Tag: ಚಾಲೆಂಜ್

  • ಡ್ರೋಣ್ ಪ್ರತಾಪ್ ಸೋತಿದ್ದಕ್ಕೆ ಅರ್ಧ ಗಡ್ಡ, ಮೀಸೆ ತೆಗೆದ ಯುವಕ!

    ಡ್ರೋಣ್ ಪ್ರತಾಪ್ ಸೋತಿದ್ದಕ್ಕೆ ಅರ್ಧ ಗಡ್ಡ, ಮೀಸೆ ತೆಗೆದ ಯುವಕ!

    – ಹಸಿ ಮೆಣಸಿನಕಾಯಿ ತಿಂದು ವೀಡಿಯೋ ಅಪ್ಲೋಡ್

    ಮಂಗಳೂರು: ಬಿಗ್ ಬಾಸ್ ಸೀಸನ್ 10 (Big Boss) ರಲ್ಲಿ ಡ್ರೋಣ್ ಪ್ರತಾಪ್ (Drone Pratap) ಸೋತಿದ್ದಕ್ಕೆ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಕಡಬದ ಯುವಕನೋರ್ವ (Youth) ಅರ್ಧ ಗಡ್ಡ, ಮೀಸೆ ತೆಗೆದು ತನ್ನ ಚಾಲೆಂಜ್ ಪೂರೈಸಿದ್ದಾನೆ.

    ಭಾನುವಾರಂದು ನಡೆದ ಕನ್ನಡ ಬಿಗ್ ಬಾಸ್ ಸೀಸನ್ 10 ಗ್ರಾಂಡ್ ಫಿನಾಲೆಯಲ್ಲಿ ವಿಜೇತರಾಗಿ ಕಾರ್ತಿಕ್ ಮಹೇಶ್ ಹೊರಹಮ್ಮಿದ್ದಾರೆ. ಈ ಸಂದರ್ಭದಲ್ಲಿ ಕಡಬ ತಾಲೂಕಿನ ಬಂಟ್ರ ಗ್ರಾಮದ ಪಾಲೆತ್ತಡ್ಕ ನಿವಾಸಿ ಝೈನುಲ್ ಆಬಿದ್ ಎಂಬಾತ ಡ್ರೋಣ್ ಪ್ರತಾಪ್‌ಗಾಗಿ ಅರ್ಥ ಗಡ್ಡ ಹಾಗೂ ಮೀಸೆ ತೆಗೆದಿದ್ದಾನೆ. ಇದನ್ನೂ ಓದಿ:  ಮಾಜಿ ಪ್ರಧಾನಿಯೊಬ್ಬರ ಮಗ ಜಿಲ್ಲೆಗೆ ಬಂದು ಶಾಂತಿ ಕದಡುವ ನಿರ್ಧಾರ ಮಾಡಿರೋದು ಸರಿಯಲ್ಲ: ಚಲುವರಾಯಸ್ವಾಮಿ

    ಝೈನುಲ್ ಈ ಬಾರಿ ಬಿಗ್‌ಬಾಸ್ ಸೀಸನ್‌ನಲ್ಲಿ ಡ್ರೋಣ್ ಪ್ರತಾಪ್ ವಿನ್ನರ್ ಆಗಿ ಹೊರಬರುತ್ತಾರೆ ಎಂದು ಹೇಳಿದ್ದರು. ಒಂದು ವೇಳೆ ಪ್ರತಾಪ್ ಸೋತರೆ ತನ್ನ ಅರ್ಧ ಗಡ್ಡ, ಮೀಸೆ ತೆಗೆಯುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಚಾಲೆಂಜ್ ಹಾಕಿ ಪೋಸ್ಟ್ ಮಾಡಿದ್ದನು. ಜೊತೆಗೆ ಹಸಿ ಮೆಣಸಿನಕಾಯಿ ತಿನ್ನುವುದಾಗಿ ಮತ್ತೊಂದು ವೀಡಿಯೋವನ್ನು ಸಹ ಹರಿಬಿಟ್ಟಿದ್ದನು. ಇದನ್ನೂ ಓದಿ: ED  ಕೈಗೆ ಸಿಗದ ಜಾರ್ಖಂಡ್ ಸಿಎಂ – ಹೇಮಂತ್ ಸೊರೆನ್  BMW ಕಾರು  ವಶಕ್ಕೆ

    ಇದೀಗ ಕಾರ್ತಿಕ್ ವಿನ್ನರ್ ಆಗಿ ಹೊರಬಂದಿದ್ದು, ಪ್ರತಾಪ್ ರನ್ನರ್ ಅಪ್ ಆಗಿರೋದು ಝೈನುಲ್‌ಗೆ ಅಸಮಾಧಾನ ತಂದು ಕೊಟ್ಟಿದೆ. ಫಲಿತಾಂಶ ಹೊರ ಬರುತ್ತಿದ್ದಂತೆ ಸವಾಲಿನಂತೆ ಆಬಿದ್ ಅರ್ಧ ಗಡ್ಡ ಮತ್ತು ಮೀಸೆಯನ್ನ ಬೋಳಿಸಿಕೊಂಡಿದ್ದಾನೆ. ಜೊತೆಗೆ ಹಸಿ ಮೆಣಸಿನಕಾಯಿಯನ್ನು ಸಹ ತಿಂದು ವೀಡಿಯೋ ಮಾಡಿ ಅಪ್ಲೋಡ್ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾನೆ. ಇದೀಗ ಝೈನುಲ್ ಹಾಕಿರುವ ವೀಡಿಯೋ ಎಲ್ಲೆಡೆ ವೈರಲ್ ಆಗಿದೆ. ಇದನ್ನೂ ಓದಿ: ಖರ್ಗೆ ವಿರುದ್ಧ ಅವಹೇಳನ; ಚಕ್ರವರ್ತಿ ಸೂಲಿಬೆಲೆ ವಿರುದ್ಧದ ಪ್ರಕರಣಕ್ಕೆ ಕೋರ್ಟ್‌ ಮಧ್ಯಂತರ ತಡೆ

  • 20 ನಿಮಿಷದಲ್ಲಿ 10 ಕೆಜಿಯ ಕಾಠಿ ರೋಲ್ ತಿಂದವರಿಗೆ ಸಿಗುತ್ತೆ ಭರ್ಜರಿ ಗಿಫ್ಟ್

    20 ನಿಮಿಷದಲ್ಲಿ 10 ಕೆಜಿಯ ಕಾಠಿ ರೋಲ್ ತಿಂದವರಿಗೆ ಸಿಗುತ್ತೆ ಭರ್ಜರಿ ಗಿಫ್ಟ್

    ದೆಹಲಿ: ನೀವು 20 ಸಾವಿರ ರೂಪಾಯಿಯನ್ನು ಗೆಲ್ಲಬೇಕಾ? ಹಾಗಾದರೆ ನೀವು ಹತ್ತು ಕೆಜಿ ಇರುವ ಹಾಗೂ 30 ಮೊಟ್ಟೆಗಳಿಂದ ತಯಾರಿಸಿರುವ ಕಾಠಿ ರೋಲ್ ಅನ್ನು ತಿನ್ನಬೇಕಾಗುತ್ತದೆ. ಇದನ್ನೂ ಓದಿ: ರೋಚಕ ಘಟ್ಟ ತಲುಪಿದ ಐಪಿಎಲ್ – ಪ್ಲೇ ಆಫ್‍ಗೆ ಏರಲು ಯಾವ ತಂಡ ಏನು ಮಾಡಬೇಕು?

