Tag: ಚಾಮರಾನಗರ

  • ದೇಶದಲ್ಲೇ ಮೊದಲ ಲಿಥಿಯಂ ಬ್ಯಾಟರಿ ಘಟಕ ಸ್ಥಾಪನೆಗೆ ಡಿಕೆಶಿ ಶಂಕುಸ್ಥಾಪನೆ

    ದೇಶದಲ್ಲೇ ಮೊದಲ ಲಿಥಿಯಂ ಬ್ಯಾಟರಿ ಘಟಕ ಸ್ಥಾಪನೆಗೆ ಡಿಕೆಶಿ ಶಂಕುಸ್ಥಾಪನೆ

    ಚಾಮರಾಜನಗರ: ಇಲ್ಲಿನ ಕೈಗಾರಿಕಾ ಪ್ರದೇಶದಲ್ಲಿ ಭಾರತದಲ್ಲೇ ಮೊದಲ ಲಿಥಿಯಂ ಬ್ಯಾಟರಿ (Lithium Battery) ಘಟಕ ಸ್ಥಾಪನೆಗೆ ಡಿಸಿಎಂ ಡಿ.ಕೆ ಶಿವಕುಮಾರ್ (DK Sivakumar) ಶಂಕುಸ್ಥಾಪನೆ ನೆರವೇರಿಸಿದ್ದಾರೆ.

    ವಿಶ್ವದ ಮೊದಲ ಕೃತಕ ಬುದ್ಧಿಮತ್ತೆ (Artificial Intelligence) ಸಂಯೋಜಿತ, ಪರಿಸರ ಸ್ನೇಹಿ ಸ್ಮಾರ್ಟ್ ಬ್ಯಾಟರಿ ಉತ್ಪಾದನಾ ಘಟಕ ತಲೆಎತ್ತಲು ಸಜ್ಜಾಗಿದ್ದು, ಡಿಕೆ ಶಿವಕುಮಾರ್ ಅವರು ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಇದನ್ನೂ ಓದಿ: ಹನಿಟ್ರ್ಯಾಪ್ ಭೀತಿ – ಯೂನಿಫಾರಂ ಧರಿಸಿ ಫೋಟೊ, ವೀಡಿಯೋ ಅಪ್ಲೋಡ್ ಮಾಡದಂತೆ ಅರೆಸೇನಾ ಪಡೆಗಳಿಗೆ ಸೂಚನೆ

    ತಲಾ 500 ಕೋಟಿ ರೂ. ವೆಚ್ಚದಲ್ಲಿ ಚಾಮರಾಜನಗರ ಸೇರಿದಂತೆ ರಾಜ್ಯದ 4 ಕಡೆ ಖಾಸಗಿ ವಲಯದಿಂದ ಬ್ಯಾಟರಿ ಉತ್ಪಾದನಾ ಘಟಕ ಸ್ಥಾಪಿಸಲು ಸಜ್ಜಾಗಿದ್ದು, ಮೊದಲ ಹಂತವಾಗಿ ಚಾಮರಾಜನಗರದಲ್ಲಿ ಸ್ಥಾಪಿಸಲಾಗುತ್ತಿದೆ. ಹಿಂದುಳಿದ ಜಿಲ್ಲೆಯಲ್ಲಿ ಬಂಡವಾಳ ಹೂಡಿಕೆ ಮಾಡುವವರಿಗೆ ಹೆಚ್ಚಿನ ಸೌಲಭ್ಯ ಒದಗಿಸುವ ಭರವಸೆಯನ್ನ ಡಿ.ಕೆ ಶಿವಕುಮಾರ್ ಅವರು ನೀಡಿದ್ದಾರೆ. ಇದನ್ನೂ ಓದಿ: ಕಾಮಾಲೆ ಕಣ್ಣಿನವರಿಗೆ ಕಾಣೋದೆಲ್ಲಾ ಹಳದಿಯೇ: ಕಾಂಗ್ರೆಸ್‌ ಗೇಲಿಗೆ ಬಿಜೆಪಿ ತಿರುಗೇಟು

