Tag: ಚಾಟ್ ಜಿಪಿಟಿ

  • ChatGPTಗೆ ಸೆಡ್ಡು ಹೊಡೆಯಲು ತನ್ನದೇ ಹೊಸ ಕಂಪನಿ ತೆರೆದ ಮಸ್ಕ್

    ChatGPTಗೆ ಸೆಡ್ಡು ಹೊಡೆಯಲು ತನ್ನದೇ ಹೊಸ ಕಂಪನಿ ತೆರೆದ ಮಸ್ಕ್

    ವಾಷಿಂಗ್ಟನ್: ವಿಶ್ವದ ಶ್ರೀಮಂತ ಎಲೋನ್ ಮಸ್ಕ್ (Elon Musk) ಬುಧವಾರ ಹೊಸ ಕೃತಕ ಬುದ್ಧಿಮತ್ತೆಯ (Artificial Intelligence) ಸ್ಟಾರ್ಟ್ ಅಪ್ ‘ಎಕ್ಸ್ಎಐ’ (xAI) ಅನ್ನು ಪ್ರಾರಂಭಿಸಿದ್ದಾರೆ. ಇತ್ತೀಚೆಗೆ ಎಐ (AI) ಲೋಕದಲ್ಲಿ ಭಾರೀ ಸದ್ದು ಮಾಡಿದ್ದ ಓಪನ್ ಎಐನ (OpenAI) ಚಾಟ್ ಜಿಪಿಟಿಗೆ (ChatGPT) ಸೆಡ್ಡು ಹೊಡೆಯಲು ಇದೀಗ ಮಸ್ಕ್ ಮುಂದಾಗಿದ್ದಾರೆ.

    ಈಗಾಗಲೇ ಎಲೆಕ್ಟ್ರಿಕ್ ಕಾರು ತರಾರಿಕಾ ಕಂಪನಿ ಟೆಸ್ಲಾ, ರಾಕೆಟ್ ಉಡಾವಣಾ ಕಂಪನಿ ಸ್ಪೇಸ್‌ಎಕ್ಸ್‌ನ ಸಿಇಒ ಮಾತ್ರವಲ್ಲದೇ ಟ್ವಿಟ್ಟರ್‌ನ ಮಾಲೀಕನಾಗಿರುವ ಮಸ್ಕ್ ಈಗ ಎಐ ಲೋಕದಲ್ಲಿ ಹೊಸ ಹೆಜ್ಜೆ ಇಟ್ಟಿದ್ದಾರೆ.

    ಈ ಹಿಂದೆ ಮಸ್ಕ್ ಎಐ ಅಭಿವೃದ್ಧಿಯನ್ನು ನಿಲ್ಲಿಸಬೇಕು. ಇದರಿಂದ ದೊಡ್ಡ ಅಪಾಯದ ಸಾಧ್ಯತೆಯಿದೆ. ಈ ವಲಯದಲ್ಲಿ ನಿಯಂತ್ರಣದ ಅಗತ್ಯವಿದೆ. ಇದು ನಾಗರಿಕತೆಯ ವಿನಾಶಕ್ಕೆ ಕಾರಣವಾಗಬಹುದು ಎಂದು ಪದೇ ಪದೇ ಕಳವಳ ವ್ಯಕ್ತಪಡಿಸಿದ್ದರು. ಇದನ್ನೂ ಓದಿ: ಭಾರತದಲ್ಲಿ 20 ಲಕ್ಷಕ್ಕೆ ಕಾರು – ಕೇಂದ್ರದ ಜೊತೆ ಟೆಸ್ಲಾ ಮಾತುಕತೆ

    ಇದೀಗ ತನ್ನದೇ ಎಐ ಕಂಪನಿಯನ್ನು ಪ್ರಾರಂಭ ಮಾಡಿ ಮಾಹಿತಿಯನ್ನು ಹಂಚಿಕೊಂಡಿರುವ ಮಸ್ಕ್, ಸುರಕ್ಷಿತ ಎಐ ಅನ್ನು ನಿರ್ಮಿಸುವ ತನ್ನ ಯೋಜನೆಯನ್ನು ವಿವರಿಸಿದ್ದಾರೆ. ಎಐಗೆ ನೈತಿಕತೆಯನ್ನು ಸ್ಪಷ್ಟವಾಗಿ ಪ್ರೋಗ್ರಾಮಿಂಗ್ ಮಡುವ ಬದಲು ಅವರು ಎಕ್ಸ್ಎಐಯಲ್ಲಿ ಹೆಚ್ಚಿನ ಕುತೂಹಲಕಾರಿ ಅಂಶವನ್ನು ರಚಿಸಲು ಪ್ರಯತ್ನಿಸುತ್ತಿರುವುದಾಗಿ ತಿಳಿಸಿದ್ದಾರೆ.

