Tag: ಚಾಕ್ಲೇಟ್ ಕೇಕ್

  • ಕ್ರಿಸ್ ಮಸ್‍ಗಾಗಿ ಸಿಂಪಲ್ ಚಾಕ್ಲೇಟ್ ಕೇಕ್

    ಕ್ರಿಸ್ ಮಸ್‍ಗಾಗಿ ಸಿಂಪಲ್ ಚಾಕ್ಲೇಟ್ ಕೇಕ್

    ಈಗಾಗಲೇ ಕ್ರಿಸ್‍ಮಸ್ ಹಬ್ಬದ ಪ್ರಯುಕ್ತ ಸಿಂಪಲ್ ಕೇಕ್ ಹಾಗೂ ಎಗ್‍ಲೆಸ್ ಕೇಕ್ ಮಾಡಿದ್ದೀರಾ. ಚಾಕ್ಲೇಟ್ ಅಂದರೆ ಕೆಲವರಿಗೆ ತುಂಬಾ ಇಷ್ಟ. ಹಾಗಾಗಿ ನಿಮಗಾಗಿ ಚಾಕ್ಲೇಟ್ ಕೇಕ್ ಮಾಡುವ ವಿಧಾನ ಇಲ್ಲಿದೆ.

    ಬೇಕಾಗುವ ಸಾಮಾಗ್ರಿಗಳು:
    1. ಮೈದಾ – 1 ಕಪ್
    2. ಜೋಳದ ಹಿಟ್ಟು – 2-3 ಚಮಚ ( ಕಾರ್ನ್ ಫ್ಲೋರ್)
    3. ಸಕ್ಕರೆ – 100 ಗ್ರಾಂ
    4. ಎಣ್ಣೆ – 3-4 ಚಮಚ
    5. ಕೋಕೋ ಪೌಡರ್ – 2 ಚಮಚ
    6. ಬೇಕಿಂಗ್ ಪೌಡರ್ – 1 ಚಮಚ
    7. ಬೆಣ್ಣೆ- 50 ಗ್ರಾಂ
    8. ಕಂಡೆನ್ಸ್‍ಡ್ ಮಿಲ್ಕ್ – 100 ಎಂಎಲ್

    ಮಾಡುವ ವಿಧಾನ:
    * ಒಂದು ಬೌಲ್‍ಗೆ 2 ಚಮಚ ಕೋಕೋ ಪೌಡರ್ ಹಾಕಿ ಬಿಸಿ ನೀರು ಸೇರಿಸಿ ತಣ್ಣಗಾಗಲು ಬಿಡಿ.
    * ಒಂದು ಮಿಕ್ಸಿಂಗ್ ಬೌಲ್‍ಗೆ 50 ಗ್ರಾಂ ಬೆಣ್ಣೆ, ಸಕ್ಕರೆ ಪುಡಿ ಹಾಕಿ ಚೆನ್ನಾಗಿ ಬೀಟ್ ಮಾಡಿ.
    * ಕಂಡೆನ್ಸಡ್ ಮಿಲ್ಕ್ ಹಾಕಿ ಬೀಟ್ ಮಾಡಿ. ಅದಕ್ಕೆ ಮೈದಾ, ಬೇಕಿಂಗ್ ಪೌಡರ್, ಜೋಳದ ಹಿಟ್ಟು ಹಾಕಿ ಮಿಕ್ಸ್ ಮಾಡಿ.
    * ಇದಕ್ಕೆ ಮಿಕ್ಸ್ ಮಾಡಿಟ್ಟಿದ್ದ ಕೋಕೋ ಪೌಡರ್ ಅನ್ನು ಸೇರಿಸಿ ಟ್ರೂಟಿ ಫ್ರೂಟಿ, ಬಾದಾಮಿ, ಗೋಡಂಬಿ, ಒಣದ್ರಾಕ್ಷಿ ಸೇರಿಸಿ ಮಿಕ್ಸ್ ಮಾಡಿ.
    * ಗಂಟಿಲ್ಲದಂತೆ ಮಿಕ್ಸ್ ಆದ ಕೇಕ್ ಮಿಶ್ರಣವನ್ನು ಎಣ್ಣೆ ಸವರಿದ ಒಂದು ಅಗಲವಾದ ಪಾತ್ರೆಗೆ ಶಿಫ್ಟ್ ಮಾಡಿ.
    * ಖಾಲಿ ಕುಕ್ಕರ್‍ನಲ್ಲಿ ಮರಳು, ಉಪ್ಪು ಅಥವಾ ಪ್ಯಾನ್ ಸ್ಟ್ಯಾಂಡ್ ಇಟ್ಟು 5 ನಿಮಿಷ ಬಿಸಿ ಮಾಡಿ.
    * ಬಳಿಕ ಕೇಕ್ ಮಿಶ್ರಣ ಇರುವ ಪ್ಯಾನ್ ಅನ್ನು ಕುಕ್ಕರ್ ಒಳಗೆ ಇಟ್ಟು 30-40 ನಿಮಿಷ ಲೋ ಫ್ಲೇಮ್‍ನಲ್ಲಿ ಬೇಯಿಸಿ.
    * ಬೇಕಿದ್ದರೆ ಕೇಕ್ ಮಿಶ್ರಣಕ್ಕೆ ಮೇಲೆ ಡ್ರೈ ಫ್ರೂಟ್ಸ್ ಹಾಕಬಹುದು.
    * ಕೇಕ್ ಆದ ಬಳಿಕ ತಣ್ಣಗಾದ ಮೇಲೆ ಕಟ್ ಮಾಡಿ ಸೇವಿಸಿ.
    * ಬೇಕಿದ್ದಲ್ಲಿ ಇದಕ್ಕೆ ಗಾರ್ನಿಶ್ ಮಾಡಬಹುದು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv