಟ್ಟಿದ್ದೀರಾ ಧನ್ಯವಾದಗಳು. ನಾವು ಕಲಾವಿದರಾಗಿದರಿಂದ ನಾವು ದಿನನಿತ್ಯ ವರ್ಕೌಟ್ ಮಾಡುತ್ತಿರುತ್ತೇವೆ. ಆದರೆ ನಾನು ಈ ಚಾಲೆಂಜ್‍ನಲ್ಲಿ ಒಂದು ಟ್ವಿಸ್ಟ್ ಕೊಡಲು ಯೋಚಿಸಿದ್ದೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕಿಚ್ಚ ಸುದೀಪ್ ಚಾಲೆಂಜ್ ಸ್ವೀಕರಿಸಿದ ಪತ್ನಿ ಪ್ರಿಯಾ!

    ಜೀವನದಲ್ಲೇ ನನ್ನ ಸ್ನೇಹಿತ ಫಿಟ್ ಆಗಿರಲು ಸಾಧ್ಯವಿಲ್ಲ ಎಂದು ಕಾಣುವ ನನ್ನ ಸ್ನೇಹಿತನೊಬ್ಬ ಇದ್ದಾನೆ. ಆತನ ಹೆಸರು ಚೇತನ್ ಅಲಿಯಾಸ್ ಚಕ್ಕಲಿ ನನ್ನ ಬಾಲ್ಯ ಸ್ನೇಹಿತ. ಅವನಿಂದ ನಾನು ಈ ಚಾಲೆಂಜ್ ಮಾಡಿಸುತ್ತೇನೆ ಎಂದು ಹೇಳಿ ತಮ್ಮ ಸ್ನೇಹಿತನಿಂದ ಫಿಟ್ನೆಸ್ ಚಾಲೆಂಜ್ ಮಾಡಿಸಿದ್ದಾರೆ.

    ಈ ವಿಡಿಯೋವನ್ನು ಯಶ್ ಪೋಸ್ಟ್ ಮಾಡಿ “ಇಂಡಿಯಾ ಫಿಟ್ ಆಗಿ ಇರೋಣ ಹಾಗೂ ನಮ್ಮ ಜೊತೆಯಲ್ಲಿ ಇರುವವರನ್ನು ಫಿಟ್ ಆಗಿ ಇರಿಸೋಣ” ಎಂದು ಯಶ್ ಈ ವಿಡಿಯೋ ಮೂಲಕ ತಿಳಿಸಿದ್ದಾರೆ.

  • ಭಾರತ ತಂಡದ ಕ್ರಿಕೆಟ್ ಆಟಗಾರನ ಚಾಲೆಂಜ್ ಸ್ವೀಕರಿಸಿದ ಕಿಚ್ಚ ಸುದೀಪ್!

    ಭಾರತ ತಂಡದ ಕ್ರಿಕೆಟ್ ಆಟಗಾರನ ಚಾಲೆಂಜ್ ಸ್ವೀಕರಿಸಿದ ಕಿಚ್ಚ ಸುದೀಪ್!

    ಬೆಂಗಳೂರು: ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಫಿಟ್ನೆಸ್ ಚಾಲೆಂಜ್ ಭಾರೀ ಸದ್ದು ಮಾಡುತ್ತಿದೆ. ಇದೀಗ ಭಾರತ ತಂಡದ ಕ್ರಿಕೆಟ್ ಆಟಗಾರ ಕಿಚ್ಚ ಸುದೀಪ್ ಅವರಿಗೆ ಫಿಟ್ನೆಸ್ ಚಾಲೆಂಜ್ ಹಾಕಿದ್ದಾರೆ.

