Tag: ಚಾಟ್ ಲಾಕ್

  • ಶೀಘ್ರವೇ ಬರಲಿದೆ ವಾಟ್ಸಪ್ ಚಾಟ್ ಲಾಕ್ ಮಾಡೋ ಹೊಸ ಫೀಚರ್

    ಶೀಘ್ರವೇ ಬರಲಿದೆ ವಾಟ್ಸಪ್ ಚಾಟ್ ಲಾಕ್ ಮಾಡೋ ಹೊಸ ಫೀಚರ್

    ವಾಷಿಂಗ್ಟನ್: ನಿಮ್ಮ ಮೊಬೈಲ್ ಫೋನ್ ಅನ್ನು ಇತರರಿಗೆ ನೀಡಿದಾಗ ಅವರು ನಿಮ್ಮ ಮೆಸೆಜಿಂಗ್ ಆ್ಯಪ್‌ಗಳ ಖಾಸಗಿ ಚಾಟ್‌ಗಳನ್ನು ನೋಡುತ್ತಾರೆ ಎಂಬ ಭೀತಿ ಪ್ರತಿಯೊಬ್ಬರಿಗೂ ಇರುತ್ತದೆ. ಆದರೆ ಈ ಒಂದು ಸಮಸ್ಯೆಗೆ ಇದೀಗ ವಾಟ್ಸಪ್ (WhatsApp) ಪರಿಹಾರವನ್ನು ಶೀಘ್ರವೇ ತರಲು ಯೋಜನೆ ನಡೆಸಿದೆ. ಈ ಮೂಲಕ ವಾಟ್ಸಪ್ ಮತ್ತೆ ಬಳಕೆದಾರರ ಗೌಪ್ಯತೆ ಕಾಪಾಡುವಲ್ಲಿ ಇನ್ನಷ್ಟು ಒತ್ತು ನೀಡಲು ಮುಂದಾಗುತ್ತಿದೆ.

    ಶಿಯೋಮಿ ಸೇರಿದಂತೆ ಕೆಲವೇ ಕಂಪನಿಗಳ ಸ್ಮಾರ್ಟ್ ಫೋನ್‌ಗಳಲ್ಲಿ ನಿರ್ದಿಷ್ಟ ಅಪ್ಲಿಕೇಶನ್‌ಗಳಿಗೆ ಲಾಕ್ ಮಾಡುವಂತದ ಫೀಚರ್ ಅನ್ನು ನೀಡಲಾಗಿದೆ. ನಿಮ್ಮ ಸ್ನೇಹಿತರು ಅಥವಾ ಯಾರಾದರೂ ನಿಮ್ಮ ಫೋನ್ ಅನ್ನು ಯಾವುದೋ ಕಾರಣಕ್ಕೆ ಕೇಳಿದಾಗ ಹೋಂ ಸ್ಕ್ರೀನ್ ಅನ್‌ಲಾಕ್ ಮಾಡಿ ಕೊಡಬೇಕಾಗುತ್ತದೆ. ಆಗ ನಿಮ್ಮ ಪರ್ಸನಲ್ ಚಾಟ್‌ಗಳನ್ನು ಅವರು ಏನಾದ್ರೂ ನೋಡಿದ್ರೆ? ಎನ್ನುವ ಭೀತಿ ನಿಮ್ಮಲ್ಲಿ ಮೂಡುತ್ತದೆ.

    ಇದೀಗ ವಾಟ್ಸಪ್ ನಿರ್ದಿಷ್ಟ ಪರ್ಸನಲ್ ಚಾಟ್‌ಗಳಿಗೂ ಲಾಕಿಂಗ್ ಫೀಚರ್ (Chat Lock feature) ಅನ್ನು ತರಲಿದೆ ಎಂದು ವರದಿಯಾಗಿದೆ. ಈ ಒಂದು ಫೀಚರ್ ವಾಟ್ಸಪ್ ಕಾರ್ಯರೂಪಕ್ಕೆ ತಂದಿತು ಎಂದಾದರೆ, ನೀವು ಒಂದು ವೇಳೆ ಯಾರಿಗಾದರೂ ಫೋನ್ ಅನ್ನು ಅನ್‌ಲಾಕ್ ಮಾಡಿ ನೀಡಿದಾಗ ನಿಮ್ಮ ಪರ್ಸನಲ್ ಚಾಟ್‌ಗಳು ಸುರಕ್ಷಿತವಾಗಿರುತ್ತವೆ. ಇದನ್ನೂ ಓದಿ: Twitter logo: ಟ್ವಿಟ್ಟರ್‌ ‘ನೀಲಿ ಹಕ್ಕಿ’ ನಾಯಿ ಮರಿಯಾಯ್ತು!

    ಈ ಹೊಸ ಫೀಚರ್ ಇದೀಗ ವಾಟ್ಸಪ್‌ನ ಬೀಟಾ ಆವೃತ್ತಿಯಲ್ಲಿ ಪರೀಕ್ಷೆಯ ಹಂತದಲ್ಲಿದೆ ಎಂದು ವರದಿಯಾಗಿದೆ. ಇದರ ಪ್ರಕಾರ ನೀವು ಯಾರಾದರೂ ಆತ್ಮೀಯರೊಂದಿಗಿನ ಚಾಟ್ ಅನ್ನು ಲಾಕ್ ಮಾಡಬಹುದು. ಒಂದು ವೇಳೆ ನೀವು ನಿಮ್ಮ ಫೋನ್ ಅನ್ನು ಅನ್‌ಲಾಕ್ ಮಾಡಿ ಯಾರಿಗಾದರೂ ಕೊಟ್ಟಿದ್ದೀರಿ ಎಂದಾದರೆ, ಅವರು ನಿಮ್ಮ ವಾಟ್ಸಪ್ ಅನ್ನು ತೆರೆದರೂ ಲಾಕ್ ಮಾಡಲಾದ ಚಾಟ್ ಅನ್ನು ನೋಡಲು ಸಾಧ್ಯವಾಗುವುದಿಲ್ಲ. ಏಕೆಂದರೆ ಲಾಕ್ ಮಾಡಿದ ಚಾಟ್ ಅನ್ನು ವೀಕ್ಷಿಸಲು ಮತ್ತೆ ಫಿಂಗರ್ ಪ್ರಿಂಟ್ ಅಥವಾ ಪಾಸ್‌ಕೋಡ್ ನಮೂದಿಸುವುದು ಅನಿವಾರ್ಯವಾಗುತ್ತದೆ.

    ಇದೀಗ ಫೀಚರ್ ಆಂಡ್ರಾಯ್ಡ್ ಬೀಟಾದಲ್ಲಿ ಪರೀಕ್ಷಿಸಲಾಗುತ್ತಿದೆ. ಈ ಫೀಚರ್ ಬಳಕೆದಾರರಿಗೆ ನಿಧಾನವಾಗಿ ಹೊರತರಲು ಪ್ರಾರಂಭಿಸಿದ ಬಳಿಕ ಐಒಎಸ್ ಬಳಕೆದಾರರಿಗೆ ಕೂಡಾ ಪಾರಂಭಿಸಲಾಗುತ್ತದೆ ಎನ್ನಲಾಗಿದೆ. ಇದನ್ನೂ ಓದಿ: ಉಚಿತ ಫೋನ್, ರೀಚಾರ್ಜ್: ಸರ್ಕಾರದ ಹೆಸರಲ್ಲಿ ನಕಲಿ ವಾಟ್ಸಪ್ ಮೆಸೇಜ್ – ಗ್ರಾಹಕರೇ ಎಚ್ಚರ