Tag: ಚಾರ್ಜ್ ಶೀಟ್

  • ದರ್ಶನ್ & ಗ್ಯಾಂಗ್ ವಿರುದ್ಧ 1200 ಪುಟಗಳ ಹೆಚ್ಚುವರಿ ಚಾರ್ಜ್ ಶೀಟ್ ಸಲ್ಲಿಕೆ

    ದರ್ಶನ್ & ಗ್ಯಾಂಗ್ ವಿರುದ್ಧ 1200 ಪುಟಗಳ ಹೆಚ್ಚುವರಿ ಚಾರ್ಜ್ ಶೀಟ್ ಸಲ್ಲಿಕೆ

    ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ (Renukaswamy Murder Case) ಸಂಬಂಧಿಸಿದಂತೆ 1300 ಪುಟಗಳ ಹೆಚ್ಚುವರಿ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ.

    ನಟ ದರ್ಶನ್ (Darshan) ಹಾಗೂ ಗ್ಯಾಂಗ್‌ನಿಂದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಸಿಸಿಹೆಚ್ 57 ನ್ಯಾಯಾಲಯಕ್ಕೆ ಸಲ್ಲಿಕೆಯಾಗಿದೆ. ತನಿಖಾಧಿಕಾರಿ ಎಸಿಪಿ ಚಂದನ್ ಕುಮಾರ್ ನ್ಯಾಯಾಲಯಕ್ಕೆ ಆಗಮಿಸಿ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದರು. ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ‘ಮಹಾಯುತಿ’ಗೆ ಐತಿಹಾಸಿಕ ಗೆಲುವು: ಜನತೆಗೆ ನಿತಿನ್‌ ಗಡ್ಕರಿ ಕೃತಜ್ಞತೆ

    ಬರೋಬ್ಬರಿ 1300 ಪುಟಗಳ ಈ ಚಾರ್ಜ್ ಶೀಟ್‌ನಲ್ಲಿ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ, ಕೆಲ ಸಾಕ್ಷ್ಯಗಳ ಹೇಳಿಕೆಗಳು, ಪುನೀತ್ ಮೊಬೈಲ್‌ನಿಂದ ರಿಟ್ರೀವ್ ಮಾಡಲಾದ 8 ಪೋಟೋಗಳು ಸೇರಿದಂತೆ ಮಹತ್ವದ ದಾಖಲೆಗಳನ್ನು ಸೇರಿಸಿ ಸಲ್ಲಿಕೆ ಮಾಡಲಾಗಿದೆ. ಇದನ್ನೂ ಓದಿ: 2028ರ ಚುನಾವಣೆಯ ಗೆಲುವಿಗೆ ಇದು ಮುನ್ನುಡಿ: ಡಿಕೆ ಶಿವಕುಮಾರ್‌

  • ರೇಣುಕಾಸ್ವಾಮಿ ಹತ್ಯೆಯಾಗಿ 1 ತಿಂಗಳು- ಚಾರ್ಜ್‍ಶೀಟ್ ಸಲ್ಲಿಸಲು ಪೊಲೀಸರು ತಯಾರಿ

    ರೇಣುಕಾಸ್ವಾಮಿ ಹತ್ಯೆಯಾಗಿ 1 ತಿಂಗಳು- ಚಾರ್ಜ್‍ಶೀಟ್ ಸಲ್ಲಿಸಲು ಪೊಲೀಸರು ತಯಾರಿ

    ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ (Renukaswamy) ಹತ್ಯೆಯಾಗಿ ಇಂದಿಗೆ ಒಂದು ತಿಂಗಳು ಕಳೆದಿದೆ. ಈ ನಡುವೆ ಅವಧಿಗೂ ಮುನ್ನ ಚಾರ್ಜ್‍ಶೀಟ್ ಸಲ್ಲಿಸಲು ಪೊಲೀಸರು ತಯಾರಿ ನಡೆಸುತ್ತಿದ್ದಾರೆ.

    ಮುಂದಿನ 45 ದಿನಗಳ ಒಳಗಾಗಿ ಚಾರ್ಜ್‍ಶೀಟ್ ಗೆ ಪೊಲೀಸರು ತಯಾರಿ ನಡೆಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    ಹತ್ಯೆ ಪ್ರಕರಣದಲ್ಲಿ ಈಗಾಗಲೇ ನಟ ದರ್ಶನ್, ಪವಿತ್ರಾಗೌಡ (Pavithra Gowda) ಸೇರಿ 17 ಮಂದಿ ಜೈಲುಪಾಲಾಗಿದ್ದಾರೆ. ತಿಂಗಳಿಂದ ಪೊಲೀಸರ ತನಿಖೆ, 200ಕ್ಕೂ ಅಧಿಕ ಸಾಕ್ಷ್ಯ ಸಂಗ್ರಹ ಕಾರ್ಯ ನಡೆದಿದೆ. ಆರೋಪಿಗಳ ಮೊಬೈಲ್ ರಿಟ್ರೀವ್‍ಗೆ ರವಾನೆ, ವರದಿ ಬರಬೇಕು. ಇನ್ನುಳಿದಂತೆ ಕೇಸ್‍ನಲ್ಲಿ ಪ್ರತ್ಯಕ್ಷ, ಪರೋಕ್ಷವಾಗಿ ಸಹಕರಿಸಿದ್ದವರ ವಿಚಾರಣೆ ನಡೆಸಲಾಗುತ್ತಿದೆ. ಹಣ ಕೊಟ್ಟ ಮೋಹನ್ ರಾಜ್, ಡೆವಿಲ್ ನಿರ್ಮಾಪಕ ಮಿಲನ ಪ್ರಕಾಶ್, ಪವಿತ್ರಾ ಆಪ್ತೆ ಸಮತಾ, ಶಾಸಕರ ಕಾರು ಚಾಲಕ ಕಾರ್ತಿಕ್‍ಗೆ ನೋಟಿಸ್ ಜಾರಿಗೊಳಿಸಲಾಗಿದೆ.

    ರೇಣುಕಾಸ್ವಾಮಿ ಹತ್ಯೆ: ಆಪ್ತೆ ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್ ಮಾಡಿದನೆಂದು ಆರೋಪಿಸಿ ನಟ, ಚಾಲೆಂಜಿಂಗ್ ಸ್ಟಾರ್ ದರ್ಶನ್ (Actor Darshan) ಮತ್ತು ಗ್ಯಾಂಗ್ ಇದೇ ದಿನ ಚಿತ್ರದುರ್ಗದಿಂದ ಕಿಡ್ನಾಪ್ ಮಾಡಿತ್ತು. ಬಳಿಕ ಬೆಂಗಳೂರಿಗೆ ಕರೆತಂದು ಪಟ್ಟಣಗೆರೆ ಶೆಡ್‍ನಲ್ಲಿ ಕೂಡಿ ಹಾಕಿ ಚಿತ್ರಹಿಂಸೆ ನೀಡಿ ಬರ್ಬರವಾಗಿ ಕೊಲೆ ಮಾಡಲಾಗಿತ್ತು.

