Tag: ಚಾರ್ಲಿ

  • 6 ಮರಿಗಳಿಗೆ ಜನ್ಮ ನೀಡಿದ ಚಾರ್ಲಿ- ಮೈಸೂರಿಗೆ ಹೋಗಿ ಸಂಭ್ರಮಿಸಿದ ಸಿಂಪಲ್ ಸ್ಟಾರ್

    6 ಮರಿಗಳಿಗೆ ಜನ್ಮ ನೀಡಿದ ಚಾರ್ಲಿ- ಮೈಸೂರಿಗೆ ಹೋಗಿ ಸಂಭ್ರಮಿಸಿದ ಸಿಂಪಲ್ ಸ್ಟಾರ್

    ಸ್ಯಾಂಡಲ್‌ವುಡ್ ನಟ ರಕ್ಷಿತ್ ಶೆಟ್ಟಿ ಜೊತೆ ‘777 ಚಾರ್ಲಿ’ (777 Charlie) ಸಿನಿಮಾದಲ್ಲಿ ನಟಿಸಿದ ಚಾರ್ಲಿ ಈಗ 6 ಮರಿಗಳಿಗೆ ಜನ್ಮ ನೀಡಿದೆ. ಮೈಸೂರಿಗೆ ತೆರಳಿ ಚಾರ್ಲಿಯನ್ನು ಭೇಟಿಯಾಗಿ ಈ ಖುಷಿಯ ವಿಚಾರವನ್ನು ಸೋಷಿಯಲ್ ಮೀಡಿಯಾದಲ್ಲಿ ರಕ್ಷಿತ್ ಶೆಟ್ಟಿ ತಿಳಿಸಿದ್ದಾರೆ. ಇದನ್ನೂ ಓದಿ:ನಿರ್ದೇಶನದತ್ತ ಐಶಾನಿ ಶೆಟ್ಟಿ- ಜೂನ್‌ನಲ್ಲಿ ಚಿತ್ರದ ಬಗ್ಗೆ ಅಧಿಕೃತ ಘೋಷಣೆ

    2022ರಲ್ಲಿ ಬಿಡುಗಡೆಯಾದ ‘777 ಚಾರ್ಲಿ’ ಚಿತ್ರವು ಪ್ರೇಕ್ಷಕರಿಗೆ ಕನೆಕ್ಟ್ ಆಗಿತ್ತು. ಧರ್ಮ ಮತ್ತು ಚಾರ್ಲಿ ಕಾಂಬಿನೇಷನ್ ನೋಡಿ ಫ್ಯಾನ್ಸ್ ಕಣ್ತುಂಬಿಕೊಂಡಿದ್ದರು. ಅದರಲ್ಲೂ ಕ್ಲೈಮ್ಯಾಕ್ಸ್‌ನಲ್ಲಿ ಚಾರ್ಲಿ ಮರಿಗೆ ಜನ್ಮ ನೀಡಿ ಪ್ರಾಣ ಬಿಡುತ್ತದೆ. ಈ ಸೀನ್ ನೋಡಿ ಪ್ರೇಕ್ಷಕರು ಭಾವುಕರಾಗಿದ್ದರು. ಇದನ್ನೂ ಓದಿ:ಅವಕಾಶ ಸಿಕ್ಕರೆ ಕನ್ನಡದಲ್ಲಿ ನಟಿಸ್ತೇನೆ : ನಟಿ ಚಾಂದನಿ

    ಇದೀಗ ರಿಯಲ್ ಆಗಿ ಚಾರ್ಲಿ 5 ಹೆಣ್ಣು ಮರಿ, ಒಂದು ಗಂಡು ಮರಿಗೆ ಜನ್ಮ ನೀಡಿದ್ದಾಳೆ. ಚಾರ್ಲಿಯನ್ನು (Charlie) ನೋಡಲು ರಕ್ಷಿತ್ ಶೆಟ್ಟಿ ಮೈಸೂರಿಗೆ ಭೇಟಿ ಮಾಡಿ ಸಂಭ್ರಮಿಸಿದ್ದಾರೆ. ಚಾರ್ಲಿ ಮತ್ತು ಮರಿಗಳ ವಿಡಿಯೋವನ್ನು ರಕ್ಷಿತ್ ಶೆಟ್ಟಿ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

