Tag: ಚಾಟ್ಸ್

  • ನಿವೇದಿತಾ ಗೌಡ ‘ಸ್ಮೋಕ್’ ಮಾಡಿಲ್ಲ, ಹೊಗೆ ಬಿಟ್ಟಿದ್ದಕ್ಕೆ ಕಾರಣ ಬೇರೆಯೇ ಇದೆ

    ನಿವೇದಿತಾ ಗೌಡ ‘ಸ್ಮೋಕ್’ ಮಾಡಿಲ್ಲ, ಹೊಗೆ ಬಿಟ್ಟಿದ್ದಕ್ಕೆ ಕಾರಣ ಬೇರೆಯೇ ಇದೆ

    ರಡು ದಿನಗಳ ಹಿಂದೆಯಷ್ಟೇ ‘ಗಿಚ್ಚಿ ಗಿಲಿ ಗಿಲಿ’ ರಿಯಾಲಿಟಿ ಶೋ ರನ್ನರ್ ಅಪ್ ಆಗಿ ಹೊರ ಹೊಮ್ಮಿರುವ ನಟಿ ನಿವೇದಿತಾ ಗೌಡ (Nivedita Gowda),  ಶೂಟಿಂಗ್ ಇರದೇ ಇರುವ ಕಾರಣಕ್ಕಾಗಿ ಬೆಂಗಳೂರಿನ ವಿವಿಪುರಂನಲ್ಲಿರುವ (VV Puram) ಫುಡ್ ಸ್ಟ್ರೀಟ್‍ ಗೆ ಭೇಟಿ ನೀಡಿದ್ದಾರೆ. ಅಲ್ಲಿ ಹತ್ತಾರು ಬಗೆಯ ತಿಂಡಿ, ಚಾಟ್ಸ್ ಸವಿದಿದ್ದಾರೆ. ಕೊನೆಯಲ್ಲಿ ಬಾಯಿಯಿಂದ ಹೊಗೆ ಬಿಟ್ಟು ಎಲ್ಲರನ್ನೂ ಕನ್ಫೂಸ್ ಮಾಡಿದ್ದಾರೆ. ಇದೀಗ ಆ ವಿಡಿಯೋ ಟ್ರೋಲ್ ಆಗುತ್ತಿದೆ.

    ಸೋಷಿಯಲ್ ಮೀಡಿಯಾದಲ್ಲಿ ನಿವಿ ಯಾವಾಗಲೂ ಬ್ಯುಸಿ. ಒಂದಿಲ್ಲೊಂದು ಚಟುವಟಿಕೆಗಳನ್ನು ಮಾಡುತ್ತಲೇ ಅವುಗಳನ್ನು ವಿಡಿಯೋ ಮಾಡಿ, ಸೋಷಿಯಲ್ ಮೀಡಿಯಾದಲ್ಲಿ ಅಪ್ ಲೋಡ್ ಮಾಡುತ್ತಲೇ ಇರುತ್ತಾರೆ. ರೀಲ್ಸ್ ನಲ್ಲೇ ಹೆಚ್ಚು ಕಾಲ ಕಳೆಯುತ್ತಿದ್ದವರು, ಇದೀಗ ತಿಂಡಿ, ತಿನಿಸು ಮಾಡುವುದು ಹೇಗೆ ಎನ್ನುವುದನ್ನು ಹೇಳಿಕೊಡುತ್ತಿದ್ದಾರೆ. ಮಾಡಿದ ಅಡುಗೆಯನ್ನು ಚಂದನ್ (Chandan Shetty) ಮೇಲೆ ಪ್ರಯೋಗ ಮಾಡಿಯೇ ಸೇಡು ತೀರಿಸಿಕೊಳ್ಳುತ್ತಾರೆ. ಇದನ್ನೂ ಓದಿ:ಮತ್ತೆ ಒಂದಾದ ʻಪಂಚರಂಗಿ’ ದಿಗಂತ್‌- ನಿಧಿ ಸುಬ್ಬಯ್ಯ ಜೋಡಿ

