Tag: ಚಾಮುಲ್

  • ಚಾಮುಲ್‌ನಿಂದ ಹೈನುಗಾರರಿಗೆ ಯುಗಾದಿ ಗಿಪ್ಟ್ – ಲೀಟರ್ ಹಾಲಿಗೆ 4 ರೂ. ಹೆಚ್ಚಳ

    ಚಾಮುಲ್‌ನಿಂದ ಹೈನುಗಾರರಿಗೆ ಯುಗಾದಿ ಗಿಪ್ಟ್ – ಲೀಟರ್ ಹಾಲಿಗೆ 4 ರೂ. ಹೆಚ್ಚಳ

    ಚಾಮರಾಜನಗರ: ಚಾಮರಾಜನಗರ ಜಿಲ್ಲಾ ಹೈನುಗಾರರಿಗೆ ಚಾಮುಲ್‌ ಯುಗಾದಿ ಕೊಡುಗೆ ಕೊಟ್ಟಿದೆ. ಒಂದು ಲೀಟರ್ ಹಾಲಿಗೆ ಖರೀದಿ ದರ 4 ರೂ. ಹೆಚ್ಚಳ ಮಾಡಿದೆ.

    ಏಪ್ರಿಲ್ 1 ರಿಂದ ಹೊಸ ಖರೀದಿ ದರ ಅನ್ವಯವಾಗಲಿದೆ. ಚಾಮುಲ್ ಅಧ್ಯಕ್ಷ ಎಂ.ನಂಜುಂಡಸ್ವಾಮಿ ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ.

    ಹಾಲಿನ ದರ ಏರಿಕೆ ಬೆನ್ನಲ್ಲೇ ರೈತರಿಗೆ ನೀಡುವ ದರವು ಏರಿಕೆಯಾಗಿದೆ. ಸರ್ಕಾರದ ಪ್ರೋತ್ಸಾಹ ಧನ ಸೇರಿ ಹಾಲು ಉತ್ಪಾದಕರಿಗೆ ಪ್ರತಿ ಲೀಟರ್ ಹಾಲಿಗೆ 40.20 ರೂ.ಗೆ ಏರಿಕೆಯಾಗಿದೆ.

  • ಚಾಮುಲ್ ಹಾಲು ಉತ್ಪಾದಕರಿಗೆ ಗುಡ್‌ನ್ಯೂಸ್ – 2 ರೂ. ಹೆಚ್ಚಳ

    ಚಾಮುಲ್ ಹಾಲು ಉತ್ಪಾದಕರಿಗೆ ಗುಡ್‌ನ್ಯೂಸ್ – 2 ರೂ. ಹೆಚ್ಚಳ

    ಚಾಮರಾಜನಗರ: ಜಿಲ್ಲಾ ಹಾಲು ಒಕ್ಕೂಟವು (CHAMUL) ಉತ್ಪಾದಕರಿಗೆ ಗುಡ್ ನ್ಯೂಸ್ ನೀಡಿದೆ.

    ಚಾಮರಾಜನಗರ ಜಿಲ್ಲಾ ಹಾಲು ಒಕ್ಕೂಟದಿಂದ (CHAMUL) ಪರಿಷ್ಕೃತ ದರ ಪ್ರಕಟವಾಗಿದ್ದು, ಹಾಲು ಉತ್ಪಾದಕರಿಗೆ ಪ್ರತಿ ಲೀಟರ್ ಹಾಲಿಗೆ 2 ರೂ. ಹೆಚ್ಚಳ (Milk Price) ಮಾಡಿದೆ. ಇದನ್ನೂ ಓದಿ: ಚರ್ಮಗಂಟು ರೋಗದಿಂದ ಮೃತಪಟ್ಟ ಜಾನುವಾರುಗಳಿಗೆ ಪರಿಹಾರ ನೀಡಲು 2 ಕೋಟಿ ರೂ. ಬಿಡುಗಡೆ: ಪ್ರಭು ಚವ್ಹಾಣ್

