Tag: ಚಾರ್‌ಧಾಮ್ ಯಾತ್ರೆ

  • ಚಾರ್‌ಧಾಮ್ ಯಾತ್ರೆಗಿದ್ದ ನಿರ್ಬಂಧ ತೆರವು

    ಚಾರ್‌ಧಾಮ್ ಯಾತ್ರೆಗಿದ್ದ ನಿರ್ಬಂಧ ತೆರವು

    ನವದೆಹಲಿ: ತೀವ್ರ ಮಳೆ ಮತ್ತು ಗುಡ್ಡ ಕುಸಿತದ ಕಾರಣಗಳಿಂದ ನಿಷೇಧ ಹೇರಲಾಗಿದ್ದ ಚಾರ್‌ಧಾಮ್ ಯಾತ್ರೆ (Char Dham Yatra) ಮತ್ತೆ ಪುನಾರಂಭಗೊಂಡಿದೆ.

    ಮಳೆ ಪ್ರಮಾಣ ತಗ್ಗಿದ ಹಿನ್ನೆಲೆ ಯಾತ್ರೆಗೆ ಮತ್ತೆ ಅವಕಾಶ ಮಾಡಿಕೊಡುವಂತೆ ಗರ್ವಾಲ್ ವಿಭಾಗೀಯ ಆಯುಕ್ತ ವಿನಯ್ ಶಂಕರ್ ಪಾಂಡೆ ಆದೇಶ ಹೊರಡಿಸಿದ್ದಾರೆ. ಈ ಹಿನ್ನೆಲೆ ಚಾರ್‌ಧಾಮ್ ಯಾತ್ರೆಗಿದ್ದ ನಿರ್ಬಂಧ ತೆರವುಗೊಳಿಸಲಾಗಿದೆ. ಯಾತ್ರಾ ಮಾರ್ಗದಲ್ಲಿರುವ ಜಿಲ್ಲೆಗಳ ಆಯಾ ಜಿಲ್ಲಾಧಿಕಾರಿಗಳಿಗೆ ಆಯಾ ಜಿಲ್ಲೆಗಳಲ್ಲಿನ ಹವಾಮಾನ ಪರಿಸ್ಥಿತಿಗಳನ್ನು ಅವಲೋಕಿಸಿ ವಾಹನಗಳನ್ನು ನಿಲ್ಲಿಸುವಂತೆ ಸೂಚಿಸಲಾಗಿದೆ. ಇದನ್ನೂ ಓದಿ:  ಕಸದ ಲಾರಿಯಲ್ಲಿ ಶವ ಪತ್ತೆ | ದಿನಾ ಕುಡಿದು ಬಂದು ರಂಪಾಟ ಮಾಡಿದ್ದಕ್ಕೆ ಮಹಿಳೆಯ ಕೊಲೆ!

    ಇನ್ನು ಜುಲೈ 3ರರಿಂದ ಅಮರನಾಥ ಯಾತ್ರೆ ಹಿನ್ನೆಲೆ ಜಮ್ಮು ಕಾಶ್ಮೀರದಲ್ಲಿ ಹೆಚ್ಚಿನ ಭದ್ರತೆ ಒದಗಿಸಲಾಗಿದೆ. ಜಮ್ಮುನಿಂದ ಕಾಶ್ಮೀರಕ್ಕೆ ಸಂಪರ್ಕಿಸುವ ಹೆದ್ದಾರಿ ಹಾಗೂ ಶ್ರೀನಗರದಿಂದ ಬಾಲ್ಟಾಲ್ ಬೇಸ್ ಕ್ಯಾಂಪ್ ರಸ್ತೆಯಲ್ಲಿ ಭಾರಿ ಭದ್ರತೆ ನೀಡಲಾಗಿದೆ. ಕೇಂದ್ರದ ಮೀಸಲು ಪಡೆಗಳಿಂದ ಭದ್ರತೆ ಹೆಚ್ಚಿಸಿದ್ದು, ಯಾತ್ರೆಯಲ್ಲಿ ಲಕ್ಷಾಂತರ ಜನರು ಭಾಗಿಯಾಗುವ ನಿರೀಕ್ಷೆಯಿದೆ. ಇದನ್ನೂ ಓದಿ: ಗಮನಿಸಿ, ಇನ್ನು ಮುಂದೆ ರೈಲು ಹೊರಡುವ 8 ಗಂಟೆಯ ಮೊದಲು ರಿಸರ್ವೇಷನ್‌ ಲಿಸ್ಟ್‌ ಔಟ್‌

