Tag: ಚಾಮರಾಜ ಪೇಟೆ

  • ಶಾಸಕ ಜಮೀರ್ ಕಚೇರಿಯಲ್ಲಿ ಅದ್ಧೂರಿ ಗಣೇಶೋತ್ಸವ..!

    ಶಾಸಕ ಜಮೀರ್ ಕಚೇರಿಯಲ್ಲಿ ಅದ್ಧೂರಿ ಗಣೇಶೋತ್ಸವ..!

    ಬೆಂಗಳೂರು: ಶಾಸಕ ಜಮೀರ್ ಅಹ್ಮದ್ ಕಚೇರಿಯಲ್ಲಿಯೇ ಅದ್ದೂರಿಯಾಗಿ ಗಣೇಶೋತ್ಸವವನ್ನು ಆಚರಿಸಲಾಗಿದೆ.

    ಚಾಮರಾಜಪೇಟೆ ವರ್ತಕರ ಬೀದಿಯಲ್ಲಿರುವ ಶಾಸಕರ ಕಚೇರಿಯಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ತಿರುಮಲ ತಿರುಪತಿ ಸೆಟಪ್ ನಲ್ಲಿ ಗಣಪನನ್ನು ಪ್ರತಿಷ್ಠಾಪಿಸಲಾಗಿದ್ದು, ಅಂದಾಜು 3.5 ಲಕ್ಷ ರೂ. ವೆಚ್ಚ ವ್ಯಯಿಸಲಾಗಿದೆ.

    ಈ ಗಣೇಶ ಮೂರ್ತಿ 3 ಅಡಿ ಎತ್ತರವಿದೆ. ಬೆಳಗ್ಗೆ 10:30ರ ಸುಮಾರಿಗೆ ಪೂಜಾ ಕೈಂಕರ್ಯ ನೆರವೇರಿದೆ. ಬಳಿಕ ಸುಮಾರು 3 ಸಾವಿರಕ್ಕೂ ಅಧಿಕ ಭಕ್ತಾದಿಗಳಿಗೆ ಸ್ವತಃ ಜಮೀರ್ ಅವರೇ ಪ್ರಸಾದ ವಿತರಣೆ ಮಾಡಿದ್ದಾರೆ. ಇದನ್ನೂ ಓದಿ: ತೇಲುವ ಫ್ರೀಜರ್ ಸಹಾಯದಿಂದ 11 ದಿನ ಸಮುದ್ರದಲ್ಲೇ ಜೀವ ಉಳಿಸಿಕೊಂಡ

    ಇಂದು ಸಂಜೆ ಅದ್ದೂರಿ ಮೆರವಣಿಗೆ ನಡೆದಿದ್ದು, ಮಾಜಿ ಪಾಲಿಕೆ ಸದಸ್ಯರಾದ ಅಲ್ತಾಫ್ ಖಾನ್, ಚಂದ್ರಶೇಖರ್ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಭಾಗಿಯಾಗಿದ್ದಾರೆ. ಯಡಿಯೂರು ಲೇಕ್ ನಲ್ಲಿ ಮೂರ್ತಿ ವಿಸರ್ಜನೆ ಮಾಡಲಾಗಿದೆ. ಭಕ್ತಾದಿಗಳಿಗೆ ಲಡ್ಡು ಮತ್ತು ಖರ್ಜಿಕಾಯಿ ಪ್ರಸಾದವಾಗಿ ನೀಡಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಚಾಮರಾಜಪೇಟೆ ಮೈದಾನದಲ್ಲಿ ಗಣೇಶೋತ್ಸವ ಅನುಮತಿ ಸೂಕ್ತ ಸಮಯದಲ್ಲಿ ನಿರ್ಧಾರ: ಅಶೋಕ್