    ಪ್ರಸ್ತುತ 1 ಲೀಟರ್ ಹಾಲಿಗೆ 28.85 ರೂ. ಸಿಗುತ್ತಿತ್ತು. ಇನ್ನು ಮುಂದೆ ಚಾಮುಲ್ (CHAMUL) ರೈತರಿಂದ 30.85 ರೂ.ಗೆ ಪ್ರತಿ ಲೀಟರ್ ಹಾಲನ್ನು ಖರೀದಿಸಲಿದೆ. ಇದನ್ನೂ ಓದಿ: ಬೆಳಗಾವಿ–ಹುನಗುಂದ–ರಾಯಚೂರು ಹೈವೇ ನಿರ್ಮಾಣಕ್ಕೆ ಅನುಮೋದನೆ: ಮೋದಿಗೆ ಜೋಶಿ ಅಭಿನಂದನೆ

    ಈಗಾಗಲೇ ರಾಜ್ಯದ ಕೆಲ ಜಿಲ್ಲೆಗಳಲ್ಲಿ ರಾಸುಗಳಿಗೆ ಚರ್ಮಗಂಟು ರೋಗ ಕಾಣಿಸಿಕೊಂಡಿದ್ದು, ಸಾವಿರಾರು ಹಸುಗಳು ರೋಗಕ್ಕೆ ತುತ್ತಾಗಿವೆ. ಈ ನಡುವೆ ಚಾಮುಲ್ ಹಾಲಿನ ದರ ಹೆಚ್ಚಿಸಿರುವ ಮೂಲಕ ಸಂಕಷ್ಟದಲ್ಲಿದ್ದ ರೈತರು ನಿಟ್ಟುಸಿರು ಬಿಡುವಂತೆ ಮಾಡಿದೆ.

    ಲಂಪಿ ವೈರಸ್ ಹೇಗೆ ಹರಡುತ್ತೆ?
    ಜಾನುವಾರುಗಳಲ್ಲಿ ಚರ್ಮಗಂಟು ರೋಗ (Lumpy Virus) ಸಾಂಕ್ರಾಮಿಕ ಕಾಯಿಲೆ ಕಂಡು ಬಂದಿದ್ದು, ಇದು ಕ್ಯಾಪ್ರಿಸಾಕ್ಸ್ ಎಂಬ ವೈರಾಣುವಿನಿಂದ ಬರುತ್ತದೆ. ಹಸು, ಎಮ್ಮೆಗಳಲ್ಲಿ ಅದರಲ್ಲೂ ಮಿಶ್ರತಳಿ ರಾಸುಗಳಲ್ಲಿ ಹೆಚ್ಚಾಗಿ ಹಾಗೂ ತೀಕ್ಷ್ಣವಾಗಿ ಕಾಣಿಸಿಕೊಳ್ಳುತ್ತದೆ. ಈ ರೋಗವು ಮುಖ್ಯವಾಗಿ ಸೊಳ್ಳೆ, ನೊಣ, ಉಣ್ಣೆ ಅಂತಹ ಕೀಟಗಳಿಂದ ಹಸುಗಳಿಗೆ ಬಹುಬೇಗ ಹರಡುತ್ತದೆ. ಮಳೆಗಾಲದಲ್ಲಿ ಮತ್ತು ನಂತರದ ದಿನಗಳಲ್ಲಿ ಹೆಚ್ಚಾಗಿ ಈ ರೋಗವು ಪಸರಿಸುತ್ತದೆ. ಹೀಗಾಗಿ ಜನರು ಎಚ್ಚರಿಕೆ ವಹಿಸಬೇಕು ಎಂದು ಪಶುಪಾಲನಾ ಇಲಾಖೆ ಸಲಹೆ ನೀಡಿದೆ.