  • ಉತ್ತರಾಖಂಡದಲ್ಲಿ ಮೇಘಸ್ಫೋಟ, ಹಠಾತ್ ಪ್ರವಾಹ – 9 ಕಾರ್ಮಿಕರು ನಾಪತ್ತೆ

    ಉತ್ತರಾಖಂಡದಲ್ಲಿ ಮೇಘಸ್ಫೋಟ, ಹಠಾತ್ ಪ್ರವಾಹ – 9 ಕಾರ್ಮಿಕರು ನಾಪತ್ತೆ

    – ಚಾರ್‌ಧಾಮ್ ಯಾತ್ರೆ ಸ್ಥಗಿತ

    ಡೆಹ್ರಾಡೂನ್: ಉತ್ತರಾಖಂಡದಲ್ಲಿ (Uttarakhand) ಮೇಘಸ್ಫೋಟಗೊಂಡು (Cloudburst) ಹಠಾತ್ ಪ್ರವಾಹ ಉಂಟಾದ ಪರಿಣಾಮ ಉತ್ತರಕಾಶಿ (Uttarkashi) ಬಳಿ ನಿರ್ಮಾಣ ಹಂತದ ಹೋಟೆಲ್‌ನಲ್ಲಿದ್ದ 9 ಕಾರ್ಮಿಕರು ನಾಪತ್ತೆಯಾಗಿದ್ದಾರೆ.

    ಬಾರ್ಕೋಟ್-ಯಮುನೋತ್ರಿ ರಸ್ತೆಯಲ್ಲಿ ಮೇಘಸ್ಫೋಟಗೊಂಡಿದೆ. ಕಾರ್ಮಿಕರು ಪ್ರಹಾಹದಲ್ಲಿ ಕೊಚ್ಚಿಹೋಗಿರುವ ಶಂಕೆ ವ್ಯಕ್ತವಾಗಿದೆ. ಸ್ಥಳದಲ್ಲಿ ಎನ್‌ಡಿಆರ್‌ಎಫ್ ಹಾಗೂ ಎಸ್‌ಡಿಆರ್‌ಎಫ್ ತಂಡ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ. ಇದನ್ನೂ ಓದಿ: Koppal | ಬುರ್ಖಾ ಧರಿಸಿದ ಕಳ್ಳಿಯರಿಂದ ಗೃಹಬಳಕೆಯ ವಸ್ತು ಕಳ್ಳತನ

    ಇನ್ನು ಭಾರೀ ಮೇಘಸ್ಫೋಟದಿಂದ ಚಾರ್‌ಧಾಮ್ (Char Dham Yatra) ಯಾತ್ರೆ ಸ್ಥಗಿತಗೊಳಿಸಲಾಗಿದೆ. ಗಂಗೋತ್ರಿ, ಯಮುನೋತ್ರಿ, ಕೇದಾರನಾಥ, ಭದ್ರಿನಾಥ ಯಾತ್ರೆ ಸ್ಥಗಿತಗೊಂಡಿದೆ. ಭಾರೀ ಮಳೆಯಿಂದಾಗಿ ಯಮುನಾ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ. ರುದ್ರಪ್ರಯಾಗ ಜಿಲ್ಲೆಯ ಸೋನ್‌ಪ್ರಯಾಗ್-ಮುಂಕಟಿಯಾ ರಸ್ತೆ ಬಂದ್ ಆಗಿದೆ. ಅಲ್ಲದೇ ಕೇದಾರನಾಥಕ್ಕೆ ಪ್ರಯಾಣಿಸುವ ಯಾತ್ರಾರ್ಥಿಗಳಿಗೆ ಮಾರ್ಗ ಬಂದ್ ಮಾಡಲಾಗಿದೆ. ಇದನ್ನೂ ಓದಿ: ಪುರಿ ಜಗನ್ನಾಥ ರಥಯಾತ್ರೆಯಲ್ಲಿ ಕಾಲ್ತುಳಿತ – ಮೂವರು ಸಾವು, 10 ಮಂದಿಗೆ ಗಾಯ