    ಚಾಮರಾಜಪೇಟೆ ಮೈದಾನದಲ್ಲಿ ಗಣೇಶೋತ್ಸವ ಅನುಮತಿ ಸೂಕ್ತ ಸಮಯದಲ್ಲಿ ನಿರ್ಧಾರ: ಅಶೋಕ್

    ಬೆಂಗಳೂರು: ಚಾಮರಾಜಪೇಟೆ ಮೈದಾನದಲ್ಲಿ ಗಣೇಶೋತ್ಸವ ಅನುಮತಿ ಕೊಡುವ ಬಗ್ಗೆ ಸೂಕ್ತ ಸಮಯದಲ್ಲಿ, ಸೂಕ್ತ ಕಾಲದಲ್ಲಿ, ಸೂಕ್ತ ನಿರ್ಧಾರ ಮಾಡಲಾಗುತ್ತದೆ ಎಂದು ಕಂದಾಯ ಸಚಿವ ಆರ್‌. ಅಶೋಕ್ ತಿಳಿಸಿದರು.

    ವಿಧಾನಸೌಧದಲ್ಲಿ ಮಾತನಾಡಿದ ಅವರು, ಇದೊಂದು ಸೂಕ್ಷ್ಮ ವಿಚಾರವಾಗಿದೆ. ಅನುಮತಿ ಬೇಕು ಅಂತ ಈವರೆಗೂ ನನಗೆ ಯಾವುದೇ ಮನವಿಗಳು ಬಂದಿಲ್ಲ. ಡಿಸಿಗೆ ಮನವಿ ಕೊಟ್ಟಿದ್ದರೆ ಅವರು ಆ ಬಗ್ಗೆ ಸೂಕ್ತ ಸೂಚನೆ ಕೊಡುತ್ತಾರೆ ಎಂದು ತಿಳಿಸಿದರು.

    75 ವರ್ಷಗಳ ಬಳಿಕ ಮೊದಲ ಬಾರಿಗೆ ಅಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ ಮಾಡುವ ನಿರ್ಧಾರ ಮಾಡಲಾಯಿತು. ಗಣರಾಜೋತ್ಸವ ಕೂಡಾ ಮಾಡುತ್ತೇವೆ. ಮುಂದೆ ಕನ್ನಡ ರಾಜ್ಯೋತ್ಸವ ಮಾಡಲು ಆದೇಶ ಹೊರಡಿಸುತ್ತೇನೆ ಎಂದು ತಿಳಿಸಿದರು. ಇದನ್ನೂ ಓದಿ: ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡ್ತೀವಿ – ಅಶೋಕ್ ಘೋಷಣೆ

    ಗಣೇಶೋತ್ಸವದ ಬಗ್ಗೆ ನಾನು ಕೂಡ ಗಂಭೀರವಾಗಿ ಆಲೋಚನೆ ಮಾಡುತ್ತಿದ್ದೇನೆ. ಕಾನೂನು ಸುವ್ಯವಸ್ಥೆ ಬಹಳ ಪ್ರಮುಖ. ಗಣೇಶ ಕೂರಿಸುವ ಸಂಬಂಧ ಇಂದು ಪೊಲೀಸರು, ಬಿಬಿಎಂಪಿ ಅಧಿಕಾರಿಗಳು ಸಭೆ ಮಾಡ್ತಿದ್ದಾರೆ. ಚಾಮರಾಜಪೇಟೆ ಗಣೇಶೋತ್ಸವ ವಿಚಾರ ಗಂಭೀರವಾಗಿ ಚಿಂತನೆ ಮಾಡಬೇಕಿದೆ ಎಂದರು.