    ಸರ್ಕಾರ ಈ ಬಗ್ಗೆ ಮುನ್ನೆಚ್ಚರಿಕಾ ಕ್ರಮಗಳನ್ನ ಕೈಗೊಳ್ಳಲು ಸೂಚಿಸಿದೆ. ಜೊತೆಗೆ ಚರ್ಮಗಂಟು ರೋಗದಿಂದ ಮೃತಪಟ್ಟ ಜಾನುವಾರುಗಳಿಗೆ ಪರಿಹಾರ ನೀಡಲು ಅನುದಾನ ನೀಡಿದೆ. ಮಾಲೀಕರಿಗೆ ನಷ್ಟವನ್ನು ಭರಿಸಲು 2022ರ ಆಗಸ್ಟ್ 1ನೇ ತಾರೀಖಿನಿಂದ ಅನ್ವಯ ಆಗುವಂತೆ ಪ್ರತಿ ಹೈನು ರಾಸುಗಳಿಗೆ ಗರಿಷ್ಠ 20,000 ರೂ. ಮತ್ತು ಎತ್ತುಗಳಿಗೆ 30,000 ರೂ. ಹಾಗೂ ಪ್ರತಿ ಕರುವಿಗೆ 5,000 ರೂ. ಪರಿಹಾರ ನೀಡಲಾಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಚಾಮುಲ್ ಚುನಾವಣೆ: ಕಾಂಗ್ರೆಸ್ ಮೇಲುಗೈ, ಬಿಜೆಪಿಗೆ ತೀವ್ರ ಮುಖಭಂಗ

    ಚಾಮುಲ್ ಚುನಾವಣೆ: ಕಾಂಗ್ರೆಸ್ ಮೇಲುಗೈ, ಬಿಜೆಪಿಗೆ ತೀವ್ರ ಮುಖಭಂಗ

    ಚಾಮರಾಜನಗರ: ಇಲ್ಲಿನ ಚಾಮುಲ್ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿದ್ದು, ಬಿಜೆಪಿ ತೀವ್ರ ಮುಖಭಂಗ ಅನುಭವಿಸಿದೆ.

    ಕಾಂಗ್ರೆಸ್ 4 ಸ್ಥಾನಗಳನ್ನು ಗೆದ್ದಿದ್ದು, ಬಿಜೆಪಿ 2 ಸ್ಥಾನಗಳಲ್ಲಷ್ಟೇ ಜಯ ಸಾಧಿಸಿದೆ. ಪಕ್ಷೇತರ ಇಬ್ಬರು ಅಭ್ಯರ್ಥಿಗಳು ಗೆಲುವು ಸಾಧಿಸಿದ್ದು, ಜೆಡಿಎಸ್ 1 ಸ್ಥಾನಕ್ಕೆ ಸೀಮಿತವಾಗಿದ್ದು, ಗುಂಡ್ಲುಪೇಟೆ ಕ್ಷೇತ್ರದ ಬಿಜೆಪಿ ಶಾಸಕ ನಿರಂಜನಕುಮಾರ್‌ಗೆ ಮುಖಭಂಗ ಆಗಿದೆ. ಇದನ್ನೂ ಓದಿ: ರಾಯಚೂರು ನಗರಸಭೆ ಕಲುಷಿತ ನೀರಿಗೆ ಮತ್ತೊಂದು ಬಲಿ – ಸಾವಿನ ಸಂಖ್ಯೆ 6ಕ್ಕೆ ಏರಿಕೆ 

    ಸಾಂರ್ಭಿಕ ಚಿತ್ರ

    ಬಿಜೆಪಿ ಬಂಡಾಯ ಅಭ್ಯರ್ಥಿ ಸುನೀಲ್, ಕಾಂಗ್ರೆಸ್ ಅಭ್ಯರ್ಥಿ ನಂಜುಂಡ ಪ್ರಸಾದ್ ಭರ್ಜರಿ ಜಯ ಸಾಧಿಸಿದ್ದಾರೆ. ಹಾಗೆಯೇ ಮಹಿಳಾ ಕ್ಷೇತ್ರದಲ್ಲಿ ಚಾಮರಾಜನಗರ ಶಾಸಕ ಸಿ.ಪುಟ್ಟರಂಗಶೆಟ್ಟಿ ಪುತ್ರಿ ಶೀಲಾ ಗೆಲುವು ಸಾಧಿಸಿದ್ದಾರೆ. ಇದನ್ನೂ ಓದಿ: ಅಡ್ಡಮಾರ್ಗ ಹಿಡಿದ ಕಾಂಗ್ರೆಸ್ ನಾಪತ್ತೆಯಾಗುತ್ತೆ: ಆರಗ ಜ್ಞಾನೇಂದ್ರ

