Tag: ಚಾಕೊಲೇಟ್ ಬಾಳೆಹಣ್ಣಿನ ಕೇಕ್

  • ಚಾಕೊಲೇಟ್ ಬಾಳೆಹಣ್ಣಿನ ಕೇಕ್ ಮಾಡಿ ರುಚಿ ನೋಡಿ

    ಚಾಕೊಲೇಟ್ ಬಾಳೆಹಣ್ಣಿನ ಕೇಕ್ ಮಾಡಿ ರುಚಿ ನೋಡಿ

    ಕೇಕ್ ಎಂದರೆ ಎಲ್ಲರಿಗೂ ಇಷ್ಟ. ಮನೆಯಲ್ಲೇ ಮಾಡಿದ ಕೇಕ್ ಅನ್ನು ಸವಿಯುವುದೆಂದರೆ ಇನ್ನಷ್ಟು ಮಜಾ. ಇಂದು ನಾವು ಚಾಕೊಲೇಟ್ ಹಾಗೂ ಬಾಳೆಹಣ್ಣಿನಿಂದ ಕೇಕ್ (Chocolate Banana Cake) ಮಾಡುವುದು ಹೇಗೆ ಎಂದು ಹೇಳಿಕೊಡುತ್ತೇವೆ. ಮಕ್ಕಳು ತುಂಬಾನೇ ಇಷ್ಟಪಟ್ಟು ತಿನ್ನುವ ರುಚಿಕರವಾದ ಕೇಕ್ ಅನ್ನು ಒಮ್ಮೆ ನೀವು ಕೂಡಾ ಮಾಡಿ ನೋಡಿ.

    ಬೇಕಾಗುವ ಪದಾರ್ಥಗಳು:
    ಮಾಗಿದ ಬಾಳೆಹಣ್ಣು – 2
    ಸಕ್ಕರೆ – ಮುಕ್ಕಾಲು ಕಪ್
    ಎಣ್ಣೆ – ಅರ್ಧ ಕಪ್
    ವೆನಿಲ್ಲಾ ಸಾರ – 1 ಟೀಸ್ಪೂನ್
    ವಿನೆಗರ್ – 1 ಟೀಸ್ಪೂನ್
    ಮೈದಾ – ಒಂದೂವರೆ ಕಪ್
    ಕೋಕೋ ಪೌಡರ್ – ಅರ್ಧ ಕಪ್
    ಬೇಕಿಂಗ್ ಪೌಡರ್ – 1 ಟೀಸ್ಪೂನ್
    ಉಪ್ಪು – ಕಾಲು ಟೀಸ್ಪೂನ್
    ನೀರು – ಅರ್ಧ ಕಪ್
    ಒಣ ಹಣ್ಣುಗಳು (ಬಾದಾಮಿ, ಗೋಡಂಬಿ ಇತ್ಯಾದಿ) – ಕಾಲು ಕಪ್
    ಚಾಕೊಲೇಟ್ ಚಿಪ್ – 3 ಟೀಸ್ಪೂನ್ ಇದನ್ನೂ ಓದಿ: ಮೊಟ್ಟೆಯಿಲ್ಲದೆ ಮಾಡಿ ರುಚಿ ರುಚಿಯಾದ ವೆಜ್ ಬ್ರೆಡ್ ಆಮ್ಲೆಟ್

    ಮಾಡುವ ವಿಧಾನ:
    * ಮೊದಲಿಗೆ ಬ್ಲೆಂಡರ್‌ನಲ್ಲಿ ಬಾಳೆಹಣ್ಣು ಮತ್ತು ಸಕ್ಕರೆ ಹಾಕಿ, ನೀರು ಬಳಸದೇ ನುಣ್ಣಗೆ ರುಬ್ಬಿಕೊಳ್ಳಿ.
    * ಈಗ ಬಾಳೆಹಣ್ಣಿನ ಮಿಶ್ರಣವನ್ನು ಒಂದು ದೊಡ್ಡ ಬಟ್ಟಲಿಗೆ ಹಾಕಿ, ಅದಕ್ಕೆ ಅರ್ಧ ಕಪ್ ಎಣ್ಣೆ, ವೆನಿಲ್ಲಾ ಸಾರ ಹಾಗೂ ವಿನೆಗರ್ ಹಾಕಿ ಮಿಕ್ಸ್ ಮಾಡಿ.
    * ಈಗ ಒಂದು ಜರಡಿ ಇರಿಸಿ, ಮೈದಾ, ಕೋಕೋ ಪೌಡರ್, ಬೇಕಿಂಗ್ ಪೌಡರ್, ಅಡುಗೆ ಸೋಡಾ ಹಾಗೂ ಉಪ್ಪು ಸೇರಿಸಿ ಮಿಶ್ರಣ ಮಾಡಿ.
    * ಅರ್ಧ ಕಪ್ ನೀರು ಸೇರಿಸಿ ಮಿಕ್ಸ್ ಮಾಡಿ.
    * ಈಗ ಕತ್ತರಿಸಿದ ಒಣ ಹಣ್ಣುಗಳನ್ನು ಬ್ಯಾಟರ್‌ಗೆ ಹಾಕಿ ನಿಧಾನವಾಗಿ ಮಿಶ್ರಣ ಮಾಡಿ.
    * ಈಗ ಕೇಕ್ ಟಿನ್‌ಗೆ ಬಟರ್ ಪೇಪರ್ ಹರಡಿ, ಅದರ ಮೇಲೆ ಬ್ಯಾಟರ್ ಹಾಕಿ, ಅದರ ಮೇಲೆ ಚಾಕೊಲೇಟ್ ಚಿಪ್ ಹರಡಿ.
    * ಅದನ್ನು ಪ್ರೀ ಹೀಟೆಡ್ ಓವೆನ್‌ನಲ್ಲಿ ಇರಿಸಿ, 180 ಡಿಗ್ರಿ ಸೆಲ್ಸಿಯಸ್‌ನಲ್ಲಿ 40 ನಿಮಿಷಗಳ ವರೆಗೆ ಬೇಯಿಸಿ.
    * ಕೇಕ್ ಬೆಂದ ಬಳಿಕ ಓವನ್‌ನಿಂದ ತೆಗೆದು, ತಣ್ಣಗಾಗಲು ಬಿಡಿ.
    * ಇದೀಗ ಮೊಟ್ಟೆಯಿಲ್ಲದ ಚಾಕೊಲೇಟ್, ಬಾಳೆಹಣ್ಣಿನ ಕೇಕ್ ತಯಾರಾಗಿದ್ದು, ಮಕ್ಕಳಿಗೆ ನೀಡಿ. ಇದನ್ನೂ ಓದಿ: ಬಾದಾಮಿ ಕೇಕ್ ಮಾಡುವ ಸುಲಭ ವಿಧಾನ – ನೀವೊಮ್ಮೆ ಟ್ರೈಮಾಡಿ

    Live Tv
    [brid partner=56869869 player=32851 video=960834 autoplay=true]