    Kathi Roll

    ಹೌದು, ದೆಹಲಿಯ ಮಾಡೆಲ್ ಟೌನ್ 3ರಲ್ಲಿ ರಸ್ತೆಬದಿಯ ಫುಡ್ ಸ್ಟಾಲ್ ಸವಾಲನ್ನೊಡ್ಡಿದ್ದು, 20 ನಿಮಿಷಗಳಲ್ಲಿ ಕಾಠಿ ರೋಲ್ ಅನ್ನು ತಿಂದು ಮುಗಿಸಿದವರಿಗೆ 20,000 ನಗದು ಬಹುಮಾನ ನೀಡಲಾಗುವುದು ಎಂದು ತಿಳಿಸಿದೆ. ಇದನ್ನೂ ಓದಿ: ಮೆಟ್ರೋ ಕಾಮಗಾರಿ – 30 ಅಡಿ ಮಣ್ಣು ಕುಸಿತ, ತಪ್ಪಿತು ಭಾರೀ ಅನಾಹುತ

    Kathi Roll

    ಸದ್ಯ ಕಾಠಿ ರೋಲ್‍ನ ವೀಡಿಯೋವನ್ನು ದಿ ಫುಡ್ ಕಲ್ಟ್ ಎಂಬ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದು, ವೀಡಿಯೋದಲ್ಲಿ ವ್ಯಕ್ತಿಯೊಬ್ಬ ಹಿಟ್ಟನ್ನು ಲಟ್ಟಿಸಿ ಅದನ್ನು ತವಾ ಮೇಲೆ ಹಾಕಿ ಅದರ ಮೇಲೆ ಮೊಟ್ಟೆ ಹೊಡೆದು ಬೇಯಿಸಿಕೊಳ್ಳುತ್ತಾನೆ. ನಂತರ ಬೇಯಿಸಿ ರೋಟಿಯನ್ನು ಪಕ್ಕಕ್ಕೆ ತೆಗೆದುಕೊಂಡು ಬಳಿಕ ತವಾದ ಮೇಲೆ ಬೇಯಿಸಿದ ಹಲವಾರು ತರಕಾರಿಗಳನ್ನು ಹಾಗೂ ನೂಡೆಲ್ಸ್, ಕೆಲವು ಸಾಸ್‍ಗಳನ್ನು ಮಿಶ್ರಣ ಮಾಡಿ ರೋಟಿ ಮೇಲೆ ಹಾಕಿ ರೋಲ್ ಮಾಡಿ ಸಿದ್ದಪಡಿಸುವುದನ್ನು ಕಾಣಬಹುದಾಗಿದೆ.  ಇದನ್ನೂ ಓದಿ: 39 ಕೋಟಿ ತೆರಿಗೆ ಬಾಕಿ- ಬಿಬಿಎಂಪಿಯಿಂದ ಮಂತ್ರಿ ಮಾಲ್‍ಗೆ ಬೀಗ

    ಇದೀಗ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಇಲ್ಲಿಯವರೆಗೂ 8 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಅಲ್ಲದೇ ಈ ಬೃಹತ್ ಗಾತ್ರದ ರೋಲ್ ನೋಡಿ ನೆಟ್ಟಿಗರು ಶಾಕ್ ಆಗಿದ್ದು, ಅನೇಕ ಮಂದಿ ಈ ಚಾಲೆಂಜ್ ಸ್ವೀಕರಿಸುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲವರು ಈ ರೋಲ್ ನೋಡುವ ಮುನ್ನ ನೀವು ಕೆಲವು ಜೀರ್ಣಾ ಕ್ರಿಯೆಯಾಗುವ ಮಾತ್ರೆ ಇಟ್ಟುಕೊಳ್ಳುವುದು ಉತ್ತಮ. ಏಕೆಂದರೆ ರೋಲ್‍ನನ್ನು ನೋಡುತ್ತಿದ್ದಂತೆಯೇ ಹೊಟ್ಟೆ ತುಂಬಿ ಹೋಗುತ್ತದೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

  • ಮಂಡ್ಯಕ್ಕೆ ಅಂಬರೀಶ್ ಕೊಡುಗೆ ಶೂನ್ಯ, ಸಿನಿಮಾದಂತೆಯೇ ಸಂಸದೆಯಾಗಿ ಸುಮಲತಾ ನಟನೆ : ಶಿವರಾಮೇಗೌಡ

    ಮಂಡ್ಯಕ್ಕೆ ಅಂಬರೀಶ್ ಕೊಡುಗೆ ಶೂನ್ಯ, ಸಿನಿಮಾದಂತೆಯೇ ಸಂಸದೆಯಾಗಿ ಸುಮಲತಾ ನಟನೆ : ಶಿವರಾಮೇಗೌಡ

    – ಸುಮಲತಾಗೆ ಸರಿಯಾದ ಅಡ್ವೈಸರ್ ಇಲ್ಲ

    ಮಂಡ್ಯ: ಸಿನಿಮಾ ರೀತಿಯಲ್ಲಿಯೇ ಸಂಸದೆಯಾಗಿ ಸುಮಲತಾ ಅಂಬರೀಶ್ ನಟನೆ ಮಾಡುತ್ತಿದ್ದಾರೆ. ಕರ್ಣ ಎಂದು ಹೆಸರು ಪಡೆದಿರುವ ಅಂಬರೀಶ್‍ರವರ ಕೊಡುಗೆಯೂ ಮಂಡ್ಯಕ್ಕೆ ಶೂನ್ಯ. ಸಂಸದೆ ಸುಮಲತಾ ಕೊರೊನಾ ಕಾಲದಲ್ಲಿ ಏನು ಮಾಡಿದ್ದಾರೆ ಎಂದು ಜೆಡಿಎಸ್ ಮಾಜಿ ಸಂಸದ ಶಿವರಾಮೇಗೌಡ ಪ್ರಶ್ನೆ ಮಾಡಿದ್ದಾರೆ.

    ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಮಾತನಾಡಿದ ಅವರು, ಮುಂಬರುವ ಜಿಲ್ಲಾ ಪಂಚಾಯತಿ ಚುನಾವಣೆಗೆ ಸ್ವಾಭಿಮಾನದ ಅಭ್ಯರ್ಥಿಗಳನ್ನು ಸುಮಲತಾರವರು ಹಾಕಲಿ ಇದು ಚಾಲೆಂಜ್ ಎಂದು ಸವಾಲೊಡ್ಡಿದ್ದಾರೆ. ಜೊತೆಗೆ ಸುಮಲತಾಗೆ ಸರಿಯಾದ ಅಡ್ವೈಸರ್ ಇಲ್ಲ. ಅವರು ಒಂದು ಪಕ್ಷಕ್ಕೆ ಸೇರಿಕೊಳ್ಳಲಿ, ಬಿಜೆಪಿ ಇಲ್ಲ, ಕಾಂಗ್ರೆಸ್ ಯಾವುದಾದರೂ ಸೇರಲಿ ಯಾವ ಪಕ್ಷವನ್ನು ಸೇರದಿದ್ದರೆ ವಾಟ್ ನೆಕ್ಟ್? ಮಂಡ್ಯ ಜನರು ದಡ್ಡರಲ್ಲ, ಒಂದು ಸಲ ಯಾಮಾರಿಸಿದ್ದೀರಾ, ಜನ ಮತ್ತೆ ಯಾಮಾರಲ್ಲ. ಯಾವುದಾದರೂ ಒಂದು ಪಕ್ಷ ಸೇರಿ ಆಗ ಅಲ್ಲಿನ ಮುಖಂಡರಾದರು ನಿಮ್ಮ ಜೊತೆ ಬರುತ್ತಾರೆ ಎಂದು ಸುಮಲತಾರವರಿಗೆ ರಾಜಕೀಯ ಕಿವಿಮಾತು ಹೇಳಿದ್ದಾರೆ.