    ಅಧಿಕಾರಿಗಳಿಂದ ಈಗಾಗಲೇ ನಾನು ಮಾಹಿತಿ ಪಡೆದಿದ್ದೇನೆ. ಯಾವ ಸಂದರ್ಭದಲ್ಲಿ ಏನು ಕ್ರಮ ತಗೊಬೇಕು ಎಂದು ಸೂಕ್ತ ನಿರ್ಧಾರ ಮಾಡುತ್ತೇವೆ. ಸೂಕ್ತ ಕಾಲ, ಸೂಕ್ತ ಸಮಯ ನೋಡಿಕೊಂಡು ತೀರ್ಮಾನ ಮಾಡುತ್ತೇವೆ. ಅನುಮತಿ ಬಗ್ಗೆ ಸಿಎಂ ಬೊಮ್ಮಾಯಿ ಜೊತೆ ಚರ್ಚೆ ಮಾಡಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ತುಮಕೂರಿನ ಭೀಕರ ರಸ್ತೆ ಅಪಘಾತಕ್ಕೆ ಪ್ರಧಾನಿ ಸಂತಾಪ- ಮೃತರ ಕುಟುಂಬಕ್ಕೆ 2 ಲಕ್ಷ ರೂ. ಪರಿಹಾರ

    Live Tv
    [brid partner=56869869 player=32851 video=960834 autoplay=true]

  • ಈದ್ಗಾ ಮೈದಾನ ನಮ್ಮದೇ ಬಿಬಿಎಂಪಿಗೆ ವಾರ್ನಿಂಗ್ ನೀಡಿದ ವಕ್ಫ್ ಬೋರ್ಡ್ – ಸಿಎಂ ಮಧ್ಯಪ್ರವೇಶಕ್ಕೆ ಕಸರತ್ತು

    ಈದ್ಗಾ ಮೈದಾನ ನಮ್ಮದೇ ಬಿಬಿಎಂಪಿಗೆ ವಾರ್ನಿಂಗ್ ನೀಡಿದ ವಕ್ಫ್ ಬೋರ್ಡ್ – ಸಿಎಂ ಮಧ್ಯಪ್ರವೇಶಕ್ಕೆ ಕಸರತ್ತು

    ಬೆಂಗಳೂರು: ಚಾಮರಾಜಪೇಟೆ ಈದ್ಗಾ ವಿವಾದ ಬಗೆಹರಿಯದ ಸಮಸ್ಯೆ ಆಗಿದೆ. ಬಿಬಿಎಂಪಿ ಮತ್ತು ವಕ್ಫ್ ಬೋರ್ಡ್ ನಡುವೆ ಹಗ್ಗಜಗ್ಗಾಟ ಮುಂದುವರಿದಿದೆ. ಈದ್ಗಾ ಮೈದಾನ ನಮ್ಮದೇ ಅಂತಾ ವಕ್ಫ್ ಬೋರ್ಡ್ ಬಿಬಿಎಂಪಿಗೆ ವಾರ್ನಿಂಗ್ ನೀಡಿದೆ.

    ಚಾಮರಾಜಪೇಟೆ ಈದ್ಗಾ ವಿವಾದ ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ. ವಿವಾದ ಬಗೆಹರಿಸದ ಬಿಬಿಎಂಪಿ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ಸಂಘಟನೆಗಳು ಪ್ರತಿಭಟನೆ ಜೊತೆಗೆ ಹೋರಾಟವನ್ನು ಮಾಡ್ತ ಇದ್ದಾರೆ. ಬಿಬಿಎಂಪಿ ಸ್ವತ್ತು ಎಂದು ಹೇಳಿಕೊಂಡಿರುವುದರಿಂದಾಗಿ ಬಿಬಿಎಂಪಿ ಸಮಸ್ಯೆ ಪರಿಹಾರ ಮಾಡುವಲ್ಲಿ ನಿಧಾನ ಮಾಡ್ತಿದೆ. ಒಂದು ಕಡೆ ವಕ್ಫ್ ಬೋರ್ಡ್ ಕೂಡ ನಮ್ಮ ಸ್ವತ್ತು ಸುಪ್ರೀಂ ಕೋರ್ಟ್ ಆದೇಶದಲ್ಲಿ ಉಲ್ಲೇಖ ಆಗಿದೆ ಎಂದು ಬಿಬಿಎಂಪಿಗೆ ವಾರ್ನಿಂಗ್ ಕೊಡ್ತಾ ಇದ್ದಾರೆ ಹೀಗಾಗಿ ಬಿಬಿಎಂಪಿ ಈ ಸಮಸ್ಯೆಯನ್ನು ಸಿಎಂ ಬಸವರಾಜ ಬೊಮ್ಮಾಯಿ ಮುಂದೆ ಇಟ್ಟಿದೆ. ಇದನ್ನೂ ಓದಿ: ಹಾಸ್ಟೆಲ್‌ನಲ್ಲಿ ಊಟ ಸೇವಿಸಿ 13 ವಿದ್ಯಾರ್ಥಿನಿಯರು ಅಸ್ವಸ್ಥ – ಇಬ್ಬರು ಗಂಭೀರ