    ಇದೇ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಕೆಶಿ, ಈಗಾಗಲೇ ಸೋಲಾರ್ ಪಾರ್ಕ್ ರಾಜ್ಯದ ಉದ್ದಗಲಕ್ಕೂ ಮಾಡಿ ವಿಶ್ವದ ಗಮನ ಸೆಳೆದಿದ್ದೇವೆ. ಈ ಹಿಂದೆ ಸಿದ್ದರಾಮಯ್ಯ ಸರ್ಕಾರದಲ್ಲಿ ನಾನು ಮಂತ್ರಿಯಾಗಿದ್ದಾಗ ಸೋಲಾರ್ ಪಾರ್ಕ್ ಯೋಜನೆ ಒಪ್ಪಿ ಎಲ್ಲಾ ತಾಲೂಕುಗಳಲ್ಲಿಯೂ ಸ್ಥಾಪಿಸಲು ಯೋಜನೆ ತಂದಿದ್ದೆ. ಇದೀಗ ಸೌರ ವಿದ್ಯುತ್ ಸಂಗ್ರಹಿಸುವ ಕೆಲಸಕ್ಕೆ ಮುಂದಾಗುತ್ತಿದ್ದಾರೆ. ಅದಕ್ಕಾಗಿ ಖಾಸಗಿ ಕಂಪನಿಯವರು ೨ ಸಾವಿರ ಕೋಟಿ ವೆಚ್ಚದಲ್ಲಿ ರಾಜ್ಯದ ೪ ಕಡೆ ಲಿಥಿಯಂ ಬ್ಯಾಟರಿ ಘಟಕ ಸ್ಥಾಪನೆ ಮಾಡಲು ಮುಂದಾಗಿದ್ದಾರೆ. ಅವರಿಗೆ ಉತ್ತೇಜನ ಕೊಡುತ್ತೇವೆ ಎಂದು ಹೇಳಿದ್ದಾರೆ.

    ಹೊರಗಿಂದ ಬಂದು ಹಿಂದುಳಿದ ಜಿಲ್ಲೆಗಳಲ್ಲಿ ಉದ್ಯೋಗ ಸೃಷ್ಟಿಸುವವರಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು. ಸರ್ಕಾರದಿಂದಲೂ ಅಂತಹವರಿಗೆ ಎಲ್ಲಾ ರೀತಿಯ ಸಹಾಯ ಸಿಗಲಿದೆ ಎಂದು ಭರವಸೆ ನೀಡಿದ್ದಾರೆ.

    ಇದೇ ವೇಳೆ ಆಪರೇಷನ್ ಹಸ್ತ ವಿಚಾರಕ್ಕೆ ಪ್ರತಿಕ್ರಿಯಿಸಿ, ನಮಗೆ ಆಪರೇಷನ್ ಹಸ್ತ ಮಾಡುವ ಅವಶ್ಯಕತೆ ಇಲ್ಲ. ಅವರಾಗಿಯೇ ಬಂದರೆ ತಡೆಯಲು ಸಾಧ್ಯವಿಲ್ಲ. ಪಕ್ಷಕ್ಕೆ ಬಲ ತುಂಬುವ ಕಡೆ ಬಂದ್ರೆ ಸೇರಿಸಿಕೊಳ್ತೇವೆ ಎಂದಿದ್ದಾರೆ.

    ಆರ್.ಅಶೋಕ್‌ಗೆ ಪ್ರೋಟೊಕಾಲ್ ವಿಚಾರ ಗೊತ್ತೇಯಿಲ್ಲ. ಅವರ ಕೈಯಲ್ಲಿ ಒಬ್ಬ ವಿರೋಧ ಪಕ್ಷದ ನಾಯಕನನ್ನ ಆಯ್ಕೆ ಮಾಡೋಕ್ಕಾಗ್ತಿಲ್ಲ. ನಾವು ಕಾಂಗ್ರೆಸ್‌ನವರು ಎಲ್ಲಾ ರೀತಿಯ ಪ್ರೋಟೊಕಾಲ್ ಪಾಲಿಸುತ್ತೇವೆ. ಪ್ರಧಾನಿ ಕಚೇರಿಯಿಂದಲೇ ಸಿಎಂ, ಡಿಸಿಎಂ ಯಾರೂ ಬರೋದು ಬೇಡ ಅಂತಾ ನಮಗೆ ಸೂಚನೆ ಬಂದಿದೆ. ನಮಗೆ ಎಲ್ಲಾ ಪರಿಜ್ಞಾನ ಇದೆ. ಪ್ರಧಾನಿ ಮೋದಿಯವರು ಆಗಮಿಸಿದ್ದು ಆರ್.ಅಶೋಕ್ ಅವರಿಗೇ ಗೊತ್ತಿಲ್ಲ. ಏನೋ ಪ್ರಚಾರಕ್ಕೆ ಮಾತಾಡಬೇಕು ಅಂತಾ ಮಾತನಾಡಿದ್ದಾರೆ ಅಷ್ಟೇ ಎಂದು ಕುಟುಕಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • 99 ದಿನಗಳಲ್ಲಿ ಮುಡಿ ಕೂದಲಿನಿಂದ ಮಲೆ ಮಾದಪ್ಪನಿಗೆ ಬಂದ ಅದಾಯ 1.49 ಕೋಟಿ ರೂ.

