Tag: ಚಾಟಿಂಗ್

  • ಬಿಜೆಪಿ ಮುಖಂಡ ಆತ್ಮಹತ್ಯೆ ಪ್ರಕರಣ – ಅನಂತರಾಜು ಜೊತೆಗಿನ ಖಾಸಗಿ ವೀಡಿಯೋ ಇದೆ ಎಂಬ ಗೆಳತಿ ಚಾಟಿಂಗ್ ವೈರಲ್

    ಬಿಜೆಪಿ ಮುಖಂಡ ಆತ್ಮಹತ್ಯೆ ಪ್ರಕರಣ – ಅನಂತರಾಜು ಜೊತೆಗಿನ ಖಾಸಗಿ ವೀಡಿಯೋ ಇದೆ ಎಂಬ ಗೆಳತಿ ಚಾಟಿಂಗ್ ವೈರಲ್

    ಬೆಂಗಳೂರು: ಬಿಜೆಪಿ ಮುಖಂಡ ಅನಂತರಾಜು ಆತ್ಮಹತ್ಯೆಯ ಪ್ರಕರಣ ಸಂಬಂಧ ಬಂಧನಕ್ಕೊಳಗಾಗಿದ್ದ ಗೆಳತಿಗೆ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ.

    ಪ್ರಕರಣದ ಮೂವರು ಆರೋಪಿಗಳಿಗೆ ಜಾಮೀನು ದೊರಕ್ಕಿದ್ದು, ಅನಂತರಾಜು ಗೆಳತಿ ಹಾಗೂ ಇನ್ನುಳಿದ ಇಬ್ಬರು ಆರೋಪಿಗಳಾದ ಸ್ಪಂದನಾ ಹಾಗೂ ವಿನೋದ್‍ಗೆ ನಿರೀಕ್ಷಣಾ ಜಾಮೀನು ನೀಡಲಾಗಿದೆ. ಅನಂತರಾಜು ಇದೇ ತಿಂಗಳು 12 ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಇದನ್ನೂ ಓದಿ: ಇಂದು ರಾಜ್ಯಕ್ಕೆ ಕೇಂದ್ರ ಸಚಿವ ರಾಜನಾಥ್ ಸಿಂಗ್ ಭೇಟಿ

    court order law

    ಇದೀಗ ಅನಂತರಾಜು ಆತ್ಮಹತ್ಯೆ ಪ್ರಕರಣವು ಮತ್ತೊಂದು ತಿರುವು ಪಡೆದುಕೊಂಡಿದೆ. ಅನಂತರಾಜು ಗೆಳತಿ ಅಪರಿಚಿತ ವ್ಯಕ್ತಿಯೊಂದಿಗೆ ಚಾಟಿಂಗ್ ಮಾಡಿರುವುದು ವೈರಲ್ ಆಗಿದೆ. ಇದನ್ನೂ ಓದಿ: ಪಾಟಿದರ್ ಸ್ಫೋಟಕ ಶತಕ, ಡಿ.ಕೆ ಅಬ್ಬರ – ಅಹಮದಾಬಾದ್‌ಗೆ ಹಾರಿದ ಬೆಂಗ್ಳೂರು

    ವೈರಲ್ ಆದ ಚಾಟಿಂಗ್‍ನಲ್ಲೇನಿದೆ?
    ಅನಂತರಾಜು ನನಗೆ ಮೋಸ ಮಾಡಿದ್ದಾನೆ. ನನ್ನ ಮಾನ ಮರ್ಯಾದೆಗೆ ಧಕ್ಕೆ ತಂದಿದ್ದಾನೆ. ನನ್ನ ಮಕ್ಕಳಿಗಾಗಿ ನಾನು ಯಾರ ಮಾರ್ಯಾದೆ ಕಳೆಯೋದಕ್ಕೂ ಸಿದ್ಧ. ಅನಂತರಾಜು ನನ್ನ ಜೊತೆ ಕಳೆದ ಖಾಸಗಿ ವಿಡಿಯೋಗಳು ನನ್ನ ಬಳಿ ಇವೆ. ಅದನ್ನು ಅವನ ಹೆಂಡ್ತಿಗೆ ಕಳುಹಿಸಿದರೆ ಅವಳೇ ಅನಂತರಾಜುನ ಸಾಯಿಸ್ತಾಳೆ. ಅಷ್ಟೊಂದು ಅಶ್ಲೀಲವಾಗಿವೆ ಆ ವೀಡಿಯೋಗಳು. ಆ ರೀತಿ ಆಗಬಾರದು ಅನ್ನೋದಾದರೆ ಅನಂತರಾಜು ಮೇ 15ರ ಒಳಗೆ ನನ್ನ ಭೇಟಿ ಮಾಡಬೇಕು. ಸೆಟಲ್ಮೆಂಟ್ ಮಾಡಿಕೊಂಡು ಅನಂತರಾಜು ನೆಮ್ಮದಿಯಾಗಿರಲಿ ಎಂದು ಅನಂತರಾಜು ಗೆಳತಿ ಚಾಟಿಂಗ್ ಮಾಡಿದ್ದಳು. ಇದರ ಜೊತೆಗೆ ಅನಂತರಾಜು ಗೆಳತಿ ತನ್ನ ಇತರೆ ಗೆಳತಿಯರೊಂದಿಗೆ ಮೋಜು ಮಸ್ತಿಯಲ್ಲಿ ತೊಡಗಿರುವ ವೀಡಿಯೋ ಕೂಡ ವೈರಲ್.