  • ಚಾರ್‌ಧಾಮ್ ಯಾತ್ರೆಗೆ ಚಾಲನೆ – ಶಾಸ್ತ್ರೋಕ್ತವಾಗಿ ಕೇದಾರನಾಥ ಧಾಮದ ಬಾಗಿಲು ಓಪನ್

    ಚಾರ್‌ಧಾಮ್ ಯಾತ್ರೆಗೆ ಚಾಲನೆ – ಶಾಸ್ತ್ರೋಕ್ತವಾಗಿ ಕೇದಾರನಾಥ ಧಾಮದ ಬಾಗಿಲು ಓಪನ್

    ರುದ್ರಪ್ರಯಾಗ: ಉತ್ತರಾಖಂಡದ (Uttarakhand) ಪವಿತ್ರ ಚಾರ್‌ಧಾಮ್ ಯಾತ್ರೆಯ (Chardham Yatra) ಭಾಗವಾಗಿ, ಇಂದು ಕೇದಾರನಾಥ ಧಾಮದ ಬಾಗಿಲುಗಳನ್ನು ತೆರಲಾಯಿತು. ಬೆಳಿಗ್ಗೆ 7 ಗಂಟೆಗೆ ವೃಷಭ ಲಗ್ನದಲ್ಲಿ ಭಕ್ತರ ದರ್ಶನಕ್ಕಾಗಿ ಶಾಸ್ತ್ರೋಕ್ತವಾಗಿ ತೆರೆಯಲಾಯಿತು. ಈ ಸಂದರ್ಭದಲ್ಲಿ ಸಾವಿರಾರು ಭಕ್ತರು `ಹರ್ ಹರ್ ಮಹಾದೇವ’ ಜಯಘೋಷ ಕೂಗಿದರು.

    ಕೇದಾರನಾಥ ದೇವಾಲಯವನ್ನು ಈ ಬಾರಿ 108 ಕ್ವಿಂಟಾಲ್ ವಿವಿಧ ರೀತಿಯ ಹೂಗಳಿಂದ ಅಲಂಕರಿಸಲಾಗಿದೆ. ನೇಪಾಳ, ಥೈಲ್ಯಾಂಡ್ ಮತ್ತು ಶ್ರೀಲಂಕಾದಿಂದ ತರಲಾಗಿದ್ದ ಗುಲಾಬಿ, ಮಲ್ಲಿಗೆ ಸೇರಿದಂತೆ 54 ಬಗೆಯ ಹೂಗಳಿಂದ ದೇವಾಲಯದ ಶೃಂಗರಿಸಲಾಗಿದೆ.ಇದನ್ನೂ ಓದಿ: ಹಿಂದೂ ಕಾರ್ಯಕರ್ತನ ಹತ್ಯೆ ಬೆನ್ನಲ್ಲೇ ಮಂಗಳೂರಲ್ಲಿ ಮೂವರಿಗೆ ಚಾಕು ಇರಿತ

    ಗುರುವಾರ ಸಂಜೆ ಬಾಬಾ ಕೇದಾರನಾಥನ ಪಂಚಮುಖಿ ಡೋಲಿಯು ಕೇದಾರನಾಥ ಧಾಮಕ್ಕೆ ಆಗಮಿಸಿತು. ಡೋಲಿಯ ಆಗಮನದ ಸಂದರ್ಭದಲ್ಲಿ ಭಕ್ತರು ಭಕ್ತಿಭಾವದಿಂದ ಸ್ವಾಗತಿಸಿದರು. ಬಾಗಿಲು ತೆರೆಯುವ ಸಮಾರಂಭದಲ್ಲಿ ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಭಾಗವಹಿಸಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಹೆಸರಿನಲ್ಲಿ ಮೊದಲ ಪೂಜೆ ಸಲ್ಲಿಸಲಾಯಿತು.

