Tag: ಚಾರ್ಲ್ಸ್

  • ಬ್ರಿಟನ್‌ ಕಿಂಗ್ ಚಾರ್ಲ್ಸ್ ದಂಪತಿಯಿಂದ ಬೆಂಗಳೂರಿಗೆ 4 ದಿನದ ರಹಸ್ಯ ಭೇಟಿ – ಇಂದು ವಾಪಸ್

    ಬ್ರಿಟನ್‌ ಕಿಂಗ್ ಚಾರ್ಲ್ಸ್ ದಂಪತಿಯಿಂದ ಬೆಂಗಳೂರಿಗೆ 4 ದಿನದ ರಹಸ್ಯ ಭೇಟಿ – ಇಂದು ವಾಪಸ್

    – ವೈಟ್‌ಫೀಲ್ಡ್‌ನ ಸೌಖ್ಯ ಆಸ್ಪತ್ರೆಯಲ್ಲಿ ವೆಲ್‌ನೆಸ್ ಟ್ರೀಟ್ಮೆಂಟ್
    – ಇದುವರೆಗೆ 9 ಬಾರಿ ಭೇಟಿ ನೀಡಿರುವ ಚಾರ್ಲ್ಸ್

    ಬೆಂಗಳೂರು: ಭಾರತೀಯ ಸಂಪ್ರದಾಯದ ಚಿಕಿತ್ಸೆ ಪಡೆದುಕೊಳ್ಳಲು ಬೆಂಗಳೂರಿಗೆ ಮೂರು ದಿನಗಳ ರಹಸ್ಯ ಭೇಟಿ ನೀಡಿದ್ದ ಬ್ರಿಟನ್‌ ರಾಜ ಚಾರ್ಲ್ಸ್‌ (King Charles) ಬುಧವಾರ ವಾಪಸ್‌ ಆಗಿದ್ದಾರೆ.

    ಬ್ರಿಟನ್‌ ರಾಜ ಚಾರ್ಲ್ಸ್ ಬೆಂಗಳೂರಿಗೆ ಖಾಸಗಿ ಭೇಟಿ ನೀಡಿದ್ದರು. ವೈಟ್‌ಫೀಲ್ಡ್ಸ್‌ ಸೌಖ್ಯ ಆಸ್ಪತ್ರೆಯಲ್ಲಿ ವೆಲ್‌ನೆಸ್ ಟ್ರೀಟ್ಮೆಂಟ್ ಪಡೆದುಕೊಂಡಿದ್ದಾರೆ. ಅವರ ಜೊತೆಯಲ್ಲಿ ರಾಣಿ ಕ್ಯಾಮಿಲ್ಲಾ ಕೂಡ ಇದ್ದರೆಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ರೈತರ ಆಸ್ತಿ ವಕ್ಫ್ ಪಾಲಾಗುತ್ತಿದೆ ಎಂಬುದು ತಪ್ಪು ಕಲ್ಪನೆ: ಹೆಚ್.ಕೆ ಪಾಟೀಲ್

    ದಂಪತಿ ತಮ್ಮ ಮೂರು ದಿನಗಳ ಪ್ರವಾಸದಲ್ಲಿ ಸಮಗ್ರ ಆರೋಗ್ಯ ಕೇಂದ್ರವು ಯೋಗ, ಧ್ಯಾನ ಮತ್ತು ಚಿಕಿತ್ಸೆಗಳು ಸೇರಿದಂತೆ ಪುನರ್ಯೌವನಗೊಳಿಸುವ ಚಿಕಿತ್ಸೆ ಪಡೆದುಕೊಂಡಿದ್ದಾರೆಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಈ ಹಿಂದೆಯೂ ಒಂದೆರಡು ಸಂದರ್ಭಗಳಲ್ಲಿ ಭಾರತಕ್ಕೆ ಭೇಟಿ ನೀಡಿ ವೈದ್ಯಕೀಯ ಚಿಕಿತ್ಸೆ ಪಡೆದಿದ್ದರು. ಬ್ರಿಟನ್‌ ರಾಜ ದಂಪತಿ ಆಗ ಆಯುರ್ವೇದ ಮತ್ತು ಪ್ರಕೃತಿ ಚಿಕಿತ್ಸೆ ಸೇರಿದಂತೆ ವಿವಿಧ ಕ್ಷೇಮ ಚಿಕಿತ್ಸೆಗಳನ್ನು ತೆಗೆದುಕೊಂಡಿದ್ದರು. ಯೋಗದ ಮೂಲಕ ತಮ್ಮ ದಿನಚರಿ ಆರಂಭಿಸುತ್ತಿದ್ದರು ಎನ್ನಲಾಗಿದೆ. ಇದನ್ನೂ ಓದಿ: ಹೊಸ ಬಟ್ಟೆ ಧರಿಸಿ ಜೈಲಿಂದ ಹೊರಬಂದ ದರ್ಶನ್; ಬಳ್ಳಾರಿ ಜೈಲಿನ ಹೊರಗೆ ‘ಅಭಿಮಾನದ ಹೊಳೆ’