    https://youtu.be/WlJqcDTsNiE

  • ಪ್ರೀತಿಸಿ ಮದ್ವೆ, ಬೇರೊಬ್ಬನ ಜೊತೆ ಪತ್ನಿ ಚಾಟಿಂಗ್- ಉಸಿರುಗಟ್ಟಿಸಿ ಕೊಂದ ಪತಿ

    ಪ್ರೀತಿಸಿ ಮದ್ವೆ, ಬೇರೊಬ್ಬನ ಜೊತೆ ಪತ್ನಿ ಚಾಟಿಂಗ್- ಉಸಿರುಗಟ್ಟಿಸಿ ಕೊಂದ ಪತಿ

    – ಹೊಟ್ಟೆ ನೋವಿನಿಂದ ಸಾವನ್ನಪ್ಪಿದ್ದಾಳೆಂದು ನಂಬಿಸಲು ಯತ್ನಿಸಿದ

    ಹೈದರಾಬಾದ್: ಪ್ರೀತಿಸಿ ಮದ್ವೆ, ಬೇರೊಬ್ಬನ ಜೊತೆ ಪತ್ನಿ ಚಾಟಿಂಗ್- ಉಸಿರುಗಟ್ಟಿಸಿ ಕೊಂದ ಪತಿ ಪ್ರೀತಿಸಿ ಮದುವೆಯಾದ ಪತ್ನಿಯ ಮೇಲೆ ಅನುಮಾನಗೊಂಡ ಪತಿ ಆಕೆಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿರುವ ಘಟನೆ ಆಂಧ್ರ ಪ್ರದೇಶದ ವಿಶಾಖಪಟ್ಟಣದಲ್ಲಿ ನಡೆದಿದೆ.

    ಪದ್ಮ (24) ಕೊಲೆಯಾದ ಪತ್ನಿ. ಆರೋಪಿ ಪತಿ ನವೀನ್ ಕುಮಾರ್ (27)ನನ್ನು ಪೊಲೀಸರು ಬಂಧಿಸಿದ್ದಾರೆ. 2015 ರಲ್ಲಿ ಇಬ್ಬರು ಪ್ರೀತಿ ಮಾಡಿ ಮದುವೆಯಾಗಿದ್ದರು. ಆರೋಪಿ ನವೀನ್ ವಿಶಾಖಪಟ್ಟಣದ ಖಾಸಗಿ ಆಸ್ಪತ್ರೆಯೊಂದರಲ್ಲಿ ಫಾರ್ಮಸಿ ಟ್ರೈನಿಯಾಗಿ ಕೆಲಸ ಮಾಡುತ್ತಿದ್ದ.

    ಮೃತ ಪದ್ಮ ಯಾವಾಗಲು ಬೇರೆಯವರೊಂದಿಗೆ ಮೊಬೈಲ್‍ನಲ್ಲಿ ಚಾಟ್ ಮಾಡುತ್ತಿದ್ದಳು. ಈ ಕಾರಣಕ್ಕೆ ದಂಪತಿಯ ನಡುವೆ ಹಲವು ಬಾರಿ ಜಗಳ ನಡೆದಿತ್ತು. ಆದರೆ ಭಾನುವಾರ ರಾತ್ರಿ 9.30 ಸಮಯದಲ್ಲಿ ಮತ್ತೆ ದಂಪತಿ ನಡುವೆ ಜಗಳ ನಡೆದಿದ್ದು, ಈ ವೇಳೆ ಕೋಪಗೊಂಡ ನವೀನ್ ಪತ್ನಿಯ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಬಳಿಕ ಪಕ್ಕದ ಮನೆಯವರ ಬಳಿ ತೆರಳಿ ತನ್ನ ಪತ್ನಿ ಹೊಟ್ಟೆ ನೋವಿನಿಂದ ಬಳಲಿ ಸಾವನ್ನಪ್ಪಿದ್ದಾಳೆ ಎಂದು ಹೇಳಿದ್ದ.

    ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಕೂಡಲೇ ಸ್ಥಳಕ್ಕೆ ಆಗಮಿಸಿ ಪೊಲೀಸರು ಪರಿಶೀಲನೆ ನಡೆಸಿದ್ದರು. ಪತಿ ನವೀನ್‍ನನ್ನು ಅನುಮಾನದಿಂದ ವಶಕ್ಕೆ ಪಡೆದ ಪೊಲೀಸರು ಪಶ್ನಿಸಿದ ವೇಳೆ ಆರೋಪಿ ಕೊಲೆ ಮಾಡಿದ್ದನ್ನು ಒಪ್ಪಿಕೊಂಡಿದ್ದಾನೆ. ಅಲ್ಲದೇ ವಿಚ್ಛೇದನ ನೀಡಲು 4 ಲಕ್ಷ ರೂ. ಬೇಡಿಕೆ ಇಟ್ಟು ಜಗಳ ಮಾಡುತ್ತಿದ್ದ ಕಾರಣ ಕೊಲೆ ಮಾಡಿದ್ದಾಗಿ ಪೊಲೀಸರಿಗೆ ತಿಳಿಸಿದ್ದಾನೆ. ಮೃತ ಮಹಿಳೆಯ ಸಹೋದರ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

  • ಚಾಟಿಂಗ್ ಮಾಡ್ತಿದ್ದಾಗ ನಿರಂತರವಾಗಿ ಊಟಕ್ಕೆ ಕರೆದಿದ್ದಕ್ಕೆ ಅಮ್ಮನಿಗೆ ಗುಂಡು ಹಾರಿಸ್ದ

    ಚಾಟಿಂಗ್ ಮಾಡ್ತಿದ್ದಾಗ ನಿರಂತರವಾಗಿ ಊಟಕ್ಕೆ ಕರೆದಿದ್ದಕ್ಕೆ ಅಮ್ಮನಿಗೆ ಗುಂಡು ಹಾರಿಸ್ದ

    – ರಾತ್ರಿ ತಡವಾಗಿದ್ರೂ ಸ್ನೇಹಿತರೊಂದಿಗೆ ಚಾಟಿಂಗ್
    – ಕಾಡಿನಲ್ಲಿ ಆರೋಪಿ ಮಗ ಅರೆಸ್ಟ್

    ಪಾಟ್ನಾ: ಯುವಕನೊಬ್ಬ ಸ್ನೇಹಿತರೊಂದಿಗೆ ಚಾಟಿಂಗ್ ಮಾಡುತ್ತಿದ್ದಾಗ ಹಲವಾರು ಬಾರಿ ಊಟಕ್ಕೆ ಕರೆದಿದ್ದಕ್ಕೆ ಅಮ್ಮನ ಮೇಲೆ ಗುಂಡು ಹಾರಿಸಿರುವ ಘಟನೆ ಬಿಹಾರದಲ್ಲಿ ನಡೆದಿದೆ.

