Tag: ಚಾಮುಂಡಿ ದೇವಾಲಯ

  • ಚಾಮುಂಡಿ ಬೆಟ್ಟದಲ್ಲಿ ಪುರಾತನ ಕಲ್ಯಾಣಿ ಪತ್ತೆ

    ಚಾಮುಂಡಿ ಬೆಟ್ಟದಲ್ಲಿ ಪುರಾತನ ಕಲ್ಯಾಣಿ ಪತ್ತೆ

    ಮೈಸೂರು: ಜಿಲ್ಲೆಯ ಚಾಮುಂಡಿ ಬೆಟ್ಟದಲ್ಲಿ ಪುರಾತನ ಕಲ್ಯಾಣಿಯೊಂದು ಪತ್ತೆಯಾಗಿದೆ.

    ಚಾಮುಂಡೇಶ್ವರಿ ದೇವಾಲಯದ ಹೊರ ಆವರಣದಲ್ಲಿ ಕಲ್ಯಾಣಿ ಪತ್ತೆಯಾಗಿದ್ದು, ಈ ಕಲ್ಯಾಣಿಯಲ್ಲಿ ಸುಮಾರು 15 ರಿಂದ 20 ಅಡಿ ಅಗಲದ 5 ಮೆಟ್ಟಿಲುಗಳನ್ನೊಳಗೊಂಡಿದೆ. ಸ್ಥಳೀಯರು ಕಾಮಗಾರಿ ನಡೆಸುವ ವೇಳೆ ಈ ಕಲ್ಯಾಣಿ ಪತ್ತೆಯಾಗಿದೆ.

    ಚಾಮುಂಡೇಶ್ವರಿ ದೇವಾಲಯದ ಹೊರ ಆವರಣದಲ್ಲಿ ಸ್ಥಳೀಯರು ಕಾಮಗಾರಿ ಕೆಲಸವನ್ನು ಮಾಡುತ್ತಿದ್ದರು. ಆಗ ಅವರಿಗೆ ಕಲ್ಯಾಣಿ ಮೆಟ್ಟಿಲು ಕಂಡು ಬಂದಿದೆ. ಬಳಿಕ ಸಂಪೂರ್ಣವಾಗಿ ಅದರಲ್ಲಿ ಹೂಳು , ಮಣ್ಣು ತೆಗೆದು ಶೂಚಿಗೊಳಿಸಿದ್ದಾರೆ. ಆಗ ಐದು ಮೆಟ್ಟಿಲುಗಳು ಇರುವ ಕಲ್ಯಾಣಿ ಪತ್ತೆಯಾಗಿದೆ. ತಕ್ಷಣ ಈ ಬಗ್ಗೆ ದೇವಾಲಯಕ್ಕೆ ತಿಳಿಸಿದ್ದಾರೆ. ಪುರಾತನ ಕಲ್ಯಾಣಿ ಪತ್ತೆಯಾದ ಬಗ್ಗೆ ತಿಳಿದು ಜನರು, ಭಕ್ತರು ಕಲ್ಯಾಣಿಯನ್ನು ನೋಡಲು ಮುಗಿಬೀಳುತ್ತಿದ್ದಾರೆ.

    ಅಷ್ಟೇ ಅಲ್ಲದೇ ಕಲ್ಯಾಣಿ ಪತ್ತೆಯ ಬಗ್ಗೆ ಪುರಾತತ್ವ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ತಿಳಿಸಿದ್ದಾರೆ. ಮಾಹಿತಿ ತಿಳಿದು ಇಲಾಖೆ ಅಧಿಕಾರಿಗಳು ಬಂದು ಕಲ್ಯಾಣಿಯ ಪರಿಶೀಲನೆಯಲ್ಲಿ ತೊಡಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಆಸ್ಪತ್ರೆಯಿಂದ ನೇರವಾಗಿ ಚಾಮುಂಡಿ ಬೆಟ್ಟಕ್ಕೆ ತೆರಳಿ ತಾಯಿಗೆ ಪೂಜೆ ಸಲ್ಲಿಸಿದ್ರು ದಾಸ

    ಆಸ್ಪತ್ರೆಯಿಂದ ನೇರವಾಗಿ ಚಾಮುಂಡಿ ಬೆಟ್ಟಕ್ಕೆ ತೆರಳಿ ತಾಯಿಗೆ ಪೂಜೆ ಸಲ್ಲಿಸಿದ್ರು ದಾಸ

    ಬೆಂಗಳೂರು: ಮೈಸೂರಿನಲ್ಲಿ ಕಾರ್ ಅಪಘಾತಕ್ಕೀಡಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆದ ಬಳಿಕ ನಟ ದರ್ಶನ್ ನೇರವಾಗಿ ಚಾಮುಂಡಿ ಬೆಟ್ಟಕ್ಕೆ ತೆರಳಿ ತಾಯಿಯ ದರ್ಶನ ಪಡೆದಿದ್ದಾರೆ.

