Tag: ಚಾರುಲತಾ ಪಟೇಲ್

  • ಟೀಂ ಇಂಡಿಯಾ ಸೂಪರ್ ಫ್ಯಾನ್ ಅಜ್ಜಿ ಇನ್ನಿಲ್ಲ

    ಟೀಂ ಇಂಡಿಯಾ ಸೂಪರ್ ಫ್ಯಾನ್ ಅಜ್ಜಿ ಇನ್ನಿಲ್ಲ

    ನವದೆಹಲಿ: ಕಳೆದ ವಿಶ್ವಕಪ್‍ನಲ್ಲಿ ಸಖತ್ ಫೇಮಸ್ ಆಗಿದ್ದ ಟೀಂ ಇಂಡಿಯಾ ಸೂಪರ್ ಫ್ಯಾನ್ ಚಾರುಲತಾ ಪಟೇಲ್(87) ಸೋಮವಾರದಂದು ಕೊನೆಯುಸಿರೆಳೆದಿದ್ದಾರೆ. ಈ ಮೂಲಕ ಟೀಂ ಇಂಡಿಯಾ ತನ್ನ ಸೂಪರ್ ಫ್ಯಾನ್‍ನನ್ನು ಕಳೆದುಕೊಂಡಿದೆ.

    ವಿಶ್ವಕಪ್‍ನ ಭಾರತ ಮತ್ತು ಬಾಂಗ್ಲಾದೇಶ ಮ್ಯಾಚ್ ವೇಳೆ ಸ್ಟೇಡಿಯಂನಲ್ಲಿ ಚಾರುಲತಾ ಅವರು ಎಲ್ಲರ ಗಮನ ಸೆಳೆದಿದ್ದರು. ಇಳಿ ವಯಸ್ಸಿನಲ್ಲೂ ಟೀಂ ಇಂಡಿಯಾಗೆ ಅವರು ಪ್ರೋತ್ಸಾಹಿಸಿದ ಪರಿಗೆ ಕ್ರಿಕೆಟ್ ಅಭಿಮಾನಿಗಳು ಫಿದಾ ಆಗಿದ್ದರು. ಕೇವಲ ಅಭಿಮಾನಿಗಳು ಮಾತ್ರವಲ್ಲ ಟೀ ಇಂಡಿಯಾ ನಾಯಕ ವಿರಾಟ್ ಕೋಹ್ಲಿ, ಹಿಟ್ ಮ್ಯಾನ್ ರೋಹಿತ್ ಶರ್ಮಾ ಕೂಡ ಚಾರುಲತಾ ಅವರ ಪ್ರೀತಿ ಪ್ರೋತ್ಸಾಹಕ್ಕೆ ಮನಸೋತ್ತಿದ್ದರು. ಆದರೆ ಎಲ್ಲರ ಮನಗೆದ್ದಿದ್ದ ಸೂಪರ್ ಫ್ಯಾನ್ ವಿಧಿವಶರಾಗಿದ್ದು, ಅವರ ಇನ್‍ಸ್ಟಾಗ್ರಾಂ ಖಾತೆಯಿಂದ ಅವರ ಅಗಲಿಕೆಯ ವಿಚಾರ ತಿಳಿದುಬಂದಿದೆ.

    ಚಾರುಲತಾ ಅವರ ಮೊಮ್ಮಗಳು ಅವರ ಅಗಲಿಕೆಯ ಸುದ್ದಿಯನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವಿಚಾರ ತಿಳಿಸಲು ದುಃಖವಾಗುತ್ತಿದೆ. ಜ.13ರ ಸಂಜೆ 5:30ರ ಹೊತ್ತಿಗೆ ನಮ್ಮ ಅಜ್ಜಿ ಕೊನೆಯುಸಿರೆಳೆದಿದ್ದಾರೆ. ಅವರು ತುಂಬಾ ಒಳ್ಳೆಯವರು. ಸಣ್ಣ ವಸ್ತುಗಳು ಸಣ್ಣ ಪ್ಯಾಕೆಜ್‍ಗಳಲ್ಲಿ ಬರುತ್ತದೆ ಎಂಬುದು ಸತ್ಯ. ಅವರು ಅಸಾಧಾರಣ. ಅವರು ನಮ್ಮ ಪ್ರಪಂಚ ಎಂದು ಬರೆದು ಪೋಸ್ಟ್ ಮಾಡಲಾಗಿದೆ.