    ಪಾಟ್ನಾದ ಮರಂಚಿ ಪೊಲೀಸ್ ಠಾಣಾ ವ್ಯಾಪ್ತಿಯ ಸೀತಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಆರೊಪಿಯನ್ನು ಅಂಗಾದ್ ಯಾದವ್ (20) ಎಂದು ಗುರುತಿಸಲಾಗಿದೆ. ಇದೀಗ ಆರೋಪಿಯನ್ನು ಗನ್ ಸಮೇತ ಪೊಲೀಸ್ ಬಂಧಿಸಿದ್ದಾರೆ.

    ಏನಿದು ಪ್ರಕರಣ?
    ಆರೋಪಿ ಯಾದವ್ ನಿವಾಸದ ಹೊರಗೆ ತನ್ನ ಕೆಲ ಸ್ನೇಹಿತರೊಂದಿಗೆ ನಿರಂತರವಾಗಿ ಮೊಬೈಲಿನಲ್ಲಿ ಚಾಟಿಂಗ್ ಮಾಡುತ್ತಿದ್ದ. ರಾತ್ರಿ ತಡವಾಗಿದ್ದರಿಂದ ಯಾದವ್ ತಾಯಿ ಮಂಜು ದೇವಿ ಒಳಗೆ ಬಂದು ಊಟ ಮಾಡುವಂತೆ ಹಲವಾರು ಬಾರಿ ಕರೆದಿದ್ದಾರೆ. ಆದರೆ ಆರೋಪಿ ಯಾದವ್ ಪ್ರತಿ ಬಾರಿಯೂ ತಾಯಿಯ ಮಾತನ್ನು ನಿರ್ಲಕ್ಷಿಸಿದನು. ಕೊನೆಗೆ ಮಂಜು ದೇವಿ ತನ್ನ ಮಗನ ಬಳಿಗೆ ಹೋಗಿ ಮತ್ತೆ ಊಟಕ್ಕೆ ಬರುವಂತೆ ಕರೆದು ಮನೆಯೊಳಗೆ ಬರುತ್ತಿದ್ದರು.

    ಆಗ ಆರೋಪಿ ಸ್ನೇಹಿತರೊಂದಿಗೆ ಮಾತನಾಡುವಾಗ ಅಡ್ಡಿಪಡಿಸಿದ ಕಾರಣಕ್ಕಾಗಿ ಕೋಪದಿಂದ ತನ್ನ ತಾಯಿಗೆ ಗುಂಡು ಹಾರಿಸಿದ್ದಾನೆ. ತಕ್ಷಣ ಮಂಜು ದೇವಿ ಸ್ಥಳದಲ್ಲೇ ಕೆಳಗೆ ಬಿದ್ದಿದ್ದಾರೆ. ಗಂಭೀರ ಗಾಯಗೊಂಡ ಮಂಜು ದೇವಿಯನ್ನು ಪಾಟ್ನಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯಕ್ಕೆ ಅವರಿಗೆ ಚಿಕಿತ್ಸೆ ನಡೆಯುತ್ತಿದೆ ಎಂದು ಪೊಲೀಸ್ ಅನಿಲ್ ಕುಮಾರ್ ತಿಳಿಸಿದ್ದಾರೆ.

    ಈ ಘಟನೆಗೆ ಮಂಜು ದೇವಿ ಸಹೋದರಿ ಇಂದೂ ದೇವಿ ಸಾಕ್ಷಿಯಾಗಿದ್ದು, ಈ ಕುರಿತು ಪೊಲೀಸರಿಗೆ ದೂರು ದಾಖಲಿಸಿದ್ದಾರೆ. ಇಂದೂ ದೇವಿಯ ಹೇಳಿಕೆಯ ಆಧಾರದ ಮೇಲೆ ಅಂಗದ್ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ. ನಂತರ ಯಾದವ್‍ನನ್ನು ನಿವಾಸದ ಹಿಂದಿನ ಅರಣ್ಯದಲ್ಲಿ ಬಂಧಿಸಲಾಗಿದೆ. ಆರೋಪಿ ಬಂಧನದ ವೇಳೆ ಪೊಲೀಸರ ಮೇಲೆ ಗುಂಡು ಹಾರಿಸಿದ್ದಾನೆ. ಕೊನೆಗೆ ಪೊಲೀಸರು ಆರೋಪಿಯನ್ನು ಪಿಸ್ತೂಲ್ ಸಮೇತ ಬಂಧಿಸಿದ್ದಾರೆ.

    ಆರೋಪಿ ಯಾದವ್ ತಂದೆ ರಂಬಾಬು ಯಾದವ್ ಮತ್ತು ಅವರ ಇಬ್ಬರು ಹಿರಿಯ ಸಹೋದರರು ಪಂಜಾಬ್‍ನಲ್ಲಿ ದೈನಂದಿನ ಕೂಲಿ ಕೆಲಸ ಮಾಡುತ್ತಾರೆ. ಆರು ತಿಂಗಳ ಹಿಂದೆ 7,500 ರೂ. ಕೊಟ್ಟು ಪಿಸ್ತೂಲ್ ಖರೀದಿಸಿದ್ದೇನೆ ಎಂದು ಆರೋಪಿ ಪೊಲೀಸರಿಗೆ ತಿಳಿಸಿದ್ದಾನೆ. ಗುರುವಾರ ಕೋವಿಡ್ -19 ಪರೀಕ್ಷೆಯ ನಂತರ ಆರೋಪಿಯನ್ನು ಜೈಲಿಗೆ ಕಳುಹಿಸಲಾಗಿದೆ ಎಂದು ಅನಿಲ್ ಕುಮಾರ್ ತಿಳಿಸಿದ್ದಾರೆ.