    ಕೇಂದ್ರ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋರ್ ಫಿಟ್ನೆಸ್ ಕುರಿತು ಅಭಿಯಾನವೊಂದು ಶುರು ಮಾಡಿದ್ದರು. ಈ ಅಭಿಯಾನದಲ್ಲಿ ಸ್ಟಾರ್ ನಟರು ಹಾಗೂ ದೇಶದ ಗಣ್ಯ ವ್ಯಕ್ತಿಗಳು ಫಿಟ್ನೆಸ್ ಚಾಲೆಂಜ್ ಸ್ವೀಕರಿಸಿದ್ದರು. ಇದೀಗ ಕ್ರಿಕೆಟ್ ಆಟಗಾರ ವಿನಯ್ ಕುಮಾರ್ ಹಾಕಿದ್ದ ಫಿಟ್ನೆಸ್ ಚಾಲೆಂಜ್‍ನ್ನು ಸುದೀಪ್ ಸ್ವೀಕರಿಸಿದ್ದಾರೆ.

    ವಿನಯ್ ಕುಮಾರ್ ತಮ್ಮ ಫಿಟ್ನೆಸ್ ವಿಡಿಯೋವನ್ನು ಟ್ವಿಟ್ಟರಿನಲ್ಲಿ ಅಪ್ಲೋಡ್ ಮಾಡಿ ನಂತರ ಅನಿಲ್ ಕುಂಬ್ಳೆ, ವಿರೇಂದ್ರ ಸೆಹ್ವಾಗ್, ಹರ್ಭಜನ್ ಸಿಂಗ್, ಕಿಚ್ಚ ಸುದೀಪ್, ಮನೀಶ್ ಪಾಂಡೆ, ಕರುಣ್ ಹಾಗೂ ಮಯಾಂಕ್ ಅವರಿಗೆ ಟ್ಯಾಗ್ ಮಾಡುವ ಮೂಲಕ ಫಿಟ್ನೆಸ್ ಚಾಲೆಂಜ್ ನೀಡಿದ್ದರು.

    ವಿನಯ್ ಕುಮಾರ್ ಚಾಲೆಂಜ್ ಕಿಚ್ಚ ಸುದೀಪ್ ಸ್ವೀಕರಿಸಿ ತಮ್ಮ ಫಿಟ್ನೆಸ್ ವಿಡಿಯೋವನ್ನು ತಮ್ಮ ಟ್ವಿಟ್ಟರಿನಲ್ಲಿ ಅಪ್ಲೋಡ್ ಮಾಡಿದ್ದಾರೆ. ಕಿಚ್ಚ ಟ್ವಿಟ್ಟರಿನಲ್ಲಿ ವಿಡಿಯೋ ಹಾಕಿ ಅದಕ್ಕೆ, “ಸಹೋದರ ನಿನ್ನ ಚಾಲೆಂಜ್ ನಾನು ಸ್ವೀಕರಿಸುತ್ತಿದ್ದೇನೆ. ಧನ್ಯವಾದಗಳು” ಎಂದು ತಿಳಿಸಿದ್ದಾರೆ.

    ಕಿಚ್ಚ ಸುದೀಪ್ ಚಾಲೆಂಜ್ ಪೂರ್ಣಗೊಳಿಸಿ ಬಾಲಿವುಡ್ ನಟ ರಿತೇಶ್ ದೇಶ್‍ಮುಕ್, ನಟ ಹಾಗೂ ನಿರ್ಮಾಪಕ ಸೋಹೆಲ್ ಖಾನ್, ತಮ್ಮ ಪತ್ನಿ ಪ್ರಿಯಾ ಸುದೀಪ್, ರಾಕಿಂಗ್ ಸ್ಟಾರ್ ಯಶ್ ಹಾಗೂ ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಅವರಿಗೆ ಫಿಟ್ನೆಸ್ ಚಾಲೆಂಜ್ ನೀಡಿದ್ದಾರೆ.

