Tag: ಚಾರ್ಮಿ ಕೌರ್

  • ಲೈಗರ್ ಚಿತ್ರಕ್ಕೆ ಅಕ್ರಮ ಹಣ: ಇಡಿ ವಿಚಾರಣೆ ಎದುರಿಸಿದ ವಿಜಯ್ ದೇವರಕೊಂಡ

    ಲೈಗರ್ ಚಿತ್ರಕ್ಕೆ ಅಕ್ರಮ ಹಣ: ಇಡಿ ವಿಚಾರಣೆ ಎದುರಿಸಿದ ವಿಜಯ್ ದೇವರಕೊಂಡ

    ಪುರಿ ಜಗನ್ನಾಥ್ ನಿರ್ದೇಶನದ ಲೈಗರ್ ಸಿನಿಮಾ ಹೀನಾಯವಾಗಿ ಸೋಲು ಕಂಡು, ಇಡೀ ಸಿನಿಮಾ ತಂಡದ ಮನಸ್ಸಿನಲ್ಲಿ ಕಹಿ ಸೌಧವನ್ನೇ ಕಟ್ಟಿದೆ. ಅದರಿಂದ ದೂರ ಬಂದು ಮತ್ತೊಂದು ಮಗ್ಗುಲಗೆ ಹೊರಳೋಣವೆಂದರೆ, ಇದೀಗ ಜಾರಿ ನಿರ್ದೇಶನಾಲಯವು (ಇಡಿ) ನಿದ್ದೆ ಮಾಡದಂತೆ ಮಾಡಿದೆ. ಲೈಗರ್ ಸಿನಿಮಾ ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ವಿಚಾರ ಗೊತ್ತಿದ್ದದ್ದೆ. ಈ ಸಿನಿಮಾ ನೂರಾರು ಕೋಟಿ ಕಲೆಕ್ಷನ್ ಮಾಡಲಿದೆ ಎಂದು ಹೇಳಲಾಗಿತ್ತು. ಚಿತ್ರತಂಡಕ್ಕೆ ಆ ನಂಬಿಕೆಯೂ ಇತ್ತು. ಆದರೆ, ಅದು ಸುಳ್ಳಾಯಿತು.

    ಲೈಗರ್ ಸಿನಿಮಾ ಸೋತರೂ, ಅದು ಕೊಡುತ್ತಿರುವ ನೋವು ಅಷ್ಟಿಷ್ಟಲ್ಲ. ಸೋಲಿನ ನಂತರ ಈ ಸಿನಿಮಾಗೆ ಹಣ ಹೂಡಿದ್ದು ಹೇಗೆ ಎನ್ನುವ ವಿಚಾರ ಮುನ್ನೆಲೆಗೆ ಬಂದಿದೆ. ಅಕ್ರಮ ಹಣದಿಂದ ಈ ಸಿನಿಮಾವನ್ನು ನಿರ್ಮಾಣ ಮಾಡಲಾಗಿದೆ ಎನ್ನುವುದು ಜಾರಿ ನಿರ್ದೇಶನಾಲಯದ ಆರೋಪ. ಹಾಗಾಗಿಯೇ ಈ ಸಿನಿಮಾದ ನಟ ವಿಜಯ್ ದೇವರಕೊಂಡ ಅವರಿಗೆ ಇಡಿ ನೋಟಿಸ್ ನೋಡಿತ್ತು. ವಿಚಾರಣೆಗೆ ಹಾಜರಾಗುವಂತೆ ತಿಳಿಸಿತ್ತು. ನಿನ್ನೆ ವಿಜಯ್ ದೇವರಕೊಂಡ ಹೈದರಾಬಾದ್‍ ನಲ್ಲಿರುವ ಇಡಿ ಕಚೇರಿಗೆ ಭೇಟಿ ನೀಡಿ ವಿಚಾರಣೆ ಎದುರಿಸಿದ್ದಾರೆ. ಇದನ್ನೂ ಓದಿ: ಬ್ಯಾನ್ ಆಕ್ರೋಶದ ಬೆನ್ನಲ್ಲೇ ವಿದೇಶಕ್ಕೆ ಹಾರಿದ ರಶ್ಮಿಕಾ ಮಂದಣ್ಣ

    ಲೈಗರ್ ಸಿನಿಮಾಗೆ ಬಳಸಿರುವ ಹಣವು ವಿದೇಶದಿಂದ ಹರಿದು ಬಂದಿದೆ ಎನ್ನುವುದು ಹಾಗೂ ಹಣ ವರ್ಗಾವಣೆಯಲ್ಲಿ ನಿಯಮ ಉಲ್ಲಂಘನೆ ಆಗಿದೆ ಎನ್ನುವುದು ಇಡಿ ಆರೋಪ. ಹಾಗಾಗಿಯೇ ಸಿನಿಮಾ ನಿರ್ದೇಶಕ ಪೂರಿ ಜಗನ್ನಾಥ್, ನಿರ್ಮಾಪಕಿ ಚಾರ್ಮಿ ಕೌರ್ ಹಾಗೂ ವಿಜಯ್ ದೇವರಕೊಂಡ ಸೇರಿದಂತೆ ಹಲವರಿಗೆ ನೋಟಿಸ್ ಜಾರಿ ಮಾಡಲಾಗಿತ್ತು. ಈ ಹಿಂದೆಯೇ ಪೂರಿ ಮತ್ತು ಚಾರ್ಮಿ ಕೌರ್ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಮುಂದೆ ಹಾಜರಾಗಿದ್ದರು. ಇದೀಗ ವಿಜಯ್ ದೇವರಕೊಂಡ ಕೂಡ ಅಧಿಕಾರಿಗಳ ಪ್ರಶ್ನೆಯನ್ನು ಎದುರಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ‘ಲೈಗರ್’ ಸಿನಿಮಾಗೆ ಹಣ ಎಲ್ಲಿಂದ ಬಂತು?: ನಟಿ, ನಿರ್ದೇಶಕನಿಗೆ ‘ಇಡಿ’ ಗ್ರಿಲ್