    ಮತದಾನಕ್ಕೂ ಮುನ್ನ ಔತಣಕೂಟ: ಚಾಮುಲ್ ಚುನಾವಣೆಗೆ ಸಂಬಂಧಿಸಿದಂತೆ ಮತದಾನಕ್ಕೂ ಮುನ್ನವೇ ಔತಣಕೂಟ ಏರ್ಪಡಿಸಿದ್ದ ಗುಂಡ್ಲುಪೇಟೆ ತಾಲೂಕಿನ ಶಾಸಕ ಹಾಗೂ ಬಿಜೆಪಿ ಬೆಂಬಲಿತ ಅಭ್ಯರ್ಥಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

    ಚುನಾವಣಾಧಿಕಾರಿ ಶ್ರೀಧರ್ ನೀಡಿದ ದೂರಿನ ಅನ್ವಯ ಬಿಜೆಪಿ ಶಾಸಕ ನಿರಂಜನ್ ಕುಮಾರ್, ಅಭ್ಯರ್ಥಿ ಮೈ.ವಿ.ರವಿಶಂಕರ್ ಹಾಗೂ ಮುಖಂಡ ಸಿದ್ಧನಾಯಕ ವಿರುದ್ಧ ಗುಂಡ್ಲುಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

  • ಲಾಕ್‍ಡೌನ್ ನಡುವೆ ವಿದೇಶಕ್ಕೆ ರಫ್ತಾಗ್ತಿದೆ ನಂದಿನಿ ಹಾಲು

    ಲಾಕ್‍ಡೌನ್ ನಡುವೆ ವಿದೇಶಕ್ಕೆ ರಫ್ತಾಗ್ತಿದೆ ನಂದಿನಿ ಹಾಲು

    – ನೆರೆಯ ತೆಲಂಗಾಣ, ಆಂಧ್ರಕ್ಕೂ ಹಾಲು ಪೂರೈಕೆ

    ಚಾಮರಾಜನಗರ: ಕಳೆದ ಮೂರು ವರ್ಷಗಳ ಹಿಂದಷ್ಟೇ ಪ್ರಾರಂಭವಾದ ಚಾಮರಾಜನಗರ ಜಿಲ್ಲಾ ಹಾಲು ಒಕ್ಕೂಟ ಇದೀಗ ವಿದೇಶಕ್ಕೂ ಹಾಲು ಸರಬರಾಜು ಮಾಡುವ ಮೂಲಕ ಗಣನೀಯ ಸಾಧನೆ ಮಾಡಿದೆ.

    ಲಾಕ್‍ಡೌನ್ ನಡುವೆಯೂ ಚಾಮುಲ್ ನಿಂದ ಭೂತಾನ್ ಗೆ ಹಾಲು ರಫ್ತು ಮಾಡಲಾಗುತ್ತಿದ್ದು, ಪ್ರತಿ ತಿಂಗಳು 2 ರಿಂದ 3 ಲಕ್ಷ ಲೀಟರ್ ಗುಡ್ ಲೈಫ್ ಗೋಲ್ಡ್ ಹೆಸರಿನ ಹಾಲನ್ನು ರಫ್ತು ಮಾಡಲಾಗುತ್ತಿದೆ. ವಿದೇಶವಷ್ಟೇ ಅಲ್ಲ, ಭಾರತೀಯ ಸೇನೆಯ ಅಸ್ಸಾಂ ರೈಫಲ್ಸ್, ನೆರೆಯ ಆಂಧ್ರ ಹಾಗೂ ತೆಲಂಗಾಣ ಸರ್ಕಾರಗಳಿಗೂ ನಂದಿನಿ ಹಾಲು ಪೂರೈಕೆ ಮಾಡುತ್ತಿರುವುದು ಚಾಮುಲ್ ನ ಹೆಗ್ಗಳಿಕೆಯಾಗಿದೆ.