    ಕೊಲೆಯ ಬಳಿಕ ರೇಣುಕಾಸ್ವಾಮಿ ಮೃತದೇಹವನ್ನು ಸುಮ್ಮನಹಳ್ಳಿ ಮೋರಿ ಬಳಿ ಎಸೆಯಲಾಗಿತ್ತು. ಇದಾದ ನಂತರ ನಾಲ್ವರು ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾರೆ. ಇದರಿಂದ ಅನುಮಾನಗೊಂಡ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಈ ವೇಳೆ ಪ್ರಕರಣದಲ್ಲಿ ನಟ ದರ್ಶನ್ ಕೈವಾಡ ಇರುವುದು ಬಯಲಾಗಿದೆ.

    ಈ ಬೆನ್ನಲ್ಲೇ ಪೊಲೀಸರು ಮೈಸೂರಿಗೆ ತೆರಳಿ ದರ್ಶನ್ ಅವರನ್ನು ಬಂಧಿಸಿ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಗೆ ಕರೆತಂದಿದ್ದಾರೆ. ಬಳಿಕ ಒಬ್ಬೊಬ್ಬರಂತೆ 16 ಮಂದಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಸದ್ಯ ಎಲ್ಲಾ ಆರೋಪಿಗಳು ಜೈಲಿನಲ್ಲಿದ್ದಾರೆ.

  • ಹುಬ್ಬಳ್ಳಿ ನೇಹಾ ಹತ್ಯೆ ಕೇಸ್‌ – ಚಾರ್ಜ್ ಶೀಟ್ ಸಲ್ಲಿಸಲು ಸಿಐಡಿ ತಯಾರಿ‌

    ಹುಬ್ಬಳ್ಳಿ ನೇಹಾ ಹತ್ಯೆ ಕೇಸ್‌ – ಚಾರ್ಜ್ ಶೀಟ್ ಸಲ್ಲಿಸಲು ಸಿಐಡಿ ತಯಾರಿ‌

    ಹುಬ್ಬಳ್ಳಿ: ಇಲ್ಲಿನ ಬಿವಿಬಿ ಕಾಲೇಜಿನಲ್ಲಿ ನಡೆದಿದ್ದ ವಿದ್ಯಾರ್ಥಿನಿ ನೇಹಾ ಹತ್ಯೆ ಪ್ರಕರಣದ (Neha Hiremath Murder) ಚಾರ್ಜ್ ಶೀಟ್ ಸಲ್ಲಿಸಲು ಸಿಐಡಿ ತಂಡ (CID Investigation) ತಯಾರಿ ನಡೆಸಿದೆ. ಇನ್ನು ಒಂದು ವಾರದಲ್ಲಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

    ಕಳೆದ ಏಪ್ರಿಲ್ 18 ರಂದು ಹುಬ್ಬಳ್ಳಿ ನಗರ ಪಾಲಿಕೆ ಕಾಂಗ್ರೆಸ್‌ (congress) ಸದಸ್ಯ ನಿರಂಜನ್ ಹಿರೇಮಠ ಅವರ ಪುತ್ರಿ ನೇಹಾಳ ಭೀಕರ ಕೊಲೆಯಾಗಿತ್ತು. ಬಳಿಕ ನಿರಂಜನ್‌ ಅವರು ಈ ಪ್ರಕರಣದಲ್ಲಿ ಹಂತಕ ಫಯಾಜ್ ಅಷ್ಟೇ ಅಲ್ಲ ಇನ್ನೂ ಕೆಲವರು ಶಾಮೀಲಾಗಿದ್ದಾರೆ ಎಂದು ಆರೋಪ ಮಾಡಿದ್ದರು. ಅಲ್ಲದೇ ಲವ್‌ ಜಿಹಾದ್ ಇರಬಹುದು ಎಂದು ಸಂಶಯ ವ್ಯಕ್ತಪಡಿಸಿದ್ದರು. ಇದನ್ನೂ ಓದಿ: ಮೋದಿಯಂಥ ವ್ಯಕ್ತಿಯೊಂದಿಗೆ ಚರ್ಚಿಸಲು ರಾಹುಲ್‌ ಗಾಂಧಿ ಪ್ರಧಾನಿ ಅಭ್ಯರ್ಥಿಯೇ? – ಸ್ಮೃತಿ ಇರಾನಿ ವ್ಯಂಗ್ಯ

    ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ರಾಜ್ಯ ಸರ್ಕಾರ, ತನಿಖೆ ನಡೆಸಲು ಸಿಐಡಿಗೆ ವಹಿಸಿತ್ತು. ಬಳಿಕ ತನಿಖೆ ಚುರುಕುಗೊಳಿಸಿದ್ದ ಸಿಐಡಿ ಅಧಿಕಾರಿಗಳ ತಂಡ ಫಯಾಜ್ ಪೋಷಕರು ಹಾಗೂ ಇತರೇ 10 ಮಂದಿಯನ್ನು ತನಿಖೆಗೆ ಒಳಪಡಿಸಿತ್ತು.

    ಇದೀಗ ವಿಚಾರಣೆ ಪ್ರಕ್ರಿಯೆ ಪೂರ್ಣಗೊಳಿಸಿರುವ ಸಿಐಡಿ ತಂಡ ಚಾರ್ಜ್‌ ಶೀಟ್‌ ಸಲ್ಲಿಸಲು ಸಕಲ ತಯಾರಿ ಮಾಡಿಕೊಂಡಿದೆ. ಇನ್ನೊಂದೇ ವಾರದಲ್ಲಿ ನ್ಯಾಯಾಲಯಕ್ಕೆ ಚಾರ್ಜ್‌ ಶೀಟ್‌ ಸಲ್ಲಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಮಹಿಳೆಯರು ಯಾರಾದ್ರು ಆತ್ಮಹತ್ಯೆ ಮಾಡಿಕೊಂಡರೆ ಅದಕ್ಕೆ ರಾಜ್ಯ ಸರ್ಕಾರವೇ ಕಾರಣ: ಹೆಚ್‌ಡಿಕೆ

  • ಶುಕ್ರವಾರ ಕೇಜ್ರಿವಾಲ್ ವಿರುದ್ಧ ಇಡಿ ಚಾರ್ಜ್ ಶೀಟ್ ಸಲ್ಲಿಕೆ

    ಶುಕ್ರವಾರ ಕೇಜ್ರಿವಾಲ್ ವಿರುದ್ಧ ಇಡಿ ಚಾರ್ಜ್ ಶೀಟ್ ಸಲ್ಲಿಕೆ

    ನವದೆಹಲಿ: ಹೊಸ ಅಬಕಾರಿ ನೀತಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ (Arvind Kejriwal) ವಿರುದ್ಧ ಜಾರಿ ನಿರ್ದೇಶನಾಲಯ ಶುಕ್ರವಾರ ಮೊದಲ ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಲಿದೆ. ಇದಕ್ಕೂ ಮುನ್ನ ಇಡಿ ಕೇಜ್ರಿವಾಲ್ ಇಡೀ ಪ್ರಕರಣದ ಕಿಂಗ್ ಪಿನ್ ಎಂದು ಆರೋಪಿಸಿತ್ತು.