    ಮನುಷ್ಯರಿಗಿಂತಲೂ ಚುರುಕಾದ ಸೂಪರ್ ಇಂಟೆಲಿಜೆನ್ಸ್ ಅಥವಾ ಕೃತಕ ಬುದ್ಧಿಮತ್ತೆ ಇನ್ನು ಕೇವಲ 5-6 ವರ್ಷಗಳಲ್ಲಿ ಬರಲಿದೆ ಎಂದು ಮಸ್ಕ್ ಭವಿಷ್ಯ ನುಡಿದಿದ್ದಾರೆ.

    ಮಸ್ಕ್ ಈ ಹಿಂದೆ 2015ರಲ್ಲಿ ಓಪನ್ ಎಐನ ಸಹ ಸಂಸ್ಥಾಪಕರಾಗಿದ್ದರು. ಆದರೆ 2018ರಲ್ಲಿ ಅವರು ಕಂಪನಿಯ ಮಂಡಳಿಯಿಂದ ಕೆಳಗಿಳಿದರು. ಓಪನ್ ಎಐನಲ್ಲಿ ಮೈಕ್ರೊಸಾಫ್ಟ್ ಹೂಡಿಕೆ ಮಾಡುತ್ತಿದೆ. ಇದನ್ನೂ ಓದಿ: ಟ್ವಿಟ್ಟರ್‌ಗಿಂತ ಥ್ರೆಡ್ಸ್‌ ಭಿನ್ನ ಹೇಗೆ? ವಿಶೇಷತೆ ಏನು?

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ICC ಟೂರ್ನಿಗಳಲ್ಲಿ ಟೀಂ ಇಂಡಿಯಾ ಫೇಲ್ ಆಗ್ತಿರೋದೇಕೆ? – ಕಾರಣ ತಿಳಿಸಿದ ChatGPT

    ICC ಟೂರ್ನಿಗಳಲ್ಲಿ ಟೀಂ ಇಂಡಿಯಾ ಫೇಲ್ ಆಗ್ತಿರೋದೇಕೆ? – ಕಾರಣ ತಿಳಿಸಿದ ChatGPT

    ಮುಂಬೈ: 2ನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್‌ನಲ್ಲಿ (WTC) ಭಾರತದ ಸೋಲು ದೊಡ್ಡ ಮಟ್ಟದಲ್ಲಿ ಸದ್ದು ಮಾಡ್ತಿದೆ. ಈ ನಡುವೆ ಕೃತಕ ಬುದ್ಧಿಮತ್ತೆ ಚಾಚ್‌ಜಿಪಿಟಿ (ChatGPT) ಐಸಿಸಿ ಟೂರ್ನಿಗಳಲ್ಲಿ (ICC Tournament) ಟೀಂ ಇಂಡಿಯಾ ಏಕೆ ವಿಫಲವಾಗುತ್ತಿದೆ ಎಂಬ ಅಂಶಗಳನ್ನ ಪಟ್ಟಿಮಾಡಿದೆ.

    ಹೌದು. 2023ರ ವಿಶ್ವಟೆಸ್ಟ್ ಚಾಂಪಿಯನ್‌ಶಿಪ್ 2ನೇ ಆವೃತ್ತಿಯಲ್ಲಿ ಆಸ್ಟ್ರೇಲಿಯಾ (Australia) ಮೊದಲ ಬಾರಿಗೆ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡಿದೆ. ಭಾರತದ ವಿರುದ್ಧ 209 ರನ್‌ಗಳ ಅಂತರದಿಂದ ಗೆಲುವು ಸಾಧಿಸಿದ ಆಸ್ಟ್ರೇಲಿಯಾ, T20 ವಿಶ್ವಕಪ್, ಚಾಂಪಿಯನ್ ಟ್ರೋಫಿ ಹಾಗೂ ಟೆಸ್ಟ್ ಚಾಂಪಿಯನ್ ಶಿಪ್ ಮೂರು ಫಾರ್ಮ್ಯಾಟ್‌ನಲ್ಲೂ ಚಾಂಪಿಯನ್ ಪಟ್ಟ ಗೆದ್ದ ಏಕೈಕ ತಂಡವಾಗಿ ಹೊರಹೊಮ್ಮಿದೆ. ಭಾರತ ಸತತ 2ನೇ ಬಾರಿಯೂ ಸೋಲನುಭವಿಸಿ ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿದೆ. ಆದ್ರೆ ಭಾರತ ಐಸಿಸಿ ಟೂರ್ನಿಗಳಲ್ಲಿ ಏಕೆ ವಿಫಲವಾಗುತ್ತಿದೆ? ಹೋರಾಟದ ಹೊರತಾಗಿಯೂ ಏಕೆ ಇಷ್ಟೊಂದು ಸಮಸ್ಯೆ ಅನುಭವಿಸುತ್ತಿದೆ? ಎಂಬುದಕ್ಕೆ ಕೆಲವು ಅಂಶಗಳನ್ನ ಕೃತಕ ಬುದ್ಧಿಮತ್ತೆ ಚಾಚ್‌ಜಿಪಿಟಿ ಗುರುತಿಸಿದೆ.

