Tag: ಚಾನ್ಸಲರ್

  • ಮಾಸ್ಕ್ ಮರೆತಿದ್ದಕ್ಕೆ ಒಂದು ಕ್ಷಣ ತಬ್ಬಿಬ್ಬಾದ ಚಾನ್ಸಲರ್ ಮಾರ್ಕೆಲ್

    ಮಾಸ್ಕ್ ಮರೆತಿದ್ದಕ್ಕೆ ಒಂದು ಕ್ಷಣ ತಬ್ಬಿಬ್ಬಾದ ಚಾನ್ಸಲರ್ ಮಾರ್ಕೆಲ್

    – 10 ಲಕ್ಷಕ್ಕೂ ಅಧಿಕ ವ್ಯೂವ್, ವೀಡಿಯೋ ವೈರಲ್

    ಬರ್ಲಿನ್: ಅಧಿವೇಶನದಲ್ಲಿ ಮಾಸ್ಕ್ ಮರೆತಿದ್ದಕ್ಕೆ ಚಾನ್ಸಲರ್ ಆಂಜೆಲಾ ಮಾರ್ಕೆಲ್ ಒಂದು ಕ್ಷಣ ತಬ್ಬಿಬ್ಬಾದ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಕೊರೊನಾ ಎರಡನೇ ಅಲೆಯ ಆತಂಕದ ನಡುವೆ ಜರ್ಮನಿಯಲ್ಲಿ ಅಧಿವೇಶನ ಆರಂಭವಾಗಿದ್ದು, ಎಲ್ಲ ಸದಸ್ಯ ಮತ್ತು ಸಿಬ್ಬಂದಿಗೆ ಮಾಸ್ಕ್ ಕಡ್ಡಾಯ ಮಾಡಲಾಗಿದೆ.

    ಶುಕ್ರವಾರ ಮಾರ್ಕೆಲ್ ಸಂಸತ್ ಉದ್ದೇಶಿಸಿ ಮಾತನಾಡಿ ತಮ್ಮ ಆಸನದಲ್ಲಿ ಆಸೀನರಾದರು. ಫೈಲ್ ಟೇಬಲ್ ಮೇಲಿಟ್ಟು ಕುಳಿತ ನಂತರ ತಾವು ಮಾಸ್ಕ್ ಪೊಡಿಯಮ್ ಮೇಲೆ ಮರೆತಿರೋದು ಜ್ಞಾಪಕಕ್ಕೆ ಬಂದಿದೆ. ಒಂದು ಕ್ಷಣ ಗಲಿಬಿಲಿಗೊಂಡ ಮಾರ್ಕೆಲ್ ಓಡಿ ಹೋಗಿ ಪೊಡಿಯಮ್ ಮೇಲಿದ್ದ ಮಾಸ್ಕ್ ತೆಗೆದುಕೊಂಡು ನಿಟ್ಟುಸಿರು ಬಿಟ್ಟಿದ್ದಾರೆ.

    ಸ್ಥಳೀಯ ನ್ಯೂಸ್ ಏಜೆನ್ಸಿ ಈ ವೀಡಿಯೋ ಹಂಚಿಕೊಂಡಿದ್ದು, ಆಂಜೆಲಾ ಮಾರ್ಕೆಲ್ ಭಾಷಣದ ಬಳಿಕ ತಮ್ಮ ಮಾಸ್ಕ್ ಪೊಡಿಯಮ್ ಮೇಲೆಯೇ ಮರೆತರು. ನಂತರ ಅವಸರವಾಗಿ ಬಂದು ಮಾಸ್ಕ್ ಎತ್ತಿಕೊಂಡ ಈ ವೀಡಿಯೋ 10 ಲಕ್ಷಕ್ಕೂ ಅಧಿಕ ವ್ಯೂವ್ ಪಡೆದುಕೊಂಡಿದೆ ಎಂದು ಬರೆಯಲಾಗಿದೆ.