Tag: ಚಾಚಾ

  • ಹರೀಶ್ ರಾಯ್ ಗೆ ಹಣಕಾಸಿನ ಸಮಸ್ಯೆಯೇ ಕ್ಯಾನ್ಸರ್ ಆಗಿ ಬದಲಾಗಲು ಕಾರಣ ಆಯಿತಾ?

    ಹರೀಶ್ ರಾಯ್ ಗೆ ಹಣಕಾಸಿನ ಸಮಸ್ಯೆಯೇ ಕ್ಯಾನ್ಸರ್ ಆಗಿ ಬದಲಾಗಲು ಕಾರಣ ಆಯಿತಾ?

    ಮೂರು ವರ್ಷದ ಹಿಂದೆಯೇ ಹರೀಶ್ ರಾಯ್ ಅವರಿಗೆ ಗಡ್ಡೆ ರೂಪದಲ್ಲಿ ಕ್ಯಾನ್ಸರ್ ಸೂಚನೆ ನೀಡಿದ್ದರೂ, ಹಣಕಾಸಿನ ಸಮಸ್ಯೆಯಿಂದಾಗಿ ಅದನ್ನು ಆಪರೇಷನ್ ಮಾಡಿಸಿಕೊಳ್ಳಲು ಸಾಧ್ಯವಾಗಿಲ್ಲ. ಮಕ್ಕಳು ಬೆಳೆಯಲಿ, ಸಿನಿಮಾ ರಂಗದಲ್ಲಿ ಕೈ ತುಂಬಾ ಕೆಲಸ ಸಿಗಲಿ ಎಂದು ಕಾಯುತ್ತಾ ಕುಳಿತಿದ್ದ ಈ ನಟ ಕೊನೆಗೂ ಕ್ಯಾನ್ಸರ್ ತಂದುಕೊಂಡಿದ್ದಾರೆ.

    ಹರೀಶ್ ಅವರೇ ಹೇಳುವಂತೆ, ಗಡ್ಡೆಯು ಮೂರು ವರ್ಷಗಳ ಹಿಂದೆಯೇ ಕಾಣಿಸಿಕೊಂಡಿದೆ. ಅದನ್ನು ವೈದ್ಯರಿಗೆ ತೋರಿಸಿದಾಗ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳುವಂತೆ ಹೇಳಿದ್ದಾರೆ. ಸಿನಿಮಾ ಸಿಗಲಿ, ಮಕ್ಕಳು ದೊಡ್ಡವರಾಗಲಿ ಎಂದು ಸುಮ್ಮನಾಗಿದ್ದರಂತೆ. ಅದೀಗ ಕ್ಯಾನ್ಸರ್ ಹುನ್ನಾಗಿ ಬದಲಾಗಿದೆ. ಈಗಲೂ ಹಣಕಾಸಿನ ಸಮಸ್ಯೆಯಿಂದ ಅವರು ಬಳಲುತ್ತಿದ್ದಾರೆ. ಸಿನಿಮಾ ಇಂಡಸ್ಟ್ರಿ ಸಹಾಯ ಮಾಡುವ ಭರವಸೆ ಕೂಡ ಸಿಕ್ಕಿದೆಯಂತೆ. ಇದನ್ನೂ ಓದಿ:ಆ ಒಂದು ಹೆಸರಿನ ಟ್ಯಾಟೋನಿಂದ ಎರಡನೇ ಮದುವೆ ವದಂತಿಗೆ ಫುಲ್ ಸ್ಟಾಪ್ ಹಾಕಿದ ಮೇಘನಾ ರಾಜ್