    ಸುದೀಪ್ ಅವರ ಫಿಟ್ನೆಸ್ ವಿಡಿಯೋ ನೋಡಿ ಕ್ರಿಕೆಟಿಗ ವಿನಯ್ ಕುಮಾರ್ ತಮ್ಮ ಟ್ವಿಟ್ಟರಿನಲ್ಲಿ “ಅದ್ಭುತ ಸಹೋದರ. ನನ್ನ ಚಾಲೆಂಜ್ ಸ್ವೀಕರಿಸಿದ್ದಕ್ಕೆ ಧನ್ಯವಾದಗಳು” ಎಂದು ಟ್ವೀಟ್ ಮಾಡಿದ್ದಾರೆ.

    ಇನ್ನೂ ಸುದೀಪ್ ಅವರ ಫಿಟ್ನೆಸ್ ವಿಡಿಯೋ ನೋಡಿದ ಜಿ.ಕೆ ಅನಿಲ್ ಕುಮಾರ್ ಟ್ವಿಟ್ಟರಿನಲ್ಲಿ, “ವ್ಹಾ..ವ್ಹಾ..” ಎಂದು ಟ್ವೀಟ್ ಮಾಡಿದ್ದರು. ಆಗ ಕಿಚ್ಚ ನೀವು ಕೂಡ ಈ ಚಾಲೆಂಜ್ ಸ್ವೀಕರಿಸಿ ಎಂದು ಟ್ವೀಟ್ ಮಾಡಿದ್ದಾರೆ.

  • ಫಿಟ್ ನೆಸ್ ವಿಡಿಯೋ ಅಪ್ಲೋಡ್ ಮಾಡಿ ಪ್ರಧಾನಿಗೆ ನಟ ಜಗ್ಗೇಶ್ ಚಾಲೆಂಜ್!

    ಫಿಟ್ ನೆಸ್ ವಿಡಿಯೋ ಅಪ್ಲೋಡ್ ಮಾಡಿ ಪ್ರಧಾನಿಗೆ ನಟ ಜಗ್ಗೇಶ್ ಚಾಲೆಂಜ್!

    ಬೆಂಗಳೂರು: ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಫಿಟ್ ನೆಸ್ ಚಾಲೆಂಜ್ ಭಾರೀ ಸದ್ದು ಮಾಡುತ್ತಿದೆ. ಈಗ ನಟ ಜಗ್ಗೇಶ್ ಫಿಟ್ ನೆಸ್ ವಿಡಿಯೋ ಹಾಕಿ ಪ್ರಧಾನಿ ಮೋದಿಗೆ ಸವಾಲ್ ಹಾಕಿದ್ದಾರೆ.

    ಕ್ರೀಡಾ ಸಚಿವ ರಾಜವರ್ಧನ್ ಸಿಂಗ್ ರಾಥೋಡ್ ಹಾಕಿದ `ಹಮ್ ಫಿಟ್ ತೋ ಇಂಡಿಯಾ ಫಿಟ್’ ಸವಾಲನ್ನು ಒಬ್ಬೊಬ್ಬರಂತೆ ಬಹಳಷ್ಟು ಸೆಲಬ್ರಿಟಿಗಳು ಸ್ವೀಕರಿಸಿದ್ದಾರೆ. ಈಗ ನವರಸ ನಾಯಕ ನಟ ಜಗ್ಗೇಶ್ ಕೂಡಾ ಫಿಟ್ ನೆಸ್ ಚಾಲೆಂಜ್ ಸ್ವೀಕರಿಸಿ ವಿಡಿಯೋ ಅಪ್ಲೋಡ್ ಮಾಡಿ ಪ್ರಧಾನಿಗೆ ಸವಾಲು ಹಾಕಿದ್ದಾರೆ.