    ಹೆಚ್ಚಿನ ನಿರೀಕ್ಷೆ ಮತ್ತು ಒತ್ತಡ:

    ದೇಶದಲ್ಲಿ ಕ್ರಿಕೆಟ್ ಹೆಚ್ಚಿನ ಸಂಖ್ಯೆಯ ಅಭಿಮಾನಿಗಳನ್ನ ಹೊಂದಿರುವುದರಿಂದ ತಂಡವು ಹೆಚ್ಚಿನ ನಿರೀಕ್ಷೆಯೊಂದಿಗೆ ಆಟವಾಡಲು ಕಣಕ್ಕಿಳಿಯುತ್ತದೆ. ಐಸಿಸಿ ಈವೆಂಟ್‌ಗಳಲ್ಲಿ ಉನ್ನತಮಟ್ಟದಲ್ಲಿ ಪ್ರದರ್ಶನ ನೀಡಬೇಕೆಂಬ ನಿರೀಕ್ಷೆಯೂ ಆಟಗಾರರ ಮನಸ್ಥಿತಿ ಮತ್ತು ಪ್ರರ್ದಶನದ ಮೇಲೆ ಪರಿಣಾಮ ಬೀರಬಹುದು. ಇದನ್ನೂ ಓದಿ: ಇಷ್ಟಕ್ಕೆ ಮುಗಿದಿಲ್ಲ – ವಿಶ್ವಟೆಸ್ಟ್ ಚಾಂಪಿಯನ್ ಶಿಪ್ ಸೋಲಿನ ಬಳಿಕ ಗಿಲ್ ಖಡಕ್ ರಿಯಾಕ್ಷನ್

    ಸವಾಲಿನ ಪರಿಸ್ಥಿತಿಗಳು:

    ಐಸಿಸಿ ಈವೆಂಟ್‌ಗಳು ಪ್ರಪಂಚದ ವಿವಿಧ ಭಾಗಗಳಲ್ಲಿ ನಡೆಯುತ್ತದೆ. ಆದ್ದರಿಂದ ಪರಿಚಯವಿಲ್ಲದ ಪಿಚ್‌ಗಳು, ಬದಲಾದ ಹವಾಮಾನ ಪರಿಸ್ಥಿತಿಗೆ ಹೊಂದಿಕೊಂಡು ಆಡವಾಡುವುದು ಭಾರತ ತಂಡಕ್ಕೆ ಸವಾಲನ್ನು ಉಂಟುಮಾಡುತ್ತದೆ. ಇದನ್ನೂ ಓದಿ: WTC Final: 3ನೇ ದಿನದಲ್ಲಿ ಜಡೇಜಾ ಜಾದು – ಆಸ್ಟ್ರೇಲಿಯಾಕ್ಕೆ 296 ರನ್‌ಗಳ ಮುನ್ನಡೆ

    ಅನುಭವದ ಕೊರತೆ:

    ಐಸಿಸಿ ಟೂರ್ನಿಗಳಲ್ಲಿ ಭಾಗವಹಿಸುವ ಇತರ ತಂಡಗಳಿಗೆ ಹೋಲಿಸಿದರೆ ಯುವ ಅಥವಾ ಅನುಭವಿ ತಂಡವನ್ನು ಭಾರತ ಹೊಂದಿರುತ್ತದೆ. ಹೆಚ್ಚಿನ ಒತ್ತಡಗಳು ಇದ್ದಂತಹ ಸಂದರ್ಭದಲ್ಲಿ ಅನುಭವದ ಕೊರತೆಯೂ ತಂಡದ ಪ್ರದರ್ಶನದ ಮೇಲೆ ಪರಿಣಾಮ ಬೀರುತ್ತದೆ.