    ಗಡ್ಡೆ ಬೆಳೆದ ನಂತರ ಕ್ಯಾನ್ಸರ್ ಕುರುಹುಗಳು ಆಗಾಗ್ಗೆ ಕಂಡರೂ, ಅದನ್ನು ನೆಗ್ಲೆಟ್ ಮಾಡಿದ್ದೂ ಕ್ಯಾನ್ಸರ್ ಆಗಲು ಕಾರಣ ಎನ್ನಲಾಗುತ್ತಿದೆ. ಕೆಜಿಎಫ್ 2 ಸಿನಿಮಾ ಮಾಡುವಾಗ ಲೇಂಥಿ ಫೈಟ್ ಇಟ್ಟಿದ್ದರು. ದೃಶ್ಯ ಮುಗಿದ ಮೇಲೆ ಉಸಿರು ಕಟ್ಟೋಕೆ ಶುರುವಾಯ್ತು. ಯಾವಾಗಲೂ ಕಫ ಮತ್ತು ಕೆಮ್ಮು ಬರ್ತಿತ್ತು. ಡಾಕ್ಟರ್ ಹತ್ತಿರ ಚೆಕ್ ಮಾಡಿಸಿದಾಗ ಲಂಗ್ಸ್ ನಲ್ಲಿ ನೀರಿದೆ ಎಂದು ಹೇಳಿದರು. ಟೆಸ್ಟ್ ಮಾಡಿಸಿದಾಗ ಕ್ಯಾನ್ಸರ್ ಇರುವುದು ಗೊತ್ತಾಯಿತು ಎನ್ನುತ್ತಾರೆ ಹರೀಶ್ ರಾಯ್.

    ಈಗಾಗಲೇ ಹಲವರು ಹರೀಶ್ ರಾಯ್ ಗಾಗಿ ಸಹಾಯ ಮಾಡಿದ್ದಾರೆ. ಕನ್ನಡದ ಸ್ಟಾರ್ ನಟರೊಬ್ಬರು ಚಿಕಿತ್ಸೆಗೆ ನೆರವು ನೀಡುವುದಾಗಿಯೂ ತಿಳಿಸಿದ್ದಾರಂತೆ. ಅಲ್ಲದೇ, ಅನೇಕರು ಹರೀಶ್ ರಾಯ್ ಅವರಿಗೆ ಸಹಾಯ ಮಾಡುವಂತೆ ಸೋಷಿಯಲ್ ಮೀಡಿಯಾ ಮೂಲಕ ಮನವಿಯನ್ನೂ ಮಾಡಿಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕನ್ನಡದ ಹೆಸರಾಂತ ನಟ ಹರೀಶ್ ರೈಗೆ ಕ್ಯಾನ್ಸರ್: ‘ಕೆಜಿಎಫ್ 2’ ಚಾಚಾ ಆರೋಗ್ಯದ ಬಗ್ಗೆ ಅಭಿಮಾನಿಗಳ ಕಳವಳ

    ಕನ್ನಡದ ಹೆಸರಾಂತ ನಟ ಹರೀಶ್ ರೈಗೆ ಕ್ಯಾನ್ಸರ್: ‘ಕೆಜಿಎಫ್ 2’ ಚಾಚಾ ಆರೋಗ್ಯದ ಬಗ್ಗೆ ಅಭಿಮಾನಿಗಳ ಕಳವಳ

    ತ್ತೀಚೆಗಷ್ಟೇ ಬಿಡುಗಡೆಯಾದ ಕೆಜಿಎಫ್ 2 ಸಿನಿಮಾದಲ್ಲಿ ರಾಕಿಭಾಯ್ ನೆಚ್ಚಿನ ಚಾಚಾ ಪಾತ್ರದಲ್ಲಿ ಕಾಣಿಸಿಕೊಂಡಿರುವ, ಕನ್ನಡದ ಹೆಸರಾಂತ ನಟ ಹರೀಶ್ ರೈ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ. ಯೂಟ್ಯೂಬ್ ವೊಂದರ ಸಂದರ್ಶನದಲ್ಲಿ ಮಾತನಾಡಿರುವ ಅವರು, ತಾವು ಕಿದ್ವಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಕ್ಯಾನ್ಸರ್ ನಿಂದ ಈಗಾಗಲೇ ಸಖತ್ ಬಳಲುತ್ತಿರುವ ವಿಷಯವನ್ನೂ ಅವರು ಹಂಚಿಕೊಂಡಿದ್ದಾರೆ.