    ಸುಪ್ರೀಂಕೋರ್ಟ್ ನಲ್ಲಿ (Supreme Court) ಮಧ್ಯಂತರ ಜಾಮೀನಿಗೆ ಸಂಬಂಧಿಸಿದ ಅರ್ಜಿ ವಿಚಾರಣೆ ನಡೆಯುತ್ತಿದ್ದು ಈ ಸಂಬಂಧ ಮಧ್ಯಂತರ ಆದೇಶ ಪ್ರಕಟವಾಗುವ ಸಾಧ್ಯತೆ ಇದೆ. ಜಾಮೀನು ನೀಡಲು ಆಕ್ಷೇಪ ವ್ಯಕ್ತಪಡಿಸಿರುವ ಇಡಿ ಅಧಿಕಾರಿಗಳು ಪ್ರಕರಣದಲ್ಲಿ ಕೇಜ್ರಿವಾಲ್ ಪಾತ್ರಕ್ಕೆ ಸಂಬಂಧಿಸಿದಂತೆ ಚಾರ್ಜ್ ಶೀಟ್ ಫೈಲ್ ಮಾಡಲಿದೆ. ಇದನ್ನೂ ಓದಿ: ದೇಶದಲ್ಲಿ ಆಡಳಿತ ನಡೆಸಿದವರ ಕುಟುಂಬದಿಂದ ಇಂಥ ಕೃತ್ಯ ಆಯ್ತಲ್ಲಾ ಎಂಬ ನೋವಿದೆ: ಶಿವಲಿಂಗೇಗೌಡ

    ಕಳೆದ ವಿಚಾರಣೆಯಲ್ಲಿ ಲೋಕಸಭಾ ಚುನಾವಣೆ (Loksabha Elections 2024) ಹಿನ್ನೆಲೆ ಮಧ್ಯಂತರ ಜಾಮೀನು ನೀಡುವ ಬಗ್ಗೆ ಸಕರಾತ್ಮಕ ಅಭಿಪ್ರಾಯ ವ್ಯಕ್ತಪಡಿಸಿತ್ತು. ಕೇಜ್ರಿವಾಲ್ ಅವರು ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆಯಾದರೆ ಅವರ ಅಧಿಕೃತ ಕರ್ತವ್ಯಗಳನ್ನು ನಿರ್ವಹಿಸಲು ಬಯಸುವುದಿಲ್ಲ ಎಂದು ಪೀಠವು ಹೇಳಿತು, ಏಕೆಂದರೆ ಇದು ಹಿತಾಸಕ್ತಿ ಸಂಘರ್ಷಕ್ಕೆ ಕಾರಣವಾಗುತ್ತದೆ ಎಂದು ಹೇಳಿತ್ತು.

    ಈ ಹಂತದಲ್ಲಿ ಚಾರ್ಜ್ ಶೀಟ್ ಸಲ್ಲಿಸುವ ಮೂಲಕ ಕೇಜ್ರಿವಾಲ್ ಪ್ರಕರಣದಲ್ಲಿ ಹೇಗೆ ಸಂಬಂಧ ಹೊಂದಿದ್ದಾರೆ? ಅವರಿಗೆ ಜಾಮೀನು ನೀಡಿದರೆ ತನಿಖೆಯ ಮೇಲೆ ಆಗಬಹುದಾದ ಪರಿಣಾಯಗಳ ಬಗ್ಗೆ ಕೋರ್ಟ್ ಗಮನ ಸೆಳೆಯುವ ಪ್ರಯತ್ನ ಮಾಡಲಿದೆ ಎಂದು ಮೂಲಗಳು ಹೇಳಿವೆ.

  • ನಟ ದರ್ಶನ್ ಮನೆಯ ನಾಯಿ ಕಚ್ಚಿದ ಪ್ರಕರಣ : ಚಾರ್ಜ್ ಶೀಟ್ ಸಲ್ಲಿಕೆ

    ನಟ ದರ್ಶನ್ ಮನೆಯ ನಾಯಿ ಕಚ್ಚಿದ ಪ್ರಕರಣ : ಚಾರ್ಜ್ ಶೀಟ್ ಸಲ್ಲಿಕೆ

    ಟ ದರ್ಶನ್ (Darshan) ಮನೆಯ ನಾಯಿ ಕಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್.ಆರ್.ನಗರ ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್ ಶೀಟ್ (Charge Sheet) ಸಲ್ಲಿಸಿದ್ದಾರೆ. 150ಕ್ಕೂ ಹೆಚ್ಚು ಪುಟಗಳ ಚಾರ್ಜ್ ಶೀಟ್ ಅನ್ನು ಆರ್.ಆರ್.ನಗರ ಪೊಲೀಸರು (R R Nagara Police)ಸಿಟಿ ಸಿವಿಲ್ ಕೋರ್ಟ್ ಗೆ ಸಲ್ಲಿದ್ದಾರೆ.

    ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಐದಕ್ಕೂ ಹೆಚ್ಚು ಮಂದಿಯನ್ನ ಸಾಕ್ಷಿಗಳಾಗಿ ಪೊಲೀಸರು ಪರಿಗಣಿಸಿದ್ದರು. ನಟ ದರ್ಶನ್ ಅವರನ್ನೂ ಸಾಕ್ಷಿಯಾಗಿ ಹೇಳಿಕೆ ದಾಖಲಿಸಿದ್ದರು. ಇದೀಗ ಚಾರ್ಜ್ ಶೀಟ್ ನಲ್ಲಿ ನಟ ದರ್ಶನ್ ಹೆಸರು ಕೈಬಿಟ್ಟಿದ್ದಾರೆ. ಘಟನೆಗೂ ದರ್ಶನ್ ಗೂ ಯಾವುದೇ ಸಂಬಂಧ ಇಲ್ಲವೆಂದು ಉಲ್ಲೇಖ ಮಾಡಿದ್ದಾರೆ.

     

    ಅಕ್ಟೋಬರ್ 28 ರಂದು ದರ್ಶನ್ ಮನೆಯ ಮುಂದೆ ಈ ಘಟನೆ ನಡೆದಿದ್ದು, ಅಮಿತಾ ಜಿಂದಾಲ್ ಎಂಬ ಮಹಿಳೆಗೆ ದರ್ಶನ್ ಮನೆಯ ನಾಯಿ ಕಚ್ಚಿತ್ತು. ಆಗ ಅಮಿತಾ ಜಿಂದಾಲ್ ಕೊಟ್ಟ ದೂರಿನ ಮೇಲೆ ಎಫ್ ಐ ಆರ್ ದಾಖಲಾಗಿತ್ತು. ಕೇರ್ ಟೇಕರ್ ಹೇಮಂತ್ ಹಾಗೂ ನಟ ದರ್ಶನ್ ಆರೋಪಿಗಳಾಗಿ ಮಾಡಿ ಎಫ್ ಐ ಆರ್ ದಾಖಲಾಗಿತ್ತು.