    ಸುಮಲತಾ ಮಂಡ್ಯ ಪಾಲಿಟಿಕ್ಸ್ ನಲ್ಲಿ ಬಿಗ್ ಜೀರೋ. ಆಕೆ ಬಗ್ಗೆ ಮಾತನಾಡದಂತೆ ನಮ್ಮ ನಾಯಕರಲ್ಲಿ ಮನವಿ ಮಾಡುತ್ತೇನೆ. ದೊಡ್ಡ ಸೊನ್ನೆಯಾಗಿರುವಾಗ ಅಂಬರೀಶ್ ಹೆಸರು ಹೇಳಿಕೊಂಡು ಹೋದವರು ಯಾರು? ಅಂಬರೀಶ್ ಗುಣಾನೇ ಬೇರೆ ಸುಮಲತಾ ಗುಣಾನೇ ಬೇರೆ. ಅಂಬರೀಶ್ ಪತ್ನಿ ಎಂದು ಹೈಜಾಕ್ ಮಾಡಿ ಮಂಡ್ಯ ಜನರ ಮನಸ್ಸು ಗೆದ್ದಿದ್ದಾರೆ ಅಷ್ಟೇ. ಅಂಬರೀಶ್ ಕಾಲದಲ್ಲೂ ಗಣಿ ನಡೆಯುತ್ತಿತ್ತು ಅಲ್ವಾ? ಆಗ ಯಾಕೆ ಇಯಮ್ಮ ನಿಲ್ಲಿಸಲಿಲ್ಲ. ಮಂಡ್ಯ ಜಿಲ್ಲೆಯಿಂದ ಹೋದವರಿಗೆ ಕಾಫಿ ಬೇಡ, ನೀವು ಒಂದು ಲೋಟ ನೀರು ಕೊಟ್ಟಿದ್ದರೆ ಸಾಕಾಗಿತ್ತು. ಮಂಡ್ಯ ಜನಕ್ಕೆ ಎಲ್ಲವೂ ಗೊತ್ತಿದೆ, ಹಾಗಾಗಿ ಇದನ್ನು ಇಲ್ಲಿಗೆ ಬಿಡಿ. ಜೆಡಿಎಸ್ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಿ. ಸುಮಲತಾರನ್ನು ಜನ ಆಗಲೇ ಮರೆತಿದ್ದರು, ಆದರೆ ನಮ್ಮ ನಾಯಕರೇ ಮಾತನಾಡಿ ಮತ್ತೆ ನೆನಪಿಸಿದರು ಎಂದಿದ್ದಾರೆ.

    ಅಂಬರೀಶ್ ಸತ್ತಾಗ ಮಂಡ್ಯಕ್ಕೆ ಶವ ತೆಗೆದುಕೊಂಡು ಹೋಗುವುದು ಬೇಡ ಅಂತ ಈಯಮ್ಮ ಹೇಳಿದರು. ಆದರೆ ಕುಮಾರಸ್ವಾಮಿ ಮಂಡ್ಯಕ್ಕೆ ತಂದರು. ರಾಜ್‍ಕುಮಾರ್ ಪಕ್ಕದಲ್ಲೇ ಅಂಬಿ ಇರಬೇಕು ಅಂತ ಸಮಾಧಿಗೆ ಜಾಗ ಕೊಟ್ಟರು. ಸುಮಲತಾ ಆಂಧ್ರಕ್ಕೂ ಮಂಚವಾಡು ಅನಂತುಡು ಅಂದಂಗೆ ಅವರು ಅನಂತಪುರದವರು. ಅಂಬರೀಶ್ ಮದುವೆ ಆಗಿ ಬಂದ ಮೇಲೆ ಅವರ ಧರ್ಮಪತ್ನಿ ಅಂತ ಸ್ವೀಕಾರ ಮಾಡಿದ್ದೇವೆ. ಅಷ್ಟು ಬಿಟ್ಟರೆ ಬೇರೇನೂ ಇಲ್ಲಾ ಎನ್ನುವುದರ ಮೂಲಕ ಮತ್ತೆ ಸುಮಲತಾ ಮೂಲ ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಮಾತಾಡುವ ಸ್ವಾತಂತ್ರ್ಯ ಕೆಲವರಿಗೆ ಮಾತ್ರ ಇದೆಯಾ?: ರಾಕ್‍ಲೈನ್ ವೆಂಕಟೇಶ್

  • ಆರ್‌ಸಿಬಿ ಗೆಲುವಿನ ನಂತ್ರ ಬ್ರೇಕ್ ದಿ ಬಿಯರ್ಡ್ ಚಾಲೆಂಜ್ ಸ್ವೀಕರಿಸಿದ ಎಬಿಡಿ

    ಆರ್‌ಸಿಬಿ ಗೆಲುವಿನ ನಂತ್ರ ಬ್ರೇಕ್ ದಿ ಬಿಯರ್ಡ್ ಚಾಲೆಂಜ್ ಸ್ವೀಕರಿಸಿದ ಎಬಿಡಿ

    ಅಬುಧಾಬಿ: ನಿನ್ನೆಯ ಪಂದ್ಯದಲ್ಲಿ ಅಬ್ಬರಿಸಿದ್ದ ಆರ್‌ಸಿಬಿ ತಂಡದ ಸ್ಫೋಟಕ ಬ್ಯಾಟ್ಸ್ ಮ್ಯಾನ್ ಎಬಿಡಿ ವಿಲಿಯರ್ಸ್ ಅವರು ಇಂದು ಬ್ರೇಕ್ ದಿ ಬಿಯರ್ಡ್ ಚಾಲೆಂಜ್ ಸ್ವೀಕರಿಸಿದ್ದಾರೆ.

    ಈಗ ಐಪಿಎಲ್ ಆಟಗಾರರು ತಮ್ಮ ಗಡ್ಡಕ್ಕೆ ಹೊಸ ರೂಪ ಕೊಡುವ ಸಲುವಾಗಿ ಬ್ರೇಕ್ ದಿ ಬಿಯರ್ಡ್ ಎಂಬ ಹೊಸ ಚಾಲೆಂಜ್ ಮಾಡುತ್ತಿದ್ದಾರೆ. ಮೊದಲು ಇದನ್ನು ಹಾರ್ದಿಕ್ ಪಾಂಡ್ಯ ಮಾಡಿದ್ದರು. ನಂತರ ಕೀರನ್ ಪೊಲಾರ್ಡ್ ಅವರು ಇದನ್ನು ಸ್ವೀಕರಿಸಿದ್ದರು. ನಂತರ ದಿನೇಶ್ ಕಾರ್ತಿಕ್ ಅವರು ಕೂಡ ಈ ಚಾಲೆಂಜ್ ಮಾಡಿದ್ದರು. ಇವೆರೆಲ್ಲರ ನಂತರ ಈಗ ಎಬಿಡಿ ಅವರು ಬ್ರೇಕ್ ದಿ ಬಿಯರ್ಡ್ ಚಾಲೆಂಜ್ ಮಾಡಿದ್ದಾರೆ.

    ಬ್ರೇಕ್ ದಿ ಬಿಯರ್ಡ್ ಚಾಲೆಂಜ್ ಮಾಡಿರುವ ವಿಡಿಯೋವನ್ನು ತಮ್ಮ ಟ್ವಿಟ್ಟರಿನಲ್ಲಿ ಹಾಕಿಕೊಂಡಿರುವ ಎಬಿಡಿ, ಅವರು ಹೇಳಿದಂತೆ ಬದಲಾವಣೆಯನ್ನು ಮಾಡಿದ್ದೇನೆ. ಅವರು ಹೇಳಿದ್ದನ್ನು ಗಂಭೀರವಾಗಿ ತೆಗೆದುಕೊಂಡು ಹೊಸ ಶೈಲಿಯಲ್ಲಿ ನ್ಯೂ ಸ್ಟೈಲ್ ಅನ್ನು ಮಾಡಿದ್ದೇನೆ. ಈ ಹೊಸ ಶೈಲಿ ಮತ್ತು ಸನ್ ಗ್ಲಾಸಸ್ ಹೇಗಿರುತ್ತೆ ಎಂದು ಬರೆದು ದಿನೇಶ್ ಕಾರ್ತಿಕ್ ಮತ್ತು ಕೀರನ್ ಪೊಲಾರ್ಡ್ ಮತ್ತು ಫಾಫ್ ಡು ಪ್ಲೆಸಿಸ್ ಅವರನ್ನು ಟ್ಯಾಗ್ ಮಾಡಿದ್ದಾರೆ.

    https://www.instagram.com/p/CGB2ehXAs6N/

    ಇದರ ಜೊತೆಗೆ ನನ್ನ ನಂತರ ಮುಂದಿನ ವಾರದಲ್ಲಿ ಈ ಬ್ರೇಕ್ ದಿ ಬಿಯರ್ಡ್ ಚಾಲೆಂಜ್ ಯಾರು ಸ್ವೀಕರಿಸುತ್ತಾರೆ ನೋಡಲು ಕಾಯುತ್ತಿದ್ದೇನೆ ಎಂದು ಬರೆದುಕೊಂಡಿದ್ದರು. ಕಳೆದ ವಾರ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕ ದಿನೇಶ್ ಕಾರ್ತಿಕ್ ಅವರು ಕೂಡ ಈ ಚಾಲೆಂಜ್ ಮಾಡಿದ್ದರು. ತಮ್ಮ ಗಡ್ಡಕ್ಕೆ ಹೊಸ ರೂಪವನ್ನು ಕೊಟ್ಟು ಅದನ್ನು ವಿಡಿಯೋ ಮಾಡಿ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಹೊಸ ಸೀಸನ್, ಹೊಸ ಲೆವೆಲಿಗೆ ಹೋಗುವ ಸಮಯವಿದು ಎಂದು ಬರೆದುಕೊಂಡಿದ್ದರು.