    ಅಸ್ಸಾಂ ರೈಫಲ್ಸ್ ಗೆ ಪ್ರತಿ ತಿಂಗಳು 4 ಲಕ್ಷ ಲೀಟರ್ ಗುಡ್ ಲೈಫ್ ಗೋಲ್ಡ್ ಹಾಲು ಸರಬರಾಜು ಮಾಡಲಾಗುತ್ತಿದೆ. ವಿಜಯವಜ್ರ ಹೆಸರಿನಲ್ಲಿ ಆಂಧ್ರ ಪ್ರದೇಶ ಸರ್ಕಾರಕ್ಕೆ ಪ್ರತಿ ತಿಂಗಳು 12 ಲಕ್ಷ ಲೀಟರ್ ಯು.ಎಚ್.ಟಿ ನಂದಿನಿ ಹಾಲು ಪೂರೈಸಲಾಗುತ್ತಿದೆ. ಆಂಧ್ರ ಪ್ರದೇಶ ಸರ್ಕಾರ ಅಲ್ಲಿನ ಅಂಗನವಾಡಿ ಮಕ್ಕಳು, ಶಾಲಾ ಮಕ್ಕಳು, ಗರ್ಭಿಣಿಯರಿಗೆ ವಿಜಯವಜ್ರ ಹೆಸರಿನ ಯು.ಎಚ್.ಟಿ ಹಾಲನ್ನು ನೀಡುತ್ತಿದ್ದು, ಚಾಮುಲ್ ನಲ್ಲಿ ವಿಜಯವಜ್ರ ಹಾಲು ತಯಾರಾಗುತ್ತಿದೆ.

    ಚಾಮುಲ್ ನಿಂದ ತೆಲಂಗಾಣಗೆ ಪ್ರತಿ ತಿಂಗಳು 4 ಲಕ್ಷ ಲೀಟರ್ ನಂದಿನಿ ಯು.ಎಚ್.ಟಿ ನಂದಿನಿ ಹಾಲನ್ನು ಸರಬರಾಜು ಮಾಡಲಾಗುತ್ತಿದೆ. ತೆಲಂಗಾಣ ಸರ್ಕಾರ ಅಂಗನವಾಡಿ ಮಕ್ಕಳು, ಶಾಲಾ ಮಕ್ಕಳು, ಗರ್ಭಿಣಿಯರಿಗೆ ನಂದಿನಿ ಯು.ಎಚ್.ಟಿ ಹಾಲು ನೀಡುತ್ತಿದೆ. ಚಾಮುಲ್ ನಲ್ಲಿ ನಂದಿನಿ ಗುಡ್ ಲೈಫ್, ನಂದಿನಿ ಗುಡ್ ಲೈಫ್ ಗೋಲ್ಡ್, ನಂದಿನಿ ಸ್ಲಿಮ್, ನಂದಿನಿ ಸ್ಮಾರ್ಟ್, ನಂದಿನಿ ಸುರಕ್ಷಾ, ವಿಜಯವಜ್ರ ಹೆಸರಿನ ಹಾಲು ತಯಾರಿಸಲಾಗುತ್ತಿದೆ.

    ಆರು ಲೇಯರ್ ನ ಟೆಟ್ರಾ ಪ್ಯಾಕೆಟ್ ಗಳಲ್ಲಿ ಪ್ಯಾಕ್ ಮಾಡುವುದರಿಂದ ಇದು ಆರು ತಿಂಗಳ ಕಾಲ ಕೆಡುವುದಿಲ್ಲ. ಅಲ್ಲದೆ ಫ್ರಿಡ್ಜ್ ಅವಶ್ಯಕತೆ ಇಲ್ಲ ಎನ್ನುತ್ತಾರೆ ಚಾಮುಲ್ ಅಧಿಕಾರಿಗಳು.