     

    View this post on Instagram

     

    A post shared by Rakshit Shetty (@rakshitshetty)

    ನಮ್ಮ ‘777 ಚಾರ್ಲಿ’ ಸಿನಿಮಾ ರಿಲೀಸ್ ಆಗಿ 2 ವರ್ಷ ಆಯ್ತು. ಸಿನಿಮಾ ಬಿಡುಗಡೆ ಆದಮೇಲೆ ಚಾರ್ಲಿ ತಾಯಿ ಆಗಬೇಕು. ಅದು ಮರಿಗಳಿಗೆ ಜನ್ಮ ನೀಡಬೇಕು ಎಂಬ ಆಸೆ ನಮಗೆಲ್ಲರಿಗೂ ಇತ್ತು. ಆಗಲೇ ಅವಳ ಜರ್ನಿಗೆ ಒಂದು ಪರಿಪೂರ್ಣತೆ ಸಿಗುತ್ತದೆ ಎಂಬ ಫೀಲಿಂಗ್ ನಮ್ಮ ತಂಡಕ್ಕೆ ಇತ್ತು. ಚಾರ್ಲಿ ತಾಯಿ ಆಗಬೇಕು ಎಂಬುದನ್ನು ನಾನು ತುಂಬ ಸಮಯದಿಂದ ಎದುರು ನೋಡುತ್ತಿದ್ದೆ. ಪ್ರಮೋದ್‌ಗೆ ಫೋನ್ ಮಾಡಿದಾಗೆಲ್ಲಾ, ಇದರ ಬಗ್ಗೆ ಕೇಳ್ತಾ ಇದ್ದೆ. ವಯಸ್ಸಾಗಿದೆ ಅನುಮಾನ ಅಂತಲೇ ಅವರು ಹೇಳುತ್ತಿದ್ದರು. ಅಚ್ಚರಿ ಎಂದರೆ, ಮೇ 9ರಂದು 6 ಪಪ್ಪಿಗಳಿಗೆ ಜನ್ಮ ನೀಡಿದ್ದಾಳೆ ಚಾರ್ಲಿ. ಅವುಗಳನ್ನು ನೋಡುವುದಕ್ಕಾಗಿ ಮೈಸೂರಿಗೆ ಬಂದಿದ್ದೇನೆ ಎಂದು ರಕ್ಷಿತ್ ಶೆಟ್ಟಿ ಹೇಳಿದ್ದಾರೆ.


    ಇವತ್ತಿಗೂ ಎಲ್ಲರೂ ‘777 ಚಾರ್ಲಿ’ ಸಿನಿಮಾವನ್ನು ತುಂಬ ಪ್ರೀತಿ ಮಾಡುತ್ತಿದ್ದೀರಿ. ನಾನು ಎಲ್ಲೇ ಹೋದರೂ ಚಾರ್ಲಿ (Charlie) ಬಗ್ಗೆಯೇ ಎಲ್ಲರೂ ಮಾತಾಡುತ್ತಿದ್ದಾರೆ. ಅದರಲ್ಲೂ ಮಕ್ಕಳು ಈ ಸಿನಿಮಾವನ್ನು ತುಂಬ ಇಷ್ಟಪಟ್ಟಿದ್ದಾರೆ. ನಿಮ್ಮ ಪ್ರೀತಿ ಚಾರ್ಲಿ ಮೇಲೆ ಸದಾ ಹೀಗೆ ಇರಲಿ ಎಂದು ನಟ ಹೇಳಿದ್ದಾರೆ.