  • ಕಪ್ಪು ಸುಂದರಿಯ ಮೇಲೆ ಮುತ್ತಪ್ಪ ರೈ ಪುತ್ರನ ಕಣ್ಣು – ಕೋರ್ಟ್‌ಗೆ ಚಾರ್ಜ್‌ಶೀಟ್ ಸಲ್ಲಿಕೆ

    ಕಪ್ಪು ಸುಂದರಿಯ ಮೇಲೆ ಮುತ್ತಪ್ಪ ರೈ ಪುತ್ರನ ಕಣ್ಣು – ಕೋರ್ಟ್‌ಗೆ ಚಾರ್ಜ್‌ಶೀಟ್ ಸಲ್ಲಿಕೆ

    ಬೆಂಗಳೂರು: ಉದ್ಯಮಿ ಶ್ರೀನಿವಾಸ್ ನಾಯ್ಡು ಅವರ ಕೋಟಿ ರೂ. ಬೆಳೆಬಾಳುವ ರೇಂಜ್ ರೋವರ್ (Range Rover) ಕಾರಿಗೆ ಬೆಂಕಿ ಹಚ್ಚಿ ಸುಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಡಾನ್ ದಿ.ಮುತ್ತಪ್ಪ ರೈ (Muthappa Rai) ಪುತ್ರ ಸೇರಿದಂತೆ 9 ಜನರ ವಿರುದ್ಧ ಸದಾಶಿವನಗರ ಪೊಲೀಸರು 188 ಪುಟಗಳ ಚಾರ್ಜ್‌ಶೀಟ್ (Chargesheet) ಸಲ್ಲಿಸಿದ್ದಾರೆ.

    2021ರ ಅಕ್ಟೋಬರ್‌ನಲ್ಲಿ ಸದಾಶಿವನಗರದ (Sadashiva Nagara) ಸಪ್ತಗಿರಿ ಅಪಾರ್ಟ್ಮೆಂಟ್‌ನಲ್ಲಿ ಉದ್ಯಮಿ ಶ್ರೀನಿವಾಸ್ ನಾಯ್ಡು ಅವರ ರೇಂಜ್ ರೋವರ್ ಕಾರನ್ನು ಆರೋಪಿಗಳು ಸುಟ್ಟುಹಾಕಿದ್ದರು. ಈ ಕುರಿತು ಸದಾಶಿವನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಒಟ್ಟು 10 ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ರಿಕ್ಕಿ ರೈ (Rikki Rai) ಸೂಚನೆಯಂತೆ ಕಾರು ಸುಟ್ಟಿರುವುದಾಗಿ ಆರೋಪಿಗಳು ಹೇಳಿಕೆ ನೀಡಿದ್ದಾರೆ. ಘಟನೆ ಕುರಿತು ತನಿಖೆ ನಡೆಸಿದ ಸದಾಶಿವನಗರ ಪೊಲೀಸರು 33ನೇ ಎಸಿಎಂಎಂ ಕೋರ್ಟ್‌ಗೆ 188 ಪುಟಗಳ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದ್ದಾರೆ. ಇದನ್ನೂ ಓದಿ: ಟ್ರಕ್‍ಗೆ ಬಸ್ ಡಿಕ್ಕಿ – ಏಳು ಸಾವು, 13 ಮಂದಿಗೆ ಗಾಯ

    ದಿವಗಂತ ಮಾಜಿ ಡಾನ್ ಮುತ್ತಪ್ಪ ರೈ ಅವರ ಮಗ ರಿಕ್ಕಿ ರೈ ಮತ್ತು ಉದ್ಯಮಿ ಶ್ರೀನಿವಾಸ್ ನಾಯ್ಡು ಒಂದು ಕಾಲದಲ್ಲಿ ಆತ್ಮೀಯ ಗೆಳೆಯರಾಗಿದ್ದರು. ಮುತ್ತಪ್ಪ ರೈ ಅವರ ನಿಧನದ ಬಳಿಕ ಶ್ರೀನಿವಾಸ್ ನಾಯ್ಡು ರೈ ಗ್ರೂಪಿನಿಂದ ಹೊರಬಂದಿದ್ದರು. ನಾಯ್ಡು ಹೊರ ಬಂದಿದಕ್ಕೆ ರಿಕ್ಕಿ ರೈ ದ್ವೇಷ ಸಾಧಿಸಿ ಈ ಕೃತ್ಯ ಎಸಗಿದ್ದಾರಾ ಎಂಬ ಶಂಕೆ ಈಗ ವ್ಯಕ್ತವಾಗಿದೆ. ಇದನ್ನೂ ಓದಿ: ಇಂದಿನಿಂದ 2,000 ಮುಖಬೆಲೆ ನೋಟು ವಿನಿಮಯ ಪ್ರಕ್ರಿಯೆ ಆರಂಭ

    ಚಾರ್ಜ್‌ಶೀಟ್‌ನಲ್ಲಿ ಏನಿದೆ?
    ಈ ಘಟನೆ ನಡೆಯುವ 3 ತಿಂಗಳಿಗೂ ಮೊದಲು ರಿಕ್ಕಿ ರೈ ಶ್ರೀನಿವಾಸ್ ನಾಯ್ಡು ಅವರ ಕಾರನ್ನು ನೋಡಿ ನೈಸ್ ಕಾರ್ ಡ್ಯೂಡ್ ಎಂದು ಅದನ್ನು ಬೂದಿ ಮಾಡುವ ಸವಾಲು ಹಾಕಿದ್ದಾರೆ. ಈ ಕಾರಲ್ಲಿ ಓಡಾಡಿಕೊಂಡು ನನ್ನ ಮುಂದೆ ಎಷ್ಟು ದಿನ ಮೆರೆಯುತ್ತೀಯಾ ಮೆರಿ. ಎಷ್ಟು ದಿನ ಈ ಕಾರಲ್ಲಿ ಓಡಾಡುತ್ತೀಯಾ ನೋಡುತ್ತೇನೆ. ಈ ಕಾರನ್ನು ಬೂದಿ ಮಾಡುತ್ತೇನೆ ಎಂದು ರಿಕ್ಕಿ ರೈ ನಾಯ್ಡು ಅವರಿಗೆ ವಾರ್ನಿಂಗ್ ಕೊಟ್ಟಿದ್ದ ಅಂಶಗಳಿವೆ. ಇದನ್ನೂ ಓದಿ: ಮುಖ್ಯಮಂತ್ರಿ ಆಯ್ಕೆಗಿಂತಲೂ ಕಗ್ಗಂಟಾದ ವಿಪಕ್ಷ ನಾಯಕನ ಆಯ್ಕೆ

    ರಿಕ್ಕಿ ವಾರ್ನಿಂಗ್‌ಗೆ ಶ್ರೀನಿವಾಸ್ ನಾಯ್ಡು ತಲೆಕೆಡಿಸಿಕೊಳ್ಳದೇ ಸುಮ್ಮನಾಗಿದ್ದರು. ಇದಾದ ನಂತರ ನಾರಾಯಣಸ್ವಾಮಿ ಎಂಬವರಿಂದ ಕಾರಿಗೆ ಬೆಂಕಿ ಹಚ್ಚುವ ಪ್ಲಾನ್ ನಡೆದಿತ್ತು. ಆರೋಪಿಗಳ ಹೇಳಿಕೆ ಪ್ರಕಾರ ಆರೋಪಿ ನಾರಾಯಣ ಸ್ವಾಮಿ ಬೆಂಕಿ ಹಚ್ಚುವ ಪ್ಲಾನ್ ಮಾಡಿದ್ದು, ಮೊದಲಿಗೆ ಶ್ರೀನಿವಾಸ್ ನಾಯ್ಡು ಅವರ ಸ್ನೇಹಿತ ಸುಪ್ರೀತ್‌ಗೂ ಹಲ್ಲೆ ನಡೆಸಿದ್ದಾರೆ. ಬಳಿಕ ಶ್ರೀನಿವಾಸ್ ನಾಯ್ಡು ಅವರ ಫ್ಲ್ಯಾಟ್‌ಗೂ ನುಗ್ಗಿ ಹಲ್ಲೆ ನಡೆಸುವ ಯತ್ನ ವಿಫಲವಾದ್ದರಿಂದ ಕಾರಿಗೆ ಬೆಂಕಿ ಹಚ್ಚುವ ಪ್ಲಾನ್ ಮಾಡಿದ್ದಾರೆ. ಇದನ್ನೂ ಓದಿ: ಜನನ, ಮರಣ ಮಾಹಿತಿ ಮತದಾರರ ಪಟ್ಟಿಗೆ ಜೋಡಣೆ – ಶೀಘ್ರವೇ ಮಸೂದೆ ಮಂಡನೆ