    ಬಾಗಿಲು ತೆರೆಯುತ್ತಿದ್ದಂತೆ ಭಕ್ತರು ತಮ್ಮ ಶ್ರದ್ಧೆಯನ್ನು ಜಯಕಾರಗಳ ಮೂಲಕ ವ್ಯಕ್ತಪಡಿಸಿದರು. ದೇವಾಲಯದ ಸುತ್ತಲೂ ಭಕ್ತರ ದಂಡು ಜಮಾಯಿಸಿತು. ಕೇದಾರನಾಥ ಧಾಮದಲ್ಲಿ ಈ ಬಾರಿ ಭಕ್ತರಿಗಾಗಿ ವಿಶೇಷ ವ್ಯವಸ್ಥೆಗಳನ್ನು ಮಾಡಲಾಗಿದ್ದು, ಭದ್ರತೆ, ಆರೋಗ್ಯ ಸೇವೆ ಮತ್ತು ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಕೇದಾರನಾಥ ಯಾತ್ರೆಗಾಗಿ ಸರ್ಕಾರವು ವಿಶೇಷ ವ್ಯವಸ್ಥೆಗಳನ್ನು ಕಲ್ಪಿಸಿದೆ. ಈ ಬಾರಿ ಕೇದಾರನಾಥ ಮತ್ತು ಯಮುನೋತ್ರಿ ಮಾರ್ಗದಲ್ಲಿ 4,300ಕ್ಕೂ ಹೆಚ್ಚು ಕುದುರೆ-ಗಾಡಿ ಸಂಚಾಲಕರು ಸೇವೆಯನ್ನು ಒದಗಿಸಲಿದ್ದಾರೆ. ಇದರ ಜೊತೆಗೆ, ಯಾತ್ರಿಗಳ ಸುರಕ್ಷತೆಗಾಗಿ ಪ್ಯಾರಾ ಮಿಲಿಟರಿ ಫೋರ್ಸ್‌ನ ತುಕಡಿಯನ್ನು ಮೊದಲ ಬಾರಿಗೆ ನಿಯೋಜಿಸಲಾಗಿದೆ.ಇದನ್ನೂ ಓದಿ: ಬಂಡೆ ಮಹಾಕಾಳಿ ಸನ್ನಿಧಿಯಲ್ಲಿ ಸೆಟ್ಟೇರಿತು ಶಿವಣ್ಣನ ‘A for ಆನಂದ್’ ಸಿನಿಮಾ

  • ಉತ್ತರಾಖಂಡದಲ್ಲಿ ಭೂಕುಸಿತ – ಚಾರ್‌ಧಾಮ್ ಯಾತ್ರೆಗೆ ತೆರಳಿದ್ದ ಕನ್ನಡಿಗರು ಪಾರು

    ಉತ್ತರಾಖಂಡದಲ್ಲಿ ಭೂಕುಸಿತ – ಚಾರ್‌ಧಾಮ್ ಯಾತ್ರೆಗೆ ತೆರಳಿದ್ದ ಕನ್ನಡಿಗರು ಪಾರು

    – ಇಂದು ಸಂಜೆ ದೆಹಲಿಗೆ ಯಾತ್ರಿಕರು

    ಹಾವೇರಿ: ಉತ್ತರಾಖಂಡದಲ್ಲಿ (Uttarakhand) ಭೂಕುಸಿತ (Landslide) ಉಂಟಾಗಿ ಸಂಕಷ್ಟದಲ್ಲಿ ಸಿಲುಕಿದ್ದ ಚಾರ್‌ಧಾಮ್ ಯಾತ್ರೆಗೆ (Char Dham Yatra) ತೆರಳಿದ್ದ ಕನ್ನಡಿಗರು ಇದೀಗ ಅಪಾಯದಿಂದ ಪಾರಾಗಿದ್ದಾರೆ.