  • Bigg Boss Kannada10: ದೊಡ್ಮನೆಗೆ ಬರಲೇ ಇಲ್ಲ ಚಾರ್ಲಿ: ಬಿಗ್ ಬಾಸ್ ಗೆ ಪ್ರಶ್ನೆ ಕೇಳಿದ ಫ್ಯಾನ್ಸ್

    Bigg Boss Kannada10: ದೊಡ್ಮನೆಗೆ ಬರಲೇ ಇಲ್ಲ ಚಾರ್ಲಿ: ಬಿಗ್ ಬಾಸ್ ಗೆ ಪ್ರಶ್ನೆ ಕೇಳಿದ ಫ್ಯಾನ್ಸ್

    ಬಾರಿ ಚಾರ್ಲಿ ಬಿಗ್ ಬಾಸ್ ಮನೆ ಒಳಗೆ ಪ್ರವೇಶ ಮಾಡಲಿದೆ ಎಂದು ವಾಹಿನಿ ಹೇಳಿಕೊಂಡಿತ್ತು. ಚಾರ್ಲಿ(Charli) ದೊಡ್ಮನೆಗೆ ಬಂದೇ ಬರುತ್ತಾನೆ ಎಂದು ಎಲ್ಲರೂ ನಿರೀಕ್ಷೆಯಿಂದ ಕಾಯುತ್ತಿದ್ದರು. ಆದರೆ, ಇಂದು ಗ್ರ್ಯಾಂಡ್ ಓಪನಿಂಗ್ ಸಮಯದಲ್ಲಿ ಚಾರ್ಲಿ ಕಾಣಿಸಿಕೊಳ್ಳಲೇ ಇಲ್ಲ. ಹಾಗಾಗಿ ಸಹಜವಾಗಿ ಚಾರ್ಲಿ ಅಭಿಮಾನಿಗಳಿಗೆ ನಿರಾಸೆ ಆಗಿದೆ. ಚಾರ್ಲಿ ಎಲ್ಲಿ ಎಂದು ಬಿಗ್ ಬಾಸ್ ಅನ್ನು ಅಭಿಮಾನಿಗಳು ಕೇಳುತ್ತಿದ್ದಾರೆ.

    ಚಾರ್ಲಿಯನ್ನು ಬಿಗ್ ಬಾಸ್ ಮನೆಗೆ ಕರೆದುಕೊಂಡು ಬರುವುದೇ ಇಲ್ಲವಾ? ಅಥವಾ ಸ್ಪೆಷಲ್ ಟಾಸ್ಕ್ ಮೂಲಕ ಮನೆ ಒಳಗೆ ಪ್ರವೇಶ ಮಾಡುತ್ತದಾ ಗೊತ್ತಿಲ್ಲ. ಆದರೆ, ಸ್ಪರ್ಧಿಗಳ ಜೊತೆಯಂತೂ ಚಾರ್ಲಿ ಬರಲಿಲ್ಲ. ಸುದೀಪ್ ಅವರ ಮುಂದೆ ನಿಲ್ಲಲಿಲ್ಲ. ಹಾಗಾಗಿ ಚಾರ್ಲಿ ಬರುತ್ತದೆಯೋ ಇಲ್ಲವೋ ಎನ್ನುವ ಅನುಮಾನ ಕೂಡ ಮೂಡಿದೆ.