  • ಮದ್ವೆ ಆಗೋಣ ಅಂತ ಲಕ್ಷ ಲಕ್ಷ ದೋಚಿದ ಇಟಲಿ ಬ್ಯೂಟಿ-ಸುಂದರಿಯ ಚಾಟಿಂಗ್ ಚೀಟಿಂಗ್ ಕಥೆ

    ಮದ್ವೆ ಆಗೋಣ ಅಂತ ಲಕ್ಷ ಲಕ್ಷ ದೋಚಿದ ಇಟಲಿ ಬ್ಯೂಟಿ-ಸುಂದರಿಯ ಚಾಟಿಂಗ್ ಚೀಟಿಂಗ್ ಕಥೆ

    -ಬ್ಯೂಟಿ ಮೋಸದಾಟಕ್ಕೆ ಸಾಲಗಾರನಾದ ಹಳ್ಳಿ ಹೈದ

    ಚಿಕ್ಕಬಳ್ಳಾಪುರ: ಮ್ಯಾಟ್ರಿಮೋನಿಯಲ್ ನಲ್ಲಿ ವಧು-ವರ ಹುಡುಕಾಟದಲ್ಲಿದ್ದೀರಾ? ಹಾಗಾದ್ರೆ ಈ ಸ್ಟೋರಿ ನೀವು ನೋಡಲೇಬೇಕು. ಇಟಲಿ ಬ್ಯೂಟಿಯ ಮದುವೆ ಆಗಲು ಹೊರಟ ಭಾರತದ ಹಳ್ಳಿ ಹೈದನೋರ್ವ ಲಕ್ಷ ಲಕ್ಷ ಪಂಗನಾಮ ಹಾಕಿಸಿಕೊಂಡು ಸಾಲಗಾರನಾಗಿ ಈಗ ಪೊಲೀಸ್ ಠಾಣೆ ಅಲೆದಾಡುವಂತಾಗಿದೆ.

    ವಿಚ್ಚೇಧಿತನಾದ ಚಿಕ್ಕಬಳ್ಳಾಪುರ ನಗರದ ನಿವಾಸಿ ಮುನಿರಾಜು ಮೋಸಕ್ಕೊಳಗಾದ ವ್ಯಕ್ತಿ. ಮುನಿರಾಜು ಮದುವೆ ಆಗಬೇಕು ಎಂದು ಕನ್ನಡ ಮ್ಯಾಟ್ರಿಮೋನಿಯಲ್ ನಲ್ಲಿ ತಮ್ಮ ಫ್ರೊಫೈಲ್ ಕ್ರಿಯೇಟ್ ಮಾಡಿ ವಧುವಿನ ಹುಡಕಾಟದಲ್ಲಿ ತೊಡಗಿದ್ದರು. ಒಂದು ದಿನ ಇಂಟರ್ ನ್ಯಾಷನಲ್ ನಂಬರ್ ನಿಂದ ವಾಟ್ಸಾಪ್ ಮುಖಾಂತರ ಚಾಟ್ ಮಾಡಿದ ಬ್ಯೂಟಿ ನಾನು ಮ್ಯಾಟ್ರಿಮೋನಿಯಲ್‍ನಲ್ಲಿ ನಿಮ್ಮ ಪ್ರೊಫೈಲ್ ನೋಡಿದೆ. ನಿಮ್ಮನ್ನ ಮದುವೆ ಆಗಬೇಕು ಅಂತಿದ್ದೀನಿ ಅಂದಿದ್ದಾಳೆ.

    ಬ್ಯೂಟಿಯ ಪೋಟೋ ನೋಡಿ ಆಕಾಶಕ್ಕೆ ಮೂರೇ ಗೇಣು ಅಂತ ಕುಣಿದಾಡಿದ ಮುನಿರಾಜು ಬ್ಯೂಟಿ ಜೊತೆ ಚಾಟಿಂಗ್ ಗೆ ಇಳಿದಿದ್ದಾರೆ. ಅತ್ತ ಕಡೆಯಿಂದ ವಾಟ್ಸಪ್ ಮುಖಾಂತರ ಕರೆ ಮಾಡಿದ ಬ್ಯೂಟಿ, ನಾನು ಭಾರತದವಳು ಸದ್ಯ ಇಟಲಿಯಲ್ಲಿ ಪೆಪ್ಸಿಕೋ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ನಮ್ಮ ಮನೆಯವರಿಗೆಲ್ಲಾ ನಿಮ್ಮ ಪ್ರೊಫೈಲ್ ತೋರಿಸಿದ್ದೇನೆ ಭಾರತಕ್ಕೆ ಬಂದು ನಿಮ್ಮನ್ನ ಮದುವೆಯಾಗ್ತೀನಿ ಅಂದಿದ್ದಾಳೆ. ಮೊದೆಲೆರೆಡು ತಿಂಗಳು ಇದೇ ರೀತಿ ಚಾಟಿಂಗ್, ಇಂಟರ್ನೆಟ್ ಕಾಲ್ ಮಾಡಿದ ಬ್ಯೂಟಿ, ನಾನು ಇಂಡಿಯಾಗೆ ಬರ್ತೀನಿ ಇಟಲಿಯಿಂದ ಟಿಕೆಟ್ ಬುಕ್ ಮಾಡಬೇಕು ಹಣ ಕಳಿಸು ಎಂದು ದುಡ್ಡು ಪಡೆದುಕೊಂಡಿದ್ದಾಳೆ.

    ಇಟಲಿಯಿಂದ ದೆಹಲಿಗೆ ಬಂದಿದ್ದೀನಿ. ನನ್ನ ಬಳಿ ಇಟಲಿಯ ಒಂದೂವರೆ ಕೋಟಿ ಕರೆನ್ಸಿ ಇದೆ. ಏರ್ ಪೋರ್ಟ್ ನಲ್ಲಿ ಕಸ್ಟಮ್ಸ್ ಅಧಿಕಾರಿಗಳು ಹಿಡಿದುಕೊಂಡಿದ್ದಾರೆ. ಅವರಿಗೆ ಟ್ಯಾಕ್ಸ್ ಪೇ ಮಾಡಿದರೆ ಎಲ್ಲಾ ಹಣ ವಾಪಾಸ್ ಮಾಡುತ್ತಾರೆ. ಆ ಹಣ ನಿನಗೆ ಕೊಡ್ತೀನಿ ಅಂತ ಹೇಳಿ ಹಣ ಹಾಕಿಸಿಕೊಂಡಿದ್ದಾಳೆ. ಹೀಗೆ ಒಂದಲ್ಲ ಒಂದು ನೆಪ ಹೇಳಿ ಮುನಿರಾಜು ಬಳಿ ಬರೋಬ್ಬರಿ 27 ಲಕ್ಷ ರೂಪಾಯಿ ಹಣ ಪಡೆದ ಬ್ಯೂಟಿ ಕೊನೆಗೆ ಫೋನ್ ಸ್ವಿಚ್ ಆಫ್ ಮಾಡಿ ಸುಮ್ಮನಾಗಿದ್ದಾಳೆ.

