Tag: ಚಾರ್ಮಿ

  • ಸೆಟ್ಟೇರಿದ ಡಬಲ್ ಇಸ್ಮಾರ್ಟ್: ಪುರಿ ಜಗನ್ನಾಥ್-ರಾಮ್ ಪೋತಿನೇನಿ ಕಾಂಬಿನೇಷನ್ ಚಿತ್ರ

    ಸೆಟ್ಟೇರಿದ ಡಬಲ್ ಇಸ್ಮಾರ್ಟ್: ಪುರಿ ಜಗನ್ನಾಥ್-ರಾಮ್ ಪೋತಿನೇನಿ ಕಾಂಬಿನೇಷನ್ ಚಿತ್ರ

    ಸ್ತಾದ್ ರಾಮ್ ಪೋತಿನೇನಿ (Ustad Ram Pothineni) ಹಾಗೂ ಸೆನ್ಸೇಷನಲ್ ಡೈರೆಕ್ಟರ್ ಪುರಿ ಜಗನ್ನಾಥ್ (Puri Jagannath) ಮತ್ತೊಮ್ಮೆ  ಒಂದಾಗಿರುವುದು ಗೊತ್ತೇ ಇದೆ. ಇಸ್ಮಾರ್ಟ್ ಶಂಕರ್ ಸಿನಿಮಾ ಮೂಲಕ ಮೋಡಿ ಮಾಡಿದ್ದ ಈ ಡೆಡ್ಲಿ ಕಾಂಬಿನೇಷನ್ ನಾಲ್ಕು ವರ್ಷದ ಬಳಿಕ ಸೀಕ್ವೆಲ್ ಗೆ  ಕೈ ಹಾಕಿದ್ದಾರೆ. ರಾಮ್ ಹುಟ್ಟುಹಬ್ಬದ ಪ್ರಯುಕ್ತ ಟೈಟಲ್ ಹಾಗೂ ರಿಲೀಸ್ ಡೇಟ್ ಅನೌನ್ಸ್ ಮಾಡಲಾಗಿತ್ತು. ಇಂದು ಹೈದ್ರಾಬಾದ್ ನಲ್ಲಿ ಸಿನಿಮಾದ ಮುಹೂರ್ತ (Muhurta) ಸಮಾರಂಭ ನೆರವೇರಿಸಲಾಗಿದೆ. ಚಾರ್ಮಿ (Charmy)  ಡಬಲ್ ಇಸ್ಮಾರ್ಟ್ ಸಿನಿಮಾಗೆ ಕ್ಲಾಪ್ ಮಾಡಿದರೆ, ನಿರ್ದೇಶಕ ಪುರಿ ಜಗನ್ನಾಥ್ ಮೊದಲ ಶಾಟ್ ಗೆ ಆಕ್ಷನ್ ಕಟ್ ಹೇಳಿದರು.

    ಡಬಲ್ ಮಾಸ್ (Double Smart) ಹಾಗೂ ಡಬಲ್ ಮನರಂಜನೆ ನೀಡಲು ಸಜ್ಜಾಗಿರುವ ಪುರಿ ಜಗನ್ನಾಥ್ ಡಬಲ್ ಇಸ್ಮಾರ್ಟ್ ಸಿನಿಮಾದ ಶೂಟಿಂಗ್ ಇದೇ ತಿಂಗಳ 12ರಿಂದ ಶುರುವಾಗಲಿದೆ. ಸತತ ಚಿತ್ರೀಕರಣದ ನಂತರ  ಮುಂದಿನ ವರ್ಷ ಅಂದ್ರೆ 2024‌ ಮಾರ್ಚ್ 8 ರಂದು ಶಿವರಾತ್ರಿ ಹಬ್ಬಕ್ಕೆ ಈ ಚಿತ್ರ ತೆರೆಗೆ ಬರಲಿದೆ. ರಿಲೀಸ್ ಡೇಟ್ ಬಹಿರಂಗ ಪಡಿಸಿಯೇ ಶೂಟಿಂಗ್ ಶುರು ಮಾಡುತ್ತಿದೆ ಚಿತ್ರತಂಡ.  ಇದನ್ನೂ ಓದಿ:ಕನ್ನಡದಲ್ಲಿ ಮಾತನಾಡಿದ ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ

    ಪುರಿ ಜಗನ್ನಾಥ್ ಕಥೆ ಬರೆದು ನಿರ್ದೇಶಿಸುತ್ತಿರುವ ಡಬಲ್ ಇಸ್ಮಾರ್ಟ್ ಸಿನಿಮಾವನ್ನು ಪುರಿ ಕನೆಕ್ಟ್ಸ್ ನಡಿ ಚಾರ್ಮಿ ಕೌರ್ ಹಾಗೂ ಪುರಿ ಜಗನ್ನಾಥ್ ನಿರ್ಮಿಸುತ್ತಿದ್ದಾರೆ. ಲೈಗರ್ ಸಿನಿಮಾದಲ್ಲಿ ಖಳನಾಯಕ ಘರ್ಜಿಸಿದ್ದ ವಿಷು ರೆಡ್ಡಿ ಪುರಿ ಕನೆಕ್ಟ್ ಸಿಇಒ ಆಗಿ ಕೆಲಸ ಮಾಡುತ್ತಿದ್ದಾರೆ. ಭಾರೀ ಬಜೆಟ್ ನಲ್ಲಿ ತಯಾರಾಗುತ್ತಿರುವ ಈ ಸಿನಿಮಾ ತಾಂತ್ರಿಕವಾಗಿ ಶ್ರೀಮಂತಿಕೆಯಿಂದ ಕೂಡಿರಲಿದೆ.

     

    ಮುಂದಿನ ವರ್ಷದ ಶಿವರಾತ್ರಿ ಹಬ್ಬಕ್ಕೆ ಬಿಡುಗಡೆಯಾಗಲಿರುವ ಈ ಚಿತ್ರ ತೆಲುಗು, ತಮಿಳು, ಕನ್ನಡ, ಹಿಂದಿ ಹಾಗೂ‌ ಮಲಯಾಳಂ ಭಾಷೆಯಲ್ಲಿ ಮೂಡಿ ಬರಲಿದೆ. ಉಳಿದ ತಾರಾಬಳಗ ಹಾಗೂ ತಾಂತ್ರಿಕ ವರ್ಗದ ಮಾಹಿತಿಯನ್ನು ಶೀಘ್ರದಲ್ಲೇ ಘೋಷಣೆ ಮಾಡುವುದಾಗಿ ಚಿತ್ರತಂಡ ತಿಳಿಸಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪುರಿ ಜಗನ್ನಾಥ್ ಜೊತೆ ವಿಜಯ್ ದೇವರಕೊಂಡ ಮತ್ತೊಂದು ಸಿನಿಮಾ

    ಪುರಿ ಜಗನ್ನಾಥ್ ಜೊತೆ ವಿಜಯ್ ದೇವರಕೊಂಡ ಮತ್ತೊಂದು ಸಿನಿಮಾ

    ಟಾಲಿವುಡ್ ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್ ಹಾಗೂ ಸೂಪರ್ ಸ್ಟಾರ್ ವಿಜಯ್ ದೇವರಕೊಂಡ ಕಾಂಬೋದ ಮತ್ತೊಂದು ಮೆಗಾ ಪ್ರಾಜೆಕ್ಟ್ ಅನೌನ್ಸ್ ಆಗಿದೆ. ಲೈಗರ್ ಸಿನಿಮಾ ರಿಲೀಸ್ ಗೆ ಎದುರು ನೋಡುತ್ತಿರುವ ಅಭಿಮಾನಿಗಳಿಗೆ ವಿಜಯ್ ಹಾಗೂ ಪುರಿ ಜಗನ್ನಾಥ್ ಜೋಡಿ JGM ಎಂಬ ಆಕ್ಷನ್ ಡ್ರಾಮಾ ಸಿನಿಮಾ ಉಣಬಡಿಸಲು ತಯಾರಾಗುತ್ತಿದ್ದಾರೆ. ಅದರ ಮೊದಲ ಭಾಗವೆಂಬಂತೆ ಇವತ್ತು ಮುಂಬೈನಲ್ಲಿ ಅದ್ಧೂರಿಯಾಗಿ ಪ್ಯಾನ್ ಇಂಡಿಯಾ ಪ್ರಾಜೆಕ್ಟ್ ಜನಗಣಮನ ಸಿನಿಮಾಗೆ ಮುನ್ನುಡಿ ಬರೆಯಲಾಯಿತು.