    ರಾಜವರ್ಧನ್ ಸಿಂಗ್ ರಾಥೋಡ್ ವಿರಾಟ್ ಕೊಹ್ಲಿ ಫಿಟ್ ನೆಸ್ ಚಾಲೆಂಜ್ ಹಾಕಿದ್ದರು. ಅವರು ಪ್ರಾದಾನಿ ಮೋದಿ, ಪತ್ನಿ ಅನುಷ್ಕಾ ಶರ್ಮಾಗೆ ಹಾಕಿದ್ದರು. ಕೊಹ್ಲಿ ಹಾಕಿದ್ದ ಚಾಲೆಂಜ್ ಅನ್ನು ಮೋಧಿ ಸ್ವೀಕರಿಸಿದ್ದರು. ಅದರ ಬೆನ್ನಲ್ಲೇ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮೋದಿಗೆ ಒಂದು ಸವಾಲ್ ಹಾಕಿದ್ದರು. ಹೀಗೆ ಫಿಟ್ ನೆಸ್ ಚಾಲೆಂಜ್ ಮುಂದುವರಿದಿದ್ದು, ಅನೇಕ ರಾಜಕೀಯ ನಾಯಕರು, ಸಿನಿಮಾ ನಟ-ನಟಿಯರು ಈ ಚಾಲೆಂಜ್ ಸ್ವೀಕರಿಸಿದ್ದರು.

    ಮೈಸೂರಿನ ಸಂಸದ ಪ್ರತಾಪ್ ಸಿಂಹ ಕೂಡ ಈ ಚಾಲೆಂಜ್ ಸ್ವೀಕರಿಸಿದ್ದರು. ಈಗ ನಟ ಜಗ್ಗೇಶ್ ತಮ್ಮ ಟ್ವಿಟ್ಟರ್ ನಲ್ಲಿ “ನನ್ನ ಬಾಲ್ಯದಿಂದ ತಪ್ಪದೆ ನಾನು ಮಾಡುವ ದಂಡ ಬೈಟಕ್. ದಿನ ತಪ್ಪದೆ 50 ದಂಡ ಬೈಟಕ್ ಮಾಡುವೆ ಇದರಿಂದ ಸಂಪೂರ್ಣ ದೇಹದ ಮಾಂಸಖಂಡಕ್ಕೆ ಸಳೆತವಾಗಿ ತೋಳು ಪಕ್ಕೆ ಸೊಂಟ ತೊಡೆದ ಹಾಗು ಪಾದ ಹದ್ದುಬಸ್ತಿನಲ್ಲಿರುತ್ತದೆ. ಆ ಕಾಲದ ಗರಡಿಮನೆ ತಾಲೀಮು. 55 ರಲ್ಲೂ ಮುಂದುವರೆದಿದೆ. ದೈಹಿಕ ದಂಡನೆ. ಶುಭರಾತ್ರಿ ಸವಿಗನಸು” ಎಂದು ಬರೆದು ಡಿಪ್ಸ್ ಹೊಡೆಯುತ್ತಿರುವ ವಿಡಿಯೋ ಹಾಕಿ ಪೋಸ್ಟ್ ಮಾಡಿದ್ದಾರೆ.

  • ಬ್ಲೂವೇಲ್ ಗೇಮ್ ಚಾಲೆಂಜ್ : ಮುಖಕ್ಕೆ ಪ್ಲಾಸ್ಟಿಕ್ ಕವರ್ ಸುತ್ತಿಕೊಂಡು ಯುವಕ ಆತ್ಮಹತ್ಯೆ

    ಬ್ಲೂವೇಲ್ ಗೇಮ್ ಚಾಲೆಂಜ್ : ಮುಖಕ್ಕೆ ಪ್ಲಾಸ್ಟಿಕ್ ಕವರ್ ಸುತ್ತಿಕೊಂಡು ಯುವಕ ಆತ್ಮಹತ್ಯೆ

    ಹೈದರಾಬಾದ್: ದೇಶಾದ್ಯಂತ ಬ್ಲೂ ವೇಲ್ ಗೇಮ್ ಚಾಲೆಂಜ್ ಕುರಿತು ಎಷ್ಟೇ ಜಾಗೃತಿ ಮೂಡಿಸುವ ಕಾರ್ಯ ನಡೆಯುತ್ತಿದ್ದರು, ಈ ಗೇಮ್ ಗೆ ಮತ್ತೊಬ್ಬ ಯುವಕ ಬಲಿಯಾಗಿರುವ ಸಂಶಯಾಸ್ಪದ ಘಟನೆ ಆಂಧ್ರಪ್ರದೇಶದ ರಾಜಧಾನಿ ಹೈದರಾಬಾದ್ ನಲ್ಲಿ ನಡೆದಿದೆ.