    ಫುಡ್ ಬಗ್ಗೆ ಮಾತನಾಡಿದಾಗೆಲ್ಲ ನಿವಿ ಅಭಿಮಾನಿಗಳು ನೀವು ವಿವಿಪುರಂ ಫುಡ್ ಸ್ಟ್ರೀಟ್‍ ಗೆ (Food Street) ಹೋಗಿಲ್ಲವಾ? ಎಂದು ಎಲ್ಲರೂ ಕೇಳುತ್ತಿದ್ದರಂತೆ. ಈವರೆಗೂ ಅವರು ಅಲ್ಲಿಗೆ ಹೋಗಿಲ್ಲವಂತೆ. ಹಾಗಾಗಿ ಗಿಚ್ಚಿಗಿಲಿಗಿಲಿ ಮುಗಿಯುತ್ತಿದ್ದಂತೆಯೇ ಫುಡ್ ಸ್ಟ್ರೀಟ್ ಗೆ ಬಂದು, ಅಲ್ಲಿನ ವಿವಿಧ ತಿಂಡಿ ತಿನಿಸುಗಳನ್ನು ಸವಿದಿದ್ದಾರೆ. ಮೂವತ್ತಕ್ಕೂ ಹೆಚ್ಚು ಬಗೆಯ ತಿಂಡಿಗಳು ಇಲ್ಲಿದ್ದರೂ, ನನಗೆ ಐದಾರು ಮಾತ್ರ ತಿನ್ನುವುದಕ್ಕೆ ಸಾಧ್ಯವೆಂದು ಹೇಳಿದ್ದಾರೆ. ಅಲ್ಲದೇ, ಬೇರೆ ಬೇರೆ ತಿಂಡಿ ತಿನಿಸುಗಳ ಬಗ್ಗೆಯೂ ಪರಿಚಯ ಮಾಡಿಕೊಟ್ಟಿದ್ದಾರೆ.

    ಚಾಟ್ಸ್ (Chats)ತಿನ್ನುವುದು ಮುಗಿಯುತ್ತಿದ್ದಂತೆಯೇ ಸ್ಮೋಕಿಂಗ್ (Smoke) ಐಸ್ ಕ್ರೀಮ್ ಕೂಡ ಸವಿದಿದ್ದು, ಐಸ್ ಕ್ರೀಮ್ ತಿನ್ನುವಾಗ ಬರುವ ಹೊಗೆಯನ್ನು ಕ್ಯಾಮೆರಾ ಮುಂದೆ ಬಿಟ್ಟಿದ್ದಾರೆ. ಹಾಗಾಗಿ ನಿವೇದಿತಾ ಸ್ಮೋಕ್ ಮಾಡಿದ್ದಾರೆ ಎಂದು ತಪ್ಪಾಗಿ ಅರ್ಥೈಸಲಾಗುತ್ತಿದೆ. ಆದರೆ, ಅವರು ತಿಂದಿದ್ದು ಹೊಗೆ ಬರುವ ಐಸ್ ಕ್ರೀಮ್ ಎನ್ನುವುದು ಅವರು ಹಾಕಿರುವ ವಿಡಿಯೋ ನೋಡಿಯೇ ಗೊತ್ತಾಗುತ್ತದೆ. ಏನೇ ಆಗಲಿ, ನಿವಿ ಸಖತ್ ಎಂಜಾಯ್ ಮಾಡಿದ್ದಾರೆ ಫುಡ್ ಸ್ಟ್ರೀಟ್ ನಲ್ಲಿ.

    Live Tv
    [brid partner=56869869 player=32851 video=960834 autoplay=true]

  • ಸಿಂಪಲ್ ಆಲೂ ಚಾಟ್ ಮಾಡೋ ವಿಧಾನ

    ಸಿಂಪಲ್ ಆಲೂ ಚಾಟ್ ಮಾಡೋ ವಿಧಾನ

    ಹೋಳಿ ಹಬ್ಬದ ಟೈಮಲ್ಲಿ ಓಕುಳಿಯೊಂದಿಗೆ ಆಟವಾಡಿದ ನಂತರ ಹೊಟ್ಟೆ ಚುರುಗುಟ್ಟದೆ ಇರದು. ಹಾಗಂತ ಬಣ್ಣ ಬಳಿದುಕೊಂಡು ಊಟ ಮಾಡೋಕಾಗಲ್ಲ. ಇಂಥ ಹೊತ್ತಲ್ಲಿ ಏನಾದ್ರೂ ಸಿಂಪಲ್ ಚಾಟ್ಸ್ ತಿಂದ್ರೆ ಮನಸ್ಸಿಗೆ ಖುಷಿ. ಹೋಳಿ ಅಲ್ಲದಿದ್ರೂ ಮನೆಯಲ್ಲಿ ಸಂಜೆ ವೇಳೆಗೆ ಸುಲಭವಾಗಿ ಮಾಡಬಹುದಾದ ಆಲೂ ಚಾಟ್ ರೆಸಿಪಿ ಇಲ್ಲಿದೆ.