    ಅವರು ಇಲ್ಲಿ ನಡೆಸಿದ ವಿವಿಧ ಕ್ಷೇಮ ಚಿಕಿತ್ಸೆಯ ಭಾಗವಾಗಿ ವಿಶೇಷ ಆಹಾರಕ್ರಮ ಅನುಸರಿಸಿದ್ದರು. ಅವರು ವೆಲ್‌ನೆಸ್‌ ಟ್ರೀಟ್ಮೆಂಟ್‌ಗೆ ಒಳಗಾಗಿದ್ದರು. ಇದರಲ್ಲಿ ಧ್ಯಾನ ಮತ್ತು ಪ್ರಕೃತಿ ಚಿಕಿತ್ಸೆಗಳೂ ಸೇರಿವೆ. 30 ಎಕರೆ ಕ್ಯಾಂಪಸ್‌ನ ಸುತ್ತಲೂ ಸುದೀರ್ಘ ನಡಿಗೆ ಮಾಡಿದರು. ಸಾವಯವ ಕೃಷಿ ಚಟುವಟಿಕೆ ಕೂಡ ನಡೆಸಿದರು ಎಂದು ಅಧಿಕಾರಿ ತಿಳಿಸಿದ್ದಾರೆ.

    ವೈಟ್‌ಫೀಲ್ಡ್ ಸಮೀಪದ ಸಮೇತನಹಳ್ಳಿಯಲ್ಲಿರುವ ‘ಸೌಕ್ಯ’ ಅಂತಾರಾಷ್ಟ್ರೀಯ ಸಮಗ್ರ ಕೇಂದ್ರಕ್ಕೆ ಬ್ರಿಟನ್‌ ರಾಜನ ಭೇಟಿ ಇದೇ ಮೊದಲಲ್ಲ. ಅವರು 2019 ರಲ್ಲಿ ತಮ್ಮ 71 ನೇ ಹುಟ್ಟುಹಬ್ಬವನ್ನು ಇಲ್ಲಿ ಆಚರಿಸಿಕೊಂಡಿದ್ದರು. ಕೇಂದ್ರವನ್ನು ಡಾ. ಇಸಾಕ್ ಮಥಾಯ್ ಅವರು ನಡೆಸುತ್ತಿದ್ದಾರೆ. UKಯ ರಾಜನಾಗಿ ಅವರ ಪಟ್ಟಾಭಿಷೇಕದಲ್ಲಿ ಪಾಲ್ಗೊಳ್ಳಲು ಆಹ್ವಾನಿತರಾಗಿದ್ದ ಭಾರತದ ಕೆಲವೇ ವ್ಯಕ್ತಿಗಳಲ್ಲಿ ಇಸಾಕ್‌ ಕೂಡ ಒಬ್ಬರು.