    ವೇಟಿಂಗ್ ಲಿಸ್ಟ್ ಪರೀಕ್ಷೆ

    ಕಡಿಮೆ ಮತಗಳನ್ನು ಪಡೆಯುವ ಮೂಲಕ ಡ್ರೋನ್ ಪ್ರತಾಪ್, ನಟಿ ತನಿಷಾ ಕುಪ್ಪಂಡ, ನಟಿ ಸಂಗೀತಾ ಶೃಂಗೇರಿ, ರೈತ ವರ್ತುರ್ ಸಂತೋಶ್, ನಟ ಕಾರ್ತಿಕ್ ಮಹೇಶ್ ಮತ್ತು ಬುಲೆಟ್ ಪ್ರಕಾಶ್ ಪುತ್ರ ರಕ್ಷರ್ ವೇಟಿಂಗ್ ಲಿಸ್ಟ್ ನಲ್ಲಿ ಇದ್ದರು. ಇವರಿಗೆ ಬಿಗ್ ಬಾಸ್  (Bigg Boss Karnataka)ವಿಶೇಷ ಟಾಸ್ಕ್ ಕೊಡುವ ಮೂಲಕ ದೊಡ್ಮನೆ ಒಳಗೆ ಕಳುಹಿಸುತ್ತಾರೆ ಎಂದು ನಂಬಲಾಗಿತ್ತು. ಆದರೆ, ವಿಶೇಷ ಟ್ವಿಸ್ಟ್ ಕೊಟ್ಟರು ಸುದೀಪ್.

    ಹೋಲ್ಡ್ ನಲ್ಲಿ ಇರಿಸಿರುವ ಈ ಆರು ಸ್ಪರ್ಧೆಗಳನ್ನು ಮನೆಗೆ ಒಳಗೆ ಕಳುಹಿಸುವುದಾಗಿ ಹೇಳಿದ ಸುದೀಪ್, ಅವರಿಗೆ ಒಂದು ವಾರಗಳ ಕಾಲ ಕಾಲಾವಕಾಶ ನೀಡಿದ್ದಾರೆ. ಈ ಒಂದು ವಾರದಲ್ಲಿ ಬಿಗ್ ಬಾಸ್ ಆದೇಶ ನೋಡಿಕೊಂಡು ಅವರು ಮನೆಯಲ್ಲಿ ಇರುತ್ತಾರಾ ಅಥವಾ ಇಲ್ಲವಾ ಎನ್ನುವುದನ್ನು ನಿರ್ಧರಿಸಲಾಗುವುದು ಎಂದಿದ್ದಾರೆ ಸುದೀಪ್.

     

    ಈ ಬಾರಿ ಒಟ್ಟು 19 ಸ್ಪರ್ಧಿಗಳು ವೇದಿಕೆಯ ಮೇಲೆ ಬಂದಿದ್ದರು. ಅದರಲ್ಲಿ ಇಬ್ಬರು ಮತವನ್ನು ಪಡೆಯಲಾಗದೇ ತಮ್ಮ ಮನೆಗೆ ವಾಪಸ್ಸಾದರು. 11 ಸ್ಪರ್ಧಿಗಳು ವೋಟು ಪಡೆದುಕೊಂಡು ಮನೆ ಒಳಗೆ ಪ್ರವೇಶ ಮಾಡಿದರು. ಉಳಿದ ಆರು ಜನರು ಕಡಿಮೆ ಮತಗಳನ್ನು ಪಡೆದು ವೇಟಿಂಗ್ ಲಿಸ್ಟ್ ನಲ್ಲಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬಿಗ್‌ ಬಾಸ್‌ ಸೀಸನ್‌ 10 ಮೊದಲ ಸ್ಪರ್ಧಿ ಚಾರ್ಲಿ

    ಬಿಗ್‌ ಬಾಸ್‌ ಸೀಸನ್‌ 10 ಮೊದಲ ಸ್ಪರ್ಧಿ ಚಾರ್ಲಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬಿಗ್ ಬಾಸ್‌ಗೆ ಮೊದಲ ಸ್ಪರ್ಧಿಯಾಗಿ ಎಂಟ್ರಿ ಕೊಡಲಿದೆ ಚಾರ್ಲಿ