    ಮಧ್ಯರಾತ್ರಿ ಬುಲೆಟ್ ಮತ್ತು ಕಾರಿನಿಂದ ಎರಡು ಲೀಟರ್‌ನ ಎರಡು ಬಾಟಲ್‌ನಲ್ಲಿ ಪೆಟ್ರೋಲ್ ಎಳೆದು ಕಾರಿಗೆ ಸುರಿದಿದ್ದಾರೆ. ಬಳಿಕ ಲೈಟರ್‌ನಿಂದ ಬೆಂಕಿ ಹಚ್ಚಿ ಅಲ್ಲಿಂದ ಪರಾರಿಯಾಗಿದ್ದಾರೆ. ಸದ್ಯ ಘಟನೆ ಸಂಬಂಧ ನಾರಾಯಣಸ್ವಾಮಿ, ಅಭಿನಂದನ್, ಮುನಿಯಪ್ಪ, ಗಣೇಶ್, ಶಶಾಂಕ್, ನಿರ್ಮಲ್, ರೋಹಿತ್, ರಾಕೇಶ್ ಹಾಗೂ ರಿಕ್ಕಿ ರೈ ಮೇಲೆ ಸದಾಶಿವ ನಗರ ಪೊಲೀಸರು ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ. ಎ1 ಆರೋಪಿ ನಾರಾಯಣಸ್ವಾಮಿ ಹಾಗೂ ಎ8 ಆರೋಪಿ ರಿಕ್ಕಿ ರೈ ಹೇಳಿಕೆ ಇನ್ನೂ ಬಾಕಿ ಇದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಸರ್ಕಾರದ ಬಳಿ ಅಂಕಿ ಅಂಶಗಳೇ ಇಲ್ಲ – ಶೀಘ್ರವೇ ಗ್ಯಾರಂಟಿ ಯೋಜನೆ ಜಾರಿ ಅನುಮಾನ

  • ವಿಜಯ ಮಲ್ಯ ಬಳಿ ಸಾಲ ತೀರಿಸುವಷ್ಟು ಹಣವಿದೆ – CBIನಿಂದ 3ನೇ ಚಾರ್ಜ್‌ಶೀಟ್‌ ಸಲ್ಲಿಕೆ

    ವಿಜಯ ಮಲ್ಯ ಬಳಿ ಸಾಲ ತೀರಿಸುವಷ್ಟು ಹಣವಿದೆ – CBIನಿಂದ 3ನೇ ಚಾರ್ಜ್‌ಶೀಟ್‌ ಸಲ್ಲಿಕೆ

    ನವದೆಹಲಿ: 2015-16ರ ಅವಧಿಯಲ್ಲಿ ತಮ್ಮ ಕಿಂಗ್‌ಫಿಷರ್ ಏರ್‌ಲೈನ್ಸ್ ನಗದು ಕೊರತೆ ಎದುರಿಸುತ್ತಿದ್ದ ಸಮಯದಲ್ಲೇ ಉದ್ಯಮಿ ವಿಜಯ ಮಲ್ಯ (Vijaya Mallya) ಇಂಗ್ಲೆಂಡ್ ಮತ್ತು ಫ್ರಾನ್ಸ್ ದೇಶಗಳಲ್ಲಿ 330 ಕೋಟಿ ರೂ. (ಬ್ರಿಟನ್ ನಲ್ಲಿ 80 ಕೋಟಿ ರೂ., ಫ್ರಾನ್ಸ್‌ನಲ್ಲಿ 250 ಕೋಟಿ ರೂ. ಮೌಲ್ಯದ ಆಸ್ತಿ) ಮೌಲ್ಯದ ಆಸ್ತಿ ಖರೀದಿಸಿದ್ದಾರೆ ಎಂದು ಕೇಂದ್ರೀಯ ತನಿಖಾ ದಳ (CBI) ಮುಂಬೈ ಸಿಬಿಐ ವಿಶೇಷ ನ್ಯಾಯಾಲಯಕ್ಕೆ (CBI Speical Court) ಸಲ್ಲಿಸಿರುವ 3ನೇ ಪೂರಕ ಆರೋಪಪಟ್ಟಿಯಲ್ಲಿ ಉಲ್ಲೇಖಿಸಿದೆ.

    ಅಷ್ಟೇ ಅಲ್ಲದೇ 2017ರಲ್ಲಿ ವಿಜಯ ಮಲ್ಯ ಅವರ ಆಸ್ತಿ ಮೌಲ್ಯ 7,500 ಕೋಟಿ ರೂ. ಎಂದು ಸ್ವಿಸ್ ಬ್ಯಾಂಕ್ (Swiss Bank) ಅಂದಾಜಿಸಿದ್ದು, ಬ್ಯಾಂಕ್‌ಗಳ ಸಾಲ ತೀರಿಸಲು ಬೇಕಾದಷ್ಟು ಹಣ ಅವರ ಬಳಿ ಇದೆ. ಯುಕೆನಲ್ಲಿ ಸುಮಾರು 44 ಮದ್ಯ ಘಟಕಗಳನ್ನ ಅವರು ಸ್ಥಾಪಿಸಿದ್ದರು. ಆ ಮೂಲಕ ಅವರು ಯುರೋಪಿನಾದ್ಯಂತ ಹಲವಾರು ಕಡೆ ಹೂಡಿಕೆ ಮತ್ತು ಆಸ್ತಿ ಖರೀದಿಸಿದ್ದಾರೆ ಎಂದು ಹೇಳಿದೆ.

    900 ಕೋಟಿ ರೂ.ಗಿಂತಲೂ ಹೆಚ್ಚು ಮೊತ್ತದ ಐಡಿಬಿಐ ಬ್ಯಾಂಕ್ (ADBI Bank) -ಕಿಂಗ್‌ಫಿಷರ್ ಏರ್‌ಲೈನ್ಸ್ (Kingfisher Airlines) ಸಾಲ ವಂಚನೆ ಪ್ರಕರಣದಲ್ಲಿ ವಿಜಯ ಮಲ್ಯ ಆರೋಪಿಯಾಗಿದ್ದು, ಈ ಸಂಬಂಧ ಸಿಬಿಐ ಇತ್ತೀಚೆಗೆ ಇಲ್ಲಿನ ವಿಶೇಷ ಸಿಬಿಐ ನ್ಯಾಯಾಲಯಕ್ಕೆ ಪೂರಕ ಚಾರ್ಜ್‌ಶೀಟ್‌ ಸಲ್ಲಿಸಿದೆ. ಇದನ್ನೂ ಓದಿ: ಬೆಡ್‌ರೂಂನಲ್ಲಿ ಮಲಗಿದ್ದ 6 ಅಡಿ ಬುಸ್ ಬುಸ್ ಹಾವು – ಎದ್ನೋ ಬಿದ್ನೋ ಅಂತಾ ಓಡಿದ ಮಹಿಳೆ!

