Tag: ಚಾರ್ ಧಾಮ್ ಯಾತ್ರೆ

  • ಚಾರ್ ಧಾಮ್ ಯಾತ್ರಾ 2024: ಬದರಿನಾಥದಲ್ಲಿ VIP ದರ್ಶನ ಸೌಲಭ್ಯ ಸ್ಥಗಿತ

    ಚಾರ್ ಧಾಮ್ ಯಾತ್ರಾ 2024: ಬದರಿನಾಥದಲ್ಲಿ VIP ದರ್ಶನ ಸೌಲಭ್ಯ ಸ್ಥಗಿತ

    – 26 ಲಕ್ಷ ದಾಟಿದೆ ನೋಂದಣಿ ಮಾಡಿಕೊಂಡವರ ಸಂಖ್ಯೆ

    ಡೆಹ್ರಾಡೂನ್:‌ ಚಾರ್ ಧಾಮ್ ಯಾತ್ರೆಗೆ (Char Dham Yatra 2024) ದೇಶ, ವಿದೇಶಗಳಿಂದ ಭಕ್ತರು ಹರಿದು ಬರುತ್ತಿದ್ದಾರೆ. ಯಾತ್ರೆಯ ನೋಂದಣಿ ಸಂಖ್ಯೆ ಈಗಾಗಲೇ 26 ಲಕ್ಷ ದಾಟಿದೆ. ಕಳೆದ ನಾಲ್ಕು ದಿನಗಳಲ್ಲಿ ಎರಡು ಲಕ್ಷಕ್ಕೂ ಅಧಿಕ ಯಾತ್ರಾರ್ಥಿಗಳು ಆಗಮಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸದ್ಯ ವಿಐಪಿ (VIP) ದರ್ಶನ ಸೌಲಭ್ಯವನ್ನು ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಏಪ್ರಿಲ್ 15 ರಂದು ಚಾರ್ಧಾಮ್ ನೋಂದಣಿ ಪ್ರಕ್ರಿಯೆ ಪ್ರಾರಂಭವಾಗಿದೆ. ಅಂದಿನಿಂದ ಇದುವರೆಗೆ ರಾಜ್ಯದಲ್ಲಿ 26 ಲಕ್ಷಕ್ಕೂ ಹೆಚ್ಚು ಯಾತ್ರಿಕರು ನೋಂದಾಯಿಸಿಕೊಂಡಿದ್ದಾರೆ. ಯಾತ್ರಾರ್ಥಿಗಳಿಗೆ ಎಲ್ಲ ರೀತಿಯ ಸೌಲಭ್ಯ ಕಲ್ಪಿಸಲು ರಾಜ್ಯ ಸರ್ಕಾರ ಹಾಗೂ ಪ್ರವಾಸೋದ್ಯಮ ಇಲಾಖೆ ಶ್ರಮಿಸುತ್ತಿದೆ. ಎಲ್ಲಾ ಅಧಿಕಾರಿಗಳು ಸರ್ಕಾರ ಹೊರಡಿಸಿದ ಮಾರ್ಗಸೂಚಿಗಳನ್ನು ಗಂಭೀರವಾಗಿ ಅನುಸರಿಸುತ್ತಿದ್ದಾರೆ ಎಂದು ಅವರು ಹೇಳಿದರು.

    ದರ್ಶನಕ್ಕಾಗಿ ಭಕ್ತರು ಸರತಿ ಸಾಲಿನಲ್ಲಿ ನಿಂತಿದ್ದಾರೆ. ಮೇ ತಿಂಗಳಲ್ಲಿ ಕೇದಾರನಾಥ, ಬದರಿನಾಥ್, ಗಂಗೋತ್ರಿ ಮತ್ತು ಯಮುನೋತ್ರಿ ಧಾಮಕ್ಕೆ ಯಾತ್ರೆಗಾಗಿ ಆನ್‌ಲೈನ್ ನೋಂದಣಿಗಳನ್ನು ಸಂಪೂರ್ಣವಾಗಿ ಬುಕ್ ಮಾಡಲಾಗಿದೆ. ಆನ್‌ಲೈನ್ ನೋಂದಣಿಗೆ ನಿಗದಿತ ಸಂಖ್ಯೆಯ ಸ್ಲಾಟ್‌ಗಳು ಲಭ್ಯವಿದೆ. ಪೂರ್ವ ನೋಂದಣಿ ಇಲ್ಲದೆ ಆಗಮಿಸುವ ಭಕ್ತರಿಗೆ ಅವಕಾಶ ಕಲ್ಪಿಸಲು, ರಾಜ್ಯ ಸರ್ಕಾರ ಮತ್ತು ಪ್ರವಾಸೋದ್ಯಮ ಇಲಾಖೆ ಹರಿದ್ವಾರ ಮತ್ತು ಋಷಿಕೇಶದಲ್ಲಿ ಅವರ ಅನುಕೂಲಕ್ಕಾಗಿ ಆಫ್‌ಲೈನ್ ನೋಂದಣಿ ಸೌಲಭ್ಯಗಳನ್ನು ಆಯೋಜಿಸಿದೆ.