    ‘ಲೈಗರ್’ ಸಿನಿಮಾಗೆ ಹಣ ಎಲ್ಲಿಂದ ಬಂತು?: ನಟಿ, ನಿರ್ದೇಶಕನಿಗೆ ‘ಇಡಿ’ ಗ್ರಿಲ್

    ವಿಜಯ್ ದೇವರಕೊಂಡ ನಟಿಸಿದ್ದ, ಪುರಿ ಜಗನ್ನಾಥ್ ನಿರ್ದೇಶನ ಮಾಡಿರುವ ಲೈಗರ್ ಸಿನಿಮಾ ಹೇಳೊಕೆ ಹೆಸರಿಲ್ಲದಂತೆ ನೆಲಕಚ್ಚಿತು. ಬಾಕ್ಸ್ ಆಫೀಸಿನಿಂದ ನಯಾ ಪೈಸೆಯೂ ಲಾಭವಾಗಿ ಬರಲಿಲ್ಲ. ವಿಜಯ್ ದೇವರಕೊಂಡ ಕೂಡ ನಟನೆಯಾಗಿಯೂ ಗೆಲ್ಲಲಿಲ್ಲ. ಹಾಗಾಗಿ ಲೈಗರ್ ಟೀಮ್ ಮನೆಯಿಂದಾನೇ ಕೆಲವು ದಿನ ಆಚೆ ಬರಲಿಲ್ಲ. ಆನಂತರ ಲೈಗರ್ ಸೋಲನ್ನು ಒಬ್ಬೊಬ್ಬರೇ ಒಪ್ಪಿಕೊಳ್ಳುವುದಕ್ಕೆ ಶುರು ಮಾಡಿದರು. ಇನ್ನೇನು ಆ ಕಹಿಯನ್ನು ಮರೆತು ಹೊಸ ಸಿನಿಮಾದಲ್ಲಿ ತೊಡಗಿಸಿಕೊಳ್ಳುವ ಹೊತ್ತಲ್ಲಿ ಇಡಿ ಸಂಕಟ ಶುರುವಾಗಿದೆ.

    ನಿರ್ದೇಶಕ ಪುರಿ ಜಗನ್ನಾಥ್, ನಟಿ ಹಾಗೂ ಈ ಸಿನಿಮಾದ ಕಾರ್ಯಕಾರಿ ನಿರ್ಮಾಪಕ ಚಾರ್ಮಿ ಕೌರ್ ಹಿಂದೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಿದ್ದಿದ್ದು, ಸತತ 13 ಗಂಟೆಗಳ ಕಾಲ ಈ ಇಬ್ಬರನ್ನೂ ಇಡಿ ಅಧಿಕಾರಿಗಳು ಗ್ರಿಲ್ ಮಾಡಿದ್ದಾರೆ. ಲೈಗರ್ ಸಿನಿಮಾದ ನಿರ್ಮಾಣಕ್ಕೆ ಹಣವನ್ನು ಎಲ್ಲಿಂದ ತಂದಿದ್ದೀರಿ? ಹಣದ ಮೂಲ ಏನು ಎಂದು ಕೇಳಿದೆ. ಅಲ್ಲದೇ, ಸತತ 13 ಗಂಟೆಗಳ ಕಾಲ ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದೆ. ಇದನ್ನೂ ಓದಿ:‘ಸಲಾರ್’ ಸಿನಿಮಾದಲ್ಲಿ ಕನ್ನಡದ ಯುವ ನಾಯಕ ಪ್ರಮೋದ್ ನಟಿಸಿದ್ದು ನಿಜ : ಪ್ರಶಾಂತ್ ನೀಲ್

    ಲೈಗರ್ ಸಿನಿಮಾದಿಂದ ದುಡ್ಡು ಬರದೇ ಇದ್ದರೂ, ಈ ಸಿನಿಮಾ ಮಾಡಲು ಹಣವನ್ನು ಎಲ್ಲಿಂದ ತಂದಿದ್ದೀರಿ? ಸಾಲ ಮಾಡಿದ್ದೀರಾ? ಯಾರು ಬಳಿ ಸಾಲ ಮಾಡಿದ್ದು? ಹಾಕಿರುವ ಬಂಡವಾಳ ಎಷ್ಟು? ವಾಪಸ್ಸು ಹಣ ಬಂದಿದ್ದು ಎಷ್ಟು? ಹೀಗೆ ನೂರಾರು ಪ್ರಶ್ನೆಗಳನ್ನು ಇಡಿ ಅಧಿಕಾರಿಗಳು ಪೂರಿ ಜಗನ್ನಾಥ್ ಮತ್ತು ಚಾರ್ಮಿಗೆ ಕೇಳಿದ್ದಾರೆ. ಅರ್ಧ ದಿನ ಇಡಿ ಅಧಿಕಾರಿಗಳ ಜೊತೆಯೇ ಇಬ್ಬರೂ ಕಳೆದಿದ್ದರು.