    ವಿಶ್ವಕಪ್ ವೇಳೆ ಬಾಂಗ್ಲಾದೇಶದ ವಿರುದ್ಧ ಪಂದ್ಯದಲ್ಲಿ ಟೀಂ ಇಂಡಿಯಾಗೆ ಬೆಂಬಲ ನೀಡಲು ಕ್ರೀಡಾಂಗಣಕ್ಕೆ ಆಗಮಿಸಿದ್ದ ಚಾರುಲತಾ ಅವರು ಎಲ್ಲರ ಮೆಚ್ಚುಗೆಗೆ ಕಾರಣವಾಗಿದ್ದರು. ಪಂದ್ಯದ ಬಳಿಕ ಚಾರುಲತಾ ಅವರನ್ನು ಭೇಟಿ ಮಾಡಿದ್ದ ಕೊಹ್ಲಿ, ಅವರಿಂದ ಆಶೀರ್ವಾದ ಪಡೆದಿದ್ದರು. ಅಲ್ಲದೇ ಅವರ ಫೋಟೋ ಹಂಚಿಕೊಂಡು’ ಇಷ್ಟೊಂದು ಪ್ರೀತಿ ಹಾಗೂ ಬೆಂಬಲ ತೋರಿದ ಅಭಿಮಾನಿಗಳಿಗೆ ಧನ್ಯವಾದ. ಅದರಲ್ಲೂ ಚಾರುಲತಾ ಪಟೇಲ್ ಅವರಿಗೆ ತುಂಬು ಹೃದಯದ ಧನ್ಯವಾದ. 87 ವರ್ಷದ ವಯಸ್ಸಿನಲ್ಲೂ ಇಂತಹ ಅಭಿಮಾನವನ್ನು ತೋರಿರುವುದನ್ನು ನಾನು ನೋಡಿಲ್ಲ. ಅವರಿಂದ ಆಶೀರ್ವಾದ ಪಡೆದಿದ್ದೇನೆ ಎಂದು ತಿಳಿಸಿದ್ದರು. ಸದ್ಯ ಕೊಹ್ಲಿ ತಾವು ಕೊಟ್ಟ ಮಾತಿನಂತೆ ಹಿರಿಯ ಅಭಿಮಾನಿಗೆ ಪಂದ್ಯದ ಟಿಕೆಟ್ ನೀಡಿದ್ದರು. ಕೊಹ್ಲಿ ನಡೆಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದರು.

    https://www.instagram.com/p/B7TTtSyJm6X/

    ಯಾರು ಈ ಅಜ್ಜಿ?
    ನಾನು ಭಾರತದಲ್ಲಿ ಹುಟ್ಟಿಲ್ಲ. ತಾಂಜಾನೀಯಾದಲ್ಲಿ ಜನಿಸಿದರೂ ನನ್ನ ಪೋಷಕರು ಭಾರತದಲ್ಲಿದ್ದರು. ಹೀಗಾಗಿ ನಾನು ನನ್ನ ದೇಶದ ಬಗ್ಗೆ ಹೆಮ್ಮೆಯಿದೆ. ಅಲ್ಲದೆ ನಾನು ದಶಕಗಳಿಂದ ಕ್ರಿಕೆಟ್ ವೀಕ್ಷಿಸುತ್ತಿದ್ದೇನೆ. ನಾನು ಆಫ್ರಿಕಾದಲ್ಲಿ ಇದ್ದಾಗ ನಾನು ಪಂದ್ಯ ವೀಕ್ಷಿಸುತ್ತಿದ್ದೆ. ಬಳಿಕ 1975ರಲ್ಲಿ ನಾನು ಇಲ್ಲಿಗೆ ಬಂದೆ. ನನಗೆ ಕೆಲಸಗಳಿದ್ದ ಕಾರಣ ಪಂದ್ಯ ವೀಕ್ಷಿಸಲು ಸಮಯ ಇರುತ್ತಿರಲಿಲ್ಲ. ನಾನು ಟಿವಿಯಲ್ಲೇ ಪಂದ್ಯ ವೀಕ್ಷಿಸುತ್ತಿದ್ದೆ. ಕಳೆದ 20 ವರ್ಷದ ಹಿಂದೆ ನಾನು ವೃತ್ತಿಯಿಂದ ನಿವೃತ್ತಿ ಪಡೆದೆ. ಈ ನಡುವೆ ನನಗೆ ಕೆಲಸ ಇಲ್ಲ. ಹಾಗಾಗಿ ನನಗೆ ಕ್ರಿಕೆಟ್‍ನಲ್ಲಿ ಆಸಕ್ತಿ ಇದೆ. ಕ್ರಿಕೆಟ್ ವೀಕ್ಷಿಸಲು ಅವಕಾಶ ಸಿಕ್ಕಿದ್ದಕ್ಕೆ ನಾನು ತುಂಬಾ ಲಕ್ಕಿ ಎಂದು ಚಾರುಲತಾ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದರು.