    ಫೋನ್ ಸ್ವಿಚ್ಛ್ ಅಫ್ ಆದರಿಂದ ಅನುಮಾನಗೊಂಡ ಮುನಿರಾಜು ಮೊದಲು ಬ್ಯಾಂಕಿಗೆ ಹೋಗಿ ಹಣ ಹಾಕಿದ ಖಾತೆಗಳನ್ನು ಪರೀಶೀಲನೆ ಮಾಡಿಸಿದ್ದಾರೆ. ಆಗ ಅವೆಲ್ಲವೂ ಫೇಕ್ ಅಕೌಂಟ್ಸ್ ಅಂತ ಗೊತ್ತಾಗಿದೆ. ಹೀಗಾಗಿ ಸುಂದರಿ ಸಿಗ್ತಾಳೆ ಮದುವೆ ಅಗೋಣ ಅಂತ ಒಂದಲ್ಲ ಎರಡಲ್ಲ ಅಂತ ಸಾಲ ಸೋಲ ಮಾಡಿ ಸರಿಸುಮಾರು 30 ಲಕ್ಷ ಸುರಿದ ಮುನಿರಾಜು ಈಗ ಚಿಕ್ಕಬಳ್ಳಾಪುರ ಜಿಲ್ಲಾ ಸೈಬರ್ ಕ್ರೈಂ ಪೊಲೀಸರ ಮೊರೆ ಹೋಗಿದ್ದಾರೆ.

    ಒಟ್ಟಿನಲ್ಲಿ ಇಟಲಿ ಸುಂದರಿಯ ಸೌಂದರ್ಯಕ್ಕೆ ಮರುಳಾದ ಹಳ್ಳಿ ಹೈದ ಈಗ ಸಾಲದ ಸುಳಿಗೆ ಸಿಲುಕಿದ್ದಾರೆ. ಸ್ವಾಮಿ ನನ್ನ ದುಡ್ಡು ವಾಪಾಸ್ ಕೊಡಿಸಿ ಅಂತ ಪೊಲೀಸರ ಬಳಿ ಅಳಲು ತೋಡಿಕೊಳ್ಳುತ್ತಿದ್ದಾರೆ.

  • ಹಾಲು ತರಲು ಬರುತ್ತಿದ್ದ ಮಹಿಳೆಯ ಬೆನ್ನ ಹಿಂದೆ ಬಿದ್ದ ಹುಡುಗರು

    ಹಾಲು ತರಲು ಬರುತ್ತಿದ್ದ ಮಹಿಳೆಯ ಬೆನ್ನ ಹಿಂದೆ ಬಿದ್ದ ಹುಡುಗರು

    – ಬೇಡಿಕೆ ಈಡೇರಿಸುವಂತೆ ಬ್ಲ್ಯಾಕ್‍ಮೇಲ್

    ಹೈದರಾಬಾದ್: ಫೇಸ್‍ಬುಕ್ ಮೂಲಕ ಪರಿಚಯವಾದ ನಾಲ್ವರು ಯುವಕರು ವಿವಾಹಿತ ಮಹಿಳೆಗೆ ಅತ್ಯಾಚಾರ ಎಸಗುವುದಾಗಿ ಬೆದರಿಸಿ ಲೈಂಗಿಕ ಕಿರುಕುಳ ನೀಡಿರುವ ಘಟನೆ ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯಲ್ಲಿ ನಡೆದಿದೆ.

    ರಾಯದುರ್ಗಂ ಗ್ರಾಮದ ವಿವಾಹಿತ ಮಹಿಳೆ ನಾಲ್ವರು ಯುವಕರು ಅತ್ಯಾಚಾರ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾಳೆ.

    ಏನಿದು ಪ್ರಕರಣ?
    ಕರ್ನಾಟಕದ ಯುವತಿ ನಾಲ್ಕು ವರ್ಷಗಳ ಹಿಂದೆ ರಾಯದುರ್ಗಂ ಪಟ್ಟಣದ ವ್ಯಕ್ತಿಯನ್ನು ಮದುವೆಯಾಗಿದ್ದಳು. ಈ ದಂಪತಿಗೆ ಮೂರು ವರ್ಷದ ಮಗನಿದ್ದಾನೆ. ಕಳೆದ ಒಂದು ವರ್ಷದಿಂದ ಮಹಿಳೆ ಮುಂಜಾನೆ ತಮ್ಮ ಮನೆಯ ಸಮೀಪದ ಅಂಗಡಿಗೆ ಹೋಗಿ ಹಾಲು ತರುತ್ತಿದ್ದಳು. ದಿನ ಕಳೆದಂತೆ ಅದೇ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಮಹೇಶ್ ಪರಿಚಯವಾಗಿದ್ದನು ಎಂದು ಪೊಲಿಸರು ತಿಳಿಸಿದ್ದಾರೆ.

    ಪರಿಚಯ ಸ್ನೇಹವಾಗಿ ಇಬ್ಬರು ತುಂಬಾ ಸಮಯ ಫೇಸ್‍ಬುಕ್ ಮೂಲಕ ಚಾಟಿಂಗ್ ಮಾಡುತ್ತಿದ್ದರು. ಆಗ ಮಹೇಶ್ ತನ್ನ ಸ್ನೇಹಿತರಾದ ಅದೇ ಪಟ್ಟಣದ ಪವನ್, ಚಿಯೆಟಿ ಮಲ್ಲಿಕಾರ್ಜುನ ಮತ್ತು ಫಾರೂಕ್ ಮೂವರನ್ನು ಫೇಸ್‍ಬುಕ್ ಮೂಲಕ ಮಹಿಳೆಗೆ ಪರಿಚಯಿಸಿದ್ದನು. ಮಹಿಳೆಯೂ ಕೂಡ ಅವರನ್ನು ಸ್ನೇಹಿತರಾಗಿ ಒಪ್ಪಿಕೊಂಡು ಎಲ್ಲರ ಜೊತೆ ಚಾಟಿಂಗ್ ಮಾಡುತ್ತಿದ್ದಳು.