    Live Tv
    [brid partner=56869869 player=32851 video=960834 autoplay=true]

  • ‘ಲೈಗರ್’ ಸಿನಿಮಾ ಸೋಲು: ನಿರ್ಮಾಪಕರಿಗೆ ಸಂಭಾವನೆ ಹಿಂದಿರುಗಿಸಿದ ವಿಜಯ್ ದೇವರಕೊಂಡ

    ‘ಲೈಗರ್’ ಸಿನಿಮಾ ಸೋಲು: ನಿರ್ಮಾಪಕರಿಗೆ ಸಂಭಾವನೆ ಹಿಂದಿರುಗಿಸಿದ ವಿಜಯ್ ದೇವರಕೊಂಡ

    ಪುರಿ ಜಗನ್ನಾಥ್ ನಿರ್ದೇಶನದಲ್ಲಿ ಮೂಡಿ ಬಂದಿದ್ದ ಲೈಗರ್ ಸಿನಿಮಾ ಹೀನಾಯವಾಗಿ ಸೋಲು ಅನುಭವಿಸಿದೆ. ಬಾಯ್ಕಟ್ ಸೇರಿದಂತೆ, ಸಿನಿಮಾ ನಟನ ದರ್ಪವೇ ಸಿನಿಮಾ ಸೋಲಿಗೆ ಕಾರಣ ಎಂದು ವಿಶ್ಲೇಷಿಸಲಾಗಿದೆ. ಅದರಲ್ಲೂ ಹಿಂದಿ ಸಿನಿಮಾ ರಂಗ ವಿಮರ್ಶಕರು ಕೂಡ ಸಿನಿಮಾ ಚೆನ್ನಾಗಿಲ್ಲವೆಂದು ಕಾಮೆಂಟ್ ಮಾಡಿದ್ದರು. ಹಾಗಾಗಿ ಬಾಕ್ಸ್ ಆಫೀಸಿನಲ್ಲಿ ಸಿನಿಮಾ ಗೆಲ್ಲಲಿಲ್ಲ. ಈ ಸೋಲಿನ ಹೊಣೆಯನ್ನು ಸ್ವತಃ ವಿಜಯ್ ದೇವರಕೊಂಡ ಹೊತ್ತಿದ್ದಾರೆ.

    ಮೂಲಗಳ ಪ್ರಕಾರ, ಲೈಗರ್ ಸಿನಿಮಾದ ಸೋಲಿನ ಹೊಣೆಯನ್ನು ತಾವೇ ಹೊತ್ತುಕೊಂಡಿರುವ ವಿಜಯ್ ದೇವರಕೊಂಡ ತಾವು ಪಡೆದಿದ್ದು ಕೋಟಿ ಕೋಟಿ ಸಂಭಾವನೆಯನ್ನು ವಾಪಸ್ಸು ಮಾಡಿದ್ದಾರೆ ಎನ್ನಲಾಗುತ್ತಿದೆ. ಈ ಸಿನಿಮಾಗೆ ಅವರು 25 ಕೋಟಿ ಸಂಭಾವನೆ ಪಡೆದಿದ್ದರು ಎಂದು ಹೇಳಲಾಗುತ್ತಿದೆ. ಅಷ್ಟೂ ಹಣವನ್ನು ಚಾರ್ಮಿ ಕೌರ್ ಮತ್ತು ಪುರಿ ಜಗನ್ನಾಥ್ ಅವರಿಗೆ ವಾಪಸ್ಸು ಮಾಡಿದ್ದಾರೆ ಎಂದು ವರದಿ ಆಗಿದೆ. ಇದನ್ನೂ ಓದಿ: ರಿಯಲ್ ಪ್ರೇಮಿಗಳು ‘ಬಿಗ್ ಬಾಸ್’ ಮನೆಯಲ್ಲಿ ಬೇರೆ ಬೇರೆ ಆಗ್ತಾರಾ?: ದೂರಾಗುವ ಕುರಿತು ಮಾತನಾಡಿದ ನಂದಿನಿ

    ಲೈಗರ್ ಸಿನಿಮಾದ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು. ಈ ಸಿನಿಮಾ ನೂರಾರು ಕೋಟಿ ಗಳಿಸಲಿದೆ ಎಂಬ ಲೆಕ್ಕಾಚಾರ ಕೂಡ ನಡೆದಿತ್ತು. ದಕ್ಷಿಣದ ಹೀರೋ ಬಾಲಿವುಡ್ ನಲ್ಲಿ ಮತ್ತೊಂದು ದಾಖಲೆ ನಿರ್ಮಿಸುತ್ತಾರೆ ಎಂದೇ ಹೇಳಲಾಗಿತ್ತು. ಆದರೆ, ಎಲ್ಲ ಲೆಕ್ಕಾಚಾರ ತಲೆಕೆಳಗಾಗಿವೆ. ಹಾಕಿದ ಬಂಡವಾಳವೂ ಬಾರದೇ ಇರುವಷ್ಟು ಸಿನಿಮಾ ಮುಗ್ಗರಿಸಿದೆ.