    ನಿರ್ಧಾರ ತಂತ್ರಗಾರಿಕೆ:

    ಭಾರತ ತಂಡದ ಕಾರ್ಯತಂತ್ರಗಳು, ತಂಡದ ಆಯ್ಕೆ, ಕೋಚಿಂಗ್ ಸಿಬ್ಬಂದಿ ಹಾಗೂ ತಂಡದ ನಿರ್ವಹಣೆಯಿಂದ ರೂಪಿಸಲಾದ ನಿರ್ಧಾರಗಳೂ ಸಹ ಐಸಿಸಿ ಪ್ರಾಯೋಜಿತ ಟೂರ್ನಿ ಮೇಲೆ ಪರಿಣಾಮ ಉಂಟಾಗುತ್ತದೆ. ಇದನ್ನೂ ಓದಿ: ಮೋದಿ ಕ್ರೀಡಾಂಗಣದಲ್ಲಿ ಇಂಡೋ ಪಾಕ್ ಕದನ – ರಣರೋಚಕ ಪಂದ್ಯಕ್ಕಾಗಿ ಕಾಯ್ತಿದ್ದಾರೆ ಫ್ಯಾನ್ಸ್

    ಫಾರ್ಮ್ ಹಾಗೂ ಗಾಯದ ಸಮಸ್ಯೆ:

    ಇತರ ತಂಡಗಳಂತೆ ಭಾರತೀಯ ಕ್ರಿಕೆಟ್ ತಂಡದ ಪ್ರದರ್ಶನವು ಆಟಗಾರರ ಫಾರ್ಮ್ ಹಾಗೂ ಗಾಯದ ಸಮಸ್ಯೆಗಳ ಆಧಾರದ ಮೇಲೆ ಪ್ರಭಾವಿತವಾಗಿರುತ್ತೆ. ಪ್ರಮುಖ ಆಟಗಾರರು ಗಾಯದ ಸಮಸ್ಯೆಗಳಿಗೆ ತುತ್ತಾಗಿ ಹೊರಗುಳಿಯುವುದು ಹಾಗೂ ಫಾರ್ಮ್ ಕಳೆದುಕೊಳ್ಳುವುದು ಒಟ್ಟಾರೆ ಪ್ರದರ್ಶನದ ಮೇಲೆ ಪರಿಣಾಮ ಬೀರುತ್ತದೆ.

    ಪ್ರಬಲ ಪೈಪೋಟಿ:

    ಐಸಿಸಿ ಈವೆಂಟ್‌ಗಳಲ್ಲಿ ತಂಡಗಳು ಉತ್ತಮವಾಗಿರುವುದರಿಂದ ಪೈಪೋಟಿ ಸಹ ಪ್ರಬಲವಾಗಿಯೇ ಇರುತ್ತದೆ. ಭಾರತ ಸಹ ಕಠಿಣ ಸವಾಲುಗಳನ್ನು ಎದುರಿಸುತ್ತದೆ. ಉನ್ನತ ಮಟ್ಟದ ಸ್ಪರ್ಧೆಯು ಭಾರತ ಸೇರಿದಂತೆ ಯಾವುದೇ ತಂಡಕ್ಕೆ ಈ ಟೂರ್ನಿಗಲ್ಲಿ ಸತತವಾಗಿ ಮಿಂಚುವುದು (ಗೆಲುವು ಸಾಧಿಸುವುದು) ಸವಾಲಾಗಬಹುದು.

  • ChatGPT ಬಳಕೆಗೆ ಕಡಿವಾಣ ಹಾಕಲು ಬೆಂಗ್ಳೂರು ಕಾಲೇಜುಗಳ ನಿರ್ಧಾರ

    ChatGPT ಬಳಕೆಗೆ ಕಡಿವಾಣ ಹಾಕಲು ಬೆಂಗ್ಳೂರು ಕಾಲೇಜುಗಳ ನಿರ್ಧಾರ

    ಬೆಂಗಳೂರು: ಎಂಬಿಬಿಎಸ್ (MBBS) ಸೇರಿದಂತೆ ಇತರೆ ವೃತ್ತಿಗಳಿಗೆ ಸಹಾಯವಾಗಲಿದೆ ಎಂದು ಬಣ್ಣಿಸಲಾಗುತ್ತಿರುವ ಚಾಟ್ ಜಿಪಿಟಿ (Chat GPT) ಇದೀಗ ವಿದ್ಯಾರ್ಥಿಗಳ ಭಿವಿಷ್ಯಕ್ಕೆ ಮಾರಕವಾಗುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ.

