Tag: ಚಾಮುಂಡಿ ಎಕ್ಸ್ ಪ್ರೆಸ್

  • ಚಲಿಸುತ್ತಿದ್ದ ರೈಲಿನ ಮೇಲೆ ಮುರಿದು ಬಿದ್ದ ಮರದ ಕೊಂಬೆ

    ಚಲಿಸುತ್ತಿದ್ದ ರೈಲಿನ ಮೇಲೆ ಮುರಿದು ಬಿದ್ದ ಮರದ ಕೊಂಬೆ

    ರಾಮನಗರ: ಭಾರೀ ಗಾಳಿ ಮಳೆಯಿಂದ ಚಲಿಸುತ್ತಿದ್ದ ರೈಲಿನ ಮೇಲೆ ಮರವೊಂದು ಮುರಿದು ಬಿದ್ದ ಕಾರಣ 2 ಗಂಟೆಗಳ ಕಾಲ ಚಾಮುಂಡಿ ಎಕ್ಸ್ ಪ್ರೆಸ್ ರೈಲು ಕೆಟ್ಟು ನಿಂತ ಘಟನೆ ರಾಮನಗರ ತಾಲೂಕಿನ ಕೆಂಗಲ್ ಸಮೀಪ ಬಳಿ ನಡೆದಿದೆ.

    ರೈಲು ಮಾರ್ಗದ ಪವರ್ ಲೈನ್ ಮೇಲೆ ನೀಲಗಿರಿ ಮರದ ಕೊಂಬೆ ಮುರಿದು ಬಿದ್ದಿದೆ. ಈ ವೇಳೆ ಅದೇ ಮಾರ್ಗದಲ್ಲಿ ಬಂದ ಚಾಮುಂಡಿ ಎಕ್ಸ್ ಪ್ರೆಸ್ ಮೇಲೆ ಸಹ ಕೊಂಬೆ ಬಿದ್ದಿದೆ. ಪರಿಣಾಮ ರೈಲಿನ ಹೆಡ್ ಲೈಟ್ ಒಡೆದು ಹೋಗಿದ್ದು, ರೈಲಿನ ಚಕ್ರಗಳ ನಡುವೆ ಪವರ್ ಲೈನ್ ತುಂಡಾಗಿ ಬಿದ್ದಿದೆ.

    ಈ ಕುರಿತು ಮಾಹಿತಿ ಪಡೆದ ರೈಲ್ವೇ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದು, ದುರಸ್ಥಿ ಕಾರ್ಯ ಮಾಡಿದ್ದಾರೆ. ಆದರೆ ದುರಸ್ಥಿ ಕಾರ್ಯ ತಡವಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಯಾಣಿಕರು ಹೆದ್ದಾರಿಗೆ ನಡೆದು ಬಂದು ಇತರೇ ವಾಹನಗಳ ಮೂಲಕ ಪ್ರಯಾಣ ಮುಂದುವರೆಸಿದರು.

  • ಚಲಿಸುತ್ತಿದ್ದ ಚಾಮುಂಡಿ ಎಕ್ಸ್ ಪ್ರೆಸ್ ರೈಲಿನಿಂದ ಪ್ರತ್ಯೇಕಗೊಂಡ ಬೋಗಿ

    ಚಲಿಸುತ್ತಿದ್ದ ಚಾಮುಂಡಿ ಎಕ್ಸ್ ಪ್ರೆಸ್ ರೈಲಿನಿಂದ ಪ್ರತ್ಯೇಕಗೊಂಡ ಬೋಗಿ

    ಮಂಡ್ಯ: ಮೈಸೂರಿನಿಂದ ಬೆಂಗಳೂರು ಕಡೆ ಹೊರಟಿದ್ದ ಚಾಮುಂಡಿ ಎಕ್ಸ್ ಪ್ರೆಸ್ ನ ಮುಂಬದಿಯಿಂದ ನಾಲ್ಕನೇ ಬೋಗಿ ನಂತರದ 17 ಬೋಗಿಗಳು ಪ್ರತ್ಯೇಕಗೊಂಡಿರುವ ಘಟನೆ ನಡೆದಿದೆ.

    ಮಂಡ್ಯ ಜಿಲ್ಲೆಯ ಪಾಂಡವಪುರ ರೈಲ್ವೆ ನಿಲ್ದಾಣದ ಬಳಿ ರೈಲಿನ ಬೋಗಿಗಳು ಪ್ರತ್ಯೇಕಗೊಂಡಿದ್ದು, ಪ್ರಯಾಣಿಕರೆಲ್ಲಾ ಭಯಗೊಂಡಿದ್ದಾರೆ. ನಿಲ್ದಾಣ ಸಮೀಪದಲ್ಲಿ ಇದ್ದಿದರಿಂದ ಹಾಗೂ ರೈಲು ನಿಧಾನವಾಗಿ ಚಲಿಸುತ್ತಿದ್ದರಿಂದ ಯಾವುದೇ ಅಪಾಯವಾಗಿಲ್ಲ.

    ಬೋಗಿ ಬೇರ್ಪಟ್ಟಿದ್ದರಿಂದ ಚಲಿಸುತ್ತಿದ್ದ ರೈಲಿನಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ರೈಲ್ವೆ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದು, ರೈಲು ಬೋಗಿ ಜೋಡಿಸುವ ಕಾರ್ಯ ತ್ವರಿತ ಗತಿಯಲ್ಲಿ ನಡೆಯುತ್ತಿದೆ.

    https://youtu.be/hqZuzxDZE-M