    99 ದಿನಗಳಲ್ಲಿ ಮುಡಿ ಕೂದಲಿನಿಂದ ಮಲೆ ಮಾದಪ್ಪನಿಗೆ ಬಂದ ಅದಾಯ 1.49 ಕೋಟಿ ರೂ.

    ಚಾಮರಾಜನಗರ: ಮಲೆ ಮಹದೇಶ್ವರ ಬೆಟ್ಟದಲ್ಲಿ ಹರಕೆ ಕೂದಲಿನ ಬಿಡ್ ನಡೆದಿದ್ದು, ಪ್ರತಿ ಕೆ.ಜಿ.ಗೆ 15,535 ರೂ. ನಂತೆ 4,595 ಕೆ.ಜಿ. ತುಂಡು ಕೂದಲು, 951 ಕೆ.ಜಿ. ಉದ್ದದ ಕೂದಲು ಮಾರಾಟವಾಗಿದ್ದು, ಇದರಿಂದ ಬರೋಬ್ಬರಿ 1,49,40,391 ರೂ. ಆದಾಯ ಬಂದಿದೆ.

    ನಾಡಿನ ಪ್ರಮುಖ ದೇಗುಲಗಳಲ್ಲಿ ಒಂದಾದ ಜಿಲ್ಲೆಯ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಹರಕೆ ಕೂದಲಿನ ಬಿಡ್ ನಡೆದಿದ್ದು, ಪ್ರತಿ ಕೆಜಿಗೆ 15,535 ರೂ. ನಂತೆ 4,595 ಕೆಜಿ ತುಂಡು ಕೂದಲು, 951 ಕೆ.ಜಿ. ಉದ್ದ ಕೂದಲು ಮಾರಾಟವಾಗಿದ್ದು, ಬರೋಬ್ಬರಿ 1,49,40,391 ರೂ. ಆದಾಯ ಬಂದಿದೆ. ಹುಂಡಿಯಲ್ಲಿ ಸಂಗ್ರಹವಾಗುತ್ತಿದ್ದ ಹಣದಿಂದ ಗಮನ ಸೆಳೆಯುತ್ತಿದ್ದ ಮಲೆ ಮಾದಪ್ಪ ಈಗ ಮತ್ತಷ್ಟು ಶ್ರೀಮಂತನಾಗಿದ್ದು, ಹರಕೆ ಕೂದಲಿನ ಹರಾಜಿನಿಂದ ಬರೋಬ್ಬರಿ 1.49 ಕೋಟಿ ರೂ. ಸಂಗ್ರಹವಾಗಿದೆ. ಇದನ್ನೂ ಓದಿ: ನಿನ್ನ ವಾಹನದಿಂದ ಬೆಳೆ ಉಳಿಸು- ಗಣಪತಿಗೆ ಜೀವಂತ ಇಲಿ ನೀಡಿ ಬೇಡಿಕೊಂಡ ರೈತ

    ಈ ಕುರಿತು ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ಮಾಹಿತಿ ನೀಡಿ, ಕಳೆದ ವರ್ಷಕ್ಕಿಂತ ಈ ವರ್ಷ ಪ್ರತಿ ಕೆ.ಜಿ.ಗೆ 8,135 ರೂ. ಹೆಚ್ಚಿನ ಲಾಭ ಬಂದಿದ್ದು, ಒಟ್ಟು ಹಣ 1.49 ಕೋಟಿ ರೂ. ಸಂಗ್ರಹವಾಗಿರುವುದು ಸಾರ್ವಕಾಲಿಕ ದಾಖಲೆಯಾಗಿದೆ. ಈ ಮುಡಿ ಕೂದಲು 99 ದಿನಗಳಲ್ಲಿ ಸಂಗ್ರಹವಾಗಿತ್ತು ಎಂದು ತಿಳಿಸಿದ್ದಾರೆ.