    ತೆರೆಮರೆಯಲ್ಲಿ ಸಿಎಂ ಬಳಿ ಚರ್ಚೆ ಮಾಡ್ತಾ ಇದ್ದು ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿದೆ ಎಂದು ಆಪ್ತ ಮೂಲಗಳಿಂದ ವರದಿಯಾಗಿದೆ. ಬಿಬಿಎಂಪಿ ಸಿಎಂ ಎಂಟ್ರಿಗೆ ಕಸರತ್ತು ಮಾಡುತ್ತಿದ್ದರೆ, ಇತ್ತ ವಕ್ಫ್ ಬೋರ್ಡ್ ಸುಪ್ರೀಂ ಕೋರ್ಟ್ ಆದೇಶ ಉಲ್ಲೇಖವನ್ನು ಪ್ರಸ್ತಾಪ ಮಾಡ್ತಾ ಇದೆ. ಇದು ನಮ್ಮ ಸ್ವತ್ತು ಎಂದು ಆದೇಶ ಇದೆ ಬಿಬಿಎಂಪಿ ನಮ್ಮ ಸ್ವತ್ತು ಅಂದರೆ ನ್ಯಾಯಾಂಗ ನಿಂದನೆ ಆಗುತ್ತೆ ಬಿಬಿಎಂಪಿ ಕೇಳಿರೋ ಎಲ್ಲಾ ದಾಖಲಾತಿ ನೀಡಿದ್ದೇವೆ. ಇನ್ನೂ ಸ್ವಲ್ಪ ಕೊಡಬೇಕಿದೆ ಕಾಲಾವಕಾಶವನ್ನು ಕೇಳುತ್ತಿದ್ದೇವೆ ಎನ್ನುತ್ತಿದೆ. ಇದನ್ನೂ ಓದಿ: ಸಿದ್ದರಾಮಯ್ಯಗೆ ಮೊದಲೇ ಗೊತ್ತಿತ್ತು ವರುಣಾ ರಹಸ್ಯ – ಸಿದ್ದುಗೆ ಗುಟ್ಟು ಬಿಟ್ಟುಕೊಟ್ಟಿದ್ರು ಬಿಎಸ್‍ವೈ

    ಇನ್ನೂ ಈದ್ಗಾ ವಿವಾದ ಬಗೆಹರಿಯದ ಹಿನ್ನೆಲೆ ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸುವಂತೆ ರಾಜ್ಯಪಾಲರಿಗೆ ಚಾಮರಾಜಪೇಟೆ ನಾಗರೀಕರ ಒಕ್ಕೂಟ ಮನವಿ ಮಾಡಿದೆ. ಮುಖ್ಯಮಂತ್ರಿಗಳು ಕೂಡ ಮಧ್ಯ ಪ್ರವೇಶ ಮಾಡ್ತಾರೆ. ಮೈಸೂರು ಮಹಾರಾಜರಿಗೂ ಕೂಡ ಮನವಿ ಮಾಡಿದ್ದೇವೆ. 1974 ರಿಂದಲೂ ಇದು ನಮ್ಮ ಗ್ರೌಂಡ್ ಎಂದು ಆಕ್ರೋಶ ಹೊರ ಹಾಕುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಪಾದರಾಯನಪುರದಿಂದ ಚಿಕ್ಕಬಳ್ಳಾಪುರಕ್ಕೆ ಬಂದವ್ರ ವಿರುದ್ಧ ಪ್ರಕರಣ ದಾಖಲು