    Live Tv
    [brid partner=56869869 player=32851 video=960834 autoplay=true]

  • ನಟಿ ಚಾರ್ಮಿಗಾಗಿ ಪತ್ನಿಯನ್ನೇ ಬಿಡ್ತಾರಾ ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್

    ನಟಿ ಚಾರ್ಮಿಗಾಗಿ ಪತ್ನಿಯನ್ನೇ ಬಿಡ್ತಾರಾ ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್

    ಪುನೀತ್ ರಾಜ್ ಕುಮಾರ್ ಅವರನ್ನು ಕನ್ನಡ ಸಿನಿಮಾ ರಂಗಕ್ಕೆ ಪರಿಚಯಿಸಿದ ನಿರ್ದೇಶಕ ಪುರಿ ಜಗನ್ನಾಥ್ ವೈವಾಹಿಕ ಬದುಕಿನಲ್ಲಿ ಬಿರುಗಾಳಿ ಎದ್ದಿದೆಯಾ? ಅಂಥದ್ದೊಂದು ಸುದ್ದಿ ತೆಲುಗು ಸಿನಿಮಾ ರಂಗದಿಂದ ಬಂದಿದೆ. ಕಳೆದ ಒಂಬತ್ತು ವರ್ಷಗಳಿಂದ ಪುರಿ ಜಗನ್ನಾಥ್ ನಿರ್ದೇಶನದ ಬಹುತೇಕ ಸಿನಿಮಾಗಳಿಗೆ ಬಂಡವಾಳ ಹೂಡುತ್ತಿರುವ ಖ್ಯಾತ ನಟಿ ಚಾರ್ಮಿ ಕೌರ್, ಈ ಬಿರುಗಾಳಿಗೆ ಕಾರಣ ಎನ್ನಲಾಗುತ್ತಿದೆ. ಕಷ್ಟದ ದಿನಗಳಲ್ಲಿ ಪತಿಯೊಂದಿಗೆ ನಿಂತಿರುವ ಪತ್ನಿಯನ್ನು ಪುರಿ ಅಷ್ಟು ಬೇಗ ದೂರ ಮಾಡುತ್ತಾರಾ ಎನ್ನುವ ಪ್ರಶ್ನೆಯೂ ಎದ್ದಿದೆ.

    ಪುರಿ ಜಗನ್ನಾಥ್ ಮತ್ತು ಚಾರ್ಮಿ ಕೌರ್ ಕಾಂಬಿನೇಷನ್ ನಲ್ಲಿ ಅನೇಕ ಸಿನಿಮಾಗಳು ನಿರ್ಮಾಣವಾಗಿದೆ. ಪುರಿ ಮಗನಿಗಾಗಿಯೇ ಚಾರ್ಮಿ ಮೂರು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ. ಅಲ್ಲದೇ, ಪತ್ನಿಗಿಂತ ಹೆಚ್ಚು ಸಮಯವನ್ನು ಚಾರ್ಮಿ ಜೊತೆಯೇ ಪುರಿ ಕಳೆಯುತ್ತಿದ್ದಾರೆ. ಹಾಗಾಗಿ ಪತ್ನಿಯನ್ನು ಚಾರ್ಮಿಗಾಗಿ ತೊರೆಯಲಿದ್ದಾರೆ ಎನ್ನುವ ಸುದ್ದಿ ದಟ್ಟವಾಗಿದೆ. ಈ ಸುದ್ದಿಯು ಎಲ್ಲ ಕಡೆ ಹರಡುತ್ತಿದ್ದಂತೆಯೇ ಪುರಿ ಅವರ ಪುತ್ರ, ನಟ ಆಕಾಶ್ ಪರೋಕ್ಷವಾಗಿ ಕೆಲ ಮಾತುಗಳನ್ನೂ ಆಡಿದ್ದಾರೆ. ಹೀಗಾಗಿ ಚಾರ್ಮಿ ಮತ್ತು ಪುರಿ ಜಗನ್ನಾಥ್ ಮಧ್ಯೆ ಅತೀವ ಬಾಂಧವ್ಯ ಇದೆ ಎಂದು ನಂಬಲಾಗಿದೆ.  ಇದನ್ನೂ ಓದಿ: ಪೃಥ್ವಿ ಅಂಬರ್ ಮತ್ತು ಪ್ರಮೋದ್ ಕಾಂಬಿನೇಷನ್ ಚಿತ್ರಕ್ಕೆ ಚಾಲನೆ

    ಸದ್ಯ ಆಕಾಶ ನಟನೆಯ ಹೊಸ ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ. ಈ ಸಂದರ್ಭದಲ್ಲಿ ಮಾತನಾಡಿರುವ ಅವರು, ‘ನನ್ನ ತಾಯಿ ತುಂಬಾ ಒಳ್ಳೆಯವರು. ಅಪ್ಪನ ಕಷ್ಟದ ದಿನಗಳಿಂದ ಅವರ ಜೊತೆಯೇ ನಿಂತಿದ್ದಾರೆ. ಇವತ್ತು ಅಪ್ಪ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿರುವುದಕ್ಕೆ ಅಮ್ಮನೂ ಕಾರಣನಾಗಿದ್ದಾರೆ. ಅವರಿಬ್ಬರೂ ದೂರವಾಗುವ ಪ್ರಶ್ನೆಯೇ ಇಲ್ಲ. ಯಾರಿಂದಲೂ ಅವರನ್ನು ಬೇರ್ಪಡಿಸಲು ಸಾಧ್ಯವಿಲ್ಲ ಎಂದು ಪರೋಕ್ಷವಾಗಿ ಚಾರ್ಮಿಗೆ ಎಚ್ಚರಿಕೆ ಕೊಟ್ಟಿದ್ದಾರೆ.

    ಪ್ರಕಾಶ್ ಆಡಿದ ಮಾತೂ ಕೂಡ ತೆಲುಗು ಸಿನಿಮಾ ರಂಗದಲ್ಲಿ ಸಂಚಲನ ಮೂಡಿಸಿದೆ. ಒಳ್ಳೆಯ ಪತ್ನಿಯನ್ನು ದೂರ ಮಾಡುವುದು ಸರಿ ಅಲ್ಲ ಎಂದು ಚಾರ್ಮಿಗೆ ಸೋಷಿಯಲ್ ಮೀಡಿಯಾದಲ್ಲಿ ಕಿವಿಮಾತು ಹೇಳುವಂತಹ ಕಾಮೆಂಟ್ಸ್ ಕೂಡ ಬಂದಿದೆ. ಆದರೆ, ಈ ಕುರಿತು ಚಾರ್ಮಿ ಆಗಲಿ, ಪುರಿ ಜಗನ್ನಾಥ್ ಆಗಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ತಮ್ಮ ಮಧ್ಯೆ ಇರುವ ಬಾಂಧವ್ಯದ ಕುರಿತು ಅವರು ಎಲ್ಲಿಯೂ ಮಾತನಾಡಿಲ್ಲ.