    ಕಳೆದ ಪಂದ್ಯನಲ್ಲಿ ಸ್ಫೋಟಕವಾಗಿ ಬ್ಯಾಟ್ ಬೀಸಿದ ಎಬಿಡಿ ವಿಲಿಯರ್ಸ್ ತಾವು ಆಡಿದ 33 ಎಸೆತಗಳಲ್ಲಿ ಐದು ಬೌಂಡರಿ ಮತ್ತು ಆರು ಸಿಕ್ಸರ್ ಸಮೇತ ಭರ್ಜರಿ 73 ರನ್ ಸಿಡಿಸಿದರು. ಇವರಿಗೆ ಉತ್ತಮ ಸಾಥ್ ನೀಡಿದ ನಾಯಕ ವಿರಾಟ್ ಕೊಹ್ಲಿಯವರು 28 ಬಾಲಿಗೆ 33 ರನ್ ಸಿಡಿಸಿದರು. ಈ ಮೂಲಕ ಕೋಲ್ಕತ್ತಾಗೆ 195 ರನ್‍ಗಳ ಟಾರ್ಗೆಟ್ ನೀಡಿತ್ತು. ಈ ಗುರಿಯನ್ನು ಬೆನ್ನಟ್ಟಿದ ಕೆಕೆಆರ್ ಬೆಂಗಳೂರು ಬೌಲರ್ ಗಳ ದಾಳಿಗೆ ತತ್ತರಿಸಿ 20 ಓವರಿನಲ್ಲಿ ಕೇವಲ 112 ರನ್ ಗಳಿಸಿ ಸೋಲನ್ನು ಒಪ್ಪಿಕೊಂಡಿತು.

  • ಪೊಲಾರ್ಡ್ ಚಾಲೆಂಜ್ ಸ್ವೀಕರಿಸಿದ ದಿನೇಶ್ ಕಾರ್ತಿಕ್

    ಪೊಲಾರ್ಡ್ ಚಾಲೆಂಜ್ ಸ್ವೀಕರಿಸಿದ ದಿನೇಶ್ ಕಾರ್ತಿಕ್

    ನವದೆಹಲಿ: ಮುಂಬೈ ಇಂಡಿಯನ್ಸ್ ತಂಡದ ದೈತ್ಯ ಆಲ್‍ರೌಂಡರ್ ಕೀರನ್ ಪೊಲಾರ್ಡ್ ಅವರು ನೀಡಿದ ಚಾಲೆಂಜ್ ಅನ್ನು ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕ ದಿನೇಶ್ ಕಾರ್ತಿಕ್ ಅವರು ಸ್ವೀಕರಿಸಿದ್ದಾರೆ.

    ಕಳೆದ ಮಂಗಳವಾರ ಮುಂಬೈ ಇಂಡಿಯನ್ಸ್ ತಂಡ ಕೀರನ್ ಪೊಲಾರ್ಡ್ ಅವರು ತಮ್ಮ ತಂಡದ ಆಟಗಾರ ಹಾರ್ದಿಕ್ ಪಾಂಡ್ಯ ಅವರಿಂದ ಚಾಲೆಂಜ್ ತೆಗೆದುಕೊಂಡು ತಮ್ಮ ಗಡ್ಡಕ್ಕೆ ಹೊಸ ಲುಕ್ ಕೊಟ್ಟಿದ್ದರು. ನಂತರ ಅವರು ಈ ಚಾಲೆಂಜ್ ಅನ್ನು ಮಾಡುವಂತೆ ದಿನೇಶ್ ಕಾರ್ತಿಕ್ ಅವರನ್ನು ನಾಮಿನೇಟ್ ಮಾಡಿದ್ದರು.

    https://www.instagram.com/p/CGB2ehXAs6N/?utm_source=ig_embed

    ಗುರುವಾರ ಪೊಲಾರ್ಡ್ ಅವರ ಬ್ರೇಕ್ ದಿ ಬಿಯರ್ಡ್ ಚಾಲೆಂಜ್ ಅನ್ನು ಸ್ವೀಕಾರ ಮಾಡಿದ ದಿನೇಶ್ ಕಾರ್ತಿಕ್ ಅವರು, ತಮ್ಮ ಗಡ್ಡಕ್ಕೆ ಹೊಸ ರೂಪವನ್ನು ಕೊಟ್ಟು ಅದನ್ನು ವಿಡಿಯೋ ಮಾಡಿ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಹೊಸ ಸೀಸನ್, ಹೊಸ ಲೆವೆಲಿಗೆ ಹೋಗುವ ಸಮಯವಿದು ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಪೊಲಾರ್ಡ್ ಅವರ ಚಾಲೆಂಜ್ ಅನ್ನು ಪೂರ್ಣಗೊಳಿಸಿದ್ದಾರೆ.

    ಈಗಾಗಲೇ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಐಪಿಎಲ್-2020ಯಲ್ಲಿ ಐದು ಪಂದ್ಯಗಳನ್ನು ಆಡಿದ್ದು, ಅದರಲ್ಲಿ ಮೂರು ಪಂದ್ಯಗಳನ್ನು ಗೆದ್ದು, ಎರಡು ಪಂದ್ಯಗಳನ್ನು ಸೋತು ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಇದರ ಜೊತೆಗೆ ಕೆಕೆಆರ್ ತಂಡದ ನಾಯಕತ್ವವನ್ನು ಬದಲಾವಣೆ ಮಾಡಬೇಕು ಎಂಬ ಕೂಗು ಕೂಡ ಕೇಳಿಬಂದಿದೆ. ಐದು ಪಂದ್ಯಗಳಲ್ಲೂ ನಾಯಕ ದಿನೇಶ್ ಕಾರ್ತಿಕ್ ಅವರು ಉತ್ತಮ ಪ್ರದರ್ಶನ ನೀಡುವುದರಲ್ಲಿ ವಿಫಲವಾಗಿದ್ದಾರೆ.

    ಮುಂಬೈ ಇಂಡಿಯನ್ಸ್ ತಂಡ ಟೂರ್ನಿಯ ಮೊದಲ ಪಂದ್ಯದಲ್ಲಿ ಸೋತಿದ್ದರೂ ಕೂಡ, ಆಡಿದ ಆರು ಪಂದ್ಯಗಳಲ್ಲಿ ನಾಲ್ಕುರಲ್ಲಿ ಗೆದ್ದು ಎರಡು ಪಂದ್ಯಗಳಲ್ಲಿ ಸೋತು ಎಂಟು ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಈ ಬಾರಿ ಐಪಿಎಲ್‍ನಲ್ಲಿ ಅಬ್ಬರಿಸುತ್ತಿರುವ ಕೀರನ್ ಪೊಲಾರ್ಡ್ ಅವರು, ಮುಂಬೈ ಮಧ್ಯಮ ಕ್ರಮಾಂಕದ ಆಧಾರ ಸ್ಥಂಭವಾಗಿದ್ದಾರೆ. ಫೀಲ್ಡಿಂಗ್, ಬೌಲಿಂಗ್ ಮತ್ತು ಬ್ಯಾಟಿಂಗ್ ಮೂರಲ್ಲೂ ಪೊಲಾರ್ಡ್ ಮಿಂಚುತ್ತಿದ್ದಾರೆ.