    ನಾನು ತುಂಬಾ ಧಾರ್ಮಿಕ ವ್ಯಕ್ತಿ ಹಾಗೂ ನಾನು ದೇವರನ್ನು ತುಂಬಾ ನಂಬುತ್ತೇನೆ. ಗಣೇಶನನ್ನು ನಾನು ಪ್ರಾರ್ಥನೆ ಮಾಡಿದರೆ ಅದು ನಿಜವಾಗುತ್ತದೆ. ಭಾರತ ತಂಡ ಈ ಬಾರಿ ಪಕ್ಕಾ ವಿಶ್ವಕಪ್ ಗೆಲ್ಲುತ್ತದೆ. ಮಾಜಿ ಕ್ರಿಕೆಟಿಗ ಕಪಿಲ್ ದೇವ್ ನಾಯಕತ್ವದಲ್ಲಿ 1983ರಲ್ಲಿ ಭಾರತ ತಂಡ ಮೊದಲ ಬಾರಿಗೆ ವಿಶ್ವಕಪ್ ಗೆದ್ದಾಗ ನಾನು ಮೈದಾನದಲ್ಲೇ ಇದ್ದೆ. ಅವರು ವಿಶ್ವಕಪ್ ಗೆದ್ದಾಗ ನನಗೆ ತುಂಬಾ ಹೆಮ್ಮೆ ಆಯಿತು. ಅಲ್ಲದೆ ನಾನು ಖುಷಿಯಿಂದ ಡ್ಯಾನ್ಸ್ ಮಾಡಿದ್ದೆ. ಇಂದು ಭಾರತ ತಂಡ ಬಾಂಗ್ಲಾದೇಶವನ್ನು ಸೋಲಿಸಿದರೆ, ಡ್ಯಾನ್ಸ್ ಮಾಡುವುದಾಗಿ ನಾನು ನನ್ನ ಮೊಮ್ಮಗಳ ಬಳಿ ಹೇಳಿದೆ ಎಂದು ಹೇಳಿದ್ದರು.

  • ಇಂಟರ್ ನೆಟ್ ಸೆನ್ಷನಲ್ ಅಜ್ಜಿಗೆ ಗುಡ್ ನ್ಯೂಸ್ ನೀಡಿದ ಆನಂದ್ ಮಹಿಂದ್ರಾ

    ಇಂಟರ್ ನೆಟ್ ಸೆನ್ಷನಲ್ ಅಜ್ಜಿಗೆ ಗುಡ್ ನ್ಯೂಸ್ ನೀಡಿದ ಆನಂದ್ ಮಹಿಂದ್ರಾ

    ಬೆಂಗಳೂರು: ಮಂಗಳವಾರ ನಡೆದ ಕ್ರಿಕೆಟ್ ಪಂದ್ಯದಲ್ಲಿ ಟೀಂ ಇಂಡಿಯಾ ಎದುರಾಳಿ ಬಾಂಗ್ಲಾದೇಶವನ್ನು ಸೋಲಿಸಿ ಸೆಮಿಫೈನಲ್ ಗೆ ಎಂಟ್ರಿ ನೀಡಿದೆ. ಪಂದ್ಯದಷ್ಟೇ ಹೆಚ್ಚು ಜನರ ಮೆಚ್ಚುಗೆಗೆ ಪಾತ್ರವಾದ 87 ವರ್ಷದ ಚಾರುಲತಾ ಪಟೇಲ್ ಒಂದೇ ದಿನದಲ್ಲಿ ಭಾರತೀಯರ ಫೇವರೇಟ್ ಆಗಿದ್ದಾರೆ. ಇದೀಗ ಮಹಿಂದ್ರಾ ಕಂಪನಿಯ ಮುಖ್ಯಸ್ಥ ಆನಂದ್ ಮಹಿಂದ್ರಾ. ಭಾರತದ ಮುಂದಿನ ಎಲ್ಲ ಪಂದ್ಯಗಳ ಟಿಕೆಟ್ ಉಚಿತವಾಗಿ ನೀಡುತ್ತೇನೆ ಎಂದು ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.