    ಸಿಬಿಐ ಹಿಂದಿನ ಚಾರ್ಜ್‌ಶೀಟ್‌ಗಳಲ್ಲಿ ಹೆಸರಿಸಲಾದ ಎಲ್ಲಾ 11 ಆರೋಪಿಗಳ ಜೊತೆಗೆ, ತನಿಖಾ ಸಂಸ್ಥೆ ತನ್ನ ಇತ್ತೀಚಿನ ಪೂರಕ ಆರೋಪ ಪಟ್ಟಿಯಲ್ಲಿ ಐಡಿಬಿಐ ಬ್ಯಾಂಕ್‌ನ ಮಾಜಿ ಜನರಲ್ ಮ್ಯಾನೇಜರ್ ಬುದ್ಧದೇವ್ ದಾಸ್‌ಗುಪ್ತಾ ಅವರ ಹೆಸರನ್ನು ಸೇರಿಸಿದೆ. ಇದನ್ನೂ ಓದಿ: ಪೊಲೀಸರ ಭರ್ಜರಿ ಕಾರ್ಯಾಚರಣೆ – ದಾಖಲೆ ಇಲ್ಲದ 9 ಕೆಜಿ ಚಿನ್ನ ಜಪ್ತಿ

    2009ರ ಅಕ್ಟೋಬರ್‌ನಲ್ಲಿ 150 ಕೋಟಿ ರೂ. ಅಲ್ಪಾವಧಿ ಸಾಲ ಮಂಜೂರಾತಿ ಮತ್ತು ವಿತರಣೆಗಾಗಿ ದಾಸ್‌ಗುಪ್ತಾ ಅವರು ತಮ್ಮ ಹುದ್ದೆ ದುರುಪಯೋಗಪಡಿಸಿಕೊಂಡಿದ್ದಾರೆ. ವಿಜಯ ಮಲ್ಯ ಜೊತೆ ಸೇರಿ ಪಿತೂರಿ ನಡೆಸಿದ್ದಾರೆ. ಏರ್‌ಲೈನ್ಸ್‌ಗೆ ಸಾಲ ನೀಡುವ ವಿಚಾರದಲ್ಲಿ ಅವರು ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಸಿಬಿಐ ತಿಳಿಸಿದೆ.

  • ಮುರುಘಾ ಶ್ರೀಗಳಿಗೆ ಪೋಕ್ಸೋ ಸಂಕಷ್ಟ- ಪೊಲೀಸರಿಂದ ಕೋರ್ಟ್‍ಗೆ ಚಾರ್ಜ್‍ಶೀಟ್ ಸಲ್ಲಿಕೆ

    ಮುರುಘಾ ಶ್ರೀಗಳಿಗೆ ಪೋಕ್ಸೋ ಸಂಕಷ್ಟ- ಪೊಲೀಸರಿಂದ ಕೋರ್ಟ್‍ಗೆ ಚಾರ್ಜ್‍ಶೀಟ್ ಸಲ್ಲಿಕೆ

    ಚಿತ್ರದುರ್ಗ: ಮುರುಘಾಶ್ರೀ (MurughaShree) ವಿರುದ್ಧ ದಾಖಲಾಗಿರುವ ಪೋಕ್ಸೊ ಕೇಸ್ ತನಿಖೆ ನಡೆಸಿರುವ ಚಿತ್ರದುರ್ಗ (Chitradurga) ಪೊಲೀಸರು 694 ಪುಟಗಳ ಚಾರ್ಜ್ ಶೀಟನ್ನು ಕೋರ್ಟ್ (Court) ಗೆ ಸಲ್ಲಿಸಿದ್ದಾರೆ. ಆದರೆ ಈ ಆರೋಪವನ್ನು ಮುರುಘಾಶ್ರೀ ತನಿಖೆ ವೇಳೆ ತಳ್ಳಿಹಾಕಿದ್ದಾರೆ.

    ಚಿತ್ರದುರ್ಗದ ಮುರುಘಾಶ್ರೀ ವಿರುದ್ಧ ಪೋಕ್ಸೋ ಪ್ರಕರಣ ಸಂಬಂಧ ತನಿಖೆ ನಡೆಯುತ್ತಿದೆ. ಈಗಾಗಲೇ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿದೆ. ಸಂತ್ರಸ್ತೆಯ ಹೇಳಿಕೆ ಆಧರಿಸಿ ಶ್ರೀಗಳ ವಿಚಾರಣೆ ನಡೆಸಲಾಗಿದೆ. ಚಿತ್ರದುರ್ಗ ಡಿವೈಎಸ್‍ಪಿ ಅನಿಲ್ ಕುಮಾರ್ (DYSP Anil Kumar) ನೇತೃತ್ವದಲ್ಲಿ ಪ್ರಕರಣವನ್ನು ತನಿಖೆ ನಡೆಸಲಾಗಿದೆ. ಆರೋಪಿಗಳು ಹಾಗೂ ಸಂತ್ರಸ್ತೆಯರ ವಿಚಾರಣೆ, ಸ್ಥಳ ಮಹಜರನ್ನು ಪ್ರತ್ಯೇಕವಾಗಿ ನಡೆಸಿದ್ದಾರೆ.

    ಅಕ್ಟೋಬರ್ 27ರಂದು ಪ್ರಕರಣದ ತನಿಖೆ ಕುರಿತ ಒಟ್ಟು 694 ಪುಟದ ಚಾರ್ಜ್ ಶೀಟನ್ನು ಕೋರ್ಟಿಗೆ ಸಲ್ಲಿಸಲಾಗಿದೆ. ಈ ಪ್ರಕರಣದ ಎ1 ಆರೋಪಿ ಶಿವಮೂರ್ತಿ ಮುರುಘಾ ಶರಣರ ತನಿಖೆಯನ್ನು ಪೊಲೀಸರು ನಡೆಸಿದ್ದು, ಈ ವೇಳೆ ಸಂತ್ರಸ್ತೆಯರ ಆರೋಪವನ್ನು ಮುರುಘಾಶ್ರೀ ತಳ್ಳಿಹಾಕಿದ್ದಾರೆ. ಇದನ್ನೂ ಓದಿ: ಔಷಧ ಬೆರೆಸಿದ ಸೇಬು ನೀಡಿ ಮಕ್ಕಳ ಮೇಲೆ ರೇಪ್- ಮುರುಘಾಶ್ರೀ ವಿರುದ್ಧ 694 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ

    ಮುರುಘಾ ಶ್ರೀ ಹೇಳಿದ್ದೇನು..?: 4-5 ವರ್ಷಗಳಿಂದ ವಾರ್ಡನ್ ಆಗಿ ರಶ್ಮಿ (Warden Rashmi) ನೇಮಕ ಆಗಿದೆ. ರಶ್ಮಿ ಯಾವಾಗಿನಿಂದ ಮಠದಲ್ಲಿದ್ದರು ಎಂಬುದು ಗೊತ್ತಿಲ್ಲ. ಹಾಸ್ಟೆಲ್ ವಿದ್ಯಾರ್ಥಿನಿಯರು ಪ್ರೀತಿಯಿಂದ ಅಪ್ಪಾಜಿ ಎನ್ನುತ್ತಾರೆ. ನಮ್ಮ ಖಾಸಗಿ ಕೊಠಡಿಗೆ ಯಾರಿಗೂ ಪ್ರವೇಶ ಇರಲಿಲ್ಲ. ಸ್ವಚ್ಚತೆಯ ಕೆಲಸಕ್ಕೆ ನಾವು ಮಕ್ಕಳನ್ನು ಬಳಸಲ್ಲ. ಸಂತ್ರಸ್ತ ವಿದ್ಯಾರ್ಥಿನಿಯರ ಬಗ್ಗೆ ವೈಯಕ್ತಿಕ ಪರಿಚಯ ಇಲ್ಲ. ಗುಂಪಿನಲ್ಲಿ ಬಂದು ವಿದ್ಯಾರ್ಥಿಗಳು ಭೇಟಿ ಆಗುತ್ತಿದ್ದರು ಎಂದಿದ್ದಾರೆ.

    ಹಣ್ಣು, ಡ್ರೈಫ್ರೂಟ್ಸ್, ಚಾಕ್ಲೇಟ್ ಪ್ರಸಾದ ರೂಪದಲ್ಲಿ ನೀಡುತ್ತಿದ್ದೆವು. ಮತ್ತು ಬರುವ ಪದಾರ್ಥ ಬೆರೆಸಿ ಮಕ್ಕಳಿಗೆ ನೀಡಿಲ್ಲ. ಮದ್ಯಪಾನ ಮಾಡುವ ಅಭ್ಯಾಸ ನಮಗೆ ಇಲ್ಲ. ಬಸವರಾಜನ್ ಮಠದ ಹಣ ದುರುಪಯೋಗ ಮಾಡಿದ್ದರು. ಹಾಸ್ಟೆಲ್ ವಿದ್ಯಾರ್ಥಿಗಳನ್ನು ಲೈಂಗಿಕ ವಾಗಿ ಬಳಸಿಕೊಂಡಿಲ್ಲ. ನನ್ನ ವಿರುದ್ಧದ ಲೈಂಗಿಕ ದೌರ್ಜನ್ಯದ ಆರೋಪಗಳು ಸುಳ್ಳು. ಇದು ಷಡ್ಯಂತ್ರ, ಪ್ರಚೋದಿತವಾಗಿದ್ದು ಸತ್ಯಕ್ಕೆ ದೂರಾಗಿವೆ ಎಂದು ಹೇಳಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    ಒಟ್ಟಾರೆ ಮಠದ ಹಾಸ್ಟೆಲ್ ವಿದ್ಯಾರ್ಥಿಗಳನ್ನು ಲೈಂಗಿಕವಾಗಿ ನಾವು ಬಳಸಿಕೊಂಡಿಲ್ಲವೆಂದು ಮುರುಘಾಶ್ರೀ ಪೊಲೀಸರ ತನಿಖೆ ವೇಳೆ ಹೇಳಿದ್ದಾರೆ. ಈ ದೇಶದ ಕಾನೂನು ಗೌರವಿಸುವ ದೃಷ್ಠಿಯಿಂದ ನಾನು ಸ್ವ-ಇಚ್ಛೆಯಿಂದ ನಿಮ್ಮೆದುರು ಹಾಜರಾಗಿದ್ದೇನೆಂದು ಪೊಲೀಸರ ಮುಂದೆ ಶ್ರೀಗಳು ಉತ್ತರಿಸಿರುವ ಮಾಹಿತಿ ಚಾರ್ಜ್‍ಶೀಟಲ್ಲಿ ದಾಖಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • 200 ಕೋಟಿ ವಂಚನೆ ಪ್ರಕರಣ: ಯಾವುದೇ ಗಿಫ್ಟ್ ಪಡೆದಿಲ್ಲ ಎಂದ ‘ವಿಕ್ರಾಂತ್ ರೋಣ’ ಬೆಡಗಿ ಜಾಕ್ವೆಲಿನ್

    200 ಕೋಟಿ ವಂಚನೆ ಪ್ರಕರಣ: ಯಾವುದೇ ಗಿಫ್ಟ್ ಪಡೆದಿಲ್ಲ ಎಂದ ‘ವಿಕ್ರಾಂತ್ ರೋಣ’ ಬೆಡಗಿ ಜಾಕ್ವೆಲಿನ್

    ಬೆಂಗಳೂರು ಮೂಲದ ಸುಕೇಶ್ ಚಂದ್ರಶೇಖರ್, ತಾವು ವಂಚಿಸಿ ಪಡೆದಿದ್ದ 200 ಕೋಟಿ ರೂಪಾಯಿ ಹಣದಲ್ಲಿ ಗೆಳತಿ, ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರಿಗೆ 5.71 ಕೋಟಿ ಹಣದಲ್ಲಿ ಉಡುಗೊರೆಯಾಗಿ ನೀಡಿದ್ದ ಎಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಕೋರ್ಟಿಗೆ ಚಾರ್ಜ್ ಶೀಟ್ ಸಲ್ಲಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಕ್ವೆಲಿನ್ ಕೂಡ ಆರೋಪಿ ಎಂದು ನಮೂದಿಸಿದ್ದರು. ಈ ಕುರಿತು ಜಾಕ್ವೆಲಿನ್ ಸ್ಪಷ್ಟನೆ ಕೊಟ್ಟಿದ್ದಾರೆ.

    ಸುಕೇಶ್ ಚಂದ್ರಶೇಖರ್ ನನಗೆ ಯಾವುದೇ ರೀತಿಯಲ್ಲಿ ಉಡುಗೊರೆಯನ್ನು ಕೊಟ್ಟಿಲ್ಲ. ನಾನು ಸಂಪಾದನೆ ಮಾಡಿರುವ ಹಣದಿಂದಲೇ ಕೆಲ ವಸ್ತುಗಳನ್ನು ಖರೀದಿಸಿದ್ದೇನೆ. ನಾನು ಎಫ್.ಡಿ ಆಗಿ ಇಟ್ಟಿದ್ದ ಹಣದಲ್ಲೇ ಅವುಗಳನ್ನು ಖರೀದಿಸಿದ್ದು, ಅದಕ್ಕೆ ಬೇಕಾದ ಎಲ್ಲ ದಾಖಲೆಗಳು ನನ್ನ ಬಳಿ ಇವೆ. ನಾನು ಆ ಹಣಕ್ಕೆ ಟ್ಯಾಕ್ಸ್ ಕೂಡ ಕಟ್ಟಿದ್ದೇನೆ ಎಂದು ಜಾಕ್ವೆಲಿನ್ ಹೇಳಿದ್ದಾರೆ. ಇದನ್ನೂ ಓದಿ:ಅಕ್ಷತಾ‌ ಜೊತೆ ರಾಕೇಶ್ ಅಡಿಗ ರೊಮ್ಯಾನ್ಸ್: ಸೋನು ಫುಲ್ ಗರಂ