    ದರ್ಶನ್ ಅವರು ಮೈಸೂರಿನ ಶ್ರೀ ಚಾಮುಂಡೇಶ್ವರಿ ತಾಯಿಯ ದರ್ಶನವನ್ನು ತಿಂಗಳಲ್ಲಿ ಒಮ್ಮೆಯಾದರು ಮಾಡುತ್ತಾರೆ. ಮೈಸೂರಲ್ಲಿ ಇರುವಾಗೆಲ್ಲ ದರ್ಶನ್ ಚಾಮುಂಡಿ ಮಾತೆಯ ದರ್ಶನ ಮಾಡಿಯೇ ವಾಪಸ್ಸಾಗುತ್ತಿದ್ದರು. ಅಷ್ಟೇ ಅಲ್ಲ ಪ್ರತಿ ವರ್ಷ ಆಷಾಢ ಶುಕ್ರವಾರಕ್ಕೆ ಚಾಮುಂಡೇಶ್ವರಿಯ ಸನ್ನಿಧಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸುತ್ತಾರೆ. ಹೊಸ ಕಾರು ಖರೀದಿಸಿದಾಗಲೂ ಅದನ್ನ ಚಾಮುಂಡಿ ಬೆಟ್ಟಕ್ಕೆ ತಂದು, ತಾಯಿ ದರ್ಶನ ಪಡೆದು ಪೂಜೆ ಮಾಡಿಸಿದ್ದಾರೆ. ಹೀಗಾಗಿ ಆಸ್ಪತ್ರೆಯಿಂದ ಹೊರ ಬರುತ್ತಿದ್ದಂತೆಯೇ ಅವರು ನೇರವಾಗಿ ದೇವಸ್ಥಾನಕ್ಕೆ ಹೋಗಿ ತಾಯಿಗೆ ವಿಶೇಷ ಪೂಜೆ ಮಾಡಿಸಿದ್ದಾರೆ.

    ನಟ ದರ್ಶನ್ ಸೆಪ್ಟೆಂಬರ್ 24 ರಂದು ಮೈಸೂರಿಂದ ಬರುತ್ತಿದ್ದಾಗ ಕಾರ್ ಅಪಘಾತ ಸಂಭವಿಸಿತ್ತು. ಅಪಘಾತದಲ್ಲಿ ದರ್ಶನ್ ಅವರು ಬಲಗೈನ ಮೂಳೆ ಮುರಿದಿದ್ದು, ಸದ್ಯ ಮೈಸೂರಿನ ಕೊಲಂಬಿಯಾ ಏಷಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ವಿಶ್ರಾಂತಿ ಪಡೆಯುತ್ತಿದ್ದಾರೆ.

    ನಟ ದರ್ಶನ್ ಡಿಸ್ಚಾರ್ಜ್ ಆಗುತ್ತಿದ್ದಂತೆಯೇ ಆಸ್ಪತ್ರೆಯ ವೈದ್ಯ ಮಾಧ್ಯಮಗಳ ಜೊತೆ ಮಾತನಾಡಿ, ದರ್ಶನ್ ಅವರ ಕೈಗೆ ಬಲವಾದ ಪೆಟ್ಟು ಬಿದ್ದಿದ್ದು, ಮೂಳೆ ಮುರಿದಿದೆ. ಕೆಲವು ದಿನಗಳು ವಿಶ್ರಾಂತಿ ಬೇಕಾಗುತ್ತದೆ. ಅವರು ನೋವನ್ನು ತಡೆದುಕೊಂಡು, ಅಭಿಮಾನಿಗಳಿಗೆ ಸ್ಪಂದಿಸಿದ್ದು ನೋಡಿ ಖುಷಿ ಆಯಿತು. ಬೇಗ ಗುಣಮುಖರಾಗುತ್ತಾರೆ ಎಂದು ತಿಳಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮೈಸೂರು ಚಾಮುಂಡಿ ದೇವಸ್ಥಾನದ ಮಂಗಳಾರತಿ ತಟ್ಟೆ ಗಲಾಟೆಗೆ ಬ್ರೇಕ್!

    ಮೈಸೂರು ಚಾಮುಂಡಿ ದೇವಸ್ಥಾನದ ಮಂಗಳಾರತಿ ತಟ್ಟೆ ಗಲಾಟೆಗೆ ಬ್ರೇಕ್!

    ಮೈಸೂರು: ಪ್ರಸಿದ್ಧ ಚಾಮುಂಡೇಶ್ವರಿ ದೇವಾಲಯದಲ್ಲಿನ ಮಂಗಳಾರಾತಿ ತಟ್ಟೆ ಗಲಾಟೆಗೆ ಕೊನೆಗೂ ಧಾರ್ಮಿಕ ದತ್ತಿ ಇಲಾಖೆ ಬ್ರೇಕ್ ಹಾಕಿದೆ.