  • ಟವೆಲ್ ಕಟ್ಟಿಕೊಂಡು ಸವಾಲ್ ಹಾಕಿದ ‘ರಣವಿಕ್ರಮ’ ಬೆಡಗಿ

    ಟವೆಲ್ ಕಟ್ಟಿಕೊಂಡು ಸವಾಲ್ ಹಾಕಿದ ‘ರಣವಿಕ್ರಮ’ ಬೆಡಗಿ

    ಮುಂಬೈ: ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸಕ್ರಿಯರಾಗಿರುವ ನಟಿ ಅದಾ ಶರ್ಮಾ ಲಾಕ್‍ಡೌನ್‍ನಲ್ಲಿ ತಮ್ಮ ಅಭಿಮಾನಿಗಳಿಗೆ ಹೊಸ ಹೊಸ ಚಾಲೆಂಜ್ ಹಾಕಿ ಕೆಲಸ ಕೊಡುತ್ತಿದ್ದಾರೆ. ಅದರಲ್ಲೂ ಆಗಾಗ ಅವರು ಶೇರ್ ಮಾಡುವ ಹಾಟ್ ಫೋಟೋಗಳು ಪಡ್ಡೆ ಹುಡುಗರ ನಿದ್ದೆ ಕೆಡಿಸಿದೆ.

    ಇತ್ತೀಚೆಗೆ ಪಾರ್ಟಿ ವಿಥ್ ಪಾಟಿ ಎಂದು ಸ್ಟೆಪ್ ಹಾಕಿದ್ದ ಅದಾ ಈಗ ಟವೆಲ್ ಕಟ್ಟಿಕೊಂಡು ಅಭಿಮಾನಿಗಳಿಗೆ ಸವಾಲ್ ಹಾಕಿದ್ದಾರೆ. ಹೌದು. ಟವೆಲ್ ಕಟ್ಟಿಕೊಂಡ ಅದಾ ಸಖತ್ ಹಾಟ್ ಪೋಸ್ ಕೊಟ್ಟಿದ್ದಾರೆ. ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಹಾಕಿಕೊಂಡಿರುವ ಅದಾ ಶರ್ಮಾ, ಬಾತ್ ಟವೆಲ್ ಸುತ್ತಿಕೊಂಡು ಕಾಲಿನ ಎರಡು ಬೆರಳು ಒಂದು ಕಡೆ, ಉಳಿದ ಮೂರು ಬೆರಳು ಇನ್ನೊಂದು ಕಡೆ ಸ್ಪಿಲ್ಟ್ ಮಾಡಿದ್ದಾರೆ. ನೀವು ಹೀಗೆ ಮಾಡಬಲ್ಲಿರಾ ಅಂತ ಅಭಿಮಾನಿಗಳಿಗೆ ತಮ್ಮ ಫೋಟೋವನ್ನು ಶೇರ್ ಮಾಡಿ ಸವಾಲ್ ಹಾಕಿದ್ದಾರೆ.

    https://www.instagram.com/p/CAaPdjynYTa/

    ಆದರೆ ಅದಾ ಹಾಕಿರುವ ಸವಾಲಿಗಿಂತ ಅವರ ಬೋಲ್ಡ್ ಫೋಟೋಗಳೇ ನೆಟ್ಟಿಗರನ್ನು ಆಕರ್ಷಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಫೋಟೋಗಳು ಸಖತ್ ವೈರಲ್ ಆಗುತ್ತಿದೆ. ಅಷ್ಟೇ ಅಲ್ಲದೇ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಅದಾ ಹೆಚ್ಚಾಗಿ ಹಾಟ್ ಫೋಟೋಗಳನ್ನೆ ಪೋಸ್ಟ್ ಮಾಡುತ್ತಿರುತ್ತಾರೆ. ಈ ಫೋಟೋಗಳು ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸದ್ದು ಮಾಡುತ್ತಿರುತ್ತವೆ. ಜೊತೆಗೆ ಅದಾ ಅವರ ಹಲವು ವಿಡಿಯೋಗಳು ಕೂಡ ವೈರಲ್ ಆಗುತ್ತಲೇ ಇರುತ್ತದೆ.

    ಬಾಲಿವುಡ್‍ನ 1920 ಹಾರರ್ ಸಿನಿಮಾ ಮೂಲಕ ತಮ್ಮ ಸಿನಿ ಪಯಣ ಆರಂಭಿಸಿದ ಅದಾ ಬಿಟೌನ್‍ನಲ್ಲಿ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ತೆಲುಗು, ತಮಿಳು ಚಿತ್ರಗಳಲ್ಲಿ ಕೂಡ ಅದಾ ನಟಿಸಿ ಮೋಡಿ ಮಾಡಿದ್ದಾರೆ. ಇತ್ತ ಸ್ಯಾಂಡಲ್‍ವುಡ್‍ನಲ್ಲಿ ಪವರ್ ಸ್ಟಾರ್ ಗೆ ಜೋಡಿ ಆಗಿ ರಣವಿಕ್ರಮ ಚಿತ್ರದಲ್ಲಿ ನಟಿಸಿ ಅಭಿಮಾನಿಗಳನ್ನು ಗಳಿಸಿದ್ದಾರೆ. ಸದ್ಯ ಮ್ಯಾನ್ ಟು ಮ್ಯಾನ್ ಸಿನಿಮಾದಲ್ಲಿ ನಟಿ ಬ್ಯುಸಿಯಾಗಿದ್ದಾರೆ.

  • ಕಣ್ಣು ಮುಚ್ಚಿ ಸವಾಲು ಪೂರ್ಣಗೊಳಿಸಿ ಯುವಿಗೆ ಚಮಕ್ ಕೊಟ್ಟ ಲಿಟಲ್ ಮಾಸ್ಟರ್

    ಕಣ್ಣು ಮುಚ್ಚಿ ಸವಾಲು ಪೂರ್ಣಗೊಳಿಸಿ ಯುವಿಗೆ ಚಮಕ್ ಕೊಟ್ಟ ಲಿಟಲ್ ಮಾಸ್ಟರ್

    ನವದೆಹಲಿ: ಭಾರತದ ಮಾಜಿ ಆಲ್‍ರೌಂಡರ್ ಯುವರಾಜ್ ಸಿಂಗ್ ನೀಡಿದ ಸವಾಲನ್ನು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಪೂರ್ಣ ಮಾಡುವ ಮೂಲಕ ಸಚಿನ್ ತೆಂಡೂಲ್ಕರ್ ಅವರು ನಾನೊಬ್ಬ ಕ್ರಿಕೆಟ್ ಲೆಜೆಂಡ್ ಎಂಬುದನ್ನು ಮೊತ್ತೊಮ್ಮೆ ಸಾಬೀತು ಪಡಿಸಿದ್ದಾರೆ.

    ಕೊರೊನಾ ಲಾಕ್‍ಡೌನ್ ನಡುವೆ ಮನೆಯಲ್ಲಿ ಇರುವ ಯುವರಾಜ್ ಸಿಂಗ್ ಅವರು ಗುರುವಾರ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಸಚಿನ್ ತೆಂಡೂಲ್ಕರ್,ರೋಹಿತ್ ಶರ್ಮಾ ಮತ್ತು ಹರ್ಭಜನ್ ಸಿಂಗ್ ಅವರಿಗೆ ಕೀಪ್ ಈಟ್ ಆಪ್ ಎಂಬ ಜಾಲೆಂಜ್ ಕೊಟ್ಟಿದ್ದರು. ಈ ಚಾಲೆಂಜ್ ಅನ್ನು ಸ್ವೀಕರಿಸಿರುವ ಸಚಿನ್ ಅವರು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಸವಾಲನ್ನು ಪೂರ್ಣಗೊಳಿಸಿದ್ದಾರೆ.

    https://twitter.com/YUVSTRONG12/status/1260931470048129024

    ಯುವರಾಜ್ ಸಿಂಗ್ ಕೊಟ್ಟ ಕೀಪ್ ಈಟ್ ಆಪ್ ಚಾಲೆಂಜ್‍ನಲ್ಲಿ ಕ್ರಿಕೆಟ್ ಬ್ಯಾಟಿನ ಒಂದು ಕಡೆ ಅಂಚಿನಲ್ಲಿ ಬಾಲನ್ನು ಬ್ಯಾಲೆನ್ಸ್ ಮಾಡಬೇಕಿತ್ತು. ಈ ಸವಾಲನ್ನು ನೀಡಿದ್ದ ಯುವಿ ಈ ಸವಾಲು ಸಚಿನ್ ಮತ್ತು ರೋಹಿತ್ ಗೆ ಸುಲಭವಾಗುತ್ತದೆ. ಆದರೆ ಹರ್ಭಜನ್ ಸಿಂಗ್ ಅವರಿಗೆ ಕಷ್ಟವಾಗುತ್ತದೆ. ಟ್ರೈ ಮಾಡಿ ಎಂದು ಹೇಳಿದ್ದರು. ಈ ಸವಾಲನ್ನು ಸ್ವೀಕರಿಸಿ ಕಣ್ಣು ಮುಚ್ಚಿ ಬಾಲನ್ನು ಬ್ಯಾಲೆನ್ಸ್ ಮಾಡಿರುವ ಸಚಿನ್ ಮತ್ತೆ ಯವರಾಜ್ ಅವರಿಗೆ ಇದನ್ನು ಮಾಡುವಂತೆ ಸವಾಲ್ ಹಾಕಿದ್ದಾರೆ.