  • ಚಾಮುಲ್‍ನ ಮತ್ತೊಂದು ಕರ್ಮಕಾಂಡ: ಪತ್ನಿ ಹೆಸರಿನಲ್ಲಿ ಪತಿ ದರ್ಬಾರ್

    ಚಾಮುಲ್‍ನ ಮತ್ತೊಂದು ಕರ್ಮಕಾಂಡ: ಪತ್ನಿ ಹೆಸರಿನಲ್ಲಿ ಪತಿ ದರ್ಬಾರ್

    ಚಾಮರಾಜನಗರ: ಉದ್ಯೋಗ ನೇಮಕಾತಿಯಲ್ಲಿ ಲಂಚಾವತಾರದ ಆರೋಪ ಕೇಳಿಬಂದ ಬಳಿಕ ಚಾಮರಾಜನಗರ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ (ಚಾಮುಲ್)ದಲ್ಲಿ ಪತ್ನಿ ಹೆಸರಿನಲ್ಲಿ ಪತಿ ದರ್ಬಾರ್ ನಡೆಸಿರುವ ಆರೋಪ ಕೇಳಿಬಂದಿದೆ.

    ರಾಜಸ್ಥಾನದ ಜೈಪುರದಲ್ಲಿ ನಡೆಯುತ್ತಿರುವ 48ನೇ ಹಾಲು ಒಕ್ಕೂಟಗಳ ಸಮ್ಮೇಳನದಲ್ಲಿ ಚಾಮುಲ್‍ನ ನಿರ್ದೇಶಕಿ ಪ್ರಮೋದಾ ಅವರ ಬದಲಿಗೆ ಪತಿ ಶಂಕರಮೂರ್ತಿ ತೆರಳಿದ್ದಾರೆ. ಚಾಮುಲ್ ಹಣದಲ್ಲೇ ಶಂಕರಮೂರ್ತಿ ಹೆಸರಿನಲ್ಲಿ ಏರ್ ಟಿಕೆಟ್ ಬುಕ್ಕಾಗಿತ್ತು. ಹೀಗಾಗಿ ಶಂಕರಮೂರ್ತಿ ಅವರು ಚಾಮುಲ್‍ನ ಇನ್ನಿತರ ನಿರ್ದೇಶಕರ ಜೊತೆ ಪ್ರವಾಸಕ್ಕೆ ತೆರಳಿ ಸಮ್ಮೇಳನದಲ್ಲಿ ಭಾಗಿಯಾಗಿದ್ದರು ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಚಾಮುಲ್ ನೇಮಕಾತಿ ಪ್ರಕರಣ – ಜಂಟಿ ತನಿಖೆಗೆ ಅಧಿಕಾರಿಗಳ ತಂಡ ರಚನೆ

    ಪತ್ನಿ ಹೆಸರಲ್ಲಿ ಶಂಕರಮೂರ್ತಿ ಪ್ರವಾಸಕ್ಕೆ ಹೋಗಿರುವುದಕ್ಕೆ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಜಿಲ್ಲಾಧಿಕಾರಿ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

  • ಚಾಮುಲ್ ನೇಮಕಾತಿ ಪ್ರಕರಣ – ಜಂಟಿ ತನಿಖೆಗೆ ಅಧಿಕಾರಿಗಳ ತಂಡ ರಚನೆ

    ಚಾಮುಲ್ ನೇಮಕಾತಿ ಪ್ರಕರಣ – ಜಂಟಿ ತನಿಖೆಗೆ ಅಧಿಕಾರಿಗಳ ತಂಡ ರಚನೆ

    – ವಾರದೊಳಗೆ ವರದಿ ನೀಡಲು ಡಿಸಿ ಆದೇಶ

    ಚಾಮರಾಜನಗರ: ಕುದೇರಿನ ಚಾಮರಾಜನಗರ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ(ಚಾಮುಲ್)ದಲ್ಲಿ ಖಾಲಿ ಇದ್ದ ವಿವಿಧ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮವಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಹೀಗಾಗಿ ಈ ಅವ್ಯವಹಾರದ ಕುರಿತ ತನಿಖೆಗೆ ನಾಲ್ವರು ಅಧಿಕಾರಿಗಳ ತಂಡವನ್ನು ರಚಿಸಿ, ಜಂಟಿ ತನಿಖೆ ನಡೆಸಲು ಜಿಲ್ಲಾಧಿಕಾರಿ ಬಿ.ಬಿ ಕಾವೇರಿ ಅವರು ಆದೇಶಿಸಿದ್ದಾರೆ.