    Live Tv

  • ರಾಣಾ, ರಕುಲ್, ರವಿತೇಜ, ಚಾರ್ಮಿಗೆ ಜಾರಿ ನಿರ್ದೇಶನಾಲಯದ ನೋಟಿಸ್

    ರಾಣಾ, ರಕುಲ್, ರವಿತೇಜ, ಚಾರ್ಮಿಗೆ ಜಾರಿ ನಿರ್ದೇಶನಾಲಯದ ನೋಟಿಸ್

    – 2017ರ ಡ್ರಗ್ಸ್ ಕೇಸ್, ಸೆ.2 ರಿಂದ 22ರೊಳಗೆ ವಿಚಾರಣೆ

    ನವದೆಹಲಿ: ನಾಲ್ಕು ವರ್ಷದ ಹಿಂದಿನ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲಾವಿದರಾದ ರಕುಲ್ ಪ್ರೀತ್ ಸಿಂಗ್, ರಾಣಾ ದಗ್ಗುಬಾಟಿ, ರವಿ ತೇಜ ಮತ್ತು ಚಾರ್ಮಿ ಕೌರ್ ಸೇರಿದಂತೆ 10 ಜನರಿಗೆ ಜಾರಿ ನಿರ್ದೇಶನಾಲಯ ಸಮನ್ಸ್ ನೀಡಿದೆ ಎಂದು ವರದಿಯಾಗಿದೆ.

    ಸೆಪ್ಟೆಂಬರ್ 6ಕ್ಕೆ ರಕುಲ್ ಪ್ರೀತ್ ಸಿಂಗ್, ಸೆಪ್ಟೆಂಬರ್ 8ಕ್ಕೆ ರಾಣಾ ದಗ್ಗುಬಾಟಿ ಮತ್ತು ಸೆಪ್ಟೆಂಬರ್ 9ರಂದು ರವಿತೇಜ ಹೈದರಬಾದ್ ನಲ್ಲಿರುವ ಇಡಿ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗಲಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಕಲಾವಿದ ಜೊತೆ ಟಾಲಿವುಡ್ ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್ ಅವರಿಗೆ ಆಗಸ್ಟ್ 31ರಂದು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದೆ. ರವಿತೇಜ ಡ್ರೈವರ್ ಮತ್ತು ‘ಎಫ್’ ಕ್ಲಬ್ ನ ‘ಜಿಎಂ’ ಹೆಸರಿನ ವ್ಯಕ್ತಿಗೂ ನೋಟಿಸ್ ನೀಡಲಾಗಿದೆ. ಇವರೆಲ್ಲರ ವಿಚಾರಣೆ ಸೆಪ್ಟೆಂಬರ್ 2ರಿಂದ 22ರೊಳಗೆ ನಡೆಯಲಿದೆ.

    12 ಲಕ್ಷ ಮೌಲ್ಯದ ಡ್ರಗ್ಸ್, 12 ಕೇಸ್:
    2017ರಲ್ಲಿ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದ ತೆಲಂಗಾಣದ ಅಬಕಾರಿ ಇಲಾಖೆ, 12 ಲಕ್ಷ ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆದುಕೊಂಡು ಒಟ್ಟು 12 ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡಿತ್ತು. ಇದೇ ಪ್ರಕರಣದಲ್ಲಿ ಟಾಲಿವುಡ್ ಕಲಾವಿದರ ಹೆಸರು ಕೇಳಿ ಬಂದರೂ, ಸಾಕ್ಷ್ಯಾಧಾರಗಳ ಕೊರತೆ ಹಿನ್ನೆಲೆ ಎಸ್‍ಐಟಿ ಯಾರನ್ನೂ ಆರೋಪಿಗಳೆಂದು ಪರಿಗಣಿಸಿರಲಿಲ್ಲ. ಆದ್ರೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವರಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಿತ್ತು. ಇದನ್ನೂ ಓದಿ: ಸುಶಾಂತ್ ಕೇಸ್ – ಎನ್‍ಸಿಬಿಯಿಂದ 30 ಸಾವಿರ ಪುಟಗಳ ಚಾರ್ಚ್‍ಶೀಟ್ ಸಲ್ಲಿಕೆ