  • ಇಂಗ್ಲೆಂಡ್ ರಾಜನ ಮೇಲೆ ಮೊಟ್ಟೆ ಎಸೆದ ವಿದ್ಯಾರ್ಥಿಗೆ 6 ತಿಂಗಳು ಜೈಲು ಶಿಕ್ಷೆ

    ಇಂಗ್ಲೆಂಡ್ ರಾಜನ ಮೇಲೆ ಮೊಟ್ಟೆ ಎಸೆದ ವಿದ್ಯಾರ್ಥಿಗೆ 6 ತಿಂಗಳು ಜೈಲು ಶಿಕ್ಷೆ

    ಲಂಡನ್: ಕಿಂಗ್ ಚಾರ್ಲ್ಸ್ (King Charles) ಮತ್ತು ಕ್ಯಾಮಿಲ್ಲಾ ಅವರ ಮೇಲೆ ಮೊಟ್ಟೆಗಳನ್ನು (EGG) ಎಸೆದಿದ್ದ ವಿದ್ಯಾರ್ಥಿಗೆ 6 ತಿಂಗಳು ಜೈಲು ಶಿಕ್ಷೆ ವಿಧಿಸಲಾಗಿದೆ.

    ನವೆಂಬರ್‌ನಲ್ಲಿ ಉತ್ತರ ಇಂಗ್ಲೆಂಡ್‌ನಲ್ಲಿ ರಾಜ ಮತ್ತು ರಾಣಿ ಇಬ್ಬರು ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ವೇಳೆ ಈ ಯಾರ್ಕ್ ವಿಶ್ವವಿದ್ಯಾಲಯದ ವಿದ್ಯಾರ್ಥಿ (Student) ಪ್ಯಾಟ್ರಿಕ್ ಥೆಲ್ವೆಲ್ (23) ಎಂಬಾತ ಬ್ರಿಟಿಷ್ ರಾಜ ರಾಣಿಯ ಮೇಲೆ ಮೊಟ್ಟೆಗಳನ್ನು ಎಸೆದಿದ್ದ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಯ ಮೇಲೆ ಸಾರ್ವಜನಿಕ ಸುವ್ಯವಸ್ಥೆಯ ಉಲ್ಲಂಘನೆಯ ಆರೋಪ ಹೊರಿಸಿ ಪ್ಯಾಟ್ರಿಕ್‌ನನ್ನು ಬಂಧಿಸಲಾಗಿತ್ತು.

    ಘಟನೆಗೆ ಸಂಬಂಧಿಸಿದಂತೆ ಯಾರ್ಕ್ ಮ್ಯಾಜಿಸ್ಟ್ರೇಟ್ ಕೋರ್ಟ್ ವಿಚಾರಣೆ ನಡೆಸಿತ್ತು. ಕಿಂಗ್ ಚಾರ್ಲ್ಸ್‌ನ  ಮೇಲೆ ಮೊಟ್ಟೆಗಳನ್ನು ಎಸೆದ ನಂತರ ಅಪರಾಧವು ಸಾಬೀತಾದ ಹಿನ್ನೆಲೆಯಲ್ಲಿ ಯುಕೆ ವಿದ್ಯಾರ್ಥಿಗೆ 6 ತಿಂಗಳ ಜೈಲು ಶಿಕ್ಷೆಯನ್ನು ವಿಧಿಸಲಾಗಿದೆ.

    ಚಾರ್ಲ್ಸ್‌ಗೆ 4 ಮೊಟ್ಟೆಗಳನ್ನು ಎಸೆದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ವೀಡಿಯೋದಲ್ಲಿ ಚಾರ್ಲ್ಸ್ ವಿಚಲಿತರಾಗದೇ ಕಾರ್ಯಕ್ರಮವನ್ನು ಮುಂದುವರಿಸಿದರು. ಈ ವೇಳೆ ಬ್ರಿಟಿಷ್ ರಾಜನ ವಿರುದ್ಧ ಘೋಷಣೆ ಕೂಗುತ್ತಿದ್ದ ವಿದ್ಯಾರ್ಥಿಯನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಜನನಿಬಿಡ ಪ್ರದೇಶಗಳಲ್ಲಿ ಮಾಸ್ಕ್ ಧರಿಸುವಂತೆ ಕೇಂದ್ರ ಸಲಹೆ