  • ಮೂರು ದಿನಗಳ ಕಾಲ ಮಾದಪ್ಪ ದರ್ಶನಕ್ಕೆ ನಿರ್ಬಂಧ

    ಮೂರು ದಿನಗಳ ಕಾಲ ಮಾದಪ್ಪ ದರ್ಶನಕ್ಕೆ ನಿರ್ಬಂಧ

    ಚಾಮರಾಜನಗರ: ಶ್ರಾವಣದಲ್ಲಿ ಹೆಚ್ಚು ಭಕ್ತರ ಆಗಮನ ಹಿನ್ನೆಲೆ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ದರ್ಶನಕ್ಕೆ ಮೂರು ದಿನ ನಿರ್ಬಂಧ ವಿಧಿಸಲಾಗಿದೆ.

    ಸೆಪ್ಟೆಂಬರ್ 5, 6 ಹಾಗೂ 7 ರಂದು ನಿರ್ಬಂಧ ವಿಧಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಹೆಚ್ಚು ಜನ ಆಗಮಿಸುವ ಹಿನ್ನೆಲೆ ಕೊರೋನಾ ಕಾರಣದಿಂದ ಬೆಟ್ಟಕ್ಕೆ ಭಕ್ತರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಮೂರು ದಿನಗಳ ಕಾಲ ಎಣ್ಣೆಮಜ್ಜನ, ಪೂಜೆ, ಕುಂಭಾಬಿಷೇಕ ನಡೆಯಲಿದೆ. ಹೀಗಾಗಿ ಹೆಚ್ಚು ಭಕ್ತರು ಆಗಮಿಸುವ ನಿರೀಕ್ಷೆ ಇದೆ. ಜನಸಂದಣಿ ಉಂಟಾಗಬಾರದು ಎಂಬ ಕಾರಣಕ್ಕೆ ಈ ನಿರ್ಧಾರ ಕೈಗೊಳ್ಳಲಾಗಿದೆ. ಇದನ್ನೂ ಓದಿ: ಫಿಟ್ ಆಗಿದ್ದ ಸಿದ್ಧಾರ್ಥ್ ಹೃದಯಾಘಾತಕ್ಕೆ ಕಾರಣವೇನು?

    ಈಗಾಗಲೇ ಶ್ರಾವಣದ ಹಿನ್ನೆಲೆ ಹಿಮವದ್ ಗೋಪಾಲಸ್ವಾಮಿ ದರ್ಶನಕ್ಕೂ ಜಿಲ್ಲಾಡಳಿತ ನಿರ್ಬಂಧ ವಿಧಿಸಿದೆ. ಇದೀಗ ಮೂರು ದಿನಗಳ ಕಾಲ ಮಹದೇಶ್ವರನ ದರ್ಶನಕ್ಕೂ ನಿರ್ಬಂಧ ವಿಧಿಸಲಾಗಿದೆ. ಕೊರೊನಾ ಹಿನ್ನೆಲೆ ಗಡಿ ಜಿಲ್ಲೆಯಾದ್ದರಿಂದ ಡಿಸಿ ಕಟ್ಟುನಿಟ್ಟಿನ ಕ್ರಮ ವಹಿಸಿದ್ದಾರೆ.

  • ಚಾಮರಾಜನಗರ ಡಿಸಿಯಿಂದ ಧ್ವಜಾರೋಹಣ- ಸಚಿವರ ಬದಲಿಗೆ ಧ್ವಜ ಹಾರಿಸಿದ ಮೂರನೇ ಡಿಸಿ ಎಂಬ ಹೆಗ್ಗಳಿಕೆ

    ಚಾಮರಾಜನಗರ ಡಿಸಿಯಿಂದ ಧ್ವಜಾರೋಹಣ- ಸಚಿವರ ಬದಲಿಗೆ ಧ್ವಜ ಹಾರಿಸಿದ ಮೂರನೇ ಡಿಸಿ ಎಂಬ ಹೆಗ್ಗಳಿಕೆ

    ಚಾಮರಾಜನಗರ: ನಗರದಲ್ಲಿ ಆಯೋಜಿಸಿದ್ದ ಸರಳ ಸಮಾರಂಭದಲ್ಲಿ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಧ್ವಜಾರೋಹಣ ನೆರವೇರಿಸಿ ಗೌರವ ವಂದನೆ ಪಡೆದರು. ಈ ಮೂಲಕ ಸಚಿವರ ಬದಲಿಗೆ ಧ್ವಜಾರೋಹಣ ನೆರವೇರಿಸಿದ ಮೂರನೇ ಡಿಸಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

    ಚಾಮರಾಜನಗರಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ನೇಮಕವಾಗದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ನಗರದ ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಧ್ವಜಾರೋಹಣ ನೆರವೇರಿಸಿ ಗೌರವ ವಂದನೆ ಪಡೆದರು.