    ಪಾದರಾಯನಪುರದಿಂದ ಚಿಕ್ಕಬಳ್ಳಾಪುರಕ್ಕೆ ಬಂದವ್ರ ವಿರುದ್ಧ ಪ್ರಕರಣ ದಾಖಲು

    ಚಿಕ್ಕಬಳ್ಳಾಪುರ: ಭಾರತ್ ಲಾಕ್ ಡೌನ್ ಉಲ್ಲಂಘಿಸಿ ಬೆಂಗಳೂರಿನ ಪಾದರಾಯನಪುರ ಸೇರಿದಂತೆ ಜಯನಗರ, ಚಾಮರಾಜಪೇಟೆಯಿಂದ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಮರಾಠಿಪಾಳ್ಯಕ್ಕೆ ಆಗಮಿಸಿದ ಐವರ ಮೇಲೆ ಪ್ರಕರಣ ದಾಖಲಾಗಿದೆ.

    ಪಾದರಾಯನಪುರದಲ್ಲಿ ಗಲಾಟೆ ಪ್ರಕರಣದ ನಂತರ ಕದ್ದುಮುಚ್ಚಿ ಪಾದರಾಯನಪುರ ಹಾಗೂ ಚಾಮರಾಜಪೇಟೆಯ ತಲಾ ಇಬ್ಬರು ಹಾಗೂ ಜಯನಗರದ ಓರ್ವ ಸೇರಿ ಐದು ಮಂದಿ ಆಟೋ ಮೂಲಕ ಮರಾಠಿಪಾಳ್ಯದ ಸಂಬಂಧಿಕರ ಮನೆಗೆ ಆಗಮಿಸಿದ್ರು. ಈ ವೇಳೆ ಸ್ಥಳೀಯರು ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಎಚ್ಚೆತ್ತ ಪೊಲೀಸರು 5 ಮಂದಿಯನ್ನ ವಶಕ್ಕೆ ಪಡೆದು ಕ್ವಾರಂಟೈನ್ ಮಾಡಿದ್ದಾರೆ. ಈ ಐದು ಮಂದಿ ವಿರುದ್ಧವೂ ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಇದೇ ಗೌರಿಬಿದನೂರು ತಾಲೂಕು ಡಿ ಪಾಳ್ಯ ಗ್ರಾಮದ 4 ಮಂದಿ ಹಿಂದೂಪುರಕ್ಕೆ ಹೋಗಿ ಕೊರೊನಾ ಸೋಂಕಿನಿಂದ ಮೃತಪಟ್ಟ ವೃದ್ಧನ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿ ವಾಪಾಸ್ಸಾಗಿದ್ರು. ಹೀಗಾಗಿ ಮಾಹಿತಿ ತಿಳಿದ ಪೊಲೀಸರ 4 ಮಂದಿಯನ್ನ ಕ್ವಾರಂಟೈನ್ ಗೆ ಓಳಪಡಿಸಿದ್ರು. ಈ 4 ಮಂದಿಯ ಗಂಟಲ ದ್ರವದ ಡೆಸ್ಟ್ ಮಾಡಿಸಿದ್ದು ನೆಗೆಟಿವ್ ಬಂದಿದೆ.