    https://www.instagram.com/p/CAPuZhxlGbk/?utm_source=ig_embed

    ಕಣ್ಣಿಗೆ ಬಟ್ಟೆಕಟ್ಟಿಕೊಂಡು ಚಾಲೆಂಜ್ ಮಾಡಿರುವ ಸಚಿನ್, ಯುವಿ ನೀವು ತುಂಬ ಸುಲಭವಾದ ಆಯ್ಕೆಯನ್ನು ನನಗೆ ನೀಡಿದ್ದೀರಿ. ಆದರೆ ನಾನು ನಿಮಗೆ ಕಠಿಣವಾದ ಆಯ್ಕೆಯನ್ನು ನೀಡುತ್ತಿದ್ದೇನೆ. ಹಾಗೂ ನಿಮ್ಮನ್ನು ಈ ಚಾಲೆಂಜ್‍ಗೆ ನಾಮಿನೇಟ್ ಮಾಡಿದ್ದೇನೆ. ಬನ್ನಿ ನನಗಾಗಿ ಈ ಸವಾಲನ್ನು ಮಾಡಿ ಎಂದು ಸಚಿನ್ ಅವರು ಹೇಳಿದ್ದಾರೆ. ಜೊತೆಗೆ ನಾನು ನಿನಗೆ ವಾಪಸ್ ಚಾಲೆಂಜ್ ಮಾಡುತ್ತಿದ್ದೇನೆ ಯುವರಾಜ್ ಸಿಂಗ್, ಆದರೆ ನಾನು ಒಂದು ಟ್ವಿಸ್ಟ್ ಕೊಟ್ಟಿದ್ದೇನೆ. ನಾನು ಎಲ್ಲರೂ ಈ ಚಾಲೆಂಜ್ ಮಾಡಲು ಕೇಳುತ್ತೇನೆ ಸೇಫ್ ಆಗಿ ಮನೆಯಲ್ಲೇ ಇರಿ ಎಂದು ಬರೆದುಕೊಂಡಿದ್ದಾರೆ.

    ಇದರ ಜೊತೆಗೆ ಸಚಿನ್ ಅವರು ಇನ್ನೊಂದು ವಿಡಿಯೋ ಆಪ್ಲೋಡ್ ಮಾಡಿದ್ದು, ಆದರಲ್ಲಿ ಯುವರಾಜ್ ಸಿಂಗ್ ಅವರಿಗೆ ಚಾಲೆಂಜ್ ಮಾಡಲು ಒಂದು ಸಲಹೆಯನ್ನು ನೀಡಿದ್ದಾರೆ. ನಾನು ಕಣ್ಣಿಗೆ ಕಟ್ಟಿಕೊಂಡಿರುವ ಬಟ್ಟೆ ಬಹಳ ತೆಳುವಾಗಿದೆ. ಈ ರೀತಿ ನೀವು ಚಾಲೆಂಜ್ ಅನ್ನು ಪೂರ್ಣಗೊಳಿಸಬಹುದು ಎಂದು ಹೇಳಿದ್ದಾರೆ. ಇದಕ್ಕೆ ಉತ್ತರಿಸಿರುವ ಯುವರಾಜ್ ಸಿಂಗ್ ಅವರು, ನಾನು ಈ ಸವಾಲನ್ನು ಮಾಡಲು ಒಂದು ವಾರ ತೆಗೆದುಕೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.

    ಸುಮಾರು 60 ವರ್ಷದ ನಂತರ ಕೊರೊನಾದಿಂದ ಕ್ರಿಕೆಟ್ ತನ್ನೆಲ್ಲ ಚುಟುವಟಿಗಳನ್ನು ಸಂಪೂರ್ಣವಾಗಿ ನಿಲ್ಲಿಸಿದೆ. ಈ ನಡುವೆ ಮನೆಯಲ್ಲಿ ಕುಳಿತಿರುವ ಕ್ರಿಕೆಟ್ ಆಟಗಾರರು ಸಾಮಾಜಿಕ ಜಾಲತಾಣದಲ್ಲಿ ಸಖತ್ ಸಕ್ರಿಯವಾಗಿ ಇದ್ದಾರೆ. ಲೈವ್‍ನಲ್ಲಿ ಬಂದು ಅಭಿಮಾನಿಗಳ ಬಳಿ ಮಾತನಾಡುತ್ತಿದ್ದಾರೆ. ಜೊತೆಗೆ ಕೊರೊನಾ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಿದ್ದಾರೆ.

  • ಲಾಕ್‍ಡೌನ್‍ನಲ್ಲಿ ಮುದ್ದಿನ ಅಮ್ಮನಿಗಾಗಿ ಐಸ್‍ಕ್ರೀಮ್ ಮಾಡಿದ ದೇವರಕೊಂಡ

    ಲಾಕ್‍ಡೌನ್‍ನಲ್ಲಿ ಮುದ್ದಿನ ಅಮ್ಮನಿಗಾಗಿ ಐಸ್‍ಕ್ರೀಮ್ ಮಾಡಿದ ದೇವರಕೊಂಡ

    ಹೈದರಾಬಾದ್: ಲಾಕ್‍ಡೌನ್‍ ಸಮಯದಲ್ಲಿ ಸದ್ಯ ಮನೆಯಲ್ಲಿಯೇ ಇರುವ ಸೆಲೆಬ್ರಿಟಿಗಳು #BeARealMan ಎಂಬ ಚಾಲೆಂಜ್ ಸ್ವೀಕರಿಸಿ, ಎಂಜಾಯ್ ಮಾಡುತ್ತಿದ್ದಾರೆ. ಈ ಸಾಲಿಗೆ ಈಗ ಟಾಲಿವುಡ್ ನಟ ವಿಜಯ್ ದೇವರಕೊಂಡ ಕೂಡ ಸೇರಿಕೊಂಡಿದ್ದು, ಮನೆ ಕೆಲಸ ಮಾಡಿ ಮುದ್ದಿನ ಅಮ್ಮನಿಗೆ ಸಹಾಯ ಮಾಡಿ ಎಲ್ಲರ ಮನಗೆದ್ದಿದ್ದಾರೆ.

    #BeARealMan ಚಾಲೆಂಜ್ ಸ್ವೀಕರಿಸಿದ ಸೆಲೆಬ್ರಿಟಿಗಳು ಮನೆಯಲ್ಲಿನ ಮಹಿಳೆಯರಿಗೆ ಸಹಾಯ ಮಾಡುತ್ತಿರುವ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು, ಸಿನಿ ಕಲಾವಿದರನ್ನು ಟ್ಯಾಗ್ ಮಾಡುತ್ತಾ ಚಾಲೆಂಜ್ ಪಾಸ್ ಮಾಡುತ್ತಿದ್ದಾರೆ. ಹೀಗೆ ನಿರ್ದೇಶಕ ಶಿವ ಕೊರಟಾಲ ಅವರು ವಿಜಯ್ ದೇವರಕೊಂಡ ಅವರಿಗೆ ಚಾಲೆಂಜ್ ಹಾಕಿದ್ದರು. ಇದನ್ನು ಸ್ವೀಕರಿಸಿದ ವಿಜಯ್ ಮನೆ ಕೆಲಸ ಮಾಡಿ, ಅಮ್ಮನಿಗೆ ಪ್ರೀತಿಯಿಂದ ಐಸ್‍ಕ್ರೀಮ್ ಕೂಡ ಮಾಡಿಕೊಟ್ಟಿದ್ದಾರೆ.