    ಇಷ್ಟು ವರ್ಷ ದೇವಸ್ಥಾನದ ಅರ್ಚಕರು ಮತ್ತು ಸನ್ನಿಧಿ ಪರಿಚಾರಕರು ಬೇರೆ ಬೇರೆ ಮಂಗಳರಾತಿ ಕಾಸಿನ ತಟ್ಟೆ ಇಡುತ್ತಿದ್ದರು. ಇದರಿಂದ ಮಂಗಳಾರತಿ ತಟ್ಟೆ ದುಡ್ಡಿಗೆ ಅರ್ಚರು ಮತ್ತು ಆಗಮಿಕರ ನಡುವೆ ಗಲಾಟೆ ನಡೆಯುತ್ತಿತ್ತು. ಇದರಿಂದ ದೇವಾಲಯಕ್ಕೆ ಬರೋ ಭಕ್ತರಿಗೂ ಪ್ರತಿನಿತ್ಯ ಇರಿಸು ಮುರಿಸು ಉಂಟಾಗುತಿತ್ತು.

    ಈ ಕಾರಣ ಧಾರ್ಮಿಕ ದತ್ತಿ ಇಲಾಖೆ ದೇವಸ್ಥಾನದಲ್ಲಿ ಇನ್ಮುಂದೆ ಒಂದೇ ಮಂಗಳಾರತಿ ತಟ್ಟೆ ಇಡುವಂತೆ ಸುತ್ತೋಲೆ ಜಾರಿ ಮಾಡಿದೆ. ಇದರ ಜೊತೆಗೆ ಚಾಮುಂಡಿ ಬೆಟ್ಟದ ದಾಸೋಹದಲ್ಲಿ ಮಾರ್ಚ್ 1 ರಿಂದ ಭಕ್ತಾದಿಗಳಿಗೆ ಬೆಳಗ್ಗೆ ತಿಂಡಿ ಮಧ್ಯಾಹ್ನ ಊಟ ಮತ್ತು ರಾತ್ರಿ ಊಟದ ವ್ಯವಸ್ಥೆ ಕೂಡ ಜಾರಿ ಮಾಡಲು ಇಲಾಖೆ ಮುಂದಾಗಿದೆ.

    ಇಷ್ಟು ವರ್ಷ ಕೇವಲ ಮಧ್ಯಾಹ್ನದ ಊಟ ಮಾತ್ರ ನೀಡಲಾಗುತ್ತಿತ್ತು. ಈಗ ಮೂರು ಹೊತ್ತು ಭಕ್ತರಿಗೆ ಊಟದ ಪ್ರಸಾದದ ವ್ಯವಸ್ಥೆ ಇರಲಿದೆ. ಇದಕ್ಕಾಗಿ ಹೊಸ ಮೆನೂ ಕೂಡ ಸಿದ್ಧವಾಗಿದೆ. ಬೆಳಿಗ್ಗೆ 7:30 ರಿಂದ 10 ಗಂಟೆ ಮಧ್ಯಾಹ್ನ 12.30 ರಿಂದ ಮೂರು ಗಂಟೆ ಹಾಗೂ ರಾತ್ರಿ 7:30 ರಿಂದ 9 ಗಂಟೆವರೆಗೆ ಪ್ರಸಾದ ನೀಡಲು ಟೈಮ್ ಫಿಕ್ಸ್ ಆಗಿದೆ.

    ಸೋಮವಾರ ತರಕಾರಿ ಉಪ್ಪಿಟ್ಟು ಹಾಗೂ ರವೆ ಕೇಸರಿ ಬಾತ್, ಮಂಗಳವಾರ ಖಾರ ಪೊಂಗಲ್ ಮತ್ತು ಸಿಹಿ ಪೊಂಗಲ್, ಬುಧವಾರ ಬಿಸಿಬೇಳೆ ಬಾತ್ ಮತ್ತು ಕೇಸರಿ ಬಾತ್, ಗುರುವಾರ ಅವಲಕ್ಕಿ ಉಪ್ಪಿಟ್ಟು ಮತ್ತು ಸಿಹಿ ಅವಲಕ್ಕಿ, ಶುಕ್ರವಾರ ತರಕಾರಿ ಬಾತ್ ಹಾಗೂ ಬೆಲ್ಲದ ಅನ್ನ, ಶನಿವಾರ ವಾಂಗಿಬಾತ್ ಹಾಗೂ ರವೆ ಸಜ್ಜಿಗೆ. ಭಾನುವಾರ ಟೊಮೆಟೊ ಬಾತ್ ಹಾಗೂ ರವೆ ಸಜ್ಜಿಗೆ ನೀಡಲಾಗುತ್ತದೆ.