    ಚಾಟ್ ಜಿಪಿಟಿ ಮಿತಿ ಮೀರಿದ ಬಳಕೆಯಿಂದ ವಿದ್ಯಾರ್ಥಿಗಳ (Students) ಶಿಕ್ಷಣಕ್ಕೆ ಕುತ್ತು ತರುವ ಆತಂಕ ಹುಟ್ಟಿಸಿದೆ. ಹೀಗಾಗಿ ಕಾಲೇಜು, ಶಿಕ್ಷಣ ಸಂಸ್ಥೆಗಳು ಈ ಸೇವೆ ಬಳಕೆಗೆ ಕಡಿವಾಣ ಹಾಕಲು ನಿರ್ಧಾರ ಮಾಡಿವೆ. ಇದನ್ನೂ ಓದಿ: ಅಮೆರಿಕದ ಅಣ್ವಸ್ತ್ರ ತಾಣದ ಮೇಲೆ ಚೀನಾದ ಬೇಹುಗಾರಿಕಾ ಬಲೂನು ಹಾರಾಟ

    ಹೌದು, ಬೆಂಗಳೂರಿನ ಆರ್.ವಿ ಎಂಜಿನಿಯರಿಂಗ್ ಕಾಲೇಜು (R. V. College of Engineering) ಚಾಟ್ ಜಿಪಿಟಿ ಬಳಕೆಗೆ ಕಡಿವಾಣ ಹಾಕಿದೆ. ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರಿಗೆ ಬಳಕೆ ಬಗ್ಗೆ ಕೆಲ ನಿಯಮ ಜಾರಿಗೆ ತಂದಿದೆ. ಲ್ಯಾಬ್ ಹಾಗೂ ಪ್ರಾಯೋಗಿಕ ಪರೀಕ್ಷೆಗಳ ವೇಳೆ ಬಳಕೆ ಮಾಡದಂತೆ ನಿರ್ಬಂಧ ವಿಧಿಸಿದೆ.

    ಓಪನ್‌ಎಐ (OpenAI) ಕೃತಕ ಬುದ್ಧಿಮತ್ತೆ ಸಂಶೋಧನಾ ಕಂಪನಿ ಅಭಿವೃದ್ಧಿಪಡಿಸಿದ ಚಾಟ್ ಜಿಪಿಟಿ ಇದಾಗಿದೆ. ಟೆಕ್ ವಲಯದಲ್ಲಿ ದೊಡ್ಡ ಮಟ್ಟಿಗೆ ಸದ್ದು ಮಾಡುತ್ತಿದ್ದು, ಚಾಟ್ ಜಿಪಿಟಿಯ ಪ್ರಯೋಜನದ ಜೊತೆ ಜೊತೆಯೇ ಅದರ ವಿರುದ್ಧ ಅಪಸ್ವರ ಸಹ ಕೇಳಿಬರ್ತಿದೆ. ಇದನ್ನೂ ಓದಿ: ಯುದ್ಧ ವಿಮಾನಗಳನ್ನು ಕಳುಹಿಸುತ್ತೇವೆ – ಉಕ್ರೇನ್ ಬೆಂಬಲಕ್ಕೆ ನಿಂತ ಬ್ರಿಟನ್

    ಕಾಲೇಜು ವಿದ್ಯಾರ್ಥಿಗಳಂತೂ (College Students) ಇದರಲ್ಲಿ ಹೆಚ್ಚು ಲಾಭಪಡೆದುಕೊಳ್ಳುತ್ತಿದ್ದಾರೆ. ಚಾಟ್ ಜಿಪಿಟಿಯನ್ನು ಪ್ರಶ್ನೆಗಳಿಗೆ ಉತ್ತರಿಸಲು, ವರದಿ ಬರೆಯಲು, ಕವನ ಬರೆಯಲು ವಿದ್ಯಾರ್ಥಿಗಳು ತಮ್ಮ ಶಿಕ್ಷಣದ ಒಂದು ಭಾಗವಾಗಿ ಬಳಸುತ್ತಿದ್ದಾರೆ. ಹಾಗಾಗಿ ಚಾಟ್ ಜಿಪಿಟಿ ಹೆಚ್ಚಿನ ಬಳಕೆ ಶಿಕ್ಷಣಕ್ಕೆ ತೊಂದರೆ ಉಂಟುಮಾಡಬಹುದು ಎಂದು ಆತಂಕ ವ್ಯಕ್ತವಾಗಿದ್ದು, ಕಾಲೇಜು, ಶಿಕ್ಷಣ ಸಂಸ್ಥೆಗಳು ಈ ಸೇವೆ ಬಳಕೆಗೆ ಕಡಿವಾಣ ಹಾಕಲು ನಿರ್ಧಾರ ಮಾಡಿವೆ