    ಬಿಗ್ ಬಾಸ್‌ಗೆ ಮೊದಲ ಸ್ಪರ್ಧಿಯಾಗಿ ಎಂಟ್ರಿ ಕೊಡಲಿದೆ ಚಾರ್ಲಿ

    ಕಿರುತೆರೆ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ (Bigg Boss Kannada 10) ಯಾವಾಗ ಎಂಬುದಕ್ಕೆ ಈಗಾಗಲೇ ಉತ್ತರ ಸಿಕ್ಕಿದೆ. ಅಕ್ಟೋಬರ್ 8ರಿಂದ ‘ಬಿಗ್ ಬಾಸ್ ಕನ್ನಡ ಸೀಸನ್ 10’ ಶೋ ಶುರುವಾಗಲಿದೆ. ವಾಹಿನಿಯ ‘ಅನುಬಂಧ 2023’ ಅವಾರ್ಡ್ಸ್ ಸಮಾರಂಭದಲ್ಲಿ ಬಿಗ್ ಬಾಸ್ ಯಾವಾಗ ಶುರು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಯಾರೆಲ್ಲಾ ಬಿಗ್ ಬಾಸ್ ಮನೆಯೊಳಗಡೆ ಹೋಗಲಿದ್ದಾರೆ ಎಂಬ ಪ್ರಶ್ನೆ ಏಳೋದು ಸಹಜ. ಮೊದಲ ಬಾರಿಗೆ ಬಿಗ್ ಬಾಸ್ ಮನೆ ಪ್ರವೇಶ ಮಾಡುವ ಮೊದಲ ಸ್ಪರ್ಧಿಯನ್ನು ಕಲರ್ಸ್ ವಾಹಿನಿ ರಿವೀಲ್ ಮಾಡಿದೆ.

    ಬಿಗ್ ಬಾಸ್ ಮನೆಗೆ ಹೋಗುವ ಮುನ್ನವೇ ವಾಹಿನಿಯಾಗಲಿ, ಬಿಗ್ ಬಾಸ್ ಮನೆ ಪ್ರವೇಶ (Bigg Boss House) ಮಾಡುವ ಸ್ಪರ್ಧಿಗಳಾಗಲೀ ಯಾವುದೇ ಕಾರಣಕ್ಕೂ ಸ್ಪರ್ಧೆ ಮಾಡುವ ವಿಚಾರವನ್ನು ರಿವೀಲ್ ಮಾಡೋದಿಲ್ಲ. ಸ್ಪರ್ಧಿಗಳು ಯಾರು ಅನ್ನೋದು ಬಿಗ್ ಬಾಸ್ ಶೋ ಲಾಂಚ್ ಆಗುವ ದಿನವೇ ಗೊತ್ತಾಗುತ್ತದೆ. ಆದರೆ ಈ ಬಾರಿ ಮೊದಲ ಬಾರಿಗೆ ಸೋಶಿಯಲ್ ಮೀಡಿಯಾದಲ್ಲಿ ಸ್ಪರ್ಧಿ ಯಾರು ಅನ್ನೋದನ್ನು ಇದೀಗ ವಾಹಿನಿ ಹೇಳಿದೆ.

    ಬೆಸ್ಟ್ ರೇಟೆಡ್ ಚಲನಚಿತ್ರ – 777 ಚಾರ್ಲಿ. ಬಿಗ್ ಬಾಸ್ ಕನ್ನಡ ಸೀಸನ್ 10 ಮೊದಲ ಕಂಟೆಸ್ಟೆಂಟ್ ಆಗಿ ಎಂಟ್ರಿ ಕೊಡ್ತಿರೋ ಚಾರ್ಲಿ!! ಅಭಿನಂದನೆಗಳು ಚಾರ್ಲಿ ಎಂದು ವಾಹಿನಿಯ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. ಈ ಮೂಲಕ ಚಾರ್ಲಿ ಮೊದಲ ಸ್ಪರ್ಧಿಯಾಗಿ ದೊಡ್ಮನೆಗೆ ಕಾಲಿಡುತ್ತಿದೆ. ಅಂದಹಾಗೆ, 777 ಚಾರ್ಲಿ (777 charlie) ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ (Rakshit Shetty) ಜೊತೆ ಚಾರ್ಲಿ ಕೂಡ ಮನೋಜ್ಞವಾಗಿ ಅಭಿನಯಿಸುವ ಪ್ರೇಕ್ಷಕರ ಮನಗೆದ್ದಿತ್ತು. ಇದನ್ನೂ ಓದಿ:ಕಾವೇರಿಗಾಗಿ ಜೀವ ಕೊಡಲು ಸಿದ್ಧ: ನಟ ರಾಘವೇಂದ್ರ ರಾಜ್ ಕುಮಾರ್

