Tag: ಚಾಮರಾಜನಗರ ಪೊಲೀಸ್‌

  • ಚಾಮರಾಜನಗರ ಡಿಸಿ ಕಚೇರಿ ಸ್ಫೋಟಿಸುತ್ತೇವೆ – ಬೆದರಿಕೆ ಸಂದೇಶ, ಎಫ್‌ಐಆರ್ ದಾಖಲು

    ಚಾಮರಾಜನಗರ ಡಿಸಿ ಕಚೇರಿ ಸ್ಫೋಟಿಸುತ್ತೇವೆ – ಬೆದರಿಕೆ ಸಂದೇಶ, ಎಫ್‌ಐಆರ್ ದಾಖಲು

    ಚಾಮರಾಜನಗರ: ಇಲ್ಲಿನ ಜಿಲ್ಲಾಡಳಿತ ಭವನವನ್ನು (DC Office) ಸ್ಫೋಟಿಸುವುದಾಗಿ ಶುಕ್ರವಾರ ಬೆಳಗ್ಗೆ ಇಮೇಲ್ ಸಂದೇಶ ಬಂದಿದ್ದು, ಪೊಲೀಸರು ಶೋಧಕಾರ್ಯ ನಡೆಸಿ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.

    ತಮಿಳುನಾಡಿನ (TamilNadu) ಬಾಂಬ್ ಬ್ಲಾಸ್ಟ್ ಪ್ರಕರಣಗಳನ್ನು ಉಲ್ಲೇಖಿಸಿ ಮೇಲ್ ಸಂದೇಶ ರವಾನೆ ಮಾಡಲಾಗಿದ್ದು, ಡಿಎಂಕೆ ನಾಯಕರ ಹೆಸರು ಉಲ್ಲೇಖಿಸಿ ಕೊನೆಯಲ್ಲಿ ಅಲ್ಲಾಹು ಅಕ್ಬರ್ ಎಂದು ಬರೆಯಲಾಗಿದೆ. ಶುಕ್ರವಾರ ಮಧ್ಯಾಹ್ನ 3 ಗಂಟೆ ವೇಳೆಗೆ ಪೈಪ್‌ಗಳಲ್ಲಿ ಅಡಗಿಸಿಟ್ಟಿರುವ ಬಾಂಬ್‌ಗಳನ್ನು ಸ್ಫೋಟಗೊಳಿಸುದಾಗಿ ಅಪರಿಚಿತ ವ್ಯಕ್ತಿಯಿಂದ ಇಮೇಲ್‌ಗೆ ಬೆದರಿಕೆ ಸಂದೇಶ ಬಂದಿತ್ತು. ಇದನ್ನೂ ಓದಿ: ರಾಜೀನಾಮೆಗೆ ಡೆಡ್‌ಲೈನ್‌ ಫಿಕ್ಸ್ ಮಾಡಿದ್ದು ಯತ್ನಾಳ್, ನಾನಲ್ಲ: ಶಿವಾನಂದ ಪಾಟೀಲ್

    ಸಂದೇಶ ತಿಳಿಯುತ್ತಿದ್ದಂತೆ ಡಿಸಿ ಶಿಲ್ಪಾನಾಗ್ ಹಾಗೂ ಎಸ್ಪಿ ಡಾ.ಬಿ.ಟಿ.ಕವಿತಾ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಂಡರು. ಬೆಳಗ್ಗೆ ಕಚೇರಿಯಲ್ಲಿದ್ದ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಹೊರಕ್ಕೆ ಕಳುಹಿಸಿ, ಜಿಲ್ಲಾಡಳಿತ ಭವನ ಆವರಣದೊಳಕ್ಕೆ ಸಾರ್ವಜನಿಕರ ಭೇಟಿಯನ್ನು ನಿರ್ಬಂಧಿಸಲಾಯಿತು. ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನದಳವು ಜಿಲ್ಲಾಡಳಿತ ಭವನದಲ್ಲಿ ಶೋಧ ಕಾರ್ಯ ನಡೆಸುತ್ತಿದೆ. ಇದನ್ನೂ ಓದಿ: ಅಶ್ರಫ್ ಕೇಸಲ್ಲಿ 20 ಜನ್ರ ಅರೆಸ್ಟ್, ಹಿಂದೂ ಕಾರ್ಯಕರ್ತನ ಹತ್ಯೆ ಕೇಸಲ್ಲಿ ಇನ್ನೂ ಬಂಧನ ಯಾಕಿಲ್ಲ: ರೇಣುಕಾಚಾರ್ಯ ಆಕ್ರೋಶ