    ಗಂಗೋತ್ರಿ ಯಾತ್ರಾ ಮಾರ್ಗದಲ್ಲಿ ಟ್ರಾಫಿಕ್: ಗೇಟ್ ವ್ಯವಸ್ಥೆ ಜಾರಿಯಿಂದಾಗಿ ಯಮುನೋತ್ರಿ ಮಾರ್ಗದಲ್ಲಿ ವ್ಯವಸ್ಥೆಗಳು ಸುಗಮವಾಗಿ ಕಾರ್ಯನಿರ್ವಹಿಸುತ್ತಿರುವಂತೆ ಕಂಡುಬಂದರೂ ಗಂಗೋತ್ರಿ ಮಾರ್ಗದಲ್ಲಿ ಸವಾಲುಗಳು ಎದುರಾಗಿವೆ. ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಆಗಮಿಸಿದ್ದರಿಂದ ಸಂಚಾರ ವ್ಯವಸ್ಥೆ ಹದಗೆಟ್ಟಿದೆ. ಗಂಗೋತ್ರಿ ಯಾತ್ರಾ ಮಾರ್ಗದಲ್ಲಿ ಗಂಗನಾನಿ ಮತ್ತು ಗಂಗೋತ್ರಿ ನಡುವೆ ಸುಮಾರು 60 ಕಿ.ಮೀ ವ್ಯಾಪಿಸಿರುವ ಟ್ರಾಫಿಕ್ ಜಾಮ್‌ನಲ್ಲಿ ಹಲವು ಪ್ರಯಾಣಿಕರ ವಾಹನಗಳು ಸಿಲುಕಿವೆ.

    ಹಿಂದಿರುಗಿದ ಭಕ್ತರು: ಸಂಚಾರ ದಟ್ಟಣೆಯಲ್ಲಿ ಸಿಲುಕಿದ ಅನೇಕ ಭಕ್ತರು ತಮ್ಮ ದರ್ಶನವನ್ನು ಪೂರ್ಣಗೊಳಿಸದೆ ಉತ್ತರಕಾಶಿಯಿಂದ ಹಿಂದಿರುಗಲು ನಿರ್ಧರಿಸಿದ್ದಾರೆ. ಕಳೆದ ಭಾನುವಾರ ಯಮುನೋತ್ರಿ ಯಾತ್ರಾ ಮಾರ್ಗದಲ್ಲಿ ಉಂಟಾದ ಭಾರೀ ಟ್ರಾಫಿಕ್‌ ಜಾಮ್‌ನಿಂದಾಗಿ ಭಕ್ತರು ಗಂಗೋತ್ರಿ ಧಾಮದ ಕಡೆಗೆ ಪ್ರಯಾಣ ಬೆಳೆಸಿದರು. ದಮ್ಲಾದಿಂದ ಪ್ರಾರಂಭವಾಗುವ ಬರ್ನಿಗಡ್ ಮತ್ತು ರಾಡಿ ಟಾಪ್ ಬೈಪಾಸ್‌ನಂತಹ ಪರ್ಯಾಯ ಮಾರ್ಗಗಳ ಮೂಲಕ ಪ್ರಯಾಣಿಕರು ಗಂಗೋತ್ರಿಯನ್ನು ತಲುಪಿದ್ದಾರೆ.

  • ಉತ್ತರಾಖಂಡದಲ್ಲಿ ಎರಡು ದಿನ ರೆಡ್ ಅಲರ್ಟ್ – ಚಾರ್ ಧಾಮ್ ಯಾತ್ರೆ ತಾತ್ಕಾಲಿಕ ಸ್ಥಗಿತ

    ಉತ್ತರಾಖಂಡದಲ್ಲಿ ಎರಡು ದಿನ ರೆಡ್ ಅಲರ್ಟ್ – ಚಾರ್ ಧಾಮ್ ಯಾತ್ರೆ ತಾತ್ಕಾಲಿಕ ಸ್ಥಗಿತ

    ಡೆಹ್ರಾಡೂನ್: ಆಗಸ್ಟ್ 14 ಮತ್ತು 15ರಂದು ಹವಾಮಾನ ಇಲಾಖೆಯು (Meteorological Department) ಉತ್ತರಾಖಂಡದಲ್ಲಿ (Uttarakhand) ರೆಡ್ ಅಲರ್ಟ್ ಘೋಷಿಸಿದ ಹಿನ್ನೆಲೆ ಚಾರ್ ಧಾಮ್ ಯಾತ್ರೆಯನ್ನು (Char Dham Yatra) ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ವರದಿಗಳು ತಿಳಿಸಿವೆ.