    ಆನಂದ್ ಮಹಿಂದ್ರಾ ಟ್ವೀಟ್:
    ಕ್ರಿಕೆಟ್ ಪಂದ್ಯ ನೋಡೋದು ನನ್ನ ಹವ್ಯಾಸವಲ್ಲ. ಆದ್ರೆ ಟಿವಿ ಆನ್ ಮಾಡಿದಾಗ ಅಜ್ಜಿಯನ್ನು ನೋಡಿದೆ. ಮ್ಯಾಚ್ ವಿನ್ನರ್ ರೀತಿಯಲ್ಲಿ ಅಜ್ಜಿ ಕಾಣುತ್ತಿದ್ದರು ಎಂದು ಟ್ವೀಟ್ ಮಾಡಿದ್ದರು. ಈ ಟ್ವೀಟ್ ಪ್ರತಿಕ್ರಿಯಿಸಿದ ಮಹಿಳೆ, ಯಾಕೆ ನೀವು ಅಜ್ಜಿಗೆ ಸ್ಪಾನ್ಸರ್ ಮಾಡಬಾರದು ಎಂದು ಪ್ರಶ್ನೆ ಮಾಡಿದ್ದರು. ಮಹಿಳೆ ಟ್ವೀಟ್ ಗೆ ಉತ್ತರಿಸಿದ ಆನಂದ್ ಮಹಿಂದ್ರಾ, ಕೊನೆಯ ಓವರ್ ನಲ್ಲಿ ಮಾತ್ರ ಪಂದ್ಯ ನೋಡಿದೆ. ಮುಂದಿನ ಪಂದ್ಯಗಳಲ್ಲಿಯೂ ಭಾರತ ಹೀಗೆ ಆಡಲಿ ಎಂದು ಹಾರೈಸುತ್ತೇನೆ. ಸಮಿಫೈನಲ್ ಮತ್ತು ಫೈನಲ್ ಪಂದ್ಯದಲ್ಲಿಯೂ ಸ್ಫೂರ್ತಿದಾಯಕ ಅಜ್ಜಿ ಸ್ಟೇಡಿಯಂನಲ್ಲಿರಲಿ ಎಂಬುವುದು ನನ್ನ ಆಸೆ. ಹಾಗಾಗಿ ಭಾರತದ ಮುಂದಿನ ಪಂದ್ಯಗಳಿಗೆ ನಾನು ಅಜ್ಜಿಗೆ ಉಚಿತವಾಗಿ ಟಿಕೆಟ್ ನೀಡುತ್ತೇನೆ ಎಂದಿದ್ದಾರೆ.

    ಮತ್ತೊಂದು ಟ್ವೀಟ್ ನಲ್ಲಿ ಆ ಅಜ್ಜಿ ಯಾರು ಎಂಬುದನ್ನು ಪತ್ತೆ ಮಾಡಿ. ನಾನು ಕೊಟ್ಟ ಮಾತಿನಂತೆ ಇನ್ನುಳಿದ ಭಾರತ ತಂಡ ಆಡುವ ಪಂದ್ಯಗಳಿಗೆ ಟಿಕೆಟ್ ನೀಡುತ್ತೇನೆ ಎಂದು ಟ್ವೀಟ್ ನಲ್ಲಿ ತಿಳಿಸಿದ್ದಾರೆ.