    ಬಿಗ್ ಬಾಸ್ ಆಟ ಮುಗಿಯುವವರೆಗೆ ಚಾರ್ಲಿ ಆ ಮನೆಯಲ್ಲಿ ಇರತ್ತಾ ಇಲ್ವಾ ಅನ್ನೋದ್ದರ ಬಗ್ಗೆ ಮಾಹಿತಿ ಇಲ್ಲ. ಆಗಾಗ ಅದು ದೊಡ್ಮನೆಯೊಳಗಡೆ ಎಂಟ್ರಿ ಕೊಡಬಹುದು. ಈ ಬಗ್ಗೆ ಬಿಗ್ ಬಾಸ್ (Bigg Boss Kannada) ತಂಡವೇ ಹೆಚ್ಚಿನ ಮಾಹಿತಿ ನೀಡಬೇಕಿದೆ.

    ಈ ಬಾರಿ ಬಿಗ್ ಬಾಸ್ ಮನೆಗೆ ನಮ್ರತಾ ಗೌಡ(Namratha Gowda), ಗೀತಾ ಸೀರಿಯಲ್‌ನ ಭವ್ಯಾ ಗೌಡ(Bhavya Gowda), ಭೂಮಿಕಾ ಬಸವರಾಜ್, ವರ್ಷ ಕಾವೇರಿ, ವರುಣ್ ಆರಾಧ್ಯ, ಸುನೀಲ್ ರಾವ್, ರೂಪಾ ರಾಯಪ್ಪ, ಡಾ.ಬ್ರೋ ಸೇರಿದಂತೆ ಹಲವರ ಹೆಸರು ಸದ್ದು ಮಾಡ್ತಿದೆ. ದೊಡ್ಮನೆಗೆ ಕಾಲಿಡುವ ದಿನವೇ ಅಧಿಕೃತ ಮಾಹಿತಿ ಹೊರಬೀಳಲಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಚಾರ್ಲಿ ಮೇನಿಯಾ : ಮಂಗಳೂರಿನ ಶ್ವಾನಕ್ಕೆ ‘ಚಾರ್ಲಿ’ ಎಂದು ಹೆಸರಿಟ್ಟ ಪೊಲೀಸ್ ಇಲಾಖೆ

    ಚಾರ್ಲಿ ಮೇನಿಯಾ : ಮಂಗಳೂರಿನ ಶ್ವಾನಕ್ಕೆ ‘ಚಾರ್ಲಿ’ ಎಂದು ಹೆಸರಿಟ್ಟ ಪೊಲೀಸ್ ಇಲಾಖೆ

    ಕ್ಷಿತ್ ಶೆಟ್ಟಿ ನಟಿಸಿರು ಚಾರ್ಲಿ 777 ಸಿನಿಮಾ ಸ್ಯಾಂಡಲ್ ವುಡ್ ನಲ್ಲಿ ಸಖತ್ ಕ್ರೇಜ್ ಹುಟ್ಟಿಸಿದೆ. ಈ ಸಿನಿಮಾದ ಕೊನೆಯಲ್ಲಿ ನಾಯಿಯನ್ನು ದತ್ತು ಪಡೆದುಕೊಳ್ಳಿ ಎಂದು ಸಂದೇಶವಿದೆಯಂತೆ. ಹಾಗಾಗಿಯೇ ಸಿನಿಮಾ ನೋಡಿದ ಅನೇಕರು ತಮ್ಮ ತಮ್ಮ ಶ್ವಾನ ಪ್ರೀತಿ ತೋರುತ್ತಿದ್ದಾರೆ. ಕೇವಲ ಸಾಮಾನ್ಯ ಸಿನಿಮಾ ನೋಡುಗರು ಮಾತ್ರವಲ್ಲ, ಪೊಲೀಸ್ ಇಲಾಖೆ ಕೂಡ ತಮ್ಮ ಶ್ವಾನ ದಳದ ನಾಯಿಗೆ ವಿಭಿನ್ನ ರೀತಿಯಲ್ಲಿ ಗೌರವ ನೀಡುವ ಮೂಲಕ ಸಿನಿಮಾವನ್ನು ನೆನಪಿಸಿಕೊಂಡಿದೆ.