    ಜಿಲ್ಲಾಧಿಕಾರಿ ಕಚೇರಿಗೆ ಬಾಂಬ್ ಬೆದರಿಕೆ (Bomb Treat) ಕುರಿತು ಚಾಮರಾಜನಗರ ಎಸ್ಪಿ ಡಾ.ಕವಿತಾ ಅವರು ಮಾತನಾಡಿ, ಡಿಸಿ ಕಚೇರಿಗೆ ಮೇಲ್ ಬಂದಿದೆ. 3 ಗಂಟೆಯೊಳಗೆ ಕಚೇರಿ ಖಾಲಿ ಮಾಡಬೇಕು. ಮಧ್ಯಾಹ್ನ 3 ಗಂಟೆಯೊಳಗೆ ಬಾಂಬ್ ಬ್ಲಾಸ್ಟ್ ಮಾಡ್ತೇವೆ ಅಂತ ಮೇಲ್‌ನಲ್ಲಿ ತಿಳಿಸಲಾಗಿತ್ತು. ನೌಕರರು ಹಾಗೂ ಸಾರ್ವಜನಿಕರನ್ನು ಹೊರಗೆ ಕಳಿಸಿ ಜಿಲ್ಲಾಡಳಿತ ಭವನ ಸಂಪೂರ್ಣ ತಪಾಸಣೆ ಮಾಡಲಾಗಿದೆ. ಮೇಲ್‌ನಲ್ಲಿ ತಿಳಿಸಿರುವಂತೆ ಯಾವುದೇ ವಸ್ತು ಸಿಕ್ಕಿಲ್ಲ. ಜಿಲ್ಲಾಡಳಿತ ನೀಡಿರುವ ದೂರಿನ ಮೇರೆಗೆ ಎಫ್‌ಐಆರ್ ದಾಖಲಿಸಲಾಗಿದೆ. ಜಿಲ್ಲಾಧಿಕಾರಿ ಕಚೇರಿಗೆ ತಾತ್ಕಲಿಕವಾಗಿ ಪೊಲೀಸ್ ರಕ್ಷಣೆ ಒದಗಿಸಲಾಗುವುದು. ಇಮೇಲ್ ಎಲ್ಲಿಂದ ಬಂತು ಎಂಬುದರ ಬಗ್ಗೆ ತನಿಖೆ ನಡೆಸಲು ವಿಶೇಷ ತಂಡ ರಚಿಸಲಾಗಿದೆ ಎಂದರು.

  • ಚಾಮರಾಜನಗರದಲ್ಲಿ ಭೀಕರ ಅಪಘಾತ – ಐವರು ಮಾದಪ್ಪ ಭಕ್ತರ ದುರ್ಮರಣ

    ಚಾಮರಾಜನಗರದಲ್ಲಿ ಭೀಕರ ಅಪಘಾತ – ಐವರು ಮಾದಪ್ಪ ಭಕ್ತರ ದುರ್ಮರಣ

    ಚಾಮರಾಜನಗರ: ಟಿಪ್ಪರ್‌ ಹಾಗೂ ಕಾರಿನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಐವರು ಮಾದಪ್ಪ ಭಕ್ತರು ಸ್ಥಳದಲ್ಲೇ ದುರ್ಮರಣಕ್ಕೀಡಾಗಿರುವ ದಾರುಣ ಘಟನೆ ಚಾಮರಾಜನಗರದಲ್ಲಿ (Chamarajanagara) ನಡೆದಿದೆ.

    ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಚಿಕ್ಕಿಂದುವಾಡಿ ಸಮೀಪ ಘಟನೆ ನಡೆದಿದೆ. ಡಿಕ್ಕಿ ರಭಸಕ್ಕೆ ಕಾರು ಉರುಳಿದ್ದು, ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತಪಟ್ಟ ಐವರೂ ಸಹ ಮಂಡ್ಯ (Mandya) ಮೂಲದವರು ಎಂದು ತಿಳಿದುಬಂದಿದೆ.

    ಮಾದಪ್ಪನ ಭಕ್ತರು ಕೊಳ್ಳೇಗಾಲ ಕಡೆಯಿಂದ ಮಹದೇಶ್ವರ ಬೆಟ್ಟದ ಕಡೆಗೆ ಹೋರಟಿದ್ದರು ಎನ್ನಲಾಗಿದೆ. ಸದ್ಯ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಕೊಳ್ಳೇಗಾಲ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.