    ಈ ಚಾಲೆಂಜ್‍ನ ವಿಡಿಯೋವೊಂದನ್ನು ವಿಜಯ್ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಲಾಕ್‍ಡೌನ್‍ನಲ್ಲಿ ನನ್ನ ದಿನನಿತ್ಯದ ಜೀವನಕ್ಕೆ ಸಂಬಂಧಿಸಿದ ಒಂದು ಪುಟ್ಟ ವಿಡಿಯೋ ಇದು. ಆನಂದ್ ದೇವರಕೊಂಡ ಈ ವಿಡಿಯೋ ಮಾಡಿದ್ದಾರೆ. ನಿರ್ದೇಶಕ ಶಿವ ಕೊರಟಾಲ ನನಗೆ #BeARealMan ಚಾಲೆಂಜ್ ಹಾಕಿದರು. ನಾನೀಗ ಮಲಯಾಳಂ ನಟ ದುಲ್ಕರ್ ಸಲ್ಮಾನ್ ಅವರಿಗೆ ಚಾಲೆಂಜ್ ಪಾಸ್ ಮಾಡುತ್ತಿದ್ದೇನೆ ಎಂದು ವಿಜಯ್ ವಿಡಿಯೋಗೆ ಕ್ಯಾಪ್ಷನ್ ಹಾಕಿದ್ದಾರೆ.

    ವಿಶೇಷ ಎಂದರೆ ವಿಜಯ್ ಪೋಸ್ಟ್ ಮಾಡಿರುವ ವಿಡಿಯೋದಲ್ಲಿ ತಮ್ಮ ಮನೆ ಹೇಗಿದೆ ಎನ್ನೋದನ್ನು ತೋರಿಸಿದ್ದಾರೆ. ಸಿನಿಮಾದಲ್ಲಿ ಬ್ಯುಸಿ ಇದ್ದಾದ ಹೆಚ್ಚು ಎಂದರೆ 6 ಗಂಟೆ ಕಾಲ ನಿದ್ದೆ ಮಾಡುತ್ತಿದ್ದೆ. ಆದ್ರೆ ಲಾಕ್‍ಡೌನ್‍ನಿಂದು ಈಗ ನಾನು ಒಂಬತ್ತುವರೆ ಗಂಟೆ ನಿದ್ದೆ ಮಾಡುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

    ವಿಡಿಯೋದಲ್ಲಿ ವಿಜಯ್ ಪಾತ್ರೆ ತೊಳೆಯುವುದು, ಮನೆ ಕ್ಲೀನ್ ಮಾಡುವುದು ಹಾಗೂ ಅಮ್ಮನಿಗೆ ಪ್ರೀತಿಯಿಂದ ಮಾವಿನ ಹಣ್ಣಿನ ಐಸ್‍ಕ್ರೀಮ್ ಮಾಡಿಕೊಟ್ಟ ದೃಶ್ಯಗಳು ಸೆರೆಯಾಗಿದೆ. ಈ ವಿಡಿಯೋಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಈ ಹಿಂದೆ ಬಾಹುಬಲಿ ನಿರ್ದೇಶಕ ರಾಜಮೌಳಿ ಅವರು ಕೂಡ #BeARealMan ಚಾಲೆಂಜ್ ಸ್ವೀಕರಿಸಿದ್ದರು. ನಿರ್ದೇಶನದಲ್ಲಿ ಕಮಾಲ್ ಮಾಡಿದ್ದ ರಾಜಮೌಳಿ ಅವರು ಮನೆ ಕೆಲಸ ಮಾಡಿ ಭೇಷ್ ಎನಿಸಿಕೊಂಡಿದ್ದರು.

    ಅಷ್ಟೇ ಅಲ್ಲದೆ ಮೆಗಾಸ್ಟಾರ್ ಚಿರಂಜೀವಿ, ನಟ ರಾಮ್‍ಚರಣ್, ಜೂನಿಯರ್ ಎನ್‍ಟಿಆರ್, ನಟ ವೆಂಕಟೇಶ್ ಹೀಗೆ ಹಲವು ನಟರು, ನಿರ್ದೇಶಕರು, ಕಲಾವಿದರು ಈ ಚಾಲೆಂಜ್ ಸ್ವೀಕರಿಸಿ ರಿಯಲ್ ಮ್ಯಾನ್ ಆಗಿದ್ದಾರೆ.

  • ಸಿನಿಮಾ ಬಿಟ್ಟು ಮನೆಕೆಲಸದಲ್ಲಿ ಬ್ಯುಸಿಯಾದ್ರು ರಾಜಮೌಳಿ

    ಸಿನಿಮಾ ಬಿಟ್ಟು ಮನೆಕೆಲಸದಲ್ಲಿ ಬ್ಯುಸಿಯಾದ್ರು ರಾಜಮೌಳಿ

    ಹೈದರಾಬಾದ್: ಸದ್ಯ ಲಾಕ್‍ಡೌನ್‍ನಿಂದ ಸಿನಿಮಾಗಳಿಗೆ ಬ್ರೇಕ್ ಕೊಟ್ಟಿರುವ ಬಾಹುಬಲಿ ನಿರ್ದೇಶಕ ಎಸ್. ಎಸ್ ರಾಜಮೌಳಿ ಅವರು ಮನೆಯಲ್ಲಿ ಏನು ಮಾಡುತ್ತಿದ್ದಾರೆ ಎನ್ನುವ ಸ್ಪೆಷಲ್ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

    ‘ಬಾಹುಬಲಿ’ಯಂತಹ ಸರಣಿ ಹಿಟ್ ಸಿನಿಮಾ ಕೊಟ್ಟ ನಿರ್ದೇಶಕ ರಾಜಮೌಳಿ ಸದ್ಯ ಮನೆಯಲ್ಲಿ ಕೆಲಸ ಮಾಡೋದ್ರಲ್ಲಿ ಬ್ಯುಸಿಯಾಗಿದ್ದಾರೆ. ಮನೆಯಲ್ಲಿ ಕಸ ಗುಡಿಸುತ್ತಾ, ಕಿಟಕಿ ಕ್ಲೀನ್ ಮಾಡುತ್ತಿರುವ ವಿಡಿಯೋವನ್ನು ತಮ್ಮ ಟ್ವಿಟರ್ ನಲ್ಲಿ ರಾಜಮೌಳಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಸದ್ಯ ಎಲ್ಲೆಡೆ ವೈರಲ್ ಆಗಿದ್ದು, ಸಿನಿಮಾ ಮಾತ್ರವಲ್ಲ ಮನೆ ಕೆಲಸವನ್ನೂ ಚೆನ್ನಾಗೆ ಮಾಡ್ತೀರಾ ಸಾರ್ ಎಂದು ನೆಟ್ಟಿಗರು ರಾಜಮೌಳಿ ಟ್ವೀಟ್‍ಗೆ ಕಮೆಂಟ್ ಮಾಡಿ ಕಾಲೆಳೆದಿದ್ದಾರೆ.

    ನಿರ್ದೇಶಕ ಹಾಗೂ ನಿರ್ಮಾಪಕ ಸಂದೀಪ್ ವಂಗಾ ಲಾಕ್‍ಡೌನ್ ಸಮಯದಲ್ಲಿ ಮನೆಯಲ್ಲಿ ಕೆಲಸ ಮಾಡುವ ವಿಡಿಯೋವೊಂದನ್ನು ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು. ಕೇಲವ ವಿಡಿಯೋ ಪೊಲೀಸ್ ಮಾಡೋದಲ್ಲದೇ #BetheREALMAN ಅಂತ ಸೆಲೆಬ್ರಿಟಿಗಳಿಗೆ ಚಾಲೆಂಜ್ ಕೂಡ ಮಾಡಿದ್ದಾರೆ. ಮನೆ ಕೆಲಸದವರು ಇಲ್ಲದಿದ್ದಾಗ ಮಹಿಳೆಯರಿಗೆ ಮನೆ ಕೆಲಸದಲ್ಲಿ ಸಹಾಯ ಮಾಡಿ ರಿಯಲ್ ಮ್ಯಾನ್ ಆಗಿ ಎಂದು ಸಂದೀಪ್ ರಾಜಮೌಳಿ ಅವರನ್ನು ಟ್ಯಾಗ್ ಮಾಡಿ, ಚಾಲೆಂಜ್ ಹಾಕಿದ್ದರು.