    ಇಂಗ್ಲೆಂಡ್ ರಾಜಮನೆತನವು ಈ ರೀತಿಯ ಅಹಿತಕರ ಘಟನೆಯನ್ನು ಅನುಭವಿಸಿರುವುದು ಇದೇ ಮೊದಲಲ್ಲ. 2002ರಲ್ಲಿ ರಾಣಿ ಎಲಿಜಬೆತ್ 2 ನಾಟಿಂಗ್‌ಹ್ಯಾಮ್‌ಗೆ ಭೇಟಿ ನೀಡಿದಾಗ, ಅವರ ಕಾರಿನ ಮೇಲೆ ಮೊಟ್ಟೆಗಳನ್ನು ಎಸೆಯಲಾಗಿತ್ತು. 1995ರಲ್ಲಿ ರಾಜನ ಮೇಲೆ ಮೊಟ್ಟೆಗಳನ್ನು ಎಸೆದಿದ್ದರು. ಇದನ್ನೂ ಓದಿ: ಶಬರಿಮಲೆ ಹಾದಿಯಲ್ಲಿ ಈ ಬಾರಿ 23 ಮಂದಿ ಹೃದಯಾಘಾತದಿಂದ ಸಾವು

    Live Tv
    [brid partner=56869869 player=32851 video=960834 autoplay=true]

  • 3ನೇ ಚಾರ್ಲ್ಸ್ ಬ್ರಿಟನ್ ರಾಜನಾಗಿ ಅಧಿಕೃತ ಘೋಷಣೆ

    3ನೇ ಚಾರ್ಲ್ಸ್ ಬ್ರಿಟನ್ ರಾಜನಾಗಿ ಅಧಿಕೃತ ಘೋಷಣೆ

    ಲಂಡನ್: ರಾಣಿ 2ನೇ ಎಲಿಜಬೆತ್(Elizabeth II) ಸುದೀರ್ಘ 70 ವರ್ಷಗಳ ಆಳ್ವಿಕೆಯನ್ನು ಪೂರೈಸಿ ಗುರುವಾರ ನಿಧನ ಹೊಂದಿದರು. ಇದೀಗ ಎಲಿಜಬೆತ್ ಅವರ ಹಿರಿಯ ಪುತ್ರ 3ನೇ ಚಾರ್ಲ್ಸ್‌ನನ್ನು(Charles III) ಅಧಿಕೃತವಾಗಿ ಬ್ರಿಟನ್‌(Britain)ನ ರಾಜ ಎಂದು ಶನಿವಾರ ಘೋಷಿಸಲಾಗಿದೆ.

    ಲಂಡನ್‌ನ(London) ಸೇಂಟ್ ಜೇಮ್ಸ್ ಅರಮನೆಯಲ್ಲಿ ಇಂದು ಕಿಂಗ್ ಚಾರ್ಲ್ಸ್ ಅವರನ್ನು ಅಧಿಕೃತವಾಗಿ ಬ್ರಿಟನ್‌ನ ರಾಜ ಎಂದು ಘೋಷಿಸಲಾಗಿದೆ.

    ಶುಕ್ರವಾರ ಹಿರಿಯ ರಾಜನಾಗಿ ಮೊದಲ ಬಾರಿ ಮಾಡಿದ ಭಾಷಣದಲ್ಲಿ, ಕಿಂಗ್ ಚಾರ್ಲ್ಸ್ ರಾಣಿ 2ನೇ ಎಲಿಜಬೆತ್ ಅವರನ್ನು ಪ್ರೀತಿಯಿಂದ ನೆನಪಿಸಿಕೊಂಡರು. ಅವರು ನಿಷ್ಠೆ, ಗೌರವ ಮತ್ತು ಪ್ರೀತಿಯಿಂದ ತಮ್ಮ ಜೀವನಪರ್ಯಂತ ರಾಷ್ಟ್ರದ ಸೇವೆ ಸಲ್ಲಿಸುವುದಾಗಿ ಪ್ರತಿಜ್ಞೆ ಮಾಡಿದರು. ಇದನ್ನೂ ಓದಿ: ಏಕದಿನ ಕ್ರಿಕೆಟ್‌ಗೆ ಆರನ್ ಫಿಂಚ್ ವಿದಾಯ