    ಹಾವೇರಿ (Haveri) ಜಿಲ್ಲೆಯ ಚಿಕ್ಕೇರೂರು ಹಾಗೂ ತಿಳವಳ್ಳಿ ಗ್ರಾಮಗಳ 7 ಮಂದಿ ಕನ್ನಡಿಗರು (Kannadigas) ಚಾರ್‌ಧಾಮ್ ಯಾತ್ರೆಗೆಂದು ಜೂನ್ 29ರಂದು ಪ್ರವಾಸ ಆರಂಭಿಸಿದ್ದರು. ಬದರಿನಾಥನ ದರ್ಶನ ಮುಗಿಸಿ ವಾಪಸ್ ಆಗುತ್ತಿದ್ದ ವೇಳೆ ಉತ್ತರಾಖಂಡದ ಚೆಮೋಲಿ ಜಿಲ್ಲೆಯ ಜ್ಯೋಶಿಮಠ ಎಂಬ ಗ್ರಾಮದ ಬಳಿ ಭೂಕುಸಿತ ಉಂಟಾಗಿ ಕನ್ನಡಿಗರು ಸಂಕಷ್ಟಕ್ಕೆ ಸಿಲುಕಿದ್ದರು. ಇದನ್ನೂ ಓದಿ: 6 ತಿಂಗಳ ಹಿಂದೆ ಮೃತಪಟ್ಟಿದ್ದ ಅಧಿಕಾರಿಗೆ ವರ್ಗಾವಣೆ – ಪೌರಾಡಳಿತ ಇಲಾಖೆ ಯಡವಟ್ಟು

    ಘಟನೆ ಹಿನ್ನೆಲೆ ತಮ್ಮನ್ನು ರಕ್ಷಿಸುವಂತೆ ಕನ್ನಡಿಗರು ವೀಡಿಯೋ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದರು. ಇದೀಗ ರಸ್ತೆ ದುರಸ್ತಿಯಾದ ಹಿನ್ನೆಲೆ ಕನ್ನಡಿಗರು ಯಾವುದೇ ಅಪಾಯವಿಲ್ಲದೇ ವಾಪಸ್ ಆಗುತ್ತಿದ್ದಾರೆ. ಇಂದು ಸಂಜೆ ಎಲ್ಲಾ 7 ಯಾತ್ರಿಕರು ಸುರಕ್ಷಿತವಾಗಿ ದೆಹಲಿ ತಲುಪಲಿದ್ದಾರೆ. ಇದನ್ನೂ ಓದಿ: Assembly Bypolls: ಇಂಡಿಯಾ ಒಕ್ಕೂಟ 10, ಎನ್‌ಡಿಎ 2 ಕ್ಷೇತ್ರಗಳಲ್ಲಿ ಮುನ್ನಡೆ

    7 ಮಂದಿ ಕನ್ನಡಿಗರ ವಿವರ:
    ಶ್ರೀಧರ್ ಎಂ ಹೊಳಲ್ಕೇರಿ (62)2)
    ಶಾಂತಾ ಎಸ್ ಹೊಳಲ್ಕೇರಿ (57)
    ಅಶೋಕ್ ಎಸ್‌ವಿ (61)
    ಭಾರತಿ ಎಎಸ್ (55)
    ವೆಂಕಟೇಶ್ ಪಂಪನ್ (62)
    ರಾಜೇಶ್ವರಿ ಪಂಪನ್ (60)
    ರಾಹುಲ್ ಪಂಪನ್ (35)