    ಚಾಟ್ ಜಿಪಿಟಿ ಅಂದ್ರೆ ಏನು?
    ಚಾಟ್ ಜಿಪಿಟಿ ಎಂಬುದು ಒಂದು ಮಷಿನ್ ಲರ್ನಿಂಗ್ ಮಾಡೆಲ್. ಕೃತಕ ಬುದ್ಧಿ ಮತ್ತೆ ಆಧಾರಿತವಾದ ಈ ಚಾಟ್ ಜಿಪಿಟಿ ಅತ್ಯಾಧುನಿಕ ಚಾಟ್ ತಂತ್ರಜ್ಞಾನಗಳಿಗಿಂತ ಮುಂದಿದೆ. ನಿಖರವಾಗಿ ಮತ್ತು ಸ್ಪಷ್ಟವಾಗಿ ನಮಗೆ ಪ್ರತಿಕ್ರಿಯಿಸುತ್ತದೆ. ಬಳಕೆದಾರ ಕೇಳುವ ಪ್ರಶ್ನೆಗಳಿಗೆ ತಕ್ಷಣವೇ ಸ್ಕ್ರೀನ್‌ನಲ್ಲಿ ಸ್ಪಷ್ಟವಾಗಿ ಉತ್ತರ ನೀಡುತ್ತೆ. ನಿರ್ದಿಷ್ಟ ವಿಷಯ ಸೂಚಿಸಿ ಕತೆ ಬರೆದುಕೊಡುತ್ತೆ, ಕವಿತೆ ಬರೆಯಲು ಹೇಳಿದರೆ ಅದನ್ನೂ ಮಾಡುತ್ತದೆ, ಗಣಿತದ ಸೂತ್ರಗಳನ್ನು ಬಿಡಿಸಲು ಸಹಕರಿಸುತ್ತೆ.

    2022ರ ನವೆಂಬರ್‌ನಲ್ಲಿ ಚಾಲ್ತಿಗೆ ಬಂದ ಚಾಟ್ ಜಿಪಿಟಿ, ಇಮೇಲ್‌ಗಳು ಮತ್ತು ಪ್ರಬಂಧಗಳನ್ನು ಬರೆಯಲು, ಕವನ ಬರೆಯಲು, ಪ್ರಶ್ನೆಗಳಿಗೆ ಉತ್ತರಿಸಲು, ಭಾಷಾ ಅನುವಾದ ವಿವಿಧ ಕೆಲಸದಲ್ಲಿ ಬಳಕೆದಾರರ ಎಲ್ಲಾ ಪ್ರಶ್ನೆಗಳಿಗೆ ನಿಖರವಾದ ಉತ್ತರ ಈ ಚಾಟ್‌ಜಿಪಿಟಿ ನೀಡುತ್ತದೆ. ನಿಖರವಾದ ಉತ್ತರ ನೀಡುವುದರಿಂದ ಇದರ ಬಳಕೆ ಎಲ್ಲೆಡೆ ಹೆಚ್ಚಿದೆ ಮತ್ತು ಟೆಕ್ ವಲಯದಲ್ಲೂ ಚರ್ಚೆಗೆ ಗ್ರಾಸವಾಗಿದೆ.

    ಚಾಟ್ ಜಿಪಿಟಿಯು ಹೊಸ ಅಂಶಗಳು ಹಾಗೂ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ಅನುಕೂಲವೇ ಆಗಿದ್ದರೂ ಮುಂದಿನ ದಿನಗಳಲ್ಲಿ ಇದು ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರಕವಾಗುವ ಸಾಧ್ಯತೆಯಿದೆ. ಹಾಗಾಗಿ ನಗರದ ಕಾಲೇಜುಗಳು ಇದಕ್ಕೆ ನಿರ್ಬಂಧ ಹೇರಲು ಮುಂದಾಗಿವೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k