    ಚಾಮುಲ್‍ನಲ್ಲಿ ಖಾಲಿ ಇದ್ದ ವಿವಿಧ ಹುದ್ದೆಗಳ ನೇಮಕಾತಿಯಲ್ಲಿ ಅವ್ಯವಹಾರ ನಡೆಸಿ ಅನರ್ಹ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಾಗಿದೆ ಎಂದು ಹಲವು ಸಂಘ-ಸಂಸ್ಥೆಗಳು ಜಿಲ್ಲಾಡಳಿತಕ್ಕೆ ದೂರು ನೀಡಿ ತನಿಖೆ ನಡೆಸುವಂತೆ ಆಗ್ರಹಿಸಿದ್ದವು. ಅಲ್ಲದೇ ಈ ಬಗ್ಗೆ ವಿವಿಧ ಮಾಧ್ಯಮಗಳಲ್ಲಿ ಸುದ್ದಿ ಪ್ರಕಟಗೊಂಡಿದ್ದು, ನೇಮಕಾತಿ ಪ್ರಕ್ರಿಯೆಯ ವಿವಿಧ ಅಂಶಗಳ ಪರಿಶೀಲನೆ ಮಾಡಿ ಸರ್ಕಾರಕ್ಕೆ ವರದಿ ನೀಡಬೇಕಿರುವ ಹಿನ್ನಲೆ ಅಧಿಕಾರಿಗಳ ತಂಡವನ್ನು ರಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ.

    ಜಿಲ್ಲೆಯ ಸಮಾಜ ಕಲ್ಯಾಣ ಉಪನಿರ್ದೇಶಕರು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ, ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಹಾಗೂ ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪನಿರ್ದೇಶಕರನ್ನು ಜಂಟಿ ತನಿಖೆಗೆ ನೇಮಕ ಮಾಡಲಾಗಿದೆ.

    ಚಾಮುಲ್‍ನಲ್ಲಿ ಉದ್ಯೋಗ ನೇಮಕಾತಿ ಸಂಬಂಧ ನಡೆಸಲಾಗಿರುವ ಲಿಖಿತ ಪರೀಕ್ಷೆ, ಸಂದರ್ಶನ, ಲಿಖಿತ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಅರ್ಹ ಅಭ್ಯರ್ಥಿಗಳ ಆಯ್ಕೆ ಪಟ್ಟಿ ತಯಾರಿಕೆ ಹಾಗೂ ಅರ್ಹ ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ವಿತರಣೆ ಮಾಡಿರುವ ಕುರಿತು ಜಂಟಿ ತನಿಖೆ ತಂಡಕ್ಕೆ ಮಾಹಿತಿ ನೀಡಬೇಕು.

    ಪರಿಶೀಲನೆಗಾಗಿ ನೇಮಕಾತಿ ನಿಯಮ, ಸರ್ಕಾರದ ಆದೇಶಗಳು ಹಾಗೂ ಅಗತ್ಯ ದಾಖಲೆಗಳನ್ನು ನೀಡಬೇಕೆಂದು ಸೂಚಿಸಲಾಗಿದೆ. ಜೊತೆಗೆ ಅಧಿಕಾರಿಗಳ ತನಿಖಾ ತಂಡವು ಜಂಟಿಯಾಗಿ ತನಿಖೆ ನಡೆಸಿ, ಒಂದು ವಾರದೊಳಗಾಗಿ ವರದಿ ನೀಡುವಂತೆ ಜಿಲ್ಲಾಧಿಕಾರಿ ಬಿ.ಬಿ ಕಾವೇರಿ ಅವರು ಆದೇಶಿಸಿದ್ದಾರೆ.