    ಮುಂದೆ ಏನೆಲ್ಲಾ ಬದಲಾವಣೆ?
    ರಾಣಿ ಎಲಿಜಬೆತ್ ನಿಧನದ ಬಳಿಕ ಇದೀಗ ಚಾಲ್ಸ್ ಅಧಿಕಾರ ಸ್ವೀಕರಿಸಿದ್ದಾರೆ. ಈ ಬದಲಾವಣೆಯೊಂದಿಗೆ ದೇಶಾದ್ಯಂತ ಹಲವು ಬದಲಾವಣೆಯಾಗಲಿದೆ. ಅವುಗಳಲ್ಲಿ ಮುಖ್ಯವಾದವುಗಳು ಇಲ್ಲಿವೆ.
    * ಬ್ರಿಟನ್ ಕರೆನ್ಸಿಯಲ್ಲಿ ಚಾರ್ಲ್ಸ್ ಚಿತ್ರ ಮುದ್ರಿಸಲಾಗುತ್ತದೆ.
    * ರಾಷ್ಟ್ರಗೀತೆಯಲ್ಲಿ `ಗಾಡ್ ಸೇವ್ಸ್ ದಿ ಕ್ವೀನ್’ ಬದಲಿಗೆ `ಗಾಡ್ ಸೇವ್ ಅವರ್ ಪ್ರೀಷಿಯಸ್ ಕಿಂಗ್’ ಎಂದು ಬದಲಾಗಲಿದೆ.
    * ಬ್ರಿಟನ್ ಜೊತೆಗೆ ಆಸ್ಟ್ರೇಲಿಯಾ, ಕೆನಡಾದ ರಾಷ್ಟ್ರಗೀತೆ ಬದಲಾಗುತ್ತದೆ.
    * ಬ್ರಿಟಿಷ್ ಪಾಸ್‌ಪೋರ್ಟ್‌ನಲ್ಲಿ ರಾಣಿ ಸ್ಥಾನದಲ್ಲಿ ರಾಜನ ಚಿತ್ರ ಮುದ್ರಣವಾಗಲಿದೆ. ಇದನ್ನೂ ಓದಿ: ಎಎಪಿ ಅಧಿಕಾರಕ್ಕೇರಿದ ರಾಜ್ಯಗಳಲ್ಲಿ ಗುತ್ತಿಗೆ ನೌಕರರ ಹುದ್ದೆ ಖಾಯಂ: ಕೇಜ್ರಿವಾಲ್

    * ಬ್ರಿಟನ್ ಅಂಚೆ ಚೀಟಿ, ಪೊಲೀಸ್ ಟೋಪಿಯಲ್ಲಿ ರಾಣಿ ಬದಲು ರಾಜನ ಚಿನ್ಹೆ ಇರಲಿದೆ.
    * ಬಂಕಿಂಗ್‌ಹ್ಯಾಮ್ ಅರಮನೆ ಭದ್ರತಾ ಸಿಬ್ಬಂದಿಗೆ ಕ್ವೀನ್ ಗಾರ್ಡ್ಸ್ ಬದಲಾಗಿ ಕಿಂಗ್ ಗಾರ್ಡ್ಸ್ ಹೆಸರಿಸಲಾಗುತ್ತದೆ.
    * ಎಲಿಜಬೆತ್ ಬಳಿಯಿದ್ದ ಕೋಹಿನೂರು ವಜ್ರವಿರುವ ಕಿರೀಟ ಕೆಮಿಲ್ಲಾ ಪಾರ್ಕರ್‌ಗೆ ಹಸ್ತಾಂತರವಾಗಲಿದೆ.
    * ಬ್ರಿಟನ್ ರಾಜರಾದವರಿಗೆ ಪಾಸ್‌ಪೋರ್ಟ್ ಅಗತ್ಯವಿರುವುದಿಲ್ಲ.
    * ಅವರ ಹುಟ್ಟುಹಬ್ಬವನ್ನು 2 ದಿನ ಆಚರಿಸಲಾಗುತ್ತದೆ.
    * ಬ್ರಿಟನ್ ರಾಜ ಮತದಾನದಲ್ಲಿಯೂ ಪಾಲ್ಗೊಳ್ಳಲಾಗುವುದಿಲ್ಲ.