    ಇದೇ ವೇಳೆ ಯುವಕರು ಮಹಿಳೆ ನಂಬರ್ ತೆಗೆದುಕೊಂಡಿದ್ದು, ಫೇಸ್‍ಬುಕ್ ಚಾಟಿಂಗ್ ಮೂಲಕ ಮೂವರು ಸ್ನೇಹಿತರು ಆಕೆಯ ವೈಯಕ್ತಿಕ ಮತ್ತು ಕುಟುಂಬದ ವಿಷಯಗಳ ಬಗ್ಗೆ ತಿಳಿದುಕೊಂಡಿದ್ದರು. ನಂತರ ಅದೇ ವಿಚಾರವನ್ನು ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡಲು ಪ್ರಾರಂಭಿಸಿದರು. ಅಷ್ಟೇ ಅಲ್ಲದೇ ತಮ್ಮ ಬೇಡಿಕೆಯನ್ನು ಈಡೇರಿಸದಿದ್ದರೆ ಆ್ಯಸಿಡ್ ಎರಚುವುದಾಗಿ, ಅತ್ಯಾಚಾರ ಮಾಡುವುದಾಗಿ ನಾಲ್ವರು ಲೈಂಗಿಕ ಕಿರುಕುಳ ನೀಡಲು ಶುರು ಮಾಡಿದ್ದರು ಎಂದು ಇನ್ಸ್ ಪೆಕ್ಟರ್ ತಿಳಿಸಿದ್ದಾರೆ.

    ಕೊನೆಗೆ ಮಹಿಳೆ ಯುವಕರ ಕಿರುಕುಳವನ್ನು ಸಹಿಸಲಾಗದೆ ನಿದ್ದೆ ಮಾತ್ರೆಗಳನ್ನು ತೆಗೆದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ತಕ್ಷಣ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದು, ಆಗ ನಡೆದ ಘಟನೆಯ ಬಗ್ಗೆ ಪತಿ ಮತ್ತು ಚಿಕ್ಕಮ್ಮ ಬಳಿ ಹೇಳಿಕೊಂಡಿದ್ದಾಳೆ. ನಂತರ ಅವರ ಸಹಾಯದಿಂದ ಪೊಲೀಸರಿಗೆ ದೂರು ನೀಡಿದ್ದಾಳೆ.

    ಮಹಿಳೆ ನೀಡಿದ ದೂರಿನ ಅನ್ವಯ ಪೊಲೀಸರು ನಾಲ್ವರ ವಿರುದ್ಧ ಐಪಿಸಿ ಸೆಕ್ಷನ್‍ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ನಾಲ್ವರನ್ನು ಬಂಧಿಸಿದ್ದಾರೆ.

  • ಗೆಳೆಯರ ಜೊತೆ ಚಾಟಿಂಗ್ – ರೊಚ್ಚಿಗೆದ್ದು ಪತ್ನಿಯನ್ನೇ ಕೊಲೆಗೈದ

    ಗೆಳೆಯರ ಜೊತೆ ಚಾಟಿಂಗ್ – ರೊಚ್ಚಿಗೆದ್ದು ಪತ್ನಿಯನ್ನೇ ಕೊಲೆಗೈದ

    ಚೆನ್ನೈ: ವ್ಯಕ್ತಿಯೊಬ್ಬ ಪತ್ನಿ ಫೇಸ್‍ಬುಕ್‍ನಲ್ಲಿ ತನ್ನ ಸ್ನೇಹಿತರ ಜೊತೆ ಹೆಚ್ಚು ಸಮಯ ಕಳೆಯುತ್ತಿದ್ದಾಳೆ ಎಂದು ಕೊಲೆ ಮಾಡಿರುವ ಘಟನೆ ತಮಿಳುನಾಡಿನ ತಿರುನೆಲ್ವೇಲಿ ಜಿಲ್ಲೆಯಲ್ಲಿ ನಡೆದಿದೆ.

    ಮುತ್ತುಮಾರಿ (33) ಮೃತ ಪತ್ನಿ. ಆರೋಪಿ ಗೋಮತಿನಾಯಗಂ (36) ಬಂಧಿಸಲಾಗಿದೆ. ಪತ್ನಿ ನನ್ನನ್ನು ಕಡೆಗಣಿಸಿ ಫೇಸ್‍ಬುಕ್‍ನಲ್ಲಿ ತನ್ನ ಸ್ನೇಹಿತರೊಂದಿಗೆ ಚಾಟ್ ಮಾಡಲು ಹೆಚ್ಚು ಸಮಯ ಕಳೆಯುತ್ತಿದ್ದಳು. ಆದ್ದರಿಂದ ನಾನೇ ಕೊಲೆ ಮಾಡಿದ್ದೇನೆ ಎಂದು ಪತಿ ಒಪ್ಪಿಕೊಂಡಿರುವುದಾಗಿ ಪೊಲೀಸರು ಹೇಳಿದ್ದಾರೆ.

    ಆರೋಪಿ ಗೋಮತಿನಾಯಗಂ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದನು. ಕಳೆದ ಗುರುವಾರ ಪತ್ನಿಯ ಮೇಲೆ ಹಲ್ಲೆ ಮಾಡಿದ್ದ ಪರಿಸ್ಥಿತಿಯಲ್ಲಿ ಆಕೆ ಶವ ಮನೆಯಲ್ಲಿ ಪತ್ತೆಯಾಗಿದೆ ಎಂದು ಆತನೇ ದೂರು ನೀಡಿದ್ದನು. ಈ ಬಗ್ಗೆ ನಾವು ಪ್ರಶ್ನೆ ಮಾಡಿದಾಗ, ಮುತ್ತುಮಾರಿ ಫೇಸ್‍ಬುಕ್‍ನಲ್ಲಿ ಸದಾ ಸಕ್ರಿಯಳಾಗಿದ್ದು, ಯಾವಾಗಲೂ ಪುರುಷ ಸ್ನೇಹಿತರೊಂದಿಗೆ ಚಾಟಿಂಗ್ ಮಾಡುವುರದಲ್ಲಿ ನಿರತರಾಗಿದ್ದಳು. ಹೀಗಾಗಿ ಅವಳ ಸ್ನೇಹಿತರಲ್ಲಿ ಯಾರಾದರೂ ಲಾಭಕ್ಕಾಗಿ ಕೊಲೆ ಮಾಡಿರಬಹುದು ಎಂದ ಉತ್ತರಿಸಿದ್ದನು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

    ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಶುರು ಮಾಡಿದ್ದರು. ಆದರೆ ಅವರ ಮನೆಯಿಂದ ನಗದು ಅಥವಾ ಆಭರಣಗಳು ಯಾವುದು ಕಳ್ಳತನವಾಗಿರಲಿಲ್ಲ. ಆಗ ಪತಿಯ ಹೇಳಿಕೆಯಿಂದ ಅನುಮಾನ ಮೂಡಿದ್ದರಿಂದ ಪೊಲೀಸರು ಮೃತದೇಹ ಸಿಕ್ಕ ಸ್ಥಳಕ್ಕೆ ವಿಧಿವಿಜ್ಞಾನ ತಂಡವನ್ನು ಕಳುಹಿಸಿ ಪರಿಶೀಲನೆ ಮಾಡಿಸಿದ್ದಾರೆ. ಜೊತೆಗೆ ಶ್ವಾನವನ್ನು ಕಳುಹಿಸಿದ್ದು, ನಾಯಿ ಘಟನೆ ನಡೆದ ಸ್ಥಳದಿಂದ ಸುಮಾರು 100 ಮೀಟರ್ ಓಡಿ ಹೋಗಿದೆ. ಆದರೆ ಮತ್ತೆ ಮನೆಗೆ ವಾಪಸ್ ಬಂದಿದೆ. ಇತ್ತ ಫೋರೆನ್ಸಿಕ್ ತಂಡ ಅಪರಾಧದ ಸ್ಥಳದಲ್ಲಿ ಬೆರಳಚ್ಚುಗಳನ್ನು ಸಂಗ್ರಹಿಸಿ ಪರೀಕ್ಷೆ ಮಾಡಿದ್ದಾರೆ. ಆ ಬೆರಳಚ್ಚು ಮೃತ ಪತಿ ಗೋಮತಿನಾಯಗಂಗೆ ಹೊಂದಿಕೆಯಾಗಿದೆ.

    ತಕ್ಷಣ ಪೊಲೀಸರು ಆರೋಪಿಯನ್ನು ವಶ ಪಡಿಸಿಕೊಂಡು ವಿಚಾರಣೆ ಮಾಡಿದ್ದಾರೆ. ವಿಚಾರಣೆಯಲ್ಲಿ ಪದೇ ಪದೇ ಪ್ರಶ್ನಿಸಿದ ನಂತರ ಗೋಮತಿನಾಯಗಂ ಆರು ದಿನಗಳ ಹಿಂದೆ ತನ್ನ ಪತ್ನಿ ಮುತ್ತುಮರಿಯನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

  • Facebookನಲ್ಲಿ ಸಮಾಜಸೇವಕಿಗೆ ಅವಾಚ್ಯ ಪದಗಳಿಂದ ನಿಂದನೆ-ಖಾಸಗಿ ಕಂಪೆನಿ ನೌಕರನ ಬಂಧನ!

    Facebookನಲ್ಲಿ ಸಮಾಜಸೇವಕಿಗೆ ಅವಾಚ್ಯ ಪದಗಳಿಂದ ನಿಂದನೆ-ಖಾಸಗಿ ಕಂಪೆನಿ ನೌಕರನ ಬಂಧನ!

    ಮೈಸೂರು: ಫೇಸ್‍ಬುಕ್ ನಲ್ಲಿ ಸಮಾಜ ಸೇವಕಿವೊಬ್ಬರಿಗೆ ಅವಾಚ್ಯ ಪದಗಳಿಂದ ನಿಂದಿಸಿದ ಆರೋಪದ ಮೇಲೆ ಖಾಸಗಿ ಕಂಪೆನಿ ನೌಕರನನ್ನು ಮೈಸೂರಿನ ಕೆ.ಆರ್. ಠಾಣಾ ಪೊಲೀಸರು ಬಂಧಿಸಿದ್ದಾರೆ.

    ಹೂಟಗಳ್ಳಿ ಕೈಗಾರಿಕಾ ಬಡಾವಣೆಯ ಡೆಟಾಲ್ ಕಂಪೆನಿಯ ನೌಕರ ರವಿ.ಕೆ.ಗೌಡ ಬಂಧಿತ ಆರೋಪಿ. ರವಿ ಮೂಲತಃ ಹುಣಸೂರು ತಾಲೂಕಿನ ಕಲ್ಕುಣಿಕೆ ಗ್ರಾಮದವನಾಗಿದ್ದು, ಮೈಸೂರಿನ ಹೊಸಬಂಡೀಕೇರಿಯ ಹಾಗೂ ಸಮಾಜಸೇವಕಿಯಾಗಿರುವ ಚೈತ್ರ ಎಂಬ ಯುವತಿಗೆ ಫೇಸ್ ಬುಕ್‍ನಲ್ಲಿ ಅಶ್ಲೀಲ ಪದಗಳನ್ನು ಬಳಸಿ ಚಾಟ್ ಮಾಡಿದ್ದಾನೆ. ಈ ಮೊದಲು ರವಿ ಹಾಗೂ ಚೈತ್ರ ಒಂದೂವರೆ ವರ್ಷದಿಂದ ಫೇಸ್ ಬುಕ್ ನಲ್ಲಿ ಪರಿಚಿತರಾಗಿದ್ದರು.