    ಮೊದಲು ಹರೀಶ್ ರೈ ಥೈರಾಯ್ಡ್ ಸಮಸ್ಯೆಯಿಂದ ಬಳಲುತ್ತಿದ್ದರಂತೆ. ಈ ಥೈರಾಯ್ಡ್ ಮುಂದೆ ಕ್ಯಾನ್ಸರ್ ಆಗಿ ಬದಲಾಗಿದೆಯಂತೆ. ಈಗದು ಗಂಭೀರ ಸ್ಥಿತಿಯಲ್ಲಿ ಇರುವುದರಿಂದ ಆರ್ಥಿಕ ಮುಗ್ಗಟ್ಟಿನ ನಡುವೆಯೇ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಂತಾಗಿದೆ ಎಂದು ಹರೀಶ್ ರೈ ಮಾತನಾಡಿದ್ದಾರೆ. ತಾವು ಆರ್ಥಿಕ ಸಂಕಷ್ಟದಲ್ಲಿ ಇರುವುದಾಗಿಯೂ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ಈಗೀಗ ಚೈತ್ರಾ ಹಳ್ಳಿಕೇರಿ ಮುಖವಾಡ ಕಳಚ್ತಾ ಇದ್ದಾರೆ : ಸ್ಪೂರ್ತಿ ಗೌಡ

    ಕನ್ನಡದಲ್ಲಿ ಸಾಕಷ್ಟು ಚಿತ್ರಗಳಲ್ಲಿ ನಟಿಸಿರುವ ಹರೀಶ್ ರೈ, ನೆಗೆಟಿವ್ ಪಾತ್ರಗಳ ಮೂಲಕವೇ ಗುರುತಿಸಿಕೊಂಡವರು. ಕೆಜಿಎಫ್ 2 ಸಿನಿಮಾದಲ್ಲಿ ಅವರದ್ದು ಪಾಸಿಟಿವ್ ಪಾತ್ರವಾಗಿತ್ತು. ಹಾಗಾಗಿ ಒಳ್ಳೆಯ ರೆಸ್ಪಾನ್ಸ್ ಕೂಡ ಸಿಕ್ಕಿತ್ತು. ಈ ಗೆಲುವನ್ನು ಅವರು ಸಂಭ್ರಮಿಸಬೇಕು ಎನ್ನುವಷ್ಟರಲ್ಲಿ ಕ್ಯಾನ್ಸರ್ ಅವರನ್ನು ಹಿಂಡಿ ಹಿಪ್ಪಿ ಮಾಡುತ್ತಿದೆ. ಜೋಡಿ ಹಕ್ಕಿ, ತಾಯವ್ವ, ಸಂಜು ವೆಡ್ಸ್ ಗೀತಾ ಸೇರಿದಂತೆ ಅನೇಕ ಹಿಟ್ ಚಿತ್ರಗಳಲ್ಲಿ ನಟಿಸಿರುವ ಹರೀಶ್, ಸಿನಿಮಾ ರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು.

    ಹರೀಶ್ ರೈ ಅವರಿಗೆ ಕ್ಯಾನ್ಸರ್ ಆಗಿರುವ ವಿಚಾರ ಮಾಧ್ಯಮಗಳಲ್ಲಿ ಬರುತ್ತಿದ್ದಂತೆಯೇ ಆ ವಿಡಿಯೋವನ್ನು ನಟ ಅನಿರುದ್ಧ ಪೋಸ್ಟ್ ಮಾಡಿದ್ದು, ನಟನಿಗೆ ಸಹಾಯ ಮಾಡುವಂತೆ ವಿನಂತಿಸಿಕೊಂಡಿದ್ದಾರೆ. ಆದಷ್ಟು ಬೇಗ ಅವರು ಕ್ಯಾನ್ಸರ್ ನಿಂದ ಗೆದ್ದು ಬರಲಿ ಎಂದು ಹಾರೈಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]