    62 ಜನರ ಕೂದಲು, ಉಗುರು ಮಾದರಿ ಸಂಗ್ರಹ:
    2017 ಜುಲೈನಲ್ಲಿ ಎಸ್‍ಐಟಿ ಟಾಲಿವುಡ್ ಕಲಾವಿದರು ಸೇರಿದಂತೆ 62 ಜನರ ಕೂದಲು ಮತ್ತು ಉಗುರು ಮಾದರಿಯನ್ನು ಸಂಗ್ರಹಿಸಿತ್ತು. ಆದ್ರೆ ಈ ವರದಿಯಲ್ಲಿ ಎಸ್‍ಐಟಿಗೆ ಯಾವ ಸುಳಿವು ಸಿಕ್ಕಿರಲಿಲ್ಲ. ಇದೇ ಪ್ರಕರಣದಲ್ಲಿ ಸೌಥ್ ಆಫ್ರಿಕಾ ಮೂಲದ ರಾಫೇಲ್ ಎಲೆಕ್ಸ್ ವಿಕ್ಟರ್ ಎಂಬಾತನನ್ನು ಬಂಧಿಸಲಾಗಿತ್ತು. ಈತ ಮುಂಬೈ ಮತ್ತು ಹೈದರಾಬಾದ್ ನಲ್ಲಿ ಡ್ರಗ್ಸ್ ಮಾರಾಟದಲ್ಲಿ ತೊಡಗಿಕೊಂಡಿದ್ದನು. ಆರೋಪಿ ವಿರುದ್ಧ ಎಸ್‍ಐಟಿ ಚಾರ್ಜ್ ಶೀಟ್ ಸಹ ಸಲ್ಲಿಸಿದೆ. ಇದನ್ನೂ ಓದಿ: ಅರ್ಜುನ್ ರಾಂಪಾಲ್‍ಗೆ ಮತ್ತೆ ಡ್ರಗ್ಸ್ ಕಂಟಕ – ಎನ್‍ಸಿಬಿಯಿಂದ ನೋಟಿಸ್

    2019ರ ನಟ ಸುಶಾಂತ್ ಸಿಂಗ್ ರಜಪೂತ್ ಡ್ರಗ್ಸ್ ಪ್ರಕರಣದಲ್ಲಿ ರಕುಲ್ ಪ್ರೀತ್ ಸಿಂಗ್ ಹೆಸರು ಕೇಳಿಬಂದಿತ್ತು. ಈ ಸಂಬಂಧ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಟೀಂ ವಿಚಾರಣೆ ನಡೆಸಿ, ಕೆಲ ಮಾಹಿತಿ ಪಡೆದುಕೊಂಡಿತ್ತು. ಆದ್ರೆ ಪ್ರಕರಣದಲ್ಲಿ ಆರೋಪಿಯನ್ನಾಗಿ ಮಾಡಿರಲಿಲ್ಲ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿಯರಾದ ದೀಪಿಕಾ ಪಡುಕೋಣೆ, ಶ್ರದ್ಧಾ ಕಪೂರ್ ಮತ್ತು ಸಾರಾ ಅಲಿ ಖಾನ್ ಸಹ ವಿಚಾರಣೆ ಎದುರಿಸಿದ್ದರು. ಇದನ್ನೂ ಓದಿ: ಭಾರತಿ ಸಿಂಗ್ ಡ್ರಗ್ಸ್ ಪ್ರಕರಣ- ಇಬ್ಬರು ಎನ್‍ಸಿಬಿ ಅಧಿಕಾರಿಗಳ ಅಮಾನತು

  • ‘ಲೈಗರ್’ ಗಾಗಿ ಮುಂಬೈಗೆ ಹಾರಿದ ಟಾಲಿವುಡ್ ರೌಡಿ

    ‘ಲೈಗರ್’ ಗಾಗಿ ಮುಂಬೈಗೆ ಹಾರಿದ ಟಾಲಿವುಡ್ ರೌಡಿ

    ಮುಂಬೈ: ಟಾಲಿವುಡ್ ನಟ ವಿಜಯ್ ದೇವರಕೊಂಡ ಅಭಿನಯದ ಲೈಗರ್ ಸಿನಿಮಾದ ಶೂಟಿಂಗ್‍ನನ್ನು ಮುಂಬೈನಲ್ಲಿ ಮತ್ತೆ ಆರಂಭವಾಗಿದೆ. ಸದ್ಯ ಲೈಗರ್ ಸಿನಿಮಾದ ನಿರ್ಮಾಪಕರಲ್ಲಿ ಒಬ್ಬರಾದ ಚಾರ್ಮಿ ಕೌರ್ ವಿಜಯ್ ಜೊತೆ ಫೋಟೋವೊಂದನ್ನು ಕ್ಲಿಕ್ಕಿಸಿಕೊಂಡಿದ್ದು, ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

    ಗುರುವಾರ ಲೈಗರ್ ಸಿನಿಮಾದ ಶೂಟಿಂಗ್‍ಗಾಗಿ ವಿಜಯ್ ದೇವರಕೊಂಡ ಮುಂಬೈಗೆ ಹಾರಿದ್ದು, ಚಾರ್ಮಿ ಕೌರ್ ವಿಜಯ್ ದೇವರಕೊಂಡಗೆ ಸ್ವಾಗತ ಕೋರಿದ್ದಾರೆ ಹಾಗೂ ವಿಜಯ್ ಜೊತೆ ಫೋಟೋವೊಂದನ್ನು ಕ್ಲಿಕ್ಕಿಸಿಕೊಂಡು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ನಮ್ಮ ಲೈಗರ್ ಮತ್ತೆ ಮರಳಿದೆ ಎಂದು ಚಾರ್ಮಿ ಕೌರ್ ಕ್ಯಾಪ್ಷನ್ ಹಾಕಿಕೊಂಡಿದ್ದಾರೆ.

    ಸಿನಿಮಾ ಕುರಿತ ಪ್ರಮೋಷನ್ ಇಲ್ಲದಿದ್ದರೆ ವಿಜಯ್ ದೇವರಕೊಂಡ ಅಷ್ಟಾಗಿ ಸಾಮಾಜಿಕ ಜಾಲಾತಾಣದಲ್ಲಿ ಸಕ್ರಿಯರಾಗಿರುವುದಿಲ್ಲ. ಈಗ ಒಂದು ತಿಂಗಳ ಬಳಿಕ ವಿಜಯ್ ದೇವರಕೊಂಡ ಅವರು ಸೋಫಾದ ಮೇಲೆ ಕುಳಿತಿರುವ ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ.