    ಈ ಸವಾಲನ್ನು ಸ್ವೀಕರಿಸಿದ ರಾಜಮೌಳಿ ತಮ್ಮ ಮನೆ ಕೆಲಸ ಮಾಡಿ ರಿಯಲ್ ಮ್ಯಾನ್ ಆಗಿದ್ದಾರೆ. ಅಷ್ಟೇ ಅಲ್ಲದೇ ಮನೆ ಕೆಲಸ ಮಾಡುತ್ತಿರುವ ವಿಡಿಯೋ ಪೋಸ್ಟ್ ಮಾಡಿ, ಜೂನಿಯರ್ ಎನ್‍ಟಿಆರ್, ರಾಮ್ ಚರಣ್ ಹಾಗೂ ಎಂಎಂ ಕೀರವಾಣಿ ಅವರಿಗೂ ಚಾಲೆಂಜ್ ಪಾಸ್ ಮಾಡಿದ್ದಾರೆ.

    ಲಾಕ್‍ಡೌನ್‍ಗೂ ಮುನ್ನ ಟಾಲಿವುಡ್‍ನ ಬಹುನಿರೀಕ್ಷಿತ ಸಿನಿಮಾ ‘ಆರ್‌ಆರ್‌ಆರ್’ ಚಿತ್ರೀಕರಣದಲ್ಲಿ ರಾಜಮೌಳಿ ಅವರು ಬ್ಯುಸಿಯಾಗಿದ್ದರು. ರಾಮ್ ಚರಣ್ ಹಾಗೂ ಜೂನಿಯರ್ ಎನ್‍ಟಿಆರ್ ಜೊತೆಗೆ ಬಾಲಿವುಡ್ ತಾರೆಯರು ಈ ಚಿತ್ರದಲ್ಲಿ ಬಣ್ಣ ಹಚ್ಚಲಿದ್ದು, ಲಾಕ್‍ಡೌನ್‍ನಿಂದಾಗಿ ಶೂಟಿಂಗ್ ಕೆಲಸ ಸ್ಥಗಿತಗೊಂಡಿದೆ.

  • ಪಬ್ಲಿಕ್ ಟಿವಿಯ ಚಾಲೆಂಜ್ ಸ್ವೀಕರಿಸಿದ ಯಾದಗಿರಿ ವೈದ್ಯ, ಯುವಕ

    ಪಬ್ಲಿಕ್ ಟಿವಿಯ ಚಾಲೆಂಜ್ ಸ್ವೀಕರಿಸಿದ ಯಾದಗಿರಿ ವೈದ್ಯ, ಯುವಕ

    – ಒಂದು ತಿಂಗಳು 200 ನಿರ್ಗತಿಕರಿಗೆ ಉಚಿತ ಊಟ

    ಯಾದಗಿರಿ: ಕೊರೊನಾ ವೈರಸ್ ಭೀತಿ ಹಿನ್ನೆಲೆ ದೇಶಾದ್ಯಂತ ಕರ್ಫ್ಯೂ ಹೇರಲಾಗಿದೆ. ಈ ಸಮಯದಲ್ಲಿ ನಿರ್ಗತಿಕರಿಗೆ ಮತ್ತು ಬಡ ಕೂಲಿ ಕಾರ್ಮಿಕರಿಗೆ ಒಂದು ಹೊತ್ತು ಊಟ ಸಹ ಸಿಗದ ಪರಿಸ್ಥಿತಿ ನಿರ್ಮಾಣವಾಗಿತ್ತು. ಹೀಗಾಗಿ ಸ್ಥಿತಿವಂತರು ತಮ್ಮ ಕೈಲಾದ ಸಹಾಯವನ್ನು ಮಾಡುವಂತೆ ಮತ್ತು ಈ ಕೆಲಸವನ್ನು ಚಾಲೆಂಜ್ ಆಗಿ ಸ್ವೀಕರಿಸುವಂತೆ ಪಬ್ಲಿಕ್ ಟಿವಿ ಮುಖ್ಯಸ್ಥರಾದ ಹೆಚ್.ಆರ್ ರಂಗನಾಥ್ ರಾಜ್ಯದ ಜನತೆಯಲ್ಲಿ ಮನವಿಯನ್ನು ಮಾಡಿದ್ದರು.

    ಪಬ್ಲಿಕ್ ಟಿವಿಯ ಮನವಿಗೆ ಸ್ಪಂದಿಸಿದ ಯಾದಗಿರಿ ವೈದ್ಯ ಮತ್ತು ಯುವಕನೋರ್ವ ಚಾಲೆಂಜ್ ಸ್ವೀಕರಿಸಿ, ಭಾರತ್ ಲಾಕ್ ಡೌನ್ ಇರುವಷ್ಟು ದಿನ 200 ಮಂದಿಗೆ ಒಂದು ಹೊತ್ತು ಊಟ ನೀಡಲು ಮುಂದಾಗಿದ್ದಾರೆ. ಯಾದಗಿರಿ ಖಾಸಗಿ ವೈದ್ಯ ವಿರೇಶ್ ಜಾಕಾ ಮತ್ತು ಸ್ನೇಹಿತ ಅನಿಲ್ ಜೊತೆಗೂಡಿ ನಗರದ ಕುಷ್ಠರೋಗಳ ಕಾಲೋನಿಯ ನಿರ್ಗತಿಕರಿಗೆ ಊಟದ ವ್ಯವಸ್ಥೆ ಮಾಡಿದ್ದಾರೆ. ಇದನ್ನೂ ಓದಿ: ಕೊರೊನಾ ವಿರುದ್ಧ ಹೋರಾಟ- ಹೆಚ್.ಆರ್ ರಂಗನಾಥ್ ಚಾಲೆಂಜ್ ಸ್ವೀಕರಿಸಿದ ಶಾಸಕ ರಘುಪತಿ ಭಟ್

    ಒಂದು ತಿಂಗಳು 200 ಜನಕ್ಕೆ ಒಂದು ಹೊತ್ತು ಆಹಾರ ಪೂರೈಕೆ ಮಾಡಲು ಈ ಇಬ್ಬರು ನಿರ್ಧರಿಸಿದ್ದಾರೆ. ದಿನಕ್ಕೆ 50 ಕೆ.ಜಿ ಊಟ ತಯಾರಿಸಿ ಗುಡಿಸಲುಗಳಿಗೆ ಪ್ಯಾಕೆಟ್ ಮೂಲಕ ಆಹಾರ ಹಂಚಿಕೆ ಕಾರ್ಯ ನಡೆಯುತ್ತಿದೆ. ಮುಂಜಾಗ್ರತೆಯಾಗಿ ಅಧಿಕಾರಿಗಳ ನೇತೃತ್ವದಲ್ಲಿ ಈ ಆಹಾರ ತಯಾರಿಸಲಾಗುತ್ತದೆ. ಬಳಿಕ ಅಧಿಕಾರಿಗಳ ನೇತೃತ್ವದಲ್ಲಿ ನಿರ್ಗತಿಕರ ಬಳಿಗೆ ತೆರಳಿ ಆಹಾರ ಪೂರೈಕೆ ಮಾಡಲಾಗುತ್ತಿದೆ. ವೈದ್ಯ ವಿರೇಶ್ ಮತ್ತು ಅನಿಲ್ ರ ಕಾರ್ಯಕ್ಕೆ ಪಬ್ಲಿಕ್ ಟಿವಿ ಮೆಚ್ಚುಗೆ ವ್ಯಕ್ತಪಡಿಸುತ್ತಿದೆ.

    ನಿನ್ನೆಯಷ್ಟೇ ಉಡುಪಿ ಶಾಸಕ ರಘುಪತಿ ಭಟ್, ಮಹದೇವಪುರ ಶಾಸಕ ಅರವಿಂದ ಲಿಂಬಾವಳಿ ಅವರು ಚಾಲೆಂಜ್ ಸ್ವೀಕರಿಸಿ ನಿರ್ಗತಿಕರಿಗೆ ಅನ್ನದಾನ ಮಾಡುತ್ತಿದ್ದಾರೆ.