    ಕೆಲ ದಿನಗಳ ಹಿಂದೆ ಚೈತ್ರ ಹಾಕಿದ ಪೋಸ್ಟ್ ಒಂದಕ್ಕೆ ರವಿ ಗೌಡ ಕೆಟ್ಟದಾಗಿ ಕಮೆಂಟ್ ಮಾಡಿದ್ದಾನೆ. ಅಲ್ಲಿಂದ ಶುರುವಾದ ಇಬ್ಬರ ಸಂಭಾಷಣೆ ಹಾದಿ ತಪ್ಪಿದ್ದು, ಚೈತ್ರಾಗೆ ಅಶ್ಲೀಲವಾಗಿ ಕಮೆಂಟ್‍ಗಳನ್ನು ಹಾಕಿದ್ದಾನೆ. ಇದರಿಂದ ನೊಂದ ಯುವತಿ ನಗರದ ಕೆ.ಆರ್.ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಅಸಭ್ಯವಾಗಿ ಯುವತಿಯೊಂದಿಗೆ ಜಾಲತಾಣಗಳಲ್ಲಿ ವರ್ತಿಸಿದ ಹಿನ್ನೆಲೆಯಲ್ಲಿ ರವಿ ಗೌಡನನ್ನು ಬಂಧಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಚಾಟಿಂಗ್ ಮಾಡ್ಬೇಡ ಅಂದಿದ್ದಕ್ಕೆ ಮನೆ ಬಿಟ್ಟು ಹೋದ ಎಂಜಿನಿಯರಿಂಗ್ ವಿದ್ಯಾರ್ಥಿ!

    ಚಾಟಿಂಗ್ ಮಾಡ್ಬೇಡ ಅಂದಿದ್ದಕ್ಕೆ ಮನೆ ಬಿಟ್ಟು ಹೋದ ಎಂಜಿನಿಯರಿಂಗ್ ವಿದ್ಯಾರ್ಥಿ!

    ಬೆಂಗಳೂರು: ವಾಟ್ಸಾಪ್ ಚಾಟಿಂಗ್ ಬಿಟ್ಟು ಓದಿಕೋ ಎಂದು ಹೇಳಿದ್ದಕ್ಕೆ ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಮನೆ ಬಿಟ್ಟು ಹೋಗಿದ್ದಾನೆ.

    ಪ್ರಶಾಂತ್ ಗೌಡ ಮನೆ ಬಿಟ್ಟು ಹೋದ ಯುವಕ. ನಗರದ ಈಸ್ಟ್ ವೆಸ್ಟ್ ಕಾಲೇಜಿನಲ್ಲಿ ದ್ವಿತೀಯ ವರ್ಷ ಎಲೆಕ್ಟ್ರಾನಿಕ್ಸ್ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದ ಪ್ರಶಾಂತ್, ಬೆಂಗಳೂರಿನ ವಿಜಯನಗರ ತಮ್ಮ ಮಾವನ ಮನೆಯಲ್ಲಿ ವಾಸವಿದ್ದನು.

    ಇಂಟರ್ನಲ್ ಎಕ್ಸಾಂ ಇದೆ ವಾಟ್ಸಾಪ್ ಚಾಟಿಂಗ್ ಬಿಟ್ಟು ಓದಿಕೋ ಎಂದು ಮಾವ ಸ್ವಾಮಿ ಬುದ್ಧಿಹೇಳಿದ್ದಕ್ಕೆ ಪ್ರಶಾಂತ್ ಮರುದಿನವೇ ಹಿರಿಯೂರಿಗೆ ಬರುವುದಾಗಿ ತಂದೆ ತಾಯಿಗೆ ಫೋನ್ ಮಾಡಿ ತಿಳಿಸಿದ್ದಾನೆ. ಬಳಿಕ ತನ್ನ ಫೇಸ್ ಬುಕ್ ಅಕೌಂಟ್, ಗೂಗಲ್ ಅಕೌಂಟ್, ವಾಟ್ಸಾಪ್, ಗ್ಯಾಲರಿಯಲ್ಲಿದ್ದ ಫೊಟೋಗಳನ್ನ ಡಿಲೀಟ್ ಮಾಡಿ ಮನೆ ಬಿಟ್ಟು ಹೋಗಿದ್ದಾನೆ.

    ನಾಗರಾಜ್, ಹಾಗೂ ಚಿಂತಾಮಣಿ ದಂಪತಿಯ ಒಬ್ಬನೇ ಮಗನಾಗಿದ್ದ ಪ್ರಶಾಂತ್ ಹತ್ತು ದಿನದಿಂದ ಕಣ್ಮರೆಯಾಗಿದ್ದು. ಪ್ರಶಾಂತ್ ತಂದೆ-ತಾಯಿ ಆತನಿಗೆ ಕಣ್ಣೀರಿಟ್ಟು ಪರಿತಪಿಸುತ್ತಿದ್ದಾರೆ.

    ಪ್ರಶಾಂತ್ ತಂದೆ ತಾಯಿ ಫೇಸ್ ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಮಗನಿಗಾಗಿ ಹುಡುಕಾಡುತ್ತಿದ್ದಾರೆ. ಮಗ ಬಾರದಿದ್ದರೆ ನಾನು ಬದುಕುವುದಿಲ್ಲ ಎಂದು ಪ್ರಶಾಂತ್ ತಾಯಿ ಚಿಂತಾಮಣಿ ಕಣ್ಣೀರು ಹಾಕುತ್ತಿದ್ದಾರೆ.

    ಚೆನ್ನಾಗಿ ಓದುತ್ತಿದ್ದ ಪ್ರಶಾಂತ ಹೀಗೆ ಕಣ್ಮರೆಯಾಗಿರುವುದು ಹಲವು ಅನುಮಾನಕ್ಕೆ ಕಾರಣ ವಾಗಿದೆ. ಕಾಲೇಜಿನಲ್ಲಿ ವಿಚಾರಿಸಿದರೆ ಒಳ್ಳೇ ಹುಡುಗ ಎಂದು ಹೇಳುತ್ತಾರೆ. ಸ್ನೇಹಿತರ ಬಳಗದಲ್ಲೂ ಒಳ್ಳೆಯ ಹುಡುಗ ಎನಿಸಿಕೊಂಡಿದ್ದ ಎಂದು ಪ್ರಶಾಂತ್ ತಾಯಿ ತಿಳಿಸಿದ್ದಾರೆ. ಈ ಬಗ್ಗೆ ರಾಜಗೋಪಾಲನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಎಫ್‍ಐಆರ್ ದಾಖಲಾಗಿದೆ.