    ಉತ್ತರಾಖಂಡದಲ್ಲಿ ಎಡೆಬಿಡದೆ ಮಳೆ (Rain) ಸುರಿಯುತ್ತಿರುವ ಪರಿಣಾಮ ಹಲವು ಕಡೆ ಭೂಕುಸಿತ ಉಂಟಾಗಿದ್ದು, ಪ್ರಮುಖ ನದಿಗಳು ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿದೆ. ಇದರಿಂದಾಗಿ ಬದರಿನಾಥ, ಕೇದಾರನಾಥ, ಗಂಗೋತ್ರಿಯಂತಹ ಪವಿತ್ರ ಕ್ಷೇತ್ರಗಳಿಗೆ ಹೋಗುವ ರಾಷ್ಟ್ರೀಯ ಹೆದ್ದಾರಿಗಳಿಗೆ ಅಡಚಣೆ ಉಂಟಾಗಿದೆ. ರುದ್ರಪ್ರಯಾಗ, ದೇವಪ್ರಯಾಗ ಮತ್ತು ಶ್ರೀನಗರದಲ್ಲಿ ಗಂಗಾ, ಮಂದಾಕಿನಿ ಮತ್ತು ಅಲಕಾನಂದ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಭಾರೀ ಮಳೆಯಿಂದ ಭೂಕುಸಿತ ಉಂಟಾಗಿ ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಹಲವು ರಸ್ತೆಗಳು ಬಂದ್ ಆಗಿದೆ. ಇದನ್ನೂ ಓದಿ: ಭಾರೀ ಮಳೆಗೆ ಶಿಮ್ಲಾದಲ್ಲಿ ದೇವಾಲಯ ಕುಸಿತ – 9 ಸಾವು, ಹಲವರು ಸಿಲುಕಿರುವ ಶಂಕೆ

    ಡೆಹ್ರಾಡೂನ್ ಮತ್ತು ನೈನಿತಾಲ್ ಸೇರಿದಂತೆ ಆರು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ. ಸತತವಾಗಿ ಸುರಿಯುತ್ತಿರುವ ಮುಂಗಾರು ಮಳೆಯಿಂದ ಗುಡ್ಡಗಾಡು ರಾಜ್ಯಗಳು ತೀವ್ರವಾಗಿ ನಲುಗಿದ್ದು, 60 ಮಂದಿ ಸಾವನ್ನಪ್ಪಿದ್ದು, 17 ಮಂದಿ ನಾಪತ್ತೆಯಾಗಿದ್ದಾರೆ ಎಂದು ವರದಿಗಳು ತಿಳಿಸಿದೆ. ಇದನ್ನೂ ಓದಿ: 10,000 ಪೊಲೀಸರು.. ಆ್ಯಂಟಿ ಡ್ರೋನ್‌ ಸಿಸ್ಟಮ್‌, ಅತ್ಯಾಧುನಿಕ ಕ್ಯಾಮೆರಾ – ಸ್ವಾತಂತ್ರ್ಯೋತ್ಸವಕ್ಕೆ ಕೆಂಪು ಕೋಟೆಯಲ್ಲಿ ಬಿಗಿ ಭದ್ರತೆ

    ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯು ಪಾಶ್ಚಿಮಾತ್ಯ ಪ್ರಕ್ಷ್ಯುಬ್ಧತೆಯ ಪರಿಣಾಮವಾಗಿದೆ. ಮಾನ್ಸೂನ್ ಟ್ರಫ್‌ನ (Mansoon Trough) ಸ್ಥಳವು ಹಿಮಾಲಯದ ತಪ್ಪಲಿನಲ್ಲಿರುವುದರಿಂದ ನೈಋತ್ಯ ಅರೇಬಿಯನ್ ಸಮುದ್ರದ ಮಾನ್ಸೂನ್ ಮಾರುತಗಳು ಹಿಮಾಲಯದ ತಪ್ಪಲನ್ನು ಹೊಡೆಯುತ್ತಿವೆ ಎಂದು ಭಾರತೀಯ ಹವಾಮಾನ ಇಲಾಖೆ ತನ್ನ ವರದಿಯಲ್ಲಿ ತಿಳಿಸಿದೆ. ಇದನ್ನೂ ಓದಿ: ಹಿಮಾಚಲದಲ್ಲಿ ಮೇಘಸ್ಫೋಟಕ್ಕೆ 7 ಬಲಿ – ಕೊಚ್ಚಿ ಹೋದ ಮನೆಗಳು

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]