Tag: ಚಾಕ್ಲೇಟ್ ಶೀರಾ

  • ದೇಸೀ ಸಿಹಿಯ ಟಚ್ ನೀಡಿ ಚಾಕ್ಲೇಟ್ ಶೀರಾ ಮಾಡಿ

    ದೇಸೀ ಸಿಹಿಯ ಟಚ್ ನೀಡಿ ಚಾಕ್ಲೇಟ್ ಶೀರಾ ಮಾಡಿ

    ಚಾಕ್ಲೇಟ್ ಎಂದರೆ ಎಲ್ಲರಿಗೂ ಇಷ್ಟ. ಪುಟ್ಟ ಮಕ್ಕಳಿಂದ ಹಿಡಿದು ಹಿರಿಯರವರೆಗೂ ಚಾಕ್ಲೇಟ್ ಇಷ್ಟಪಡದವರಿಲ್ಲ. ಇದೇ ಚಾಕ್ಲೇಟ್‌ನ ನಾನಾತರಹದ ಅಡುಗೆ ಮಾಡೋದೂ ಸಾಧ್ಯ. ಚಾಕ್ಲೇಟ್ ಕೇಕ್‌ನಿಂದ ಹಿಡಿದು ಹಾಟ್ ಚಾಕ್ಲೇಟ್ ವರೆಗೂ ಎಲ್ಲಾ ರೆಸಿಪಿಗಳೂ ಅದ್ಭುತ. ನಾವಿಂದು ದೇಸೀ ಟಚ್ ನೀಡಿ ಚಾಕ್ಲೇಟ್‌ನ ಶೀರಾ (Chocolate Sheera) ಹೇಗೆ ಮಾಡಬಹುದು ಎಂದು ಹೇಳಿಕೊಡುತ್ತೇವೆ.

    ಬೇಕಾಗುವ ಪದಾರ್ಥಗಳು:
    ರವೆ – 1 ಕಪ್
    ಸಕ್ಕರೆ – ಅರ್ಧ ಕಪ್
    ತುಪ್ಪ – ಅರ್ಧ ಕಪ್
    ಹಾಲು – 1 ಕಪ್
    ಕೋಕೋ ಪೌಡರ್ – 2 ಟೀಸ್ಪೂನ್
    ಕತ್ತರಿಸಿದ ಒಣ ಹಣ್ಣುಗಳು – 3 ಟೀಸ್ಪೂನ್
    ಚಾಕ್ಲೇಟ್ ಚಿಪ್ಸ್ – 1 ಟೀಸ್ಪೂನ್ ಇದನ್ನೂ ಓದಿ: ಚೈನೀಸ್ ಸ್ಟೈಲ್‌ನ ಯಮ್ಮೀ ಯಮ್ಮೀ ಆರೆಂಜ್ ಚಿಕನ್ ರೆಸಿಪಿ

    ಮಾಡುವ ವಿಧಾನ:
    * ಮೊದಲಿಗೆ ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ, ರವೆ ಸೇರಿಸಿ, ಕಡಿಮೆ ಉರಿಯಲ್ಲಿ ಮಿಶ್ರಣ ಮಾಡುತ್ತಾ ಹುರಿದುಕೊಳ್ಳಿ.
    * ಒಂದು ಬೌಲ್‌ನಲ್ಲಿ ಹಾಲಿನ ಕಾಲು ಭಾಗದಷ್ಟು ತೆಗೆದುಕೊಂಡು, ಕೋಕೋ ಪೌಡರ್ ಹಾಕಿ, ಮಿಶ್ರಣ ಮಾಡಿಟ್ಟುಕೊಳ್ಳಿ.
    * ರವೆ ಚೆನ್ನಾಗಿ ಹುರಿದ ಬಳಿಕ ಸಾದ ಹಾಲನ್ನು ರವೆಗೆ ಸೇರಿಸಿ, ಮಿಶ್ರಣ ಮಾಡಿ.
    * ಬಳಿಕ ಕೋಕೋ ಪೌಡರ್ ಹಾಗೂ ಹಾಲಿನ ಮಿಶ್ರಣವನ್ನು ಸೇರಿಸಿ, ಚೆನ್ನಾಗಿ ಬೆರೆಸಿ.
    * ಈಗ ಸಕ್ಕರೆ ಸೇರಿಸಿ, ಮಿಶ್ರಣ ಮಾಡಿ.
    * ಉರಿಯನ್ನು ಆಫ್ ಮಾಡಿ, ಶೀರಾವನ್ನು ಆರಲು ಬಿಡಿ.
    * ಇದೀಗ ಚಾಕ್ಲೆಟ್ ಶೀರಾ ತಯಾರಾಗಿದ್ದು, ಒಣ ಹಣ್ಣುಗಳು ಹಾಗೂ ಚಾಕ್ಲೇಟ್ ಚಿಪ್ಸ್‌ನಿಂದ ಅಲಂಕರಿಸಿ, ಸವಿಯಿರಿ. ಇದನ್ನೂ ಓದಿ: ಸ್ಪೈಸಿ, ಟ್ಯಾಂಗಿ ಟೇಸ್ಟ್‌ನ ಬೀಟ್ರೂಟ್ ಪಾಸ್ತಾ ರೆಸಿಪಿ