    Live Tv
    [brid partner=56869869 player=32851 video=960834 autoplay=true]

  • ಬ್ರಿಟನ್ ರಾಣಿಯ ಪಟ್ಟಕ್ಕೆ ಏರಲಿರುವ ಕೆಮಿಲಾ

    ಬ್ರಿಟನ್ ರಾಣಿಯ ಪಟ್ಟಕ್ಕೆ ಏರಲಿರುವ ಕೆಮಿಲಾ

    ಲಂಡನ್: ವೇಲ್ಸ್‍ನ ರಾಜಕುಮಾರಿಯಾಗಿರುವ ಕೆಮಿಲಾ ಅವರನ್ನು ಬ್ರಿಟನ್‍ನ ಮುಂದಿನ ರಾಣಿ ಎಂದು ಕ್ವೀನ್ ಎರಡನೇ ಎಲಿಜಬೆತ್ ಘೋಷಿಸಿದ್ದಾರೆ.

    ಈ ಮೂಲಕ 70 ವರ್ಷಗಳು ರಾಣಿಯಾಗಿದ್ದ ಎರಡನೇ ಎಲಿಜಬೆತ್ ಅವರು ತಮ್ಮ ಅಧಿಕಾರವನ್ನು ಕೆಮಿಲಾ ಅವರಿಗೆ ಹಸ್ತಾಂತರಿಸಲಿದ್ದಾರೆ. ರಾಜಕುಮಾರ ಚಾರ್ಲ್ಸ್ ಅವರು ರಾಜನ ಪಟ್ಟಕ್ಕೆ ಏರಿದ ಹಿನ್ನೆಲೆಯಲ್ಲಿ ಅವರ ಎರಡನೇ ಪತ್ನಿ ಡಚ್ಚಸ್ ಆಫ್ ಕಾರ್ನ್‍ವಾಲ್ ಆಗಿರುವ ಕೆಮಿಲಾ ರಾಣಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.

    ತಾವು ರಾಣಿಯಾಗಿ ಅಧಿಕಾರ ವಹಿಸಿ 70 ವರ್ಷಗಳಾಗಿದ್ದು, ಇದೀಗ ತಮ್ಮ ಸೊಸೆ ಕೆಮಿಲಾ ಅವರನ್ನು ರಾಣಿ ಮಾಡುವುದಾಗಿ ಘೋಷಿಸಿದ್ದಾರೆ. ಈ ಕುರಿತು ಖುದ್ದು ಎರಡನೇ ಎಲಿಜಬೆತ್ ಲಿಖಿತವಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಫೆ.19 ರಿಂದ 28ವರೆಗೆ ದ.ಕ ಜಿಲ್ಲೆಯಲ್ಲಿ ಕಡತ ವಿಲೇವಾರಿ, ಕಂದಾಯ ಮೇಳ

    ರಾಜ ಪ್ರಜಾಪ್ರಭುತ್ವದ ಭವಿಷ್ಯವನ್ನು ರೂಪಿಸಲು ಚಾರ್ಲ್ಸ್ ರಾಜನಾಗುತ್ತಿದ್ದಂತೆ ಕೆಮಿಲಾ ಅವರು ರಾಣಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಈಕೆಯ ಮೇಲೆ ತಮಗೆ ಹಲವು ನಿರೀಕ್ಷೆಗಳಿವೆ ಎಂದರು. ಇದನ್ನೂ ಓದಿ: ರಾಜ್ಯಾದ್ಯಂತ ಎರಡು ದಿನ ಶೋಕಾಚರಣೆ

    ಇಷ್ಟು ವರ್ಷಗಳವರೆಗೆ ನೀವೆಲ್ಲರೂ ನೀಡಿರುವ ಸಹಕಾರಕ್ಕಾಗಿ ಧನ್ಯವಾದಗಳು. ನೀವು ತೋರಿರುವ ಪ್ರೀತಿ ಹಾಗೂ ನಿಷ್ಠೆಗೆ ಆಭಾರಿಯಾಗಿದ್ದೇನೆ. ನಿಮ್ಮ ಈ ಆಶೀರ್ವಾದ ಚಾರ್ಲ್ಸ್ ಹಾಗೂ ಕೆಮಿಲಾ ಮೇಲೂ ಇರಲಿ ಎಂದು ಮನವಿ ಮಾಡಿದ್ದಾರೆ.