    ಬೇಕಾಗುವ ಸಾಮಗ್ರಿಗಳು: 
    1. ಆಲೂಗಡ್ಡೆ – 3 ಮಧ್ಯಮ ಗಾತ್ರದ್ದು
    2. ಖಾರದ ಪುಡಿ- 1 ಚಮಚ
    3. ಹುರಿದ ಜೀರಿಗೆ ಪುಡಿ- 1/2 ಚಮಚ
    4. ಆಮ್ಚೂರ್ ಪುಡಿ- 1/4 ಚಮಚ
    5. ಚಾಟ್ ಮಸಾಲಾ- 1/4 ಚಮಚ
    6. ಉಪ್ಪು- ರುಚಿಗೆ ತಕ್ಕಷ್ಟು
    7. ಎಣ್ಣೆ – 1 ಚಮಚ
    8. ನಿಂಬೆಹಣ್ಣು- 1/2 ಹೋಳು
    9. ಕೊತ್ತಂಬರಿ ಸೊಪ್ಪು- 1 ಚಮಚ

    ಮಾಡುವ ವಿಧಾನ:
    * ಕುಕ್ಕರ್‍ನಲ್ಲಿ ನೀರು, ತೊಳೆದ ಅಲೂಗಡ್ಡೆಗಳನ್ನ ಹಾಕಿ 2 ವಿಷಲ್ ಬರುವವರೆಗೆ ಬೇಯಿಸಿ. ಆಲೂಗಡ್ಡೆ ಮೆತ್ತಗಾಗಬಾರದು, ಕಟ್ ಮಾಡುವಷ್ಟು ಗಟ್ಟಿ ಇರಬೇಕು
    * ಬೆಂದ ಆಲೂಗಡ್ಡೆಗಳ ಸಿಪ್ಪೆ ತೆಗೆದು, ಚೌಕಾಕಾರದಲ್ಲಿ ಕಟ್ ಮಾಡಿಕೊಳ್ಳಿ.
    * ಒಂದು ಪ್ಯಾನ್ ಗೆ ಎಣ್ಣೆ ಹಾಕಿ ಬಿಸಿ ಮಾಡಿ, ಕಟ್ ಮಾಡಿದ ಆಲೂಗಡ್ಡೆ ತುಂಡುಗಳನ್ನ ಹಾಕಿ 7-10 ನಿಮಿಷ ಸಣ್ಣ ಉರಿಯಲ್ಲಿ ಫ್ರೈ ಮಾಡಿ ತೆಗೆಯಿರಿ.
    * ಒಂದು ಸಣ್ಣ ಪಾತ್ರೆಯಲ್ಲಿ ಫ್ರೈ ಮಾಡಿದ ಆಲೂಗಡ್ಡೆ ಹಾಕಿ, ಅದರ ಮೇಲೆ ಜೀರಿಗೆ ಪುಡಿ, ಖಾರದ ಪುಡಿ, ಆಮ್ಚೂರ್ ಪುಡಿ, ಚಾಟ್ ಮಸಾಲಾ ಹಾಗೂ ಅಗತ್ಯಕ್ಕೆ ತಕ್ಕಷ್ಟು ಉಪ್ಪು ಹಾಕಿ ಮಿಕ್ಸ್ ಮಾಡಿ.
    * ನಂತರ ಸ್ವಲ್ಪ ನಿಂಬೆ ರಸ ಹಾಗೂ ಕೊತ್ತಂಬರಿ ಸೊಪ್ಪು ಉದುರಿಸಿ ಮತ್ತೊಮ್ಮೆ ಮಿಕ್ಸ್ ಮಾಡಿ, ಬಿಸಿಯಿರುವಾಗಲೇ ಸವಿಯಲು ಕೊಡಿ.