  • ಚಾಮುಲ್ ಅಕ್ರಮ ನೇಮಕಾತಿ ವಿರೋಧಿಸಿ ಇಂದು ಸಂತೇಮರಹಳ್ಳಿ ಬಂದ್

    ಚಾಮುಲ್ ಅಕ್ರಮ ನೇಮಕಾತಿ ವಿರೋಧಿಸಿ ಇಂದು ಸಂತೇಮರಹಳ್ಳಿ ಬಂದ್

    ಚಾಮರಾಜನಗರ: ಜಿಲ್ಲೆಯ ಕುದೇರು ಗ್ರಾಮದ ಚಾಮರಾಜನಗರ ಹಾಲು ಒಕ್ಕೂಟ(ಚಾಮುಲ್)ದಲ್ಲಿ ಅಕ್ರಮ ನೇಮಕಾತಿ ನಡೆದಿದೆ ಎಂದು ಆರೋಪಿಸಿ ಇಂದು ವಿವಿಧ ಪ್ರಗತಿ ಪರ ಸಂಘಟನೆಗಳಿಂದ ಸಂತೇಮರಹಳ್ಳಿ ಬಂದ್ ಮಾಡಲಾಗಿದೆ.

    ಪ್ರತಿಭಟನೆ ನಿರತರ ಧರಣಿ ಐದನೇ ದಿನಕ್ಕೆ ಕಾಲಿಟ್ಟಿದ್ದು, ಅಕ್ರಮ ನೇಮಕಾತಿ ವಿರೋಧಿಸಿ ಇಂದು ಬಂದ್ ಮೂಲಕ ಆಡಳಿತ ಮಂಡಳಿಗೆ ಎಚ್ಚರಿಕೆ ನೀಡುವ ಕೆಲಸಕ್ಕೆ ಪ್ರತಿಭಟನಾಕಾರರು ಮುಂದಾಗಿದ್ದಾರೆ.

    ಚಾಮರಾಜನಗರ ಹಾಲು ಒಕ್ಕೂಟಕ್ಕೆ ಇತ್ತೀಚೆಗಷ್ಟೆ 72 ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆದಿತ್ತು. ಈ ನೇಮಕಾತಿ ಪಾರದರ್ಶಕವಾಗಿ ನಡೆದಿಲ್ಲ. ಮತ್ತೊಮ್ಮೆ ನೇಮಕಾತಿ ಪ್ರಕ್ರಿಯೆ ನಡೆಯಬೇಕೆಂದು ಆಗ್ರಹಿಸಿ ಸಂತೇಮರಹಳ್ಳಿ ಬಂದ್ ಮಾಡಲಾಗಿದೆ. ಅರ್ಹ ಅಭ್ಯರ್ಥಿಗಳು ಕೆಲಸದಿಂದ ವಂಚಿತರಾಗಿದ್ದಾರೆ. ನ್ಯಾಯ ಸಿಗುವವರೆಗೂ ಹೋರಾಟ ಮಾಡ್ತೇವೆ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದಿದ್ದಾರೆ.

    ಅರ್ಹ ಅಭ್ಯರ್ಥಿಗಳಿಗೆ ಅನ್ಯಾಯವಾಗಿದೆ ಅನ್ನೋ ಆರೋಪ ಕೇಳಿಬಂದಿದೆ. ಹೀಗಾಗಿ ಸಮಗ್ರ ತನಿಖೆಗೆ ಆಗ್ರಹಿಸಿ ಇಂದು ಸಂತೇಮರಹಳ್ಳಿ ಬಂದ್ ಮಾಡಲಾಗ್ತಿದೆ. ಭ್ರಷ್ಟಾಚಾರ ವಿರೋಧಿ ಆಂದೋಲನ ವೇದಿಕೆ, ಜಿಲ್ಲಾಭಿವೃದ್ದಿ ಹೋರಾಟ ಸಮಿತಿ, ಕರ್ನಾಟಕ ಪ್ರಾಂತ್ಯ ರೈತ ಮತ್ತು ಕಾರ್ಮಿಕ ರಕ್ಷಣಾ ವೇದಿಕೆ, ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರಿಂದ ಧರಣಿ ಹಾಗೂ ಬಂದ್ ಮಾಡಲಾಗಿದೆ.