    JGM ಸಿನಿಮಾಗೆ ಪುರಿ ಜಗನ್ನಾಥ್ ಚಿತ್ರಕಥೆ, ಡೈಲಾಗ್ ಬರೆದು ಆಕ್ಷನ್ ಕಟ್ ಹೇಳಲಿದ್ದು, ಪುರಿ ಕನೆಕ್ಟ್ ಹಾಗೂ ಶ್ರೀಕರ ಸ್ಟುಡಿಯೋ ಪ್ರೊಡಕ್ಷನ್ ನಡಿ ಚಾರ್ಮಿ ಕೌರ್, ವಂಶಿ ಪಡಿಪೆಲ್ಲಿ ಬಂಡವಾಳ ಹೂಡ್ತಿದ್ದು, ತೆಲುಗು, ಕನ್ನಡ, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಯಲ್ಲಿ ಸಿನಿಮಾ ಮೂಡಿ ಬರಲಿದೆ. ಇದನ್ನೂ ಓದಿ: ‘Lockup’ ಶೋಗೆ ಬರುವಂತೆ ವಿಲ್ ಸ್ಮಿತ್‍ಗೆ ಆಫರ್ ಕೊಟ್ಟ ಕ್ವಿನ್ ಕಂಗನಾ

    ನಮ್ಮ ಮುಂದಿನ ಸಿನಿಮಾ JGM  ಬಗ್ಗೆ  ಮಾಹಿತಿ ಹಂಚಿಕೊಂಡಿರುವುದು ಖುಷಿಯಾಗ್ತಿದೆ. ವಿಜಯ್ ಜೊತೆ ಮತ್ತೆ ಕೈ ಜೋಡಿಸಿದ್ದೇನೆ. ಇದು ಪಕ್ಕಾ ಆಕ್ಷನ್ ಎಂಟರ್ ಟೈನರ್ ಸಿನಿಮಾವಾಗಿದೆ ಎಂದು ನಿರ್ದೇಶಕ ಪುರಿ ಜಗನ್ನಾಥ್ ಮಾಹಿತಿ ಹಂಚಿಕೊಂಡರು. ಇದನ್ನೂ ಓದಿ: ಏಪ್ರಿಲ್ 2ಕ್ಕೆ ಕಿಚ್ಚನ ‘ವಿಕ್ರಾಂತ್ ರೋಣ’ ಟೀಸರ್ ರಿಲೀಸ್

    ವಿಜಯ್ ದೇವರಕೊಂಡ, ಪುರಿ ಪ್ರಾಜೆಕ್ಟ್ ಭಾಗವಾಗಿರೋದು ಖುಷಿಯಾಗಿದೆ. ಪ್ರತಿಯೊಬ್ಬ ಭಾರತೀಯರಿಗೂ ಈ ಕಥೆ ಮನ ಮುಟ್ಟುತ್ತದೆ. ಇದು ಸವಾಲಿನ ಕಥೆಯಾಗಿದ್ದು, ಚಾರ್ಮಿ ಹಾಗೂ ಇಡೀ ತಂಡದ ಜೊತೆ ಕೆಲಸ ಮಾಡಲು ಉತ್ಸುಕನಾಗಿದ್ದೇನೆ. ವಂಶಿ ಪಡಿಪೆಲ್ಲಿ, JGM ಅದ್ಭುತ ಕಥೆಯಾಗಿದ್ದು, ಇದು ಭಾರತೀಯರ ಮನತಟ್ಟುತ್ತದೆ. ವಿಜಯ್, ಪುರಿ, ಚಾರ್ಮಿ ಜೊತೆ ಪ್ರಾಜೆಕ್ಟ್ ಕೆಲಸ‌ ಮಾಡುತ್ತಿರುವುದು ಖುಷಿಕೊಟ್ಟಿದೆ ಎಂದರು. ಇದನ್ನೂ ಓದಿ: ಮೂರು ದಿನಕ್ಕೆ 500 ಕೋಟಿ ಬಾಚಿದ ಆರ್.ಆರ್.ಆರ್: ಬಾಕ್ಸ್ ಆಫೀಸ್ ಚಿಂದಿಚಿತ್ರಾನ್ನ

    ವಿದೇಶದ ನಾನಾ ಭಾಗಳಲ್ಲಿ ಶೂಟಿಂಗ್ ನಡೆಸಲು ಪ್ಲ್ಯಾನ್ ಹಾಕಿದ್ದು, ಎಪ್ರಿಲ್ ತಿಂಗಳಿನಿಂದ ಶೂಟಿಂಗ್ ಶುರುವಾಗಲಿದೆ. ಆಕ್ಷನ್ ಎಂಟರ್ ಟೈನರ್ ಕಥಾನಕ ಹೊಂದಿರುವ JGM ಸಿನಿಮಾ ಆಗಸ್ಟ್ 3 2023 ವರ್ಲ್ಡ್ ವೈಡ್ ತೆರೆಗಪ್ಪಳಿಸಲಿದೆ.