    ಚಾರ್ಲಿ ಸಿನಿಮಾದಲ್ಲಿ ನಾಯಿ ಮತ್ತು ಮನುಷ್ಯ ಸಂಬಂಧದ ಕುರಿತು ಅನೇಕ ಅಂಶಗಳನ್ನು ಅಳವಡಿಸಲಾಗಿದೆಯಂತೆ. ಹಾಗಾಗಿ ಮಂಗಳೂರು ಪೊಲೀಸ್ ಇಲಾಖೆಯು ಅದರಿಂದ ಸ್ಫೂರ್ತಿ ಪಡೆದುಕೊಂಡು ತಮ್ಮ ಶ್ವಾನ ದಳದ ಮರಿನಾಯಿಗೆ ಚಾರ್ಲಿ ಎಂದು ಹೆಸರಿಟ್ಟಿದ್ದಾರೆ. ನಾಯಿಮರಿಗೆ ಇನ್ನೂ ಮೂರು ತಿಂಗಳಾಗಿದ್ದರಿಂದ ಚಾರ್ಲಿ ಎಂದು ಹೆಸರಿಡುವ ಮೂಲಕ ಸಂಭ್ರಮಿಸಿದ್ದಾರೆ. ಇದಕ್ಕೆ ಕಾರಣ ಚಾರ್ಲಿ ಸಿನಿಮಾ ಎಂದು ಹೇಳಿದ್ದಾರೆ. ಓದಿ : ಧನಂಜಯ್ ನಟನೆಯ ಮತ್ತೊಂದು ಸಿನಿಮಾ ರಿಲೀಸ್ ಘೋಷಣೆ : ವರ್ಷದ ಅತೀ ಹೆಚ್ಚು ಸಿನಿಮಾ ರಿಲೀಸ್ ಆದ ನಟ ಡಾಲಿ

    ಪೊಲೀಸ್ ಸಿಬ್ಬಂದಿ ಕಚೇರಿಯಲ್ಲೇ ಕೇಕ್ ತಂದು, ನಾಯಿಗೆ ಹೆಸರಿಟ್ಟು ಜೂನ್.9ರಂದು ನಾಮಕರಣ ಶಾಸ್ತ್ರ ಮುಗಿಸಿದ್ದಾರೆ. ಈ ನಾಯಿಮರಿಯು ಲ್ಯಾಬ್ರಡರ್ ತಳಿಯಾಗಿದ್ದು, ಬಂಟ್ವಾಳದಿಂದ ಇಪ್ಪತ್ತು ಸಾವಿರ ರೂಪಾಯಿ ಕೊಟ್ಟು ಖರೀದಿಸಲಾಗಿದೆಯಂತೆ. ಅಂದಹಾಗೆ ಈ ನಾಯಿ ಮರಿ ಹುಟ್ಟಿದ್ದು 16 ಮಾರ್ಚ್ 2022ರಂದು, ಮೂರ್ನಾಲ್ಕು ತಿಂಗಳ ಬಳಿಕೆ ಈ ನಾಯಿಮರಿ ಬೆಂಗಳೂರಿನಲ್ಲಿ ತರಬೇತಿಗಾಗಿ ಬರಲಿದೆಯಂತೆ. ಆನಂತರವಷ್ಟೇ ಅದನ್ನು ಬಾಂಬ್ ನಿಷ್ಕ್ರೀಯ ಕೆಲಸಕ್ಕೆ ನಿಯೋಜನೆ ಮಾಡಲಾಗುತ್ತದೆಯಂತೆ.