    ಇಡಿ ಅಧಿಕಾರಿಗಳು ಸಲ್ಲಿಸಿದ್ದ ಚಾರ್ಜ್ ಶೀಟ್ ನಲ್ಲಿ ಸುಕೇಶ್ ಚಂದ್ರಶೇಖರ್ ವಂಚಿಸಿದ್ದ 200 ಕೋಟಿ ಹಣದಲ್ಲಿ ನಟಿ ಜಾಕ್ವೆಲಿನ್ ಗೆ ದುಬಾರಿ ಕಾರು, ವಾಚು, ಕುದುರೆ, ಬ್ಯಾಗ್ ಸೇರಿದಂತೆ ಹಲವು ವಸ್ತುಗಳನ್ನು ಉಡುಗೊರೆಯಾಗಿ ನೀಡಿದ್ದಾನೆ ಎಂದು ದಾಖಲಾಗಿದೆ. ಅಲ್ಲದೇ, ಜಾಕ್ವೆಲಿನ್ ಸಂಗ ಬಯಸಲು ಅವನು ತನ್ನ ದೀರ್ಘಕಾಲದ ಗೆಳತಿ ಪಿಂಕಿ ಇರಾನಿಯನ್ನು ಬಳಸಿಕೊಂಡಿದ್ದ ಎಂದೂ ಚಾರ್ಜ್ ಶೀಟ್ ನಲ್ಲಿ ಬರೆಯಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ರಾ..ರಾ. ರಕ್ಕಮ್ಮ ಬೆಡಗಿ ಜಾಕ್ವೆಲಿನ್ ಇದೀಗ 215 ಕೋಟಿ ಹಣದ ಪ್ರಕರಣದಲ್ಲಿ ಆರೋಪಿ

    ರಾ..ರಾ. ರಕ್ಕಮ್ಮ ಬೆಡಗಿ ಜಾಕ್ವೆಲಿನ್ ಇದೀಗ 215 ಕೋಟಿ ಹಣದ ಪ್ರಕರಣದಲ್ಲಿ ಆರೋಪಿ

    ಕಿಚ್ಚ ಸುದೀಪ್ ನಟನೆಯ ‘ವಿಕ್ರಾಂತ್ ರೋಣ’ ಸಿನಿಮಾದಲ್ಲಿ ‘ರಾ ರಾ ರಕಮ್ಮ’ ಹಾಡಿಗೆ ಸಖತ್ ಆಗಿ ಸ್ಟೆಪ್ ಹಾಕಿ ಕೋಟಿ ಹೃದಯ ಕದ್ದಿದ್ದ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಇದೀಗ ಕೋರ್ಟ್ ಮೆಟ್ಟಿಲು ಹತ್ತುವಂತಾಗಿದೆ. ಬರೋಬ್ಬರಿ 215 ಕೋಟಿ ರೂಪಾಯಿ ಹಣ ವಸೂಲಿ ಮತ್ತು ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇವರನ್ನು ಆರೋಪಿಯನ್ನಾಗಿ ಇಡಿ ಅಧಿಕಾರಿಗಳು ಇಂದು ದೆಹಲಿ ಇಡಿ ವಿಶೇಷ ಕೋರ್ಟ್ ಗೆ ಚಾರ್ಜ್ ಶೀಟ್ ಸಲ್ಲಿಸುತ್ತಿದ್ದಾರೆ.

    ಬೆಂಗಳೂರು ಮೂಲದ ಸುಖೇಶ್ ಚಂದ್ರಶೇಖರ್ ಗೂ ಮತ್ತು ಜಾಕ್ವೆಲಿನ್ ಇಬ್ಬರೂ ಸ್ನೇಹಿತರು ಎಂದು ಹೇಳಲಾಗುತ್ತಿದ್ದು, ಈ ಸುಖೇಶ್ ಬರೋಬ್ಬರಿ 215 ಕೋಟಿ ರೂಪಾಯಿಯನ್ನು ವಂಚಿಸಿದ್ದಾರೆ ಎನ್ನಲಾಗುತ್ತಿದೆ. ಜೈಲಿನಲ್ಲಿರುವ ಖೈದಿಯೊಬ್ಬರನ್ನು ಬಿಡುಗಡೆ ಮಾಡಿಸಲು ಈ ಪ್ರಮಾಣದ ಹಣವನ್ನು ಉದ್ಯಮಿಯ ಪತ್ನಿಗೆ ಕೇಳಿದ್ದರು. ನಂಬಿಸಿ ವಸೂಲಿ ಕೂಡ ಮಾಡಿದ್ದರು. ಆನಂತರ ಉದ್ಯಮಿ ಪತ್ನಿಗೆ ಇದು ಮೋಸ ಎಂದು ಗೊತ್ತಾಗಿ ಪ್ರಕರಣ ದಾಖಲಿಸಿದ್ದರು. ಇದನ್ನೂ ಓದಿ:ಬಾಯ್ಕಾಟ್ ಟ್ರೆಂಡ್ ಬೆಳೆಯದಂತೆ ಹತ್ತಿಕ್ಕಬೇಕು : ನಟ ಅರ್ಜುನ್ ಕಪೂರ್

    215 ಕೋಟಿ ಹಣದಲ್ಲಿ ಸುಖೇಶ್, ಬಾಲಿವುಡ್ ನಟಿ ಜಾಕ್ವೆಲಿನ್ ಗೆ ದುಬಾರಿ ಕಾರು, ಡೈಮೆಂಡ್, ವಾಚ್, ಬ್ಯಾಗ್ ಗಳು ಮತ್ತು ದುಬಾರಿ ಕುದುರೆಯೊಂದನ್ನು ಉಡುಗೊರೆಯಾಗಿ ನೀಡಿದ್ದರು ಎನ್ನುವ ಸುಳಿವು ಸಿಕ್ಕ ಹಿನ್ನೆಲೆಯಲ್ಲಿ ಇಡಿ ತನಿಖೆ ಆರಂಭಿಸಿತ್ತು. ಇದೀಗ ಅದು ನಿಜವಾಗಿದೆ ಎಂದು ಇಡಿ ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಿದ್ದಾರೆ ಎಂದು ಹೇಳಾಗುತ್ತಿದೆ. ಹಾಗಾಗಿ ಜಾರಿ ನಿರ್ದೇಶನಾಲಯವು ಕೋರ್ಟ್ ಗೆ ಜಾಕ್ವೆಲಿನ್ ಹೆಸರೂ ಸೇರಿಸಿದ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಸುಖೇಶ್ ಮಾಡಿದ ತಪ್ಪಿಗೆ ಇದೀಗ ಈ ನಟಿ ಕೋರ್ಟ್ ಕಟಕಟೆಯಲ್ಲಿ ನಿಲ್ಲುವ ಪರಿಸ್ಥಿತಿ ಎದುರಾಗಿದೆ.

    Live Tv
    [brid partner=56869869 player=32851 video=960834 autoplay=true]