    ಯಾರು ಈ ಅಜ್ಜಿ?
    ನಾನು ಭಾರತದಲ್ಲಿ ಹುಟ್ಟಿಲ್ಲ. ತಾಂಜಾನೀಯಾದಲ್ಲಿ ಜನಿಸಿದರೂ ನನ್ನ ಪೋಷಕರು ಭಾರತದಲ್ಲಿದ್ದರು. ಹೀಗಾಗಿ ನಾನು ನನ್ನ ದೇಶದ ಬಗ್ಗೆ ಹೆಮ್ಮೆಯಿದೆ. ಅಲ್ಲದೆ ನಾನು ದಶಕಗಳಿಂದ ಕ್ರಿಕೆಟ್ ವೀಕ್ಷಿಸುತ್ತಿದ್ದೇನೆ. ನಾನು ಆಫ್ರಿಕಾದಲ್ಲಿ ಇದ್ದಾಗ ನಾನು ಪಂದ್ಯ ವೀಕ್ಷಿಸುತ್ತಿದೆ. ಬಳಿಕ 1975ರಲ್ಲಿ ನಾನು ಇಲ್ಲಿಗೆ ಬಂದೆ. ನನಗೆ ಕೆಲಸಗಳಿದ್ದ ಕಾರಣ ಪಂದ್ಯ ವೀಕ್ಷಿಸಲು ಸಮಯ ಇರುತ್ತಿರಲಿಲ್ಲ. ನಾನು ಟಿವಿಯಲ್ಲೇ ಪಂದ್ಯ ವೀಕ್ಷಿಸುತ್ತಿದೆ. ಕಳೆದ 20 ವರ್ಷದ ಹಿಂದೆ ನಾನು ವೃತ್ತಿಯಿಂದ ನಿವೃತ್ತಿ ಪಡೆದೆ. ಈ ನಡುವೆ ನನಗೆ ಕೆಲಸ ಇಲ್ಲ. ಹಾಗಾಗಿ ನನಗೆ ಕ್ರಿಕೆಟ್‍ನಲ್ಲಿ ಆಸಕ್ತಿ ಇದೆ. ಕ್ರಿಕೆಟ್ ವೀಕ್ಷಿಸಲು ಅವಕಾಶ ಸಿಕ್ಕಿದ್ದಕ್ಕೆ ನಾನು ತುಂಬಾ ಲಕ್ಕಿ ಎಂದು ಚಾರುಲತಾ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

    ನಾನು ತುಂಬಾ ಧಾರ್ಮಿಕ ವ್ಯಕ್ತಿ ಹಾಗೂ ನಾನು ದೇವರನ್ನು ತುಂಬಾ ನಂಬುತ್ತೇನೆ. ಗಣೇಶನನ್ನು ನಾನು ಪ್ರಾರ್ಥನೆ ಮಾಡಿದರೆ ಅದು ನಿಜವಾಗುತ್ತದೆ. ಭಾರತ ತಂಡ ಈ ಬಾರಿ ಪಕ್ಕಾ ವಿಶ್ವಕಪ್ ಗೆಲ್ಲುತ್ತದೆ. ಮಾಜಿ ಕ್ರಿಕೆಟಿಗ ಕಪಿಲ್ ದೇವ್ ನಾಯಕತ್ವದಲ್ಲಿ 1983ರಲ್ಲಿ ಭಾರತ ತಂಡ ಮೊದಲ ಬಾರಿಗೆ ವಿಶ್ವಕಪ್ ಗೆದ್ದಾಗ ನಾನು ಮೈದಾನದಲ್ಲೇ ಇದ್ದೆ. ಅವರು ವಿಶ್ವಕಪ್ ಗೆದ್ದಾಗ ನನಗೆ ತುಂಬಾ ಹೆಮ್ಮೆ ಆಯಿತು. ಅಲ್ಲದೆ ನಾನು ಖುಷಿಯಿಂದ ಡ್ಯಾನ್ಸ್ ಮಾಡಿದ್ದೆ. ಇಂದು ಭಾರತ ತಂಡ ಬಾಂಗ್ಲಾದೇಶವನ್ನು ಸೋಲಿಸಿದರೆ, ಡ್ಯಾನ್ಸ್ ಮಾಡುವುದಾಗಿ ನಾನು ನನ್ನ ಮೊಮ್ಮಗಳ ಬಳಿ ಹೇಳಿದೆ ಎಂದು ಹೇಳಿದರು.