     

    View this post on Instagram

     

    A post shared by Vijay Deverakonda (@thedeverakonda)

    11 ತಿಂಗಳ ಬಳಿಕ ಲೈಗರ್ ಸಿನಿಮಾದ ಚಿತ್ರೀಕರಣ ಪುನಾರಂಭಗೊಂಡಿದ್ದು, ವಿಜಯ್ ದೇವರಕೊಂಡ ಹೈದರಾಬಾದ್‍ನಿಂದ ಮುಂಬೈಗೆ ಫ್ಲೈಟ್ ಮೂಲಕ ಓಡಾಡುತ್ತಿದ್ದಾರೆ. ಈ ಸಿನಿಮಾಕ್ಕೆ ಪುರಿ ಜಗನ್ನಾಥ್ ಆ್ಯಕ್ಷನ್ ಕಟ್ ಹೇಳಿದ್ದು, ವಿಜಯ್ ಜೊತೆ ಅನನ್ಯ ಪಾಂಡೇ ಸ್ಕ್ರೀನ್ ಶೇರ್ ಮಾಡಿದ್ದಾರೆ. ಚಾರ್ಮಿ ಕೌರ್ ಮತ್ತು ಕರಣ್ ಜೋಹರ್ ಸಿನಿಮಾಕ್ಕೆ ಬಂಡವಾಳ ಹೂಡಿದ್ದು, ಲೈಗರ್ ಸಿನಿಮಾ ಸೆಪ್ಟೆಂಬರ್ 9 ರಂದು ಅನೇಕ ಭಾಷೆಗಳಲ್ಲಿ ತೆರೆ ಮೇಲೆ ಬರಲಿದೆ.

  • ಕೊರೊನಾ ವೈರಸ್ ಟಿಕ್‍ಟಾಕ್-ಕ್ಷಮೆ ಕೇಳಿದ ನಟಿ

    ಕೊರೊನಾ ವೈರಸ್ ಟಿಕ್‍ಟಾಕ್-ಕ್ಷಮೆ ಕೇಳಿದ ನಟಿ

    ಮುಂಬೈ: ಭಯಾನಕ ಕೊರೊನಾ ವೈರಸ್ ಭಾರತಕ್ಕೆ ಕಾಲಿಟಿದ್ದು, ಜನ ಆತಂಕದಲ್ಲಿದ್ದಾರೆ. ಈ ಸಮಯದಲ್ಲಿ ದಕ್ಷಿಣ ಭಾರತದ ನಟಿ, ನಿರ್ಮಾಪಕಿಯಾಗಿರುವ ಚಾರ್ಮಿ ಕೌರ್ ಸೋಮವಾರ ಕೊರೊನಾ ವೈರಸ್ ಕುರಿತು ಸಂತೋಷದ ಟಿಕ್‍ಟಾಕ್ ಮಾಡಿ ಕ್ಷಮೆ ಕೇಳಿದ್ದಾರೆ.

    ಕೊರೊನಾ ವೈರಸ್ ಭಾರತಕ್ಕೆ ಕಾಲಿಟ್ಟಿರುವ ವಿಷಯವನ್ನು ತಿಳಿಸಿ ದೇಶದ ಜನತೆಗೆ ಶುಭಾಶಯ ತಿಳಿಸಿದ್ದಾರೆ. ಜನರು ಕೊರೊನಾ ವೈರಸ್ ಆತಂಕದಲ್ಲಿದ್ದು, ನಟಿಯ ಟಿಕ್‍ಟಾಕ್ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ. ಈಗಾಗಲೇ ಕೊರೊನಾ ವೈರಸ್ ದೆಹಲಿ ಮತ್ತು ತೆಲಂಗಾಣಕ್ಕೆ ಬಂದಿದೆ ಎಂದು ನ್ಯೂಸ್ ಗಳಲ್ಲಿ ನೋಡಿದ್ದೇನೆ. ಕೊರೊನಾ ಎಂಟ್ರಿಗೆ ಸಂತೋಷ ವ್ಯಕ್ತಪಡಿಸಿ ಎಲ್ಲರಿಗೂ ಶುಭಾಶಯ ತಿಳಿಸಿದ್ದಾರೆ.

    ಕ್ಷಮೆ ಕೇಳಿದ ಚಾರ್ಮಿ: ಟಿಕ್‍ಟಾಕ್ ವಿಡಿಯೋಗೆ ನೆಟ್ಟಿಗರು ಕಿಡಿಕಾರುತ್ತಿದ್ದಂತೆ ಎಚ್ಚೆತ್ತ ಚಾರ್ಮಿ, ನಾನು ನಿಮ್ಮೆಲ್ಲರ ಕಮೆಂಟ್‍ಗಳನ್ನು ಓದಿದ್ದೇನೆ. ಹಾಗಾಗಿ ನನ್ನ ಈ ವಿಡಿಯೋಗಾಗಿ ನಿಮ್ಮಲ್ಲಿ ಕ್ಷಮೆ ಕೇಳುತ್ತೇನೆ. ಇಂತಹ ಪರಿಸ್ಥಿತಿಯಲ್ಲಿ ನಾನು ಹುಡುಗಾಟಿಕೆ ರೀತಿ ಟಿಕ್‍ಟಾಕ್ ಮಾಡಬಾರದಿತ್ತು. ಇನ್ಮುಂದೆ ಯಾವುದೇ ವಿಡಿಯೋ ಮಾಡುವಾಗ ಎಚ್ಚರಿಕೆಯಿಂದ ಇರುತ್ತೇನೆ. ನನಗೆ ಕೊರೊನಾ ವೈರಸ್ ಬಗ್ಗೆ ಹೆಚ್ಚಿನ ಮಾಹಿತಿ ಇರಲಿಲ್ಲ ಎಂದು ಬರೆದುಕೊಂಡಿದ್ದಾರೆ.

