Tag: ಚಾಮುಂಡೇಶ್ವರಿ ಮತಕ್ಷೇತ್ರ

  • ಸಿದ್ದರಾಮಯ್ಯ ಮನವಿಗೂ ಜಗ್ಗದ ಜಿ.ಟಿ.ದೇವೇಗೌಡ!

    ಸಿದ್ದರಾಮಯ್ಯ ಮನವಿಗೂ ಜಗ್ಗದ ಜಿ.ಟಿ.ದೇವೇಗೌಡ!

    ಬೆಂಗಳೂರು: ವಿಶ್ವವಿದ್ಯಾಲಯ ಸಿಂಡಿಕೇಟ್ ಸದಸ್ಯರ ನೇಮಕಾತಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಮನವಿಗೂ ಜಗ್ಗದ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡರು ಹೊಸ ಸದಸ್ಯರ ನೇಮಕಾತಿಗೆ ಮುಂದಾಗಿದ್ದಾರೆ.

    ಚಾಮುಂಡೇಶ್ವರಿ ಮತಕ್ಷೇತ್ರದಲ್ಲಿ ಪ್ರಬಲ ಪೈಪೋಟಿ ನೀಡಿದ್ದ ಇಬ್ಬರು ಹಿರಿಯ ನಾಯಕರು ಸರ್ಕಾರ ರಚನೆಯ ಬಳಿಕವು ಪೈಪೋಟಿಗೆ ತಡೆಹಾಕಿಲ್ಲ. 16 ವಿಶ್ವವಿದ್ಯಾನಿಲಯಗಳ ಸಿಂಡಿಕೇಟ್ ಸದಸ್ಯರನ್ನು ಬದಲಾಯಿಸಲು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಅವರು ಮುಂದಾಗಿದ್ದರು.

    ಜಿ.ಟಿ.ದೇವೇಗೌಡರ ನಡೆಗೆ ಆಕ್ಷೇಪ ವ್ಯಕ್ತಪಡಿಸಿ, ಕರ್ನಾಟಕ ರಾಜ್ಯ ವಿಶ್ವವಿದ್ಯಾನಿಲಯಗಳಿಗೆ ನಮ್ಮ ಹಿಂದಿನ ಸರ್ಕಾರ ಅವಧಿಯಲ್ಲಿ ಶೈಕ್ಷಣಿಕ ವಲಯದಲ್ಲಿ ಪರಿಣಿತರಾದ ಎಲ್ಲಾ ವರ್ಗದವರನ್ನು ಸಿಂಡಿಕೇಟ್ ಸದಸ್ಯರು/ ವ್ಯವಸ್ಥಾಪನಾ ಮಂಡಳಿ ಸದಸ್ಯರುಗಳನ್ನಾಗಿ ನೇಮಕ ಮಾಡಲಾಗಿದೆ. ಈ ಎಲ್ಲಾ ಸದಸ್ಯರನ್ನು ಬದಲಾವಣೆ ಮಾಡದೆ ಮುಂದುವರೆಸುವಂತೆ ಕೋರುತ್ತೇನೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಮಾಜಿ ಸಿಎಂ ಪತ್ರದಲ್ಲಿ ಮನವಿ ಮಾಡಿಕೊಂಡಿದ್ದರು.

    ಸಿದ್ದರಾಮಯ್ಯ ಅವರ ಮನವಿಗೂ ಜಗ್ಗದ ಜಿ.ಟಿ.ದೇವೇಗೌಡ, ಹಳೇ ಸರ್ಕಾರದ ನಾಮನಿರ್ದೇಶನ ಮುಂದುವರಿಕೆ ಅಸಾಧ್ಯ. ಹೀಗಾಗಿ ಹಿಂದಿನ ಸಿಂಡಿಕೇಟ್ ಸದಸ್ಯರ ನೇಮಕಾತಿ ರದ್ದುಗೊಳಿಸಿ, ಹೊಸದಾಗಿ ಸದಸ್ಯರನ್ನು ಆಯ್ಕೆ ಮಾಡಿಕೊಳ್ಳಲು ಮುಂದಾಗಿದ್ದಾರೆ.

  • ಸಿದ್ದರಾಮಯ್ಯ- ಜಿ.ಟಿ.ದೇವೇಗೌಡ ನಡುವೆ ಮತ್ತೇ ಶುರುವಾಯ್ತು ಜಟಾಪಟಿ

    ಸಿದ್ದರಾಮಯ್ಯ- ಜಿ.ಟಿ.ದೇವೇಗೌಡ ನಡುವೆ ಮತ್ತೇ ಶುರುವಾಯ್ತು ಜಟಾಪಟಿ

    ಬೆಂಗಳೂರು: ಚಾಮುಂಡೇಶ್ವರಿ ವಿಧಾನಸಭೆ ಮತ ಕ್ಷೇತ್ರದಲ್ಲಿ ಭಾರೀ ಪೈಪೋಟಿ ನೀಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಅವರ ನಡುವೆ ಮತ್ತೆ ಜಟಾಪಟಿ ಪ್ರಾರಂಭವಾಗಿದೆ.

    ವಿಶ್ವವಿದ್ಯಾನಿಲಯಗಳ ಸಿಂಡಿಕೇಟ್ ಸದಸ್ಯರ ಬದಲಾವಣೆಗೆ ಮುಂದಾಗಿರುವ ಜಿ.ಟಿ.ದೇವೇಗೌಡರ ನಡೆಗೆ ಆಕ್ಷೇಪ ವ್ಯಕ್ತಪಡಿಸಿರುವ ಸಿದ್ದರಾಮಯ್ಯ, ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಪತ್ರ ಬರೆದಿದ್ದಾರೆ.

    ಪತ್ರದಲ್ಲಿ ಏನಿದೆ?: ಕರ್ನಾಟಕ ರಾಜ್ಯ ವಿಶ್ವವಿದ್ಯಾನಿಲಯಗಳಿಗೆ ನಮ್ಮ ಹಿಂದಿನ ಸರ್ಕಾರ ಅವಧಿಯಲ್ಲಿ ಶೈಕ್ಷಣಿಕ ವಲಯದಲ್ಲಿ ಪರಿಣಿತರಾದ ಎಲ್ಲಾ ವರ್ಗದವರನ್ನು ಸಿಂಡಿಕೇಟ್ ಸದಸ್ಯರು/ ವ್ಯವಸ್ಥಾಪನಾ ಮಂಡಳಿ ಸದಸ್ಯರುಗಳನ್ನಾಗಿ ನೇಮಕ ಮಾಡಲಾಗಿದೆ. ಈ ಎಲ್ಲಾ ಸದಸ್ಯರನ್ನು ಬದಲಾವಣೆ ಮಾಡದೆ ಮುಂದುವರೆಸುವಂತೆ ಕೋರುತ್ತೇನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪತ್ರದಲ್ಲಿ ಮನವಿ ಮಾಡಿದ್ದಾರೆ.