    ಲಾಕ್ ಡೌನ್ ಉಲ್ಲಂಘಿಸಿ ನೆರೆಯ ರಾಜ್ಯಕ್ಕೆ ಹೋಗಿ ಬಂದ ಹಿನ್ನೆಲೆಯಲ್ಲಿ 4 ಮಂದಿ ವಿರುದ್ಧ ಕೂಡ ಮಂಚೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಒಟ್ಟು 9 ಮಂದಿ ವಿರುದ್ಧ ಐಪಿಸಿ ಸೆಕ್ಷನ್ 168, 169, 170 ಅಡಿ ಪ್ರಕರಣ ದಾಖಲಿಸಲಾಗಿದೆ.

     

  • ವಿಷ್ಣುವರ್ಧನ್ ಓದಿದ ಶಾಲೆ ಮುಚ್ಚಲು ಸಿದ್ಧತೆ- ಸರ್ಕಾರದ ಕ್ರಮಕ್ಕೆ ವ್ಯಾಪಕ ಆಕ್ರೋಶ

    ವಿಷ್ಣುವರ್ಧನ್ ಓದಿದ ಶಾಲೆ ಮುಚ್ಚಲು ಸಿದ್ಧತೆ- ಸರ್ಕಾರದ ಕ್ರಮಕ್ಕೆ ವ್ಯಾಪಕ ಆಕ್ರೋಶ

    ಬೆಂಗಳೂರು: ಕನ್ನಡ ಶಾಲೆಗಳನ್ನು ಮುಚ್ಚಲ್ಲ ಅಂತಾ ಬಡಾಯಿ ಕೊಚ್ಚಿಕೊಳ್ಳೋ ಸರ್ಕಾರ ಇದೀಗ ನಟ ವಿಷ್ಣುವರ್ಧನ್ ಓದಿದ ಶಾಲೆಯನ್ನೇ ಮುಚ್ಚಲು ಹೊರಟಿದೆ.

    ಚಾಮರಾಜಪೇಟೆಯಲ್ಲಿರೋ ಸರ್ಕಾರಿ ಅನುದಾನಿತ ಮಾಡಲ್ ಕನ್ನಡ ಹಿರಿಯ ಪ್ರಾಥಮಿಕ ಶಾಲೆಗೆ ಬೀಗ ಜಡಿಯಲು ಸರ್ಕಾರ ಮುಂದಾಗಿದೆ. ಈ ಹಿಂದೆ ಈ ಶಾಲೆಗೆ ಸೇರಬೇಕಾದ್ರೆ ಪ್ರತಿಭಾನ್ವಿತ ವಿದ್ಯಾರ್ಥಿಯಾಗಿರಬೇಕಿತ್ತು ಅಥವಾ ರಾಜಕಾರಣಿಗಳ ರೆಕಮೆಂಡ್ ಬೇಕಿತ್ತು.

    ಈ ಶಾಲೆಯಲ್ಲಿ ಶಿಕ್ಷಕರ ಕೊರತೆ ಇದ್ದು, ಶಾಲೆಯ ಮಕ್ಕಳು ಮತ್ತು ಶಿಕ್ಷಕರು ಹಲವು ಬಾರಿ ಶಿಕ್ಷಕರನ್ನು ನೇಮಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಆದ್ರೂ ಸರ್ಕಾರ ಶಿಕ್ಷಕರ ನೇಮಕಕ್ಕೆ ಮುಂದಾಗದ ಕಾರಣ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗಿದೆ. 2 ತಿಂಗಳ ಹಿಂದೆ ಪ್ರೌಢಶಾಲೆಯನ್ನು ಮುಚ್ಚಿದ್ದ ಸರ್ಕಾರ ಈಗ ಮಕ್ಕಳ ಕೊರತೆಯನ್ನೇ ನೆಪವಾಗಿಟ್ಟುಕೊಂಡು ಪ್ರಾಥಮಿಕ ಶಾಲೆಯನ್ನು ಮುಚ್ಚಲು ಮುಂದಾಗಿದೆ ಎನ್ನಲಾಗಿದೆ.