    ನಗರದ 19 ವರ್ಷದ ಯುವಕನೊಬ್ಬ ಬ್ಲೂ ವೇಲ್ ಗೇಮ್ ಚಟಕ್ಕೆ ಬಿದ್ದು, ತನ್ನ ಮುಖವನ್ನು ಪ್ಲಾಸ್ಟಿಕ್ ಕವರ್ ನಿಂದ ಮುಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆ ಮಾಡಿಕೊಂಡಿರುವ ಯುವಕ ಟಿ.ವರುಣ್ ಎಂದು ತಿಳಿದು ಬಂದಿದೆ. ವರುಣ್ ನಗರದ ಹೊರವಲಯದ ಗಾಂಡಿಪೇಟ್ ಬಳಿಯ ಮ್ಯಾಪಲ್ ಟೌನ್ ವಿಲ್ಲಾಸ್ ನಲ್ಲಿ ಕುಟುಂಬದೊಂದಿಗೆ ವಾಸವಿದ್ದನು.

    ಮೃತ ವರುಣ್ ತಂದೆ ಶನಿವಾರ ತಮ್ಮ ಮಗ ಆತ್ಮಹತ್ಯೆ ಮಾಡಿಕೊಂಡಿರುವ ಕುರಿತು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ ಸಂದರ್ಭದಲ್ಲಿ ಪ್ರಕರಣ ಬೆಳಕಿಗೆ ಬಂದಿದೆ. ವರುಣ್ ಬಿ.ಟೆಕ್ ವಿದ್ಯಾರ್ಥಿಯಾಗಿದ್ದು, ಎಲ್ಲರೊಂದಿಗೂ ಉತ್ತಮವಾಗಿ ಮಾತನಾಡಿಕೊಂಡು ಸಾಮಾನ್ಯವಾಗಿದ್ದ, ಆದರೆ ಆತ ಆತ್ಮಹತ್ಯೆ ಮಾಡಿಕೊಂಡಿರುವ ಕುರಿತು ಸಾಕಷ್ಟು ಅನುಮಾನಗಳು ವ್ಯಕ್ತವಾಗಿದೆ.

    ಘಟನೆ ಕುರಿತು ಮಾಹಿತಿ ನೀಡಿರುವ ಎಸ್ಪಿ ಉಮೇಂದರ್, ವರುಣ್ ಬ್ಲೂ ವೇಲ್ ಗೇಮ್ ಚಾಲೆಂಜ್ ತೆಗೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಕುರಿತು ಅನುಮಾನ ವ್ಯಕ್ತ ಪಡಿಸಿದ್ದು, ಆತ ಬಳಕೆ ಮಾಡುತ್ತಿದ್ದ ಲ್ಯಾಪ್ ಟಾಪ್ ಅನ್ನು ವಶಕ್ಕೆ ಪಡೆಯಲಾಗಿದೆ. ಇದರಿಂದ ಹೆಚ್ಚಿನ ಮಾಹಿತಿ ಸಂಗ್ರಹಿಸಲು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿಕೊಟ್ಟಿರುವುದಾಗಿ ತಿಳಿಸಿದ್ದಾರೆ.

    ಈ ಹಿಂದೆ ಹೈದರಾಬಾದ್ ಸೈಬರ್ ಕ್ರೈಂ ಪೊಲೀಸರು ಬ್ಲೂ ವೇಲ್ ಗೇಮ್ ಕುರಿತು ಶಾಲಾ ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ ಜಾಗೃತಿ ಮೂಡಿಸಲು ಪೋಷಕರು ಹಾಗೂ ಶಾಲೆಗಳಲ್ಲಿ ಮನವಿ ಮಾಡಿದ್ದರು.