    ಕೋವಿಡ್ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಸರಳ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಡಿಸಿ ರವಿ ಧ್ವಜಾರೋಹಣ ನೆರವೇರಿಸಿ, ಪೊಲೀಸ್ ತುಕಡಿಗಳಿಂದ ಗೌರವ ವಂದನೆ ಸ್ವೀಕರಿಸಿದರು. ಬಳಿಕ ಮಾತನಾಡಿದ ಅವರು, ಪ್ರಾಣದ ಹಂಗು ತೊರೆದು ತಮ್ಮ ಸರ್ವಸ್ವವನ್ನು ನಾಡಿಗೆ ಸಮರ್ಪಿಸಿದ ಸ್ವಾತಂತ್ರ್ಯ ಹೋರಾಟಗಾರರ ಶ್ರಮ ವ್ಯರ್ಥವಾಗದಂತೆ ಒಗ್ಗಟ್ಟಿನಿಂದ ನಾವು ಬದುಕಬೇಕಿದೆ. ರಾಷ್ಟ್ರೀಯ ಪ್ರಜ್ಞೆ ನಿರಂತರವಾಗಿ ಜಾಗೃತವಾಗಿರುವಂತೆ ಎಚ್ಚರ ವಹಿಸಬೇಕು ಎಂದರು.

    ಈ ವರೆಗೆ ಜಿಲ್ಲೆಯಲ್ಲಿ 4.75 ಲಕ್ಷ ಮಂದಿಗೆಗೆ ಲಸಿಕೆ ನೀಡಲಾಗಿದ್ದು, 3.5 ಕೋಟಿ ರೂ. ವೆಚ್ಚದಲ್ಲಿ 6 ಅಂಬುಲೆನ್ಸ್, ಮಕ್ಕಳ ವೆಂಟಿಲೇಟರ್ ಗಳನ್ನು ಖರೀದಿಸಲಾಗಿದೆ. ಗ್ರಾ.ಪಂ. ಗಳು ತಯಾರಿಸುವ ದೂರದೃಷ್ಟಿ ಯೋಜನೆಯನ್ನು ‘ಜನರ ಯೋಜನೆ’ ಎಂಬ ಹೆಸರಿನಲ್ಲಿ ಜಾರಿಗೊಳಿಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು.

    ಮೂರನೇ ಡಿಸಿ
    ಹರ್ಷ ಗುಪ್ತ, ಬಿ.ಬಿ.ಕಾವೇರಿ ಬಳಿಕ ಸಚಿವರ ಬದಲಿಗೆ ಧ್ವಜಾರೋಹಣ ನೆರವೇರಿಸಿದ ಮೂರನೇ ಡಿಸಿ ಎಂಬ ಹೆಗ್ಗಳಿಕೆಗೆ ಡಾ.ಎಂ.ಆರ್.ರವಿ ಪಾತ್ರರಾದರು. ರಾಷ್ಟ್ರಪತಿ ಆಡಳಿತದ ವೇಳೆ ಅಂದಿನ ಚಾಮರಾಜನಗರ ಡಿಸಿಯಾಗಿದ್ದ ಹರ್ಷ ಗುಪ್ತ ಧ್ವಜಾರೋಹಣ ಮಾಡಿದ್ದರು. ಇದಾದ ಬಳಿಕ ಜಿಲ್ಲಾ ಉಸ್ತುವಾರಿ ಸಚಿವರು ನೇಮಕವಾಗದಿದ್ದರಿಂದ ಡಿಸಿ ಬಿ.ಬಿ.ಕಾವೇರಿ, ಬಳಿಕ ಇದೀಗ ಡಾ.ಎಂ.ಆರ್.ರವಿ ಧ್ವಜಾರೋಹಣ ನೆರವೇರಿಸಿದರು.