    ಚಾರ್ಮಿ ಕೌರ್ ಹೆಚ್ಚು ತೆಲಗು ಸಿನಿಮಾಗಳಲ್ಲಿ ನಟಿಸಿದ್ದಾರೆ. ಹಾಗೆ ತಮಿಳು, ಮಲಯಾಳಂ ಮತ್ತು ಹಿಂದಿ ಚಿತ್ರಗಳಲ್ಲಿಯೂ ಅಭಿನಯಿಸಿದ್ದಾರೆ. ಮುಜಸೇ ದೋಸ್ತಿ ಕರೋಗಿ, ಬುಡ್ಡಾ ಹೋಗಾ ತೇರಾ ಬಾಪ್ ಮತ್ತು ಆರ್.ರಾಜ್‍ಕುಮಾರ್ ಮುಂತಾದ ಸಿನಿಮಾಗಳಲ್ಲಿ ಚಾರ್ಮಿ ನಟಿಸಿದ್ದಾರೆ.

  • ಕಾನೂನಿನಲ್ಲಿ ಅವಕಾಶವಿದೆ, ನಾವು ಮದ್ವೆಯಾಗೋಣ – ತ್ರಿಷಾ, ಚಾರ್ಮಿ ಮದ್ವೆಗೆ ಪರಸ್ಪರ ಒಪ್ಪಿಗೆ

    ಕಾನೂನಿನಲ್ಲಿ ಅವಕಾಶವಿದೆ, ನಾವು ಮದ್ವೆಯಾಗೋಣ – ತ್ರಿಷಾ, ಚಾರ್ಮಿ ಮದ್ವೆಗೆ ಪರಸ್ಪರ ಒಪ್ಪಿಗೆ

    ಚೆನ್ನೈ: ಶನಿವಾರ ಕಾಲಿವುಡ್ ನಟಿ ತ್ರಿಷಾ ಕೃಷ್ಣನ್ 36ನೇ ವರ್ಷದ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ವೇಳೆ ನಟಿ ಚಾರ್ಮಿ ಕೌರ್ ನನ್ನನ್ನು ಮದುವೆಯಾಗುತ್ತೀಯಾ ಎಂದು ಕೇಳಿದ್ದು, ಇದಕ್ಕೆ ತ್ರಿಷಾ ಒಪ್ಪಿಗೆ ನೀಡಿದ್ದಾರೆ.

    ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ತ್ರಿಷಾ ತನ್ನನ್ನು ಚುಂಬಿಸುತ್ತಿರುವ ಫೋಟೋವನ್ನು ಹಾಕಿ, “ಬೇಬಿ ಐ ಲವ್ ಯೂ ಟುಡೇ, ಫರೆವರ್. ನನ್ನ ಮೊಣಕಾಲ ಮೇಲೆ ಕುಳಿತು ನಿನ್ನ ಸಮ್ಮತಿಯನ್ನು ನಿರೀಕ್ಷೆ ಮಾಡುತ್ತೇನೆ. ನಾವು ಮದುವೆಯಾಗೋಣವೇ? ಈಗ ಕಾನೂನಿನಲ್ಲಿ ಅವಕಾಶ ಇದೆ” ಎಂದು ಹ್ಯಾಪಿ ಬರ್ತ್‍ಡೇ ಎಂಬ ಹ್ಯಾಶ್ ಟ್ಯಾಗ್ ಬಳಸಿ ಟ್ವೀಟ್ ಮಾಡಿದ್ದಾರೆ.

    ಈ ಟ್ವೀಟ್ ಗೆ ತ್ರಿಷಾ “ಧನ್ಯವಾದಗಳು, ನಾನು ನಿನಗೆ ಈಗಾಗಲೇ ಓಕೆ ಹೇಳಿದ್ದೇನೆ” ಎಂದು ಪ್ರತಿಕ್ರಿಯಿಸಿದ್ದಾರೆ. ಚಾರ್ಮಿ 2015, 2017ರಲ್ಲೂ ಈ ರೀತಿಯ ಟ್ವೀಟ್ ಮಾಡಿದ್ದರು.

    ಚಾರ್ಮಿ ಕಳೆದ ಕೆಲವು ವರ್ಷಗಳಿಂದ ನಟನೆಯಿಂದ ಹಿಂದೆ ಸರಿದಿದ್ದಾರೆ. 2015ರಲ್ಲಿ ಮಂತ್ರ, ಜ್ಯೋತಿಲಕ್ಷ್ಮಿ ಸಿನಿಮಾಗಳಲ್ಲಿ ಕೊನೆಯ ಬಾರಿ ಕಾಣಿಸಿಕೊಂಡಿದ್ದ ಚಾರ್ಮಿ ನಂತರ ನಿರ್ಮಾಪಕಿಯಾಗಿ ಬದಲಾಗಿದ್ದಾರೆ. ರೋಗ್, ಪೈಸಾ ವಸೂಲ್, ಮೆಹಬೂಬಾ ಚಿತ್ರಗಳನ್ನು ನಿರ್ಮಿಸಿದ ಸದ್ಯಕ್ಕೆ ಇಸ್ಮಾರ್ಟ್ ಶಂಕರ್, ರೊಮ್ಯಾಂಟಿಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

    https://twitter.com/trishtrashers/status/1124646755117613057